Tag: Maharashtra Election

  • ಮಹಾರಾಷ್ಟ್ರ ಮತಪಟ್ಟಿ ವಿಚಾರದಲ್ಲಿ ಕಾಂಗ್ರೆಸ್ ಡ್ರಾಮಾ: ಜೋಶಿ ತಿರುಗೇಟು

    ಮಹಾರಾಷ್ಟ್ರ ಮತಪಟ್ಟಿ ವಿಚಾರದಲ್ಲಿ ಕಾಂಗ್ರೆಸ್ ಡ್ರಾಮಾ: ಜೋಶಿ ತಿರುಗೇಟು

    ನವದೆಹಲಿ: ಮಹಾರಾಷ್ಟ್ರದಲ್ಲಿ (Maharashtra) ಹೊಸ ಮತದಾರರ ಸೇರ್ಪಡೆ ಪರಾದರ್ಶಕವಾಗಿಯೇ ಇದೆ. ಈ ವಿಚಾರದಲ್ಲಿ ಕಾಂಗ್ರೆಸ್ (Congress) ಡ್ರಾಮಾ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.

    ಎಐಸಿಸಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಜೋಶಿ ಪ್ರತಿಕ್ರಿಯಿಸಿದ್ದಾರೆ.

    ಖರ್ಗೆಜಿಯವರ ಆರೋಪಗಳು ಆಧಾರರಹಿತವಾಗಿದ್ದು, ಕಾಂಗ್ರೆಸ್ ಪಕ್ಷದ ಅನಗತ್ಯ ದ್ರಣವನ್ನು ಪ್ರಚೋದಿಸುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ ಎಂದು ಸಚಿವ ಜೋಶಿ ತಿರುಗೇಟು ನೀಡಿದ್ದಾರೆ.

    ಯಾವುದೂ ಆಕ್ರಮವಾಗಿಲ್ಲ: ಮಹಾರಾಷ್ಟ್ರದಲ್ಲಿ 26.46 ಲಕ್ಷ ಯುವ ಮತದಾರರು ಸೇರಿದಂತೆ 40.81 ಲಕ್ಷ ಮತದಾರರನ್ನು ಚುನಾವಣಾ ಆಯೋಗವು ಪಾರದರ್ಶಕವಾಗಿಯೇ ಸೇರಿಸಿದೆ. ಇದರಲ್ಲಿ ಯಾವುದೇ ರೀತಿಯ ಅಸಹಜ, ಅಕ್ರಮ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ನೋಡನೋಡುತ್ತಿದ್ದಂತೆ ಮುಳುಗಿದ ಬೋಟ್ – 6 ಮೀನುಗಾರರ ರಕ್ಷಣೆ

    ಕೇಳಿದ್ದನ್ನೇ ಕೇಳುತ್ತಿದೆ ಕಾಂಗ್ರೆಸ್: ಚುನಾವಣಾ ಪ್ರಕ್ರಿಯೆಯ ಭಾಗವಾಗಿ ಚುನಾವಣಾ ಆಯೋಗ ಚುನಾವಣೆಗೆ ಮುನ್ನವೇ ಡೇಟಾವನ್ನು ಒದಗಿಸಿದೆ. ಆದರೆ, ಕಾಂಗ್ರೆಸ್ಸಿಗರು ಈಗ ವಿನಾಕಾರಣ ಸಮಸ್ಯೆ ಸೃಷ್ಟಿಸಲು ಮತ್ತೆ ಮತ್ತೆ ಕೇಳಿದ್ದನ್ನೇ ಕೇಳುತ್ತಿದ್ದಾರೆ ಎಂದು ಸಚಿವ ಜೋಶಿ ಅವರು ತಮ್ಮ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

     

  • ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ – ಪರಮೇಶ್ವರ್‌

    ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ – ಪರಮೇಶ್ವರ್‌

    – ಇವಿಎಂ ಇರೋವರೆಗೆ ಬಿಜೆಪಿಗೇ ಗೆಲುವು ಎಂದು ಸಚಿವ ಲೇವಡಿ

    ಬೆಂಗಳೂರು: ಇವಿಎಂ ಹ್ಯಾಕ್‌ನಿಂದಲೇ (EVM Hack) ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲೂ ನಾವು ಫೇಲ್ ಆಗಿದ್ದೇವೆ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಕಳವಳ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರದಲ್ಲಿ (Maharashtra) ನಾವು ಅಗಾಡಿ ಬರುತ್ತದೆ ಎಂದುಕೊಂಡಿದ್ದೆವು. ಆದರೆ ಎಲ್ಲವೂ ಉಲ್ಟಾ ಆಗಿದೆ. ಅಶೋಕ್ ಗೆಹ್ಲೋಟ್, ಭಗೇಲ್ ಸೇರಿ ಅನುಭವಿ ಸಿಎಂಗಳು ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆ ಆಗಿದೆ. ಆದ್ರೆ ಜಾರ್ಖಂಡ್‌ನಲ್ಲಿ ಯಾಕೆ ಹಾಗಾಗಲಿಲ್ಲ? ಬಿಜೆಪಿಯವರು ಪ್ಲ್ಯಾನ್ ಆಫ್ ಆಕ್ಷನ್ ತರಹ ಇದನ್ನು ಮಾಡ್ತಾರೆ ಎಂದು ಅಸಮಾಧಾನ ಹೊರಹಾಕಿದರು.

    ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ. ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ. ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

