Tag: mahadayi

  • ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದಿದ್ದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ – ಜೋಶಿ ಸ್ಪಷ್ಟನೆ

    ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದಿದ್ದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ – ಜೋಶಿ ಸ್ಪಷ್ಟನೆ

    ನವದೆಹಲಿ: ಮಹದಾಯಿ ಯೋಜನೆಗೆ (Mahadayi Scheme) ಕೇಂದ್ರ ಅನುಮತಿ ನೀಡುವುದಿಲ್ಲ ಎಂಬುದು ಗೋವಾ ಸಿಎಂ (Goa CM) ವೈಯಕ್ತಿಕ ಹೇಳಿಕೆ. ಇದು ಕೇಂದ್ರದ ಅಧಿಕೃತ ಹೇಳಿಕೆಯಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸ್ಪಷ್ಟನೆ ನೀಡಿದ್ದಾರೆ.

    ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲವೆಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವುದು ಅವರ ವೈಯುಕ್ತಿಕ ಅನಿಸಿಕೆಯಾಗಿದೆ. ಕೇಂದ್ರ ಸರ್ಕಾರ ಹಾಗೆ ಹೇಳಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲವೆಂದು ಆಕ್ಷೇಪಿಸಿದ್ದಾರೆ.ಇದನ್ನೂ ಓದಿ: ಹೊಳೆನರಸೀಪುರ‌ ರೇಪ್ ಕೇಸ್ – 2ನೇ ಬಾರಿಯೂ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಕೇಂದ್ರ ಸರ್ಕಾರ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡುವುದಿಲ್ಲ. ಮೂರೂ ರಾಜ್ಯಗಳಿಗೆ ಹೊಂದಿಕೆ ಆಗುವಂತೆಯೇ ನಿರ್ಧಾರ ತೆಗೆದುಕೊಳ್ಳಲಿದೆ. ಅದರಲ್ಲೂ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

    ಕಳಸಾ ಬಂಡೂರಿ ಅನುಷ್ಠಾನಕ್ಕೆ ಸಿದ್ಧ:
    ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಭಾಗದ ಜನರ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಕಳಸಾ ಬಂಡೂರಿ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಅವರು ನಿಷ್ಪಕ್ಷಪಾತ ನಡೆ ಅನುಸರಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಕಿಲ್ಲ ಎಂದಿದ್ದಾರೆ.

    ರಾಜಕೀಯ ಬಣ್ಣ ಬೇಡ:
    ಮಹದಾಯಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಬೇಕಿದೆ. ವಾದ-ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೋವಾ ಸಿಎಂ ಹೇಳಿಕೆ ವೈಯುಕ್ತಿಕವಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು ಎಂದು ಮನವಿ ಮಾಡಿದ್ದಾರೆ.

    ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ನನ್ನನ್ನೂ ಭೇಟಿಯಾಗಿ `ಜಲಶಕ್ತಿ ಸಚಿವರು ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿಗೆ ಬೆಂಬಲವಾಗಿದ್ದಾರೆ ಎಂದಿದ್ದಾರೆ. ಮಾಧ್ಯಮಗಳ ಮುಂದೆಯೂ ಅದನ್ನೇ ಹೇಳಿದ್ದಾರೆಂದು ತಿಳಿಸಿದ್ದಾರೆ.ಇದನ್ನೂ ಓದಿ: ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

  • ಮಹದಾಯಿ ವಿಚಾರದಲ್ಲಿ ರಾಜ್ಯದ ಹಿತ ಬಲಿ ಕೊಡಲ್ಲ: ವಿಜಯೇಂದ್ರ

    ಮಹದಾಯಿ ವಿಚಾರದಲ್ಲಿ ರಾಜ್ಯದ ಹಿತ ಬಲಿ ಕೊಡಲ್ಲ: ವಿಜಯೇಂದ್ರ

    – ಮೋದಿ 4078 ದಿನ ದಾಖಲೆಗೆ ಅಭಿನಂದನೆ ಸಲ್ಲಿಸಿದ ಬಿವೈವಿ

    ಬೆಂಗಳೂರು: ಮಹದಾಯಿ ವಿಚಾರದಲ್ಲಿ (Mahadayi) ಕರ್ನಾಟಕದ (Karnataka) ಹಿತಾಸಕ್ತಿ ಬಲಿ ಕೊಡಲು ಬಿಜೆಪಿ (BJP) ಅವಕಾಶ ನೀಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದರು.

    ಬಿಜೆಪಿ ಕಚೇರಿಯಲ್ಲಿ ಮಹದಾಯಿ ಯೋಜನೆಗೆ ಗೋವಾ ಸಿಎಂ ಕ್ಯಾತೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಸಿಎಂ ರಾಜಾರೋಷವಾಗಿ ಹೇಳಿಕೆ ನೀಡಿದ್ದಾರೆ. ಸಂತೋಷ, ರಾಜ್ಯ ಬಿಜೆಪಿ ಸದಾ ರಾಜ್ಯದ ಜನರ ಜೊತೆ ಇರುತ್ತದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ರಾಜ್ಯ ಬಿಜೆಪಿ ಸಿದ್ಧವಾಗಿರುತ್ತದೆ. ಗೋವಾ ಮುಖ್ಯಮಂತ್ರಿ ಹಾಗೂ ಪ್ರಹ್ಲಾದ್ ಜೋಶಿ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಕರ್ನಾಟಕದ ಹಿತಾಸಕ್ತಿ ಬಲಿ ಕೊಡಲು ಬಿಜೆಪಿ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಸೌಮ್ಯ ರೇಪ್ & ಮರ್ಡರ್ ಕೇಸ್ | ಕಣ್ಣೂರು ಸೆಂಟ್ರಲ್ ಜೈಲ್‌ನಿಂದ ಪರಾರಿಯಾಗಿದ್ದ ಆರೋಪಿ ಅರೆಸ್ಟ್

