Tag: mahadevappa

  • ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

    ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

    – ಸಿಎಂ ಡಿನ್ನರ್ ಪಾರ್ಟಿ ಅಜೆಂಡಾ ಊಟ ಅಷ್ಟೆ, ನವೆಂಬರ್ ಕ್ರಾಂತಿ ಯಾವುದು ಇಲ್ಲ

    ಬೆಂಗಳೂರು: ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ ಯಾವುದೇ ಪೊಲಿಟಿಕಲ್ ಮೀಟಿಂಗ್ ಮಾಡಿಲ್ಲ ಎಂದು ಗೃಹಸಚಿವ ಪರಮೇಶ್ವರ್ (Parameshwar) ಸ್ಪಷ್ಟಪಡಿಸಿದ್ದಾರೆ.

    ಗುರುವಾರ ಮಹದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ (Satish Jarkiholi) ಅಪಾರ್ಟ್ಮೆಂಟ್‌ನಲ್ಲಿ ಸಭೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಸಭೆಯಲ್ಲಿ ಯಾವುದೇ ವಿಶೇಷ ಇಲ್ಲ. ಮಾಧ್ಯಮಗಳಿಗೆ ಯಾವ ರೀತಿ ಕಣ್ಣಿಗೆ ಕಾಣಿಸುತ್ತೆ ಅಂತ ಗೊತ್ತಿಲ್ಲ. ಹಾಗೆ ಸಭೆ ಮಾಡಿರೋದು ಮೊದಲ ಬಾರಿ ಅಲ್ಲ. ಅನೇಕ ಬಾರಿ ನಾನು ಜಾರಕಿಹೊಳಿ, ಮಹದೇವಪ್ಪ ಸಭೆ ಮಾಡಿದ್ದೇವೆ. ನಾವೆಲ್ಲ ಸ್ನೇಹಿತರು, ಕೆಲವು ವಿಷಯಗಳು ಚರ್ಚೆ ಮಾಡಬೇಕು ಅಂದಾಗ ಭೇಟಿ ಮಾಡುತ್ತೇವೆ. ಅದು ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಂಪುಟ ಪುನರ್‌ಚನೆ ವದಂತಿ ಬೆನ್ನಲ್ಲೇ ಮೂವರು ಸಚಿವರಿಂದ ಬ್ರೇಕ್‌ಫಾಸ್ಟ್‌ ಮೀಟಿಂಗ್‌

    ರಾಜಣ್ಣ ಮಂತ್ರಿ ಅಲ್ಲ ಅದಕ್ಕೆ ಬಂದಿರಲಿಲ್ಲ. ನಿನ್ನೆ ಕ್ಯಾಬಿನೆಟ್ ಸಭೆ ಇತ್ತು. ಕೆಲವು ವಿಷಯ ಸೂಕ್ಷ್ಮ ಇತ್ತು ಹಾಗೇ ಮಾತಾಡಿಕೊಂಡು, ತಿಂಡಿ ತಿಂದು ಹೋಗೋಣ ಅಂತ ಸಭೆ ಮಾಡಿದ್ವಿ. ಅದೊಂದು ಸಾಮಾನ್ಯ ಮೀಟಿಂಗ್ ಅಷ್ಟೇ. ಈ ಹಿಂದೆ ಬೇಕಾದಷ್ಟು ಬಾರಿ ನಾವು ಸಭೆ ಮಾಡಿದ್ದೇವೆ. ಇದೇನು ಮೊದಲ ಸಭೆ ಅಲ್ಲ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಮನೆಯಲ್ಲಿ ಅನೇಕ ಬಾರಿ ಮೀಟ್ ಮಾಡಿದ್ದೇವೆ. ಹೊಸದೇನು ಅಲ್ಲ ಎಂದಿದ್ದಾರೆ.

    ದಲಿತ ನಾಯಕರ ಬೇಡಿಕೆ ಕಾಂಗ್ರೆಸ್‌ನಲ್ಲಿ ಈಡೇರುತ್ತಿಲ್ಲ ಅಂತ ಯಾರು ಹೇಳಿದ್ರು? ಹೆಚ್ಚುವರಿ ಡಿಸಿಎಂ ಬೇಕು ಅಂತ ನಾನು ಹೇಳಿರಲಿಲ್ಲ. ಯಾರು ಹೇಳಿದ್ರು, ಯಾರು ಒತ್ತಾಯ ಮಾಡಿದ್ರು? ಸತೀಶ್ ಜಾರಕಿಹೊಳಿ, ರಾಜಣ್ಣ ಒತ್ತಾಯ ಮಾಡಿರೋದು ನನಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ, ನಾವು ಜನರಲ್ ಆಗಿ ಮಾತಾಡಿದ್ದೇವೆ. ಇದೇ ರೀತಿ ಆಗಬೇಕು ಅಂತ ನಾವ್ಯಾರು ಮಾತಾಡಿಲ್ಲ ಎಂದು ತಿಳಿಸಿದ್ದಾರೆ.

    ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ
    ಸಿಎಂ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಹಿಂದೆಯೂ ಅನೇಕ ಬಾರಿ ಊಟಕ್ಕೆ ಕರೆದಿದ್ದಾರೆ. ತುಂಬಾ ದಿನ ಆಗಿತ್ತು. ಹೀಗಾಗಿ ಊಟಕ್ಕೆ ಕರೆದಿದ್ದಾರೆ. ಡಿನ್ನರ್ ಕರೆಯೋದಕ್ಕೆ ಏನು ವಿಶೇಷತೆ ಇಲ್ಲ. ಊಟ ಹಾಕ್ತಾರೆ, ಊಟ ಮಾಡಿಕೊಂಡು ಬರುತ್ತೇವೆ. ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ. ಸಿಎಂ ಊಟಕ್ಕೆ ಕರೆದಿರೋದು ಒಂದು ಸಾಮಾನ್ಯ ಮೀಟಿಂಗ್ ಅಷ್ಟೆ. ಜಾಸ್ತಿ ದಿನ ಆಗಿದೆ ಅಂತ ಊಟಕ್ಕೆ ಕರೆದಿದ್ದಾರೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲಿದೆ ನವೆಂಬರ್ ಕ್ರಾಂತಿ? ಯಾರು ಹೇಳಿದ್ರು ನವೆಂಬರ್ ಕ್ರಾಂತಿ ಅಂತ? ಯಾವ ಕ್ರಾಂತಿಯೂ ಇಲ್ಲ. ಸಂಪುಟ ಪುನಾರಚನೆ ಆಗೋದು ಎಲ್ಲಾ ಸಿಎಂ ಅವರನ್ನ ಕೇಳಬೇಕು. ಸಂಪುಟ ಪುನರಾಚನೆ ಇದ್ಯಾ, ಯಾರನ್ನಾದ್ರು ಹೊಸಬರನ್ನ ಮಂತ್ರಿಯಾಗಿ ತಗೋತೀರಾ ಅಂತ ಸಿಎಂ ಅವರನ್ನ ಕೇಳಿ ಎಂದಿದ್ದಾರೆ.

    ಹೈಕಮಾಂಡ್ ಸಚಿವರ ಮೌಲ್ಯಮಾಪನ ಏನು ಮಾಡಿಲ್ಲ. ಸಚಿವರ ಬಗ್ಗೆ ಬೇರೆ ಬೇರೆ ಸಮಯದಲ್ಲಿ ಮಾಹಿತಿ ತಗೊಂಡಿದ್ರು. ಇದೆಲ್ಲ ಸಾಮಾನ್ಯವಾಗಿ ಹಾಗೂ ನಿರಂತರವಾಗಿ ನಡೆಯುತ್ತದೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡೋದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ ಎಂದು ತಿಳಿಸಿದ್ದಾರೆ.

  • ಧರ್ಮಸ್ಥಳ ಕೇಸ್ SIT ತನಿಖೆಯಿಂದ ಸತ್ಯ ಹೊರಗೆ ಬರಲಿದೆ: ಮಹದೇವಪ್ಪ

    ಧರ್ಮಸ್ಥಳ ಕೇಸ್ SIT ತನಿಖೆಯಿಂದ ಸತ್ಯ ಹೊರಗೆ ಬರಲಿದೆ: ಮಹದೇವಪ್ಪ

    ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರ ಎಸ್‌ಐಟಿ (SIT) ರಚನೆ ಮಾಡಿದೆ. ತನಿಖೆ ಬಳಿಕ ಸತ್ಯ ಹೊರಗೆ ಬರಲಿದೆ ಎಂದು ಸಚಿವ ಮಹದೇವಪ್ಪ (Mahadevappa) ತಿಳಿಸಿದ್ದಾರೆ.ಇದನ್ನೂ ಓದಿ: ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು

    ಧರ್ಮಸ್ಥಳ ಕೇಸ್ ಎಸ್‌ಐಟಿಗೆ (SIT) ವಹಿಸಬೇಕು ಎಂಬ ಸತೀಶ್ ಜಾರಕಿಹೋಳಿ (Satish Jarkiholi) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಸವಣ್ಣ ನಮ್ಮ ಮಾನ ಅಪಮಾನ ನಿಮ್ಮದಯ್ಯ ಅಂತ ಹೇಳಿದ್ದಾರೆ. ಅದೆಲ್ಲವನ್ನು ತಿಳಿಯೋಕೆ ಈಗ ಎಸ್‌ಐಟಿ ರಚನೆ ಮಾಡಲಾಗಿದೆ. ಎಸ್‌ಐಟಿ ತನಿಖೆಯಲ್ಲಿ ಎಲ್ಲವೂ ಹೊರಗೆ ಬರುತ್ತದೆ ಎಂದು ತಿಳಿಸಿದರು.

