Tag: Mahakumbh Mela

  • ಶಿವಗಂಗಾ ಬಸವರಾಜ್‍ಗೆ ಸಚಿವ ಸ್ಥಾನ ಸಿಗಲಿ – ಮಹಾ ಕುಂಭಮೇಳದಲ್ಲಿ ಅಭಿಮಾನಿಗಳಿಂದ ಪ್ರಾರ್ಥನೆ

    ಶಿವಗಂಗಾ ಬಸವರಾಜ್‍ಗೆ ಸಚಿವ ಸ್ಥಾನ ಸಿಗಲಿ – ಮಹಾ ಕುಂಭಮೇಳದಲ್ಲಿ ಅಭಿಮಾನಿಗಳಿಂದ ಪ್ರಾರ್ಥನೆ

    ದಾವಣಗೆರೆ: ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಅಭಿಮಾನಿಗಳು ಅವರ ಫೋಟೋ ಹಿಡಿದುಕೊಂಡು ಮಹಾಕುಂಭ ಮೇಳದಲ್ಲಿ (Mahakumbh Mela) ಬುಧವಾರ (ಫೆ.26) ಪುಣ್ಯ ಸ್ನಾನ ಮಾಡಿದ್ದಾರೆ.

    ಶಾಸಕರಿಗೆ ನಿಗಮ ಮಂಡಳಿ ಅಥವಾ ಸಚಿವ ಸ್ಥಾನ ಸಿಗುವಂತೆ ಅಭಿಮಾನಿಗಳು ಪ್ರಾಥನೆ ಸಲ್ಲಿಸಿ, ಹರಕೆ ಮಾಡಿಕೊಂಡಿದ್ದಾರೆ. ಬಳಿಕ ಪುಣ್ಯ ಸ್ನಾನ ಮಾಡಿದ್ದಾರೆ. ಇದನ್ನೂ ಓದಿ: ಶ್ರೀಶೈಲಂ ಸುರಂಗ ಕುಸಿತ – 5ನೇ ದಿನವೂ ರಕ್ಷಣಾ ಕಾರ್ಯ, 10,000 ಘನ ಮೀಟ‌ರ್ ಕೆಸರು ತೆಗೆಯುವುದೇ ಸವಾಲು!

    ಚನ್ನಗಿರಿಯ ಕಾಂಗ್ರೆಸ್ ಮುಖಂಡ ಶಶಿಧರ್, ವಸಂತ್ ಹಾಗೂ ಸುರೇಶ್ ಹರಕೆ ಸಲ್ಲಿಸಿದ್ದು, ಈ ಬಾರಿ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಶಿವಗಂಗಾ ಬಸವರಾಜ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಬೇಡಿಕೊಂಡಿದ್ದಾರೆ.

    ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್, ಡಿಸಿಎಂ ಡಿಕೆಶಿಯವರ ಆಪ್ತರಾಗಿದ್ದಾರೆ. ಇದನ್ನೂ ಓದಿ: ಟ್ರಾಫಿಕ್‌ಗೆ ಮುಕ್ತಿ ಹಾಡಲು ಮುಂದಾದ ಬಿಬಿಎಂಪಿ – 10,000 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ

  • ಸರ್ಕಾರಿ ವೆಚ್ಚದಲ್ಲೇ ಮಹಾ ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ಹೊರಡಲು ಮುಂದಾದ ಶಾಸಕರು

    ಸರ್ಕಾರಿ ವೆಚ್ಚದಲ್ಲೇ ಮಹಾ ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ಹೊರಡಲು ಮುಂದಾದ ಶಾಸಕರು

    ಬೆಂಗಳೂರು: ಪ್ರಯಾಗ್‌ರಾಜ್‌ನ (Prayagraj) ಮಹಾ ಕುಂಭಮೇಳದಲ್ಲಿ (MahaKumbh Mela) ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆ ಆಗುತ್ತಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ್ದರು. ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಮಹಾ ಕುಂಭಮೇಳಕ್ಕೆ ಹೋಗಲು ಶಾಸಕರಿಗೆ ಆಸಕ್ತಿ ಹೆಚ್ಚಿದಂತಿದೆ.

    ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಸರ್ಕಾರಿ ಹಣ ಬಳಕೆಗೆ ವಿಧಾನಸಭೆಯ ವಸತಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದೆ. ಅದಕ್ಕಾಗಿ ಇದೇ ಫೆ.23 ರಿಂದ 25ರ ವರೆಗೆ ಶಾಸಕರ ತಂಡ ಪ್ರಯಾಗ್‌ರಾಜ್‌ಗೆ ಪ್ರವಾಸ ಹೊರಡಲು ಸಿದ್ಧತೆ ನಡೆಸಿದೆ. ಶಾಸಕರಾದ ಸಿ.ಪಿ ಯೋಗೇಶ್ವರ್, ಹೆಚ್‌.ಸಿ ಬಾಲಕೃಷ್ಣ, ಬಿ.ನಾಗೇಂದ್ರ, ಬಿ.ಶಿವಣ್ಣ, ಶಿವರಾಮ್ ಹೆಬ್ಬಾರ್ ಭಾಗಿರಥಿ ಮುರುಳ್ಯಾ, ಸಿಮೆಂಟ್ ಮಂಜು, ಡಾಕ್ಟರ್ ಚಂದ್ರು ಲಮಾಣಿ, ಖನಿ ಫಾತಿಮಾ, ಸ್ವರೂಪ್ ಪ್ರಕಾಶ್, ರಾಜು ಕಾಗೆ ಸಮಿತಿಯಲ್ಲಿದ್ದಾರೆ.

    ಶಾಸಕರ ಒತ್ತಾಯಕ್ಕೆ ಮಣಿದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದ ಸಮಿತಿ ಒಪ್ಪಿಗೆ ಸೂಚಿಸಿದೆ. ಬಳಿಕ ವಸತಿ ಸಮಿತಿಯ ಪ್ರಯಾಗರಾಜ್ ಪ್ರವಾಸಕ್ಕೆ ಸ್ಪೀಕರ್ ಅನುಮೋದನೆ ನೀಡಿದ್ದಾರೆ.

    ಫೆ.23ರಂದು ಶಾಸಕರ ನಿಯೋಗ ಬೆಂಗಳೂರಿನಿಂದ (Bengaluru) ತೆರಳಲಿದ್ದು, ಲಕ್ನೋ, ಪ್ರಯಾಗರಾಜ್, ಅಯೋಧ್ಯ, ವಾರಣಾಸಿಯಲ್ಲಿ ಪ್ರಯಾಣ ಬೆಳೆಸಲಿದೆ. ಹಣಕಾಸು ಇಲಾಖೆಯಿಂದಲೂ ಪ್ರವಾಸದ ವೆಚ್ಚಕ್ಕೆ ಸಹಮತ ನೀಡಲಾಗಿದೆ.

    ಅಧ್ಯಯನ ಪ್ರವಾಸಕ್ಕಿರುವ ಅವಕಾಶ ಬಳಕೆ ಮಾಡಿಕೊಂಡು ಪ್ರಯಾಗರಾಜ್ ಕುಂಭಮೇಳದಲ್ಲಿ ಶಾಸಕರು ಪುಣ್ಯಸ್ನಾನ ಮಾಡಲು ಮುಂದಾಗಿದ್ದಾರೆ.

  • ಮಹಾಕುಂಭ ಮೇಳದಲ್ಲಿ ಕಾಲ್ತುಳಿತ – 10 ಸಾವು

    ಮಹಾಕುಂಭ ಮೇಳದಲ್ಲಿ ಕಾಲ್ತುಳಿತ – 10 ಸಾವು

    ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ (Mahakumbh )ಕಾಲ್ತುಳಿತ (Stampede) ಸಂಭವಿಸಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಇದು ಮೌನಿ ಅಮಾವಾಸ್ಯೆ (Mauni Amavasya) ಹಿನ್ನೆಲೆಯಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತವಾಗಿದೆ.

     

    ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನ ಸೆಕ್ಟರ್ 2 ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ.

    ಇಂದು ಒಂದೇ ದಿನ ಹತ್ತು ಕೋಟಿ ಜನರು ಅಮೃತ ಸ್ನಾನ ಮಾಡುವ ನಿರೀಕ್ಷೆ ಮಾಡಲಾಗಿತ್ತು.