    ಇದೇ ವೇಳೆ ಪ್ರಧಾನಿ ಮೋದಿ (PM Modi) ಅವರ 4078 ದಿನ ದಾಖಲೆಗೆ ಅಭಿನಂದನೆ ಸಲ್ಲಿಸಿದರು. ಮೋದಿ ಹೊಸ ದಾಖಲೆ ಬರೆದಿದ್ದಾರೆ. ನೆಹರು ಬಳಿಕ ಹೆಚ್ಚು ದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ತಿಳಿಸಿ ಸಂಭ್ರಮಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸೇವಕನಾಗಿ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಹೇರಿಕೆ ಮಾಡದೇ, ಯಾವುದೇ ಅನುಕಂಪದ ಲಾಭ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಪರಿಶ್ರಮದಿಂದ ಅಭಿವೃದ್ಧಿ ಆಡಳಿತ ನಡೆಸುತ್ತಿದ್ದಾರೆ. ಮೋದಿಯವರಿಗೆ ದೇಶದ ಪರವಾಗಿ, ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದ ಸಮಸ್ಯೆಗಳನ್ನ ಪರಿಹಾರ ಮಾಡಿ: ಛಲವಾದಿ ನಾರಾಯಣಸ್ವಾಮಿ

  • ಮಹದಾಯಿಗೆ ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಇವರ‍್ಯಾರು: ಗೋವಾ ಸಿಎಂ ವಿರುದ್ಧ ಕೋನರೆಡ್ಡಿ ಗರಂ

    ಮಹದಾಯಿಗೆ ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಇವರ‍್ಯಾರು: ಗೋವಾ ಸಿಎಂ ವಿರುದ್ಧ ಕೋನರೆಡ್ಡಿ ಗರಂ

    – ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡದೇ ಹೋದ್ರೆ ಉಗ್ರ ಹೋರಾಟ

    ಬೆಂಗಳೂರು: ಮಹದಾಯಿ ನಮ್ಮ ರಾಜ್ಯದ ಹಕ್ಕು. ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಗೋವಾ ಸಿಎಂ ಯಾರು ಎಂದು ಮಹದಾಯಿ ಹೋರಾಟಗಾರ, ಶಾಸಕ ಕೋನರೆಡ್ಡಿ (Konareddy) ಕಿಡಿಕಾರಿದ್ದಾರೆ.

    ಮಹದಾಯಿಗೆ (Mahadayi) ಕೇಂದ್ರ ಅನುಮತಿ ಕೊಡಲ್ಲ ಎಂಬ ಗೋವಾ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಗೋವಾ ಸಿಎಂ ಈ ರೀತಿ ಮಾತನಾಡಿರೋದು ಸರಿಯಲ್ಲ. ಕೇಂದ್ರ ಅನುಮತಿ ಕೊಡಲ್ಲ ಎಂದು ಹೇಳಿಕೆ ನೀಡೋಕೆ ಇರ‍್ಯಾರು? ಗೋವಾದಲ್ಲಿ ಇಬ್ಬರು ಸಂಸದರಿದ್ದಾರಷ್ಟೇ. ನಮ್ಮಲ್ಲಿ 28 ಸಂಸದರಿದ್ದಾರೆ. ಅವರ ಮಾತು ಕೇಂದ್ರ ಕೇಳುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜನತೆಗೆ ಮತ್ತೊಂದು ಶಾಕ್‌; ರಾಜ್ಯದ ಎಲ್ಲಾ ಬಹುಮಹಡಿ, ಎತ್ತರದ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಕ್ಯಾಬಿನೆಟ್ ಅಸ್ತು

    ನಾವು ಹಾಲು, ಕಾಯಿಪಲ್ಯ ನಿಲ್ಲಿಸಿದ್ರೆ ಗೋವಾಗೆ ಏನು ಸಿಗೋದಿಲ್ಲ, ನೆನಪಿರಲಿ. ಗೋವಾದವರು ಏನೇ ಮಾಡಿದ್ರು ಮಹದಾಯಿ ತಡೆಯೋಕೆ ಆಗೊಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸರ್ವಪಕ್ಷದ ಸಭೆ ಕರೆದು, ಪ್ರಧಾನಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗುವಂತೆ ಮನವಿ ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣ ಆರೋಪ – ಕೋರ್ಟ್ ತೀರ್ಪಿಗೆ ನಾನು ಬದ್ಧ: ಸಚಿವ ಜಾರ್ಜ್

    ಬಿಜೆಪಿ ಅವರು ಇದರ ಬಗ್ಗೆ ಮಾತಾಡಬೇಕು. ಯಾಕೆ ಬಿಜೆಪಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ವಾ? ಹಿಂದೆ ಅನಂತ್ ಕುಮಾರ್ ಇದ್ದಾಗ ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿ ಆಗಿ ಕೆಲಸ ಮಾಡ್ತಿದ್ದರು. ಈಗ ಪ್ರಹ್ಲಾದ್ ಜೋಶಿ ಅವರು ಆ ಸ್ಥಾನವನ್ನು ತುಂಬಬೇಕು. ಮಹದಾಯಿಗೆ ಕೇಂದ್ರ ಅನುಮತಿ ಕೊಡದೇ ಹೋದರೆ ಹೋರಾಟ ಮಾಡೇ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