    ತನಿಖೆಯಿಂದ ಯಾರು ಏನೇನು ಮಾಡಿದ್ದಾರೆ ಎಂದು ಹೊರಗೆ ಬಂದಾಗ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಸರ್ಕಾರ ಧರ್ಮಸ್ಥಳ ಕೇಸ್‌ನಲ್ಲಿ ಎಡವಿಲ್ಲ. ಅಪಪ್ರಚಾರಕ್ಕೆ ಎಡ ಮಾಡಿಕೊಡೋದಾಗಲಿ ಯಾವ ಪ್ರಶ್ನೆಯೂ ಇಲ್ಲ. ಯಾರು ಸುಳ್ಳು ಸುದ್ದಿ, ಅಪಪ್ರಚಾರ ಮಾಡ್ತಾರೆ ಒಂದು ಸೂಕ್ತ ತನಿಖೆ ಮೂಲಕ ತಾರ್ಕಿಕ ಅಂತ್ಯಕ್ಕೆ ಹೋಗಬೇಕು. ತಾರ್ಕಿಕ ಅಂತ್ಯಕ್ಕೆ ಹೋದ ಮೇಲೆ ಎಲ್ಲದ್ದಕ್ಕೂ ಸ್ಪಷ್ಟತೆ ಸಿಗುತ್ತದೆ. ಇದರಲ್ಲಿ ಸರ್ಕಾರ ಮಾಡುವುದು ಏನು ಇಲ್ಲ. ಪರಿಶುದ್ಧವಾಗಿ ಹೊರಗೆ ಬರಬೇಕು ಅನ್ನೋದು ನಮ್ಮ ಆಸೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಗೃಹ ಶುದ್ಧಿ ಅಭಿಯಾನಕ್ಕೆ ಚಾಲನೆ – ಮಾನವ ಕಳ್ಳ ಸಾಗಣೆಯನ್ನು ಸರ್ಕಾರ, ಸಮಾಜ ಒಗ್ಗೂಡಿ ಎದುರಿಸಬೇಕು: ಗೆಹ್ಲೋಟ್

  • 5 ವರ್ಷ ಅಧಿಕಾರ ಗಟ್ಟಿ – ತವರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಸಿಎಂ

    5 ವರ್ಷ ಅಧಿಕಾರ ಗಟ್ಟಿ – ತವರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಸಿಎಂ

    – ಜುಲೈ 19 ರಂದು ಮೈಸೂರಲ್ಲಿ ಕಾರ್ಯಕ್ರಮ
    – 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ

    ಮೈಸೂರು: 5 ವರ್ಷ ಅಧಿಕಾರ ಗಟ್ಟಿಯಾಗುತ್ತಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮೈಸೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಹೌದು. ತವರು ಜಿಲ್ಲೆಯಲ್ಲಿ ಸಾಧನ ಸಮಾವೇಶ ಹೆಸರಿನಲ್ಲಿ ಜುಲೈ 19 ಶನಿವಾರ ರಂದು ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಮೂರು ದಿನ ಮೈಸೂರು (Mysuru) ಪ್ರವಾಸ ಕೈಗೊಳ್ಳಲಿರುವ ಸಿಎಂ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ಆಯೋಜನೆಗೊಂಡಿದೆ.

    ಸರ್ಕಾರದ ಸುಮಾರು 2,600 ಕೋಟಿ ಮೊತ್ತದ ಹಲವು ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಲೋಕಾರ್ಪಣೆ ನಡೆಯಲಿದೆ. ಬೃಹತ್ ಸಮಾವೇಶದ ಮೂಲಕ ಪಕ್ಷದ ಹೈ ಕಮಾಂಡ್‌ ಪರೋಕ್ಷ ಸಂದೇಶ ರವಾನಿಸಲಿದ್ದಾರೆ.

    ಸಾಧನ ಸಮಾವೇಶ ಮೂಲಕ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿ ತೋರಿಸಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದು, ಸಮಾವೇಶದ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಆಪ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ (HC Mahadevappa) ನೋಡಿಕೊಳ್ಳಲಿದ್ದಾರೆ.

    ಈಗಾಗಲೇ ಮೈಸೂರು ಚಾಮರಾಜನಗರ ಜಿಲ್ಲೆಯ ಶಾಸಕರ ಸಭೆ ನಡೆಸಿ ಹೆಚ್ಚಿನ ಜನರನ್ನ ಕರೆತಲು ಪ್ಲಾನ್ ಮಾಡಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ತನ್ನ ಶಕ್ತಿ ಪ್ರದರ್ಶನ ಮಾಡಲು ಸಿದ್ದತೆ ಜೋರಾಗಿದೆ.

