Tag: Mahalakshmi

  • ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ಬೇಡಿಕೆ ಇಟ್ಟ ನಟಿ ಮಹಾಲಕ್ಷ್ಮಿ

    ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ಬೇಡಿಕೆ ಇಟ್ಟ ನಟಿ ಮಹಾಲಕ್ಷ್ಮಿ

    ನ್ನ ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ನೀಡುವಂತೆ ನಟಿ ಮಹಾಲಕ್ಷ್ಮಿ  ಕೋರ್ಟಿಗೆ ಮನವಿ ಮಾಡಿದ್ದರು. ತನ್ನ ಪತಿಯು ಸಿಲೆಬ್ರಿಟಿ ಆಗಿರುವುದರಿಂದ ಅವರಿಗೆ ಎ ಕ್ಲಾಸ್ ಸೆಲ್ ನೀಡಬೇಕು ಎಂದು ಮಹಾಲಕ್ಷ್ಮಿ ಎಗ್ಮೋರ್ ನ್ಯಾಯಾಲಕ್ಕೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಜಾಮೀನು (Bail) ಕೂಡ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

    ಜೈಲಿನಲ್ಲಿ ಪತಿಯನ್ನು ನೋಡಿ ಕಣ್ಣೀರು ಹಾಕಿರುವ ಮಹಾಲಕ್ಷ್ಮಿ, ಶತಾಯಗತಾಯ ಅವರನ್ನು ಬಂಧನದಿಂದ ಬಿಡಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಕಾನೂನು ಹೋರಾಟ ಮಾಡುತ್ತಿದ್ದಾರೆ. ತನ್ನ ಪತಿಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ವಾದ ಮಾಡುತ್ತಿದ್ದಾರೆ. ಸದ್ಯ ಜಾಮೀನು ಸಿಗದೇ ಇರುವ ಕಾರಣದಿಂದಾಗಿ ಪತಿ ರವೀಂದರ್ ಇನ್ನಷ್ಟು ದಿನ ಜೈಲಿನಲ್ಲಿ(Jail)  ಇರಬೇಕಾಗಿದೆ.

    ಏನಿದು ಪ್ರಕರಣ?

    ಕಿರುತೆರೆ ನಟಿ ಮಹಾಲಕ್ಷ್ಮಿ (Mahalakshmi) ಪತಿ ರವೀಂದ್ರ ಚಂದ್ರಶೇಖರ್ (Ravindra Chandrashekar) ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

     

    ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‍ನ ಬಾಲಾಜಿ ಕಾಪಾ ಎಂಬ ಉದ್ಯಮಿಗೆ ನಿರ್ಮಾಪಕ ರವೀಂದ್ರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ತಮ್ಮ ಲಿಬ್ರಾ ಪ್ರೊಡಕ್ಷನ್ಸ್‌ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಕೇಳಿದ್ದರು. ಅದರಂತೆ ಉದ್ಯಮಿ ಬಾಲಾಜಿ ಅವರು ರವೀಂದ್ರಗೆ 2020ರ ಸೆಪ್ಟೆಂಬರ್‌ನಲ್ಲಿ 16 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು. ಉದ್ಯಮಿ ಬಳಿ ಹಣ ಪಡೆದು ಯೋಜನೆಗೆ ಚಾಲನೆ ನೀಡಿಲ್ಲ. ಪಡೆದ ಹಣವನ್ನು ಹಿಂತಿರುಗಿಸಿಲ್ಲ ಎಂದು ತಮಿಳುನಾಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.

    ಅವರ ದೂರಿನ ಮೇಲೆ ತನಿಖೆ ನಡೆಸಲಾಗಿದ್ದು, ರವೀಂದ್ರ ಅವರು ದಾಖಲೆಗಳನ್ನು ನಕಲು ಮಾಡಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ರವೀಂದ್ರ ಚಂದ್ರಶೇಖರ್ ಅವರನ್ನ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಅವರ ಮೇಲೆ ಹಲವು ವಂಚನೆ ಪ್ರಕರಣಗಳು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾಲಕ್ಷ್ಮಿ-ರವೀಂದರ್ ವಿವಾಹ ವಾರ್ಷಿಕೋತ್ಸವ:  ಪತ್ನಿಗೆ ಬರೆದ ಪತ್ರದಲ್ಲೇನಿದೆ?

    ಮಹಾಲಕ್ಷ್ಮಿ-ರವೀಂದರ್ ವಿವಾಹ ವಾರ್ಷಿಕೋತ್ಸವ: ಪತ್ನಿಗೆ ಬರೆದ ಪತ್ರದಲ್ಲೇನಿದೆ?

    ಮಿಸ್ ಮ್ಯಾಚ್ ಜೋಡಿ ಎಂದೇ ಸಖತ್ ವೈರಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟಂಬರ್ 1ರಂದು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಸುಂದರಿ ಮಹಾಲಕ್ಷ್ಮಿಯು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ರವೀಂದರ್ ದಪ್ಪ ಅನ್ನುವ ಕಾರಣಕ್ಕಾಗಿ ಈ ಜೋಡಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಏನೇ ಹಾಸ್ಯ ಮಾಡಿದರೂ, ಈ ಜೋಡಿ ಒಂದು ವರ್ಷಗಳ ದಾಂಪತ್ಯ ಮುಗಿಸಿ ತಣ್ಣಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

