Tag: Maha Kumbh Mela 2025

  • Maha Kumbh Mela: ಪುಣ್ಯ ಸ್ನಾನ ಮಾಡಿದ ನೆನಪಿರಲಿ ಪ್ರೇಮ್

    Maha Kumbh Mela: ಪುಣ್ಯ ಸ್ನಾನ ಮಾಡಿದ ನೆನಪಿರಲಿ ಪ್ರೇಮ್

    ದೇಶದ ಕೋಟ್ಯಂತರ ಜನ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ (Maha Kumbh Mela) ಭಾಗವಹಿಸಿ ಪುನೀತರಾಗುತ್ತಿದ್ದಾರೆ. ಹೀಗಿರುವಾಗ ಕನ್ನಡದ ನಟ ‘ನೆನೆಪಿರಲಿ’ ಪ್ರೇಮ್ (Nenapirali Prem) ಕೂಡ ಪುಣ್ಯ ಸ್ನಾನ ಮಾಡಿದ್ದಾರೆ. ಈ ಕುರಿತು ನಟ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ.

    ‘ಕುಂಭ ಮೇಳ ಪುಣ್ಯ ಸ್ನಾನ. ಎಲ್ಲರ ಬಾಳು ಅಮೃತಮಯವಾಗಿರಲಿ’ ಎಂದು ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಪುಣ್ಯ ಸ್ನಾನದ ಫೋಟೋ ಕೂಡ ನಟ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಪೋಸ್ಟರ್ ಔಟ್

     

    View this post on Instagram

     

    A post shared by Prem Nenapirali (@premnenapirali)

    ಇನ್ನೂ ಇತ್ತೀಚೆಗೆ ಕನ್ನಡದ ಕಲಾವಿದರಾದ ರಾಜ್ ಬಿ ಶೆಟ್ಟಿ, ನಿರೂಪಕಿ ಅನುಶ್ರೀ, ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ, ಬಿಗ್ ಬಾಸ್ ಸಾನ್ಯ ಅಯ್ಯರ್ ಸೇರಿದಂತೆ ಅನೇಕರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು.

  • Maha Kumbh 2025 – 77 ದೇಶಗಳ ರಾಜತಾಂತ್ರಿಕರು ಸೇರಿ 30 ಕೋಟಿ ಭಕ್ತರಿಂದ ಪುಣ್ಯಸ್ನಾನ

    Maha Kumbh 2025 – 77 ದೇಶಗಳ ರಾಜತಾಂತ್ರಿಕರು ಸೇರಿ 30 ಕೋಟಿ ಭಕ್ತರಿಂದ ಪುಣ್ಯಸ್ನಾನ

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿಂದು (Maha Kumbh Mela) 77 ದೇಶಗಳ ರಾಜತಾಂತ್ರಿಕರು (Diplomats) ಪುಣ್ಯ ಸ್ನಾನ ಮಾಡಿದ್ದಾರೆ.

    ಕುಂಭಮೇಳದಲ್ಲಿ ಈವರೆಗೂ 30 ಕೋಟಿ ಭಕ್ತರು ಪವಿತ್ರಸ್ನಾನ ಮಾಡಿದ್ದಾರೆ. ಈ 19 ದಿನದಲ್ಲಿ ಒಂದು ಲಕ್ಷ ಮಂದಿ 650ಕ್ಕೂ ಹೆಚ್ಚು ವಿಮಾನಗಳಲ್ಲಿ ಪ್ರಯಾಗ್‌ರಾಜ್‌ಗೆ ಬಂದು ಹೋಗಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ಕುಂಭಮೇಳದ ಕಾರಣ ಅಯೋಧ್ಯೆಗೆ 10 ದಿನದಲ್ಲಿ 70 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ನಿತ್ಯ ಸರಾಸರಿ 7 ಲಕ್ಷ ಮಂದಿ ಬಾಲರಾಮನ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಎಲ್ಲಾ ಥರದಲ್ಲಿ ಅನ್ಯಾಯ ಆಗಿದೆ: ಡಿಕೆಶಿ

  • ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ: ಮಹಾ ಕುಂಭಮೇಳ ಬಣ್ಣಿಸಿದ ಸಂಸದೆ ಸುಧಾಮೂರ್ತಿ

    ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ: ಮಹಾ ಕುಂಭಮೇಳ ಬಣ್ಣಿಸಿದ ಸಂಸದೆ ಸುಧಾಮೂರ್ತಿ

    ಪ್ರಯಾಗ್‌ರಾಜ್‌: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ (Maha Kumbh Mela) ವ್ಯವಸ್ಥೆಗಳ ಬಗ್ಗೆ ರಾಜ್ಯಸಭಾ ಸಂಸದೆ ಸುಧಾಮೂರ್ತಿ (Sudha Murthy) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಮಹಾ ಕುಂಭಮೇಳ ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್ ಎಂದು ಬಣ್ಣಿಸಿದ್ದಾರೆ. ಮಹಾಕುಂಭ ವ್ಯವಸ್ಥೆಗಳ ಮಾದರಿಯು ಇತರ ಸರ್ಕಾರಗಳು ಅನುಸರಿಸಲು ಮಾನದಂಡವಾಗಿ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನಮ್ಮ ಭಾಗ್ಯ: ಗೌತಮ್ ಅದಾನಿ

    ಸೋಮವಾರ ಮಹಾಕುಂಭದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದ ರಾಜ್ಯಸಭಾ ಸಂಸದೆ ಸುಧಾಮೂರ್ತಿ, ಕಾರ್ಯಕ್ರಮದ ವ್ಯವಸ್ಥೆ ಮತ್ತು ಸಂಘಟನೆಯಿಂದ ಪ್ರಭಾವಿತರಾಗಿದ್ದಾರೆ.

    ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್ ಆಗಿದೆ. ಇದು ನನ್ನ ಮೊದಲ ಕುಂಭ. ವ್ಯವಸ್ಥೆಗಳು ತುಂಬಾ ಚೆನ್ನಾಗಿವೆ. ಎಲ್ಲಾ ಸರ್ಕಾರಗಳು ಈ ಮಾದರಿಯನ್ನು ಅನುಸರಿಸಬಹುದು. ತುಂಬಾ ಒಳ್ಳೆಯ ಅನುಭವ ನೀಡಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಬರೋಬ್ಬರಿ 10 ಕೋಟಿ ಭಕ್ತರಿಂದ ಪುಣ್ಯಸ್ನಾನ

    ಮಹಾ ಕುಂಭಮೇಳ ಆರಂಭವಾದಾಗಿನಿಂದ, 10.2 ಕೋಟಿಗೂ ಹೆಚ್ಚು ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಬೃಹತ್ ಆಧ್ಯಾತ್ಮಿಕ ಕಾರ್ಯಕ್ರಮವು ಅಭೂತಪೂರ್ವ ಭಕ್ತ ಸಮೂಹಕ್ಕೆ ಸಾಕ್ಷಿಯಾಗಿದೆ.

  • Photo Gallery | ಮಹಾ ಕುಂಭಮೇಳದಲ್ಲಿ ಮಹಾಸಂಗಮ – ಸಂಸ್ಕೃತಿಗಳ ಸಮ್ಮಿಳಿತ

    Photo Gallery | ಮಹಾ ಕುಂಭಮೇಳದಲ್ಲಿ ಮಹಾಸಂಗಮ – ಸಂಸ್ಕೃತಿಗಳ ಸಮ್ಮಿಳಿತ

    ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಮಹಾ ಕುಂಭ ಮೇಳ (Maha Kumbh Mela) ಆರಂಭವಾಗಿದ್ದು, ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದೆ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವು ಹಾಗೂ 144 ವರ್ಷಗಳ ಬಳಿಕ ನಡೆಯುವ ಮಹಾ ಕುಂಭಮೇಳವು ಪೌರಾಣಿಕ ಹಿನ್ನೆಲೆ ಹೊಂದಿರುವ ಧಾರ್ಮಿಕ ಆಚರಣೆಯಾಗಿದೆ, ಹಿಂದೂ ಪುರಾಣದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಈ ಮಹಾಕುಂಭಮೇಳವು ನಾಗ ಸಾಧುಗಳಿಗೆ ತುಂಬಾನೇ ವಿಶೇಷ. ನಾಗ ಸಾಧುಗಳನ್ನು ಎಲ್ಲೆಂದರಲ್ಲಿ ನೋಡುವುದು ತುಂಬಾನೇ ಕಷ್ಟ. ಅವರನ್ನು ನಾವು ಕೇವಲ ಈ ಕುಂಭಮೇಳಗಳಲ್ಲಿ ಮಾತ್ರ ನೋಡಬಹುದಾಗಿದೆ. ಇದಲ್ಲದೇ ವಿವಿಧ ಸಂಸ್ಕೃತಿಗಳ ವೈಭವ, ಅಘೋರಿಗಳ ಸಮಾಗಮ, ಕೋಟ್ಯಂತರ ಭಕ್ತರಿಂದ ಪುಣ್ಯಸ್ನಾನ ಈ ಎಲ್ಲ ವಿಶೇಷತೆಗಳ ಮಿಳಿತಗೊಂಡಿರುವ ಕುಂಭಮೇಳ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದೆ. ಇದನ್ನು ಸಾಕ್ಷೀಕರಿಸುವ ಒಂದಿಷ್ಟು ಚಿತ್ರಗಳು ಇಲ್ಲಿವೆ…

     

  • ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಪ್ರಯಾಗ್‌ರಾಜ್: 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ಮಹಾ ಕುಂಭಮೇಳಕ್ಕೆ (Maha Kumbh Mela 2025) ಪ್ರಯಾಗ್‌ರಾಜ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ.