  • ಮಹಾದಾಯಿಗೆ ಕೇಂದ್ರ ಅನುಮತಿ ಕೊಡಲ್ಲ – ಗೋವಾ ಸಿಎಂ ಹೇಳಿಕೆಗೆ ಡಿಕೆಶಿ ಕೆಂಡಾಮಂಡಲ

    ಮಹಾದಾಯಿಗೆ ಕೇಂದ್ರ ಅನುಮತಿ ಕೊಡಲ್ಲ – ಗೋವಾ ಸಿಎಂ ಹೇಳಿಕೆಗೆ ಡಿಕೆಶಿ ಕೆಂಡಾಮಂಡಲ

    – ಗೋವಾ ಮುಖ್ಯಮಂತ್ರಿ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ
    – ಪ್ರಧಾನಿ ಮೋದಿ, ಜಲಮಂತ್ರಿಗಳೊಂದಿಗೆ ಚರ್ಚೆ ಮಾಡ್ತೀನಿ ಎಂದ ಡಿಸಿಎಂ

    ಬೆಂಗಳೂರು: ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡು ಮಹದಾಯಿ (Mahadayi) ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗೋವಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡಲ್ಲ ಎಂಬ ಗೋವಾ ಸಿಎಂ ಪ್ರಮೋದ್‌ ಸಾವಂತ್‌ (Pramod Sawant) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗೋವಾ ಸಿಎಂ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಗೋವಾ ಸಿಎಂಗೆ ಫೆಡರಲ್‌ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ. ಈಗಾಗಲೇ ಮಹದಾಯಿ ಯೋಜನೆ ಬಗ್ಗೆ ಅವಾರ್ಡ್ ತೀರ್ಮಾ ಆಗಿದೆ. ಟೆಂಡರ್ ಕೂಡ ಕರೆಯಲಾಗಿದೆ. ಕೆಲಸ ಶುರು ಮಾಡಬೇಕು. ಇದರ ಮಧ್ಯೆ ಅರಣ್ಯ ಇಲಾಖೆ ಏನೋ ನೊಟೀಸ್‌ ಕೊಟ್ಟಿದೆ. ನಾವು ಅದಕ್ಕೆ ಎಲ್ಲಾ ಉತ್ತರ ಕೊಡ್ತೀವಿ. ಮಹದಾಯಿ ವಿಷಯದಲ್ಲಿ ನಮ್ ಕೆಲಸ ನಾವು ಪ್ರಾರಂಭ ಮಾಡ್ತೀವಿ ಅಂತ ಸ್ಪಷ್ಟನೆ ನೀಡಿದರು.

    ಇದು ನಮ್ಮ ರಾಜ್ಯದ ಸಂಸದರ ಸ್ವಾಭಿಮಾನದ‌‌ ಪ್ರಶ್ನೆ. ಈವರೆಗೂ ಸಂಸದರು ಬಾಯಿ ಮುಚ್ಚಿಕೊಂಡಿರೋದೇ ತಪ್ಪು. ಒಂದು ಎಂಪಿ ಸೀಟಿಗೋಸ್ಕರ ನಾವು ನಮ್ಮನ್ನ ಮಾರಿಕೊಳ್ಳೋಕೆ ಸಾಧ್ಯವಿಲ್ಲ. 28 ಸಂಸದರು, 12 ಜನ ರಾಜ್ಯಸಭೆ ಸದಸ್ಯರು ಈ ಬಗ್ಗೆ ಮಾತಾಡಬೇಕು. ನಾನು ದೆಹಲಿಗೆ ಹೋಗಿ ಸಂಸದರ ಜೊತೆ ಮಾತಾಡ್ತೀನಿ. ಪ್ರಧಾನಿ, ಜಲಶಕ್ತಿ ಮಂತ್ರಿಗಳಿಗೂ ಸಮಯ ‌ಕೇಳ್ತೀನಿ. ಇದರ ಬಗ್ಗೆ ಚರ್ಚೆ ಮಾಡ್ತೀನಿ ಅಂತ‌ ತಿಳಿಸಿದರು.

    ಮಹದಾಯಿ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಮತ್ತು ಅರಣ್ಯ ಸಚಿವರು ರಾಜಕೀಯ ಮಾಡ್ತಿಲ್ಲ. ಅವರು ಸಹ ಅಭಿವೃದ್ಧಿ ಆಗಬೇಕು ಅಂತ ಹೇಳಿದ್ದಾರೆ. ಗೋವಾ ಇದರಲ್ಲಿ ರಾಜಕೀಯ ಮಾಡ್ತಿದೆ. ನಾವು ಮಹದಾಯಿ ಕೆಲಸ ಪ್ರಾರಂಭ ಮಾಡೋಕೆ ಏನು ಬೇಕೋ ಅದನ್ನ ಮಾಡ್ತೀವಿ ಅಂತ ಗೋವಾ ಸಿಎಂ ವಿರುದ್ಧ ಡಿಕೆಶಿವಕುಮಾರ್ ವಾಗ್ದಾಳಿ ನಡೆಸಿದರು.

  • ಮಹದಾಯಿ ಬಗ್ಗೆ ಇಲ್ಲಿವರೆಗೆ ಕಾಂಗ್ರೆಸ್‌ನವರು ಏನು ಮಾಡಿದ್ದೀರಿ: ಜೋಶಿ ಪ್ರಶ್ನೆ

    ಮಹದಾಯಿ ಬಗ್ಗೆ ಇಲ್ಲಿವರೆಗೆ ಕಾಂಗ್ರೆಸ್‌ನವರು ಏನು ಮಾಡಿದ್ದೀರಿ: ಜೋಶಿ ಪ್ರಶ್ನೆ

    – ಕಾಂಗ್ರೆಸ್ ಸರ್ಕಾರ ಇದ್ದಾಗ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಸಾಮಾನ್ಯ
    – ಸಿದ್ದರಾಮಯ್ಯ 5 ವರ್ಷ ಜಾತ್ರೆ ಮಾಡ್ತಿದ್ದಾರೆ

    ಹುಬ್ಬಳ್ಳಿ: ಮಹದಾಯಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ತಪ್ಪು ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಮಹದಾಯಿ ಬಗ್ಗೆ ಕಾಂಗ್ರೆಸ್‌ನವರು ಏನು ಮಾಡಿದ್ದೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಪ್ರಶ್ನಿಸಿದರು.