    ಈ ಕುರಿತು ರವೀಂದರ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಹೆಂಡತಿಯ ಗುಣಗಾನ ಮಾಡಿದ್ದಾರೆ. ‘ಮಹಾಲಕ್ಷ್ಮಿ ತನ್ನ ಬಾಳಿಗೆ ಬಂದ ನಂತರ ತಮ್ಮ ಬದುಕು ಸುಂದರವಾಗಿ ಎಂದಿದ್ದಾರೆ. ಆಕೆ ಕೊಡುವ ಪ್ರೀತಿಗೆ ನಾನು ಅರ್ಹನಲ್ಲ. ಆದರೂ, ಸುಂದರ ಜೀವನ ನಡೆಸುತ್ತಿದ್ದೇವೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಸಹಾಯಕನ ಮದುವೆಗೆ ರಶ್ಮಿಕಾ ಹಾಜರಿ- ನಟಿಯ ಕಾಲಿಗೆ ಬಿದ್ದ ನವಜೋಡಿ

    ಹಾಗಂತ ಪತ್ನಿಯನ್ನು ಕೇವಲ ಹೊಗಳಿಲ್ಲ. ‘ಅವಳು ದುರಂಹಕಾರಿ, ಆಕೆಯ ಪ್ರೀತಿ ಒರಟು. ಆದರೂ, ಕೋಪ ಬಂದಾಗ ಅಡುಗೆ ಮನೆಗೆ ಸೀದಾ ಹೋಗಿ ನನಗಾಗಿ ತಿಂಡಿಯನ್ನು ಮಾಡಿಕೊಂಡು ಬರುತ್ತಾಳೆ. ಒಂದೊಂದು ಸಲ ಕೆಟ್ಟದ್ದಾಗಿಯೂ ಅಡುಗೆ ಮಾಡಿದ್ದಾಳೆ. ಆಗ ಹೋಟೆಲ್ ನಮಗೆ ಅನಿವಾರ್ಯವಾಗುತ್ತದೆ’ ಎಂದು ಕಾಲೆಳೆದಿದ್ದಾರೆ.

     

    ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಈ ದಂಪತಿ ಸಿಂಪಲ್ ಆಗಿ ಆಚರಿಸಿಕೊಂಡಿದೆ. ಆದರೆ, ಪ್ರೀತಿಯನ್ನು ಮಾತ್ರ ಅಗಾಧವಾಗಿ ಹಂಚಿಕೊಂಡಿದೆ. ರವೀಂದ್ರನ್ ಪತ್ನಿಗಾಗಿ ಉದ್ದದ ಪತ್ರವನ್ನೇ ಬರೆದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡದ ಕಂಪನ್ನು ಪಸರಿಸಲು ‘ಕಾವೇರಿ ಕನ್ನಡ ಮೀಡಿಯಂ’ಗೆ ನಟಿ ಮಹಾಲಕ್ಷ್ಮಿ ಸಾಥ್

    ಕನ್ನಡದ ಕಂಪನ್ನು ಪಸರಿಸಲು ‘ಕಾವೇರಿ ಕನ್ನಡ ಮೀಡಿಯಂ’ಗೆ ನಟಿ ಮಹಾಲಕ್ಷ್ಮಿ ಸಾಥ್

    80ರ ದಶಕದ ಟಾಪ್ ನಟಿ ಮಹಾಲಕ್ಷ್ಮಿ ಮತ್ತೆ ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಸುಮಾರು 30 ವರ್ಷಗಳ ಕಾಲ ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ನಟಿ, ಈಗ ಟಿವಿ ಪರದೆಗೆ ಮರಳಿದ್ದಾರೆ. ಕನ್ನಡದ ಕಂಪನ್ನು ಪಸರಿಸಲು ಬರುತ್ತಿರೋ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ಗೆ ಮಹಾಲಕ್ಷ್ಮಿ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಬದ್ಧವೈರಿ ಕಂಗನಾ ಚಿತ್ರ ನೋಡುವ ಆಸೆ ಇದೆ ಎಂದ ಕರಣ್ : ಭಯವಾಗುತ್ತಿದೆ ಅಂತಾರೆ ನಟಿ

    ಮಹಾಲಕ್ಷ್ಮಿ ಮೂಲತಃ ತಮಿಳುನಾಡಿನವರಾಗಿದ್ದರೂ, ಕನ್ನಡದ ಸಿನಿಮಾದಿಂದ ಹೆಚ್ಚಿನ ಜನಪ್ರಿಯತೆ ಸಿಕ್ಕಿತ್ತು. ಬಡ್ಡಿ ಬಂಗಾರಮ್ಮ, ಸ್ವಾಭಿಮಾನ, ಮದುವೆ ಮಾಡು ತಮಾಷೆ ನೋಡು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಈಗ ಕಾವೇರಿ ಕನ್ನಡ ಮೀಡಿಯಂನಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಮನೆಯ ಒಡತಿ, ಶಿಸ್ತಿನ ಅಜ್ಜಿಯಾಗಿ ಮಹಾಲಕ್ಷ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ.

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿದೆ ವಿನೂತನ ಧಾರಾವಾಹಿ ಕಾವೇರಿ ಕನ್ನಡ ಮೀಡಿಯಂ. ಹೆಸರೇ ಹೇಳೋ ತರ ಇದು ಕನ್ನಡದ ಕಂಪು ತುಂಬಿರೋ ಸೀರಿಯಲ್ ಅಂತಾನೆ ಹೇಳಬಹುದು. ಕನ್ನಡ ಬರೀ ಭಾಷೆ ಅಲ್ಲ ಬದುಕು ಅಂತ ನಂಬಿರೋ ಊರಿನಲ್ಲಿ ಹುಟ್ಟಿರೋ ಕಾವೇರಿ ಅನ್ನೋ ಹೆಣ್ಣು ಮಗಳು ವೃತ್ತಿಯಲ್ಲಿ ಶಿಕ್ಷಕಿ, ಅಪ್ಪ ಕಟ್ಟಿರೋ ಕನ್ನಡ ಶಾಲೆಯನ್ನು ಕಾಪಾಡೋದಕ್ಕಾಗಿ ಹಾಗೂ ಅದರ ಅಭಿವೃದ್ದಿಗಾಗಿ ಸದಾಕಾಲ ಹೋರಾಟ ಮಾಡುವ ಪಾತ್ರವಾಗಿದೆ.

