Tag: maharstra

  • ನಿನಗೆ 3 ದಿನವಷ್ಟೇ ಸಮಯ- ಫೋಟೋ ವಾಟ್ಸಪ್ ಮಾಡಿ ಸಮಾಜವಾದಿ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ

    ನಿನಗೆ 3 ದಿನವಷ್ಟೇ ಸಮಯ- ಫೋಟೋ ವಾಟ್ಸಪ್ ಮಾಡಿ ಸಮಾಜವಾದಿ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ

    ಮುಂಬೈ: ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಸಿಮ್ ಅಜ್ಮಿ (Abu Asim Azmi) ಗೆ ಫೊನ್ ಮೂಲಕ ಕೊಲೆ ಬೆದರಿಕೆಯೊಂದು ಬಂದಿದೆ.

    ಮುಂಬೈನ ಮಂಖುರ್ದ್ ಶಿವಾಜಿ ನಗರ ಕ್ಷೇತ್ರದ ಶಾಸಕನಿಗೆ ವಾಟ್ಸಪ್‍ (Whatsapp) ನಲ್ಲಿ ಬೆದರಿಕೆ ಬಂದಿದೆ. ವಾಟ್ಸಪ್ ಬಂದಿರುವ ಅಬು ಫೋಟೋ ಮೇಲೆ ಬಂದೂಕು ಹಾಗೂ ರಕ್ತದ ಕಲೆಯುಳ್ಳ ಚಾಕುವನ್ನು ತೋರಿಸಲಾಗಿದೆ. ಅಲ್ಲದೆ ಮೂರು ದಿನಗಳವರೆಗೆ ಸಮಯವಿದೆ ಎಂದು ಎಚ್ಚರಿಕೆಯ ಮೆಸೇಜ್ ಕೂಡ ರವಾನಿಲಾಗಿದೆ.

    ಈ ಬಗ್ಗೆ ಅನು ತಮಗೆ ಬಂದಿರುವ ವಾಟ್ಸಪ್ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವ್ಯಕ್ತಿಯೊಬ್ಬ ನನ್ನ ಪರ್ಸನಲ್ ನಂಬರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೂರು ದಿನಗಳಲ್ಲಿ ನಿನ್ನ ಕೊಲೆಯಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

    ಅಲ್ಲದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್, ಮುಂಬೈ ಪೊಲೀಸರೇ ದಯವಿಟ್ಟು ಈ ಸಂಬಂಧ ಕ್ರಮ ಕೈಗೊಳ್ಳಿ ಎಂದು ಅಬು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ

    ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಬೆಂಬಲಿಸಿ ನೀಡಿದ ಹೇಳಿಕೆಗಳಿಗಾಗಿ ಈ ವರ್ಷ ಜನವರಿಯಲ್ಲಿಯೂ ನಾಯಕನಿಗೆ ಕೊಲೆ ಬೆದರಿಕೆಗಳು ಬಂದವು. ಅಂದು ಕೂಡ ಅವರ ಆಪ್ತ ಸಹಾಯಕನಿಗೆ ಕರೆ ಮಾಡಲಾಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಟ್ರಕ್, ಕಾರು ಭೀಕರ ಅಪಘಾತ- 9 ಮಂದಿ ದಾರುಣ ಸಾವು

    ಟ್ರಕ್, ಕಾರು ಭೀಕರ ಅಪಘಾತ- 9 ಮಂದಿ ದಾರುಣ ಸಾವು

    ಮುಂಬೈ: ಮಹಾರಾಷ್ಟ್ರ- ಗೋವಾ ಹೆದ್ದಾರಿ (Maharastra- Goa Highway) ಯಲ್ಲಿ ಟ್ರಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಈ ಘಟನೆ ಮಹಾರಾಷ್ಟ್ರದ ರಾಯ್‍ಗಢ ಜಿಲ್ಲೆಯ ಮುಂಬೈ- ಗೋವಾ ಹೆದ್ದಾರಿಯ ಮಂಗಾವ್ ಪ್ರದೇಶದಲ್ಲಿ ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ – ಮೊಬೈಲ್ ಫೋನ್, ಗಾಂಜಾ ಪತ್ತೆ

    ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇಕೋ ಕಾರಿಗೆ ಟ್ರಕ್ ಡಿಕ್ಕಿ (Eco Car- Truck Accident) ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನೆಯಿಂದ ನಾಲ್ವರು ಮಹಿಳೆಯರು ಸೇರಿ ಒಟ್ಟು 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 4 ವರ್ಷದ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗೋರೆಗಾಂವ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯರ ಸಹಾಯದಿಂದ ಬಾಲಕನ್ನು ರಕ್ಷಿಸಿರುವುದಾಗಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಳೆ ಬಿಜೆಪಿ-ಶಿಂಧೆ ಸರ್ಕಾರ ರಚನೆ ಸಾಧ್ಯತೆ- ಹೊಸ ಸರ್ಕಾರ ರಚನೆ ಉಸ್ತುವಾರಿ ಹೊತ್ತ ಸಿ.ಟಿ ರವಿ

