Tag: Maharaja

  • ಫ್ಯಾನ್ಸ್‌ಗೆ ಗುಡ್ ನ್ಯೂಸ್- ಬರಲಿದೆ ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸೀಕ್ವೆಲ್

    ಫ್ಯಾನ್ಸ್‌ಗೆ ಗುಡ್ ನ್ಯೂಸ್- ಬರಲಿದೆ ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸೀಕ್ವೆಲ್

    ವಿಜಯ್ ಸೇತುಪತಿ (Vijay Sethupathi) ನಟನೆಯ ‘ಮಹಾರಾಜ’ (Maharaja) ಚಿತ್ರ ಕಳೆದ ವರ್ಷ ಸಕ್ಸಸ್ ಕಂಡಿತ್ತು. ಕಳೆದು ಹೋದ ಕಸದ ಡಬ್ಬಿಯನ್ನು ಹುಡುಕುವ ನಾಯಕನ ಕಥೆಯನ್ನು ನಿರ್ದೇಶಕರು ಇಂಟ್ರೆಸ್ಟಿಂಗ್ ಆಗಿ ಹೇಳಿದ್ದರು. ಈಗ ಅದರದ್ದೇ ಸೀಕ್ವೆಲ್ ಕಥೆ ಹೇಳಲು ಪ್ಲ್ಯಾನ್ ಮಾಡಿದ್ದಾರೆ. ಈ ಮೂಲಕ ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಯುದ್ಧವು ದೇಶದ ಖ್ಯಾತಿಗೆ ಒಳ್ಳೆಯದಲ್ಲ: ‘ಆಪರೇಷನ್ ಸಿಂಧೂರ’ ಬಗ್ಗೆ ಸಂಜನಾ ಗಲ್ರಾನಿ ಪೋಸ್ಟ್

    ‘ಮಹಾರಾಜ’ ಸಿನಿಮಾವನ್ನು ನಿತಿಲನ್ ಸಾಮಿನಾಥನ್ ಅದ್ಭುತವಾಗಿ ಬೆಳ್ಳಿಪರದೆಯಲ್ಲಿ ತೋರಿಸಿದ್ದರು. ಈ ಚಿತ್ರ ಸಕ್ಸಸ್ ಕಂಡಿರೋ ಹಿನ್ನೆಲೆ ಇದರ ಸೀಕ್ವೆಲ್‌ಗೆ ಸಿದ್ಧತೆ ನಡೆಯುತ್ತಿದೆ. ‘ಮಹಾರಾಜ’ ಸೀಕ್ವೆಲ್ ಬರಲಿದೆ ಎಂದು ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಮಹಾರಾಜ’ ಪಾರ್ಟ್ 2ನಲ್ಲಿ ಡಿಫರೆಂಟ್ ಕಥೆ ಹೇಳೋಕೆ ಅವರು ಸಜ್ಜಾಗಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ

    ಈ ಸಿನಿಮಾದ ಕೆಲಸ ಈಗಾಗಲೇ ಆರಂಭವಾಗಿದೆ. ಈ ಬಾರಿ ಕತೆ ಮತ್ತು ಪಾತ್ರಗಳು ವಿಭಿನ್ನವಾಗಿರಲಿದೆ. ಈ ಸಿನಿಮಾಗೂ ನಿತಿಲನ್ ಸಾಮಿನಾಥನ್ ಅವರೇ ಆ್ಯಕ್ಷನ್ ಹೇಳಲಿದ್ದಾರೆ. ಈ ಸಿನಿಮಾಗೆ ನಟನಾಗಿ ಮಾತ್ರವಲ್ಲ ಸಹ ನಿರ್ಮಾಪಕನಾಗಿ ವಿಜಯ್ ಸೇತುಪತಿ ಸಾಥ್ ನೀಡಲಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ಅಪ್‌ಡೇಟ್ ಏನೆಂದರೆ ವಿಜಯ್ ಎದುರು ಫಹಾದ್ ಫಾಸಿಲ್ ನಟಿಸಲಿದ್ದಾರೆ ಎನ್ನಲಾಗಿದೆ.

    2024ರಲ್ಲಿ ತೆರೆಕಂಡ ‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ, ಬಾಲಿವುಡ್ ನಟ ಅನುರಾಗ್ ಕಶ್ಯಪ್, ಅಭಿರಾಮಿ, ದಿವ್ಯಾ ಭಾರತಿ, ಮಮತಾ ಮೋಹನ್ ದಾಸ್ ಸೇರಿದಂತೆ ಅನೇಕರು ನಟಿಸಿದ್ದರು.

  • ಮಹಾರಾಜ ಕಾಲೇಜಿನ ಮೇಲ್ಚಾವಣಿ ಕುಸಿತ – ಮೂವರು ವಿದ್ಯಾರ್ಥಿಗಳಿಗೆ ಗಾಯ

    ಮಹಾರಾಜ ಕಾಲೇಜಿನ ಮೇಲ್ಚಾವಣಿ ಕುಸಿತ – ಮೂವರು ವಿದ್ಯಾರ್ಥಿಗಳಿಗೆ ಗಾಯ

    ಮೈಸೂರು: ಮಹಾರಾಜ ಕಾಲೇಜಿನ ಮೇಲ್ಛಾವಣಿ ಕುಸಿತಗೊಂಡು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

    ಕಾಲೇಜಿನಲ್ಲಿ ಇಂದು ಅಂತರಿಕ ನಿಬಂಧನೆ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ನಡೆಯುತ್ತಿದ್ದಾಗ ಬೆಳಗ್ಗೆ 11:30ಕ್ಕೆ ಏಕಾಏಕಿ ಮೇಲ್ಚಾವಣಿ ಕುಸಿದಿದೆ.

    ಘಟ‌ನೆಯಲ್ಲಿ ವಿದ್ಯಾರ್ಥಿಗಳಾದ ವಿಶಾಲ್, ಯಶವಂತ್, ಸಲೀಂ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಅಂಗರಕ್ಷಕಿಯನ್ನ ಮದುವೆಯಾಗಿ ಮಹಾರಾಣಿಯನ್ನಾಗಿ ಮಾಡಿದ ರಾಜ!

    ಅಂಗರಕ್ಷಕಿಯನ್ನ ಮದುವೆಯಾಗಿ ಮಹಾರಾಣಿಯನ್ನಾಗಿ ಮಾಡಿದ ರಾಜ!

    ಬ್ಯಾಂಕಾಕ್: ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.

    66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ.

    ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

    ವಜಿರಲೊಂಗ್ ಕಾರ್ನ್ ಅವರಿಗೆ ಈಗಾಗಲೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದಾರೆ.

    2014 ರಲ್ಲಿ ಸುಥಿದಾ ಅವರು ರಾಜರ ಭದ್ರತಾ ಕಾರ್ಯಕ್ಕೆ ಅಧಿಕಾರಿಯಾಗಿ ಆಯ್ಕೆ ಆಗಿದ್ದರು. ಆ ಬಳಿಕ ಹಲವು ಭಾರೀ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ ಈ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗವಾಗಿರಲಿಲ್ಲ. ಉಳಿದಂತೆ ಶನಿವಾರ ಬ್ಯಾಂಕಾಕ್ ನಲ್ಲಿ ಬೌದ್ಧ, ಬ್ರಾಹ್ಮಣ ಸಂಪ್ರದಾಯದ ಅನ್ವಯ ವಜಿರಲೊಂಗ್ ಕಾರ್ನ್ ಕಿಂಗ್ ರಾಮಘಿ ಹೆಸರಿನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬಳಿಕ ಅವರನ್ನು ರಾಜನಾಗಿ ಬೃಹತ್ ಮೆರವಣಿಗೆ ಮಾಡಲಾಗುತ್ತದೆ.

  • ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ, ಮಹಾರಾಜರಲ್ಲ: ಮೋದಿ

    ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ, ಮಹಾರಾಜರಲ್ಲ: ಮೋದಿ

    ನವದೆಹಲಿ: ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ ಮಹಾರಾಜರಲ್ಲ. ಚೌಕಿದಾರ ಮಾತ್ರ ದೇಶಕ್ಕೆ ಸೇವೆ ಮಾಡಬಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ‘ಮೇ ಭೀ ಚೌಕಿದಾರ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 2014 ರಲ್ಲಿ ದೇಶದ ಜನತೆ ನನ್ನ ಮೇಲೆ ನಂಬಿಕೆಯನ್ನು ಸೇವೆ ಮಾಡಲು ಅವಕಾಶವನ್ನು ನೀಡಿದರು. ನನಗೆ ಕೊಟ್ಟ ಅವಕಾಶವನ್ನು ನಾನು ಹಾಳು ಮಾಡಲಿಲ್ಲ. ಭ್ರಷ್ಟರಿಂದ ದೇಶದ ಸಂಪತ್ತನ್ನು ರಕ್ಷಿಸಲು ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ ಎಂದು ಹೇಳಿದರು.

    ಮೋದಿ ಪ್ರಮುಖ ಹೇಳಿಕೆಗಳು:
    ದೇಶದ ಪ್ರತಿಯೊಬ್ಬ ನಾಗರಿಕನೂ ಚೌಕೀದಾರರು. ಚೌಕೀದಾರ ಎನ್ನುವುದು ಒಂದು ಭಾವನೆ. ಆದರೆ ಕೆಲವರು ಬೌದ್ಧಿಕವಾಗಿ ಬೆಳವಣಿಗೆ ಆಗಿರದ ವ್ಯಕ್ತಿಗಳು ಚೌಕೀದಾರ ಎಂದರೆ ಟೋಪಿ ಹಾಕಿಕೊಂಡು ಕೋಲು ಹಿಡಿದು, ಸಿಳ್ಳೆ ಹಾಕಿಕೊಂಡು ಬರುವವರು ಎಂದು ತಿಳಿದುಕೊಂಡಿದ್ದಾರೆ.

    ಕಾಂಗ್ರೆಸ್ ಒಂದೊಂದು ಸಮಯದಲ್ಲಿ ಸುಳ್ಳು ಹೇಳಿಕೊಂಡು ಚುನಾವಣೆಗೆ ಹೋಗುತ್ತದೆ. ದೆಹಲಿ ಚುನಾವಣೆಯ ಸಮಯದಲ್ಲಿ ಅವರ ವಸ್ತು ‘ಅಸಹಿಷ್ಣುತೆ’ ಆಗಿತ್ತು. ಬಿಹಾರ ಚುನಾವಣೆಯ ಸಮಯದಲ್ಲಿ ‘ಎಲ್ಲ ಮೀಸಲಾತಿಯನ್ನು ಮೋದಿ ಸರ್ಕಾರ ತೆಗೆದು ಹಾಕುತ್ತದೆ’ ಆಗಿತ್ತು. ಇದರ ಜೊತೆ ‘ಅವಾರ್ಡ್ ವಾಪ್ಸಿ’ ಬಂದು ಹೋಯ್ತು.

    ಉಗ್ರರ ಕೇಂದ್ರ ಬಿಂದು ಎಲ್ಲಿದೆ ಎನ್ನುವುದು ಇಡಿ ವಿಶ್ವಕ್ಕೆ ಗೊತ್ತಿದೆ. ಈ ಕಾಣರಕ್ಕಾಗಿಯೇ ನಾವು ಅವರ ನೆಲಕ್ಕೆ ನುಗ್ಗಿ ದಾಳಿ ಮಾಡಿ ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ಚುನಾವಣೆ ಇದೆ ಎನ್ನುವ ಕಾರಣಕ್ಕೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ನಮ್ಮ ದೇಶದ ಜನರು ಪಾಕಿಸ್ತಾನ ಹೇಳಿಕೆಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನನಗೆ ಬೇಸರವಾಗುತ್ತದೆ.