  • ಚುನಾವಣೆಗಾಗಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ: ಮಹದೇವಪ್ಪ

    ಚುನಾವಣೆಗಾಗಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ: ಮಹದೇವಪ್ಪ

    ಬೆಂಗಳೂರು: ಚುನಾವಣೆ (Election) ಸಮಯದಲ್ಲಿ ಪದೇ ಪದೇ ಕಣ್ಣೀರು (Tears) ಹಾಕೋದು ಸರಿಯಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಮತ್ತು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಸಚಿವ ಮಹದೇವಪ್ಪ (Mahadevappa) ತಿರುಗೇಟು ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಎಲ್ಲಾ ಮತಗಳ ಮೇಲೆ ಕಣ್ಣು ಇಟ್ಟಿರುತ್ತಾರೆ.ಆದರೆ ಜನ ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ಏನು ಕೆಲಸ ಮಾಡುತ್ತಾರೆ ಏನು ಅಭಿವೃದ್ಧಿ ಮಾಡುತ್ತಾರೆ ಎಂದು ಜನ ನೋಡಿ ಮತ ಹಾಕುತ್ತಾರೆ. ಚನ್ನಪಟ್ಟಣ ಕಾಂಗ್ರೆಸ್ ಪರ ಇದೆ. ಈಗ ವಾತಾವರಣ ಶುರುವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭುಗಿಲೆದ್ದ ವಕ್ಫ್‌ ಆಸ್ತಿ ವಿವಾದ – ರಾಜ್ಯಾದ್ಯಂತ ಕೇಸರಿ ಪಡೆಯ ಪ್ರತಿಭಟನೆ ಜೋರು

    ಕುಮಾರಸ್ವಾಮಿ ಮತ್ತು ನಿಖಿಲ್ ಕಣ್ಣೀರು ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಣ್ಣೀರು ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಭಾರ ಕಡಿಮೆ ಆಗುತ್ತೆ. ಮನಸು ಹಗರು ಆಗುತ್ತೆ. ಡಿಕೆ ಸುರೇಶ್ ಸೋತಿದ್ದಕ್ಕೆ ಅವರು ಅತ್ತರು. ಅಭಿವೃದ್ಧಿ ಮಾಡಿ ಸೋತ್ರು ಎಂದು ಅತ್ತರು. ಆದರೆ ಚುನಾವಣೆ ಬಂದಾಗ ಅಳೋದು ಸರಿಯಲ್ಲ. ಅವರೆಲ್ಲ ಲೀಡರ್‌ಗಳು. ಹೀಗೆ ಅಳೋದು ಸರಿಯಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಮೀರ್ ಇಸ್ಲಾಂ ಧರ್ಮ, ವಕ್ಫ್ ಬೋರ್ಡ್‌ಗೆ ನ್ಯಾಯ ಒದಗಿಸೋ ಪ್ರಯತ್ನದಲ್ಲಿದ್ದಾರೆ: ಮಾದಾರ ಚನ್ನಯ್ಯ ಶ್ರೀ

    ದೇವೇಗೌಡರು ಅಂಬ್ಯುಲೆನ್ಸ್ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಆರೋಗ್ಯ ಚೆನ್ನಾಗಿ ಇರಲಿ. ಕಣ್ಣೀರು, ರಾಜಕೀಯ, ಕ್ಷೇತ್ರದ ಅಭಿವೃದ್ಧಿಗೆ ಎಲ್ಲಿ ಸಂಬಂಧ ಇದೆ. ಜನರು ಕ್ಷೇತ್ರದ ಅಭಿವೃದ್ಧಿಯನ್ನು ಚುನಾವಣೆಯಲ್ಲಿ ನೋಡುತ್ತಾರೆ. ಕಣ್ಣೀರಿಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್‌ – ಕನಿಷ್ಠ 20 ಮಂದಿ ದಾರುಣ ಸಾವು

  • ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಮೈಸೂರು/ಬೆಂಗಳೂರು: ಡಿನ್ನರ್‌ ನೆಪದಲ್ಲಿ ಚಾಮರಾಜನಗರದಲ್ಲಿರುವ ಸುನಿಲ್‌ ಬೋಸ್‌ ನಿವಾಸದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರದ ಪ್ರಭಾವಿ ಸಚಿವರಾದ ಸತೀಶ್‌ ಜಾರಕಿಹೊಳಿ (Satish Jarkiholi), ಪರಮೇಶ್ವರ್‌ (Parmeshwar) ಮತ್ತು ಮಹಾದೇವಪ್ಪ (Mahadevappa) ಮಂಗಳವಾರ ರಾತ್ರಿ ರಹಸ್ಯ ಸಭೆ ನಡೆಸಿದ್ದಾರೆ.

    ಮೂವರು ಅಹಿಂದ ನಾಯಕರು ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೂ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆಯೇ ಸಭೆ ನಡೆಸಿದ್ದಾರೆ ಎನ್ನುವುದು ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ

    ಸಭೆಯಲ್ಲಿ ಏನು ಚರ್ಚೆ ನಡೆದಿದೆ?
    ಹೈಕಮಾಂಡ್‌ (Congress High Command) ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಇಳಿಸಿದರೆ ಮೂವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿಯಾಗುವ ಒಳ್ಳೆಯ ಅವಕಾಶ ಇದೆ. ಯಾರಿಗೆ ಅವಕಾಶ ಸಿಕ್ಕಿದರೂ ಒಗ್ಗಟ್ಟಾಗಿಯೇ ಇರೋಣ.

