Tag: Maharashtra government

  • Maharashtra: ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಎಫ್‌ಐಆರ್‌!

    Maharashtra: ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಎಫ್‌ಐಆರ್‌!

    ಮುಂಬೈ: ವಿಶೇಷಚೇತನ ಹಾಗೂ ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಮೇಲೆ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ (Puja Khedkar) ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (UPSC) ಎಫ್‌ಐಆರ್‌ ದಾಖಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ತಮ್ಮ ಉದ್ಯೋಗ ಭದ್ರತೆಗಾಗಿ ಪೂಜಾ ಖೇಡ್ಕರ್‌ ನಕಲಿ ದಾಖಲೆ, ಪ್ರಮಾಣ ಪತ್ರಗಳನ್ನ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಖಾಸಗಿ ಆಡಿ ಕಾರಿಗೆ ರೆಡ್‌ಲೈಟ್‌ ಮತ್ತು ಮಹಾರಾಷ್ಟ್ರ ಸರ್ಕಾರದ (Maharashtra Government) ಲಾಂಛನ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲ ಕಾರಣಗಳಿಂದಾಗಿ ಮಹಾರಾಷ್ಟ್ರ ಸರ್ಕಾರ ಅವರ ತರಬೇತಿಯನ್ನು ತಡೆಹಿಡಿದಿತ್ತು. ವಿಚಾರಣೆಗಾಗಿ ಮಸ್ಸೂರಿಯಲ್ಲಿರುವ ಲಾಲ್‌ ಬಹದ್ದೂರ್‌ ಶಾಸ್ತ್ರೀ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ಮಿನಿಸ್ಟ್ರೇಷನ್‌ಗೆ ಬರುವಂತೆ ಸೂಚಿಸಿತ್ತು. ವಿಚಾರಣೆ ಬಳಿಕ ಗುರುವಾರ (ಜು.18) ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದ ಯುಪಿಎಸ್‌ಸಿ, ಶುಕ್ರವಾರ (ಇಂದು) ಎಫ್‌ಐಆರ್‌ ದಾಖಲಿಸಿದೆ.

    ಪೂಜಾ ಮೇಲಿನ ಆರೋಪ ಏನು?
    2023ನೇ ಸಾಲಿನ ಐಎಎಸ್‌ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್‌ ಅವರು ವಾಶೀಂ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿದ್ದರು. ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ತಾವು ಭಾಗಶಃ ಅಂಗವಿಕಲತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ಅಂಗವೈಕಲ್ಯ ಕೋಟಾ ಬಳಸಿಕೊಂಡಿದ್ದರು. ಅಲ್ಲದೇ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಾತಿ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳನ್ನು ನಕಲು ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಮುನ್ನವೇ ಸವಲತ್ತುಗಳಿಗೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಅವರ ವಿರುದ್ಧ ಇದೆ ಎಂದು ಸಂಬಂಧಪಟ್ಟ ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ತಾಯಿ ಅರೆಸ್ಟ್‌ ಬೆನ್ನಲ್ಲೇ ತಂದೆ ನಿರೀಕ್ಷಣಾ ಜಾಮೀನು:
    ರೈತರೊಬ್ಬರಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಪೂಜಾ ಖೇಡ್ಕರ್‌ ಅವರ ತಾಯಿ ಮನೋರಮಾ ಖೇಡ್ಕರ್‌ ಅವರನ್ನ ಪುಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಪೂಜಾ ತಂದೆ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

  • ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್‌ ತರಬೇತಿಗೆ ತಡೆ – ಅಕಾಡೆಮಿಗೆ ಬುಲಾವ್‌!

    ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್‌ ತರಬೇತಿಗೆ ತಡೆ – ಅಕಾಡೆಮಿಗೆ ಬುಲಾವ್‌!

    ಮುಂಬೈ: ವಿಶೇಷಚೇತನ ಹಾಗೂ ಒಬಿಸಿ ಕೋಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿರುವ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ (Puja Khedkar) ಅವರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಈ ನಡುವೆಯೇ ಮಹಾರಾಷ್ಟ್ರ ಸರ್ಕಾರ (Maharashtra Government) ಅವರ ತರಬೇತಿಯನ್ನು ತಡೆಹಿಡಿದಿದ್ದು, ಜುಲೈ 23ರ ಒಳಗೆ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಬರುವಂತೆ ಸೂಚಿಸಿದೆ.

    ನಕಲಿ ಜಾತಿ ಪ್ರಮಾಣಪತ್ರ, ವಿಶೇಷಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ನಕಲಿ ದಾಖಲೆ ಮಾಡಿಸಿರುವ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್‌ ಮಹಾರಾಷ್ಟ್ರದ ವಾಶೀಂ ಜಿಲ್ಲೆಯಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿಯಾಗಿ (IAS Officer) ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ (ಜು.16) ಅವರ ಜಿಲ್ಲಾ ತರಬೇತಿಯನ್ನು ತಡೆಹಿಡಿಯಲಾಗಿದೆ. ಪೂಜಾ ಖೇಡ್ಕರ್‌ ಅವರ ಪ್ರಕರಣದಲ್ಲಿ ಸರ್ಕಾರದ ಮೊದಲ ಮಹತ್ವದ ಕ್ರಮ ಇದು ಎಂದು ಹೇಳಲಾಗಿದೆ. ಮುಂದಿನ ಕ್ರಮಕ್ಕಾಗಿ ಅವರನ್ನು ತರಬೇತಿ ಅಕಾಡೆಮಿಗೆ ಬರುವಂತೆ ಆದೇಶ ಪ್ರತಿಯಲ್ಲಿ ಸೂಚಿಸಿದೆ. ಇದನ್ನೂ ಓದಿ: NEET: ಪರೀಕ್ಷಾ ಮಂಡಳಿ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆ ಕದ್ದಿದ್ದ ಎಂಜಿನಿಯರ್‌ ಬಂಧನ

    ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಏಕಸದಸ್ಯ ಸಮಿತಿ ರಚಿಸಿತ್ತು. ಸೋಮವಾರ (ಜು.15) ಸಹ ಪೊಲೀಸರು ತಡರಾತ್ರಿವರೆಗೆ ಮೇಲ್ವಿಚಾರಣೆ ನಡೆಸಿದ್ದರು. ರಾತ್ರಿ 11 ಗಂಟೆಯಿಂದ 1 ಗಂಟೆವರೆಗೆ ಮೂವರು ಮಹಿಳಾ ಅಧಿಕಾರಿಗಳು ವಿಚಾರಣೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್‌ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?

    ಪ್ರಕರಣದ ಬಗ್ಗೆ ಪೂಜಾ ಖೇಡ್ಕರ್‌ ಹೇಳಿದ್ದೇನು?
    ನಕಲಿ ದಾಖಲೆ, ಅಧಿಕಾರ ದುರುಪಯೋಗ ಸೇರಿ ಹಲವು ಆರೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಮೊದಲ ಬಾರಿಗೆ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಯಾರೇ ಆಗಲಿ, ಆರೋಪ ಸಾಬೀತಾಗುವವರೆಗೆ ಅವರು ಆರೋಪಿಯೇ, ಮಾಧ್ಯಮಗಳ ವರದಿಗಳು, ತೀರ್ಪುಗಳು ನಾನು ಏನೆಂಬುದನ್ನು ತೀರ್ಮಾನಿಸುವುದಿಲ್ಲ. ತನಿಖೆಗೆ ರಚನೆಯಾಗಿರುವ ಸಮಿತಿಯ ತೀರ್ಮಾನದ ಬಳಿಕವೇ ಸತ್ಯ ಏನೆಂಬುದು ಗೊತ್ತಾಗುತ್ತದೆ. ಮಾಧ್ಯಮಗಳು ಅಥವಾ ಜನರು ನನ್ನನ್ನು ತೀರ್ಮಾನಿಸಲಾಗುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ವಿವಾದಿತ ಭೋಜಶಾಲಾ ಮಸೀದಿಯಲ್ಲಿ ಮಂದಿರದ ಕುರುಹು – ಪುರಾತತ್ವ ಇಲಾಖೆಯ 2,000 ಪುಟಗಳ ವರದಿಯಲ್ಲಿ ಏನಿದೆ?

    2023ನೇ ಸಾಲಿನ ಐಎಎಸ್‌ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್‌ ಅವರು ವಾಶೀಂ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿದ್ದರು. ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ತಾವು ಭಾಗಶಃ ಅಂಗವಿಕಲತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ಅಂಗವೈಕಲ್ಯ ಕೋಟಾ ಬಳಸಿಕೊಂಡಿದ್ದರು. ಅಲ್ಲದೇ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿಯನ್ನೂ ತಪ್ಪಾಗಿ ಪಡೆದುಕೊಂಡಿರುವ ಆರೋಪ ಅವರ ವಿರುದ್ಧ ಇದೆ ಎಂದು ಸಂಬಂಧಪಟ್ಟ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ದೋಡಾದಲ್ಲಿ ಎನ್‌ಕೌಂಟರ್‌ – ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ

  • ಮರಾಠ ಮೀಸಲಾತಿ ಹೋರಾಟಕ್ಕೆ ಜಯ – ಬೇಡಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು

    ಮರಾಠ ಮೀಸಲಾತಿ ಹೋರಾಟಕ್ಕೆ ಜಯ – ಬೇಡಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು

    – ನವಿ ಮುಂಬೈ ಪ್ರವೇಶಿಸುವ ಮುನ್ನವೇ ಪ್ರತಿಭಟನೆ ಸುಖಾಂತ್ಯ

    ಮುಂಬೈ: ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಮರಾಠ ಸಮುದಾಯಗಳಿಗೆ ಮೀಸಲಾತಿಗೆ (Maratha Quota) ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಮುಕ್ತಾಯಗೊಂಡಿದೆ. ಏಕನಾಥ್‌ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮರಾಠ ಸಮಯದಾಯದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ (Manoj Jarange Patil) ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.

    ಹಿಂದುಳಿದ ವರ್ಗಗಳ ಅಡಿಯಲ್ಲಿ ಮರಾಠ ಸಮಯದಾಯಕ್ಕೆ (Maratha Community) ಶಿಕ್ಷಣ ಮತ್ತು ಉದ್ಯೋಗಳಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಶನಿವಾರ ಮಹಾರಾಷ್ಟ್ರ ಸರ್ಕಾರವು (Maharashtra Government) ನಮ್ಮ ಮನವಿಯನ್ನು ಸ್ವೀಕರಿಸಿದೆ ಎಂದು ಹೇಳಿ ಪಾಟೀಲ್‌ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಮುಖ್ಯಮಂತ್ರಿಗಳ ಕೈಯಿಂದ ತಂಪು ಪಾನೀಯ (ಜ್ಯೂಸ್‌) ಕುಡಿಯುವ ಮೂಲಕ ಉಪವಾಸ ಅಂತ್ಯಗೊಳಿಸಿದರು. ಇದನ್ನೂ ಓದಿ: ಮದುವೆಯಾಗಿ 12 ವರ್ಷ- ಇಬ್ಬರು ಮಕ್ಕಳನ್ನು ಬಿಟ್ಟು ಗೃಹಿಣಿ ಆತ್ಮಹತ್ಯೆ

    ಈ ವೇಳೆ ಮಾತನಾಡಿ, ಸಿಎಂ ಏಕನಾಥ್‌ ಶಿಂಧೆ (Eknath Shinde) ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ಮನವಿ ಸ್ವೀಕರಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಇದರಿಂದ ನಮ್ಮ ಪ್ರತಿಭಟನೆ ಮುಗಿದಿದೆ ಎಂದು ತಿಳಿಸಿದ್ದಾರೆ.

    ಬೇಡಿಕೆಗಳಿಗೆ ಸರ್ಕಾರ ಅಸ್ತು:
    ಜನವರಿ 20 ರಂದು ಜಾಲ್ನಾದಿಂದ ಆರಂಭವಾದ ಮೀಸಲಾತಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಶನಿವಾರ ಮುಂಬೈ ನಗರ ಪ್ರವೇಶಿಸಲು ಸಜ್ಜಾಗಿತ್ತು. ಅಷ್ಟರಲ್ಲಿ ಮಹಾರಾಷ್ಟ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು, ಪ್ರತಿಭಟನೆ ಸುಖಾಂತ್ಯ ಕಂಡಿದೆ. ನಂತರ ಮಹಾರಾಷ್ಟ್ರ ಸರ್ಕಾರವು ಜಾತಿ ಮೀಸಲಾತಿ ಕುರಿತು ಸರ್ಕಾರಿ ನಿರ್ಣಯ (GR) ಹೊರಡಿಸಿದ್ದು, ಸಚಿವರಾದ ದೀಪಕ್ ಕೇಸರ್ಕರ್ ಮತ್ತು ಮಂಗಲ್ ಪ್ರಭಾತ್ ಲೋಧಾ ಅವರು ಮನೋಜ್ ಜಾರಂಗೆ ಪಾಟೀಲ್ ಅವರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ ಎಂದು ಪತ್ರ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಸಚಿವರು, ಮರಾಠ ಮೀಸಲಾತಿಗಾಗಿ ಮನೋಜ್‌ ಜಾರಂಗೆ ನೇತೃತ್ವದಲ್ಲಿ ನಡೆಯುತ್ತಿದ್ದ ಚಳವಳಿಗೆ ಇಂದು ಪರಿಹಾರ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಿದ್ದು, ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಪರಿಹಾರ ಸಿಕ್ಕಿರುವುದರಿಂದ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಕುತೂಹಲ ಹುಟ್ಟಿಸಿತು ವಸುಂಧರಾ ರಾಜೇ, ರಾಜಸ್ಥಾನ ಸಿಎಂ ಭೇಟಿ

    ಹೋರಾಟಗಾರರ ಮೇಲಿನ ಕೇಸ್‌ ರದ್ದಿಗೆ ಒಪ್ಪಿಗೆ:
    ಮೂಲಗಳ ಪ್ರಕಾರ, ದಾಖಲಾತಿ ಹೊಂದಿರುವವರಿಗೆ ತಕ್ಷಣದಿಂದಲೇ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಜೊತೆಗೆ ಮೀಸಲಾತಿ ಹೋರಾಟದ ಸಂದರ್ಭದಲ್ಲಿ, ಹೋರಾಟಗಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ತಕ್ಷಣದಿಂದಲೇ ಅಂತ್ಯಗೊಳಿಸಲು ಸರ್ಕಾರ ಒಪ್ಪಿರುವುದಾಗಿ ತಿಳಿದುಬಂದಿದೆ.

    ಮೀಸಲಾತಿ ದಶಕಗಳ ಹೋರಾಟ: 
    ಮಹಾರಾಷ್ಟ್ರ ಜನಸಂಖ್ಯೆಯಲ್ಲಿ 33% ಒಳಗೊಂಡಿರುವ ಮರಾಠ ಸಮುದಾಯವು ದಶಕಗಳಿಂದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಒತ್ತಾಯಿಸುತ್ತಿದೆ. 2019ರಲ್ಲಿ ರಾಜ್ಯ ಸರ್ಕಾರ ಮರಾಠ ಸಮುದಾಯಕ್ಕೆ 16% ಮೀಸಲಾತಿ ನೀಡಿತು. ಆದ್ರೆ 2021ರಲ್ಲಿ ಸುಪ್ರೀಂ ಕೋರ್ಟ್‌ ಶೇ.50 ಮೀಸಲಾತಿಯನ್ನು ಉಲ್ಲೇಖಿಸಿ ಶೇ.16ರ ಕೋಟಾವನ್ನು ರದ್ದುಗೊಳಿಸಿತು. ಅಂದಿನಿಂದ ಪ್ರತಿಭಟನೆಗಳು ಶುರುವಾಗಿವೆ ಎಂಬುದಾಗಿ ಮೀಸಲಾತಿ ಹೋರಾಟಗಾರರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬುದೇ ನಮ್ಮ ಗುರಿಯಾಗಿರಬೇಕು – ಸ್ಟಾಲಿನ್‌ ಕರೆ

  • 18 ವರ್ಷಕ್ಕೂ ಮೊದಲೇ ತಾಯಿಯಂದಿರಾದ 15 ಸಾವಿರ ಹೆಣ್ಮಕ್ಕಳು – ಕಾರಣ ಕೇಳಿದ್ರೆ ಶಾಕ್‌!

    18 ವರ್ಷಕ್ಕೂ ಮೊದಲೇ ತಾಯಿಯಂದಿರಾದ 15 ಸಾವಿರ ಹೆಣ್ಮಕ್ಕಳು – ಕಾರಣ ಕೇಳಿದ್ರೆ ಶಾಕ್‌!

    ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ (Child Marriage), ಪ್ರೇಮ ವೈಫಲ್ಯ, ಲೈಂಗಿಕ ಹಿತಾಸಕ್ತಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹೆಣ್ಣುಮಕ್ಕಳು 18 ವರ್ಷ ತುಂಬುವ ಮೊದಲೇ ಗರ್ಭ ಧರಿಸುವ ಪ್ರಕರಣಗಳು ಕಂಡುಬರುತ್ತಿವೆ. ಈ ನಡುವೆ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿರುವ ವರದಿಯೊಂದು ಅಲ್ಲಿನ ಜನರನ್ನೇ ಬೆಚ್ಚಿ ಬೀಳಿಸಿದೆ.

    ಹೌದು. ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಮಹಾರಾಷ್ಟ್ರದ (Maharashtra) 16 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಲ್ಲಿ 15,253 ಹದಿಹರೆಯದ ಹೆಣ್ಣುಮಕ್ಕಳು 18 ವರ್ಷ ಆಗುವ ಮೊದಲೇ ತಾಯಂದಿರಾಗಿದ್ದಾರೆ (Teenage Mother) ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್‌ ಪ್ರಭಾತ್‌ ಲೋಧಾ (Mangal Prabhat Lodha) ತಿಳಿಸಿದ್ದಾರೆ. ಇದನ್ನೂ ಓದಿ: ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?

    ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 15 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ಗರ್ಭಿಣಿಯರಾಗಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಇಲಾಖೆಯು ಮೂರು ಸದಸ್ಯರನ್ನು ಒಳಗೊಂಡ ಸಮತಿ ರಚಿಸಿತ್ತು. ಸಮಿತಿ ನಡೆಸಿದ ತನಿಖೆಯಲ್ಲಿ 15 ಸಾವಿರಕ್ಕೂ ಹೆಚ್ಚು ಬಾಲ್ಯವಿವಾಹಗಳು ನಡೆದಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

    ಅಲ್ಲದೇ, 2019 ಮತ್ತು 2021ರ ಅವಧಿಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 152 ಮೊಕದ್ದಮೆ ಹೂಡಿದ್ದು, 136 ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ಅವರು ತಿಳಿಸಿದ್ದರು. ಈ ಮಧ್ಯೆ ಸಭಾಧ್ಯಕ್ಷರು ಶೇ.10 ರಷ್ಟು ಬಾಲ್ಯ ವಿವಾಹವನ್ನಾದರೂ ತಡೆಯಲು ಸಾಧ್ಯವಿದೆಯೇ? ಎಂದು ಕೇಳಿದಾಗ, ಲಿಖಿತ ಉತ್ತರದಲ್ಲೇ ಭಾಗಶಃ ಆಗುತ್ತದೆ ಎಂದು ಉತ್ತರಿಸಿದ್ದಾರೆ.

  • ಮಹಾರಾಷ್ಟ್ರ ಸರ್ಕಾರವನ್ನ ಕೂಡಲೇ ವಜಾ ಮಾಡಬೇಕು: ಸಿದ್ದರಾಮಯ್ಯ ಆಗ್ರಹ

    ಮಹಾರಾಷ್ಟ್ರ ಸರ್ಕಾರವನ್ನ ಕೂಡಲೇ ವಜಾ ಮಾಡಬೇಕು: ಸಿದ್ದರಾಮಯ್ಯ ಆಗ್ರಹ

    ಬೆಳಗಾವಿ: ಮಹಾರಾಷ್ಟ್ರ ಸರ್ಕಾರ (Maharashtra Government) ಅನಗತ್ಯವಾಗಿ ಮೇಲಿಂದ ಮೇಲೆ ಕಾಲ್ಕೆರೆಯುವ ಕೆಲಸ ಮಾಡ್ತಿದೆ. ಇದು ಷಡ್ಯಂತ್ರವಾಗಿದ್ದು, ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನ, ಗೌರವ ಕೆಣಕುವ ಕೆಲಸ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.

    ನಗರದ ಕಾಂಗ್ರೆಸ್ (Congress) ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಮಾಜಿ ಎಐಸಿಸಿ ಅಧ್ಯಕ್ಷ, ನಮ್ಮೆಲ್ಲರ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ಮೊದಲ ಬಾರಿ ಕರ್ನಾಟಕಕ್ಕೆ ಬರ್ತಿದ್ದಾರೆ. ಮಾ.20ರಂದು ಬೆಳಗಾವಿ ನಗರದಲ್ಲಿ ರಾಜ್ಯಮಟ್ಟದ ಯುವ ಕಾಂಗ್ರೆಸ್ ವತಿಯಿಂದ ಯುವಕರ ರ‍್ಯಾಲಿಯನ್ನು ಏರ್ಪಾಡು ಮಾಡಲಾಗಿದೆ. ಅವರನ್ನೆಲ್ಲ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇವತ್ತು ಪೂರ್ವಸಿದ್ಧತೆಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು, ಬ್ಲಾಕ್ ಕಮಿಟಿ ಅಧ್ಯಕ್ಷರು, ಶಾಸಕರು ಮಾಜಿ ಶಾಸಕರು, ಟಿಕೆಟ್ ಬಯಸಿ ಆಕಾಂಕ್ಷಿಗಳು ಇವರೆಲ್ಲರ ಸಭೆ ಬೆಳಗಾವಿಯಲ್ಲಿ ಕರೆದಿದ್ದೆವು. ‌ಐತಿಹಾಸಿಕ ರ‍್ಯಾಲಿ ಆಗಬೇಕು ಎಂದು ತೀರ್ಮಾನ ಮಾಡಲಾಗಿದೆ. ಮಾ.20ರ ಬೆಳಗ್ಗೆ 11ಕ್ಕೆ ಆರಂಭವಾಗಿ ಎರಡು ಗಂಟೆಯವರೆಗೆ ನಡೆಯುತ್ತದೆ. ‌ಸುಮಾರು ನಾಲ್ಕೈದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗಿಂತ ಫೈಟರ್ ರವಿ ಹೆಚ್ಚಾ? – ಡಿಕೆಶಿಗೆ ಅಶ್ವಥ್ ನಾರಾಯಣ್ ಟಾಂಗ್

    ಚುನಾವಣಾ ಹಿನ್ನೆಲೆಯಲ್ಲಿ ನಡೆಯುವ ರ‍್ಯಾಲಿ ಆಗಿದ್ದರಿಂದ ಚುನಾವಣೆಗೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಮಾಡ್ತಾರೆ. ‌ಇಡೀ ರಾಜ್ಯಕ್ಕೆ ಚುನಾವಣೆ ಸಂದೇಶ ಕೊಡುವಂತಹ ಪ್ರಯತ್ನ ರಾಹುಲ್ ಗಾಂಧಿ ಮಾಡ್ತಾರೆ. ‌ಇದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಎಲ್ಲರೂ ಉತ್ಸಾಹದಿಂದ ಹೆಚ್ಚು ಯವಕರು, ಕಾರ್ಯಕರ್ತರನ್ನು ಕರೆದುಕೊಂಡು ಬರಲು ಒಪ್ಪಿದ್ದಾರೆ. ಮಹಾರಾಷ್ಟ್ರ ಸರ್ಕಾರ ಅನಗತ್ಯವಾಗಿ ಮೇಲಿಂದ ಮೇಲೆ ಕಾಲ್ಕೆರೆಯುವ ಕೆಲಸ ಮಾಡ್ತಿದೆ. ಇದೊಂದು ಷಡ್ಯಂತ್ರವಾಗಿದೆ. ‌ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನ, ಗೌರವ ಕೆಣಕುವ ಕೆಲಸ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿ ರಾಜ್ಯಗಳ ನಿರ್ಮಾಣವಾಗಿದೆ.‌ ಭಾಷಾವಾರು ರಾಜ್ಯ ವಿಂಗಡಣೆ ಆದ ಮೇಲೆ ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಿದೆ. ಮಹಾಜನ್ ಆಯೋಗ ರಚನೆಯಾಗಿ ವರದಿ ಬಂದಿದೆ. ನಾವು ಮಹಾಜನ್ ವರದಿ ಅಂತಿಮ ಅಂತಾ ಒಪ್ಪಿಕೊಂಡಿದ್ದೇವೆ. ಮಹಾಜನ್ ಅಲ್ಲಿಯೇ ಜಡ್ಜ್ ಆದವರು. ಅವರು ವರದಿ ಕೊಟ್ಟಮೇಲೆ ಒಪ್ಪಿದ್ದೇವೆ. ಆದರೆ ಈಗ ಇತ್ತೀಚೆಗೆ 865 ಹಳ್ಳಿಗಳಲ್ಲಿ 54 ಕೋಟಿ ಬಿಡುಗಡೆ ಮಾಡಿ ಆರೋಗ್ಯ ಯೋಜನೆ ಘೋಷಣೆ ಮಾಡಿದ್ದಾರೆ.‌ ಇಟ್ ಇಸ್ ನನ್ ಆಫ್ ದೇರ್ ಬ್ಯುಸಿನೆಸ್. ಇನ್ನೊಂದು ರಾಜ್ಯದ ಹಳ್ಳಿಗಳಿಗೆ ಕಾರ್ಯಕ್ರಮ ಘೋಷಣೆ ಮಾಡಿದೆ. ಸಂವಿಧಾನ ಬಿಕ್ಕಟ್ಟು ನಿರ್ಮಾಣ ಮಾಡಲು ಹೊರಟಿದ್ದಾರೆ. ‌ಒಂದೆಡೆ ಕನ್ನಡಿಗರ ಸ್ವಾಭಿಮಾನ ಕೆಣಕುವಂತದ್ದು, ಇನ್ನೊಂದೆಡೆ ಕನ್ನಡದ ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸ ಆಗ್ತಿದೆ. ಮತ್ತೊಂದೆಡೆ ಒಕ್ಕೂಟ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ. ನಾನು ಇವರ ಪ್ರಯತ್ನ ಕಟುವಾಗಿ ಖಂಡಿಸುತ್ತೇನೆ‌ ಎಂದು ತಿಳಿಸಿದರು.

    ಕರ್ನಾಟಕದ ಜನ ಶಾಂತವಾಗಿದ್ದಾರೆ ಎಂದ್ರೆ ವೀಕ್ ಆಗಿದ್ದೀವಿ ಅಂತಲ್ಲ. ಕನ್ನಡ ನೆಲ-ಜಲ ರಕ್ಷಣೆಗೆ ಯಾವುದೇ ತ್ಯಾಗ ಮಾಡಲು ಎಲ್ಲ ಕನ್ನಡಿಗರು ಸಿದ್ಧರಿದ್ದೇವೆ. ಎಲ್ಲ ಕನ್ನಡಿಗರು ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಬಿಟ್ಟುಕೊಡಲು ಆಗಲ್ಲ. ನೆಲ-ಜಲ-ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಯಾರೂ ಕೂಡ ಇನ್ನೊಂದು ರಾಜ್ಯದಲ್ಲಿ ಇಂಟರ್‌ಫಿಯರ್ ಆಗಬಾರದು. ಮಹಾರಾಷ್ಟ್ರದ ಕೆಲವು ಹಳ್ಳಿಗಳ ಜನ ಕರ್ನಾಟಕ ಸೇರಲು ರೆಡಿ ಇದ್ದಾರೆ. ನಾವು ಮಧ್ಯಪ್ರವೇಶ ಮಾಡಲು ಆಗುತ್ತಾ? ಇಟ್ ಇಸ್ ನಾಟ್ ಫೇರ್. ನಾವೆಲ್ಲ ಭಾರತೀಯರು, ಶಾಂತಿಯಿಂದ ಬದುಕಬೇಕು. ಯಾವುದೇ ವಿವಾದ ಇಲ್ಲದೇ ಇದ್ದರೂ ವಿವಾದ ಮಾಡಲು ಯತ್ನವಾಗಿದೆ. ಇಷ್ಟೆಲ್ಲ ಮಾಡಿದರೂ ಕೂಡ ಸಿಎಂ ಮೌನವಾಗಿ ಇದ್ದಾರೆ. ಅವರು ಕನ್ನಡಿಗರ ರಕ್ಷಣೆ ಮಾಡುವಲ್ಲಿ, ಕರ್ನಾಟಕ ರಾಜ್ಯದ ಹಕ್ಕು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಅದನ್ನ ತಡೆಗಟ್ಟುವ ಕೆಲಸ ಮಾಡಿಲ್ಲ. ಹಾಗಾದ್ರೆ ಇವರು ಅಧಿಕಾರದಲ್ಲಿ ಏಕೆ ಇರಬೇಕು. ನೀವು ಕನ್ನಡಿಗರ ರಕ್ಷಣೆ ಮಾಡಲಾಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಲು ಆಗ್ರಹಿಸುತ್ತೇನೆ. ಇದು ಒಬ್ಬ ವ್ಯಕ್ತಿ ಪ್ರಶ್ನೆ ಅಲ್ಲ. ಆರೂವರೆ ಕೋಟಿ ಕನ್ನಡಿಗರ ಇಡೀ ಕರ್ನಾಟಕದ ಪ್ರಶ್ನೆಯಾಗಿದೆ.‌ ಕೂಡಲೇ ಮಹಾರಾಷ್ಟ್ರ ಸರ್ಕಾರ ಈ ಕಾರ್ಯಕ್ರಮ ವಾಪಸ್ ಪಡೆಯಬೇಕು ಒತ್ತಾಯಿಸಿದರು. ಇದನ್ನೂ ಓದಿ: ಆಜಾನ್ ಹೇಳಿಕೆ ವಿರುದ್ಧ ಎಷ್ಟೇ ಪ್ರತಿರೋಧ ಬಂದ್ರೂ ನಾನು ಜನ ಸಾಮಾನ್ಯನ ನೋವು ಹೇಳೋನೆ: ಈಶ್ವರಪ್ಪ

    ಒಕ್ಕೂಟ ವ್ಯವಸ್ಥೆ ಕಾಪಾಡಬೇಕಿರುವ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಅವರು ಬುದ್ದಿ ಕಲಿಯಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕು. ‌ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ, ಅಶಾಂತಿ ನಿರ್ಮಾಣ ಮಾಡುವಂತಹ ಕೆಲಸ ಮಾಡಬಾರದು. ಅನಗತ್ಯವಾಗಿ ರಾಜ್ಯ ಒಡೆಯುವ ಆಲೋಚನೆ ಮಾಡುವ ದುಷ್ಟ ಶಕ್ತಿಗೆ ಕೈ ಹಾಕದೇ ಹೋದ್ರೆ ಒಕ್ಕೂಟ ವ್ಯವಸ್ಥೆ ಉಳಿಸಲು ಕಷ್ಟವಾಗುತ್ತದೆ. ‌ಅಮಿತ್ ಶಾ, ಮೋದಿಗೆ ಒತ್ತಾಯ ಮಾಡ್ತೀನಿ. ಮಹಾರಾಷ್ಟ್ರ ಸರ್ಕಾರ ಈ ಕಾರ್ಯಕ್ರಮ ವಾಪಸ್ ಪಡೆಯಬೇಕು. ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕು. ಮಹಾರಾಷ್ಟ್ರ ಸರ್ಕಾರದ ಕುತಂತ್ರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದೆ ಬರಬೇಕು. ಆರ್ಟಿಕಲ್ 356 ಬಳಸಿ ಮಹಾರಾಷ್ಟ್ರ ಸರ್ಕಾರ ವಜಾ ಮಾಡಬೇಕು ಎಂದು ಆಗ್ರಹಿಸಿದರು.

  • ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನೆ, ಮಾರಾಟಕ್ಕೆ ಬಾಂಬೆ ಹೈಕೋರ್ಟ್‌ ಅನುಮತಿ

    ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನೆ, ಮಾರಾಟಕ್ಕೆ ಬಾಂಬೆ ಹೈಕೋರ್ಟ್‌ ಅನುಮತಿ

    ಮುಂಬೈ: ಜಾನ್ಸನ್‌ & ಜಾನ್ಸನ್‌ (Johnson & Johnson) ಬೇಬಿ ಪೌಡರ್‌ (Johnson’s Baby Powder) ಉತ್ಪಾದನೆಗೆ ಮಹಾರಾಷ್ಟ್ರ ಸರ್ಕಾರ (Maharashtra Government) ಹೇರಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್‌ (Bombay High Court) ರದ್ದುಗೊಳಿಸಿದ್ದು, ಬೇಬಿ ಪೌಡರ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಮತಿ ನೀಡಿದೆ.

    ಮಹಾರಾಷ್ಟ್ರ ಸರ್ಕಾರ ಹೇರಿದ್ದ ನಿಷೇಧವನ್ನು ರದ್ದುಗೊಳಿಸಿ ಬೇಬಿ ಪೌಡರ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಮತಿ ನೀಡಿ ಬಾಂಬೆ ಹೈಕೋರ್ಟ್‌ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಎಸ್.ಜಿ.ಡಿಗೆ ಅವರ ವಿಭಾಗೀಯ ಪೀಠವು, ಪೌಡರ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಕಂಪನಿಗೆ ಅನುಮತಿ ನೀಡಿದೆ. ಇದನ್ನೂ ಓದಿ: 3 ಬೈಕ್‍ನಲ್ಲಿ 14 ಮಂದಿ- ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಕಾದಿತ್ತು ಪೊಲೀಸರಿಂದ ಶಾಕ್

    ಜಾನ್ಸನ್ಸ್‌ ಬೇಬಿ ಪೌಡರ್‌ನಲ್ಲಿ ಹಾನಿಕಾರಕ ಅಂಶಗಳಿದ್ದು, ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸಬೇಕು ಎಂದು 2022ರ ಸೆಪ್ಟೆಂಬರ್‌ 15ರಂದು ಸೂಚನೆ ನೀಡಿ ಕಂಪನಿಯ ಪರವಾನಗಿಯನ್ನು ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿತ್ತು.

    ಇದನ್ನು ಪ್ರಶ್ನಿಸಿ ಕಂಪನಿಯು ಹೈಕೋರ್ಟ್‌ ಮೊರೆ ಹೋಗಿತ್ತು. ಕಂಪನಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. “ಸೌಂದರ್ಯವರ್ಧಕ ಉತ್ಪನ್ನಗಳಿಗೆ ಗುಣಮಟ್ಟ ಮತ್ತು ಸುರಕ್ಷತೆಯ ಮಾನದಂಡ ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಉತ್ಪನ್ನಗಳಲ್ಲಿ ಸ್ವಲ್ಪ ವ್ಯತ್ಯಯ ಉಂಟಾದರೆ ಇಡೀ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಸಮಂಜಸವಾಗಿ ತೋರುತ್ತಿಲ್ಲ” ಎಂದು ಪೀಠವು ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ಆರ್.ಆರ್.ಆರ್ ತಂಡಕ್ಕೆ ಮೋದಿ ಅಭಿನಂದನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೂತನ ಸರ್ಕಾರಕ್ಕೆ ನಾವು ತೊಂದರೆ ಕೊಡುವುದಿಲ್ಲ: ಸಂಜಯ್‌ ರಾವತ್‌

    ನೂತನ ಸರ್ಕಾರಕ್ಕೆ ನಾವು ತೊಂದರೆ ಕೊಡುವುದಿಲ್ಲ: ಸಂಜಯ್‌ ರಾವತ್‌

    ಮುಂಬೈ: 2019ರಲ್ಲಿ ಅಧಿಕಾರಕ್ಕೆ ಬಂದ ಉದ್ಧವ್‌ ಠಾಕ್ರೆ ಸರ್ಕಾರ ಉರುಳಿಸಲು ಶಪಥ ಮಾಡಿದ್ದ ಬಿಜೆಪಿ ನಾನಾ ತೊಂದರೆ ಕೊಟ್ಟಿತ್ತು. ಆದರೆ ಈ ಸರ್ಕಾರಕ್ಕೆ ನಾವು ತೊಂದರೆ ಕೊಡುವುದಿಲ್ಲ ಎಂದು ಶಿವಸೇನಾ ನಾಯಕ ಸಂಜಯ್‌ ರಾವತ್‌ ಹೇಳಿದ್ದಾರೆ.

    ನಾನು ಈ ಸರ್ಕಾರವನ್ನು ಅಭಿನಂದಿಸುತ್ತೇನೆ. ಉದ್ಧವ್ ಠಾಕ್ರೆ ಸರ್ಕಾರ ಬಂದಾಗ ಮೊದಲಿನಿಂದಲೂ ಅವರಿಗೆ ತೊಂದರೆ ಕೊಡಲಾಗುತ್ತಿತ್ತು. ಆದರೆ ನಾವು ಹಾಗೆ ಮಾಡುವುದಿಲ್ಲ. ನಾವು ಈ ಸರ್ಕಾರಕ್ಕೆ ತೊಂದರೆ ಕೊಡುವುದಿಲ್ಲ. ಸರ್ಕಾರ ಜನಪರ ಕೆಲಸ ಮಾಡಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಚೇಂಜ್ ಮಾಡಿದ ಶಿಂಧೆ – ಬಾಳ್ ಠಾಕ್ರೆ ಫೋಟೋ ಜೊತೆಗೆ ಕೊಟ್ಟ ಸಂದೇಶವೇನು?

    ನಮ್ಮ ಸಂಘಟನೆ ದುರ್ಬಲಗೊಂಡಿದೆ ಎಂದು ನನಗನಿಸುವುದಿಲ್ಲ. ಯಾರೂ ಅಸಮಾಧಾನಗೊಂಡಿಲ್ಲ ಎಂದು ಮೈತ್ರಿಕೂಟ ಪತನದ ಕುರಿತು ಪ್ರತಿಕ್ರಿಯಿಸಿದ್ದಾರೆ.

    ಇಡಿ ವಿಚಾರಣೆ ಕುರಿತು ಮಾತನಾಡಿದ ಅವರು, ಇದು ಸಂಪೂರ್ಣ ರಾಜಕೀಯ ಎಂಬುದು ಎಲ್ಲರಿಗೂ ಗೊತ್ತು. ಕೇಂದ್ರೀಯ ಸಂಸ್ಥೆ ನನ್ನನ್ನು ಕರೆಸಿದೆ. ನಾನು ನಾಗರಿಕ ಮತ್ತು ಸಂಸದನೂ ಆಗಿದ್ದೇನೆ. ಹಾಗಾಗಿ ನಾನು ಇಡಿ ವಿಚಾರಣೆಗೆ ಹೋಗುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್‍ಗೆ ಉದ್ಧವ್ ಠಾಕ್ರೆ ವಿಶ್

    ಶಿವಸೇನಾ ಪಕ್ಷದ ಶಿಂಧೆ ಬಣ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಏಕನಾಥ್‌ ಶಿಂಧೆ ಮುಖ್ಯಮಂತ್ರಿಯಾಗಿದ್ದು, ದೇವೇಂದ್ರ ಫಡ್ನವೀಸ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    Live Tv

  • ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಲು ಬಿಜೆಪಿ ಒತ್ತಾಯ

    ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಲು ಬಿಜೆಪಿ ಒತ್ತಾಯ

    ಮುಂಬೈ: ಉತ್ತರಪ್ರದೇಶ ರಾಜ್ಯದ ಎಲ್ಲ ಮಸೀದಿಗಳಲ್ಲೂ ರಾಷ್ಟ್ರಗೀತೆ ಕಡ್ಡಾಯಗೊಳಿಸಿರುವ ಬೆನ್ನಲ್ಲೇ ಮಹಾರಾಷ್ಟ್ರದ ಮದರಸಾಗಳಲ್ಲೂ ರಾಷ್ಟ್ರಗೀತೆ ಕಡ್ಡಾಯಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.

    ಈಗಾಗಲೇ ಉತ್ತರಪ್ರದೇಶದ ಮಸೀದಿಗಳಲ್ಲಿ ರಾಷ್ಟ್ರಗೀತೆ `ಜನ ಗಣ ಮನ’ ಹಾಡುವುದನ್ನು ಗುರುವಾರದಿಂದಲೇ ಜಾರಿಗೆ ಬರುವಂತೆ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಉತ್ತರಪ್ರದೇಶದ ಮದರಸಾ ಶಿಕ್ಷಣ ಮಂಡಳಿಯ ನೋಂದಣಾಧಿಕಾರಿ ಎಸ್.ಎನ್.ಪಾಂಡೆ ಅವರು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ಮೇ 9 ರಂದೇ ಆದೇಶ ಹೊರಡಿಸಿದ್ದು, ಅದು ನಿನ್ನೆಯಿಂದ ಜಾರಿಗೆ ಬಂದಿದೆ. ಈ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಇದೇ ನೀತಿಯನ್ನು ಅನುಸರಿಸುವಂತೆ ಬಿಜೆಪಿ ಒತ್ತಾಯಿಸುತ್ತಿದೆ. ಇದನ್ನೂ ಓದಿ: ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

    MADRASA

    ಮಹಾರಾಷ್ಟ್ರದ ಬಿಜೆಪಿ ಆಧ್ಯಾತ್ಮಿಕ ಸಮನ್ವಯ ಘಟಕದ ಮುಖ್ಯಸ್ಥ ಆಚಾರ್ಯ ತುಷಾರ್ ಭೋಸ್ಲೆ ಈ ಕುರಿತು ಮಾತನಾಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿರುವುದು ಶ್ಲಾಘನೀಯವಾಗಿದೆ. ಉತ್ತರಪ್ರದೇಶದ ಈ ನೀತಿಯು ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    madrasas

    ಮದರಸಾ, ಧರ್ಮಾಧಾರಿತ ಭೋದನೆಯಾಗಿರಲಿ ಅಥವಾ ಶಾಲೆಯಾಧಾರಿತ ಕಲಿಕೆಯಾಗಿರಲಿ. ರಾಷ್ಟ್ರದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಮಹಾರಾಷ್ಟ್ರ ಸರ್ಕಾರವು ಶೀಘ್ರದಲ್ಲೇ ಇದೇ ಕ್ರಮ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದೆ.

  • ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಯತ್ನ: ಸಂಜಯ್ ರಾವತ್

    ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಯತ್ನ: ಸಂಜಯ್ ರಾವತ್

    ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಶಿವಸೇನಾ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವತ್, ಕೆಲವು ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿ, ಅವರು ಪಕ್ಷವನ್ನು ಬದಲಿಸುವಂತೆ ಒತ್ತಾಯಿಸಿದ್ದಾರೆ ಜೊತೆಗೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

    ಸುಮಾರು 20 ದಿನಗಳ ಹಿಂದೆ ಬಿಜೆಪಿಯ ಕೆಲವು ಹಿರಿಯ ನಾಯಕರು ನನ್ನನ್ನು ಮೂರು ಬಾರಿ ಭೇಟಿ ಮಾಡಿದ್ದರು. ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಸಹಾಯ ಮಾಡುವಂತೆ ಹೇಳಿದ್ದರು. ರಾಜ್ಯದಲ್ಲಿ ಅವರು ರಾಷ್ಟ್ರಪತಿ ಆಳ್ವಿಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಾಗಿಲ್ಲವೆಂದರೆ ಕೆಲವು ಶಾಸಕರನ್ನು ಪಕ್ಷಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವರು ನನ್ನ ಸಹಾಯ ಕೇಳಿದ್ದಾರೆ ಎಂದು ಆರೋಪಿಸಿದರು.

    ನಾನು ಸಹಾಯ ಮಾಡದಿದ್ದರೆ, ಕೇಂದ್ರೀಯ ಏಜೆನ್ಸಿಗಳು ನನ್ನನ್ನು ಸರಿಪಡಿಸುತ್ತವೆ ಮತ್ತು ನಂತರ ನಾನು ನನ್ನ ನಿರ್ಧಾರಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ನನಗೆ ಬೆದರಿಕೆವೊಡ್ಡಿದ್ದಾರೆ. ಇದರಿಂದಾಗಿಯೆ ಶರದ್ ಪವಾರ್ ಕುಟುಂಬವು ತನಿಖಾ ಸಂಸ್ಥೆಗಳ ದಾಳಿಗಳನ್ನು ಎದುರಿಸುತ್ತಿದೆ ಎಂದು ಬಿಜೆಪಿಯವರೇ ತಿಳಿಸಿದ್ದಾರೆ. ಆದರೆ ಇಂತಹ ಒತ್ತಡ ತಂತ್ರಗಳ ಮುಂದೆ ಮಹಾರಾಷ್ಟ್ರ ಸರ್ಕಾರ ತಲೆಬಾಗುವುದಿಲ್ಲ ಎಂದರು. ದನ್ನೂ ಓದಿ: ಬಿಜೆಪಿ ಬೆಂಗಾವಲು ಪಡೆ ಮೇಲೆ ಎಸ್‍ಪಿ ಗೂಂಡಾಗಳಿಂದ ದಾಳಿ: ಕೇಶವ್ ಪ್ರಸಾದ್ ಮೌರ್ಯ

    ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ ನಾವು ಇದಕ್ಕೆಲ್ಲಾ ಹೆದರುವುದಿಲ್ಲ. ನಾವು ಇದನ್ನು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರಿಂದ ಕಲಿತಿದ್ದೇವೆ ಎಂದು ಹೇಳಿದರು. ದನ್ನೂ ಓದಿ: ಟರ್ಬನ್ ಧರಿಸಿದವರೆಲ್ಲಾ ‘ಸರ್ದಾರ್’ ಆಗೋದಿಲ್ಲ: ಪ್ರಿಯಾಂಕಾ ಗಾಂಧಿ

    ಇದೇ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಸಂಸದ ಕಿರಿತ್ ಸೋಮಯ್ಯ ಅವರ ಪುತ್ರ ನೀಲ್ ಸೋಮಯ್ಯ ಅವರು ಪಿಎಂಸಿ ಬ್ಯಾಂಕ್ ವಂಚನೆಯ ಆರೋಪಿ ರಾಕೇಶ್ ವಾಧವನ್ ಅವರ ವ್ಯಾಪಾರ ಪಾಲುದಾರರಾಗಿದ್ದಾರೆ. ಈ ಪ್ರಕರಣದಲ್ಲಿ ಕ್ರಮ ಜರಿಗಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

  • ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾಗೆ ತಡೆ ನೀಡುವಂತೆ ಮಹಾ ಸರ್ಕಾರಕ್ಕೆ ಕಾಂಗ್ರೆಸ್‌ ಮನವಿ

    ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾಗೆ ತಡೆ ನೀಡುವಂತೆ ಮಹಾ ಸರ್ಕಾರಕ್ಕೆ ಕಾಂಗ್ರೆಸ್‌ ಮನವಿ

    ಮುಂಬೈ: ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆಯಾಗುವುದಕ್ಕೆ ತಡೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕಾಂಗ್ರೆಸ್‌ ಮನವಿ ಮಾಡಿದೆ.

    ಇದೇ ಜನವರಿ 30 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಎನ್‌ಸಿಪಿ ಸಂಸದ ಮತ್ತು ನಟ ಅಮೋಲ್‌ ಕೊಲ್ಹೆ ಅವರು ಮಹಾತ್ಮ ಗಾಂಧಿಯನ್ನು ಕೊಂದ ನಾಥೊರಾಮ್‌ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾತ್ಮ ಗಾಂಧಿ ಅವರ ಪುಣ್ಯತಿಥಿ (ಜ.30)ಯಂದೇ ಸಿನಿಮಾ ಬಿಡುಗಡೆಯಾಗುತ್ತಿದೆ. ಇದಕ್ಕೆ ತಡೆ ನೀಡಬೇಕು ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಬಿಜೆಪಿ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ

    ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಪಟೋಲೆ ಸಲ್ಲಿಸಿರುವ ಮನವಿ ಪತ್ರದಲ್ಲಿ, ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ದಿನವಾದ ಜ.30 ರಂದು ಚಿತ್ರಮಂದಿರ ಹಾಗೂ ಓಟಿಟಿ ವೇದಿಕೆಗಳಲ್ಲಿ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕೋಮು ಸೌಹಾರ್ದತೆ ದೃಷ್ಟಿಯಿಂದ ಗಾಂಧಿ ಅವರ ಪುಣ್ಯತಿಥಿ ದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

    ಒಂದೆಡೆ ಅಹಿಂಸೆ, ಶಾಂತಿಗಾಗಿ ಗಾಂಧೀಜಿ ಅವರ ಪುಣ್ಯತಿಥಿ ಆಚರಿಸಿದರೆ, ಮತ್ತೊಂದೆಡೆ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಜನಾಂಗೀಯ ಪ್ರವೃತ್ತಿಗಳಿಗೆ ಬಲ ಬಂದಂತಾಗುತ್ತದೆ. ಭಾರತೀಯ ಸಂಸ್ಕೃತಿ ಯಾವಾಗಲೂ ಅಮಾನವೀಯ ಕೃತ್ಯಗಳನ್ನು ವಿರೋಧಿಸುತ್ತದೆ. ಹೀಗಾಗಿ ಈ ಚಲನಚಿತ್ರವನ್ನು ರಾಜ್ಯದ ಚಿತ್ರಮಂದಿರಗಳು ಮತ್ತು ಓಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡಬಾರದು ಎಂದು ಪಟೋಲೆ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರಿದ್ದಾಗ ಶಿವಸೇನೆ ಹುಟ್ಟಿರಲಿಲ್ಲ: ದೇವೇಂದ್ರ ಫಡ್ನವಿಸ್