    ಇಂದಿನಿಂದ 44 ದಿನಗಳ ಕಾಲ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayagraj) ಮಹಾಕುಂಭ ಸಂಭ್ರಮ ನಡೆಯಲಿದೆ. ಮಹಾ ಕುಂಭಮೇಳಕ್ಕೆ ಇಂದು ಬೆಳಗ್ಗಿನಜಾವ ಮೊದಲ ಶಾಹಿ ಸ್ನಾನ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ನಾಗ ಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    ಫೆಬ್ರವರಿ 26ರ ಮಹಾ ಶಿವರಾತ್ರಿವರೆಗೂ ಮಹಾಕುಂಭ ಮೇಳ ನಡೆಯಲಿದೆ. 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯಲಿದ್ದು, ಉತ್ತರ ಪ್ರದೇಶ ಸರ್ಕಾರದಿಂದ ಸಂಪೂರ್ಣ ತಯಾರಿ ನಡೆದಿದೆ. ಮಹಾಕುಂಭ ಮೇಳದಲ್ಲಿ ಆರು ಶಾಹಿ ಸ್ನಾನ ನಡೆಯಲಿದೆ. ಪುಣ್ಯಸ್ನಾನಕ್ಕೆ ಸರ್ಕಾರದಿಂದ ಸಕಲ ವ್ಯವಸ್ಥೆಯಾಗಿದೆ. ಅವಘಡಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಇದನ್ನೂ ಓದಿ: 10 ರೂ.ಗಾಗಿ ನಿವೃತ್ತ IAS ಅಧಿಕಾರಿಗೆ ಬಸ್‌ ಕಂಡಕ್ಟರ್‌ನಿಂದ ಹಲ್ಲೆ

    ಸಂಗಮದಲ್ಲಿ ಶಾಹಿಸ್ನಾನ
    ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
    ಜನವರಿ 15 – ಮಕರ ಸಂಕ್ರಾಂತಿ ಸ್ನಾನ
    ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
    ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

    ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳ ನಿರ್ಮಾಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಪಡೆಯಿಂದ ನೀರನ ಮೇಲೆ ಅಂಬುಲೆನ್ಸ್ ನಿರ್ಮಾಣ ಮಾಡಲಾಗಿದೆ. ಐಸಿಯು ಸೌಲಭ್ಯ ಹೊಂದಿರುವ ಅಂಬುಲೆನ್ಸ್‌ಗಳನ್ನು ನದಿ ನೀರಿನ ಮೇಲೆ ನಿಲ್ಲಿಸಲಾಗಿದೆ. ಅಂಬುಲೆನ್ಸ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳ ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷತೆಗಾಗಿ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್, 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

  • ಬೆಂಗ್ಳೂರಿಂದ ಕುಂಭಮೇಳಕ್ಕೆ ಹೋಗ್ಬೇಕಾ? – ನಿಮಗಾಗಿಯೇ ಹೊರಡಲಿದೆ ವಿಶೇಷ ರೈಲು

    ಬೆಂಗ್ಳೂರಿಂದ ಕುಂಭಮೇಳಕ್ಕೆ ಹೋಗ್ಬೇಕಾ? – ನಿಮಗಾಗಿಯೇ ಹೊರಡಲಿದೆ ವಿಶೇಷ ರೈಲು

    ಬೆಂಗಳೂರು: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ಜ.13ರಿಂದ ನಡೆಯಲಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ಹೋಗುವ ಪ್ರಯಾಣಿಕರಿಗಾಗಿ ಬೆಂಗಳೂರಿನಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

    ಪ್ರಯಾಗ್‌ರಾಜ್‌ಗೆ ಏಕಮಾರ್ಗ ಕುಂಭಮೇಳ ಎಕ್ಸ್‌ಪ್ರೆಸ್‌ (Kumbh Mela Express Train) ವಿಶೇಷ ರೈಲು ಓಡಾಟ ನಡೆಸಲಿದೆ. ಎಸ್‌ಎಂವಿಟಿ ಬೆಂಗಳೂರು ಟು ಪ್ರಯಾಗ್‌ರಾಜ್ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06577 ಎಸ್‌ಎಂವಿಟಿ ಬೆಂಗಳೂರು-ಪ್ರಯಾಗ್‌ರಾಜ್ ಏಕಮಾರ್ಗ ಕುಂಭಮೇಳ ವಿಶೇಷ ಎಕ್ಸ್‌ಪ್ರೆಸ್‌ ಬುಧವಾರ ರಾತ್ರಿ 8:50ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಜ.10 ಶುಕ್ರವಾರ ಸಂಜೆ 5:15ಕ್ಕೆ ಪ್ರಯಾಗ್‌ರಾಜ್ ತಲುಪಲಿದೆ. ಇದನ್ನೂ ಓದಿ: ಟಿಬೆಟ್‌ನಲ್ಲಿ ಭಾರೀ ಭೂಕಂಪ – 32 ಮಂದಿ ಬಲಿ

    ಈ ರೈಲು ವೈಟ್‌ಫೀಲ್ಡ್, ಬಂಗಾರಪೇಟೆ, ಜೋಲಾರ್ ಪೆಟ್, ಕಟಪಾಡಿ, ಪೆರಂಬೂರು, ಗುಡೂರು, ವಿಜಯವಾಡ, ವಾರಂಗಲ್, ಬಲ್ಹರ್ಷಾ, ಚಂದ್ರಾಪುರ, ಸೇವಾಗ್ರಾಮ್, ನಾಗ್ಪುರ, ಇಟಾರ್ಸಿ, ಜಬಲ್ಪುರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ. ಇದನ್ನೂ ಓದಿ: ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ – ಎಫ್‌ಐಆರ್ ದಾಖಲು

    ಈ ರೈಲು 14 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 4 ಸ್ಲೀಪರ್ ಬೋಗಿಗಳು ಮತ್ತು 2 ಲಗೇಜ್ ಕಂ ಬ್ರೇಕ್ ವ್ಯಾನ್‌ಗಳು ಸೇರಿ 20 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಇದನ್ನೂ ಓದಿ: ಚೀನಿ ವೈರಸ್‌ ಪತ್ತೆಯಾದ 8 ತಿಂಗಳ ಮಗು ಇಂದು ಡಿಸ್ಚಾರ್ಜ್‌

  • 32 ವರ್ಷಗಳಿಂದ ಸ್ನಾನವನ್ನೇ ಮಾಡದ ಛೋಟಾ ಬಾಬಾ – ‘ಕುಂಭ ಮೇಳ’ದ ಆಕರ್ಷಣೆ ಕೇಂದ್ರಬಿಂದು ಇವರೇ!

    32 ವರ್ಷಗಳಿಂದ ಸ್ನಾನವನ್ನೇ ಮಾಡದ ಛೋಟಾ ಬಾಬಾ – ‘ಕುಂಭ ಮೇಳ’ದ ಆಕರ್ಷಣೆ ಕೇಂದ್ರಬಿಂದು ಇವರೇ!

    – 3 ಅಡಿ ಎತ್ತರದ ಬಾಬಾಗೆ 57 ವರ್ಷ ವಯಸ್ಸು
    – 12 ವರ್ಷಗಳಿಗೊಮ್ಮೆ ನಡೆಯೋ ಕುಂಭ ಮೇಳಕ್ಕೆ ಸಿದ್ಧತೆ ಹೇಗಿದೆ?

    ಲಕ್ನೋ: ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭ ಮೇಳಕ್ಕೆ (Kumbh Mela) ಉತ್ತರ ಪ್ರದೇಶ ಸಜ್ಜಾಗಿದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು, ಯಾತ್ರಿಕರು ಆಗಮಿಸುತ್ತಿದ್ದಾರೆ. ಸಾಧು-ಸಂತರು ಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇಳಕ್ಕೆ ಸಕಲ ಸಿದ್ಧತೆ ನಡೆದಿದೆ. ಕುಂಭ ಮೇಳಕ್ಕೆ ಛೋಟು ಬಾಬಾ (Chhotu Baba) ಅವರು ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

    32 ವರ್ಷಗಳಿಂದ ಸ್ನಾನ ಮಾಡದ ಗಂಗಾಪುರಿ ಮಹಾರಾಜರು ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಗಂಗಾಪುರಿ ಮಹಾರಾಜ್ ಅವರು ಛೋಟು ಬಾಬಾ ಅಸ್ಸಾಂನ ಕಾಮಾಖ್ಯ ಪೀಠದವರಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ‘ಇದು ಮಿಲನ ಮೇಳ. ಆತ್ಮಕ್ಕೆ ಆತ್ಮದ ಸಂಪರ್ಕವಿರಬೇಕು. ಅದಕ್ಕಾಗಿಯೇ ನಾನು ಇಲ್ಲಿದ್ದೇನೆ’ ಎಂದು ಬಾಬಾ ತಿಳಿಸಿದ್ದಾರೆ. 57 ವರ್ಷ ವಯಸ್ಸಿನ ಬಾಬಾ ಅವರು ಮೂರು ಅಡಿ ಎತ್ತರವಿದ್ದಾರೆ. ‘ನಾನು 3 ಅಡಿ 8 ಇಂಚು ಎತ್ತರ ಇದ್ದೇನೆ. ನನಗೆ 57 ವರ್ಷ. ಇಲ್ಲಿಗೆ ಬರಲು ನನಗೆ ತುಂಬಾ ಸಂತೋಷವಾಗಿದೆ. ನೀವು ಸಹ ಇಲ್ಲಿದ್ದೀರಿ, ಅದರಲ್ಲಿಯೂ ನಾನು ಸಂತೋಷವಾಗಿದ್ದೇನೆ’ ಎಂದು ಬಾಬಾ ಖುಷಿ ವ್ಯಕ್ತಪಡಿಸಿದ್ದಾರೆ.

    ಗಂಗಾಪುರಿ ಮಹಾರಾಜರು ಕಳೆದ 32 ವರ್ಷಗಳಿಂದ ಸ್ನಾನ ಮಾಡಿಲ್ಲ. ಕಳೆದ 32 ವರ್ಷಗಳಿಂದ ಈಡೇರದ ಬಯಕೆ ನನ್ನಲ್ಲಿದೆ ಎಂಬ ಕಾರಣಕ್ಕೆ ನಾನು ಸ್ನಾನ ಮಾಡುವುದಿಲ್ಲ. ಗಂಗಾಸ್ನಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾಡಳಿತವು ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಂದಣಿ ನಿರ್ವಹಣೆಗಾಗಿ ಮತ್ತು ಬೆಂಕಿಯ ಅವಘಡಗಳನ್ನು ತಪ್ಪಿಸಲು ಸುರಕ್ಷತೆ ಕ್ರಮವಹಿಸಿದೆ. ಇದನ್ನೂ ಓದಿ: ಕೆಲವರು ಗ್ರಾಮೀಣ ಭಾಗದಲ್ಲಿ ಜಾತಿ ರಾಜಕಾರಣದ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ: ಮೋದಿ

