Tag: Mahakali

  • ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prasanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ʻಜೈ ಹನುಮಾನ್ʼ (Jai Hanuman) ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್ಹೀರೋ ಯೂನಿವರ್ಸ್‌ನ 3ನೇ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ವರ್ಮಾ. ಇದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯನ್ನು ಹೊಂದಿರಲಿದೆ. ಈ ಚಿತ್ರಕ್ಕೆ ʻಮಹಾಕಾಳಿʼ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

    ಕುಂದಾಪುರದ ಬೆಡಗಿಗೆ ಭೂಮಿ ಶೆಟ್ಟಿ (Bhoomi Shetty) ಮಹಾಕಾಳಿ ಅವತಾರವೆತ್ತಿದ್ದಾರೆ. ಫಸ್ಟ್ ಲುಕ್‌ನಲ್ಲಿ ಭೂಮಿ ಶೆಟ್ಟಿ ಮುಖವನ್ನು ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಅಲಂಕಾರಗೊಳಿಸಲಾಗಿದೆ. ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟು ದೈವಿಕ ಅನುಭವ ನೀಡುವ ಗೆಟಪ್ ನಲ್ಲಿ ಭೂಮಿ ಕಾಣಿಸಿಕೊಂಡಿದ್ದಾರೆ.

    ಪ್ರಶಾಂತ್ ವರ್ಮಾ ತಮ್ಮದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿ ಮಹಾಕಾಳಿ ಚಿತ್ರ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು, ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ.

    ಹಾಗಾದರೆ ಮಹಾಕಾಳಿ ಸಿನಿಮಾದಲ್ಲಿ ಏನಿರಲಿದೆ? ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಮಹಾಕಾಳಿ ಸಿನಿಮಾವನ್ನು ಆರ್ಕೆಎಂಡಿ ಸ್ಟುಡಿಯೋಸ್ ಬ್ಯಾನರ್ ಅಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾವನ್ನು ಭಾರತೀಯ ಭಾಷೆ ಮಾತ್ರವಲ್ಲದೆ ಇತರ ವಿದೇಶಿ ಭಾಷೆಗಳಲ್ಲಿಯೂ ಚಿತ್ರ ಮೂಡಿ ಬರಲಿದೆ. ಹನುಮಾನ್ ಸಿನಿಮಾ ಜಪಾನ್ ಹಾಗೂ ಇತರ ಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡಿತ್ತು.

  • ‌ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್‌’ ಡೈರೆಕ್ಟರ್- ಚಿತ್ರದ ಪೋಸ್ಟರ್‌ ರಿಲೀಸ್

    ‌ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್‌’ ಡೈರೆಕ್ಟರ್- ಚಿತ್ರದ ಪೋಸ್ಟರ್‌ ರಿಲೀಸ್

    ‘ಹನುಮಾನ್’ (Hanuman) ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prashanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಹನುಮಾನ್ 2’ ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ಅವರು ‘ಮಹಾಕಾಳಿ’ ಕಥೆಯನ್ನು ಹೇಳೋದ್ದಕ್ಕೆ ಹೊರಟಿದ್ದಾರೆ.

    ಸಿನಿಮ್ಯಾಟಿಕ್ ಯೂನಿವರ್ಸ್ ನಡಿ ಪ್ರಶಾಂತ್ ವರ್ಮಾ ಮೂರನೇ ಚಿತ್ರ ಘೋಷಣೆ ಮಾಡಿದ್ದಾರೆ. ‘ಮಹಾಕಾಳಿ’ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಆದ್ರೆ ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿರುವುದು ವಿಶೇಷ. ಈ ಹಿಂದೆ ‘ಮಾರ್ಟಿನ್ ಲೂಥರ್ ಕಿಂಗ್’ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಅವರು ‘ಮಹಾಕಾಳಿ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿ ಮಾತೆಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಇದೀಗ ‘ಮಹಾಕಾಳಿ’ (Mahakali) ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಹುಡುಗಿಯೊಬ್ಬಳು ಹುಲಿಯ ಹಣೆ ಮೇಲೆ ತಲೆ ಇಟ್ಟು ನಿಂತಿರುವ ಲುಕ್ ನ್ನು ಅನಾವರಣ ಮಾಡಲಾಗಿದೆ. ಇದನ್ನೂ ಓದಿ:ಮಗುವಿನ ಮುಖ ರಿವೀಲ್ ಮಾಡಿದ ‘ಲಕ್ಷ್ಮಿ ಬಾರಮ್ಮ’ ನಟಿ ಕವಿತಾ

    ‘ಮಹಾಕಾಳಿ’ ಸಿನಿಮಾವನ್ನು ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಮಹಾಕಾಳಿ’ ಸಿನಿಮಾವು ಬಹುಭಾಷೆಗಳಲ್ಲಿ ಮೂಡಿ ಬರಲಿದೆ. ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ಉಳಿದ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

  • ಭೂಮಿಯೊಳಗೆ ದೇವರ ವಿಗ್ರಹಗಳಿದ್ದು, ಹೊರ ತೆಗೆಯಿರಿ- ಮಹಿಳೆ ಪ್ರತಿಭಟನೆ

    ಭೂಮಿಯೊಳಗೆ ದೇವರ ವಿಗ್ರಹಗಳಿದ್ದು, ಹೊರ ತೆಗೆಯಿರಿ- ಮಹಿಳೆ ಪ್ರತಿಭಟನೆ

    ಮಡಿಕೇರಿ: ಭೂಮಿಯೊಳಗೆ ಹುದುಗಿರುವ ಮಹಾಕಾಳಿ ದೇವರ ವಿಗ್ರಹಗಳನ್ನು ಹೊರ ತೆಗೆಯಲು ಒತ್ತಾಯಿಸಿ ಮಹಿಳೆಯೊಬ್ಬರು ಪಟ್ಟಣ ಪಂಚಾಯ್ತಿ ಮುಂದೆ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣ ಪಂಚಾಯ್ತಿ ಅವರಣದಲ್ಲಿ ನಡೆದಿದೆ.

    ಕುಶಾಲನಗರದ ಶಾಂತಲಾ ಅಕ್ಷರಶಕ್ತಿ ಎಂಬ ಮಹಿಳೆ ಕಳೆದ ಹಲವು ವರ್ಷಗಳಿಂದಲೂ ತನ್ನ ಈ ಬೇಡಿಕೆಯನ್ನು ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸೇರಿದಂತೆ ಹಲವು ಇಲಾಖೆಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದ್ದರು. ಆದರೂ ಕೂಡ ಇದೂವರೆಗೆ ಅವರ ಬೇಡಿಕೆ ಈಡೇರಿಸಲು ಯಾರೂ ಮುಂದಾಗಿಲ್ಲ ಎಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    ಕುಶಾಲನಗರ ಪಟ್ಟಣ ಪಂಚಾಯ್ತಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಛೇರಿ ಹಿಂಭಾಗ ಕಟ್ಟಡವೊಂದರಲ್ಲಿ 20 ಅಡಿಗಳ ಆಳದಲ್ಲಿ ದೇವರ ವಿಗ್ರಹಗಳು ಹುದುಗಿವೆ. ತನ್ನ ಕನಸಿನಲ್ಲಿ ಕಾಣಿಸಿಕೊಳ್ಳುವ ದೇವತೆಗಳು ವಿಗ್ರಹಕ್ಕೆ ಮುಕ್ತಿ ಕಲ್ಪಿಸಲು ತನಗೆ ಸೂಚಿಸುತ್ತಿದ್ದಾರೆ. ಆದರೆ ಇದನ್ನು ಸಾಕಾರಗೊಳಿಸಲು ಯಾವುದೇ ಅಧಿಕಾರಿಗಳು ಸಹಕಾರ ತೋರುತ್ತಿಲ್ಲ. ಆದ್ದರಿಂದ ಕೂಡಲೆ ತನ್ನ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಏಕಾಂಗಿಯಾಗಿ ಪಟ್ಟಣ ಪಂಚಾಯ್ತಿ ಮುಂಭಾಗ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೇ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಈ ಬಗ್ಗೆ ಅನುಮತಿ ಕಲ್ಪಿಸುವವರೆಗೆ ಸತ್ಯಾಗ್ರಹ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.