Tag: Maharastara

  • ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಬಿಗ್ ಶಾಕ್

    ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಬಿಗ್ ಶಾಕ್

    ಮುಂಬೈ: ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬಿಗ್ ಶಾಕ್‍ಗೆ ಒಳಗಾಗಿದೆ. ಕೈ ಮುಖಂಡ ಹಾಗೂ ವಿಧಾನಸಭೆಯ ವಿಪಕ್ಷ ನಾಯಕ ರಾಧಾಕೃಷ್ಣನ್ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ಮುಖಂಡ ಗಿರೀಶ್ ಮಹಾಜನ್ ನೇತೃತ್ವದಲ್ಲಿ ಸುಜಯ್ ಅವರು ಬಿಜೆಪಿ ಮನೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸುಜಯ್ ಅವರಿಗೆ ಅಹ್ಮದ್‍ನಗರ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ.

    ಸುಜಯ್ ವಿಖೆ ಪಾಟೀಲ್ ಅವರ ಹೆಸರನ್ನು ಲೋಕಸಭಾ ಅಭ್ಯರ್ಥಿಗಳ ಪಟ್ಟಿಗೆ ಸೇರಿಸುವಂತೆ ಬಿಜೆಪಿಯ ರಾಜ್ಯ ಪಾರ್ಲಿಮೆಂಟರಿ ಬೋರ್ಡ್ ನಿಂದ ಮನವಿ ಸಲ್ಲಿಸಲಾಗುತ್ತದೆ. ಮನವಿಗೆ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ಒಪ್ಪಿಗೆ ಸೂಚಿಸುತ್ತದೆ ಎನ್ನುವ ಭರವಸೆ ನಮಗಿದೆ ಎಂದು ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

    ನನ್ನ ತಂದೆ ವಿರುದ್ಧವಾಗಿ ಈ ನಿರ್ಧಾರವನ್ನು ಕೈಗೊಂಡಿರುವೆ. ಹೀಗಾಗಿ ನನ್ನ ನಿರ್ಧಾರಕ್ಕೆ ಪೋಷಕರು ಎಷ್ಟರ ಮಟ್ಟಿಗೆ ಪ್ರೋತ್ಸಾಹ ನೀಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬಿಜೆಪಿ ಮಾರ್ಗದರ್ಶನಲ್ಲಿ ಬೆಳೆದು ಪೋಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತೇನೆ. ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಬಿಜೆಪಿ ಶಾಸಕರ ಬೆಂಬಲ, ಪ್ರೋತ್ಸಾಹದಿಂದ ಬಿಜೆಪಿ ಸೇರುತ್ತಿರುವೆ ಎಂದು ಸುಜಯ್ ತಿಳಿಸಿದ್ದಾರೆ.

    ಸುಜಯ್ ಅವರು ವಿಖೆ ಪಾಟೀಲ್ ಕುಟುಂಬದ ಮೂರನೇ ತಲೆಮಾರಿ ರಾಜಕಾರಣಿ. ರಾಧಾಕೃಷ್ಣನ್ ಅವರು ಪುತ್ರ ಸಂಜಯ್‍ಗೆ ಅಹ್ಮದ್‍ನಗರ ಕ್ಷೇತ್ರದ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‍ಗೆ ಮನವಿ ಮಾಡಿಕೊಂಡಿದ್ದರು. ಆದರೆ ಸುಜಯ್ ಅಹ್ಮದ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿ, ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿತ್ತು. ಹೀಗಾಗಿ ಸುಜಯ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.

    ಬಿಜೆಪಿಯ ದಿಲೀಪ್ ಗಾಂಧಿ ಹಾಲಿ ಅಹ್ಮದ್‍ನಗರದ ಸಂಸದರಾಗಿದ್ದಾರೆ. ಸುಜಯ್ ಬಿಜೆಪಿ ಸೇರ್ಪಡೆಯಾಗಿರುವ ಕಾರಣ ದಿಲೀಪ್ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv