Tag: Maharashtra elections

  • ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

    ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

    – ಇವಿಎಂ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ ಎಂದ ಸಂಸದ

    ನವದೆಹಲಿ: ಇವಿಎಂ ಮ್ಯಾನಿಪ್ಯುಲೇಟ್‌ (EVM Manipulate) ಅಥವಾ ಟ್ಯಾಂಪರಿಂಗ್‌ ಆಗಿದೇ ಅನ್ನೋದನ್ನ ಸಾಬೀತುಪಡಿಸಲು ನನ್ನ ಬಳಿ ಯಾವುದೇ ಸಾಕ್ಷಿಗಳಿಲ್ಲ. ಹಾಗಾಗಿ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಶಗಳೂ ಇಲ್ಲ ಎಂದು ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ (Karti Chidambaram) ಹೇಳಿದ್ದಾರೆ.

    ಒಂದು ದಿನದ ಹಿಂದೆಯಷ್ಟೇ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ್‌ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸುವಾಗ ಇವಿಎಂ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್‌ ಸಂಸದರೂ ಆಗಿರುವ ಕಾರ್ತಿ ಚಿದಂಬರಂ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ

    ಇವಿಎಂ ಹ್ಯಾಕ್‌ ಆರೋಪದ ಕುರಿತು ದೆಹಲಿಯಲ್ಲಿ ಮಾತನಾಡಿದ ಕಾರ್ತಿ ಚಿದಂಬರಂ ಅವರು, ನಾನು 2004 ರಿಂದ ಇವಿಎಂಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ವೈಯಕ್ತಿಕವಾಗಿ ಯಾವುದೇ ಕೆಟ್ಟ ಅನುಭವವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ – ಪರಮೇಶ್ವರ್‌

    ಇವಿಎಂ ಮ್ಯಾನಿಪ್ಯುಲೇಟ್‌ ಅಥವಾ ಟ್ಯಾಂಪರಿಂಗ್‌ ಆಗಿದೆ ಅನ್ನೋದನ್ನ ಸಾಬೀತುಪಡಿಸಲು ನನ್ನ ಬಳಿ ಯಾವುದೇ ಸಾಕ್ಷಿಗಳಿಲ್ಲ. ಹಾಗಾಗಿ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಶಗಳಿಲ್ಲ. ಇವಿಎಂಗಳ ಬಗ್ಗೆ ಅಂತಹ ಸಂದೇಹವಿದ್ದರೆ, ಅದನ್ನ ಅವರೇ ಹೇಳಬೇಕು. ಏಕೆಂದರೆ ಇವಿಎಂನಿಂದಲೇ ಚುನಾವಣೆ ಗೆದ್ದಿದ್ದೇವೆ. ಇವಿಎಂನಿಂದಲೇ ಚುನಾವಣೆ ಸೋತಿದ್ದೇವೆ. ಇವಿಎಂ ಮ್ಯಾನಿಪ್ಯುಲೇಟ್‌ ಆಗಿದೆ ಅನ್ನೋದನ್ನ ವೈಜ್ಞಾನಿಕ ಡೇಟಾದೊಂದಿಗೆ ಸಾಬೀತುಪಡಿಸಿದ ಹೊರತು, ನನ್ನ ದೃಷ್ಟಿಕೋನವನ್ನು ನಾನು ಬದಲಾಯಿಸಿಕೊಳ್ಳಲು ಸಿದ್ಧನಿಲ್ಲ ಎಂದಿದ್ದಾರೆ.

    ನಮ್ಮ ಪಕ್ಷದ ಅನೇಕರು ಇವಿಎಂ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಿದ್ದಾರೆ ಅನ್ನೋದು ನನಗೆ ತಿಳಿದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂಡಮಾನ್‌ | ಬೋಟ್‌ನಲ್ಲಿ ಸಾಗಿಸ್ತಿದ್ದ 5 ಟನ್‌ ಮಾದಕ ವಸ್ತು ವಶಪಡಿಸಿಕೊಂಡ ಕೋಸ್ಟ್ ಗಾರ್ಡ್‌

    ಪರಮೇಶ್ವರ್‌ ಹೇಳಿದ್ದೇನು?
    ಇವಿಎಂ ಹ್ಯಾಕ್‌ನಿಂದಲೇ (EVM Hack) ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲೂ ನಾವು ಫೇಲ್ ಆಗಿದ್ದೇವೆ. ಮಹಾರಾಷ್ಟ್ರದಲ್ಲಿ (Maharashtra) ನಾವು ಅಗಾಡಿ ಸರ್ಕಾರ ಬರುತ್ತದೆ ಅಂದುಕೊಂಡಿದ್ದೆವು. ಆದರೆ ಎಲ್ಲವೂ ಉಲ್ಟಾ ಆಗಿದೆ. ಅಶೋಕ್ ಗೆಹ್ಲೋಟ್, ಭಗೇಲ್ ಸೇರಿ ಅನುಭವಿ ಸಿಎಂಗಳು ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆ ಆಗಿದೆ. ಆದ್ರೆ ಜಾರ್ಖಂಡ್‌ನಲ್ಲಿ ಯಾಕೆ ಹಾಗಾಗಲಿಲ್ಲ? ಬಿಜೆಪಿಯವರು ಪ್ಲ್ಯಾನ್ ಆಫ್ ಆಕ್ಷನ್ ತರಹ ಇದನ್ನು ಮಾಡ್ತಾರೆ. ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ. ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ.

    ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

  • ಮಹಾರಾಷ್ಟ್ರದಲ್ಲಿ ಇಂದು ಮಹಾ ಚುನಾವಣೆ – ಎಂವಿಎ Vs ಮಹಾಯುತಿ ಭರ್ಜರಿ ಕದನ

    ಮಹಾರಾಷ್ಟ್ರದಲ್ಲಿ ಇಂದು ಮಹಾ ಚುನಾವಣೆ – ಎಂವಿಎ Vs ಮಹಾಯುತಿ ಭರ್ಜರಿ ಕದನ

    – ಇಂದು ಸಂಜೆ 6 ಗಂಟೆ ಬಳಿಕ ಬರಲಿದೆ ಎಕ್ಸಿಟ್ ಪೋಲ್

    ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ (Maharashtra Elections) ಎಲ್ಲಾ 288 ಕ್ಷೇತ್ರಗಳು, ಜಾರ್ಖಂಡ್‌ನಲ್ಲಿ (Jarkhand) 2ನೇ ಮತ್ತು ಅಂತಿಮ ಹಂತದಲ್ಲಿ 38 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.

    ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ-ಮಹಾಯುತಿ ಮೈತ್ರಿಕೂಟಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಫೈಟ್ ಇದೆ.‌ ಇದನ್ನೂ ಓದಿ: ವಿದ್ಯುತ್‌ ಬಿಲ್ ಬಾಕಿ, ದೆಹಲಿಯ ಹಿಮಾಚಲ ಭವನ ಮುಟ್ಟುಗೋಲು ಹಾಕಲು ಹೈಕೋರ್ಟ್ ಆದೇಶ

    ಸುಗಮ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.  ಷೇರುಪೇಟೆ, ಬ್ಯಾಂಕ್, ಶಾಲೆ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಈ ಹೊತ್ತಲ್ಲೇ, ಪಾಲ್ಘರ್‌ನ ವಿರಾರ್‌ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತದಾರರಿಗೆ ಹಣ ಹಂಚಿಕೆ ಮಾಡ್ತಿದ್ದಾರೆ ಎಂದು ಆರೋಪಿಸಿ ಬಿವಿಎ ಕಾರ್ಯಕರ್ತರು ಮುತ್ತಿಗೆ ಹಾಕಿ ಗದ್ದಲ ಎಬ್ಬಿಸಿದ್ದಾರೆ.

    ಬಿಜೆಪಿ ಡೈರಿ, ಹಣದ ಕವರ್‌ಗಳು ಸಿಕ್ಕಿವೆ ಎನ್ನಲಾಗಿದೆ. ಈ ವೀಡಿಯೋ ಹಂಚಿಕೊಂಡ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಆಯೋಗಕ್ಕೆ ದೂರು ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ವಿನೋದ್ ತಾವ್ಡೆ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಇನ್ನು, ಬಿಜೆಪಿ, ಸಂಘಪರಿವಾರವನ್ನು ವಿಷದ ಹಾವಿಗೆ ಹೋಲಿಸಿದ್ದ ಮಲ್ಲಿಕಾರ್ಜುನ ಖರ್ಗೆಯನ್ನು ಹುಚ್ಚು ನಾಯಿಗೆ ಸಿ.ಟಿ.ರವಿ ಹೋಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್ | ಕರಾವಳಿ ಕಾವಲು ಪಡೆಯಿಂದ ಪಾಕ್ ವಶದಲ್ಲಿದ್ದ 7 ಭಾರತೀಯ ಮೀನುಗಾರರ ರಕ್ಷಣೆ

  • ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಮುಂಬೈ: ಸ್ವತಃ ಇಂದಿರಾ ಗಾಂಧಿ (Indira Gandhi) ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಗುಡುಗಿದರು.

    ಮಹಾರಾಷ್ಟ್ರದ ಚುನಾವಣಾ (Maharashtra Elections) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಸರ್ಕಾರವು 370ನೇ ವಿಧಿಯನ್ನು (Article 370) ಮರುಸ್ಥಾಪಿಸಲು ನಿರ್ಣಯ ಮಂಡಿಸಿದೆ. ನಾನು ಈಗಲೂ ಹೇಳುತ್ತೇನೆ ಸ್ವತಃ ಇಂದಿರಾ ಗಾಂಧಿ ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಮೈಕೆಲ್ ಕುನ್ಹಾ 7,223 ಕೋಟಿ ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ: ಹೆಚ್‌.ಕೆ ಪಾಟೀಲ್

    ಇದೇ ವೇಳೆ ಶ್ರೀನಗರದ ಲಾಲ್ ಚೌಕ್‌ಗೆ ಭೇಟಿ ನೀಡಿದಾಗ ನನಗೆ ಭಯವಾಗಿತ್ತು ಎಂಬ ಮಾಜಿ ಕೇಂದ್ರ ಸಚಿವ ಸುಶೀಲ್‌ಕುಮಾರ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮನಮೋಹನ್ ಆಡಳಿತದ 10 ವರ್ಷಗಳ ಅವಧಿಯಲ್ಲಿ, ಭಯೋತ್ಪಾದಕರು ಪಾಕಿಸ್ತಾನದಿಂದ ಮುಕ್ತವಾಗಿ ಬಂದು ಇಲ್ಲಿ ಬಾಂಬ್ ಸ್ಫೋಟ ಮಾಡುತ್ತಿದ್ದರು, ಬಾಂಬ್‌ ಸ್ಫೋಟಕ್ಕೂ ಪ್ರಚೋದನೆ ನೀಡುತ್ತಿದ್ದರು. ಶಿಂಧೇ ಜೀ, ಈಗ ನಿಮ್ಮ ಮೊಮ್ಮಕ್ಕಳೊಂದಿಗೆ ಈಗ ಕಾಶ್ಮೀರಕ್ಕೆ ಬೇಕಾದ್ರೂ ಹೋಗಿ, ನಿಮಗೆ ಏನೂ ಆಗುವುದಿಲ್ಲ ಎಂದು ಹೇಳಿದರು.

    ಇತ್ತೀಚೆಗೆ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲೂ ಇದೇ ರೀತಿಯ ಹೇಳಿಕೆಗಳನ್ನು ಸಚಿವರು ನೀಡಿದ್ದರು. ರಾಹುಲ್ ಗಾಂಧಿಯವರ 4ನೇ ತಲೆಮಾರಿನವರು ಬಂದರೂ ಸಹ ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಗುಡುಗಿದ್ದರು. ಇದನ್ನೂ ಓದಿ:  ರಾಜ್ಯದ ಜನತೆಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ – ವೈಷ್ಣೋದೇವಿಗೆ ತೆರಳುವ ಭಕ್ತರಿಗೆ 5,000 ಸಹಾಯಧನ

  • ಚಾಣಕ್ಯ ಚಿತ್ರಣ ಬಿದ್ದು ಹೋಗಿದ್ದಕ್ಕೆ ನನಗೆ ಸಂತೋಷವಿದೆ: ಅಮಿತ್ ಶಾ

    ಚಾಣಕ್ಯ ಚಿತ್ರಣ ಬಿದ್ದು ಹೋಗಿದ್ದಕ್ಕೆ ನನಗೆ ಸಂತೋಷವಿದೆ: ಅಮಿತ್ ಶಾ

    ನವದೆಹಲಿ: ಭಾರತದ ಆಧುನಿಕ ಚಾಣಕ್ಯ, ರಾಜಕೀಯ ತಂತ್ರಗಾರ ಎಂದು ಹೆಸರನ್ನು ಪಡೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹಾರಾಷ್ಟ್ರ ಚುನಾವಣೆಯ ನಂತರ ನನ್ನನ್ನು ಚಾಣಕ್ಯನಿಗೆ ಹೋಲಿಸುವುದು ನಿಂತಿದ್ದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

    ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ, ಮಹಾರಾಷ್ಟ್ರದಲ್ಲಿ ನಾವು ಸೋತಿಲ್ಲ. ನಾವು ಏಕಾಂಗಿಯಾಗಿ 105 ಸ್ಥಾನವನ್ನು ಗೆದ್ದುಕೊಂಡಿದ್ದು ಮೈತ್ರಿಗೆ ಜನ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬಹುಮತಕ್ಕಿಂತಲೂ 20ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದ್ದೇವೆ ಎಂದು ಉತ್ತರಿಸಿದರು.

    ಈ ವೇಳೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ವಿಫಲವಾದ ನಂತರ ಆಧುನಿಕ ಚಾಣಕ್ಯ ಎಂಬ ನಿಮ್ಮ ವ್ಯಕ್ತಿತ್ವಕ್ಕೆ ಹಿನ್ನಡೆ ಆಗಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಈ ಪ್ರಕರಣದಿಂದ ಚಾಣಕ್ಯನಿಗೆ ಹೋಲಿಕೆ ಮಾಡುವುದು ನಿಂತಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಅಮಿತ್ ಶಾ Vs ಶರದ್ ಪವಾರ್ – ‘ಮಹಾ’ ಚಾಣಕ್ಯ ಯಾರು?

    ಚಾಣಕ್ಯ ಚಿತ್ರಣ ಬಿದ್ದು ಹೋಗಿದ್ದಕ್ಕೆ ನನಗೆ ಸಂತೋಷವಿದೆ. ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದ ನಂತರ ಸಮಸ್ಯೆ ಆರಂಭವಾಯಿತು. ನಾವು 105, ಶಿವಸೇನೆ 56 ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಾವು ಸರ್ಕಾರ ರಚಿಸಲು ಅನುಮತಿ ನೀಡುವಂತೆ ರಾಜ್ಯಪಾಲರ ಬಳಿ ಹೋಗಬೇಕಿತ್ತು. ಆದರೆ ಯಾವಾಗ ಶರದ್ ಪವಾರ್ ಕಾಳುಗಳನ್ನು ಎಸೆದರೋ ಶಿವಸೇನೆ ಆ ಕಾಳುಗಳನ್ನು ತಿನ್ನಲು ಮುಗಿಬಿತ್ತು ಎಂದು ವ್ಯಂಗ್ಯ ರೂಪದಲ್ಲಿ ತಿವಿದರು.

    ಚುನಾವಣಾ ಪ್ರಚಾರ ಆಗಿರಬಹುದು ಅಥವಾ ಸುದ್ದಿಗೋಷ್ಠಿ ಆಗಿರಬಹುದು ಎಲ್ಲ ಕಡೆ ನಾವು ಮುಖ್ಯಮಂತ್ರಿ ಬಿಜೆಪಿಯವರೇ ಆಗುತ್ತೇವೆ ಎಂದು ಹಲವು ಬಾರಿ ಹೇಳಿದ್ದೇವೆ. ಆದರೆ ಏನು ಮಾಡುವುದು? ನಮ್ಮ ಮೈತ್ರಿ ಪಕ್ಷ ಓಡಿ ಹೋಯಿತು. ಹೀಗಾಗಿ ನಾವು ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

    ಒಂದು ವೇಳೆ ಶಿವಸೇನೆ ಚುನಾವಣೆಗೂ ಮೊದಲೇ ಈ ಬೇಡಿಕೆ ಇಟ್ಟಿದ್ದರೆ ನಾವು ಬೇರೆ ತೀರ್ಮಾನ ತೆಗೆದುಕೊಳ್ಳುತ್ತಿದ್ದೆವು. ಗೆದ್ದ ಪ್ರತಿ ಶಿವಸೇನಾ ಶಾಸಕ ನರೇಂದ್ರ ಮೋದಿಯವರ ಪ್ರಸಿದ್ಧಿಯನ್ನು ಪಡೆಯದೇ ನಾವು ಗೆದ್ದಿದ್ದೇವೆ ಎಂದು ಹೇಳಲಿ ನೋಡೋಣ? ಈ ಪ್ರಕರಣವನ್ನು ನಾವು ಪಾಠವಾಗಿ ಸ್ವೀಕರಿಸಿದ್ದೇವೆ. ವಿರೋಧ ಪಕ್ಷದಲ್ಲಿ ನಾವು ಕುಳಿತುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.

  • ಮತಗಟ್ಟೆ ಸಮೀಕ್ಷೆಗಳಲ್ಲೂ ಬಿಜೆಪಿಗೆ ಬಹುಮತ – ಮಹಾರಾಷ್ಟ್ರ, ಹರ್ಯಾಣದಲ್ಲಿ ಮತ್ತೆ ಗದ್ದುಗೆ

    ಮತಗಟ್ಟೆ ಸಮೀಕ್ಷೆಗಳಲ್ಲೂ ಬಿಜೆಪಿಗೆ ಬಹುಮತ – ಮಹಾರಾಷ್ಟ್ರ, ಹರ್ಯಾಣದಲ್ಲಿ ಮತ್ತೆ ಗದ್ದುಗೆ

    ನವದೆಹಲಿ: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಅಂತ್ಯವಾಗಿದ್ದು, ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಗುಟ್ಟು ಇವಿಯಂ ಯಂತ್ರದಲ್ಲಿ ಲಾಕ್ ಆಗಿದೆ. ಅಕ್ಟೋಬರ್ 24ರಂದು ಎರಡು ರಾಜ್ಯಗಳ ಚುಣಾವಣೆ ಫಲಿತಾಂಶ ಹೊರ ಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿದ್ದು, ಎರಡು ರಾಜ್ಯಗಳಲ್ಲಿ ಮತ್ತೊಮ್ಮೆ ಕೇಸರಿ ರಣ ಕಹಳೆ ಮೊಳಗಲಿದೆ ಎಂದು ಸಮೀಕ್ಷೆಗಳು ಸ್ಪಷ್ಟವಾಗಿ ಹೇಳುತ್ತಿವೆ.

    ಲೋಕಸಭಾ ಚುನಾವಣೆ ಬಳಿಕ ಮೊದಲ ವಿಧಾನಸಭಾ ಚುನಾವಣೆ ಇದಾಗಿದ್ದು, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪ್ರತಿಷ್ಠೆಯ ಕಣವಾಗಿತ್ತು. ಇತ್ತ ಕಾಂಗ್ರೆಸ್ ಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಶ್ನೆ ಎದುರಾಗಿತ್ತು. ಎರಡು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದವು. ಸಮೀಕ್ಷೆಗಳು ಮಾತ್ರ ಮತ್ತೊಮ್ಮೆ ಮೋದಿ- ಅಮಿತಾ ಶಾ ಜೋಡಿಯೇ ಮೇಲುಗೈ ಸಾಧಿಸಲಿವೆ ವಿಚಾರವನ್ನು ಸಮೀಕ್ಷೆಗಳ ಅಂಕಿಗಳು ಸ್ಪಷ್ಟಪಡಿಸುತ್ತಿವೆ.

    ಇಂಡಿಯಾ ಟುಡೇ:
    ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಧಿಕಾರ ಹಿಡಿಯಲಿದೆ. ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 109-124, ಶಿವಸೇನೆ 57-40, ಕಾಂಗ್ರೆಸ್ 32-40, ಎನ್‍ಸಿಪಿ 40-50, ವಿಬಿಎ 0-2 ಮತ್ತು ಇತರರು 22-32 ಕ್ಷೇತ್ರಗಳಲ್ಲಿ ಗೆಲುವನ್ನು ದಾಖಲಿಸಬಹುದು ಇಂಡಿಯಾ ಟುಡೇ ಸಮೀಕ್ಷೆ ಹೇಳಿದೆ. ಇಂಡಿಯಾ ಟುಡೇ ಪ್ರಕಾರ ಹರ್ಯಾಣದಲ್ಲಿ ಬಿಜೆಪಿ 77, ಕಾಂಗ್ರೆಸ್ 11 ಮತ್ತು ಇತರರು 1 ಕ್ಷೇತ್ರದಲ್ಲಿ ಗೆಲುವು ದಾಖಲಿಸುವ ಸಾಧ್ಯತೆಗಳಿವೆ.

    2014ರಲ್ಲಿ ನಡೆದ ಚುನಾವಣೆ ವೇಳೆ ಬಿಜೆಪಿ ಮತ್ತು ಶಿವಸೇನೆ 185 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಸರ್ಕಾರ ರಚನೆ ಮಾಡಿದ್ದವು. ಕಾಂಗ್ರೆಸ್ 83 ಮತ್ತು ಪಕ್ಷೇತರ ಅಭ್ಯರ್ಥಿಗಳು 20 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರು. ಹರ್ಯಾಣದಲ್ಲಿ ನಡೆದ 2014ರ ಚುನಾವಣೆಯಲ್ಲಿ ಬಿಜೆಪಿ 47, ಕಾಂಗ್ರೆಸ್ 15 ಮತ್ತು ಇತರರು 28 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

    ಇಂದು ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.55.31 ಮತ್ತು ಹರ್ಯಾಣದಲ್ಲಿ ಶೇ.61.62ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದ 288, ಹರ್ಯಾಣದ 90 ಮತ್ತು ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಬಹುತೇಕ ಎಲ್ಲ ಕಡೆಯೂ ಶಾಂತಿಯುತ ಮತದಾನವಾಗಿದೆ ಎಂದು ವರದಿಯಾಗಿದೆ.

    ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಸಂಜೆ ಆರು ಗಂಟೆಗೆ ಒಟ್ಟು ಶೇ.55.31 ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿ ಮತ್ತು ಕಾಂಗ್ರೆಸ್,ಎನ್‍ಸಿಪಿ ಮೈತ್ರಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಭದ್ರವಾಗಿದೆ.

    ದೇಶದ ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂದು ಉಪ ಚುನಾವಣೆ ನಡೆದಿದೆ. ಗುಜರಾತ-6, ಅಸ್ಸಾಂ-4, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ ಎರಡು, ಉತ್ತರ ಪ್ರದೇಶದ 11 ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆದಿದೆ. ಪಂಜಾಬ್-4, ಕೇರಳ-5, ಸಿಕ್ಕಿಂ-3, ರಾಜಸ್ಥಾನ-2, ಮಧ್ಯ ಪ್ರದೇಶ, ಓಡಿಸ್ಸಾ, ಛತ್ತೀಸಗಢ, ಪುದುಚೇರಿ, ಮೇಘಾಲಯ ಮತ್ತು ತೆಲಂಗಾಣದಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ.

    ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಚುನಾವಣೆ ನಡೆದಿದ್ದು, ಸಂಜೆ 6ಗಂಟೆವರೆಗೆ ಶೇ.61.62ರಷ್ಟು ಮತದಾನವಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯನ್ ನ್ಯಾಶನಲ್ ಲೋಕ್ ದಳದಿಂದ ಬೇರೆಯಾಗಿರುವ ಜೆಜೆಪಿ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಲಿದ್ದಾರೆ. ಒಂದು ಹರ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

  • ಮಹಾರಾಷ್ಟ್ರದಲ್ಲಿ ಶೇ.60.05, ಹರ್ಯಾಣ ಶೇ.65ರಷ್ಟು ಮತದಾನ

    ಮಹಾರಾಷ್ಟ್ರದಲ್ಲಿ ಶೇ.60.05, ಹರ್ಯಾಣ ಶೇ.65ರಷ್ಟು ಮತದಾನ

    ನವದೆಹಲಿ: ಇಂದು ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.60.05 ಮತ್ತು ಹರ್ಯಾಣದಲ್ಲಿ ಶೇ.65 ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದ 288, ಹರ್ಯಾಣದ 90 ಮತ್ತು ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಬಹುತೇಕ ಎಲ್ಲ ಕಡೆಯೂ ಶಾಂತಿಯುತ ಮತದಾನವಾಗಿದೆ ಎಂದು ವರದಿಯಾಗಿದೆ.

    ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಸಂಜೆ ಆರು ಗಂಟೆಗೆ ಒಟ್ಟು ಶೇ.60.05 ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿ ಮತ್ತು ಕಾಂಗ್ರೆಸ್,ಎನ್‍ಸಿಪಿ ಮೈತ್ರಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಭದ್ರವಾಗಿದೆ.

    ದೇಶದ ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂದು ಉಪ ಚುನಾವಣೆ ನಡೆದಿದೆ. ಗುಜರಾತ-6, ಅಸ್ಸಾಂ-4, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ ಎರಡು, ಉತ್ತರ ಪ್ರದೇಶದ 11 ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆದಿದೆ. ಪಂಜಾಬ್-4, ಕೇರಳ-5, ಸಿಕ್ಕಿಂ-3, ರಾಜಸ್ಥಾನ-2, ಮಧ್ಯ ಪ್ರದೇಶ, ಓಡಿಸ್ಸಾ, ಛತ್ತೀಸಗಢ, ಪುದುಚೇರಿ, ಮೇಘಾಲಯ ಮತ್ತು ತೆಲಂಗಾಣದಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ.

    ಪುಣೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತದಾನದ ಹಕ್ಕನ್ನು ಚಲಾಯಿಸಿದರು. ಮುಂಬೈನಲ್ಲಿ ಬಾಲಿವುಡ್ ಸ್ಟಾರ್ ಗಳಾದ ಸಲ್ಮಾನ್ ಖಾನ್, ಶಾರೂಖ್ ಖಾನ್, ಅಮೀರ್ ಖಾನ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚಬ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಬಹುತೇಕ ಗಣ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು.

    ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಚುನಾವಣೆ ನಡೆದಿದ್ದು, ಸಂಜೆ 6ಗಂಟೆವರೆಗೆ ಶೇ.65ರಷ್ಟು ಮತದಾನವಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯನ್ ನ್ಯಾಶನಲ್ ಲೋಕ್ ದಳದಿಂದ ಬೇರೆಯಾಗಿರುವ ಜೆಜೆಪಿ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಲಿದ್ದಾರೆ. ಒಂದು ಹರ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.