    ಮಹದಾಯಿ(Mahadayi) ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ ಎಂಬ ಸಿಎಂ ಆರೋಪ ಕುರಿತು ಮಾತನಾಡಿದ ಅವರು, ನಮ್ಮ ಯಾವ ಪ್ರಶ್ನೆಗೂ ಸಿಎಂ ಉತ್ತರ ಕೊಡುತ್ತಿಲ್ಲ. ನಮ್ಮ ಪ್ರಶ್ನೆಗಳನ್ನು ಡೈವರ್ಟ್ ಮಾಡ್ತಿದ್ದಾರೆ. 1970ರಿಂದ ಮಹದಾಯಿ ವಿಚಾರ ವೇಗ ಪಡೆದಿದೆ. 1980ರಿಂದ 2025ರವರಗೆ ರಾಜ್ಯದಲ್ಲಿ ಅತಿ ಹೆಚ್ಚು ನಿಮ್ಮದೇ ಸರ್ಕಾರವಿತ್ತು. ಯಾಕೆ ಅವರು ಮಹದಾಯಿ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಳಿದರು. ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ನಿರ್ಮಾಪಕನ ಜೊತೆ ಶ್ರೀಲೀಲಾ- ಶುರುವಾಯ್ತು ಚರ್ಚೆ

    ಮಹದಾಯಿಗೆ ಸಮಗ್ರ ಯೋಜನಾ ವರದಿ(ಡಿಪಿಆರ್) ಕೊಡಿಸಿದ್ದೇವೆ. ಪರಿಸರ ಅನುಮತಿ ಕೂಡಾ ಕೊಡಿಸಿದ್ದೇವೆ. ಆದರೆ ಸಮಸ್ಯೆ ಬಂದಿರೋದು ವನ್ಯಜೀವಿ ಮಂಡಳಿಯದ್ದು. ಈ ವಿಷಯ ಸುಪ್ರೀಂ ಕೋರ್ಟ್ನಲ್ಲಿದೆ. ಗೋವಾ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದೆ. ಇಲ್ಲಿಯವರೆಗೆ ಮಹದಾಯಿ ಬಗ್ಗೆ ನೀವು ಏನು ಮಾಡಿದ್ದೀರಿ ಹೇಳಿ ಎಂದರು. ಇದನ್ನೂ ಓದಿ: ಒಳ ಮೀಸಲಾತಿಗಾಗಿ ಇಂದಿನಿಂದ ಸಮೀಕ್ಷೆ, 2 ತಿಂಗಳಲ್ಲಿ ಜಾರಿ – ಯಾವ ಹಂತದಲ್ಲಿ ಏನು?

    ಕೆಪಿಎಸ್ಸಿ ಪರೀಕ್ಷೆ ಕುರಿತು ಮಾತನಾಡಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಂಬತ್ತು ಪ್ರಶ್ನೆಗಳೇ ತಪ್ಪು ಇದ್ದವು. ನಾವು ಪ್ರಶ್ನೆ ಮಾಡಿದ್ರೆ ಅವರಿಗೆ ಮೆಣಸಿನಕಾಯಿ ಹೊಡೆದಂಗೆ ಆಗುತ್ತದೆ. ಅವರು ಬಂಡತನದ ಪರಮಾವಧಿ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ 5 ವರ್ಷ ಜಾತ್ರೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ರನ್ನ ದೂರವಿಡಲು ಏನೇನೋ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಮಾರ್ಗದರ್ಶನ ನೀಡಿಲ್ಲ. ಕೇಂದ್ರ ಸರ್ಕಾರ ಪರೀಕ್ಷೆ ನಡೆಸಿದ್ರು ಅದನ್ನು ನಡೆಸೋದು ರಾಜ್ಯ ಸರ್ಕಾರ. ಈ ಬಗ್ಗೆ ದೂರು ಕೂಡಾ ದಾಖಲು ಮಾಡಲಾಗಿದೆ ಅಂತ ಹೇಳಿದ್ದಾರೆ ಎಂದರು. ಇದನ್ನೂ ಓದಿ: ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

    ಪಾಕಿಸ್ತಾನ(Pakistan) ಬಗ್ಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೇಂದ್ರ ತಗೆದುಕೊಳ್ಳುತ್ತದೆ. ಇದರಿಂದ ಈಗಾಗಲೇ ಪಾಕಿಸ್ತಾನ ಒದ್ದಾಡುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಖಂಡಿತ ಆಗುತ್ತದೆ. ಕಾಲಮಿತಿ ಹಾಕಿ ಹೀಗೆ ಮಾಡಬೇಕು ಅಂತ ಹೇಳಲು ಆಗಲ್ಲ. ಪ್ರಧಾನಿ, ರಕ್ಷಣಾ ಮಂತ್ರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಜಮೀರ್ ಅಹ್ಮದ್(Zameer Ahmed) ಮೊದಲು ಶಾಂತ ರೀತಿಯಿಂದ ಇದ್ರೆ ಸಾಕು. ದೇಶದಲ್ಲಿ ನಮ್ಮ ಮಿಲಿಟರಿ ಪಡೆ ಕ್ರಮ ಕೈಗೊಳ್ಳುತ್ತದೆ. ಅವರು ಶಾಂತಿ ಮತ್ತು ಸಮಾಧಾನದಿಂದ ಇದ್ದರೆ ಸಾಕು ಎಂದು ಹೇಳಿದರು. ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿ ನಾಪತ್ತೆ

    ರಾಜ್ಯದಲ್ಲಿ ಕಾಂಗ್ರೆಸ್(Congress) ಸರ್ಕಾರ ಇದ್ದಾಗ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗೋದು, ಕೊಲೆ ಮಾಡೋದು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರ ಕೂಡಾ ಕೊಲೆಗಡುಕರನ್ನು ರಕ್ಷಣೆ ಮಾಡುತ್ತದೆ ಎಂದು ಕಿಡಿಕಾರಿದರು.

  • ಮಹದಾಯಿ ವಿಚಾರದಲ್ಲಿ ಅಪರಾಧ ಮಾಡಿದ್ದು ಕಾಂಗ್ರೆಸ್: ಬೊಮ್ಮಾಯಿ

    ಮಹದಾಯಿ ವಿಚಾರದಲ್ಲಿ ಅಪರಾಧ ಮಾಡಿದ್ದು ಕಾಂಗ್ರೆಸ್: ಬೊಮ್ಮಾಯಿ

    – ನ್ಯಾಯಾಧಿಕರಣಕ್ಕೆ ಹೋಗುವ ಅಗತ್ಯ ಇರಲಿಲ್ಲ

    ಹುಬ್ಬಳ್ಳಿ: ಮಹದಾಯಿ (Mahadayi) ಯೋಜನೆ ಹಿನ್ನಡೆಗೆ ಕಾಂಗ್ರೆಸ್ ನೇರ ಕಾರಣ. ಈ ವಿಚಾರವಾಗಿ ನ್ಯಾಯಾಧಿಕರಣಕ್ಕೆ ಹೋಗುವ ಅವಶ್ಯಕತೆ ಇರಲಿಲ್ಲ, ಮನಮೋಹನ್ ಸಿಂಗ್ (Manmohan Singh) ಸರ್ಕಾರದ ಅವಧಿಯಲ್ಲಿ ಟ್ರಿಬ್ಯುನಲ್‍ಗೆ ಹೋಗಿದ್ದು ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ್ಯಾಯಮಂಡಳಿಗೆ ಹೋದ ಪರಿಣಾಮ ಮಹಾದಾಯಿ ಯೋಜನೆ ಎಂಟು – ಹತ್ತು ವರ್ಷ ತಡವಾಯಿತು. ಮಹದಾಯಿ ವಿಚಾರದಲ್ಲಿ ದೊಡ್ಡ ಅಪರಾಧ ಮಾಡಿದ್ದು ಕಾಂಗ್ರೆಸ್. ನ್ಯಾಯಾಧಿಕರಣಕ್ಕೆ ತಾವೇ ಬರೆದುಕೊಟ್ಟಿದ್ದಾರೆ ಮಹದಾಯಿಯಿಂದ ಮತ್ತು ಮಲಪ್ರಭಾ ನಡುವೆ ಇಂಟರ್ ಲಿಂಕಿಂಗ್ ಕಾಲುವೆ ಮಾಡಿದ್ದೆವು. ನಾವು ಮಾಡಿದ್ದ ಇಂಟರ್ ಲಿಂಕಿಂಗ್ ಕಾಲುವೆಗೆ ಕಾಂಗ್ರೆಸ್‍ನವರು ಗೋಡೆ ಕಟ್ಟಿದರು. ಕಾಲುವೆಯಲ್ಲಿ ಗೋಡೆ ಕಟ್ಟಿದ ಅಪಖ್ಯಾತಿ ಕಾಂಗ್ರೆಸ್‍ದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌ವಿ ಅಂಜಾರಿಯಾ ಪ್ರಮಾಣ ವಚನ

    ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಇದಕ್ಕೆ ಸಂಪೂರ್ಣ ವಿರೋಧ ಮಾಡಿತ್ತು. ಅಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇ ಡಿಪಿಆರ್‌ಗೆ ಅನುಮತಿ ಪಡೆಯಲಾಗಿತ್ತು. ಐದು ವರ್ಷ ಅಧಿಕಾರದಲ್ಲಿದ್ದರೂ ಡಿಪಿಆರ್‌ಗೆ ಅನುಮತಿ ಪಡೆಯಲಾಗಿಲ್ಲ. ಡಿಪಿಆರ್ ಅನುಮತಿ ಸಿಕ್ಕಿದ್ದು, ಸದ್ಯ ಪರಿಸರ ಇಲಾಖೆಯಲ್ಲಿದೆ. ಪರಿಸರ ಇಲಾಖೆಯವರು ಕೆಲವು ಮಾಹಿತಿ ಕೇಳಿದ್ದು, ರಾಜ್ಯ ಸರ್ಕಾರ ಮಾಹಿತಿ ಕೊಡಲಿ. ನಾವು ಸಹ ಪರಿಸರ ಇಲಾಖೆ ಮೇಲೆ ಒತ್ತಡ ಹೇರುತ್ತೇವೆ ಎಂದಿದ್ದಾರೆ.

    ಪರಿಸರ ಇಲಾಖೆ ಅನುಮತಿ ಪಡೆಯದೇ ಟೆಂಡರ್ ಪ್ರಕ್ರಿಯೆ ಮಾಡುವ ಕೆಲಸ ಮಾಡಿದ್ದಾರೆ. ಗೋವಾದವರು ಈಗ ಕೋರ್ಟ್‍ಗೆ ಹೋಗಿದ್ದಾರೆ. ರಾಜ್ಯ ಸರ್ಕಾರ ಕೋರ್ಟ್‍ನಲ್ಲಿ ಸಮರ್ಥವಾದ ಮಾಡುತ್ತಿಲ್ಲ. ಕೃಷ್ಣ ಯೋಜನೆ, ಮೇಕೆದಾಟು ಸೇರಿ ಎಲ್ಲಾ ನೀರಾವರಿ ಯೋಜನೆ ವಿಚಾರದಲ್ಲೂ ಸರ್ಕಾರದಿಂದ ನಿರ್ಲಕ್ಷ್ಯವಾಗುತ್ತಿದೆ. ಈ ಸರ್ಕಾರ ಬಂದ ಮೇಲೆ ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ. ಗೋಡೆ ಕಟ್ಟಿದ ಬಗ್ಗೆ, ಟ್ರಿಬ್ಯುನಲ್‍ಗೆ ಹೋಗಿದ್ದ ಬಗ್ಗೆ ಮೊದಲು ಕಾಂಗ್ರೆಸ್ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.