    ಕಥಾ ನಾಯಕ ಅಗಸ್ತ್ಯ ಇಂಡಿಯಾದಲ್ಲೇ ಒನ್ ಆಫ್ ದಿ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಓನರ್. ಈತನಿಗೆ ಆತನ ಶಾಲೆ ಅಭಿವೃದ್ಧಿ ಆಗ್ಬೇಕು ಅಷ್ಟೇ ವಿನಹ ಬೇರೆ ಯಾವುದು ಆತನ ಲೆಕ್ಕಕ್ಕೆ ಬರಲ್ಲ. ಆದರೆ ಕನ್ನಡ ಶಾಲೆಯನ್ನು ಉಳಿಸೋ ಸಲುವಾಗಿ ಅಗಸ್ತ್ಯ ನೀಡಿರುವ ಸವಾಲನ್ನು ಸ್ವೀಕರಿಸಿ, ಕಾವೇರಿ 6 ತಿಂಗಳುಗಳ ಕಾಲ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾಳೆ. ಇವರಿಬ್ಬರ ಉದ್ದೇಶ ಒಂದೇ ಆಗಿದ್ದರೂ ಅನುಸರಿಸೋ ದಾರಿಗಳು ಮಾತ್ರ ಬೇರೆ ಬೇರೆ. ಈ ಕವಲು ದಾರಿಗಳು ಹೇಗೆ ಒಂದಾಗುತ್ತವೆ ಅನ್ನೋದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

    ಈ ಸೀರಿಯಲ್‌ನ ನಾಯಕನಾಗಿ ರಕ್ಷಿತ್, ನಾಯಕಿಯಾಗಿ ಪ್ರಿಯಾ ಜೆ ಆಚಾರ್ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಮತ್ತೊಂದು ವಿಶೇಷತೆ ಅಂದರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಮಹಾಲಕ್ಷ್ಮಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕರ್ನಾಟಕದ ಸುಂದರ ತಾಣಗಳಾದ ದಕ್ಷಿಣ ಕನ್ನಡ, ಆಗುಂಬೆಯಲ್ಲಿ ಈ ಧಾರಾವಾಹಿಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅದ್ಬುತ ತಾರಾಬಳಗವನ್ನು ಈ ಧಾರಾವಾಹಿ ಹೊಂದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸನ್ಯಾಸಿನಿಯಾಗಿದ್ದ ಮಹಾಲಕ್ಷ್ಮಿ ಮತ್ತೆ ಬಣ್ಣದ ಲೋಕಕ್ಕೆ

    ಸನ್ಯಾಸಿನಿಯಾಗಿದ್ದ ಮಹಾಲಕ್ಷ್ಮಿ ಮತ್ತೆ ಬಣ್ಣದ ಲೋಕಕ್ಕೆ

    ರಶುರಾಮ ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ, ಬಹುಭಾಷಾ ತಾರೆ (Actress) ಮಹಾಲಕ್ಷ್ಮಿ (Mahalakshmi) ಮತ್ತೆ ಬಣ್ಣದ ಪ್ರಪಂಚಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದಕ್ಷಿಣದ ಅಷ್ಟೂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಮಹಾಲಕ್ಷ್ಮಿ 80ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಬೇಡಿಕೆಯಲ್ಲಿರುವಾಗಲೇ ಚಿತ್ರೋದ್ಯಮದಿಂದ ದೂರ ಸರಿದರು.

    ಚಿತ್ರೋದ್ಯಮದಿಂದ ದೂರವಾದ ನಂತರ ಮಹಾಲಕ್ಷ್ಮಿ ಏನು ಮಾಡುತ್ತಿದ್ದರು ಎಂದು ಗೊತ್ತಾಗಿದ್ದೆ ಹಲವು ವರ್ಷಗಳ ನಂತರ. ಅವರು ಸನ್ಯಾಸಿಯಾದರು ಎಂದು ಹೇಳಲಾಗುತ್ತಿತ್ತು. ಅದಕ್ಕೆ ಸಾಕ್ಷಿಯಾಗಿ ಹಲವು ಫೋಟೋಗಳು ಕೂಡ ಹರಿದಾಡಿದವು. ಆನಂತರ ಅದು ಸುಳ್ಳು ಎಂದು ಬಿಂಬಿಸುವ ಪ್ರಯತ್ನ ಕೂಡ ನಡೆಯಿತು. ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್

    ಇದೀಗ ಮತ್ತೆ ಮಹಾಲಕ್ಷ್ಮಿ ಸುದ್ದಿಗೆ ಸಿಕ್ಕಿದ್ದಾರೆ. ಅವರು ಮತ್ತೆ ಬಣ್ಣದ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ ಎನ್ನುವುದು ಸದ್ಯದ ವರ್ತಮಾನ. ಕನ್ನಡದ ಮನರಂಜನಾ ವಾಹಿನಿಯೊಂದು ಅವರನ್ನು ಸಂಪರ್ಕ ಮಾಡಿದ್ದು, ಧಾರಾವಾಹಿಯೊಂದರ (Serial) ಪ್ರಮುಖ ಪಾತ್ರ ಮಾಡಲು ಕೇಳಿದೆಯಂತೆ. ಅದಕ್ಕೆ ಮಹಾಲಕ್ಷ್ಮಿ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

