Tag: Maharashtra Open

  • ಮಹಾರಾಷ್ಟ್ರ ಓಪನ್ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ: ತೆಂಡೂಲ್ಕರ್

    ಮಹಾರಾಷ್ಟ್ರ ಓಪನ್ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ: ತೆಂಡೂಲ್ಕರ್

    ಮುಂಬೈ: ಮಹಾರಾಷ್ಟ್ರದಲ್ಲಿ ಆರಂಭವಾಗುತ್ತಿರುವ ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ ATP 250 ಕ್ರೀಡಾಪಟುಗಳಿಗೆ ಉತ್ತಮವಾದ ವೇದಿಕೆಯಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

    2022ರ ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ ಇಂದಿನಿಂದ ಫೆಬ್ರವರಿ 6ರ ವರೆಗೆ ಪುಣೆಯ ಬಾಳೆವಾಡಿಯಲ್ಲಿ ನಡೆಯಲಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಸಚಿನ್, ಟೆನಿಸ್ ಪ್ರಿಯರಿಗೆ ಮುಂದಿನ ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ ಉತ್ತಮವಾದ ವೇದಿಕೆಯಾಗಲಿದೆ. ಟೆನಿಸ್ ಆಸಕ್ತರು ATP 250 ಟೂರ್ನಿಯನ್ನು ವೀಕ್ಷಿಸಿ ಯಶಸ್ವಿಯಾಗಿಸಿ. ಎಲ್ಲಾ ಸ್ಪರ್ಧಿಗಳಿಗೂ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ

    ಟೂರ್ನಿಯಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಮಾಥನ್ ಡಬಲ್ಸ್ ವಿಭಾಗದಲ್ಲಿ ಆಡುತ್ತಿದ್ದಾರೆ. ಈ ಜೋಡಿಗೆ ಮೊದಲ ಪಂದ್ಯ ಡ್ರಾ ಲಭಿಸಿದೆ. ಈ ಟೂರ್ನಿಯಲ್ಲಿ ದಕ್ಷಿಣ ಏಷ್ಯಾದ 16 ಟೆನಿಸ್ ಜೋಡಿಗಳು ಆಡುತ್ತಿವೆ. ಆಮೆರಿಕಾದ ಡಬಲ್ಸ್ ಜೋಡಿ ಜೇಮಿ ಸೆರೆಟಾನಿ ಮತ್ತು ನಿಕೋಲಸ್ ಮನ್ರೋ ಕಾದಾಟದ ಮೂಲಕ ಟೂರ್ನಿ ಆರಂಭಗೊಳ್ಳಲಿದೆ. ಇದನ್ನೂ ಓದಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಗಮನಸೆಳೆದ ಮಹಿಳಾ ಅಂಪೈರ್

    ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ ATP 250ಯನ್ನು ಮಹಾರಾಷ್ಟ್ರ ಟೆನಿಸ್ ಅಸೋಸಿಯೇಷನ್ ಆಯೋಜಿಸಿದ್ದು, ಟಾಟಾ ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ಟೂರ್ನಿ ನಡೆಯುತ್ತಿದೆ.