    ಮೋದಿ ಅವರಿಗೆ ಎರಡು ನಾಲಿಗೆ ಎಂದು ಸಿಎಂ ಸಿದ್ದರಾಮಯ್ಯ ಅವರ ಆರೋಪದ ವಿಚಾರವಾಗಿ, ಪ್ರಧಾನಿ ಮೋದಿಯವರು ನುಡಿದಂತೆ ನಡೆದಿದ್ದಾರೆ. ಸುಳ್ಳು ಮತ್ತು ಭ್ರಷ್ಟಾಚಾರ ಕಾಂಗ್ರೆಸ್‍ನ ಗಂಗೋತ್ರಿಯಾಗಿದೆ. ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ್ದು, ನಾವು ಕೇಂದ್ರ ಸರ್ಕಾರದ ಪರ ನಿರ್ಣಯ ಅಂಗೀಕರಿಸಿದ್ದೇವೆ. ಎರಡು ಅಂಗೀಕಾರಗಳು ಜನರ ಮುಂದೆ ಹೋಗಲಿದೆ ಎಂದರು. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಎಂದ ಹೆಗಡೆ ವಿರುದ್ಧ ಸುಮೊಟೋ ಕೇಸ್ ದಾಖಲು

  • ಕಾಂಗ್ರೆಸ್ ಪದೇ ಪದೇ ಸಾವರ್ಕರ್‌ಗೆ ಅಪಮಾನಿಸುತ್ತಿದೆ – ಅಮಿತ್ ಶಾ ಕಿಡಿ

    ಕಾಂಗ್ರೆಸ್ ಪದೇ ಪದೇ ಸಾವರ್ಕರ್‌ಗೆ ಅಪಮಾನಿಸುತ್ತಿದೆ – ಅಮಿತ್ ಶಾ ಕಿಡಿ

    ಬೆಳಗಾವಿ: ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ (Congress) ಪದೇಪದೇ ಅಪಮಾನ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಿಡಿಕಾರಿದ್ದಾರೆ.

    ಸವದತ್ತಿಯಲ್ಲಿ (Savadatti) ಚುನಾವಣಾ (Election) ಪ್ರಚಾರದ ವೇಳೆ ಮಾತನಾಡಿದ ಅವರು, ಎರಡು ಬಾರಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಆಗಿದ್ದರು. ಅಲ್ಲದೆ ಕಾಂಗ್ರೆಸ್ ಸಾವರ್ಕರ್ ಅವರನ್ನು ಹಿಂಡಲಗ (Hindalga) ಜೈಲಿಗೆ ಹಾಕಿಸಿತ್ತು. ಈಗಲೂ ಕಾಂಗ್ರೆಸ್ ಅವರನ್ನು ಅಪಮಾನಿಸುವುದನ್ನು ನಿಲ್ಲಿಸಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಖರ್ಗೆ ಹತ್ಯೆಗೆ ಸಂಚು ಆಡಿಯೋ ಬಾಂಬ್‌ – ಸಿಎಂ ಬೊಮ್ಮಾಯಿ ಹೇಳಿದ್ದೇನು?

    ರಾಹುಲ್ ಗಾಂಧಿಯವರು (Rahul Gandhi) ಸಾವರ್ಕರ್ ಅವರಿಗೆ ಅಪಮಾನ ಮಾಡುತ್ತಾರೆ. ಅವರು 10 ಜನ್ಮ ಹುಟ್ಟಿದರೂ ಸಾವರ್ಕರ್‍ರಂತಹ ಬಲಿದಾನ ನೋಡಲು ಸಾಧ್ಯವಿಲ್ಲ. ಅವರ ತ್ಯಾಗದ ಪ್ರತೀಕವಾಗಿ ಸುವರ್ಣ ಸೌಧದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಹಾಕಲಾಗಿದೆ ಎಂದಿದ್ದಾರೆ.

    ಕಾಂಗ್ರೆಸ್ ಪಕ್ಷ ನಿರಂತರವಾಗಿ ರೈತರಿಗೆ ಅನ್ಯಾಯ ಮಾಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ರೈತರಿಗೆ ಅನ್ಯಾಯ ಮಾಡಿದೆ. ಹಿಂದೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕಾಂಗ್ರೆಸ್ ಸರ್ಕಾರ ಮಹದಾಯಿ (Mahadayi) ವಿವಾದ ಬಗೆಹರಿಸಲಿಲ್ಲ. 2007ರಲ್ಲಿ ಸೋನಿಯಾ ಗಾಂಧಿ ಮಹದಾಯಿ ನದಿ ನೀರು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದಿದ್ದರು. ಈಗ ಅವರ ಸರ್ಕಾರ ಹೋಗಿದೆ. ಪ್ರಧಾನಿ ಮೋದಿ ಆಗಮಿಸಿ ಕರ್ನಾಟಕಕ್ಕೆ ಮಹದಾಯಿ ನೀರು ಹರಿಸುವ ನಿರ್ಧಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿಯ ಈ ನೆಲ ಬಸವಣ್ಣರವರ ಕ್ಷೇತ್ರ, ಜಗತ್ತಿಗೆ ಪ್ರಜಾಪ್ರಭುತ್ವ ಪಾಠ ಮಾಡಿದ ಬಸವಣ್ಣರಿಗೆ ನಮಿಸುತ್ತೇನೆ. ಅಲ್ಲದೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಸ್ಮರಿಸುತ್ತೇನೆ. ಬೆಂಗಳೂರಿನಿಂದ ತಡವಾಗಿ ಹೊರಟೆ ಹೀಗಾಗಿ ಸವದತ್ತಿಗೆ ಆಗಮಿಸಲು ವಿಳಂಬವಾಗಿದೆ. ಕ್ಷಮೆ ಇರಲಿ ಎಂದು ಜನರಲ್ಲಿ ಕೇಳಿಕೊಂಡರು. ಈ ಬಾರಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್

  • ತಮ್ಮನ್ನು ನರಕದಲ್ಲಿಟ್ಟಿದ್ದಕ್ಕೆ ಕಾಂಗ್ರೆಸ್‍ನ್ನು ಜನ ಮನೆಗೆ ಕಳಿಸಿದ್ರು: ಬೊಮ್ಮಾಯಿ ಕಿಡಿ

    ತಮ್ಮನ್ನು ನರಕದಲ್ಲಿಟ್ಟಿದ್ದಕ್ಕೆ ಕಾಂಗ್ರೆಸ್‍ನ್ನು ಜನ ಮನೆಗೆ ಕಳಿಸಿದ್ರು: ಬೊಮ್ಮಾಯಿ ಕಿಡಿ

    ಹುಬ್ಬಳ್ಳಿ: ಕಾಂಗ್ರೆಸ್ ಜನರನ್ನು ಇಷ್ಟು ವರ್ಷ ನರಕದಲ್ಲಿ ಇಟ್ಟಿತ್ತು. ಅದಕ್ಕೆ ಜನ ಅದನ್ನು ತಿರಸ್ಕರಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದರು.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ (Congress) ರಾಜ್ಯಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರ ಬಿಜೆಪಿ (BJP) ವಿರುದ್ಧದ ಹೇಳಿಕೆಗೆ ತಿರುಗೇಟು ಕೊಟ್ಟರು. ಕಾಂಗ್ರೆಸ್ ಬೇಜವಾಬ್ದಾರಿ ವಿರೋಧ ಪಕ್ಷವಾಗಿದೆ. ಜನರಿಗೆ ಸರ್ಕಾರದ ವೈಫಲ್ಯ ಹಾಗೂ ತಮ್ಮ ಪಕ್ಷದ ಸಾಧನೆ ತೋರಿಸುವ ಬದಲು, ಸುರ್ಜೇವಾಲ ಈ ರೀತಿ ಮಾತನಾಡುವುದು ಸರಿಯಲ್ಲ. ಅವನಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

    ಮೊದಲು ಕಾಂಗ್ರೆಸ್ ತನ್ನ ಒಳ ಜಗಳವನ್ನು ಸರಿಮಾಡಿಕೊಳ್ಳಲಿ. ಆಮೇಲೆ ಕರ್ನಾಟಕದ ಬಗ್ಗೆ ಮಾತಾಡಲಿ. ಜನರಿಗೆ ಯಾರು ರಾಕ್ಷಸರು ಹಾಗೂ ಯಾರು ದೇವತೆಗಳು ಎಂದು ತಿಳಿದಿದೆ. ಕಾಂಗ್ರೆಸ್‍ನಲ್ಲಿ ಅಸುರರ ಪಟ್ಟಿ ಬಹಳ ದೊಡ್ಡದಿದೆ ಎಂದು ಕುಟುಕಿದರು. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    ಎಪ್ಪತ್ತು ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್‍ನ್ನು ಜನ ಕಿತ್ತು ಒಗೆದಿದ್ದಾರೆ. ಈಗ ಚುನಾವಣೆಗೋಸ್ಕರ ಜನರನ್ನು ಮರಳುಮಾಡುವ ತಂತ್ರ ಬಳಸುತ್ತಿದೆ ಎಂದರು.

    ಬಜೆಟ್ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಹಾದಾಯಿ (Mahadayi) ವಿಚಾರ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

    ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ನಿರಂತರವಾಗಿ ಬಣ್ಣ ಬದಲಿಸುವುದು ಜನರಿಗೆ ತಿಳಿದಿದೆ ಎಂದರು. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಸಾಧ್ಯವಿಲ್ಲ: ಎಚ್.ಕೆ ಪಾಟೀಲ್

    ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಸಾಧ್ಯವಿಲ್ಲ: ಎಚ್.ಕೆ ಪಾಟೀಲ್

    ಹುಬ್ಬಳ್ಳಿ: ಮಹಾದಾಯಿ (Mahadayi) ವಿಚಾರದಲ್ಲಿ ಬಿಜೆಪಿ (BJP) ಸುಳ್ಳು ಹೇಳುತ್ತಲೇ ಬಂದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಿನಾಂಕವಿಲ್ಲದ, ಸಂಖ್ಯೆ ಇಲ್ಲದ ಕಡತ ಟ್ವೀಟ್ ಮಾಡಿದ್ದರು. ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ (H K Patil) ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವರು ಸುಳ್ಳು ಹೇಳಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಕಾಂಗ್ರೆಸ್ (Congress) ಬಹಿರಂಗಪಡಿಸುತ್ತಲೇ ಬಂದಿದೆ. ಅರ್ಜಿ ಕೊಟ್ಟ ಕೂಡಲೇ ಅನುಮತಿ ಸಿಗುತ್ತದೆ ಎಂದು ಪ್ರಹ್ಲಾದ್ ಜೋಶಿ (Pralhad Joshi), ಸಿಎಂ ಬೊಮ್ಮಾಯಿ (Basavaraj Bommai) ಹೇಳಿದ್ದರು. ಹದಿನೈದು ದಿನದೊಳಗೆ ಕಾಮಗಾರಿ ಆರಂಭಿಸುವುದಾಗಿ ಪ್ರಚಾರ ಮಾಡಿದ್ದರು. ಪ್ರಹ್ಲಾದ್ ಜೋಶಿಯವರು ನನಗೆ ಮತ್ತು ಸಿದ್ದರಾಮಯ್ಯ (Siddaramaiah) ನವರಿಗೆ ಕಣ್ಣು ಕಾಣಿಸುವುದಿಲ್ಲ ಎಂದು ಹೇಳಿದ್ದರು. ನಮ್ಮ ರಾಜಕೀಯ ಸಂಸ್ಕೃತಿಗೆ ಅಪಹಾಸ್ಯ ಮಾಡಿ ಅವಮಾನ ಮಾಡಿದರು ಎಂದರು.