     

    ಮಹಾಲಕ್ಷ್ಮಿ ಈ ಹಿಂದೆ ಬಣ್ಣದ ಪ್ರಪಂಚಕ್ಕೆ ಎರಡನೇ ಬಾರಿ ಕಾಲಿಟ್ಟಾಗಲೂ ಕನ್ನಡ ಚಿತ್ರೋದ್ಯಮವನ್ನೆ ಆರಿಸಿಕೊಂಡಿದ್ದಾರೆ. ಇದೀಗ ಮತ್ತೆ ಕನ್ನಡ ಕಿರುತೆರೆಯ ಮೂಲಕ ನಟನೆಯತ್ತ (Acting) ಮುಖ ಮಾಡುತ್ತಿದ್ದಾರೆ. ಅವರು ನಟಿಸಲಿರುವ ಧಾರಾವಾಹಿ ಯಾವುದು? ಯಾವ ಚಾನೆಲ್ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಂದರಿಯ ಪತಿ ರವೀಂದರ್ ವಿರುದ್ಧ ವಂಚನೆ ಪ್ರಕರಣ

    ಸುಂದರಿಯ ಪತಿ ರವೀಂದರ್ ವಿರುದ್ಧ ವಂಚನೆ ಪ್ರಕರಣ

    ಮಿಸ್ ಮ್ಯಾಚ್ ಜೋಡಿ ಎಂದೇ ಸಖತ್ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಅವರ ಪತಿ ರವೀಂದರ್ ಚಂದ್ರಶೇಖರ್ ವಿರುದ್ಧ ವಂಚನೆಯ (Fraud) ಆರೋಪ ಕೇಳಿ ಬಂದಿದೆ. ಸಿನಿಮಾ ಮಾಡುವುದಾಗಿ 15 ಲಕ್ಷ ರೂಪಾಯಿಯನ್ನು ತಮ್ಮಿಂದ ಪಡೆದುಕೊಂಡು ವಂಚಿಸಿದ್ದಾರೆ ಎಂದು ಅಮೆರಿಕಾದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್ (Vijay) ಎನ್ನುವವರು ದೂರು ನೀಡಿದ್ದಾರೆ.

    ವಿಜಯ್ ನೀಡಿದ ದೂರಿನ ಆಧಾರದ ಮೇಲೆ ಚೆನ್ನೈನ ಕೇಂದ್ರ ಅಪರಾಧ ವಿಭಾಗ ಪೊಲೀಸ್ ಅಧಿಕಾರಿಗಳು ರವೀಂದರ್ (Ravinder Chandrasekhar) ವಿರುದ್ದ ಪ್ರಕರಣ (Complaint) ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಪಡೆದುಕೊಂಡಿರುವ ರವೀಂದರ್ ವಿಚಾರಣೆಯನ್ನೂ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಸಿಂಗರ್ ಹನುಮಂತ ಸರ್ಪ್ರೈಸ್

    ತಮ್ಮೊಂದಿಗೆ ಸಿನಿಮಾ ಮಾಡುವುದಾಗಿ ತಿಳಿಸಿ 15 ಲಕ್ಷ ರೂಪಾಯಿಯನ್ನು ರವೀಂದರ್ ಪಡೆದರು. ನಂತರ ಯಾವುದೇ ಸಿನಿಮಾ ಮಾಡಲಿಲ್ಲ. ಸಿನಿಮಾದ ಬಗ್ಗೆ ಮಾಹಿತಿಯನ್ನೂ ಅವರು ನೀಡುತ್ತಿರಲಿಲ್ಲ. ಇವರು ಸಿನಿಮಾ ಮಾಡುವುದು ಅನುಮಾನ ಎಂದು ಗೊತ್ತಾಯಿತು. ವಿಚಾರಿಸಿದಾಗ ತಾವು ಮೋಸ ಹೋಗಿರುವುದಾಗಿ ತಿಳಿಯಿತು ಎಂದು ವಿಜಯ್ ದೂರಿನಲ್ಲಿ ಬರೆದಿದ್ದಾರೆ.

    ಆನ್ ಲೈನ್ ಮೂಲಕ ಈ ದೂರು ದಾಖಲಾಗಿದ್ದು, ಸಾಕ್ಷಿಗಳನ್ನು ಕಲೆ ಹಾಕುವುದರಲ್ಲಿ ಪೊಲೀಸರು ನಿರತರಾಗಿದ್ದಾರೆ. ಒಂದು ಸುತ್ತಿನ ವಿಚಾರಣೆಗೂ ಪೊಲೀಸರು ರವೀಂದ್ರರ್ ಅವರನ್ನು ಕರೆಯಿಸಿಕೊಂಡಿದ್ದಾರೆ.  ಅಧಿಕಾರಿಗಳ ತನಿಖೆಗೆ ಸಹಕಾರ ನೀಡಿರುವ ರವೀಂದರ್, ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನೂ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗನನ್ನು ಪರಿಚಯಿಸಿದ ಮಿಸ್ ಮ್ಯಾಚ್ ನಟಿ ಮಹಾಲಕ್ಷ್ಮಿ

    ಮಗನನ್ನು ಪರಿಚಯಿಸಿದ ಮಿಸ್ ಮ್ಯಾಚ್ ನಟಿ ಮಹಾಲಕ್ಷ್ಮಿ

    ಡೂತಿ ನಿರ್ಮಾಪಕ ರವೀಂದರ್ ಅವರನ್ನು ಮದುವೆ ಆಗುವ ಮೂಲಕ ಸಖತ್ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ (Mahalakshmi), ಇದೀಗ ಮಗನ (son) ಕಾರಣದಿಂದಾಗಿ ಮತ್ತೆ ಟ್ರೋಲ್ ಆಗಿದ್ದಾರೆ. ಮೊದಲ ಗಂಡನೊಂದಿಗೆ ಇದ್ದಾಗ ಆಗಿದ್ದ ಮಗನನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದಾರೆ ಮಹಾಲಕ್ಷ್ಮಿ. ಮಗನನ್ನು ನೋಡಿದ ನೆಟ್ಟಿಗರು ಇಷ್ಟು ದೊಡ್ಡ ಮಗನಾ ನಿಮಗೆ ಎಂದು ಉದ್ಘಾರ ತೆಗೆದಿದ್ದಾರೆ.

