Tag: maharani college

  • ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ – ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸಾವು

    ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ – ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸಾವು

    ಮೈಸೂರು: ಶಿಥಿಲಗೊಂಡ ಕಾರಣ ದುರಸ್ತಿ ಮಾಡುತ್ತಿದ್ದ ಮೈಸೂರಿನ (Mysuru) ಮಹಾರಾಣಿ ಕಾಲೇಜಿನ (Maharani College) ಕಟ್ಟಡ ಕುಸಿತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ (Worker) ಮೃತಪಟ್ಟಿದ್ದಾರೆ.

    ಸದ್ದಾಂ ಮೃತ ಕಾರ್ಮಿಕ. ಮಹಾರಾಣಿ ಕಾಲೇಜು ಕಟ್ಟಡ 80 ವರ್ಷಗಳ ಹಳೆಯದಾಗಿದ್ದು, ಕಳೆದ ತಿಂಗಳು ದುರಸ್ಥಿ ಕಾರ್ಯ ಆರಂಭವಾಗಿತ್ತು. ಮಂಗಳವಾರ ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿದಿದ್ದು, ಸದ್ದಾಂ ಅದರ ಅಡಿ ಸಿಲುಕಿಕೊಂಡಿದ್ದರು. ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಕಾಲ್ತುಳಿತ 10 ಸಾವು

    ಮಂಗಳವಾರ ಸಂಜೆಯಿಂದ ಸದ್ದಾಂ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಂದ ಕಾರ್ಯಾಚರಣೆ ನಡೆದಿತ್ತು. ಬುಧವಾರ ಬೆಳಗಿನ ಜಾವ ಸದ್ದಾಂ ಮೃತದೇಹ ಅವಶೇಷಗಳಡಿಯಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಯಿಲ್‌ ಟ್ಯಾಂಕ್‌ ಸ್ಫೋಟ – ಇಬ್ಬರು ಕಾರ್ಮಿಕರ ಸಾವು

  • ಮಹಾರಾಣಿ ಕಾಲೇಜು ಆವರಣದಲ್ಲಿ ಅಪಘಾತ – ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಕಾರು ಡಿಕ್ಕಿ

    ಮಹಾರಾಣಿ ಕಾಲೇಜು ಆವರಣದಲ್ಲಿ ಅಪಘಾತ – ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಕಾರು ಡಿಕ್ಕಿ

    ಬೆಂಗಳೂರು: ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿಗಳಿಗೆ (Students) ಪ್ರೊಫೆಸರ್ (Professor) ಒಬ್ಬರ ಕಾರು (Car) ಡಿಕ್ಕಿ ಹೊಡೆದಿರುವ ಘಟನೆ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ (Maharani College)  ನಡೆದಿದೆ.

    ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ವೇಗವಾಗಿ ಬಂದ ಇಂಗ್ಲಿಷ್ ಪ್ರೊಫೆಸರ್ ನಾಗರಾಜ್ ಅವರ ಕಾರು ಒಬ್ಬರು ಶಿಕ್ಷಕಿ ಸೇರಿದಂತೆ ಕೆಲ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ನಟ ನಾಗಭೂಷಣ್ ಕಾರು ಅಪಘಾತ: ಪೊಲೀಸರ ಕೈ ಸೇರಿದ ಮತ್ತೊಂದು ವರದಿ

    ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಅಶ್ವಿನಿ, ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ನಂದು ಪ್ರಿಯಾ ಹಾಗೂ ಮ್ಯೂಸಿಕ್ ಟೀಚರ್ ಜ್ಯೋತಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಾಣಿ ಕಡಿತಕ್ಕೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡಿ: ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಿಪ್‍ಸ್ಟಿಕ್, ಕಾಸ್ಟ್ಲಿ ಮೊಬೈಲ್ ತಗೋತಿರಾ, ಫೀಸ್ ಕಟ್ಟೋಕೆ ಆಗಲ್ವಾ?- ವಿವಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

    ಲಿಪ್‍ಸ್ಟಿಕ್, ಕಾಸ್ಟ್ಲಿ ಮೊಬೈಲ್ ತಗೋತಿರಾ, ಫೀಸ್ ಕಟ್ಟೋಕೆ ಆಗಲ್ವಾ?- ವಿವಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

    ಬೆಂಗಳೂರು: ಲಿಪ್‍ಸ್ಟಿಕ್ ಹಾಕೋತೀರಾ ಫೀಸ್ ಕಟ್ಟೋಕೆ ಆಗೊಲ್ವಾ..?, ಕಾಸ್ಟ್ಲಿ ಮೊಬೈಲ್ ಬಳಸುತ್ತೀರಾ? ಫೀಸ್ ಯಾಕೆ ಕಟ್ಟೊಲ್ಲ ಅಂತ ಪ್ರಶ್ನಿಸಿದ ಮಹಾರಾಣಿ ವಿವಿ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದಾರೆ.

    ಲಿಪ್‍ಸ್ಟಿಕ್ ಹಾಕೋತೀರಾ ಫೀಸ್ ಕಟ್ಟೋಕೆ ಆಗೊಲ್ವಾ ಅಂತಾರೆ. ಕಾಸ್ಟ್ಲಿ ಮೊಬೈಲ್ ಯೂಸ್ ಮಾಡ್ತೀರ ಫೀಸ್ ಯಾಕೆ ಕಟ್ಟೊಲ್ಲ ಅಂತಿದ್ದಾರೆ. ಅದನ್ನೆಲ್ಲ ಮಾತಾಡೋಕೆ ಅವ್ರು ಯಾರು?. ಬಂದ್, ಪ್ರೊಟೆಸ್ಟ್ ಅಂತ ಹೋದ್ರೆ ಟಿಸಿ ಕೊಡ್ತೀನಿ ಅಂತ ಬೆದರಿಸ್ತಿದ್ದಾರೆ. ಎಲ್ಲರನ್ನೂ ಕ್ಲಾಸ್ ರೂಂ ಒಳಗೆ ಕೂಡಿ ಹಾಕಿದ್ದಾರೆ. ಕಾಲೇಜು ಇದ್ದಿದ್ದು, ಈಗ ವಿವಿ ಮಾಡಿಕೊಂಡಿದ್ದು ಇವರೇ. ಕಾಲೇಜು ಇದ್ದಾಗಲೇ ಫೀಸ್ ಕಡಿಮೆ ಕಡಿಮೆ ಇತ್ತು. ವಿವಿ ಆದ್ಮೇಲೆ ಏಕಾಏಕಿ 1,800 ರೂ. ಹೆಚ್ಚಳ ಮಾಡಿದ್ದಾರೆ. 900 ರೂ. ಇತ್ತು ವಿವಿ ಆಗಿದೆ ಅಂತ ಇಷ್ಟು ಜಾಸ್ತಿ ಮಾಡಿದ್ರೆ ಹೇಗೆ ಫೀಸ್ ಕಟ್ಟೋದು ಎಂದು ಪ್ರಶ್ನಿಸಿದರು.

    ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬಂದ್‍ಗೆ ವಿದ್ಯಾರ್ಥಿಗಳು ಕರೆ ಕೊಟ್ಟಿದ್ದಾರೆ. ಇಂದು ತರಗತಿ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಬಂದ್ ಗೆ ಮುಂದಾಗಿದ್ದರು. ಆದರೆ ಈ ವೇಳೆ ಬೆದರಿಸಿ ತರಗತಿಗೆ ಹಾಜರಾಗುವಂತೆ ಒತ್ತಡ ಹಾಕಿದ್ದಾರೆ. ಒತ್ತಾಯಪೂರ್ವಕರಾಗಿ ತರಗತಿಗೆ ಹಾಜರಾಗುವಂತೆ ಹೇಳಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಇಂಟರ್ನಲ್ಸ್ ಕಡಿತಗೊಳಿಸುವ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಟೀ ಶರ್ಟ್ ವಿಚಾರಕ್ಕೆ ಲವರ್ಸ್‌ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು

    ಬಿಕಾಂ, ಬಿಬಿಎ ಹಾಗೂ ಬಿಎ ವಿದ್ಯಾರ್ಥಿನಿಯರಿಂದ ಶುಲ್ಕ ಕಡಿತಕ್ಕೆ ಆಗ್ರಹಿಸಿರುವ ವಿದ್ಯಾರ್ಥಿನಿಯರು ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಬಗ್ಗೆ ಇಂದು ಮೌಲ್ಯಮಾಪನ ಕುಲಸಚಿವೆ ಅನುರಾಧ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂದು ಮಾಧ್ಯಮಗಳ ಕಣ್ಣಿಂದ ತಪ್ಪಿಸಿಕೊಂಡು ಕಛೇರಿ ಒಳಗೆ ಓಡಿಹೋದರು. ಸದ್ಯ 30ಕ್ಕೂ ಹೆಚ್ಚು ಪೊಲೀಸರಿಂದ ಕಾಲೇಜು ಒಳಗೆ ಭದ್ರತೆ ಒದಗಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸರಿಯಾಗಿ ಕೆಲ್ಸ ಮಾಡಿಲ್ಲ ಅಂದ್ರೆ ಬಳ್ಳಾರಿಗೆ ಕಳಿಸ್ತೀನಿ – ಉನ್ನತ ಶಿಕ್ಷಣ ಸಚಿವರ ಖಡಕ್ ಎಚ್ಚರಿಕೆ

    ಸರಿಯಾಗಿ ಕೆಲ್ಸ ಮಾಡಿಲ್ಲ ಅಂದ್ರೆ ಬಳ್ಳಾರಿಗೆ ಕಳಿಸ್ತೀನಿ – ಉನ್ನತ ಶಿಕ್ಷಣ ಸಚಿವರ ಖಡಕ್ ಎಚ್ಚರಿಕೆ

    ಮೈಸೂರು: ಸರಿಯಾಗಿ ಕೆಲಸ ಮಾಡದೆ ಇದ್ದರೆ ಎಲ್ಲರನ್ನೂ ಒಟ್ಟಾಗಿ ಬಳ್ಳಾರಿಗೆ ವರ್ಗಾಯಿಸಿ ಬಿಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

    ಮೈಸೂರಿನ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿದ್ದ ಸಚಿವರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿಲ್ಲ. ಇದೇ ವೇಳೆ ಕಾಲೇಜನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಗರಂ ಆದ್ರು. ಮಹಾರಾಣಿ ಕಾಲೇಜು ಪ್ರತಿಷ್ಠಿತ ಕಾಲೇಜಾಗಿದೆ. ನೀವು ಜವಾಬ್ದಾರಿಯುತ ಅಧಿಕಾರಿಗಳಾಗಿದ್ದೀರಿ ಎಂದು ತರಾಟೆಗೆ ತೆಗೆದು ಕೊಂಡರು.

    ಇದೇ ವೇಳೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿ, ನೀವು ಹೀಗೆ ಇದ್ದರೆ ಒಬ್ಬರನ್ನು ಬಿಡದಂತೆ ಎಲ್ಲರನ್ನು ಬಳ್ಳಾರಿಗೆ ಕಳುಹಿಸಿ ಬಿಡುತ್ತೇನೆ ಎಂದರು. ಸಚಿವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸುತ್ತಿದ್ದಂತೆ ಕಾಲೇಜಿನಲ್ಲಿದ್ದ ವಿದ್ಯಾರ್ಥಿನಿಯರು ಚಪ್ಪಾಳೆ ತಟ್ಟಿದರು.

    ಕಾಲೇಜು ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಸ್ವತಃ ಆಲಿಸಿದ ಸಚಿವರು, ಸ್ಥಳದಲ್ಲೇ ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಅಲ್ಲದೇ ಸರ್ಕಾರ ಕಲ್ಪಿಸಿರುವ ಸೌಲಭ್ಯಗಳನ್ನೇ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

  • ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಸೈಕೋ ಪ್ರತ್ಯಕ್ಷ: ವಿಡಿಯೋ ನೋಡಿ

    ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಸೈಕೋ ಪ್ರತ್ಯಕ್ಷ: ವಿಡಿಯೋ ನೋಡಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವಿಕೃತ ಕಾಮಿ ಪ್ರತ್ಯಕ್ಷನಾಗಿದ್ದಾನೆ. ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಸೈಕೋ ಕಾಣಿಸಿಕೊಂಡಿದ್ದಾನೆ.

    ಹುಡುಗಿಯರ ಒಳ ಉಡುಪುಗಳನ್ನ ಧರಿಸಿ ಅರೆ ನಗ್ನವಾಗಿ ಹಾಸ್ಟೆಲ್‍ನಲ್ಲಿ ಓಡುತ್ತಿರುವ ಸೈಕೋ ಹುಡುಗನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಡುಗಿಯರ ರೂಂಗಳನ್ನು ಕಿಟಕಿಯಿಂದ ಈತ ಇಣುಕಿ ನೋಡುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.

    ಮಹಾರಾಣಿ ಕಾಲೇಜಿಗೆ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಭೇಟಿ ನೀಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

     ಇದನ್ನೂ ಓದಿ: ಬೆಂಗಳೂರಲ್ಲಿ ಸೈಕೋ ಕಾಟ- ಮಧ್ಯರಾತ್ರಿ ಕಿಟಕಿ ಇಣುಕಿ ನೋಡ್ತಾನೆ ಕಿರಾತಕ

    https://www.youtube.com/watch?v=_yf0IfLtJFE