    ಸಿದ್ದರಾಮಯ್ಯ ಇಳಿಸುವ ಪ್ರಯತ್ನಕ್ಕೆ ಯಾರೇ ಕೈ ಹಾಕಿದರೂ ನಾವು ಮೂವರು ತಡೆಯಬೇಕು. ಅನಿವಾರ್ಯವಾಗಿ ಸಿದ್ದರಾಮಯ್ಯ ಇಳಿಯುವ ಸಂದರ್ಭ ಬಂದರೇ ನಾವು ಒಟ್ಟಾಗಿ ಸಿಎಂ ಸ್ಥಾನಕ್ಕಾಗಿ ಪ್ರಯತ್ನಿಸಬೇಕು. ಈ ಬಾರಿ ನಾವೇ ಕಚ್ಚಾಡಿಕೊಂಡು ಇನ್ನೊಬ್ಬರಿಗೆ ಅವಕಾಶ ಸಿಗಬಾರದು.  ಇದನ್ನೂ ಓದಿ: ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

    2023ರ ಚುನಾವಣೆಯಲ್ಲಿ ಅಹಿಂದ ಮತಗಳಿಂದ ಕಾಂಗ್ರೆಸ್ ಸಾಕಷ್ಟು ಸ್ಥಾನ ಗೆದ್ದುಕೊಂಡಿದೆ. ಇದೇ ಕಾರ್ಡ್ ಹೈಕಮಾಂಡ್ ಮುಂದೆ ಪ್ಲೇ ಮಾಡಬೇಕು. ಬಹಿರಂಗವಾಗಿ ಯಾರ ಪರವಾಗಿ ಮತ್ತು ಯಾರ ವಿರುದ್ಧವೂ ಹೇಳಿಕೆ ನೀಡುವುದು ಬೇಡ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

  • ಶಾಸಕರ ಬೆಂಬಲ ಪಡೆದೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಮಹಾದೇವಪ್ಪ

    ಶಾಸಕರ ಬೆಂಬಲ ಪಡೆದೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಮಹಾದೇವಪ್ಪ

    – ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಬೆಲೆ ಜಾಸ್ತಿ
    – ಡಿಕೆಶಿ ಎಚ್ಚರಿಕೆ ಮರುದಿನವೇ ಸಿಎಂ ಪರ ಆಪ್ತನ ಬ್ಯಾಟಿಂಗ್‌

    ಬೆಂಗಳೂರು: ಅವರಿಗೆ ಕೊಡಿ ಇವರಿಗೆ ಕೊಡಿ ಎನ್ನುವುದಕ್ಕೆ ಸಿಎಂ ಹುದ್ದೆ (Chief Minister) ಅದೇನು ಕಡಲೆಪುರಿನಾ? ಅದು ನನ್ನ ಕೈಯ್ಯಲ್ಲೂ ಇಲ್ಲ, ಧರ್ಮಗುರುಗಳ ಕೈಯ್ಯಲ್ಲೂ ಇಲ್ಲ. ಶಾಸಕರ ಬೆಂಬಲ ಕ್ರೋಢಿಕರಿಸಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌ಸಿ ಮಹಾದೇವಪ್ಪ (HC Mahadevappa) ಹೇಳಿದ್ದಾರೆ.

    ಸಿಎಂ, ಡಿಸಿಎಂ, ಅಧ್ಯಕ್ಷ ಹುದ್ದೆಯ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಈ ರೀತಿ ಹೇಳಿಕೆ ನೀಡಿದವರಿಗೆ ನೋಟಿಸ್‌ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಎಚ್ಚರಿಕೆ ನೀಡಿದ ಮರು ದಿನವೇ ಸಿಎಂ ಆಪ್ತ ಮಹಾದೇವಪ್ಪ ಈಗ ಬಹಿರಂಗವಾಗಿಯೇ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದಾರೆ.

     

    ವಿಶೇಷ ಏನೆಂದರೆ ಈ ಮೊದಲು ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ (Narendraswamy) ಅವರು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ಶಾಸಕರು ಎಂದು ಹೇಳಿಕೆ ನೀಡಿ ಸಿಎಂ ಪರ ಬ್ಯಾಟಿಂಗ್‌ ಮಾಡಿದ್ದರು. ಈಗ ಮಹಾದೇವಪ್ಪನವರು ಸಿಎಂ ವಿಚಾರ ಪ್ರಸ್ತಾಪಿಸುವ ಮೂಲಕ ಡಿಕೆ ಶಿವಕುಮಾರ್‌ ಆದೇಶಕ್ಕೂ ಡೋಂಟ್‌ ಕೇರ್‌ ಅಂದಿದ್ದಾರೆ. ಇದನ್ನೂ ಓದಿ: ಸ್ಪೀಕರ್‌ಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

    2023 ರಲ್ಲಿ ವಿಧಾನಸಭೆ ಚುನಾವಣೆ ನಡೆದು ರಾಜ್ಯದ ಮತದಾರರು ಕಾಂಗ್ರೆಸ್‌ಗೆ (Congress) 135 ಶಾಸಕರನ್ನು ಆಯ್ಕೆ ಮಾಡಿದರು. ಪಕ್ಷದ ಹೈಕಮಾಂಡ್ ವೀಕ್ಷಕರನ್ನು ಕಳಿಸಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿತು. ಶಾಸಕಾಂಗ ಪಕ್ಷದ ನಾಯಕರ ಸ್ಪರ್ಧೆಯಲ್ಲಿ ಒಬ್ಬೊಬ್ಬ ಶಾಸಕರು ಯಾರು ಆಯ್ಕೆ ಆಗಬೇಕು ಎಂಬುದನ್ನು ಚೀಟಿಯಲ್ಲಿ ಹೆಸರು ಬರೆದುಕೊಟ್ಟಿದ್ದರು. ಇದನ್ನು ಲೆಕ್ಕ ಹಾಕಿದಾಗ ಸಿದ್ದರಾಮಯ್ಯ ಅವರು ಹೆಚ್ಚು ಶಾಸಕರ ಬೆಂಬಲ ಪಡೆದು ಆಯ್ಕೆ ಆಗಿದ್ದಾರೆ ಎಂದರು.

     

    ಪ್ರಜಾಪ್ರಭುತ್ವದ ಅಡಿಯಲ್ಲಿ ಹೆಚ್ಚು ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತವೇ ಮುಖ್ಯ. ಬೊಗಸೆ.. ಬೊಗಸೆ. ಅಂತ ಎತ್ತಿ ಕೊಡುವುದಕ್ಕೆ ಸಿಎಂ ಸ್ಥಾನವೇನೂ ಕಡಲೆಪುರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಒನ್ ಮ್ಯಾನ್ ಒನ್ ಪೋಸ್ಟ್ ಪಾಲಿಸಿಯನ್ನು ನಮ್ಮ ಹೈಕಮಾಂಡ್ ನಾಯಕರು ಇಟ್ಟುಕೊಂಡಿದ್ದಾರೆ. ತೀರ್ಮಾನ ನೋಡಿಕೊಂಡು ಮಾಡುತ್ತಾರೆ ಎಂದರು.

     

  • ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ

    ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) 94 ಕೋಟಿ ರೂ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ (Nagendra) ರಾಜೀನಾಮೆ (Resignation) ನೀಡುವ ಅವಶ್ಯಕತೆ ಇಲ್ಲ ಎಂದು ಸಚಿವ ಮಹದೇವಪ್ಪ (Mahadevappa) ಹೇಳುವ  ಮೂಲಕ ನಾಗೇಂದ್ರ ಬೆನ್ನಿಗೆ ನಿಂತಿದ್ದಾರೆ.

    ಚಂದ್ರಶೇಖರನ್‌ ಒಬ್ಬ ಒಳ್ಳೆಯ ಅಧಿಕಾರಿ. ಅವರ ಆತ್ಮಹತ್ಯೆಯಿಂದ ತುಂಬ ದು:ಖವಾಗಿದೆ. ಡೆತ್‌ನೋಟ್‌ನಲ್ಲಿ ಕೆಲ ಆರೋಪಗಳನ್ನು ಮಾಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ತನಿಖೆ ಶುರು ಮಾಡಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು ತನಿಖೆಯ ಬಳಿಕ ಸತ್ಯಾಸತ್ಯ ಹೊರಗಡೆ ಬರಲಿದೆ ಎಂದರು.  ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಜೂನ್‌ 9 ರಂದು ಮೋದಿ ಪ್ರಮಾಣ ವಚನ!

     

    ಇಲ್ಲಿ ದಲಿತರು, ದಲಿತೇತರ ಹಣ ಅಂತಲ್ಲ.‌ಅದು ಸರ್ಕಾರದ ಹಣ. ಅಂತೆ ಕಂತೆಗಳ ಮೇಲೆ ಮಾತನಾಡಲು ಆಗುವುದಿಲ್ಲ. ರಾಜಕೀಯಕರಣಗೊಳಿಸಿದ ತಕ್ಷಣ ಮಾತಾಡಲು ಆಗುವುದಿಲ್ಲ. ಈಶ್ವರಪ್ಪ ಪ್ರಕರಣವೇ ಬೇರೆ, ನಿಗಮದ ಹಣ ವರ್ಗಾವಣೆ ಪ್ರಕರಣವೇ ಬೇರೆ. ಅದಕ್ಕೂ ಇದಕ್ಕೂ ಹೋಲಿಕೆ ಸರಿಯಲ್ಲ. ವಿರೋಧ ಪಕ್ಷ ಆಗಿರುವರಿಂದ ರಾಜೀನಾಮೆ ಕೇಳುತ್ತಾರೆ. ಸತ್ಯಾಸತತೆ ಹೊರಗಡೆ ಬಾರದೇ ಯಾವ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಸಚಿವ ನಾಗೇಂದ್ರ ಬೆನ್ನಿಗೆ ಸಚಿವ ಮಹಾದೇವಪ್ಪ ನಿಂತರು.  ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಹಂಚಿದ್ದ ಹಣ ವಾಲ್ಮೀಕಿ ನಿಗಮದ್ದು ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ವಿರೋಧ ಪಕ್ಷ ಏನು ಬೇಕಾದರೂ ಹೇಳಬಹುದು. ಪ್ರಕರಣ ಬೆಳಕಿಗೆ ಬಂದ ಕೂಡಲೇ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈಗಾಗಲೇ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.

