Tag: Maharashtra minister

  • ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಗೇಮ್‌ ಆಡಿದ ಕೃಷಿ ಸಚಿವ – ವಿಪಕ್ಷಗಳಿಂದ ಭಾರಿ ಟೀಕೆ

    ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಗೇಮ್‌ ಆಡಿದ ಕೃಷಿ ಸಚಿವ – ವಿಪಕ್ಷಗಳಿಂದ ಭಾರಿ ಟೀಕೆ

    ಮುಂಬೈ: ಮಹಾರಾಷ್ಟ್ರದ (Maharashtra) ಕೃಷಿ ಸಚಿವ ಮಾಣಿಕ್ರಾವ್ ಕೊಕಟೆ (Manikrao Kokate) ಅವರು ವಿಧಾನಸಭೆಯ ಅಧಿವೇಶನದಲ್ಲಿ ರಮ್ಮಿ ಆಡುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.

    ಆಡಳಿತಾರೂಢ ಎನ್‌ಸಿಪಿ ಮತ್ತು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಕಿಡಿಕಾರಿವೆ. ಎನ್‌ಸಿಪಿ (ಶರದ್‌ಚಂದ್ರ ಪವಾರ್) ನಾಯಕ ರೋಹಿತ್ ಪವಾರ್ ಇಂದು ಆಡಳಿತ ಮೈತ್ರಿಕೂಟದ ವಿರುದ್ಧ ಹರಿಹಾಯ್ದಿದ್ದು, ವೈರಲ್ ವಿಡಿಯೋವನ್ನು ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

    ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಕೃಷಿ ಸಮಸ್ಯೆಗಳು ಬಾಕಿ ಉಳಿದಿದ್ದರೂ, ಪ್ರತಿದಿನ 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಕೃಷಿ ಸಚಿವರಿಗೆ ಬೇರೆ ಏನೂ ಮಾಡಲು ಸಾಧ್ಯವಾಗದೆ ರಮ್ಮಿ ಆಡಲು ಸಮಯ ಸಿಕ್ಕಂತೆ ಕಾಣುತ್ತಿದೆ ಎಂದು ಪವಾರ್ ವ್ಯಂಗ್ಯವಾಡಿದ್ದಾರೆ.

    ಕ್ಯಾಮೆರಾ ಇದೆ ಅಂತ ಗೊತ್ತಾದಾಗ ನಾನೇಕೆ ಆಟ ಆಡಲು ಅಲ್ಲಿ ಕುಳಿತುಕೊಳ್ಳಬೇಕು? ಅಚಾನಕ್ಕಾಗಿ ಡೌನ್‌ಲೋಡ್‌ ಆಗುತ್ತಿದ್ದ ಆಟವನ್ನು ತಪ್ಪಿಸಲು ಪ್ರಯತ್ನಿಸಿದೆ. ಅದು ಸಾಧ್ಯವಾಗಲಿಲ್ಲ. ಆದರೆ, ಮುಂದೆ ಅದನ್ನು ಸರಿಪಡಿಸಿದ್ದೇನೆ ಎಂದು ಸಚಿವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

    ಅಪೂರ್ಣ ವೀಡಿಯೊ ಬಳಸಿ ವಿರೋಧ ಪಕ್ಷವು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಅಚಾನಕ್ಕಾಗಿ ಗೇಮ್‌ ಡೌನ್‌ಲೋಡ್‌ ಆಗುವುದನ್ನು ತಪ್ಪಿಸಲು ನಾನು ಪ್ರಯತ್ನಿಸಿದ್ದೆ. ನಂತರ ಅದನ್ನು ಸರಿಪಡಿಸಿಕೊಂಡೆ’ ನೀವು ಪೂರ್ಣ ವೀಡಿಯೊವನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ‘ಈ ದಾರಿ ತಪ್ಪಿದ ಸಚಿವರು ಮತ್ತು ಸರ್ಕಾರವು ಬೆಳೆ ವಿಮೆ, ಸಾಲ ಮನ್ನಾ ಮತ್ತು ಬೆಂಬಲ ಬೆಲೆಯನ್ನು ಕೋರಿ ರೈತರು ಮಾಡುತ್ತಿರುವ ‘ಬಡ ರೈತರ ಹೊಲಗಳಿಗೆ ಒಮ್ಮೆ ಬನ್ನಿ, ಮಹಾರಾಜ್’ ಎಂಬ ಹತಾಶ ಮನವಿಯನ್ನು ಎಂದಾದರೂ ಕೇಳುತ್ತದೆಯೇ?’ ಎಂದು X ನಲ್ಲಿ ಮರಾಠಿಯಲ್ಲಿ ರೋಹಿತ್‌ ಪವಾರ್ ಪೋಸ್ಟ್ ಮಾಡಿದ್ದಾರೆ.