    ಪ್ರೀತಿ ಕುರುಡು ಅಂತಾರೆ. ನಿರ್ಮಾಪಕ ರವೀಂದರ್ (Ravinder) ಮತ್ತು ನಟಿ ಮಹಾಲಕ್ಷ್ಮೀ ಬದುಕಿನಲ್ಲಿ ಅಕ್ಷರಶಃ ಅದು ನಿಜವಾಗಿದೆ. ವಯಸ್ಸಿನ ಅಂತರ, ಬ್ಯೂಟಿ, ತೂಕ ಎಲ್ಲವನ್ನೂ ಮೀರಿ ಇಬ್ಬರ ಬದುಕಿನಲ್ಲಿ ಪ್ರೇಮ್ ಕಹಾನಿ ಗೆದ್ದಿದೆ. ಹಾಗಾಗಿಯೇ ಇಬ್ಬರೂ ಸಪ್ತಪದಿ ತುಳಿದು ಸತಿಪತಿಯಾಗಿದ್ದಾರೆ. ಕೆಲವರಂತೂ ಈ ಮದುವೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದೊಂದು ಮಿಸ್ ಮ್ಯಾಚ್ (miss match) ಮದುವೆ ಎಂದು ಗೇಲಿ ಮಾಡಿದ್ದರು. ಈ ಬಗ್ಗೆ ಮಹಾಲಕ್ಷ್ಮಿಯಾಗಲಿ, ರವೀಂದರ್ ಆಗಲಿ ತಲೆ ಕೆಡಿಸಿಕೊಂಡಿಲ್ಲ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

    ರತಿಯಂತಿರುವ ಮಹಾಲಕ್ಷ್ಮೀ, ಸಮ ತೂಗುವ ರವೀಂದರ್ ಜೊತೆ ಮದುವೆ ಆಗಿದ್ದು ಹೇಗೆ? ಇಬ್ಬರೂ ಒಪ್ಪಿಗೆ ಸೂಚಿಸಿದ್ದು ಯಾವಾಗ? ಯಾರು ಮೊದಲು ಪ್ರಪೋಸ್ ಮಾಡಿದ್ದು ಹೀಗೆ ಹಲವಾರು ಪ್ರಶ್ನೆಗಳು ಜನರಲ್ಲಿ ಮೂಡಿದ್ದವು. ಈ ಎಲ್ಲದಕ್ಕೂ ಮಹಾಲಕ್ಷ್ಮಿ ಉತ್ತರ ಕೊಟ್ಟಿದ್ದರು. ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಟ್ಟುಕೊ ಎಂದು ಹೇಳುವ ಮೂಲಕ ಮೊದಲು ಪ್ರಪೋಸ್ ಮಾಡಿದ್ದು ರವೀಂದರ್ ಎನ್ನುವುದನ್ನು ಗುಟ್ಟು ರಟ್ಟು ಮಾಡಿದ್ದರು.

    ಈ ಜೋಡಿಯ ಲವ್ ಕಹಾನಿ ಶುರುವಾಗಿದ್ದೇ ಒಂದು ಇಂಟ್ರಸ್ಟಿಂಗ್ ಸ್ಟೋರಿ. ಮಹಾಲಕ್ಷ್ಮಿ ಕೇವಲ ನಿರೂಪಕಿ ಮಾತ್ರವಲ್ಲ, ಕಿರುತೆರೆ ನಟಿ ಕೂಡ. ರವೀಂದರ್ ಕೂಡ ಕಿರುತೆರೆಯ ಲೋಕದಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಮೊದಲ ಪ್ರೇಮ ಶುರುವಾಗಿದ್ದೇ ಈ ಧಾರಾವಾಹಿಯ ಮೂಲಕ. ಮೊದಲು ನಟಿಯಾಗಿ ಪರಿಚಯ. ಆಮೇಲೆ ಸ್ನೇಹ. ಸ್ನೇಹ ವಿಶ್ವಾಸವಾಗಿ, ಅದು ಸಂದೇಶವಾಗಿ ಹರಿದು ಬಂದು ಇಬ್ಬರನ್ನೂ ಒಂದಾಗಿಸಿದೆ.

     

    ಅದೊಂದು ರಾತ್ರಿ ಮಹಾಲಕ್ಷ್ಮಿ ಮೊಬೈಲ್ ಗೆ ಬಂದ ಸಂದೇಶ ಸ್ವತಃ ಅವರನ್ನೇ ಅಚ್ಚರಿಗೆ ನೂಕಿದೆ. ಆ ಕಡೆಯಿಂದ ಸಂದೇಶ ಕಳುಹಿಸಿದ್ದು ರವೀಂದರ್. ನೀವು ನನಗೆ ಇಷ್ಟವಾಗಿದ್ದೀರಿ. ಮದುವೆ ಯಾಕೆ ಆಗಬಾರದು ಎನ್ನುವ ರವೀಂದರ್ ಕೋರಿಕೆಯನ್ನು ಕೆಲವು ದಿನಗಳ ನಂತರ ಮಹಾಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಅಲ್ಲಿಂದ ಶುರುವಾದ ಪ್ರೇಮಕಾವ್ಯ ಮದುವೆಯಲ್ಲಿ ಅಂತ್ಯಗೊಂಡಿದೆ.

