Tag: Maharashtra govt

  • ಸಾಂಗ್ಲಿಯ `ಇಸ್ಲಾಮ್‌ಪುರ’ ಈಗ `ಈಶ್ವರಪುರ’ – ಮರುನಾಮಕರಣಕ್ಕೆ `ಮಹಾ’ ಸರ್ಕಾರ ನಿರ್ಧಾರ

    ಸಾಂಗ್ಲಿಯ `ಇಸ್ಲಾಮ್‌ಪುರ’ ಈಗ `ಈಶ್ವರಪುರ’ – ಮರುನಾಮಕರಣಕ್ಕೆ `ಮಹಾ’ ಸರ್ಕಾರ ನಿರ್ಧಾರ

    ಮುಂಬೈ: ಸಾಂಗ್ಲಿ (Sangli) ಜಿಲ್ಲೆಯ ಇಸ್ಲಾಮ್‌ಪುರವನ್ನು (Islampur) ಈಶ್ವರಪುರ (Ishwarpur) ಎಂದು ಮರುನಾಮಕರಣಕ್ಕೆ ಮಹಾರಾಷ್ಟ್ರ ಸರ್ಕಾರ (Maharashtra Govt) ನಿರ್ಧರಿಸಿದೆ.

    ಮಳೆಗಾಲ ಅಧಿವೇಶನ ಸಂಬಂಧ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಭಾಜಿ ಭಿಡೆ ನೇತೃತ್ವದ ಹಿಂದುತ್ವ ಸಂಘಟನೆಯಾದ ಶಿವ ಪ್ರತಿಷ್ಠಾನವು ಇಸ್ಲಾಂಪುರದ ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ಸಾಂಗ್ಲಿ ಜಿಲ್ಲಾಧಿಕಾರಿಗೆ ಜ್ಞಾಪಕ ಪತ್ರವೊಂದನ್ನು ಕಳುಹಿಸಿದ್ದರು. ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಮೋದಿ ವರ್ಚಸ್ಸು ಕಡಿಮೆಯಾಗಿರೋದಕ್ಕೆ ಬಿಜೆಪಿ ಫ್ರೀ ಗ್ಯಾರಂಟಿಗಳನ್ನ ಘೋಷಿಸ್ತಿದೆ – ಹೆಚ್.ಎಂ.ರೇವಣ್ಣ

    ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಛಗನ್ ಭುಜಬಲ್ ವಿಧಾನಸಭೆಯಲ್ಲಿ ಮಾತನಾಡಿ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ರಾಜ್ಯ ಸರ್ಕಾರ ತೆಗೆದುಕೊಂಡ ಈ ನಿರ್ಧಾರದ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಇಸ್ಲಾಂಪುರದಿಂದ ಬಂದ ಶಿವಸೇನಾ ನಾಯಕರೊಬ್ಬರು ಮಾತನಾಡಿ, ಹೆಸರು ಬದಲಾವಣೆಯ ಈ ಬೇಡಿಕೆ 1986ರಿಂದಲೂ ಬಾಕಿ ಇದೆ. ಸಂಭಾಜಿ ಭಿಡೆ ನೇತೃತ್ವದಲ್ಲಿರುವ ಶಿವ ಪ್ರತಿಷ್ಠಾನದ ಬೆಂಬಲಿಗರು ತಮ್ಮ ಬೇಡಿಕೆ ಈಡೇರುವವರೆಗೂ ಸುಮ್ಮನಾಗುವುದಿಲ್ಲ ಎಂದರು.ಇದನ್ನೂ ಓದಿ:ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

  • ಮುಂಬೈ, ಥಾಣೆ ನಡುವೆ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಪ್ಲಾನ್: ಏಕನಾಥ್ ಶಿಂಧೆ

    ಮುಂಬೈ, ಥಾಣೆ ನಡುವೆ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಪ್ಲಾನ್: ಏಕನಾಥ್ ಶಿಂಧೆ

    ಮುಂಬೈ: ಕಲಾವಿದರಿಗಾಗಿ ವಿಶಾಲವಾದ ವೇದಿಕೆ ಕಲ್ಪಿಸಲು ಮುಂಬೈ (Mumbai) ಮತ್ತು ಥಾಣೆ (Thane) ನಗರಗಳ ನಡುವೆ ಫಿಲ್ಮ್ ಸಿಟಿ (Film City) ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಯೋಜಿಸಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಹೇಳಿದ್ದಾರೆ.

    ಖ್ಯಾತ ಮರಾಠಿ ರಂಗಭೂಮಿ ಕಲಾವಿದ ಪ್ರಶಾಂತ್ ದಾಮ್ಲೆ (Prashant Damle) ಅವರ ‘ಏಕ್ ಲಗ್ನಾಚಿ ಗೋಷ್ಟ್’ (Eka Lagnachi Gosht) ಎಂಬ ನಾಟಕದ 12,500ನೇ ಪ್ರದರ್ಶನಕ್ಕೆ ಆಗಮಿಸಿ, ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಏಕನಾಥ್ ಶಿಂಧೆ ಅವರು, ರಾಜ್ಯ ಸರ್ಕಾರ ಮರಾಠಿ ರಂಗಭೂಮಿ ಮತ್ತು ಸಿನಿಮಾಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಇದೇ ವಾರ ರಾಜಧಾನಿಗೆ ಪ್ರಧಾನಿ ಮೋದಿ- ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಸಿಎಂ

    ಥಾಣೆಯಲ್ಲೂ ಸಾಕಷ್ಟು ಶೂಟಿಂಗ್‍ಗಳು ನಡೆಯುತ್ತಿರುತ್ತದೆ, ಮುಂಬೈ ಮತ್ತು ಥಾಣೆ ನಡುವೆ 23 ಕಿ.ಮೀ. ಪ್ರತ್ಯೇಕಿಸಿ ಫಿಲ್ಮ್ ಸಿಟಿಯನ್ನು ನಿರ್ಮಿಸುವ ಬಗ್ಗೆ ಸರ್ಕಾರ ಯೋಜಿಸಿದ್ದು, ಆದಷ್ಟು ಶೀಘ್ರವೇ ಕೆಲಸ ಮಾಡಲಿದೆ ಎಂದರು. ಇದನ್ನೂ ಓದಿ: ಹೇಮಾವತಿ ಹಿನ್ನೀರಿನಲ್ಲಿ ತೇಲುವ ಹಡಗು- ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಶೆಟ್ಟಿಹಳ್ಳಿ ಚರ್ಚ್

    ಡ್ರಾಮಾ ಆಡಿಟೋರಿಯಂಗಳನ್ನು ಪರಿಶೀಲಿಸಿ ಮತ್ತು ಅವುಗಳನ್ನು ಅಭಿವೃದ್ಧಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ ಎಂದರು. ಅಲ್ಲದೇ ಇದೇ ವೇಳೆ ಪ್ರಶಾಂತ್ ದಾಮ್ಲೆ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ: ವೈ ಪ್ಲಸ್ ಭದ್ರತೆಗೆ ಸರಕಾರ ಚಿಂತನೆ

    ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ: ವೈ ಪ್ಲಸ್ ಭದ್ರತೆಗೆ ಸರಕಾರ ಚಿಂತನೆ

    ಬಾಲಿವುಡ್ ನಟರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿರುವ ಕಾರಣದಿಂದಾಗಿ ಮಹಾರಾಷ್ಟ್ರ ಸರಕಾರ ತಲೆಕೆಡಿಸಿಕೊಂಡು ಕೂತಿದೆ. ಸಲ್ಮಾನ್ ಖಾನ್ ಮಾತ್ರವಲ್ಲ ಅನುಪಮ್ ಕೇರ್, ಅಕ್ಷಯ್ ಕುಮಾರ್ (Akshay Kumar) ಸೇರಿದಂತೆ ಹಲವು ಕಲಾವಿದರಿಗೆ ನಾನಾ ಕಡೆಗಳಿಂದ ಜೀವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಭದ್ರತೆ (Security) ಕೊಡಲು ಸರಕಾರ ಚಿಂತನೆ ನಡೆಸಿದೆ. ಅದರಲ್ಲೂ ಸಲ್ಮಾನ್ ಖಾನ್ (Salman Khan) ಅವರಿಗೆ ಸಿಧು ಮೂಸೆವಾಲ ಹತ್ಯೆಕಾರರು ಬೆದರಿಕೆ ಹಾಕಿರುವುದರಿಂದ ಅವರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಲು ಮಹಾರಾಷ್ಟ್ರ ಸರಕಾರ (Maharashtra Govt) ಸಿದ್ಧವಾಗಿದೆ.

    ಕಳೆದ ಮೇ 29 ರಂದು ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೆವಾಲ  ಅವರನ್ನು ಹತ್ಯೆ ಮಾಡಲಾಯಿತು. ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಇದೆ ಎಂದು ಹೇಳಲಾಯಿತು. ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಪ್ಲ್ಯಾನ್ ಮಾಡಿರುವ ಆತಂಕಕಾರಿ ವಿಚಾರ ಹೊರಬಂತು. ಅಲ್ಲದೇ, ಇದೇ ಗ್ಯಾಂಗ್ ಸಲ್ಮಾನ್ ಖಾನ್ ತಂದೆಗೂ ಪತ್ರ ಬರೆದು ಜೀವ ಬೆದರಿಕೆ ಹಾಕಿತ್ತು. ಈ ಬೆದರಿಕೆಯ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಲು ಮುಂದಾಗಿದೆ. ಇದನ್ನೂ ಓದಿ:ಮಲಯಾಳಂಗೆ ಹಾರಿದ ರಾಜ್ ಬಿ. ಶೆಟ್ಟಿ : ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಾಯಕಿ

     

    ಈಗಾಗಲೇ ಸಲ್ಮಾನ್ ಖಾನ್ ಗೆ ಗನ್ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವೈ ಪ್ಲಸ್ ಭದ್ರತೆಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಶ್ರೇಣಿಯ ಭದ್ರತೆಯಲ್ಲಿ ನಾಲ್ಕು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಇರುತ್ತಾರೆ. ಸಲ್ಮಾನ್ ಖಾನ್ ಗೆ ವೈ ಪ್ಲಸ್ ಭದ್ರತೆ ನೀಡಿದರೆ, ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ (Anupam Kher) ಅವರಿಗೆ ಎಕ್ಸ್ ಕೆಟಗರಿ ಭದ್ರತೆ ನೀಡಲು ಸರಕಾರ ಸೂಚಿಸಿದೆ. ಅಲ್ಲದೇ ಭದ್ರತಾ ಸಿಬ್ಬಂದಿ ವೆಚ್ಚವನ್ನು ನಟರೇ ಭರಿಸಬೇಕು ಎಂದು ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ

    ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ

    ಮುಂಬೈ: ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರ ಸರ್ಕಾರ ಸೂಪರ್ ಮಾರ್ಕೆಟ್ ಮತ್ತು ಕಿರಾಣಿ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರವು ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರವಾಗಿದೆ. ಮಾದಕ ದ್ರವ್ಯ, ಮದ್ಯವ್ಯಸನದಿಂದ ಜನರನ್ನು ದೂರವಿಡುವುದು ಸರ್ಕಾರದ ಕರ್ತವ್ಯ. ಆದಾಯಕ್ಕಾಗಿ ಮದ್ಯಪಾನ ಮತ್ತು ವ್ಯಸನಕ್ಕೆ ಉತ್ತೇಜನ ನೀಡುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    ರಾಜ್ಯ ಸರ್ಕಾರ ಇತ್ತೀಚೆಗೆ ಸೂಪರ್ ಮಾರ್ಕೆಟ್ ಮತ್ತು ಕಿರಾಣಿ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ನಿರ್ಧರಿಸಿದೆ. ರೈತರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇಂತಹ ನಿರ್ಧಾರ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದು ನಿಜವಾದ ಪ್ರಶ್ನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜ್ಯದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದಲ್ಲಿರುವವರು ಬೆಂಬಲಿಸುತ್ತಿದ್ದಾರೆ ಎಂದರು. ರೈತರ ಹಿತರಕ್ಷಣೆ ಕುರಿತು ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು. ಆದರೆ, ವರ್ಷಕ್ಕೆ 1,000 ಕೋಟಿ ಲೀಟರ್ ವೈನ್ ಮಾರಾಟ ಮಾಡುವ ಗುರಿಯನ್ನು ನಿಗದಿಪಡಿಸುವ ಮೂಲಕ ಸರ್ಕಾರ ಏನನ್ನು ಸಾಧಿಸಲು ಬಯಸುತ್ತಿದೆ? ಇದರರ್ಥ ಸರ್ಕಾರಕ್ಕೆ ರಾಜ್ಯದ ಜನರು ವ್ಯಸನಿಯಾಗಿದ್ದರೂ ಪರವಾಗಿಲ್ಲ, ಸರ್ಕಾರದ ಆದಾಯ ಹೆಚ್ಚಿಸಬೇಕು ಎಂದು ಕಿಡಿಕಾರಿದರು.

    ಕಳೆದ ವರ್ಷ ನವೆಂಬರ್‌ನಲ್ಲಿ ಮಹಾರಾಷ್ಟ್ರ ಸರ್ಕಾರವು ಆಮದು ಮಾಡಿಕೊಂಡ ಸ್ಕಾಚ್ ವಿಸ್ಕಿಯ ಮೇಲಿನ ಅಬಕಾರಿ ಸುಂಕವನ್ನು ಶೇ.50 ರಷ್ಟು ಕಡಿಮೆ ಮಾಡಿದೆ. ಈ ರೀತಿಯ ಮದ್ಯದ ಮಾರಾಟವನ್ನು ಹೆಚ್ಚಿಸಲು ಅದರ ಆದಾಯವನ್ನು 100 ಕೋಟಿಯಿಂದ 250 ಕೋಟಿಗೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಹಿಂದೂತ್ವವಾದಿ, ನನ್ನ ಏಳಿಗೆ ಸಹಿಸದೇ ಕೆಲವರು ಈ ರೀತಿ ಮಾಡಿದ್ದಾರೆ: ಶಾಸಕ ಬೆಲ್ಲದ

    ವೈನ್ ಮತ್ತು ಮದ್ಯಗೆ ಉಪಯೋಗಿಸುವ ಹಣ್ಣನ್ನು ಬೆಳೆಯುವ ರೈತರಿಗೆ ಹೆಚ್ಚು ಉತ್ತೇಜನ ಕೊಡುವ ಸಲುವಾಗಿ ರಾಜ್ಯ ಸರ್ಕಾರವು ಸೂಪರ್ ಮಾರ್ಕೆಟ್ ಮತ್ತು ವಾಕ್-ಇನ್ ಶಾಪ್‍ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿದೆ ಎಂದು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು. ಈ ಕುರಿತು ಮಹಾರಾಷ್ಟ್ರ ಕೌಶಲ್ಯಾಭಿವೃದ್ಧಿ ಸಚಿವ ನವಾಬ್ ಮಲಿಕ್ ಕಳೆದ ಗುರುವಾರ ತಿಳಿಸಿದ್ದರು.

  • ಕೊರೊನಾ ಭೀತಿ – ಮಹಾರಾಷ್ಟ್ರದಲ್ಲಿ ಸರ್ಕಾರಿ ಕಚೇರಿಗಳಿಗೆ ರಜೆ

    ಕೊರೊನಾ ಭೀತಿ – ಮಹಾರಾಷ್ಟ್ರದಲ್ಲಿ ಸರ್ಕಾರಿ ಕಚೇರಿಗಳಿಗೆ ರಜೆ

    – ಮುಂಬೈ ಲೋಕಲ್ ರೈಲು ಸ್ಥಗಿತಕ್ಕೆ ಚಿಂತನೆ
    – ಭಾರತ 129 ಮಂದಿಗೆ ಕೊರೊನಾ

    ಮುಂಬೈ: ಕೊರೊನಾ ವೈರಸ್‍ನಿಂದಾಗಿ ಇಡೀ ವಿಶ್ವವೇ ತಲ್ಲಣಿಸಿದ್ದು, ಭಾರತದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜನಸಂದಣಿಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಇದೀಗ ಮಹಾರಾಷ್ಟ್ರದಲ್ಲಿ ಸರ್ಕಾರಿ ಕಚೇರಿಗಳನ್ನೂ ಬಂದ್ ಮಾಡಲಾಗಿದೆ.

    ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 137ಕ್ಕೆ ತಲುಪಿದ್ದು, ಇದರಲ್ಲಿ 40 ಪ್ರಕರಣಗಳು ಮಹಾರಾಷ್ಟ್ರದಲ್ಲೇ ಪತ್ತೆಯಾಗಿವೆ. ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣ ಹೊಂದಿದ ರಾಜ್ಯವಾರುವ ಮಹಾರಾಷ್ಟ್ರ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಸರ್ಕಾರಿ ಕಚೇರಿಗಳಿಗೆ ಏಳು ದಿನಗಳ ಕಾಲ ರಜೆ ಘೋಷಿಸಿ ಆದೇಶಿಸಿದೆ.

    ಕೇವಲ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಅಲ್ಲದೆ ಮುಂಬೈ ಲೋಕಲ್ ಟ್ರೇನ್ ಸಹ ಬಂದ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‍ನಿಂದಾಗಿ ಮೂರನೇ ಸಾವು ಸಂಭವಿಸಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಲ್ಲದೆ ಮೂರು ವರ್ಷದ ಬಾಲಕಿಗೂ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಎಲ್ಲ ಕಾರಣಗಳಿಂದಾಗಿ ಮಹಾರಾಷ್ಟ್ರ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಹೀಗಾಗಿ ಸರ್ಕಾರಿ ಕಚೇರಿಗಳಿಗೆ 7 ದಿನಗಳ ಕಾಲ ರಜೆ ಘೋಷಿಸಿದೆ. ಎಲ್ಲ ರೀತಿಯ ಕ್ರಮ ಕೈಗೊಂಡರೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 40 ಮಂದಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಮೃತಪಟ್ಟ ವೃದ್ಧ ಕೊರೊನಾ ಜೊತೆಗೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಕರ್ನಾಟಕ, ದೆಹಲಿ ನಂತರ ಮಹಾರಾಷ್ಟ್ರದಲ್ಲಿ ಕೊರೊನಾಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.

    ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 137 ಮಂದಿ ತುತ್ತಾಗಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಕರ್ನಾಟದಲ್ಲಿ ಒಟ್ಟು 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

    ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 162 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ. ಈವರೆಗೆ ಸೋಂಕಿಗೆ 7,171 ಮಂದಿ ಬಲಿಯಾಗಿದ್ದಾರೆ.