  • ಕೊಲೆ ಕೇಸ್‌ನಲ್ಲಿ ಆಪ್ತನ ಬಂಧನ – ಮಹಾರಾಷ್ಟ್ರ ಸಚಿವ ರಾಜೀನಾಮೆ

    ಕೊಲೆ ಕೇಸ್‌ನಲ್ಲಿ ಆಪ್ತನ ಬಂಧನ – ಮಹಾರಾಷ್ಟ್ರ ಸಚಿವ ರಾಜೀನಾಮೆ

    ಮುಂಬೈ: ಕೊಲೆ ಪ್ರಕರಣವೊಂದರಲ್ಲಿ ಆಪ್ತನ ಬಂಧನದ ಬೆನ್ನಲ್ಲೇ ಮಹಾರಾಷ್ಟ್ರ ಸಚಿವ ಧನಂಜಯ್‌ ಮುಂಡೆ (Dhananjay Munde) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಕಳೆದ ಡಿಸೆಂಬರ್‌ನಲ್ಲಿ ಬೀಡ್ ಜಿಲ್ಲೆಯಲ್ಲಿ ಸರ್ಪಂಚ್‌ವೊಬ್ಬರ ಭೀಕರ ಹತ್ಯೆಯಾಗಿತ್ತು. ಮಸ್ಸಾಜೋಗ್ ಗ್ರಾಮದ ಸರ್ಪಂಚ್‌ ಸಂತೋಷ್ ದೇಶಮುಖ್ ಅವರ ಹತ್ಯೆಯಲ್ಲಿ ಪಾತ್ರ ವಹಿಸಿದ್ದ ಆರೋಪದ ಮೇಲೆ ಸಚಿವ ಧನಂಜಯ್‌ ಆಪ್ತ ವಾಲ್ಮಿಕ್ ಕರಡ್ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಐಐಟಿ ಬಾಬಾ ಜೈಪುರದಲ್ಲಿ ಅರೆಸ್ಟ್‌

    ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ಹೊಂದಿದ್ದ ಮುಂಡೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸೂಚನೆಯ ಮೇರೆಗೆ ರಾಜೀನಾಮೆ ನೀಡಿದ್ದಾರೆ.

    ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಾಕಿರುವ ಮುಂಡೆ ಅವರು, ಸರ್ಪಂಚ್‌ರ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬುದು ತಮ್ಮ ದೃಢವಾದ ಬೇಡಿಕೆಯಾಗಿದೆ. ಈ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಅಲ್ಲದೇ, ನ್ಯಾಯಾಂಗ ತನಿಖೆಗೆ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್‌ಗಿಂತ ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ: ಡೊನಾಲ್ಡ್ ಟ್ರಂಪ್

    ರಾಜೀನಾಮೆ ನಿರ್ಧಾರ ಕುರಿತು ಸ್ಪಷ್ಟನೆ ನೀಡಿರುವ ಅವರು, ನನ್ನ ಆರೋಗ್ಯವೂ ಚೆನ್ನಾಗಿಲ್ಲ. ಶೀಘ್ರದಲ್ಲೇ ಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಹೇಳಿದ್ದಾರೆ. ‘ಮುಂಡೆ ಅವರ ರಾಜೀನಾಮೆ ಸ್ವೀಕರಿಸಿ, ರಾಜ್ಯಪಾಲರಿಗೆ ಸಲ್ಲಿಸಲಾಗುವುದು’ ಎಂದು ಸಿಎಂ ಫಡ್ನವಿಸ್‌ ತಿಳಿಸಿದ್ದಾರೆ.

    49 ವಯಸ್ಸಿನ ಧನಂಜಯ್ ಮುಂಡೆ ಅವರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಶಾಸಕರಾಗಿದ್ದಾರೆ. ಬೀಡ್‌ನ ಪಾರ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕ ದಿವಂಗತ ಗೋಪಿನಾಥ್ ಮುಂಡೆ ಅವರ ಸೋದರಳಿಯ ಹಾಗೂ ಮಹಾರಾಷ್ಟ್ರ ಸಚಿವ ಪಂಕಜಾ ಮುಂಡೆ ಅವರ ಸೋದರ ಸಂಬಂಧಿಯೂ ಆಗಿದ್ದಾರೆ. ಧನಂಜಯ್ ಮುಂಡೆ 2013 ರಲ್ಲಿ ಎನ್‌ಸಿಪಿ ಸೇರಿದರು. 2023 ರಲ್ಲಿ ಶರದ್ ಪವಾರ್ ನೇತೃತ್ವದ ಪಕ್ಷ ವಿಭಜನೆಯಾದಾಗ, ಅವರು ಅಜಿತ್ ಪವಾರ್ ಬಣ ಸೇರಿದ್ದರು. ಹಿಂದೆ, ಅವರು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಉದ್ಧವ್ ಠಾಕ್ರೆ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.