  • ಪ್ರೇಮಿಗಳ ದಿನದಂದು ಪತ್ನಿಗೆ ರೊಮ್ಯಾಂಟಿಕ್ ಆಗಿ ನಿರ್ಮಾಪಕ ರವೀಂದ್ರ ವಿಶ್

    ಪ್ರೇಮಿಗಳ ದಿನದಂದು ಪತ್ನಿಗೆ ರೊಮ್ಯಾಂಟಿಕ್ ಆಗಿ ನಿರ್ಮಾಪಕ ರವೀಂದ್ರ ವಿಶ್

    ಕಾಲಿವುಡ್ (Kollywood) ನಿರ್ಮಾಪಕ ರವೀಂದ್ರ (Producer Ravindra) ಮತ್ತು ನಟಿ ಮಹಾಲಕ್ಷ್ಮಿ(Actress Mahalakshmi) ಅವರ ದಾಂಪತ್ಯ ಜೀವನವನ್ನ ಖುಷಿ ಖುಷಿಯಾಗಿ ಕಳೆಯುತ್ತಿದ್ದಾರೆ. ಇದೀಗ ಪ್ರೇಮಿಗಳು ದಿನದಂದು ಪತ್ನಿ ಮಹಾಲಕ್ಷ್ಮಿಗೆ ವಿಶೇಷ ಪೋಸ್ಟ್ ಮೂಲಕ ನಿರ್ಮಾಪಕ ರವೀಂದ್ರ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಕಿಯಾರಾ- ಸಿದ್ಧಾರ್ಥ್‌ನ ನೋಡಿದ್ರೆ ಹೊಟ್ಟೆ ಉರಿಯುತ್ತದೆ: ರಾಖಿ ಸಾವಂತ್

    ಮದುವೆಯಾದ (Wedding) ದಿನದಿಂದ ಇಂದಿನವರೆಗೂ ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಮಹಾಲಕ್ಷ್ಮಿಗೆ ಮತ್ತು ರವೀಂದ್ರ ಜೋಡಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪತ್ನಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನದಂದು ರೊಮ್ಯಾಂಟಿಕ್ ಆಗಿ ಪತಿ ರವೀಂದ್ರ ಶುಭಕೋರಿದ್ದಾರೆ.

    ಯಾವುದೇ ನಿರೀಕ್ಷೆಗಳಿಲ್ಲದೇ ಪ್ರೀತಿಯನ್ನು ಹೇಳಿ. ಆ ಪ್ರೀತಿ ಒಂದು ಕ್ಷಣವೂ ಕಡಿಮೆಯಾಗದಿದ್ದರೆ ಅದೇ ನಿಜವಾದ ಪ್ರೀತಿ. ನನ್ನ ಪ್ರೀತಿ ನಿಜವಾದ ಪ್ರೀತಿ ಅಲ್ಲವೇ? ಮಹಾಲಕ್ಷ್ಮಿಗೆ ಪ್ರೀತಿಯಲ್ಲಿ ಬಿದ್ದಾಗ ಅದರಲ್ಲಿ ಶೇ.1ರಷ್ಟು ಸುಳ್ಳಿರಲಿಲ್ಲ ಎಂದಿದ್ದಾರೆ.

    ನಾವು ಇತರರ ಬಗ್ಗೆ ಹೊಂದಿರುವ ಗೌರವ ಮತ್ತು ಪ್ರೀತಿಯಿಂದಾಗಿ ಸುಂದರವಾದ ಜೀವನವು ಏನೆಂಬುದು ತಿಳಿಯಲಿದೆ. ಸುಂದರವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಈ ಮೂಲಕ ನಮ್ಮಿಬ್ಬರ ಪ್ರೀತಿ, ಗೌರವ ಹೆಚ್ಚುತ್ತದೆ ಎಂದಿದ್ದಾರೆ. ನಾವು ಪ್ರೀತಿಸುವ ಜನರಿಗಿಂತ ನಾವು ಪ್ರೀತಿಸುವ ಜನರು ನಮ್ಮನ್ನು ಹೆಚ್ಚು ಪ್ರೀತಿಸುವುದು ಜೀವನ. ಆ ಜೀವನ ನನ್ನ ಹೆಂಡತಿ ಹ್ಯಾಪಿ ವ್ಯಾಲೆಂಟೆನ್ಸ್ ಡೇ ಡಿಯರ್ ಎಂದು ಪತ್ನಿಗೆ ರವೀಂದ್ರ ವಿಶ್ ಮಾಡಿದ್ದಾರೆ. ನಿರ್ಮಾಪಕ ರವೀಂದ್ರ ಅವರ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ, ಸಿಹಿಸುದ್ದಿ ಯಾವಾಗ ಎಂದ ಫ್ಯಾನ್ಸ್

    ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ, ಸಿಹಿಸುದ್ದಿ ಯಾವಾಗ ಎಂದ ಫ್ಯಾನ್ಸ್

    ಮಿಳು ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದ್ರ (Producer Ravindra) ಮದುವೆಯಾದ ದಿನಗಳಿಂದ ಸದಾ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಬೆಡ್‌ರೂಮ್ ಫೋಟೋ ಹಂಚಿಕೊಂಡಿದ್ದು, ಮಗುವಿನ (Child) ‌ಬಗ್ಗೆ ಗುಡ್ ನ್ಯೂಸ್ ಯಾವಾಗ ಕೊಡ್ತೀರಾ ಎಂದು ಬಗೆ ಬಗೆಯ ಕಾಮೆಂಟ್ ಮಾಡ್ತಿದ್ದಾರೆ.