    ಲಾಡ್ಲಿ ಬೆಹಿನ್ ಯೋಜನೆ ಇಂಪ್ಯಾಕ್ಟ್:
    ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ರು ಅಂತ ಚರ್ಚೆ ಅಯ್ತು, ಜಾರ್ಖಂಡ್‌ನಲ್ಲಿ ಯಾಕೆ ಮಾಡಿಲ್ಲ ಅಂದ್ರೆ ಕೆಲವು ಕಡೆ ಬಿಟ್ಟು ಬಿಡ್ತಾರೆ. ರಾಜ್ಯದಲ್ಲಿ ಕೆಲವು ಗೆದ್ದೆ ಗೆಲ್ತಿವಿ ಅನ್ನೋ ಕಡೆ ಬಿಡ್ತಾರೆ. ಇದರೊಂದಿಗೆ ಲಾಡ್ಲಿ ಬೆಹಿನ್ ಯೋಜನೆ ಸಾಕಷ್ಟು ಇಂಪ್ಯಾಕ್ಟ್ ಅಗಿದೆ. ಅವರು 6 ತಿಂಗಳು ಮೊದಲು ಕೊಟ್ಟರು, ಇದೆಲ್ಲವೂ ಅವರ ಕೈ ಹಿಡಿದಿದೆ. ನಾವು ಕೊನೆಗೆ ಟಿಕೆಟ್ ಘೋಷಣೆ ಮಾಡಿದ್ವು, ಪಕ್ಷದಲ್ಲೂ ಗೊಂದಲ ಆಯ್ತು. ಶರದ್‌ ಪವಾರ್ ಗುಂಪು, ಉದ್ದವ್ ಠಾಕ್ರೆ ಗುಂಪಿನ ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ವಿದರ್ಭದಲ್ಲಿ ಹೆಚ್ಚು ಸೀಟ್ ಬರಲಿಲ್ಲ. ಎಲ್ಲಿಯವರೆಗೆ ಇವಿಎಂ ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದು ನುಡಿದರು.

    ಇವಿಎಂ ಇರೋವರೆಗೆ ಬಿಜೆಪಿಗೇ ಗೆಲುವು:
    ಇವಿಎಂ ಇರೋವರೆಗೆ ಬಿಜೆಪಿನೇ ಗೆಲ್ಲುತ್ತಿರುತ್ತೆ. ಒಂದೊಂದು ರಾಜ್ಯ ಬಿಟ್ಟು ಬಿಡ್ತಾರೆ. ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ಇರಲಿಲ್ಲ. ಅದಕ್ಕೆ ಬಿಟ್ಟರು, ಹ್ಯಾಕ್ ಮಾಡೋದ್ರಲ್ಲಿ ಬಿಜೆಪಿಗರು ನಿಪುಣರು, ಜಾರ್ಖಂಡನಲ್ಲಿ ಜೆಎಂಎಂ ಬರುತ್ತೆ ಅಂತ ಬಿಟ್ಟರು. ಕಾಂಗ್ರೆಸ್ ಬರುತ್ತೆ ಅಂತಿದ್ರೆ ಅಲ್ಲೂ ಮಾಡ್ತಿದ್ರು. ಇವಿಎಂ ಬೇಡ ಅಂತ ನಾವು ಸುಪ್ರೀಂ ಕೋರ್ಟ್ ಹೋದರೂ ಆಗಲಿಲ್ಲ. ಅವರು ಸಹ ಎಲೆಕ್ಷನ್ ಕಮೀಷನ್ ಹೇಳಿದ್ದನ್ನ ಒಪ್ಪಿಕೊಂಡರು ಎಂದು ಲೇವಡಿ ಮಾಡಿದರು.

  • 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ಜನರು ಇದೀಗ ಉತ್ತರ ಕೊಟ್ಟಿದ್ದಾರೆ – ಎಂ.ಬಿ ಪಾಟೀಲ್

    3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ಜನರು ಇದೀಗ ಉತ್ತರ ಕೊಟ್ಟಿದ್ದಾರೆ – ಎಂ.ಬಿ ಪಾಟೀಲ್

    ಬೆಂಗಳೂರು: ಬಿಜೆಪಿ (BJP) 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದರು, ಇದೀಗ ಜನರು ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ (Karnataka) 3 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ (Congress) ನ್ನಡೆಯಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ 18 ಸಾವಿರ ಲೀಡ್ ಇದೆ. ಶಿಗ್ಗಾಂವಿ, ಸಂಡೂರಿನಲ್ಲಿಯೂ ಲೀಡ್ ಇದೆ. 3 ಕ್ಷೇತ್ರದಲ್ಲಿಯೂ ನಾವು ಗೆಲ್ಲುತ್ತೇವೆ. ಮೂರು ಸೀಟು ಗೆಲ್ಲುವ ಮೂಲಕ ಬಿಜೆಪಿ (BJP) ಹಗಲುಗನಸು ಕಾಣುತ್ತಿದ್ದರು. ಜನರು ಇದೀಗ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ನಾವು ಓಲೈಕೆ ಮಾಡಲ್ಲ, ಮುಸ್ಲಿಮರು ನಮ್ಗೆ ಮತ ಹಾಕಲ್ಲ: ಸಿ.ಟಿ ರವಿ


    ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬೊಮ್ಮಾಯಿ ವಿರುದ್ದ ಅಲ್ಪಸಂಖ್ಯಾತ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದರು. ಆದರೆ ಅದೇ ಅಲ್ಪಸಂಖ್ಯಾತ ಅಭ್ಯರ್ಥಿಯ ವಿರುದ್ಧ ಅಲ್ಲಾಡುತ್ತಿದ್ದಾರೆ. ನಮ್ಮ ಪಕ್ಷ ಎಲ್ಲಾ ಜಾತಿ ಧರ್ಮಗಳಿಗೆ ಅವಕಾಶ ಕೊಡುತ್ತದೆ. ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತ ವೋಟ್ ನಮಗೆ ಸಹಕಾರ ಆಗಿದೆ. ಮೂರು ಕ್ಷೇತ್ರದಲ್ಲಿ 1 ಕ್ಷೇತ್ರ ಕೊಡುವ ಚರ್ಚೆ ಆಗಿತ್ತು. ಚನ್ನಪಟ್ಟಣ ಯೋಗೇಶ್ವರ್ ಬರುವುದು ಯಾರಿಗೂ ಗೊತ್ತಿಲ್ಲ. ಎಲ್ಲಾ ಲೆಕ್ಕಾಚಾರ ನೋಡಿ ಟಿಕೆಟ್ ಕೊಡಲಾಗಿದೆ ಎಂದು ತಿಳಿಸಿದರು.

