Tag: mahanagara palike

  • ವೇತನ ವಿಳಂಬ ಖಂಡಿಸಿ ಮಲ ಸುರಿದು ಪೌರ ಕಾರ್ಮಿಕರಿಂದ ಪ್ರತಿಭಟನೆ

    ವೇತನ ವಿಳಂಬ ಖಂಡಿಸಿ ಮಲ ಸುರಿದು ಪೌರ ಕಾರ್ಮಿಕರಿಂದ ಪ್ರತಿಭಟನೆ

    ಹುಬ್ಬಳ್ಳಿ: ವೇತನ ವಿಳಂಬ ನೀತಿ ವಿರೋಧಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿಯೇ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿತು. ನೇರ ವೇತನ, ವಿವಿಧ ಬೇಡಿಕೆ ಹಾಗೂ ನಾಲ್ಕು ತಿಂಗಳುಗಳಿಂದ ವೇತನ ನೀಡದ ಮಹಾನಗರ ಪಾಲಿಕೆ ಕ್ರಮ ಖಂಡಿಸಿ ಘೋಷಣೆ ಕೂಗಿದರು. ಕೆಲವರು ಪಾಲಿಕೆ ಆವರಣದಲ್ಲಿಯೇ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ 200 ಜನ ಪ್ರತಿಭಟನಾ ನಿರತರನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದರು.

    ಇದಕ್ಕೂ ನವನಗರದಲ್ಲಿರುವ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಮುಂದೆ ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ್‍ನನ್ನು ಬಂಧಿಸುವಂತೆ ಒತ್ತಾಯಿಸಿ, ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

    ವಿಜಯ ಗುಂಟ್ರಾಳ್, ಗುತ್ತಿಗೆ ಕಾರ್ಮಿಕರೊಂದಿಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿದ್ದಾರೆ. ಜೊತೆಗೆ ಆತನಿಂದ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ವಿಜಯ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ಎಂ.ಎನ್.ನಾಗರಾಜ್ ಅವರಿಗೆ ಪಾಲಿಕೆ ಸದಸ್ಯರು ಮನವಿ ಸಲ್ಲಿಸಿದರು.

  • ತುಮಕೂರು ಪಾಲಿಕೆಯಿಂದ ಮನೆ ದೋಖಾ- ಮಾಲೀಕನಿಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಧಮ್ಕಿ, ಕೊಲೆಬೆದರಿಕೆ

    ತುಮಕೂರು ಪಾಲಿಕೆಯಿಂದ ಮನೆ ದೋಖಾ- ಮಾಲೀಕನಿಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಧಮ್ಕಿ, ಕೊಲೆಬೆದರಿಕೆ

    ತುಮಕೂರು: ಇಲ್ಲಿನ ಮಹಾನಗರ ಪಾಲಿಕೆಯಿಂದ ಕುಟುಂಬವೊಂದು ಬೀದಿಗೆ ಬೀಳೋ ಸ್ಥಿತಿ ನಿರ್ಮಾಣವಾಗಿದೆ.

    ಗುಡಿಸಲಿನಲ್ಲಿ ಜೀವನ ನಡೆಸ್ತಿದ್ದ ಮೋಸಸ್ ಅರೋನ್ ಕುಟುಂಬ ಮಾರುತಿನಗರದಲ್ಲಿ ಪುಟ್ಟ ಮನೆ ಕಟ್ಟಿದ್ದಾರೆ. ಮೊದಲು ಮನೆ ಕಟ್ಟಲು ಪರವಾನಗಿ ಕೊಟ್ಟಿದ್ದ ಮಹಾನಗರ ಪಾಲಿಕೆ ಈಗ ತಕರಾರು ತೆಗೆದಿದೆ.

    ಅನಧಿಕೃತವಾಗಿ ಮನೆ ಕಟ್ತಿದ್ದಾರೆ ಅಂತಾ ಹೇಳಿ ಮನೆ ಕಾಮಗಾರಿ ನಿಲ್ಲಿಸಿದ್ದಾರೆ. ಅಲ್ಲದೇ ಮನೆ ನಿರ್ಮಾಣ ಮಾಡ್ತಿದ್ದ ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೊಂದು ಕಡೆ ಶಾಸಕರ ಹೆಸರೇಳಿಕೊಂಡು ಕಾಂಗ್ರೆಸ್ ಕಾರ್ಯಕರ್ತ ಫಾರುಕ್ ಎಂಬಾತ ಮನೆ ಕಟ್ಟದಂತೆ ಮನೆ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ. ಸಾಲದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ.

    ಇದ್ರಿಂದ ಮೋಸಸ್ ಅರೋನ್ ಕುಟುಂಬ ನಿತ್ಯ ಜೀವಭಯದಲ್ಲೇ ಕಾಲ ಕಳೆಯುತ್ತಿದೆ.