Tag: maharastra fans

  • ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಯಶ್‌ಗೆ ಮಹಾರಾಷ್ಟ್ರ ಫ್ಯಾನ್ಸ್ ಮನವಿ

    ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಯಶ್‌ಗೆ ಮಹಾರಾಷ್ಟ್ರ ಫ್ಯಾನ್ಸ್ ಮನವಿ

    ನ್ಯಾಷನಲ್ ಸ್ಟಾರ್ ಯಶ್ `ಕೆಜಿಎಫ್ ಚಾಪ್ಟರ್ 2′ ಸಿನಿಮಾ ಸಕ್ಸಸ್ ನಂತರ ವರ್ಲ್ಡ್ ವೈಡ್ ಫ್ಯಾನ್ಸ್ ಇದ್ದಾರೆ. ಈ ಚಿತ್ರದ ನಂತರ ಯಶ್ ಮುಂದಿನ ನಡೆ ಏನು ಎಂಬುದರ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ಬಳಗ ಹೊಂದಿರುವ ಯಶ್‌ಗೆ ಮಹಾರಾಷ್ಟ್ರ ಫ್ಯಾನ್ಸ್ ಮನವಿಯೊಂದನ್ನ ಮಾಡಿದ್ದಾರೆ.

    `ಕೆಜಿಎಫ್’ ಸಿನಿಮಾ ಭರ್ಜರಿ ಸಕ್ಸಸ್ ನಂತರ ಯಶ್ ರೇಂಜೇ ಬೇರೇ ಲೆವೆಲ್‌ಗೆ ಹೋಗಿದೆ. ಯಶ್ ಸಿನಿಮಾ ಅಂದ್ರೆ ಕಾತರದಿಂದ ಕಾಯುತ್ತಾರೆ ಅಭಿಮಾನಿಗಳು. ಗಾಂಧಿನಗರದಲ್ಲಿ ಒಂದೇ ಚರ್ಚೆ ಯಶ್ ಮುಂದಿನ ಸಿನಿಮಾ ಯಾವುದು, ರಾಕಿಭಾಯ್ ಯಾವ ಅವತಾರವೆತ್ತಿದ್ರೆ ಚೆನ್ನಾಗಿರುತ್ತೆ ಅಂತಾ ಅಭಿಮಾನಿಗಳೇ ಲೆಕ್ಕಚಾರ ಹಾಕ್ತಿದ್ದಾರೆ. ಮಹಾರಾಷ್ಟ್ರದ ಅಭಿಮಾನಿಗಳು, ತಮ್ಮ ನಾಯಕ ಛತ್ರಪತಿ ಶಿವಾಜಿ ಅವತಾರದಲ್ಲಿ ಕಾಣಿಸಿಕೊಳ್ಳುವಂತೆ ಯಶ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಯಶ್ ಈಗ ಕನ್ನಡದ ನಟನಾಗಿ ಉಳಿದಿಲ್ಲ. ವಿಶ್ವದ ಎಲ್ಲೆಡೆ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿರುವ ಯಶ್‌ಗೆ ಛತ್ರಪತಿ ಶಿವಾಜಿ ಅವತಾರದಲ್ಲಿ ಕಾಣಿಸಿಕೊಳ್ಳುವಂತೆ ಮಹಾರಾಷ್ಟ್ರದ ಫ್ಯಾನ್ಸ್ ಕೇಳಿಕೊಂಡಿದ್ದಾರೆ. ಶಿವಾಜಿ ಅವರ ಬಯೋಪಿಕ್ ಮಾಡುವಂತೆ ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಛತ್ರಪತಿ ಶಿವಾಜಿ ಲುಕ್‌ನಲ್ಲಿ ಯಶ್ ಫ್ಯಾನ್ ಮೇಡ್ ಪೋಸ್ಟರ್ ಮಾಡಿ ಬಿಟ್ಟಿದ್ದಾರೆ.

    ಮರಾಠಿಗರಿಗೆ ಯಶ್, ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸಬೇಕು. ಆ ಸಿನಿಮಾವನ್ನು ಮೂವಿ ಮಾಂತ್ರಿಕ ರಾಜಮೌಳಿ ನಿರ್ದೇಶನ ಮಾಡಬೇಕಂಬ ಆಸೆ. ಆದರಂತೆ ಕನ್ನಡದ ಯಶ್ ಅಭಿಮಾನಿಗಳಿಗೂ ಒಂದು ಆಸೆಯಿದೆ. ಇವರಿಗೆ ಯಶ್ ಇಮ್ಮಡಿ ಪುಲಕೇಶಿ ಅವತಾರೆವೆತ್ತಬೇಕು ಅಂತ ಆಸೆ. ಇವರಿಬ್ಬರ ಆಸೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಯಾರ ಆಸೆಯನ್ನು ಈಡೇರಿಸುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.