Tag: Maha Kumbh

  • ಕುಂಭಮೇಳದಲ್ಲಿ ಅಮಿತ್‌ ಶಾ ಪವಿತ್ರ ಸ್ನಾನ

    ಕುಂಭಮೇಳದಲ್ಲಿ ಅಮಿತ್‌ ಶಾ ಪವಿತ್ರ ಸ್ನಾನ

    ಪ್ರಯಾಗ್‌ರಾಜ್‌: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಸಾಧುಗಳ ಜೊತೆಗೆ  ಮಹಾ ಕುಂಭಮೇಳದಲ್ಲಿ (Maha Kumbh) ಪವಿತ್ರ ಸ್ನಾನ (Holy Dip) ಮಾಡಿದ್ದಾರೆ.

    ತ್ರಿವೇಣಿ ಸಂಗಮದಲ್ಲಿ (Triveni Sangam) ಪವಿತ್ರ ಸ್ನಾನ ಮಾಡಿದ ನಂತರ ಅವರು ಬಡೇ ಹನುಮಾನ್ ಜಿ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಲಿದ್ದಾರೆ. ನಂತರ ಜುನಾ ಅಖಾರಕ್ಕೆ ತೆರಳಿ ಮಹಾರಾಜರು ಮತ್ತು ಅಖಾರದ ಇತರ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸೇವಿಸಲಿದ್ದಾರೆ.

    ಫೆ. 5 ರಂದು ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ನಾನ ಮಾಡಲಿದ್ದಾರೆ.

  • ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ: ಮಹಾ ಕುಂಭಮೇಳ ಬಣ್ಣಿಸಿದ ಸಂಸದೆ ಸುಧಾಮೂರ್ತಿ

    ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ: ಮಹಾ ಕುಂಭಮೇಳ ಬಣ್ಣಿಸಿದ ಸಂಸದೆ ಸುಧಾಮೂರ್ತಿ

    ಪ್ರಯಾಗ್‌ರಾಜ್‌: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ (Maha Kumbh Mela) ವ್ಯವಸ್ಥೆಗಳ ಬಗ್ಗೆ ರಾಜ್ಯಸಭಾ ಸಂಸದೆ ಸುಧಾಮೂರ್ತಿ (Sudha Murthy) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಮಹಾ ಕುಂಭಮೇಳ ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್ ಎಂದು ಬಣ್ಣಿಸಿದ್ದಾರೆ. ಮಹಾಕುಂಭ ವ್ಯವಸ್ಥೆಗಳ ಮಾದರಿಯು ಇತರ ಸರ್ಕಾರಗಳು ಅನುಸರಿಸಲು ಮಾನದಂಡವಾಗಿ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನಮ್ಮ ಭಾಗ್ಯ: ಗೌತಮ್ ಅದಾನಿ

    ಸೋಮವಾರ ಮಹಾಕುಂಭದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದ ರಾಜ್ಯಸಭಾ ಸಂಸದೆ ಸುಧಾಮೂರ್ತಿ, ಕಾರ್ಯಕ್ರಮದ ವ್ಯವಸ್ಥೆ ಮತ್ತು ಸಂಘಟನೆಯಿಂದ ಪ್ರಭಾವಿತರಾಗಿದ್ದಾರೆ.

    ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್ ಆಗಿದೆ. ಇದು ನನ್ನ ಮೊದಲ ಕುಂಭ. ವ್ಯವಸ್ಥೆಗಳು ತುಂಬಾ ಚೆನ್ನಾಗಿವೆ. ಎಲ್ಲಾ ಸರ್ಕಾರಗಳು ಈ ಮಾದರಿಯನ್ನು ಅನುಸರಿಸಬಹುದು. ತುಂಬಾ ಒಳ್ಳೆಯ ಅನುಭವ ನೀಡಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಬರೋಬ್ಬರಿ 10 ಕೋಟಿ ಭಕ್ತರಿಂದ ಪುಣ್ಯಸ್ನಾನ

    ಮಹಾ ಕುಂಭಮೇಳ ಆರಂಭವಾದಾಗಿನಿಂದ, 10.2 ಕೋಟಿಗೂ ಹೆಚ್ಚು ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಬೃಹತ್ ಆಧ್ಯಾತ್ಮಿಕ ಕಾರ್ಯಕ್ರಮವು ಅಭೂತಪೂರ್ವ ಭಕ್ತ ಸಮೂಹಕ್ಕೆ ಸಾಕ್ಷಿಯಾಗಿದೆ.