    ಈ ಬಾರಿ ಮಹಾಕುಂಭಕ್ಕೆ ಭಕ್ತಾದಿಗಳ ಸುರಕ್ಷತೆಗೆ ಸಿಬ್ಬಂದಿ ನಿಯೋಜನೆ ಜೊತೆಗೆ ತಾಂತ್ರಿಕ ಪರಿಕರಗಳನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದೆ. ಕ್ವಿಕ್ ರೆಸ್ಪಾನ್ಸ್ ವೆಹಿಕಲ್‌ಗಳು, ಯಾವುದೇ ರೀತಿಯ ಭೂಪ್ರದೇಶದಲ್ಲಿ ಚಲಿಸಬಲ್ಲ ಎಲ್ಲಾ ಭೂಪ್ರದೇಶ ವಾಹನಗಳು (ಎಟಿವಿಗಳು), ಅಗ್ನಿಶಾಮಕ ರೋಬೋಟ್‌ಗಳು ಮತ್ತು ಫೈರ್ ಮಿಸ್ಟ್ ಬೈಕ್‌ಗಳನ್ನು ನಿಯೋಜಿಸಿದೆ. ಅಗ್ನಿಶಾಮಕ ದೋಣಿಗಳನ್ನು ತರಲಾಗಿದೆ. ದೋಣಿಗಳು ಬೆಂಕಿಯನ್ನು ನಂದಿಸಲು ನದಿಯ ನೀರನ್ನು ಬಳಸುತ್ತವೆ.

    ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. UTS (ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಯಾತ್ರಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು QR ಕೋಡ್ ಅನ್ನು ಸರಳವಾಗಿ ಸ್ಕ್ಯಾನ್ ಮಾಡಬಹುದು. ಈ ಅಪ್ಲಿಕೇಶನ್ ಪ್ರಯಾಣಿಕರು ದೀರ್ಘ ಸರತಿ ಸಾಲಿನಲ್ಲಿ ನಿಲ್ಲದೆ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ.

    ಶಾಹಿ ಸ್ನಾನ (ರಾಜಮನೆತನದ ಸ್ನಾನ) ಎಂದು ಕರೆಯಲ್ಪಡುವ ಪ್ರಮುಖ ಸ್ನಾನದ ಆಚರಣೆಗಳು ಜನವರಿ 14 (ಮಕರ ಸಂಕ್ರಾಂತಿ), ಜನವರಿ 29 (ಮೌನಿ ಅಮಾವಾಸ್ಯೆ), ಮತ್ತು ಫೆಬ್ರವರಿ 3 (ಬಸಂತ್ ಪಂಚಮಿ) ರಂದು ನಡೆಯುತ್ತವೆ. ಇದನ್ನೂ ಓದಿ: ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ?

  • 12 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ – ಸಿದ್ಧತೆ ಹೇಗಿದೆ? ವಿಶೇಷತೆಗಳೇನು?

    12 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ – ಸಿದ್ಧತೆ ಹೇಗಿದೆ? ವಿಶೇಷತೆಗಳೇನು?

    12 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಸಲು ಉತ್ತರ ಪ್ರದೇಶ ಸಜ್ಜಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಹಿಂದೂ ಧರ್ಮದ ಅತ್ಯಂತ ಮಹತ್ವದ ಮೇಳ ಇದಾಗಿದ್ದು, ಲಕ್ಷಾಂತರ ಮಂದಿ ಭಕ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಅನೇಕ ಮಂದಿ ಭಕ್ತರು ಸೇರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯೋಗಿ ಸರ್ಕಾರ ಸಕಲ ಸಿದ್ಧತೆಗಳೊಂದಿಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಹಾಗಿದ್ರೆ ಹೇಗೆ ನಡೆಯಲಿದೆ ಮಹಾ ಕುಂಭಮೇಳ? ಸಿದ್ಧತೆ ಹೇಗಿದೆ? ವಿಶೇಷತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಮಹಾ ಕುಂಭಮೇಳ ಯಾವಾಗ?
    ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳವನ್ನು ಯಶಸ್ವಿಯಾಗಿ ಆಯೋಜಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ನಾಲ್ಕು ತಾಲೂಕುಗಳನ್ನು ಒಳಗೊಂಡ ‘ಮಹಾಕುಂಭ ನಗರವನ್ನು’ ಹೊಸ ಜಿಲ್ಲೆಯಾಗಿ ಘೋಷಿಸಿದೆ. ಈ ಬಾರಿ 2025ರ ಜ.14ರಿಂದ ಫೆ.26ರವರೆಗೆ ಮಹಾ ಕುಂಭಮೇಳ ನಡೆಯಲಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮೂಲಕ ತನ್ನ ಪಾಪಗಳಿಂದ ಮುಕ್ತಿ ಪಡೆಯುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ. 12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ನಲ್ಲಿ ಮಹಾ ಕುಂಭಮೇಳ ನಡೆಸಲಾಗುತ್ತದೆ. ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಈ ಕುಂಭಮೇಳ 30 ರಿಂದ 45 ದಿನಗಳವರೆಗೆ ನಡೆಯುತ್ತದೆ.