    ಸಾಕಷ್ಟು ಟ್ರೋಲ್ ಮತ್ತು ಟೀಕೆಯ ಮಧ್ಯೆಯೂ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ (Producer Ravindra) ಖುಷಿಯಿಂದ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಈ ವಿಶೇಷ ಜೋಡಿಯ ಫೋಟೋಸ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಇದೀಗ ಮಹಾಲಕ್ಷ್ಮಿ ಮಲಗುವ ಕೋಣೆಯ ಫೋಟೋವೊಂದನ್ನ ಶೇರ್‌ ಮಾಡಿದ್ದಾರೆ. ಇದರಲ್ಲಿ ಅವರು ನೈಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ನೈಟ್ ಡ್ರೆಸ್ ಧರಿಸಿ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ನಟಿಗೆ ಪ್ರಶ್ನೆಗಳ ಸುರಿಮಳೆ ಶುರುವಾಗಿದೆ. ಮಹಾಲಕ್ಷ್ಮಿ ಮದುವೆಯಾಗಿ ಈಗಾಗಲೇ ನಾಲ್ಕು ತಿಂಗಳಾಗಿದೆ. ಹಾಗಾಗಿ ಅಭಿಮಾನಿಗಳು ಯಾವಾಗ ಗುಡ್‌ನ್ಯೂಸ್ ಕೊಡುತ್ತೀರಿ ಎಂದು ಕಾಮೆಂಟ್ ಮಾಡಿ ಕೇಳುತ್ತಿದ್ದಾರೆ.

    ನೀವು ಯಾವಾಗ ಮಗುವಿಗೆ ಜನ್ಮ ಕೊಡುತ್ತೀರಿ. ನಿಮ್ಮ ಈ ಶುಭ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರಳತೆ ಯಾವಾಗಲೂ ಮನುಷ್ಯನ ಗುರುತಾಗಿರಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಇದನ್ನೂ ಓದಿ: ಮಗಳ ಬಟ್ಟೆ ಧರಿಸಿದ್ದೀರಾ ಎಂದು ಅನುಷ್ಕಾ ಶರ್ಮಾಗೆ ನೆಟ್ಟಿಗರಿಂದ ತರಾಟೆ

    ಇನ್ನೂ ನಟಿ ಮಹಾಲಕ್ಷ್ಮಿ ಅವರು ರವೀಂದ್ರ ಜೊತೆ ಎರಡನೇ ಮದುವೆಯಾಗಿದ್ದಾರೆ. ಇದಕ್ಕೂ ಮುನ್ನ ಅವರ ವಿವಾಹವಾಗಿದ್ದು, ನಂತರ ಡಿವೋರ್ಸ್‌ ಆಗಿದೆ. ಈಗ ಪತಿ ರವೀಂದ್ರ ಜೊತೆ ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

    ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

    ಕಾಲಿವುಡ್ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಚಂದ್ರಶೇಖರ್ ಮದುವೆಯಾಗಿ ನೂರು ದಿನಗಳನ್ನು ಪೂರೈಸಿದ್ದಾರೆ. ಈ ಸಂಭ್ರಮವನ್ನು ಸ್ವತಃ ರವೀಂದ್ರ ಅವರೇ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ. ನಾನು ಇಂದು ಹ್ಯಾಪಿ ಆಗಿ ಇದ್ದೇನೆ ಅಂದರೆ, ಅದಕ್ಕೆ ನೀನೇ ಕಾರಣ ಅಮ್ಮು ಎಂದು ಅವರು ಬರೆದುಕೊಂಡಿದ್ದಾರೆ. ಕಿರುತೆರೆ ನಟಿಯಾಗಿ ಸಾಕಷ್ಟು ಫೇಮಸ್ ಆಗಿದ್ದ ಮಹಾಲಕ್ಷ್ಮಿ, ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದಾಗ ಅಭಿಮಾನಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

    ಈ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಮಿಸ್ ಮ್ಯಾಚ್ ಜೋಡಿ ಎಂದು ಟ್ರೆಂಡ್ ಕೂಡ ಆಗಿತ್ತು. ಕೆಲ ದಿನಗಳ ನಂತರ  ಈ ಜೋಡಿಯ ಹಿನ್ನೆಲೆಯನ್ನು ಕೆದಕಲಾಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆ ಎಂದು ಹೇಳಲಾಗಿತ್ತು. ಏನೆಲ್ಲ ನೆಗೆಟಿವ್ ಕಾಮೆಂಟ್ ಬಂದರೂ, ಇಬ್ಬರೂ ನಗು ನಗುತ್ತಲೇ ಅವುಗಳನ್ನು ತಗೆದುಕೊಂಡರು. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಮದುವೆ ನಂತರದ ದಿನಗಳನ್ನು ರವೀಂದ್ರ ಆಗಾಗ್ಗೆ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಬದುಕಿಗೆ ಮಹಾಲಕ್ಷ್ಮಿ ಬಂದ ನಂತರ ಸಾಕಷ್ಟು ಬದಲಾವಣೆಗಳನ್ನು ಕಂಡೆ ಎಂದು ಮೊನ್ನೆಯಷ್ಟೇ ಅವರು ಬರೆದುಕೊಂಡಿದ್ದರು. ಇದೀಗ ನೂರರ ಸಂಭ್ರಮಕ್ಕೂ ಅವರು ಭಾವುಕ ಪೋಸ್ಟ್ ಹಾಕಿದ್ದಾರೆ. ಅವರ ಬದುಕಿನಲ್ಲಿ ಉಲ್ಲಾಸ ಬರುವುದಕ್ಕೆ ಕಾರಣ ಪತ್ನಿ ಮಹಾಲಕ್ಷ್ಮಿ ಎಂದು ಅವರಿಗೆ ಕ್ರೆಡಿಟ್ ಕೊಟ್ಟಿದ್ದಾರೆ.

