Tag: Maharashtra Home Minister Anil Deshmukh

  • ಮಾಜಿ ಸಚಿವ ಅನಿಲ್ ದೇಶಮುಖ್‍ರನ್ನು ವಶಕ್ಕೆ ಪಡೆದ ಸಿಬಿಐ

    ಮಾಜಿ ಸಚಿವ ಅನಿಲ್ ದೇಶಮುಖ್‍ರನ್ನು ವಶಕ್ಕೆ ಪಡೆದ ಸಿಬಿಐ

    ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಸಿಬಿಐ, ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ವಶಕ್ಕೆ ಪಡೆದುಕೊಂಡಿದೆ.

    ತಮ್ಮ ವಿರುದ್ಧದ ಭ್ರಷ್ಟಾಚಾರದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ತನ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದೇಶಮುಖ್ ಈ ಹಿಂದೆ ಬಾಂಬೆ ಹೈಕೋರ್ಟ್‍ಗೆ ಮೊರೆ ಹೋಗಿದ್ದರು. ಇದನ್ನೂ ಓದಿ: ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ

    ದೇಶಮುಖ್ ಅವರು ಸೋಮವಾರ ವಕೀಲ ಅನಿಕೇತ್ ನಿಕಮ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಸಿಬಿಐ ತನ್ನ ಕಸ್ಟಡಿಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪ್ರಶ್ನಿಸಿದ್ದರು. ಎನ್‍ಸಿಪಿಯ ಹಿರಿಯ ನಾಯಕರ ಮನವಿಯನ್ನು ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಅವರ ಏಕ ಪೀಠದ ಮುಂದೆ ಇಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

    ದೇಶಮುಖ್ ಅವರನ್ನು ಸಿಬಿಐ ತಂಡವು ಸೆಂಟ್ರಲ್ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಕಸ್ಟಡಿಗೆ ತೆಗೆದುಕೊಂಡು ನಂತರ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.