  • ಮಹಾಕುಂಭ ಮೇಳದಲ್ಲಿ ಪ್ರಸಾದ ತಯಾರಿಸಿದ ಅದಾನಿ

    ಮಹಾಕುಂಭ ಮೇಳದಲ್ಲಿ ಪ್ರಸಾದ ತಯಾರಿಸಿದ ಅದಾನಿ

    – ಅದಾನಿ ಗ್ರೂಪ್‌, ಇಸ್ಕಾನ್‌ ಸಹಯೋಗದಿಂದ ಮಹಾಪ್ರಸಾದ ಸೇವೆ

    ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಮಂಗಳವಾರ ಮಹಾಕುಂಭ ಮೇಳದ ( Maha Kumbh Mela) ಇಸ್ಕಾನ್ ಶಿಬಿರದಲ್ಲಿ ಪ್ರಸಾದ ತಯಾರಿಸಿ ಸೇವೆ ಸಲ್ಲಿಸಿದ್ದಾರೆ

    &

    nbsp;

    ಜನವರಿ 13 ರಿಂದ ಫೆಬ್ರವರಿ 26 ರವರೆಗಿನ ಮಹಾಕುಂಭ ಮೇಳದ ಸಂಪೂರ್ಣ ಅವಧಿಗೆ ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದೊಂದಿಗೆ ‘ಮಹಾಪ್ರಸಾದ್ ಸೇವಾ’ ಉಪಕ್ರಮದಡಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತಾಡಿದ ಅವರು, ಮಹಾಕುಂಭ ಮೇಳದಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ. ಕುಂಭ ಭಕ್ತಿ ಮತ್ತು ಸೇವೆಯ ಪವಿತ್ರ ಕೇಂದ್ರವಾಗಿದೆ. ಇಸ್ಕಾನ್ ಸಹಯೋಗದೊಂದಿಗೆ ಭಕ್ತರಿಗಾಗಿ ನಾವು ಮಹಾಪ್ರಸಾದ ಸೇವೆಯನ್ನು ಮಾಡುತ್ತಿರುವುದು ನನ್ನ ಅದೃಷ್ಟ ಎಂದಿದ್ದಾರೆ.

    ಮಹಾಪ್ರಸಾದ ಸೇವೆಯು 50 ಲಕ್ಷ ಭಕ್ತರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. ಎರಡು ದೊಡ್ಡ ಅಡುಗೆಮನೆಗಳಲ್ಲಿ ಊಟವನ್ನು ತಯಾರಿಸಿ ಮೇಳದ ಪ್ರದೇಶದಾದ್ಯಂತ 40 ಸ್ಥಳಗಳಲ್ಲಿ ವಿತರಿಸಲಾಗುತ್ತದೆ. ಪ್ರತಿದಿನ 1 ಲಕ್ಷ ಭಕ್ತರಿಗೆ ಆಹಾರವನ್ನು ನೀಡುವ ನಿರೀಕ್ಷೆಯಿದೆ. ಇನ್ನೂ ಈ ಸೇವೆಯು 2,500 ಸ್ವಯಂಸೇವಕರು, ಅಂಗವಿಕಲ ಭಕ್ತರು ಮತ್ತು ಮಕ್ಕಳಿರುವ ತಾಯಂದಿರಿಗೆ ಗಾಲ್ಫ್ ಕಾರ್ಟ್‌ಗಳು ಮತ್ತು ಗೀತಾ ಸಾರ್‌ನ ಐದು ಲಕ್ಷ ಪ್ರತಿಗಳ ವಿತರಣೆಯನ್ನು ಒಳಗೊಂಡಿದೆ.