    ಚನ್ನಪಟ್ಟಣದಲ್ಲಿ (Channapatna) ಯೋಗೇಶ್ವರ್ (CP Yogeshwar) ಅನುಭವ, ಅವರ ವೋಟು ಹಾಗೂ ಕಾಂಗ್ರೆಸ್ ವೋಟ್‌ನಿಂದ ಗೆಲ್ಲುತ್ತಿದ್ದಾರೆ. ಜೆಡಿಎಸ್ ಅವರು ಪದೇ ಪದೇ ಅವರು ಕುಟುಂಬಕ್ಕೆ ಟಿಕಟ್ ಕೊಡುತ್ತಿರುವುದು ವಿರೋಧ ಆಗಿರಬಹುದು. ದೇವೇಗೌಡರು ಸರ್ಕಾರ ಕಿತ್ತು ಒಗೆಯುತ್ತೇನೆ ಎಂದಿದ್ದರು. ಆದರೆ ಸರ್ಕಾರವನ್ನ ಯಾರಿಂದಲೂ ಕಿತ್ತು ಒಗೆಯಲು ಸಾಧ್ಯವಿಲ್ಲ. ಜನರು ಅದನ್ನ ನಿರ್ಧಾರ ಮಾಡುತ್ತಾರೆ. ತಮ್ಮದೇ ಕುಟುಂಬದ ಅಭ್ಯರ್ಥಿ ಹಾಕಿರುವುದರಿಂದ ಜನ ನೋಡಿ ಮತ ಹಾಕಿದ್ದಾರೆ. ನಮ್ಮ ಪಕ್ಷದ ನಾಯಕರು ಒಟ್ಟಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.

    ಮಹಾರಾಷ್ಟ್ರ (Maharashtra) ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಸಂಪೂರ್ಣ ಫಲಿತಾಂಶ ಘೋಷಣೆ ಆದ ಮೇಲೆ ಎಲ್ಲಿ ಏನು ಆಗಿದೆ ಎಂದು ತಿಳಿಯಬೇಕು. ಮಹಾರಾಷ್ಟ್ರದ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಒನ್ ಸೈಡ್ ಆಗುತ್ತಿದೆ. ಫಲಿತಾಂಶ ಬರಲಿ. ಆಮೇಲೆ ನೋಡೋಣ. ನಾವು ಗ್ಯಾರಂಟಿ ಚುನಾವಣೆ ಕಾರ್ಡ್ ತಡವಾಗಿ ಹಂಚಿದ್ದೇವೆ. ಇದು ನಮಗೆ ಹಿನ್ನಡೆ ಆಗಿರಬಹುದು. ಮಹಾರಾಷ್ಟ್ರದ ಎಫೆಕ್ಟ್ ನಮ್ಮ ರಾಜ್ಯದಲ್ಲಿ ಆಗುವುದಿಲ್ಲ. ನಮ್ಮಲ್ಲಿ ಯಾವ ಏಕನಾಥ ಶಿಂಧೆ, ಅಜಿತ್ ಪವರ್ ಇಲ್ಲ. ನಮ್ಮ ಸರ್ಕಾರಕ್ಕೆ ಯಾವುದೇ ಎಫೆಕ್ಟ್ ಇಲ್ಲ. ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಪ್ರಮುಖ ಆಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುನ್ನಡೆ

  • ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ

    ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharashtra Election) ಮತ ಎಣಿಕೆಯಲ್ಲಿ ಎನ್‌ಡಿಎಗೆ (NDA) ಆರಂಭಿಕ ಮುನ್ನಡೆ ಸಿಕ್ಕಿದೆ.

    ಅಂಚೆ ಮತಗಳಲ್ಲಿ ಎನ್‌ಡಿಎ 84  ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಮಹಾವಿಕಾಸ್‌ ಅಘಾಡಿ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

    ಒಟ್ಟು 288 ಕ್ಷೇತ್ರಗಳು ಮಹಾರಾಷ್ಟ್ರದಲ್ಲಿದ್ದು ಸರಳ ಬಹುಮತ 145 ಸ್ಥಾನಗಳ ಅಗತ್ಯವಿದೆ. ಈ ಬಾರಿ 62.05% ಮತದಾನ ನಡೆದಿದೆ.

    ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮತ್ತೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳ್ತಿವೆ. ಆದರೆ, ಕಾಂಗ್ರೆಸ್ ಇದನ್ನು ನಂಬುತ್ತಿಲ್ಲ. ಫೋಟೋ ಫಿನಿಷ್ ಫಲಿತಾಂಶ ಹೊರಬರುವ ನಿರೀಕ್ಷೆಯನ್ನು ಹೊಂದಿದೆ.

  • ಅಘಾಡಿಗೆ ಆಪರೇಷನ್‌ ಭೀತಿ – ಮತ್ತೆ ರೆಸಾರ್ಟ್‌ ಪಾಲಿಟಿಕ್ಸ್‌ , ಕರ್ನಾಟಕಕ್ಕೆ ಶಾಸಕರು?

    ಅಘಾಡಿಗೆ ಆಪರೇಷನ್‌ ಭೀತಿ – ಮತ್ತೆ ರೆಸಾರ್ಟ್‌ ಪಾಲಿಟಿಕ್ಸ್‌ , ಕರ್ನಾಟಕಕ್ಕೆ ಶಾಸಕರು?

    ಮುಂಬೈ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ (Maharashtra Election Results) ಒಂದು ದಿನ ಬಾಕಿ ಇದ್ದು ರೆಸಾರ್ಟ್‌ ಪಾಲಿಟಿಕ್ಸ್‌ (Resort Politics) ಆರಂಭವಾಗುವ ಸಾಧ್ಯತೆಯಿದೆ.

    ಚುನಾವಣೋತ್ತರ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದರೂ ಈ ಬಾರಿ ಎರಡು ಒಕ್ಕೂಟಗಳ ಮಧ್ಯೆ ನೇರಾನೇರ ಸ್ಪರ್ಧೆ ಇದೆ ಎನ್ನುವುದು ಮಹಾ ವಿಕಾಸ ಅಘಾಡಿ ಮೈತ್ರಿಗೆ ಗೊತ್ತಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರ ತಲೆದಂಡಕ್ಕೆ ಸಿದ್ಧತೆ!

    ಪಕ್ಷಗಳ ಆಂತರಿಕ ಸಮೀಕ್ಷೆಯಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ (Congress)  ಗೆಲುವು  ಸಾಧಿಸಿದ  ಶಾಸಕರನ್ನು ಕರ್ನಾಟಕಕ್ಕೆ (Karnataka) ಕಳುಹಿಸಲು ಮುಂದಾಗಿದೆ.