    ಕಳಸಾ- ಬಂಡೂರಿ ಯೋಜನೆ (Kalasa-Banduri Nala project) ಜಾರಿಗೆ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕಾಗಿದೆ. ಕ್ಲಿಯರೆನ್ಸ್ ಇಲ್ಲದೆ ಕಾಮಗಾರಿ ಪ್ರಾರಂಭಿಸದಂತೆ ಕೋರ್ಟ್ ಆದೇಶ ನೀಡಿದೆ. ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಇದುವರೆಗೆ ಮಲಗಿದೆ. ಎಲ್ಲಿದೆ ನಿಮ್ಮ ಪೌರುಷ. ನಿಮ್ಮ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿದರು.

    ಮಹಾದಾಯಿ ಆಗಿಯೇ ಬಿಟ್ಟಿತು ಎಂದು ವಿಜಯೋತ್ಸವ ಆಚರಿಸಿದ್ದರು. ಪಟಾಕಿ ಹಚ್ಚಿ ಸಂಭ್ರಮಿಸಿದರು. ಈಗ ಎಲ್ಲಿ ಹೋಯಿತು ನಿಮ್ಮ ಪೌರುಷ? ಸುಳ್ಳಿನ ಮೇಲೆ ಬಿಜೆಪಿ ಸವಾರಿ ಮಾಡುತ್ತಿದೆ ಎಂದರು. ಇದನ್ನೂ ಓದಿ: ಟ್ರಾಫಿಕ್ ದಂಡ 50% ರಿಯಾಯ್ತಿ 5 ತಿಂಗಳು ಅವಧಿ ವಿಸ್ತರಣೆ ಮಾಡಿ – ಜೆಡಿಎಸ್ ಸದಸ್ಯ ಮಂಜೇಗೌಡ ಒತ್ತಾಯ

    ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah), ಮಹಾದಾಯಿ ನಮ್ಮ ಬಿಜೆಪಿಯ ಕೊಡುಗೆ ಎಂದು ಹೇಳುತ್ತಾರೆ. ಈಗ ಅಮಿತ್ ಶಾ ಎಲ್ಲಿದ್ದಾರೆ? ನಿಮಗೆ ಮಹಾದಾಯಿ ಹೆಸರಲ್ಲಿ ಮತ ಕೇಳುವ ನೈತಿಕತೆಯಿಲ್ಲ. ಸುಪ್ರೀಂ (Supreme Court) ತೀರ್ಪು ಬಂದು ನೂರು ತಾಸುಗಳಾಯಿತು. ಆದರೆ ರಾಜ್ಯಸರ್ಕಾರ ಮಾತ್ರ ನಿದ್ರೆ ಮಾಡುತ್ತಿದೆ. ಎಲ್ಲಾ ಅನುಮತಿ ಪಡೆದಿರುವುದಾಗಿ ಹೇಳಿದ್ದರು. ಆದರೆ ಈಗ ಗೋವಾ ವೈಲ್ಡ್ ಲೈಫ್ ಅನುಮತಿ ಬೇಕು ಎಂದು ಕೋರ್ಟ್ ಹೇಳಿದೆ. ಬಿಜೆಪಿಯ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ

    ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ

    ಧಾರವಾಡ: ಪದೇ ಪದೇ ಮಹದಾಯಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಲೇ ಬಂದಿರುವ ಗೋವಾ ಶಾಸಕರು ಹಾಗೂ ಸರ್ಕಾರ, ಈಗ ಮತ್ತೆ ಅದೇ ರಾಗ ಆರಂಭಿಸಿದೆ.

    ಮಹದಾಯಿ ವಿಷಯದಲ್ಲಿ ಕ್ಯಾತೆ ತೆಗೆದಿರುವ ಗೋವಾದ ಶಾಸಕ ವಿಜಯ್ ಸರದೇಸಾಯಿ, ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಆಗ್ರಹಿಸಿದ್ದಾರೆ. ಕಣಕುಂಬಿ ಬಳಿ ಕರ್ನಾಟಕ ಅನಧಿಕೃತ ಕಾಮಗಾರಿ ನಡೆಸುತ್ತಿರುವ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಡೆಯುತ್ತಿದ್ದಂತೆ ಕುಸಿದ ಫುಟ್‍ಪಾತ್ – ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು

    ಪರಿಸರವಾದಿ ರಾಜೇಂದ್ರ ಕರ್ಕೇರಾ ಹೇಳಿಕೆ ಆಧರಿಸಿ ವಿಜಯ್ ಆರೋಪ ಮಾಡಿದ್ದು, ಕರ್ನಾಟಕ ನ್ಯಾಯಾಂಗದ ಆದೇಶ ಮೀರಿ ಕಾಮಗಾರಿ ಮಾಡುತ್ತಿದ್ದಾರೆ. ಕರ್ನಾಟಕ ಕಳಸಾ-ಬಂಡೂರಿ ನಾಲೆ ಬಳಿ ಗುರುತು ಕಂಬ ನೆಟ್ಟಿದೆ. ಈ ಆಧಾರವನ್ನು ಮುಂದಿಟ್ಟುಕೊಂಡು ಕಾಮಗಾರಿ ನಡೆಸಿರುವ ಕುರಿತಾಗಿ ವೀಡಿಯೋ ಸಮೇತ ಸುಪ್ರಿಂಕೋರ್ಟ್ ಗಮನಕ್ಕೆ ತರಲು ಶಾಸಕ ಆಗ್ರಹಿಸಿದ್ದು, ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ

    Live Tv
    [brid partner=56869869 player=32851 video=960834 autoplay=true]