    ಬಾಲಕೋಟ್ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದ ನಮ್ಮ ವೀರ ಯೋಧರಿಗೆ ಭಾರತ ಸೆಲ್ಯೂಟ್ ಹೊಡೆಯುತ್ತದೆ. ನನಗೆ ನಮ್ಮ ಸೇನೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ಕಾರಣಕ್ಕಾಗಿಯೇ ನಾನು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ.

     

     

    ಕಳೆದ ಐದು ವರ್ಷದಲ್ಲಿ ನಾವು ಏನು ಸಾಧನೆ ಮಾಡಿದ್ದೇವೋ ಅದು ಸಾಧ್ಯವಾಗಿದ್ದು ಜನರ ಭಾಗಿದಾರಿಯಿಂದ. ಜನರಿಂದಾಗಿ ಸಚ್ಛತೆ ಒಂದು ದೊಡ್ಡ ಅಭಿಯಾನವಾಗಿ ರೂಪುಗೊಂಡಿದೆ.

    ನಾನು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಲ್ಲ. ಭಾರತವನ್ನು ಲೂಟಿ ಹೊಡೆಯಲು ನಾನು ಬಿಡುವುದಿಲ್ಲ. ಮಿಶನ್ ಶಕ್ತಿಯ ಮೂಲಕ ನಾವು ಈಗ ಬಾಹ್ಯಾಕಾಶದಲ್ಲಿ ಎತ್ತರಕ್ಕೆ ತಲುಪಿದ್ದೇವೆ. ಇಲ್ಲಿಯವರೆಗೆ ಕೇವಲ ಮೂರು ದೇಶಗಳು ಮಾತ್ರ ಈ ಸಾಮರ್ಥ್ಯವನ್ನು ಹೊಂದಿದ್ದವು. ವಿಜ್ಞಾನಿಗಳಿಂದಾಗಿ ಈಗ ನಾವು ಬಾಹ್ಯಾಕಾಶ ಶಕ್ತಿ ರಾಷ್ಟ್ರಗಳ ಸಾಲಿಗೆ ಸೇರಿದ್ದೇವೆ.

    ಕಳೆದ 4 ವರ್ಷಗಳಿಂದ ಒಂದು ಕುಟುಂಬ ಅದೇ ಭರವಸೆಯನ್ನು ನೀಡುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಆ ಭರವಸೆ ಈಡೇರಿಲ್ಲ. ಈಗಲೂ ಆ ಭರವಸೆ ನೀಡುತ್ತಿದ್ದು, ಜನರ ಈ ವಿಚಾರವನ್ನು ಚುನಾವಣಾ ಸಮಯದಲ್ಲಿ ಗಂಭೀರವಾಗಿ ಪರಿಗಣಿಸಬೇಕು.

  • ಸುದ್ದಿ ಹರಡಿ ಕಾಡು ರಕ್ಷಿಸಲು ಇಲಾಖೆಗೆ ಸಹಾಯ ಮಾಡೋಣ- ಯದುವೀರ್ ಒಡೆಯರ್

    ಸುದ್ದಿ ಹರಡಿ ಕಾಡು ರಕ್ಷಿಸಲು ಇಲಾಖೆಗೆ ಸಹಾಯ ಮಾಡೋಣ- ಯದುವೀರ್ ಒಡೆಯರ್

    ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ 5 ದಿನಗಳಿಂದ ಕಾಡ್ಗಿಚ್ಚು ಸಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟರಾದ ದರ್ಶನ್ , ಪುನೀತ್ ಮನವಿಯ ಬೆನ್ನಲ್ಲೇ ಇದೀಗ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಕೂಡ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಯದುವೀರ್, ದಯವಿಟ್ಟು ಈ ಬಗ್ಗೆ ಸುದ್ದಿ ಹರಡಿ ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡೋಣ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.

    ಮನವಿಯೇನು..?
    ಸ್ನೇಹಿತರೇ, ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನ ಸುದ್ದಿ ತಿಳಿಯಲು ಬಹಳ ನೋವಾಗಿದೆ. ಅಂದಾಜು ಸುಮಾರು 20,000 ಎಕರೆ ಅರಣ್ಯಪ್ರದೇಶದ ಪ್ರಾಣಿಸಂಕುಲ ಹಾಗು ಸಸ್ಯಸಂಕುಲಕ್ಕೆ ಅಪಾರ ಹಾನಿ ಉಂಟಾಗಿದೆ. ನಮ್ಮ ಪರಿಸರ ಪರಂಪರೆಗೆ ಸಂಭವಿಸಿರುವ ಈ ನಷ್ಟವು ಬಹಳ ದುಃಖಕರ ಸಂಗತಿಯಾಗಿದೆ. ಇದನ್ನೂ ಓದಿ: ದರ್ಶನ್ ನಂತ್ರ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಮನವಿ

    ಅರಣ್ಯ ಇಲಾಖೆಯವರಿಗೆ ಸ್ವಯಂಸೇವಕರು ಬೇಕಾಗಿದ್ದಾರೆ ಹಾಗು ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ. ಬಂಡೀಪುರ ಪ್ರವೇಶದ ಚೆಕ್ ಪೋಸ್ಟ್ ಕಚೇರಿಯಲ್ಲಿ ನೀವು ನೀರಿನ ಬಾಟಲಿಗಳು, ಗ್ಲುಕೋಸ್, ಔಷಧ, (ವಿಶೇಷವಾಗಿ ಸುಟ್ಟ ಗಾಯಗಳ ಔಷಧ), ಇತರೆ ಅಗ್ನಿಶಾಮಕ ಅಗತ್ಯತೆಗಳು, ಆಹಾರ ಮತ್ತು ಇತರೆ ಸರಬರಾಜುಗಳನ್ನು ನೀಡಬಹುದಾಗಿದೆ.

    ದಯವಿಟ್ಟು ಈ ಸುದ್ದಿ ಹರಡಿ ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಹಾಯ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೊಲ, ಕೋತಿ, ಜಿಂಕೆ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಸಜೀವ ದಹನವಾಗಿವೆ. ಬೆಳಗ್ಗಿನ ಜಾವ ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದು, ಮಧ್ಯಾಹ್ನದ ವೇಳೆ ಭೀಕರತೆಗೆ ತಿರುಗುತ್ತದೆ.

    ಬೆಳಗ್ಗಿನ ಜಾವ ಮಂಜು ಬೀಳುತ್ತಿರುವ ಕಾರಣ ಬೆಂಕಿ ಹತೋಟಿಗೆ ಬರುತ್ತದೆ. ಸದ್ಯ ಬೆಂಕಿ ಹತೋಟಿಗೆ ಬಂದು ನಿಯಂತ್ರಣ ಕಾಣುತ್ತಿರುವ ಬಂಡಿಪುರದಲ್ಲಿ ಬಿಸಿಲು ಮತ್ತು ಗಾಳಿ ಹೆಚ್ಚಾದ್ರೆ ಮತ್ತೆ ಬೆಂಕಿ ಹರಡುವ ಸಾಧ್ಯತೆಗಳಿವೆ. ನಿನ್ನೆಯೂ ಕೂಡ ಬೆಳಗಿನ ಜಾವ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿತ್ತು. ಆದ್ರೆ ಮಧ್ಯಾಹ್ನ ವೇಳೆ ಮತ್ತೆ ರೌದ್ರವಾತಾರ ತಾಳಿತ್ತು. ಇದು ಹೀಗೆ ಮುಂದುವರಿದ್ರೆ ಕೇರಳ ಗಡಿ ವ್ಯಾಪಿಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನಸಿನ ಮಾತು ಹಂಚಿಕೊಳ್ಳಲು ಬ್ಲಾಗ್ ಆರಂಭಿಸಿದ ಯದುವೀರ್ ಒಡೆಯರ್

    ಮನಸಿನ ಮಾತು ಹಂಚಿಕೊಳ್ಳಲು ಬ್ಲಾಗ್ ಆರಂಭಿಸಿದ ಯದುವೀರ್ ಒಡೆಯರ್

    ಮೈಸೂರು: ತಮ್ಮ ಮನಸಿನ ಮಾತನ್ನು ಹಂಚಿಕೊಂಡು ಜನರ ಜೊತೆ ಬೆರೆಯಲು ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಭೇರುಂಡ’ ಎಂಬ ಹೆಸರಿನ ಬ್ಲಾಗ್ ಆರಂಭಿಸಿದ್ದಾರೆ.

    ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೋಟೋಗಳನ್ನು ಅಪ್ಲೋಡ್ ಮಾಡಿ ಜನರ ಜೊತೆ ಸಂಪರ್ಕದಲ್ಲಿದ್ದ ಮಹಾರಾಜರು ಈಗ ತಮ್ಮ ಬರವಣಿಗೆಯ ಮೂಲಕ ಜನರ ಜೊತೆ ಬೆರೆಯಲು ಮುಂದಾಗಿದ್ದು ವೆಬ್‍ಸೈಟ್‍ನಲ್ಲಿ ಬ್ಲಾಗ್ ಆರಂಭಿಸಿ ಇವತ್ತು ಮೊದಲ ಸುದ್ದಿಪತ್ರವನ್ನು ಪ್ರಕಟಿಸಿದ್ದಾರೆ.

    ದಸರಾ ವಿಶೇಷಾಂಕದ ಸುದ್ದಿಪತ್ರ ಬಿಡುಗಡೆ ಮಾಡಿದ ಮಹಾರಾಜರು, ಇದು ಉದ್ಘಾಟನೆಯ ಸುದ್ದಿ ಪತ್ರ ಎಂದು ಬ್ಲಾಗ್ ನಲ್ಲಿ ಹೇಳಿದ್ದಾರೆ. ಉದ್ಘಾಟನಾ ಪತ್ರದ ಹೆಸರಿನಲ್ಲಿ ಮೊದಲ ಪತ್ರ ಒಂದನ್ನು ಬರೆದಿದ್ದಾರೆ. ಈ ಪತ್ರ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಬ್ಲಾಗ್ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ ಎಂದು ಬರೆದಿದ್ದಾರೆ.

    ರಾಜಮನೆತನದ ಕಾರ್ಯಕ್ರಮಗಳಲ್ಲಿ ಈ ಸೇವೆಯು ಒಂದು ಭಾಗ. ನಾವು ನೀವು ಪರಸ್ಪರ ಅರ್ಥ ಮಾಡಿಕೊಳ್ಳಲು ಈ ಪತ್ರ ನಾಂದಿಯಾಗಲಿದೆ. ನನಗೆ ಬರವಣಿಗೆ ಇಷ್ಟವಾಗಿದ್ದರಿಂದ ನನ್ನ ಆಲೋಚನೆಗಳನ್ನು ಈ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಬ್ಲಾಗ್ ನೋಡಲು ಕ್ಲಿಕ್ ಮಾಡಿ: www.ykcwadiyar.in

    ಇದನ್ನೂ ಓದಿ: ಪತ್ನಿ ಹೆಸ್ರಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆಯೋ ಮಂದಿಗೆ ಯದುವೀರ್ ಖಡಕ್ ವಾರ್ನಿಂಗ್