    ನಾಳೆ ಬಿಜೆಪಿ-ಶಿಂಧೆ ಸರ್ಕಾರ ರಚನೆ ಸಾಧ್ಯತೆ- ಹೊಸ ಸರ್ಕಾರ ರಚನೆ ಉಸ್ತುವಾರಿ ಹೊತ್ತ ಸಿ.ಟಿ ರವಿ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಕೊಟ್ಟಿದ್ದಾರೆ. ಎರಡೂವರೆ ವರ್ಷದ ಮಹಾ ಆಘಾಡಿ ಸರ್ಕಾರ ಪತನಗೊಂಡಿದೆ.

    ಬುಧವಾರ ಸುಪ್ರೀಂಕೋರ್ಟ್‍ನಲ್ಲಿ ಸುದೀರ್ಘ ವಾದ-ಪ್ರತಿವಾದ ನಡೀತು. ಆದರೆ ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿತು. ಇದರಿಂದ ಸೋಲೊಪ್ಪಿಕೊಂಡ ಉದ್ಧವ್ ಠಾಕ್ರೆ ಇವತ್ತಿನ ವಿಶ್ವಾಸಮತಕ್ಕೂ ಮುನ್ನ ನಿನ್ನೆ ರಾತ್ರಿಯೇ ರಾಜೀನಾಮೆ ಘೋಷಿಸಿದ್ರು. ಇದನ್ನೂ ಓದಿ: ಶಿಂಧೆ ಬಣದ ಹೊಡೆತಕ್ಕೆ ಅಘಾಡಿ ಸರ್ಕಾರ ಪತನ – ಉದ್ಧವ್‌ ಠಾಕ್ರೆ ರಾಜೀನಾಮೆ

    ಫೇಸ್‍ಬುಕ್‍ನಲ್ಲಿ ಲೈವ್ ಬರುವ ಮೂಲಕ ತಮ್ಮ ರಾಜೀನಾಮೆ ಘೋಷಿಸಿದ ಠಾಕ್ರೆ, ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದ್ರು. ಸೋನಿಯಾ, ಶರದ್ ಪವಾರ್‍ಗೆ ಧನ್ಯವಾದ ತಿಳಿಸಿದ್ರು. ಬಳಿಕ ರಾಜಭವನಕ್ಕೆ ಖುದ್ದು ಕಾರು ಚಲಾಯಿಸಿಕೊಂಡು ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ರು. ರಾಜ್ಯಪಾಲರು ಠಾಕ್ರೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಈ ವೇಳೆ ಠಾಕ್ರೆಗೆ ಇಬ್ಬರು ಮಕ್ಕಳಾದ ಆದಿತ್ಯ, ತೇಜಸ್ ಸಾಥ್ ನೀಡಿದ್ರು.

    ರಾಜೀನಾಮೆ ಬಳಿಕ ಮಳೆಯಲ್ಲೂ ದೇಗುಲಕ್ಕೆ ಠಾಕ್ರೆ ಭೇಟಿ ನೀಡಿದ್ರು. ಇತ್ತ ಶಿಂಧೆ ಬಣದೊಂದಿಗೆ ಮಹಾರಾಷ್ಟ್ರದಲ್ಲೂ ಕಮಲ ಅರಳುವುದು ಬಹುತೇಕ ಪಕ್ಕಾ ಆಗಿದೆ. ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ ಫಡ್ನವೀಸ್‍ಗೆ ಸಿಹಿ ತಿನ್ನಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ರು. ಶಿಂಧೆ ದೂರವಾಣಿ ಮೂಲಕ ಫಡ್ನವೀಸ್ ಜೊತೆ ಮಾತಾಡಿದ್ರು.

    ಇಂದು ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸೋ ಸಾಧ್ಯತೆಗಳಿವೆ. ಜುಲೈ 1ಕ್ಕೆ ರೆಬೆಲ್ಸ್ ಬೆಂಬಲಿತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಹೈಕಮಾಂಡ್ ಮುಂಬೈಗೆ ಬರುವಂತೆ ಬುಲಾವ್ ನೀಡಿದೆ. ರವಿ ಮಹಾರಾಷ್ಟ್ರ, ಗೋವಾ, ತಮಿಳನಾಡಿನಲ್ಲಿ ಪಕ್ಷದ ಉಸ್ತುವಾರಿ ಆಗಿದ್ದಾರೆ.

    Live Tv