    ಮೂರು ಚಾರ್ಟರ್ಡ್‌ ವಿಮಾನಗಳ ಸಿದ್ಧವಾಗಿಡುವಂತೆ  ಸೂಚಿಸಲಾಗಿದೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ಮತ್ತು ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ನಿರ್ಧಾರಕ್ಕೆ ಕಾಂಗ್ರೆಸ್‌ ಈಗ ಕಾಯುತ್ತಿದೆ. ಒಂದು ವೇಳೆ ಇಬ್ಬರೂ ನಾಯಕರು ಅನುಮತಿ ನೀಡಿದರೆ ಮೂರು ಪಕ್ಷದ ಗೆದ್ದ ಶಾಸಕರು ಕರ್ನಾಟಕಕ್ಕೆ ಬರುವ ಸಾಧ್ಯತೆಯಿದೆ.

    ಈ ಬಾರಿ ಅಧಿಕಾರಕ್ಕೆ ಏರಲೇಬೇಕೆಂದು ಅಘಾಡಿ ಮೈತ್ರಿ ಪಣ ತೊಟ್ಟಿದೆ. ಒಂದು ವೇಳೆ ಮಹಾಯುತಿಗೆ ಬಹುಮತ ಸಿಗದೇ ಇದ್ದರೆ ನಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಭೀತಿ  ಅಘಾಡಿಗೆ ಇದೆ. ಈ ಕಾರಣಕ್ಕೆ ಈಗಲೇ ಶಾಸಕರನ್ನು ಹಿಡಿದಿಡಲು ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸುವ ಸಂಬಂಧ ಮಾತುಕತೆ  ನಡೆಸುತ್ತಿದೆ ಎಂದು ವರದಿಯಾಗಿದೆ.

  • ʻಬ್ಯಾಗ್‌ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ

    ʻಬ್ಯಾಗ್‌ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ

    ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಹೆಲಿಕಾಪ್ಟರ್‌ (Helicopter) ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

    ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಗದ್ದಲದ ನಡುವೆ ರಾಹುಲ್‌ ಗಾಂಧಿ ಅವರ ಬ್ಯಾಗ್‌ ಪರಿಶೀಲಿಸಿದ್ದಾರೆ. ಈ ಕುರಿತ ವೀಡಿಯೋವೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ತಪಾಸಣೆ ನಡೆಸಿದ ವೀಡಿಯೋನಲ್ಲಿ ಚುನಾವಣಾ ಅಧಿಕಾರಿಗಳ ಗುಂಪೊಂದು ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ತಪಾಸಣೆ ನಡೆಸುತ್ತಿರುವುದನ್ನು ತೋರಿಸುತ್ತದೆ. ಇದನ್ನೂ ಓದಿ: ಸಂವಿಧಾನ ಭಾರತದ ಡಿ‌ಎನ್‌ಎ; ಸಂವಿಧಾನದ ಖಾಲಿ ಪ್ರತಿ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ

    ಒಂದು ದಿನದ ಹಿಂದೆಯಷ್ಟೇ ಜಾರ್ಖಂಡ್‌ನ ಗೊಡ್ಡಾದಲ್ಲಿ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಏರ್ ಟ್ರಾಫಿಕ್ ಕಂಟ್ರೋಲ್ (Air Traffic Control) ತಡವಾಗಿ ಅನುಮತಿ ನೀಡಿದ ಪರಿಣಾಮ ರಾಹುಲ್ ಗಾಂಧಿ ಅವರ ಪ್ರಯಾಣ 45 ನಿಮಿಷಗಳ ಕಾಲ ವಿಳಂಬವಾಗಿತ್ತು. ರಾಜ್ಯದ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರಕ್ಕೆ ಅವರು ತೆರಳುತ್ತಿದ್ದ ವೇಳೆ ಅವರ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ತಡವಾಗಿ ಅನುಮತಿ ನೀಡಲಾಗಿತ್ತು. ಇದರಿಂದ ಸುಮಾರು 45 ನಿಮಿಷಗಳ ಕಾಲ ರಾಹುಲ್‌ ಹೆಲಿಕಾಪ್ಟರ್‌ನಲ್ಲೇ ಕಾದು ಕುಳಿತಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ (Congress), ರಾಹುಲ್‌ ಗಾಂಧಿ ಪ್ರಚಾರಕ್ಕೆ ಸಮಸ್ಯೆ ಉಂಟು ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಗೊಡ್ಡಾದಿಂದ ಸುಮಾರು 150 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರ‍್ಯಾಲಿ ಇತ್ತು. ಅವರ ಕಾರ್ಯಕ್ರಮಕ್ಕೆ ಎಟಿಸಿ ಆದ್ಯತೆ ನೀಡಿದೆ ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ತಪಾಸಣೆ ನಡೆದಿದೆ. ಇದನ್ನೂ ಓದಿ: ಮಣಿಪುರ-ಅಸ್ಸಾಂ ಗಡಿಯ ನದಿಯಲ್ಲಿ ಮಹಿಳೆ ಸೇರಿ 3 ಮೃತದೇಹಗಳು ಪತ್ತೆ

    ಕಳೆದ 6 ದಿನಗಳ ಹಿಂದೆಯಷ್ಟೇ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಮೊದಲ ಬಾರಿಗೆ ವೀಡಿಯೊವನ್ನು ಹಂಚಿಕೊಂಡಿದ್ದರು. ಉದ್ಧವ್‌ ಠಾಕ್ರೆ ಅವರ ಬ್ಯಾಗ್‌ ಪರಿಶೀಲಿಸಿದ ಬಳಿಕ ವಿಡಿಯೋ ಹಂಚಿಕೊಂಡು ಮೋದಿ ಮತ್ತು ಬಿಜೆಪಿ ನಾಯಕರಿಗೆ ಇದೇ ರೀತಿಯ ತಪಾಸಣೆಗಳನ್ನು ನಡೆಸಲಾಗುತ್ತದೆಯೇ? ಪ್ರಶ್ನೆ ಮಾಡಿದ್ದರು. ಇದಾದ ನಂತರ ಬ್ಯಾಗ್‌ ತಪಾಸಣೆಯ ಸರಣಿ ಪರಿಶೀಲನೆ ನಡೆದಿದೆ. ಶುಕ್ರವಾರವಷ್ಟೇ ಅಮಿತ್‌ ಶಾ ಅವರ ಹೆಲಿಕಾಪ್ಟರ್‌ ಅನ್ನು ತಪಾಸಣೆ ನಡೆಸಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆಸಿದ ಖ್ಯಾತ ಗಾಯಕ ಸಂಜಯ್ ಚಕ್ರವರ್ತಿ ಅರೆಸ್ಟ್

  • ಸಂವಿಧಾನ ಭಾರತದ ಡಿ‌ಎನ್‌ಎ; ಸಂವಿಧಾನದ ಖಾಲಿ ಪ್ರತಿ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ

    ಸಂವಿಧಾನ ಭಾರತದ ಡಿ‌ಎನ್‌ಎ; ಸಂವಿಧಾನದ ಖಾಲಿ ಪ್ರತಿ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ

    ಮುಂಬೈ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂವಿಧಾನವು ಖಾಲಿಯಾಗಿ ಕಾಣಬಹುದು. ಆದ್ರೆ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟಕ್ಕೆ ಅದು ದೇಶದ DNA ಎಂದು ರಾಹುಲ್ ಗಾಂಧಿ (Rahul Gandhi) ತಿರುಗೇಟು ನೀಡಿದ್ದಾರೆ. ಸಂವಿಧಾನದ (Constitution) ಖಾಲಿ ಪ್ರತಿ ಎಂಬ ಬಿಜೆಪಿಯ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದರು.

    ಈ ಹೋರಾಟವು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ (Congress) ಮತ್ತು ಇಂಡಿಯಾ ಒಕ್ಕೂಟ ಇದೆ ಇನ್ನೊಂದು ಕಡೆ ಬಿಜೆಪಿ-ಆರ್‌ಎಸ್‌ಎಸ್ (BJP-RSS) ಇದೆ. ದೇಶವು ಸಂವಿಧಾನದ ಮೂಲಕ ನಡೆಯಬೇಕು ಎಂದು ನಾವು ಹೇಳುತ್ತೇವೆ. ಆದರೆ ಪ್ರಧಾನಿ ಏನನ್ನೂ ಬರೆಯದೆ ಖಾಲಿ ಪುಸ್ತಕ ಎಂದು ಹೇಳುತ್ತಾರೆ. ಈ ಪುಸ್ತಕವು ಆರ್‌ಎಸ್‌ಎಸ್-ಬಿಜೆಪಿಗೆ ಮಾತ್ರ ಖಾಲಿಯಾಗಿದೆ, ನಮಗೆ ಇದು ದೇಶದ ಡಿಎನ್‌ಎ (DNA) ಎಂದು ರಾಹುಲ್ ಗಾಂಧಿ ಹೇಳಿದರು.

    ಸಂವಿಧಾನವು ಅಂಬೇಡ್ಕರ್, ಫುಲೆಜಿ, ಶಿವಾಜಿ ಮಹಾರಾಜ್, ಭಗವಾನ್ ಬುದ್ಧ, ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಒಳಗೊಂಡಿದೆ. ಇದು ನಮಗೆ ಬರೀ ಪುಸ್ತಕವಲ್ಲ, ನಮಗೆ ಇದು ಸಾವಿರಾರು ವರ್ಷಗಳ ಹಿಂದಿನ ಚಿಂತನೆ ಮತ್ತು ಅದರಲ್ಲಿ ಏನು ಬರೆಯಲಾಗಿದೆ ಅದಕ್ಕಾಗಿ ಭಾರತದಲ್ಲಿ ಜನರು ಸಾವಿರಾರು ವರ್ಷಗಳಿಂದ ಸಾಯುತ್ತಿದ್ದಾರೆ ಮತ್ತು ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ: ರಾಹುಲ್‌ ಗಾಂಧಿ

    ಮಹಾರಾಷ್ಟ್ರ ಜನರ ಸರ್ಕಾರವನ್ನು ಆಡಳಿತ ಪಕ್ಷವು ರಾಜ್ಯದ ಜನತೆಯಿಂದ ಕದ್ದಿದೆ. ಪ್ರಧಾನಿ ಮತ್ತು ಬಿಜೆಪಿಯವರು ಮುಚ್ಚಿದ ಕೋಣೆಗಳಲ್ಲಿ ಈ ಸಂವಿಧಾನವನ್ನು ರಹಸ್ಯವಾಗಿ ಹತ್ಯೆ ಮಾಡಿದ್ದಾರೆ. ಅದಾನಿ ಜೊತೆಗೆ ನಡೆದ ಸಭೆಯಲ್ಲಿ ಶಾಸಕರನ್ನು ಕೋಟ್ಯಂತರ ರೂಪಾಯಿಗಳಿಗೆ ಖರೀದಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 10 ಮಕ್ಕಳು ಸಜೀವ ದಹನ

    ಮಹಾರಾಷ್ಟ್ರದ ಸರ್ಕಾರವನ್ನು ಜನರಿಂದ ಏಕೆ ಕದ್ದಿದೆ ಎಂದು ನಾನು ನಿಮಗೆ ಹೇಳುತ್ತೇನೆ. ನಮ್ಮ ಸರ್ಕಾರವನ್ನು ‘ಧಾರಾವಿ’ಗಾಗಿ ಕದಿಯಲಾಗಿದೆ. ಬಿಜೆಪಿಯ ಜನರು – ಪ್ರಧಾನಿ ಮೋದಿ, ಅಮಿತ್ ಶಾ, ಧಾರಾವಿಯ ಬಡವರ ಭೂಮಿಯನ್ನು ಅದಾನಿಗೆ ನೀಡಲು ಬಯಸಿದ್ದರು. ಹೀಗಾಗಿ ಸ್ನೇಹಿತ ಗೌತಮ್ ಅದಾನಿ ಮಹಾ ಸರ್ಕಾರವನ್ನು ಕೆಡವಿದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.