     

  • ಲೋಕ ಅಖಾಡಕ್ಕಿಳಿಯಲು ಹಿಂದೇಟು – ಹೆಚ್.ಸಿ ಮಹದೇವಪ್ಪಗೆ ಡಬಲ್‌ ಒತ್ತಡ

    ಲೋಕ ಅಖಾಡಕ್ಕಿಳಿಯಲು ಹಿಂದೇಟು – ಹೆಚ್.ಸಿ ಮಹದೇವಪ್ಪಗೆ ಡಬಲ್‌ ಒತ್ತಡ

    ಮೈಸೂರು: ಚಾಮರಾಜನಗರ (Chamarajanagar) ಲೋಕಸಭಾ (Lok Sabha Election) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ವಿಚಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ (Mahadevappa) ಅವರಿಗೆ ಡಬಲ್ ಒತ್ತಡವಿದೆ. ಕೌಟುಂಬಿಕ ಒತ್ತಡದ ಜೊತೆಗೆ ಪಕ್ಷದ ಒತ್ತಡ. ಎರಡೂ ಒತ್ತಡಗಳ ನಡುವೆ ಸಚಿವರು ಒದ್ದಾಡುತ್ತಿದ್ದಾರೆ.

    ಲೋಕಸಭಾ ಚುನಾವಣೆಗೆ ಕೆಲ ಸಚಿವರು ಕಣಕ್ಕೆ ಇಳಿಯಬೇಕು. ಪಕ್ಷಕ್ಕಾಗಿ ತ್ಯಾಗಕ್ಕೆ ಸಿದ್ಧರಾಗಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳುತ್ತಿದ್ದಂತೆ ಬಹುತೇಕ ಸಚಿವರು ಬೆಚ್ಚಿದ್ದಾರೆ. ನಮಗಂತೂ ಈ ಲೋಕಸಭಾ ಚುನಾವಣೆ ಉಸಾಬರಿ ಬೇಡ ಎಂದು ಕೆಲ ಸಚಿವರು ಅದರಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದಾರೆ. ಆದರೆ ಇದರಲ್ಲಿ ಸಚಿವ ಮಹದೇವಪ್ಪ ಅವರ ಸ್ಥಿತಿ ಮಾತ್ರ ಬಹಳ ವಿಭಿನ್ನ. ಸಚಿವರ ಮನೆ ಬಾಗಿಲಲ್ಲೇ ಟಿಕೆಟ್ ಇದ್ದರೂ ಸ್ಪರ್ಧೆಗೆ ಇಷ್ಟವೂ ಇಲ್ಲ. ಹಾಗಂತ ಟಿಕೆಟ್ ಅನ್ನು ಬೇರೆ ಮನೆ ಹೊಸ್ತಿಲಿಗೆ ಹಾಕುವ ಸ್ಥಿತಿಯಲ್ಲೂ ಸಚಿವರಿಲ್ಲ. ಇದನ್ನೂ ಓದಿ: ಮೋದಿ ಕೆಲಸಗಳಿಂದ ಪ್ರೇರಣೆ- ಆಪ್‌ನ ಮೂವರು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

    ಎಚ್.ಸಿ. ಮಹದೇವಪ್ಪಗೆ ಲೋಕಸಭೆಗೆ ಸ್ಪರ್ಧಿಸಲು ಸುತರಾಂ ಇಷ್ಟವಿಲ್ಲ. ಬೇರೆಯವರಿಗೆ ಕೊಡಿ ಎಂದೂ ಇಷ್ಟವಿಲ್ಲದೇ ನನಗೆ ಬೇಡ ಆದರೆ ನನ್ನ ಮಗನಿಗೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ಮೂರು ವಿಧಾನಸಭಾ ಟಿಕೆಟ್ ತಪ್ಪಿದೆ. ಮಗ ಸುನೀಲ್ ಬೋಸ್‌ಗೆ (Sunil Bose) ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಲು ಮನಸ್ಸು ಮಾಡದೇ ಮಹದೇವಪ್ಪಗೇ ಸ್ಪರ್ಧಿಸಲು ಸೂಚಿಸುತ್ತಿದೆ. ಇದರಿಂದ ಮಹದೇವಪ್ಪ ಸಿಟ್ಟಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ನನಗಿಂತಾ ಸಿಎಂ ಹಾಗೂ ಡಿಸಿಎಂ ಸ್ಟ್ರಾಂಗ್ ಕ್ಯಾಂಡಿಡೇಟ್ ಇದ್ದಾರೆ. ಅವರಿಗೂ ಒಂದೊಂದು ಕ್ಷೇತ್ರ ಹುಡುಕಿ ಅಂತಾ ಬಹಿರಂಗವಾಗಿ ಹೇಳುವ ಮೂಲಕ ತಮಗೆ ಸ್ಪರ್ಧೆಗೆ ಒತ್ತಡ ಹಾಕುತ್ತಿರುವ ಬಗ್ಗೆ ನೇರವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಪರೀಕ್ಷೆಯ ವೇಳೆ ಉಗ್ರರು ನುಂಗುವ ಮಾತ್ರೆಯ ಮೊರೆ ಹೋಗುತ್ತಿದ್ದಾರೆ ಮಕ್ಕಳು