    ಮಹತ್ವ ಏನು?
    ಮಹಾ ಕುಂಭಮೇಳಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆ ಇದೆ. ಮಹಾ ಕುಂಭಮೇಳ ಆಚರಣೆಯು ಸಮುದ್ರ ಮಂಥನ ಕಥೆಯಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಅಮೃತ ಮಡಿಕೆ ನಾಲ್ಕು ಕಡೆಗಳಲ್ಲಿ ಬಿತ್ತು. ಆ ನಾಲ್ಕು ಸ್ಥಳಗಳೇ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್. ಅಂದಿನಿಂದ ಈ ಸ್ಥಳಗಳನ್ನು ಪವಿತ್ರ ಸ್ಥಳಗಳೆಂದು ಪೂಜಿಸಲಾಗುತ್ತಿದೆ. ಮೋಕ್ಷವನ್ನು ಪಡೆಯುವ ಸಲುವಾಗಿ ಈ ಸ್ಥಳಗಳಲ್ಲಿ ಮಹಾ ಕುಂಭಮೇಳ ನಡೆಸಲಾಗುತ್ತದೆ.

    ಎಐ ಸಿಸಿಟಿವಿ ಅಳವಡಿಕೆ:
    ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಕೃತಕ ಬುದ್ಧಿಮತ್ತೆ (ಎಐ) ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಬಹುತೇಕ ಯಾತ್ರಿಕರು ಮುಂಜಾನೆ 3ರಿಂದ ಬೆಳಗ್ಗೆ 7ರವರೆಗೆ ತೀರ್ಥಸ್ನಾನಕ್ಕೆ ತೆರಳುತ್ತಾರೆ. ಹೀಗಾಗಿ ಎಐ ಆಧಾರಿತ ಸಿಸಿ ಕ್ಯಾಮೆರಾಗಳು ಇದೇ ಸಮಯದಲ್ಲಿ ಭಕ್ತರ ಲೆಕ್ಕ ಹಾಕಿ ಪ್ರತಿ ನಿಮಿಷಕ್ಕೊಮ್ಮೆ ಪರಿಷ್ಕೃತ ಮಾಹಿತಿಯನ್ನು ಒದಗಿಸಲಿದೆ. 95% ನಿಖರತೆಯನ್ನು ಇದು ಸಾಧಿಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

    ಪ್ರಯಾಗ್‌ರಾಜ್‌ನ 200 ಸ್ಥಳಗಳಲ್ಲಿ 744 ತಾತ್ಕಾಲಿಕ ಹಾಗೂ 268 ಕಡೆಗಳಲ್ಲಿ 1107 ಶಾಶ್ವತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಪಾರ್ಕಿಂಗ್ ಜಾಗಗಳಲ್ಲಿ 720 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಿದ್ದು, ಸುಗಮ ಸಂಚಾರಕ್ಕೆ ಹಾಗೂ ಜನದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮಾಹಿತಿ ನೀಡಿದ್ದಾರೆ.

    ಗೂಗಲ್‌ನಿಂದ ‘ನ್ಯಾವಿಗೇಷನ್ ಸಿಸ್ಟಮ್’:
    ಮಹಾ ಕುಂಭಮೇಳಕ್ಕಾಗಿ ವಿಶೇಷ ನ್ಯಾವಿಗೇಷನ್ ಸಿಸ್ಟಮ್ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ತಾತ್ಕಾಲಿಕ ನಗರಕ್ಕೆ ನ್ಯಾವಿಗೇಷನ್ ಸಿಸ್ಟಮ್ ಅನ್ನು ರಚಿಸುತ್ತಿರುವುದು ಇದೇ ಮೊದಲು. ಇದು ಪ್ರವಾಸಿಗರಿಗೆ ಅಥವಾ ಭಕ್ತರಿಗೆ ಪ್ರಮುಖ ರಸ್ತೆಗಳು, ಧಾರ್ಮಿಕ ಸ್ಥಳಗಳು, ಘಾಟ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

    ಐಷಾರಾಮಿ ಟೆಂಟ್ ಸಿಟಿ:
    ಯಾತ್ರಾರ್ಥಿಗಳ ಸಂಚಾರಕ್ಕೆ ಅನುವಾಗಲು ಹಾಗೂ ಪರಿಸರಸ್ನೇಹಿ ಪ್ರಯಾಣ ಖಚಿತಕ್ಕಾಗಿ ಆ್ಯಪ್ ಆಧಾರಿತ ಇ-ರಿಕ್ಷಾ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗಾಗಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ವಿಲ್ಲಾ, ಮಹಾರಾಜ, ಸ್ವಿಜ್ ಕಾಟೇಜ್, ಡಾರ್ಮೆಟ್ರಿ ಎಂಬ 4 ವಿಧಗಳ ಟೆಂಟ್ ಇರಲಿದ್ದು, ಐಷಾರಾಮಿ ಸೇವೆಯ 2000 ಸ್ವಿಜ್ ಕಾಟೇಜ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

    ಮಾಹಿತಿ ಒದಗಿಸಲು ಚಾಟ್‌ಬಾಟ್:
    ಭಾರತ ತಂತ್ರಜ್ಞಾನದಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಕುಂಭಮೇಳಕ್ಕೂ ವಿಸ್ತರಿಸಿದೆ. ಪ್ರಯಾಣಿಕರಿಗೆ ನೆರವು ನೀಡುವುದಕ್ಕಾಗಿ ಕೃತಕ ಬುದ್ಧಿಮತ್ತೆ ಚಾಟ್‌ಬಾಟನ್ನು ಸ್ಥಾಪನೆ ಮಾಡಿದೆ. ಈ ಚಾಟ್‌ಬಾಟ್ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇದೊಂದು ಆ್ಯಪ್ ಆಗಿದ್ದು, ‘ಓಲಾ ಕೃತಿಮ್’ ಇದನ್ನು ತಯಾರು ಮಾಡಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಮಲಯಾಳ, ಉರ್ದು, ಗುಜರಾತಿ, ಪಂಜಾಬಿ ಮತ್ತು ಬೆಂಗಾಲಿಗಳಲ್ಲಿ ಇದು ಮಾಹಿತಿ ಒದಗಿಸಲಿದೆ. ಅಲ್ಲದೇ ಇಡೀ ಕುಂಭಮೇಳದ ಮ್ಯಾಪ್ ಒದಗಿಸಲಿದ್ದು, ಕುಂಭಮೇಳದ ಇತಿಹಾಸ, ಪದ್ಧತಿ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಲಿದೆ.

    ಏಕಮಾರ್ಗ:
    ಮಹಾ ಕುಂಭದ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ 7 ಪ್ರಮುಖ ಮಾರ್ಗಗಳಲ್ಲಿ ಏಕಮುಖ ಮಾರ್ಗ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಇದರಲ್ಲಿ ಜಾನ್‌ಪುರ, ವಾರಣಾಸಿ, ಮಿರ್ಜಾಪುರ, ರೇವಾ, ಕಾನ್ಪುರ, ಲಕ್ನೋ ಮತ್ತು ಅಯೋಧ್ಯೆ-ಪ್ರತಾಪಗಢ ಸೇರಿದೆ.

    ಪಾರ್ಕಿಂಗ್ ಸೌಲಭ್ಯ:
    ಒಟ್ಟು 101 ಪಾರ್ಕಿಂಗ್ ಸೈಟ್‌ಗಳನ್ನು ಪ್ರಸ್ತಾಪಿಸಿದ್ದು, ಸುಮಾರು 5 ಲಕ್ಷ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಭಾರೀ ಹಾಗೂ ಲಘು ವಾಹನಗಳಿಗೆ ಪ್ರತ್ಯೆಕ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.

    ಶಟಲ್ ಸೇವೆ:
    ಮಹಾ ಕುಂಭದ ಸಮಯದಲ್ಲಿ 550 ಶಟಲ್ ಬಸ್ಸುಗಳು ಹಾಗೂ 20,000 ಇ ರಿಕ್ಷಾಗಳು ವಿವಿಧ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುತ್ತದೆ. ಕುಂಭ ಮೇಳ ನಡೆಯುವ ಪ್ರದೇಶದಲ್ಲಿ 100 ಡಿಜಿಟಲ್ ಬೋರ್ಡ್ ಹಾಗೂ 80 ವಿಎಂಡಿ ಅಳವಡಿಸಲಾಗುತ್ತದೆ. ಇದರಿಂದ ಯಾತ್ರಾರ್ಥಿಗಳಿಗೆ ಸಂಚಾರ ಮಾರ್ಗ ಮತ್ತು ಪಾರ್ಕಿಂಗ್ ಸ್ಥಿತಿಯಂತಹ ವಿವಿಧ ವಿವರಗಳನ್ನು ಒದಗಿಸುತ್ತದೆ.

    ಮಹಾ ಕುಂಭದ ಅವಧಿಯಲ್ಲಿ 18,000 ಆರ್‌ಪಿಎಫ್ ಮತ್ತು ಜಿಆರ್‌ಪಿ ಯೋಧರನ್ನು ನಿಯೋಜಿಸಲಾಗಿದೆ. ಇದರಲ್ಲಿ ಆರ್‌ಪಿಎಫ್ ಯೋಧರ ಸಂಖ್ಯೆ 8,000 ಮತ್ತು ಜಿಆರ್‌ಪಿ ಸೈನಿಕರ ಸಂಖ್ಯೆ 10,000 ಇರಲಿದೆ. ಅಲ್ಲದೇ ದೇಶಾದ್ಯಂತ 13,000 ರೈಲ್ವೆ ಅಧಿಕಾರಿಗಳು ಮತ್ತು ನೌಕರರನ್ನು ಇಲ್ಲಿಗೆ ನಿಯೋಜಿಸಲಾಗುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಜೊತೆ ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮರಾಠಿ, ಗುಜರಾತಿ ಇತ್ಯಾದಿ ಮಾತನಾಡಬಲ್ಲ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಮಹಾ ಕುಂಭಮೇಳದ ಸಂದರ್ಭದಲ್ಲಿ ಭಕ್ತರಿಗೆ ಸ್ಥಳಾವಾಕಾಶ ಕಲ್ಪಿಸಲು 3,000 ವಿಶೇಷ ರೈಲುಗಳನ್ನು ಒಳಗೊಂಡಮತೆ 45 ದಿನಗಳಲ್ಲಿ ಒಟ್ಟು 13,000 ರೈಲುಗಳು ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

  • ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ (ಇಂದಿನಿಂದ) ಆರಂಭವಾಗಲಿರುವ ಮಹಾಕುಂಭ ಮೇಳ- 2025ಕ್ಕೆ (Maha Kumbh Mela 2025) ಭರದಿಂದ ಸಿದ್ಧತೆ ನಡೆದಿವೆ.

    ರೈಲ್ವೆ ಇಲಾಖೆಯ 1,609 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳೂ ಸೇರಿದಂತೆ ಸುಮಾರು 5,500 ಕೋಟಿ ರೂ. ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಶುಕ್ರವಾರ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಮಹಾಕುಂಭ ಮೇಳದ ಧಾರ್ಮಿಕ ವಿಧಿ ವಿಧಾನಗಳನ್ನೂ ನೆರವೇರಿಸಲಿದ್ದಾರೆ. ಇಂದು ಮಧ್ಯಾಹ್ನ 12.15ರ ಸುಮಾರಿಗೆ ಪ್ರಧಾನಿಗಳು ಆಮಿಸಲಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರೀವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಹ ಸಾಥ್‌ ನೀಡಲಿದ್ದಾರೆ. ಅವರು, ಗುರುವಾರ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ್ದರು.

    ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಈ ಬಾರಿ ಅದು 2025ರ ಜನವರಿ 13ರಿಂದ ಫೆಬ್ರುವರಿ 26ರ ವರೆಗೆ ಜರುಗಲಿದೆ. 50 ದಿನಗಳವರೆಗೆ ನಡೆಯುವ ಈ ಮಹಾ ಧಾರ್ಮಿಕ ಮಹೋತ್ಸವದಲ್ಲಿ ಸುಮಾರು 15 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಸಂಬಂಧ ರೈಲ್ವೆ ಇಲಾಖೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಒಟ್ಟು 13,000 ರೈಲುಗಳ ಸಂಚಾರ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಮಗು ಸೇರಿ 7 ಮಂದಿ ಸಾವು

    ಮಹಾ ಕುಂಭಮೇಳದ ಅವಧಿಯಲ್ಲಿ ರೈಲ್ವೆ ಇಲಾಖೆಯು 10,000 ದೈನಂದಿನ ರೈಲುಗಳ ಜತೆಗೆ ಹೆಚ್ಚುವರಿಯಾಗಿ 3,000 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು ಉತ್ತರ ಮಧ್ಯ ರೈಲ್ವೆಯ ಮುಖ್ಯ ಜನ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ತಿಳಿಸಿದ್ದಾರೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ

    1,186 ಸಿಸಿಟಿವಿ ಅಳವಡಿಕೆ:
    ಪ್ರಯಾಗ್‌ರಾಜ್‌ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ 9 ರೈಲು ನಿಲ್ದಾಣಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಕಣ್ಣಾವಲು ಇಡಲಾಗಿದೆ. ಈ ನಿಲ್ದಾಣಗಳಲ್ಲಿ ಒಟ್ಟಾರೆ 1,186 ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕುಂಭಮೇಳಕ್ಕೆಂದೇ ಹೊಸದಾಗಿ ಅಳವಡಿಸಿರುವ 500 ಕ್ಯಾಮೆರಾಗಳೂ ಸೇರಿವೆ. ಈ ಪೈಕಿ 100 ಕ್ಯಾಮೆರಾಗಳು ಮುಖಚಹರೆ ಗುರುತಿಸುವ ವ್ಯವಸ್ಥೆಯನ್ನು (ಎಫ್‌ಆರ್‌ಎಸ್) ಹೊಂದಿವೆ ಎಂದು ರೈಲ್ವೆ ಸುರಕ್ಷಾ ಅಧಿಕಾರಿ ಪಿ.ಎಸ್ ಸಂದೀಪ್ ಕುಮಾರ್ ವಿವರಿಸಿದರು. ಇದರೊಂದಿಗೆ ಪ್ರಯಾಣಿಕರ ಮೂಲ ಸೌಕರ್ಯಗಳಿಗೂ ಒತ್ತು ನೀಡಲಾಗಿದೆ. ಇದನ್ನೂ ಓದಿ: ಕೇರಳ| ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ – ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಹರಿದ ಲಾರಿ

    ಯಾವ ಯಾವ ಯೋಜನೆಗಳು ಉದ್ಘಾಟನೆ?
    ಏಳು ರೈಲ್ವೆ ಮೇಲ್ಸೇತುವೆ, ಮೂರು ಕೆಳಸೇತುವೆ, ದ್ವಿಪಥ ಮಾರ್ಗ ಗಂಗಾ ನದಿಗೆ ನಿರ್ಮಿಸಿರುವ ಸೇತುವೆ ಕಲುಷಿತ ನೀರಿನ ಶುದ್ದೀಕರಣ ಘಟಕ ಕುಡಿಯುವ ನೀರು ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಯೋಜನೆಗಳು, ಹನುಮಾನ್ ಮಂದಿರ ಸೇರಿದಂತೆ ಪ್ರಮುಖ ದೇವಾಲಯಗಳ ಕಾರಿಡಾರ್‌ಗಳನ್ನು ಮೋದಿ ಅವರು ಉದ್ಘಾಟಿಸಲಿದ್ದಾರೆ.