    ದುಡ್ಡಿಗಾಗಿ ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿ ಬಿಡಲಾಯಿತು. ರವೀಂದ್ರ ಅವರ ಬಾಡಿ ಶೇಮಿಂಗ್ ಮಾಡಲಾಯಿತು. ಅಲ್ಲದೇ, ಇಬ್ಬರ ಬಗ್ಗೆಯೂ ಹಲವು ಗಾಸಿಪ್ ಗಳನ್ನು ಹಂಚಲಾಯಿತು. ಏನೇ ಮಾಡಿದರೂ, ಇಬ್ಬರೂ ಜೋಡಿಯೂ ಖುಷಿ ಖುಷಿಯಾಗಿ ತಗೆದುಕೊಂಡರು. ಹಲವರಿಗೆ ಉತ್ತರವನ್ನೂ ಕೊಟ್ಟರು. ಏನೇ ಆಗಲಿ ಬದುಕು ನಗುನಗುತ್ತಲೇ ಇರುಬೇಕು ಎನ್ನುವುದು ಇವರ ಫಿಲಾಸಫಿ.

    Live Tv
    [brid partner=56869869 player=32851 video=960834 autoplay=true]

  • ನನ್ನ ಹೆಂಡತಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ: ಸೀದು ಹೋದ ಮೊಟ್ಟೆ ಹಂಚಿಕೊಂಡ ರವೀಂದ್ರ

    ನನ್ನ ಹೆಂಡತಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ: ಸೀದು ಹೋದ ಮೊಟ್ಟೆ ಹಂಚಿಕೊಂಡ ರವೀಂದ್ರ

    ಮಿಸ್ ಮ್ಯಾಚ್ ಜೋಡಿ ಎಂದೇ ಖ್ಯಾತರಾಗಿರುವ ತಮಿಳಿನ ರವೀಂದ್ರ ಚಂದ್ರಶೇಖರ್ (Ravindra) ಮತ್ತು ಮಹಾಲಕ್ಷ್ಮಿ ಜೋಡಿ ಇದೀಗ ಮೊಟ್ಟೆ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಮೊನ್ನೆಯಷ್ಟೇ ಮಧ್ಯರಾತ್ರಿ ಹೆಂಡತಿಯನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ಬಿರಿಯಾನಿ ಕೊಡಿಸಿದ್ದ ರವೀಂದ್ರ, ಇದೀಗ ಮನೆಯಲ್ಲೇ ಮೊಟ್ಟೆ ಬೇಯಿಸಲು ಹೋಗಿ ಹೆಂಡತಿ ಏನು ಮಾಡಿದ್ದಾಳೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸೀದು ಹೋದೆ ಮೊಟ್ಟೆಯ ಫೋಟೋವನ್ನೂ ಅವರು ಅಪ್ ಲೋಡ್ ಮಾಡಿದ್ದಾರೆ.

    ಮಹಾಲಕ್ಷ್ಮಿಯನ್ನು (Mahalakshmi) ಮದುವೆಯಾದ ನಂತರ ಶೂಟಿಂಗ್ ಸ್ಥಳಕ್ಕೆ ಮನೆಯಿಂದಲೇ ಊಟ ತಗೆದುಕೊಂಡು ಹೋಗಿದ್ದರು ರವೀಂದ್ರ. ಆನಂತರ ಬೇರೆ ಬೇರೆ ಹೋಟೆಲ್ ಗಳಲ್ಲಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಊಟ ಕೊಡಿಸಿದ್ದರು. ಬಹುಶಃ ಹೋಟೆಲ್ ಊಟ ಸಾಕು ಅನಿಸಿರಬೇಕು. ಹಾಗಾಗಿಯೇ ಹೆಂಡತಿಗೆ ಮೊಟ್ಟೆ ಬೇಯಿಸಲು ರವೀಂದ್ರ ಹೇಳಿದ್ದರಂತೆ. ಆದರೆ, ಮಹಾಲಕ್ಷ್ಮಿಗೆ ಮೊಟ್ಟೆಯನ್ನೂ ಸರಿಯಾಗಿ ಬೇಯಿಸಲು ಬರುವುದಿಲ್ಲ ಎನ್ನುವುದು ಇವರ ಆಕ್ಷೇಪನೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    ಎರಡು ಮೊಟ್ಟೆಗಳನ್ನು (eggs) ಬೇಯಿಸಲು ಇಟ್ಟಿದ್ದ ಮಹಾಲಕ್ಷ್ಮಿ, ಅದನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕಾಗಿ ಮೊಟ್ಟೆಗಳು ಸೀದು ಹೋಗಿವೆ. ಅವುಗಳನ್ನು ಫೋಟೋ ತಗೆದಿರುವ ರವೀಂದ್ರ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯ ಕುಕ್ಕಿಂಗ್ ಸ್ಕಿಲ್ಸ್ ಬಗ್ಗೆ ತಮಾಷೆಯಾಗಿಯೇ ಅವರು ಶೇರ್ ಮಾಡಿದ್ದಾರೆ. ಮೊಟ್ಟೆ ಸೀದು ಹೋಗಿದ್ದನ್ನು ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ನ್ಯೂ ಲೈಫ್ ಮೈ ವೈಫ್ ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]