    ಒಟ್ಟಾರೆ ಲೋಕಸಭೆ ಟಿಕೆಟ್ ವಿಚಾರ ಮಹದೇವಪ್ಪಗೆ ಉಗುಳಲೂ ಆಗದ ನುಂಗಲೂ ಆಗದ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊಟ್ಟರೆ ಮಗನಿಗೆ ಟಿಕೆಟ್ ಕೊಡಿ ಅಂತ ಪಟ್ಟಿಗೆ ಬಿದ್ದಿದ್ದಾರೆ. ಹೈಕಮಾಂಡ್ ನಿರ್ಧಾರದ ಮೇಲೆ ಚಾಮರಾಜನಗರ ಕ್ಷೇತ್ರದ ಅಖಾಡ ರಂಗೇರಲಿದೆ.

     

  • ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ನೀಡದ ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ ಅಕ್ಷತೆಯ (Mantrakshate) ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ (Social Media) ಈ ಸಂಬಂಧ ಕೇಂದ್ರ ಸರ್ಕಾರ ನಡೆಯನ್ನು ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

    ಪೋಸ್ಟ್‌ನಲ್ಲಿ ಏನಿದೆ?
    ಹಸಿವು ಮುಕ್ತ ಕರ್ನಾಟಕದ (Karnataka) ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿಂದ ಅಕ್ಕಿ ನೀಡದವರು ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ. ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಇದೆಯೇ?

    ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಇವರು ಧರ್ಮದ ಕುರಿತಂತೆ ಮಾತನಾಡುತ್ತಿದ್ದರೆ ಅದನ್ನು ಕಂಡು ನಗಬೇಕೋ ಅಳಬೇಕೋ ಎಂದು ನನಗೆ ತಿಳಿಯುತ್ತಿಲ್ಲ.  ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

     

  • ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಉದ್ಯೋಗ – ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುತ್ತೇವೆ: ಮಹದೇವಪ್ಪ

    ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಉದ್ಯೋಗ – ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುತ್ತೇವೆ: ಮಹದೇವಪ್ಪ

    ಬೆಂಗಳೂರು : ನಕಲಿ ಜಾತಿ ಪ್ರಮಾಣ ಪತ್ರ (Fake Caste Certificate) ಕೊಟ್ಟು ಉದ್ಯೋಗ ಪಡೆಯುವವರಿಗೆ ನೀಡುವ‌ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ಸಮಾಜ ಕಲ್ಯಾಣ ‌ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ (HC Mahadevappa) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಗೋವಿಂದ ರಾಜು (Govind Raju) ನಕಲಿ ಜಾತಿ ಪತ್ರ ಕೊಟ್ಟು ಹುದ್ದೆ ಪಡೆದಿರುವ ವಿಷಯ ಪ್ರಸ್ತಾಪ ಮಾಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ, ರಾಜ್ಯದಲ್ಲಿ 836 ಮಂದಿ ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಉದ್ಯೋಗ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. 836 ಪ್ರಕರಣಗಳಲ್ಲಿ 598 ಪ್ರಕರಣ ದಾಖಲಿಸಲಾಗಿದೆ. 238 ಕೇಸ್ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳಲ್ಲಿ ಬಾಕಿ ಇದೆ. 598 ಪ್ರಕರಣದಲ್ಲಿ 93 ನೌಕರರನ್ನ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಗಸ್ಟ್‌ನಲ್ಲಿ ಫಲಾನುಭವಿಗಳ ಖಾತೆಗೆ ʻಗೃಹಲಕ್ಷ್ಮಿʼ – ಲಕ್ಷ್ಮಿ ಹೆಬ್ಬಾಳ್ಕರ್

     

    ನಕಲಿ ಜಾತಿ ಪತ್ರ ಕೊಟ್ಟು ಉದ್ಯೋಗ ಪಡೆಯೋದು ಸಂವಿಧಾನ ವಿರೋಧ. ಈಗ ಇರೋ‌ ಶಿಕ್ಷೆ ಪ್ರಮಾಣ ಸಾಕಾಗುವುದಿಲ್ಲ. ಹೀಗಾಗಿ ಇಂತಹ ಪ್ರಕರಣಕ್ಕೆ ಇರುವ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುವ ಚಿಂತನೆ ಮಾಡುತ್ತಿದ್ದೇವೆ. ಮುಂದಿನ ವಾರ ಗೃಹ ಇಲಾಖೆ ಜೊತೆ ಸಭೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]