Tag: mahashivarathri

  • ಶಿವನ ಜೊತೆಗೆ ಸುದೀಪ್ ಭಾವಚಿತ್ರಕ್ಕೆ ಪೂಜೆ ಮಾಡಿದ ಅಭಿಮಾನಿ

    ಶಿವನ ಜೊತೆಗೆ ಸುದೀಪ್ ಭಾವಚಿತ್ರಕ್ಕೆ ಪೂಜೆ ಮಾಡಿದ ಅಭಿಮಾನಿ

    ಹಾವೇರಿ: ನಾಡಿನಾದ್ಯಂತ ಇಂದು ಮಹಾಶಿವರಾತ್ರಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದೆ. ಆದರೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಯುವಕನೊಬ್ಬ ನಟ ಸುದೀಪ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾ ಶಿವರಾತ್ರಿ ಆಚರಿಸಿದ್ದಾನೆ.

    ಗ್ರಾಮದ ಯುವಕ ರವಿ ಕರಿಯಮ್ಮನವರ್, ಕಿಚ್ಚನ ಅಪ್ಪಟ್ಟ ಅಭಿಮಾನಿಯಾಗಿದ್ದಾನೆ. ರವಿ ತನ್ನ ಚಿಕ್ಕ ವಯಸ್ಸಿನಲ್ಲೇಯೇ ಸುದೀಪ್ ಅವರ ಅಪ್ಪಟ್ಟ ಅಭಿಮಾನಿ. ಹೀಗಾಗಿ ತನ್ನ ಮನೆಯ ತುಂಬೆಲ್ಲ ಸುದೀಪ್ ಅವರ ಭಾವಚಿತ್ರಗಳೇ ರಾರಾಜಿಸುತ್ತೀವೆ.

    ಸುದೀಪ್ ಅವರ ಹುಟ್ಟುಹಬ್ಬದಂದು ಗ್ರಾಮದಲ್ಲಿ ಸಿಹಿ ಹಂಚಿ ಸಂಭ್ರಮಿಸುವ ಈತ ಶಿವರಾತ್ರಿ ದಿನದಲ್ಲಿ ಕಿಚ್ಚನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದೀಪ್ ಅವರನ್ನು ತನ್ನ ಜೀವನದಲ್ಲಿ ಒಮ್ಮೆಯಾದರೂ ಕಿಚ್ಚನನ್ನು ಭೇಟಿಯಾಗಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾನೆ.