Tag: Maharashtra Polls

  • ‘ಮಹಾ’ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆ ನಡೆದಿಲ್ಲ.. ಪರಿಶೀಲನೆಯಿಂದ ಮತ್ತೆ ಸಾಬೀತು: ಚುನಾವಣಾ ಆಯೋಗ

    ‘ಮಹಾ’ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆ ನಡೆದಿಲ್ಲ.. ಪರಿಶೀಲನೆಯಿಂದ ಮತ್ತೆ ಸಾಬೀತು: ಚುನಾವಣಾ ಆಯೋಗ

    ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ (Maharashtra polls) ಇವಿಎಂ ತಿರುಚಲಾಗಿದೆ ಎಂಬ ಆರೋಪ ಸುಳ್ಳು. ಇವಿಎಂ ತಿರುಚಿಲ್ಲ ಎಂಬುದು ಪರಿಶೀಲನೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಚುನಾವಣಾ ಆಯೋಗ (Election Commission) ಪುನರುಚ್ಚರಿಸಿದೆ.

    10 ಅಭ್ಯರ್ಥಿಗಳ ಅರ್ಜಿಗಳ ಆಧಾರದ ಮೇಲೆ 10 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಪರಿಶೀಲನೆ (ಸಿ & ವಿ) ಪ್ರಕ್ರಿಯೆ ನಡೆಸಲಾಯಿತು. ಇವಿಎಂ ಫಲಿತಾಂಶಗಳು ಮತ್ತು ವಿವಿಪ್ಯಾಟ್ ಸ್ಲಿಪ್‌ಗಳ ನಡುವೆ ಮತ ಎಣಿಕೆಯಲ್ಲಿ ಯಾವುದೇ ಮಿಸ್‌ಮ್ಯಾಚ್‌ ಆಗಿಲ್ಲ ಎಂದು ಆಯೋಗ ದೃಢಪಡಿಸಿತು. ಇದನ್ನೂ ಓದಿ: ಮತದಾರರ ಗೌಪ್ಯತೆ & ಭದ್ರತೆ ಮೇಲೆ ಪರಿಣಾಮ: ಮತದಾನದ ದೃಶ್ಯಗಳ ಬೇಡಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ

    ಎಲ್ಲಾ ಸಂದರ್ಭಗಳಲ್ಲಿ ಯಂತ್ರಗಳು, ಬ್ಯಾಲೆಟ್ ಯೂನಿಟ್‌ಗಳು, ನಿಯಂತ್ರಣ ಘಟಕಗಳು ಮತ್ತು ವಿವಿಪ್ಯಾಟ್‌ಗಳು ಪರಿಶೀಲನೆಯಲ್ಲಿ ಪಾಸ್‌ ಆಗಿವೆ ಎಂದು ಆಯೋಗ ತಿಳಿಸಿದೆ. ಜೂ.17 ರಂದು ಹೊರಡಿಸಲಾದ ಸೂಚನೆಗಳಡಿ ಮತ್ತು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ನಡೆಸಿದ ಸೂಚನೆಗಳ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಯಿತು.

    2024 ರ ರಾಜ್ಯ ಚುನಾವಣೆಯಲ್ಲಿ ಸೋತಿದ್ದ ಹತ್ತು ಅರ್ಜಿದಾರರಲ್ಲಿ ಎಂಟು ಮಂದಿ ಪರಿಶೀಲನೆಗೆ ಹಾಜರಿದ್ದರು. 48 ಬ್ಯಾಲೆಟ್ ಯೂನಿಟ್‌ಗಳು, 31 ಕಂಟ್ರೋಲ್ ಯೂನಿಟ್‌ಗಳು ಮತ್ತು 31 ವಿವಿಪ್ಯಾಟ್‌ಗಳಲ್ಲಿ ಪರಿಶೀಲನೆ ನಡೆಸಲಾಯಿತು. ತಯಾರಕ ECIL (ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ನ ಅಧಿಕೃತ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

    147-ಕೊಪ್ರಿ-ಪಚ್ಪಖಾಡಿ, 148-ಥಾಣೆ, 211-ಖಡಕ್ವಾಸ್ಲಾ ಮತ್ತು 229-ಮಜಲಗಾಂವ್‌ನಂತಹ ಕ್ಷೇತ್ರಗಳಲ್ಲಿ, ಅಭ್ಯರ್ಥಿಗಳ ಕೋರಿಕೆಯ ಆಧಾರದ ಮೇಲೆ ತಲಾ ಮೂರು ಸೆಟ್ ಇವಿಎಂಗಳಲ್ಲಿ (EVM) ಪರಿಶೀಲನೆ ನಡೆಸಲಾಯಿತು. ಎಲ್ಲಾ ಯಂತ್ರಗಳು ಪಾಸ್‌ ಆಗಿದ್ದು, ಇಸಿಐಎಲ್ ಎಂಜಿನಿಯರ್‌ಗಳಿಂದ ಪ್ರಮಾಣೀಕರಿಸಲ್ಪಟ್ಟಿವೆ.

  • Maharashtra Polls | 28 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್‌

    Maharashtra Polls | 28 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್‌

    ಮುಂಬೈ: ವಿಧಾನಸಭಾ ಚುನಾವಣೆ (Maharashtra Polls) ಹೊಸ್ತಿಲಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 7 ಬಂಡಾಯ ಅಭ್ಯರ್ಥಿಗಳನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ (Congress) ಸಮಿತಿ (ಎಂಪಿಸಿಸಿ) ಭಾನುವಾರ ರಾತ್ರಿ ಅಮಾನತುಗೊಳಿಸಿದೆ.

    ಅಮಾನತುಗೊಂಡಿರುವ ನಾಯಕರಲ್ಲಿ ಶಾಮಕಾಂತ್ ಸನೇರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಕಲ್ಯಾಣ್ ಬೋರಾಡೆ ಮತ್ತು ಚಂದ್ರಪಾಲ್ ಚೌಕ್ಸೆ ಸೇರಿದ್ದಾರೆ. ಶನಿವಾರ ಎಂಪಿಸಿಸಿ ಇತರ 21 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿತ್ತು. ಈ ಮೂಲಕ 22 ಕ್ಷೇತ್ರಗಳಲ್ಲಿ ಒಟ್ಟು ಅಮಾನತುಗೊಂಡವರ ಸಂಖ್ಯೆ 28 ಕ್ಕೆ ಏರಿದೆ.

    ಈ ಹಿಂದೆ ಅಮಾನತುಗೊಂಡಿರುವ ನಾಯಕರ ಪಟ್ಟಿಯಲ್ಲಿ ಆನಂದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವೆ, ಭರತ್ ಯೆರೆಮೆ, ಅಭಿಲಾಶಾ ಗವಟೂರೆ, ಪ್ರೇಮಸಾಗರ್ ಗನ್ವೀರ್, ಅಜಯ್ ಲಾಂಜೇವರ್, ವಿಲಾಸ್ ಪಾಟೀಲ್, ಆಸ್ಮಾ ಜಾವದ್ ಚಿಖ್ಲೇಕರ್, ಹಂಸಕುಮಾರ್ ಪಾಂಡೆ, ಕಮಲ್ ವ್ಯಾವಹರೆ, ಮೋಹನ್ರಾವ್ ದಾಂಡೇಕರ್, ಮಂಗಲ್ ವಿಲಾಸ್, ಮಂಗಲ್ ವಿಲಾಸ್ ಮನೋಜ ಶಿಂಧೆ, ಸುರೇಶ ಪಾಟೀಲಖೇಡೆ, ವಿಜಯ ಖಡ್ಸೆ, ಶಬೀರ್ ಖಾನ್, ಅವಿನಾಶ್ ಲಾಡ್, ಯಗ್ವಾಲ್ಯ ಜಿಚ್ಕರ್, ರಾಜು ಜೋಡೆ ಮತ್ತು ರಾಜೇಂದ್ರ ಮುಕಾಹ್ ಸೇರಿದ್ದಾರೆ.

    ಅಮಾನತುಗೊಂಡ ಅಭ್ಯರ್ಥಿಗಳು ಮಹಾ ವಿಕಾಸ್ ಅಘಾಡಿ (MVA) ಅಧಿಕೃತ ನಾಮನಿರ್ದೇಶಿತರ ವಿರುದ್ಧ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮೊದಲು, ಎಂವಿಎ (Maha Vikas Aghadi) ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಪಕ್ಷದ ಬಂಡಾಯ ಅಭ್ಯರ್ಥಿಗಳು ಆರು ವರ್ಷಗಳ ಅಮಾನತು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಎಚ್ಚರಿಸಿದ್ದರು.

    ನ.20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ.

  • ಮಹಾರಾಷ್ಟ್ರ ಚುನಾವಣಾ ಅಖಾಡಕ್ಕೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್?

    ಮಹಾರಾಷ್ಟ್ರ ಚುನಾವಣಾ ಅಖಾಡಕ್ಕೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್?

    ನವದೆಹಲಿ: ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಳಿಕ ತೀವ್ರ ಚರ್ಚೆಯಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾನೆ ಎನ್ನಲಾಗುತ್ತಿದೆ. ಬಾಬಾ ಸಿದ್ದಿಕಿ ಸ್ಪರ್ಧಿಸಿದ್ದ ಪಶ್ಚಿಮ ಬಾಂದ್ರಾದಿಂದಲೇ ಆತ ಕಣಕ್ಕಿಳಿಯಬಹುದು ಎಂದು ವರದಿಯಾಗಿದೆ.

    ಚುನಾವಣಾ ಆಯೋಗದಲ್ಲಿ ನೋಂದಾಯಿತ ರಾಜಕೀಯ ಪಕ್ಷ ಉತ್ತರ ಭಾರತೀಯ ವಿಕಾಸ್ ಸೇನೆ, ಲಾರೆನ್ಸ್ ಬಿಷ್ಣೋಯ್ ಪರವಾಗಿ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಗಳಿಂದ ಎಬಿ ಫಾರ್ಮ್ ಕೇಳಿದೆ. ನಾಮನಿರ್ದೇಶನವನ್ನು ಸಲ್ಲಿಸಲು ಎಬಿ ಫಾರ್ಮ್ ಅತ್ಯಗತ್ಯ ಮತ್ತು ಔಪಚಾರಿಕ ದಾಖಲೆಯಾಗಿದೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್‌ | ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಟಿವಿಗೆ ಸಂದರ್ಶನ – 7 ಪೊಲೀಸರು ಸಸ್ಪೆಂಡ್‌

    ಪಕ್ಷದ ನಾಯಕ ಸುನೀಲ್ ಶುಕ್ಲಾ ಈ ಬಗ್ಗೆ ಚುನಾವಣಾಧಿಕಾಗಳಿಗೆ ಪತ್ರ ಬರೆದಿದ್ದಾರೆ‌‌. ಆಯೋಗ ನೀಡುವ ಫಾರ್ಮ್‌‌ಗೆ ಲಾರೆನ್ಸ್ ಬಿಷ್ಣೋಯ್ ಸಹಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆತ ಒಪ್ಪಿಗೆ ನೀಡಿದರೆ, ಪಕ್ಷವು ಶೀಘ್ರದಲ್ಲೇ 50 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ.

    ಉತ್ತರ ಭಾರತದ ವಿಕಾಸ ಸೇನಾ ನಾಯಕ ಸುನಿಲ್ ಶುಕ್ಲಾ ಅವರು ಮೊದಲು ಖಾರ್ ಪೊಲೀಸ್ ಠಾಣೆಗೆ ತೆರಳಿದ್ದರು. ನಂತರ ಬಾಲ್ಕರನ್ ಬ್ರಾಡ್ ಹೆಸರಿನಲ್ಲಿ ನಾಮಪತ್ರಗಳನ್ನು ಸಂಗ್ರಹಿಸಲು ಚುನಾವಣಾಧಿಕಾರಿಯನ್ನು ಸಂಪರ್ಕಿಸಿದರು. ಲಾರೆನ್ಸ್ ಬಿಷ್ಣೋಯ್ ನಿಜವಾದ ಹೆಸರು ಬಾಲ್ಕರನ್ ಬ್ರಾಡ್ ಆಗಿದೆ. ಇದೇ ಕ್ಷೇತ್ರದಿಂದ ಬಾಬಾ ಸಿದ್ದಿಕಿ ಪುತ್ರ ಸಹ ಕಣಕ್ಕಿಳಿದಿದ್ದಾರೆ.

    ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಪಾಕ್ ಡ್ರೋನ್‌ಗಳ ಮೂಲಕ ಗನ್‌ ಪೂರೈಕೆ?

  • `ಮಹಾ’ ಚುನಾವಣೆ: ಎನ್‌ಸಿಪಿ ಮೊದಲ ಪಟ್ಟಿ ಬಿಡುಗಡೆ – ಬಾರಾಮತಿಯಿಂದ ಅಜಿತ್ ಪವಾರ್ ಸ್ಪರ್ಧೆ

    `ಮಹಾ’ ಚುನಾವಣೆ: ಎನ್‌ಸಿಪಿ ಮೊದಲ ಪಟ್ಟಿ ಬಿಡುಗಡೆ – ಬಾರಾಮತಿಯಿಂದ ಅಜಿತ್ ಪವಾರ್ ಸ್ಪರ್ಧೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Polls) ಹಿನ್ನೆಲೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ ಬುಧವಾರ ಎನ್‌ಸಿಪಿ (ಎಪಿ) 38 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ.

    ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಬಾರಾಮತಿ ಕ್ಷೇತ್ರದಿಂದ ಶರದ್ ಪವಾರ್ (Sharad Pawar) ಬಣದಿಂದ ಸ್ಪರ್ಧಿಸಿರುವ ತಮ್ಮ ಸೋದರಳಿಯ ಯುಗೇಂದ್ರ ಪವಾರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಹುಮತದಿಂದ ಜಯಗಳಿಸುವುದು ನಿಶ್ಚಿತ: ಸಿದ್ದರಾಮಯ್ಯ

    ಅಜಿತ್ ಪವಾರ್ ಅವರು ಆಡಳಿತ ಪಾಳಯಕ್ಕೆ ಸೇರಿದಾಗ ಅವರ ಪರವಾಗಿದ್ದ ಸಚಿವರು ಸೇರಿದಂತೆ 26 ಹಾಲಿ ಶಾಸಕರಿಗೆ ಮತ್ತೆ ಮಣೆ ಹಾಕಲಾಗಿದೆ. ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಂದಿದ್ದ ಹಾಲಿ ಶಾಸಕರಾದ ಸುಲ್ಭಾ ಖೋಡ್ಕೆ (ಅಮರಾವತಿ) ಮತ್ತು ಹಿರಾಮನ್ ಖೋಸ್ಕರ್ (ಇಗತ್‌ಪುರಿ) ಅವರು ಎನ್‌ಸಿಪಿಯಿಂದ ಸ್ಪರ್ಧಿಸಲಿದ್ದಾರೆ.

    ನವಾಪುರ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ದಿವಂಗತ ಮಾಣಿಕ್ರಾವ್ ಗಾವಿತ್ ಅವರ ಪುತ್ರ ಭರತ್ ಗವಿತ್ ಕಣಕ್ಕಿಳಿದಿದ್ದಾರೆ. ರಾಜ್ಯ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರನ್ನು ದಿಂಡೋರಿಯಿಂದ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಛಗನ್ ಭುಜಬಲ್ ಅವರನ್ನು ಯೆಯೋಲಾದಿಂದ ಕಣಕ್ಕಿಳಿಸಲಾಗಿದೆ. ಇದನ್ನೂ ಓದಿ: ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ

    ಈ ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಸಚಿವ ರಾಜ್‌ಕುಮಾರ್ ಬಡೋಲೆ ಅವರಿಗೆ ಅರ್ಜುನಿ-ಮೋರ್ಗಾಂವ್‌ನಿಂದ ಟಿಕೆಟ್ ನೀಡಲಾಗಿದೆ.