Tag: maharasta

  • ಗಡಿ ಕನ್ನಡಿಗರಿಗೆ ಶಿಂಧೆ ಸರ್ಕಾರ ಬೆದರಿಕೆ- 11 ತಾಲೂಕಿನ ಗ್ರಾ.ಪಂಚಾಯ್ತಿ ವಿಸರ್ಜನೆ ಎಚ್ಚರಿಕೆ

    ಗಡಿ ಕನ್ನಡಿಗರಿಗೆ ಶಿಂಧೆ ಸರ್ಕಾರ ಬೆದರಿಕೆ- 11 ತಾಲೂಕಿನ ಗ್ರಾ.ಪಂಚಾಯ್ತಿ ವಿಸರ್ಜನೆ ಎಚ್ಚರಿಕೆ

    ವಿಜಯಪುರ: ಮಹರಾಷ್ಟ್ರ (Maharastra) ದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಕನ್ನಡಿಗರಿಗೆ ಮಹಾ ಸರ್ಕಾರ ಬೆದರಿಕೆ ಹಾಕಿದೆ. ಕರ್ನಾಟಕ ಸೇರಲು ನಿರ್ಧಾರ ಮಾಡಿರೋ ಕನ್ನಡಿಗರಿಗೆ ಮಹಾ ಸರ್ಕಾರ ಬೆದರಿಕೆ ಹಾಕಿದೆ.

    ಕರ್ನಾಟಕ ಸೇರೋ ನಿರ್ಧಾರ ಮಾಡಿರೋ ಗ್ರಾಮಗಳ ಗ್ರಾಮ ಪಂಚಾಯ್ತಿ ವಿಸರ್ಜನೆ ಮಾಡೋದಾಗಿ ಮಹಾಸರ್ಕಾರ ಬೆದರಿಕೆ ಹಾಕಿದೆ. ಅಕ್ಕಲಕೋಟ ತಾಲೂಕಿನ 11 ಗ್ರಾಮ ಪಂಚಾಯತಿಗಳನ್ನು ವಿಸರ್ಜನೆ ಮಾಡಲು ಮಹಾ ಸರ್ಕಾರ ಮುಂದಾಗಿದೆ. ಈ ಮೂಲಕ ಉದ್ಧಟತನ ಮೆರೆಯುತ್ತಿರೋ ಮಹಾರಾಷ್ಟ್ರ (Maharastra) ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮಹಾ ಕನ್ನಡಿಗರು ರೆಡಿ ಆಗಿದ್ದಾರೆ.

    ಕರ್ನಾಟಕಕ್ಕೆ ಸೇರಲು ಠರಾವು ಪಾಸ್ ಮಾಡಿರುವ ಗಾ.್ರಪಂ ವಿಸರ್ಜನೆ ಹಾಗೂ ಗ್ರಾಮ ಅಧಿಕಾರಗಳನ್ನು ಸೇವೆಯಿಂದ ತೆಗೆದು ಹಾಕೋ ಬೆದರಿಕೆ ಹಾಕಲಾಗಿದೆ. ಗಲ್ಲು ಶಿಕ್ಷೆ ನೀಡಿದರೂ ನಾವು ಯಾವುದಕ್ಕೂ ಹೆದರಲ್ಲಾ ಗಡಿನಾಡ ಕನ್ನಡಿಗರು ಸೆಡ್ಡು ಹೊಡೆದಿದ್ದಾರೆ. 2002 ರಲ್ಲಿ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ 22 ಗ್ರಾಮಗಳ ಜನರು ಮಹಾರಾಷ್ಟ್ರಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಅಗತ್ಯ ಮೂಲಭೂತ ಸೌಕರ್ಯ ನೀಡಿ ಇಲ್ಲವೇ ಮಹಾರಾಷ್ಟ್ರಕ್ಕೆ ಸೇರುತ್ತೇವೆಂದು ತೀರ್ಮಾಣ ಮಾಡಿದ್ದರು. ಇದನ್ನೂ ಓದಿ: ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ

    ಆಗಿನ ಕರ್ನಾಟಕ ಸಿಎಂ ಆಗಿದ್ದ ಎಸ್.ಎಂ ಕೃಷ್ಣ (S.M Krishna) 204 ಕೋಟಿ ರೂಪಾಯಿ ಆ ಭಾಗಕ್ಕೆ ಅನುದಾನ ನೀಡಿದ್ದರು. ಆ ಮಾದರಿಯಲ್ಲೇ ಮಹಾರಾಷ್ಟ್ರ ಸರ್ಕಾರ ನಮಗೆ ಅನುದಾನ ನೀಡಿ ಎಲ್ಲಾ ಸೌಕರ್ಯ ನೀಡಲಿ ಎಂದು ಅಕ್ಕಲಕೋಟ ಜನರು ಒತ್ತಾಯಿಸಿದ್ದಾರೆ. ಅನುದಾನ ಹಾಗೂ ಇತರೆ ಸೌಕರ್ಯ ನೀಡಿ ಇಲ್ಲವೇ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಜಮರು ಒತ್ತಾಯ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾನೂನು ಉಲ್ಲಂಘನೆ ಮಾಡಿದ್ರೆ ಮಹಾರಾಷ್ಟ್ರದ ಸಚಿವರ ಮೇಲೂ ಕ್ರಮ: ಆರಗ ಎಚ್ಚರಿಕೆ

    ಕಾನೂನು ಉಲ್ಲಂಘನೆ ಮಾಡಿದ್ರೆ ಮಹಾರಾಷ್ಟ್ರದ ಸಚಿವರ ಮೇಲೂ ಕ್ರಮ: ಆರಗ ಎಚ್ಚರಿಕೆ

    ಬೆಂಗಳೂರು: ಮಹಾರಾಷ್ಟ್ರ (Maharastra)ದ ಸಚಿವರು ಕಾನೂನು ಉಲ್ಲಂಘನೆ ಮಾಡಿದರೆ ಅವರ ಮೇಲೂ ಕ್ರಮ ತೆಗೆದುಕೊಳ್ತೀವಿ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಹಾರಾಷ್ಟ್ರದ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.

    ಬೆಳಗಾವಿ (Belagavi) ಗೆ ಆಗಮಿಸುತ್ತಿರೋ ಮಹಾರಾಷ್ಟ್ರದ ಸಚಿವರ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅವರ ಮೇಲೆ ಕ್ರಮ ತಗೋತೀವಿ. ಅವರು ಸಚಿವರು ಆದರೂ ಬಿಡೋದಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.

    ಈಗಾಗಲೇ ಸಿಎಂ ಅವರು ಇದರ ಬಗ್ಗೆ ಸಂಪೂರ್ಣವಾಗಿ ಹೇಳಿದ್ದಾರೆ. ಈಗಾಗಲೇ ನಮ್ಮ ರಾಜ್ಯ-ಮಹಾರಾಷ್ಟ್ರದ ಡಿಜಿಗಳು, ಎಡಿಜಿಪಿಗಳ ಮೀಟಿಂಗ್ ನಡೆದಿದೆ. ಭಾವನಾತ್ಮಕವಾಗಿ ಏನಾದರೂ ಕೆಣಕಲು ಬಂದರೆ ನಾವು ಬಿಡೊಲ್ಲ. ಈ ಬಗ್ಗೆ ಪೊಲೀಸರು ಎರಡು ಭಾಗದ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್‌ ಬಿರುದು ನಾವಲ್ಲ, ಜನರೇ ನೀಡಿದ್ದಾರೆ – ಸಿದ್ದುಗೆ ಬಿಜೆಪಿ ಟಾಂಗ್‌

    ಕೋರ್ಟ್ ನಲ್ಲಿ ಕೇಸ್ ಇದೆ. ಹೀಗಿರುವಾಗ ಅನಾವಶ್ಯಕ ಗೊಂದಲ, ಶಾಂತಿ ಸುವ್ಯವಸ್ಥೆ ಹಾಳು ಮಾಡೋದು ಸರಿಯಲ್ಲ. ನೆಲ ಜಲ, ಭಾಷೆ ಬಗ್ಗೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಸಚಿವರು ಬಂದೆ ಏನ್ ಕ್ರಮ ತಗೋತೀವಿ ಅಂತ ಸಿಎಂ ಜೊತೆ ಮಾತಾಡ್ತೀನಿ. ಬೆಳಗಾವಿ (Belagavi) ಈಗ ಶಾಂತಿಯುತವಾಗಿದೆ. ಅದನ್ನ ಹಾಳು ಮಾಡಬಾದರು. ಅದು ಯುದ್ದ ರಂಗ ಅಲ್ಲ. ಎಲ್ಲರೂ ಶಾಂತವಾಗಿರಬೇಕು. ಇಲ್ಲಿಂದ ಅಲ್ಲಿಗೆ ಜನರು ಹೋಗಿ, ಅಲ್ಲಿಂದ ಇಲ್ಲಿಗೆ ಜನರು ಬಂದು ಕುಸ್ತಿ ಆಡಬಾರದು. ನೆಲ, ಜಲ, ಭಾಷೆಗೆ ನಮ್ಮ ಬದ್ಧತೆ ಇದೆ. ಯಾರೇ ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಆಗುತ್ತೆ ಎಂದರು.

    ನಮ್ಮ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಎರಡು ರಾಜ್ಯಗಳು ಶಾಂತಿ ಸುವ್ಯವಸ್ಥೆ ಕಾಪಾಡಲು ನಾನೂ ಮನವಿ ಮಾಡ್ತೀವಿ. ಬೆಳಗಾವಿ ರಣರಂಗ ಆಗಬಾರದು. ಅದಕ್ಕೆ ನಾವು ಅವಕಾಶ ಕೊಡೊಲ್ಲ ಎಂದು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]