    ಈ ಉಪಕ್ರಮದ ಕುರಿತು ಚರ್ಚಿಸಲು ಅದಾನಿ ಇಸ್ಕಾನ್ ಆಡಳಿತ ಮಂಡಳಿ ಆಯೋಗದ ಅಧ್ಯಕ್ಷ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿಯಾದರು.

    ಇಸ್ಕಾನ್ ಪಾಲುದಾರಿಕೆಗೆ ಧನ್ಯವಾದ ಹೇಳಿದ ಅದಾನಿ, ʻಮಾ ಅನ್ನಪೂರ್ಣೆಯ ಆಶೀರ್ವಾದದೊಂದಿಗೆ, ಲಕ್ಷಾಂತರ ಭಕ್ತರಿಗೆ ಉಚಿತ ಆಹಾರವನ್ನು ಒದಗಿಸಲಾಗುವುದು. ಸೇವೆಯು ದೇಶಭಕ್ತಿ, ಧ್ಯಾನ ಮತ್ತು ಪ್ರಾರ್ಥನೆಯ ಅತ್ಯುನ್ನತ ರೂಪವಾಗಿದೆ. ನಿಜವಾದ ಅರ್ಥದಲ್ಲಿ, ಸೇವೆಯೇ ದೇವರುʼ ಎಂದಿದ್ದಾರೆ.

  • ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ – 18 ಟೆಂಟ್‌ಗಳು ಭಸ್ಮ, ಪರಿಸ್ಥಿತಿ ಅವಲೋಕಿಸಿದ ಮೋದಿ

    ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ – 18 ಟೆಂಟ್‌ಗಳು ಭಸ್ಮ, ಪರಿಸ್ಥಿತಿ ಅವಲೋಕಿಸಿದ ಮೋದಿ

    ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳದ ಟೆಂಟ್ ಸಿಟಿಯಲ್ಲಿ ಎರಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ ಅವಗಢ ಸಂಭವಿಸಿದ್ದು, ಸುಮಾರು 18 ಟೆಂಟ್‌ಗಳು ಸುಟ್ಟು ಭಸ್ಮವಾಗಿದೆ. ಆದ್ರೆ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಬೆಂಕಿ ವ್ಯಾಪಿಸುತ್ತಿದ್ದಂತೆ ಸುರಕ್ಷತಾ ವ್ಯವಸ್ಥೆಯ ಭಾಗವಾಗಿ ನಿಯೋಜಿಸಲಾಗಿದ್ದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಿಸಿವೆ. ಸುತ್ತಮುತ್ತಲಿನ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದ ಜನರನ್ನ ಸುರಕ್ಷತೆಗಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 2 ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ

    ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಘಟನಾವಳಿಯ ಬಗ್ಗೆ ಮಾಹಿತಿ ನೀಡುವಂತೆ ಯೋಗಿ ಆದಿತ್ಯನಾಥ್‌ ಅವರಿಗೆ ತಿಳಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ

    7.72 ಕೋಟಿ ಭಕ್ತರಿಂದ ಪುಣ್ಯಸ್ನಾನ:
    ಜ.13ರಂದು ಆರಂಭವಾದ ಮಹಾ ಕುಂಭಮೇಳವು ಫೆ.26ರ ವರೆಗೆ ನಡೆಯಲಿದೆ. ಈಗಾಗಲೇ 7.72 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಭಾನುವಾರವಾದ ಇಂದು 46.95 ಲಕ್ಷಕ್ಕೂ ಹೆಚ್ಚು ಭಕ್ತರು ಸ್ನಾನ (ಪವಿತ್ರ ಸ್ನಾನ) ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇನ್ನೂ ಮಹಾ ಕುಂಭದಲ್ಲಿ ಬೆಂಕಿ ನಂದಿಸುವ ಘಟನೆಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆಡಳಿಯ ಮಂಡಳಿಯು ರಕ್ಷಣಾ ಕ್ರಮ ಕೈಗೊಳ್ಳುವ ಜೊತೆಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲಿದೆ. ಅಲ್ಲದೇ ಪ್ರತಿಯೊಬ್ಬರ ಸುರಕ್ಷತೆಗಾಗಿ ನಾವು ಗಂಗಾ ದೇವಿಯನ್ನು ಪ್ರಾರ್ಥಿಸುತ್ತೇವೆ ಎಂಬುದಾಗಿ ಕುಂಭಮೇಳ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ತೀವ್ರಗೊಂಡ ಬಣ ಕಚ್ಚಾಟ – ವಸ್ತುಸ್ಥಿತಿ ವರದಿ ಪಡೆಯಲು ರಾಜ್ಯಕ್ಕೆ ಬಿಎಲ್ ಸಂತೋಷ್ ಎಂಟ್ರಿ

  • 2 ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ

    2 ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ

    ಪ್ರಯಾಗ್‌ರಾಜ್:‌ ಇಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳದ (Maha Kumbh Mela) ಟೆಂಟ್‌ ಸಿಟಿಯಲ್ಲಿ ಎರಡು ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಭಾರೀ ಅಗ್ನಿ ಅವಗಢ ಸಂಭವಿಸಿದೆ. ಸಿಲಿಂಡರ್‌ ಸ್ಫೋಟಗೊಂಡ (Cylinder Blast) ಕೆಲವೇ ಕ್ಷಣದಲ್ಲಿ ಅಕ್ಕಪಕ್ಕದ ಡೇರೆಗಳಿಗೂ ಅಗ್ನಿ ಜ್ವಾಲೆ ವ್ಯಾಪಿಸಿದೆ.

    ಮಹಾ ಕುಂಭಮೇಳದ ಸೆಕ್ಟರ್‌ 19ರಲ್ಲಿ 2 ಸಿಲಿಂಡರ್‌ ಸ್ಫೋಟದಿಂದ ಅಗ್ನಿ ಅವಘಡ (Prayagraj Fire) ಸಂಭವಿಸಿದ್ದು, ಹಲವು ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಖಾರಾ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ

    ಬೆಂಕಿಬಿದ್ದ ಟೆಂಟ್‌ನಲ್ಲಿದ್ದ ಜನರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಸಾವು ನೋವಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಒಲಿಂಪಿಕ್ಸ್‌ ಪದಕ ವಿಜೇತೆ ಮನುಭಾಕರ್‌ ಅಜ್ಜಿ, ಚಿಕ್ಕಪ್ಪ ಸಾವು

    ಇನ್ನೂ ಮಹಾ ಕುಂಭದಲ್ಲಿ ಬೆಂಕಿ ನಂದಿಸುವ ಘಟನೆಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆಡಳಿಯ ಮಂಡಳಿಯು ರಕ್ಷಣಾ ಕ್ರಮ ಕೈಗೊಳ್ಳುವ ಜೊತೆಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲಿದೆ. ಅಲ್ಲದೇ ಪ್ರತಿಯೊಬ್ಬರ ಸುರಕ್ಷತೆಗಾಗಿ ನಾವು ಗಂಗಾ ದೇವಿಯನ್ನು ಪ್ರಾರ್ಥಿಸುತ್ತೇವೆ ಎಂಬುದಾಗಿ ಕುಂಭಮೇಳ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಫೆ.10, 11, 12ರಂದು ಟಿ.ನರಸೀಪುರದಲ್ಲಿ ಕುಂಭಮೇಳ: ಹೆಚ್‌ಸಿ ಮಹದೇವಪ್ಪ

  • ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು

    ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು

    – ಅಂದು ಕ್ರಿಶ್ಚಿಯನ್ ಈಗ ಸಾಧು
    – ಹಲವು ವರ್ಷಗಳ ಕನಸು ಈಗ ನನಸು

    ಪ್ರಯಾಗ್‌ರಾಜ್: ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್ ನಿವಾಸಿ ಭಕ್ತಿ ನರಸಿಂಹ ಸ್ವಾಮಿ (Bhakt Narasimha Swami) ಅವರು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾ ಕುಂಭಮೇಳದಲ್ಲಿ (Maha Kumbh 2025) ಭಾಗವಹಿಸಲು ಪ್ರಯಾಗ್‌ರಾಜ್‌ಗೆ (Prayagraj) ಆಗಮಿಸಿದ್ದಾರೆ.