    ಪ್ರಧಾನಿ ತಮ್ಮ ಭಾಷಣಗಳಲ್ಲಿ ಹೇಳಿದ್ದನ್ನೇ ಹೇಳುತ್ತಿದ್ದಾರೆ ಎಂದು ನನ್ನ ಸಹೋದರಿ ಹೇಳಿದರು‌. ನರೇಂದ್ರ ಮೋದಿ ಅವರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗಿದೆ ಎಂದು ನಾನು ಹೇಳಿದರೆ ಸಂಜೆ ಟಿವಿಗಳಲ್ಲಿ ಮೋದಿ ಜ್ಞಾಪಕ ಹೆಚ್ಚಿದೆ ಎಂದು ಸುದ್ದಿ ಬರುತ್ತದೆ. ಅವರಿಗೆ ಒಮ್ಮೆ ಹೇಳಿದರೆ 70 ವರ್ಷ ನೆನಪಿನಲ್ಲಿಡಬಲ್ಲರು ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ದೆಹಲಿಗೆ ಹೊರಟ ನಂದಿನಿ – ನ.21ರಿಂದ ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ಕೆಎಂಎಫ್ ಉತ್ಪನ್ನಗಳು

  • ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ: ರಾಹುಲ್‌ ಗಾಂಧಿ

    ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ: ರಾಹುಲ್‌ ಗಾಂಧಿ

    ಮುಂಬೈ: ಮೋದಿಯವರು (Narendra Modi) ಕಾಂಗ್ರೆಸ್‌ ನಾಯಕರು ಪ್ರದರ್ಶಿಸುತ್ತಿರುವ ಸಂವಿಧಾನ ಪ್ರತಿ ಎಂದು ಹೆಸರಿಸಲಾದ ʻಕೆಂಪು ಪುಸ್ತಕʼ ಖಾಲಿ ಪುಟಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ. ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲ. ಅದಕ್ಕೆ ಖಾಲಿ ಎಂದು ಭಾವಿಸಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi,) ಕುಟುಕಿದರು.

    ಮಹಾರಾಷ್ಟ್ರ ಚುನಾವಣಾ (Maharashtra Election) ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ʻಸಂವಿಧಾನʼ (Constitution) ಪ್ರತಿ ಎಂದು ಹೇಳಲಾದ ಕೆಂಪು ಪುಸ್ತಕ (Red Book) ಪ್ರದರ್ಶಿಸಿದ ರಾಹುಲ್‌ ಗಾಂಧಿ, ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಸಂವಿಧಾನ ಮತ್ತು ಭಾರತದ ರಾಷ್ಟ್ರೀಯ ಐಕಾನ್‌ಗಳನ್ನು ಅಗೌರವಗೊಳಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ:  ಕೋವಿಡ್‌ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ – ಬಿಎಸ್‌ವೈ ವಿರುದ್ಧ ಶೀಘ್ರ FIR ಸಾಧ್ಯತೆ!

    ಮೋದಿಯವರು ಕಾಂಗ್ರೆಸ್‌ ನಾಯಕರು ಪ್ರದರ್ಶಿಸುತ್ತಿರುವ ಸಂವಿಧಾನ ಪ್ರತಿ ಎಂದು ಹೆಸರಿಸಲಾದ ʻಕೆಂಪು ಪುಸ್ತಕʼ ಖಾಲಿ ಪುಟಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ. ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲ. ಅದಕ್ಕೆ ಖಾಲಿ ಎಂದು ಭಾವಿಸಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಗಮನಾರ್ಹ ಸಾಧನೆ – 24.2 GW ಸಾಮರ್ಥ್ಯ ವೃದ್ಧಿ: ಜೋಶಿ

    ಸಂವಿಧಾನ ಭಾರತದ ಆತ್ಮ ಮತ್ತು ದೇಶದ ಐಕಾನ್‌ಗಳಾದ ಬಿರ್ಸಾ ಮುಂಡಾ, ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ರೂಪಿಸಿದ ತತ್ವಗಳನ್ನು ಒಳಗೊಂಡಿದೆ ಎಂದು ತಿರುಗೇಟು ನೀಡಿದರು. ಇದೇ ವೇಳೆ ಸಂವಿಧಾನ ಪ್ರತಿ ಎಂದು ಹೇಳಲಾದ ಕೆಂಪು ಪುಸ್ತಕವನ್ನು ತೆರೆದು ತೋರಿಸಿದ ರಾಗಾ, ಮೋದಿ ಜೀ ಈ ಪುಸ್ತಕ ಖಾಲಿಯಾಗಿಲ್ಲ. ಇದು ಭಾರತದ ಆತ್ಮ ಮತ್ತು ಜ್ಞಾನ ಹೆಮ್ಮಿಯಿಂದ ಹೇಳಿದರು.

    ಇನ್ನೂ ನಗರ ನಕ್ಸಲರು ಮತ್ತು ಅರಾಜಕತಾವಾದಿಗಳಿಗೆ ಬೆಂಬಲ ಸೂಚಿಸುತ್ತಾರೆ ಎಂಬ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಗಾ, ಪುಸ್ತಕದ ಕೆಂಪು ಬಣ್ಣದ ಬಗ್ಗೆ ಬಿಜೆಪಿಗೆ ಆಕ್ಷೇಪವಿದೆ. ಬಣ್ಣ ಕೆಂಪು ಅಥವಾ ನೀಲಿ ಎಂಬುದು ಮುಖ್ಯವಲ್ಲ. ನಾವು ಸಂವಿಧಾನ ಸಂರಕ್ಷಿಸಲು ಬದ್ಧರಾಗಿದ್ದೇವೆ, ಅದಷ್ಟೇ ಮುಖ್ಯ. ಸಂವಿಧಾನ ರಕ್ಷಣೆಗಾಗಿ ನಮ್ಮ ಪ್ರಾಣ ತ್ಯಾಗ ಮಾಡಲೂ ಸಿದ್ಧರಿದ್ದೇವೆ ಎಂದು ಗುಡುಗಿದರು,

    ಮುಂದುವರಿದು ಸರ್ಕಾರದಲ್ಲಿ ಆದಿವಾಸಿಗಳಿಗೆ ಸೀಮಿತ ಪ್ರಾತಿನಿಧ್ಯದ ಕುರಿತು ಮಾತನಾಡಿ, ಸರ್ಕಾರ ನಡೆಸುತ್ತಿರುವ 90 ಅಧಿಕಾರಿಗಳಲ್ಲಿ ಒಬ್ಬರೇ ಆದಿವಾಸಿ ಇರುವುದು. ಬಿಜೆಪಿ ಹಾಗೂ ಸಮಾನಾಂತರ ಪಕ್ಷಗಳು ಆದಿವಾದಿಗಳನ್ನು ಕಾಡಿನಲ್ಲೇ ನಿರ್ಬಂಧಿಸುವ ಕೆಲಸಕ್ಕೆ ಮುಂದಾಗಿದೆ. ಆದ್ರೆ ಆದಿವಾಸಿಗಳು ದೇಶದ ಮೊದಲ ಮಾಲೀಕರು ಮತ್ತು ಜಲ (ನೀರು), ಕಾಡು (ಅರಣ್ಯ) ಮತ್ತು ಜಮೀನ್ (ಭೂಮಿ) ಮೇಲೆ ಮೊದಲ ಹಕ್ಕು ಇರುವುದು ಅವರಿಗೆ ಎಂಬುದನ್ನು ಅರಿತುಕೊಳ್ಳಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು. ಇದನ್ನೂ ಓದಿ: ರಿಯಲ್‌ ಎಸ್ಟೇಟ್‌ ಮಾಫಿಯಾದಿಂದ ಮನನೊಂದು ದಂಪತಿ ಆತ್ಮಹತ್ಯೆ; 12 ಮಂದಿ ವಿರುದ್ಧ FIR

  • ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ

    ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ

    ನವದೆಹಲಿ: ಪಟ್ಟಭದ್ರ ಹಿತಾಸಕ್ತಿಗಳಿಗಳು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, 2047ರ ವೇಳೆಗೆ ಭಾರತವನ್ನು (India) ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ತನ್ನ ʻರಾಷ್ಟ್ರೀಯ ಶತ್ರುಗಳʼ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿದ್ದಾರೆ.

    ಶ್ರೀ ಸ್ವಾಮಿನಾರಾಯಣ ದೇವಸ್ಥಾನದ 200ನೇ ವಾರ್ಷಿಕೋತ್ಸವದ ಹಿನ್ನಲೆ ಗುಜರಾತ್‌ನ (Gujarat) ವಡ್ತಾಲ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಮಾಜವನ್ನು ಜಾತಿ, ಧರ್ಮ, ಭಾಷೆ, ಮೇಲೂ, ಕೀಳು, ಗಂಡು-ಹೆಣ್ಣು, ಗ್ರಾಮ, ನಗರಗಳ ಆಧಾರದಲ್ಲಿ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ. ರಾಷ್ಟ್ರ ವೈರಿಗಳ ಈ ಪ್ರಯತ್ನದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ನಾವೆಲ್ಲರೂ ಒಟ್ಟಾಗಿ ಇಂತಹ ಕೃತ್ಯವನ್ನು ಸೋಲಿಸಬೇಕಾಗಿದೆ ಎಂದು ಮೋದಿ ಎಚ್ಚರಿಸಿದರು.

    ಜಾತಿ ಜನಗಣತಿಗೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಬೇಡಿಕೆಯ ನಡುವೆಯೇ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಅದು ಬಿರುಕು ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು, ʻಏಕ್ ಹೈ, ತೋ ಸೇಫ್ ಹೈʼ ಎಂದು ಘೋಷಣೆ ನೀಡಿದ್ದರು. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

    ಕಾಂಗ್ರೆಸ್ ಆಡಳಿತದಲ್ಲಿ ಒಬಿಸಿಗಳು ಒಗ್ಗಟ್ಟಾಗಿರಲಿಲ್ಲ. ಕಾಂಗ್ರೆಸ್ ಅಧಿಕಾರದಿಂದ ಹೊರಗಿರುವಾಗ ಮಾತ್ರ ಒಬಿಸಿಗಳಿಗೆ ಮೀಸಲಾತಿ ಸಿಕ್ಕಿತು. ಒಬಿಸಿಗಳು ಒಗ್ಗೂಡಿದ ತಕ್ಷಣ, ಅಂತಿಮ ಪರಿಣಾಮವೆಂದರೆ ದೇಶದಲ್ಲಿ ಕಾಂಗ್ರೆಸ್ ತನ್ನ ಸರಳ ಬಹುಮತವನ್ನು ಕಳೆದುಕೊಂಡಿತು ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

  • ಮಹಾರಾಷ್ಟ್ರ ಚುನಾವಣೆಗೆ 5,000 ಕೋಟಿ ಅಕ್ರಮವಾಗಿ ಕಳಿಸಿದ್ದಾರೆ: ಮೋದಿ ಬಳಿಕ ಹೆಚ್‌ಡಿಡಿ ಬಾಂಬ್‌

    ಮಹಾರಾಷ್ಟ್ರ ಚುನಾವಣೆಗೆ 5,000 ಕೋಟಿ ಅಕ್ರಮವಾಗಿ ಕಳಿಸಿದ್ದಾರೆ: ಮೋದಿ ಬಳಿಕ ಹೆಚ್‌ಡಿಡಿ ಬಾಂಬ್‌

    ರಾಮನಗರ: ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಿ ನಡೆಯುವ ವಿಧಾನಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮಧ್ಯದಂಗಡಿ ಮಾಲೀಕರಿಂದ 700 ಕೋಟಿ ರೂ. ಸಂಗ್ರಹಿಸಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪ ಮಾಡಿದ್ದರ. ಈ ಬೆನ್ನಲ್ಲೇ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD Devegowda) ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆಗೆ (Maharashtra Election) 5,000 ಕೋಟಿ ಹಣ ಅಕ್ರಮವಾಗಿ ಕಳಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಬಾಂಬ್‌ ಸಿಡಿಸಿದ್ದಾರೆ.

    ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ-ಜೆಡಿಎಸ್‌ ನಾಯಕರ (BJP JDS Leaders) ಮೈತ್ರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಿಖಿಲ್‌ ಕುಮಾರಸ್ವಾಮಿ ಪರ ಮತಯಾಚನೆ ನಡೆಸಿದರು. ಇದೇ ವೇಳೆ ನನ್ನ ಕುರಿತ ʻನೇಗಿಲ ಗೆರೆಗಳುʼ ಪುಸ್ತಕ ಮುಂದೊಂದು ದಿನ ಪಠ್ಯಪುಸ್ತಕ ಆಗುವ ಕಾಲ ಬರುತ್ತೆ ಎಂದರು. ಇದನ್ನೂ ಓದಿ: ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    ಸೋಮಣ್ಣ ಅವರು ಮೂರು ತಿಂಗಳಲ್ಲಿ ಈ ಸರ್ಕಾರ ಹೋಗುತ್ತೆ ಅಂತ ಜೋತಿಷ್ಯ ಹೇಳಿದ್ದಾರೆ. ನಾನೂ ಸ್ವಲ್ಪ ಜ್ಯೋತಿಷ್ಯ ಕೇಳ್ತೀನಿ. ಪಾಪ ಕುಮಾರಸ್ವಾಮಿ (HD Kumaraswamy) ನಿರಪರಾಧಿ, ಮಗನನ್ನು ಚುನಾವಣೆಗೆ ನಿಲ್ಲಿಸಲು 50 ಕೋಟಿ ಕೊಡಬೇಕು ಅಂತ ಮಾಡಿದ್ದರಂತೆ, ಅದಕ್ಕೆ ಇಂಗ್ಲೀಷ್‌ನಲ್ಲಿ ಎಕ್ಸ್ಟಾರ್ಷನ್ ಅಂತಾರೆ. ಕುಮಾರಸ್ವಾಮಿ ಮೇಲೆ ಒತ್ತಾಯ ಹಾಕಿ ಕಾಂಗ್ರೆಸ್ ಜತೆ ಸರ್ಕಾರ ಮಾಡಲು ಒಪ್ಪಿಸಿದರು. ಸಿದ್ದರಾಮಯ್ಯ (Siddaramaiah) ಅವರೇ ನಾನು 14 ಬಜೆಟ್ ಮಂಡಿಸಿದ್ದೀನಿ ಅಂತೀರಾ? ಕುಮಾರಸ್ವಾಮಿ ಬಜೆಟ್ ಓದಬೇಕಾದರೆ, ಇವರ ಬಜೆಟ್ ನಾನು ಕೇಳಬೇಕಾ ಅಂತ ಸಿದ್ದರಾಮಯ್ಯ ಎದ್ದು ಓಡಿ ಹೋಗ್ತಾರೆ. ಒಂದು ಕಾಲದಲ್ಲಿ ನಾನು ಯಡಿಯೂರಪ್ಪ ಜಗಳ ಆಡಿರಬಹುದು, ಈಗ ಈ ಸರ್ಕಾರ ಕಿತ್ತೊಗೆಯಲು ಒಟ್ಟಿಗೆ ಸೇರಿದ್ದೇವೆ ಎಂದು ಗುಡುಗಿದರು.

    ಮಿಸ್ಟರ್ ಡಿಕೆ ಶಿವಕುಮಾರ್, ಮೋದಿಯವರನ್ನು ಅರೆಸ್ಟ್ ಮಾಡಬೇಕು ಅಂತ ಹೇಳ್ತೀಯಾ? ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆಗೆ 5,000 ಕೋಟಿ ಹಣ ಅಕ್ರಮವಾಗಿ ಕಳಿಸಿದ್ದಾರೆ ಎಂಬ ಆರೋಪ ಇದೆ. ಮಹಾನುಭಾವ, ನನ್ನ ಸಮಾಜದ ಮಹಾನುಭಾವ ಡಿಕೆಶಿ, ಒಕ್ಕಲಿಗ ಸಮಾಜದ ಮುಖಂಡ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಿಸಬೇಕಂತೆ.. ಅರೆ ಬಾಪ್ ರೇ… ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

    ಹನ್ನೊಂದು ದಿನಗಳ ಹಿಂದೆ ನಿಖಿಲ್ ಅಭ್ಯರ್ಥಿ ಅಂತ ಯಾರಾದ್ರೂ ಹೇಳ್ತಿದ್ರಾ? 6 ತಿಂಗಳು ನಾನೇ ಚನ್ನಪಟ್ಟಣ ಅಭ್ಯರ್ಥಿ ಅಂತ ಒಂದೇ ಸಮನೆ ಹೇಳ್ತಿದ್ರು. ನಾವೆಲ್ಲ ನಡುಗಿ ಹೋದ್ವಿ, ಚನ್ನಪಟ್ಟಣದ ಅಭ್ಯರ್ಥಿ ನಾನೇ ಅಭ್ಯರ್ಥಿ ಅಂತ ಹೇಳಿದ ಮಹಾನುಭಾವನಿಗೆ ಕೊನೆಗೆ ಏನಾಯ್ತು? ಕರ್ನಾಟಕಕ್ಕೆ ಮಹಾನುಭಾವ ಕುರಿಯನ್ ಮಿಲ್ಕ್ ಫೆಡರೇಷನ್ ಕೊಟ್ಟ, ನಾನು ಆಗ ಪ್ರಧಾನಿ. ಅದರಿಂದ ಈಗ ಚನ್ನಪಟ್ಟಣದ ಜನ ನೆಮ್ಮದಿಯಿಂದ ಬದುಕ್ತಿದ್ದಾರೆ. ಮೋದಿಯವರು ನಮ್ಮ ರಾಜ್ಯಕ್ಕೆ ಅನುದಾನ, ತೆರಿಗೆ ಮೋಸ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯಗೆ ಹಣಕಾಸು ಮಂತ್ರಿ ಮಾಡಿದ್ದು ಈ ದೇವೇಗೌಡ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಬೀಗಿದರು.

    ಕನಕಪುರದ ನಾಯಕರ ಗರ್ವ ಮುರಿಯಲು ನಿಖಿಲ್‌ರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಜೆಡಿಎಸ್‌ನವರೇ ಸ್ಪರ್ಧೆ ಮಾಡಬೇಕು ಅಂತ ಮೋದಿ, ಅಮಿತ್‌ ಶಾ, ನಡ್ಡಾ, ಯಡಿಯೂರಪ್ಪ ಹೇಳಿದ್ರು. ಇವರೆಲ್ಲ ಸೇರಿ ನಿಖಿಲ್ ಅಭ್ಯರ್ಥಿ ಮಾಡಿದ್ದಾರೆ. ನಿಖಿಲ್ ಗೆಲ್ಲಿಸಿ, ನವೆಂಬರ್‌ 23ಕ್ಕೆ ಫಲಿತಾಂಶ ಬರುತ್ತೆ. ನವೆಂಬರ್‌ 24ಕ್ಕೆ ನಾನು ಯಡಿಯೂರಪ್ಪ ಬಂದು ಮತದಾರರಿಗೆ ಅಭಿನಂದನೆ ಸಲ್ಲಿಸ್ತೇವೆ. ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ನಿಖಿಲ್‌ರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಏಯ್ ಕುಮಾರಸ್ವಾಮಿ ನಿನ್ನ ರೇಟ್ ಹೇಳು – ವಿವಾದಾತ್ಮಕ ಪದ ಬಳಸಿದ ಜಮೀರ್