    ನಾನು ಕುಂಭಮೇಳದಲ್ಲಿ ಭಾಗವಹಿಸಬೇಕೆಂಬ ಬಹುಕಾಲದ ಕನಸು ಈಗ ನನಸಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆ ಕುಂಭಮೇಳದ ಬಗ್ಗೆ ಕೇಳಿದ್ದೆ. ಆದರೆ ನನಗೆ ಭಾಗವಹಿಸಲು ಸಾಧ್ಯವಾಗಲಿಲ್ಲ. ಕುಂಭ ಮೇಳ ಒಂದು ದೊಡ್ಡ ಹಬ್ಬವಾಗಿದ್ದು ನಾನು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ ಎಂದು ಹೇಳಿದರು.  ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

    ಸನಾತನ ಧರ್ಮ ಸ್ವೀಕರಿಸಿದ್ದು ಯಾಕೆ ಎಂಬ ಪ್ರಶ್ನೆಗೆ, ನಾನು ಕ್ರಿಶ್ಚಿಯನ್ ಧರ್ಮದಲ್ಲಿ (Christian Religion) ಹುಟ್ಟಿದ್ದೆ. ಆದರೆ ಯೇಸುಕ್ರಿಸ್ತನನ್ನು ಸ್ವೀಕರಿಸದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಹೇಳುತ್ತಿದ್ದಂತಹ ಕ್ರಿಶ್ಚಿಯನ್ ಧರ್ಮದಲ್ಲಿನ ವಿಷಯಗಳು ನನಗೆ ಇಷ್ಟವಾಗಲಿಲ್ಲ. ಆ ಸಮಯದಲ್ಲಿ ನವಜಾತ ಶಿಶು ಒಂದು ವರ್ಷದ ನಂತರ ಸತ್ತರೆ ಮತ್ತು ಆ ಮಗು ಕ್ರಿಶ್ಚಿಯನ್ ಧರ್ಮಕ್ಕೆ ಬದ್ಧನಾಗಿಲ್ಲದಿದ್ದರೆ ಆ ಮಗು ಎಲ್ಲಿಗೆ ಹೋಗುತ್ತದೆ ಎಂದು ನಾನು ಯೋಚಿಸುತ್ತಿದ್ದೆ? ಅಂತಿಮವಾಗಿ ಆಧ್ಯಾತ್ಮಿಕ ತಿಳುವಳಿಕೆಗಾಗಿ ಸನಾತನ ಧರ್ಮವನ್ನು ಓದತೊಡಗಿದೆ. ಈ ವೇಳೆ ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದರಿಂದ ನಾನು ಸನಾತನ ಧರ್ಮವನ್ನು ಸ್ವೀಕರಿಸಿದೆ. ಈಗ ನಾನು ಸನಾತನ ಧರ್ಮವನ್ನು ನಂಬುತ್ತೇನೆ ಮತ್ತು ನಾನು ಸಾಧುವಾದೆ ಎಂದು ಉತ್ತರಿಸಿದರು.

    ವಿಶೇಷವಾಗಿ ಒಳ್ಳೆಯ ಜನರಿಗೆ ಕೆಡುಕು ಯಾಕೆ ಸಂಭವಿಸುತ್ತವೆ ಎಂಬ ಪ್ರಶ್ನೆಗೆ ಸನಾತನ ಧರ್ಮದಲ್ಲಿ ಕಂಡುಬರುವ ಕರ್ಮ ಮತ್ತು ಪುನರ್ಜನ್ಮದ ತತ್ವಗಳ ಮೂಲಕ ಉತ್ತರಗಳನ್ನು ತಿಳಿದುಕೊಂಡೆ. ಜೀವನ ಎನ್ನುವುದು ಒಂದು ಚಕ್ರದಂತೆ ತಿರುಗುತ್ತಿರುತ್ತದೆ. ಜೀವನ ನಿರಂತರ ಪ್ರಯಾಣವಾಗಿದೆ. ಹಿಂದಿನ ಕರ್ಮಗಳು ಈ ಜೀವನದಲ್ಲಿ ಕೊನೆಗೊಳ್ಳುತ್ತವೆ ಎಂದು ವಿವರಿಸಿದರು.