Tag: Magzine

  • ಗೌಪ್ಯವಾಗಿ ಎನ್‌ಆರ್‌ಐ ಜೊತೆ ರಾಖಿ ಸಾವಂತ್ ಮದುವೆ: ನಟಿ ಸ್ಪಷ್ಟನೆ

    ಗೌಪ್ಯವಾಗಿ ಎನ್‌ಆರ್‌ಐ ಜೊತೆ ರಾಖಿ ಸಾವಂತ್ ಮದುವೆ: ನಟಿ ಸ್ಪಷ್ಟನೆ

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ಎನ್‌ಆರ್‌ಐ ಯುವಕನ ಜೊತೆ ಮದುವೆ ಆಗಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಈಗ ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸ್ಪಷ್ಟನೆ ನೀಡಿದ್ದಾರೆ.

    ರಾಖಿ ಎನ್‌ಆರ್‌ಐ ಯುವಕನ ಜೊತೆ ಗೌಪ್ಯವಾಗಿ ಮದುವೆ ಆಗಿದ್ದಾರೆ. ಜುಲೈ 28ರಂದು ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಈ ಮದುವೆಯನ್ನು ಗೌಪ್ಯವಾಗಿಡಲಾಗಿದೆ. ಕೇವಲ 4-5 ಮಂದಿ ಮಾತ್ರ ಮದುವೆಯಲ್ಲಿ ಹಾಜರಿದ್ದರು. ಈ ವಿಷಯ ಯಾರಿಗೂ ಗೊತ್ತಾಗಬಾರದೆಂದು ವರ-ವಧು ಹೋಟಿಲಿನ ಹಾಲ್‍ನಲ್ಲಿ ಮದುವೆಯಾಗುವ ಬದಲು ರೂಮಿನಲ್ಲಿ ಮದುವೆಯಾಗಿದ್ದಾರೆ ಎಂದು ಮ್ಯಾಗಜೀನ್‍ವೊಂದರಲ್ಲಿ ಸುದ್ದಿ ಪ್ರಕಟವಾಗಿತ್ತು.

    ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ರಾಖಿ ಸಾವಂತ್ ಸುದ್ದಿಯನ್ನು ನಿರಾಕರಿಸಿದ್ದರು. ಅಲ್ಲದೆ ನಾನು ಮದುವೆಯಾಗಿಲ್ಲ. ಕೆಲವು ಓಟಿಟಿ ಪ್ಲಾಟ್‍ಫಾರ್ಮ್ ಗೆ ನಾನು ಬ್ರೈಡಲ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿದೆ. ಜನರು ನೆಮ್ಮದಿಯಾಗಿ ಬದುಕಲು ಏಕೆ ಬಿಡುತ್ತಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು.

    ನಾನು ಜೆ.ಡಬ್ಲೂ ಮ್ಯಾರಿಯಟ್‍ನಲ್ಲಿ ಕ್ಯಾಟಲಾಗ್ ಶೂಟ್ ಮಾಡಿಸಿದ್ದೇನೆ. ಯಾವುದೇ ನಟಿ ಮೆಹೆಂದಿ ಹಾಕಿದ ತಕ್ಷಣ, ಒಂದು ಉಂಗುರ ಧರಿಸಿದ ಅವರಿಗೆ ಮದುವೆ ಆಗಿದೆ. ಆಸ್ಪತ್ರೆಯಿಂದ ಹೊರ ಬಂದರೆ ಅರ್ಬಾಷನ್ ಮಾಡಿಸಿದ್ದಾರೆ. ಇಬ್ಬರ ಜೊತೆ ತಿರುಗಾಡಿದ ತಕ್ಷಣ ಗೌಪ್ಯವಾಗಿ ಅವರ ಜೊತೆ ಮದುವೆ ಆಗಿದ್ದಾರೆ. ಏನು ಇದೆಲ್ಲಾ?. ನಟಿಯರಿಗೆ ಬದುಕಲು ಬಿಡುವುದಿಲ್ಲವೇ? ನಾವು ಹಣೆಯಲ್ಲಿ ಸಿಂಧೂರ ಇಟ್ಟುಕೊಂಡು ಶೂಟಿಂಗ್ ಹಾಗೂ ಸಿರಿಯಲ್ ಕೂಡ ಮಾಡುತ್ತೇವೆ ಎಂದು ರಾಖಿ ಸ್ಪಷ್ಟನೆ ನೀಡಿದ್ದಾರೆ.

  • ಬರೋಬ್ಬರಿ 30 ಕೆ.ಜಿ ತೂಕ ಇಳಿಸಿ ಹಾಟ್ ಆ್ಯಂಡ್ ಸೆಕ್ಸಿ ಆದ ಸೋನಾಕ್ಷಿ

    ಬರೋಬ್ಬರಿ 30 ಕೆ.ಜಿ ತೂಕ ಇಳಿಸಿ ಹಾಟ್ ಆ್ಯಂಡ್ ಸೆಕ್ಸಿ ಆದ ಸೋನಾಕ್ಷಿ

    ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಬರೋಬ್ಬರಿ 30 ಕೆ.ಜಿ ತೂಕ ಇಳಿಸಿಕೊಂಡು ಹಾಟ್ ಆ್ಯಂಡ್ ಸೆಕ್ಸಿ ಆಗಿದ್ದಾರೆ.

    ಕಾಸ್ಮೋಪಾಲಿಟನ್ ಮ್ಯಾಗಜೀನ್‍ಗಾಗಿ ಸೋನಾಕ್ಷಿ ಸಿನ್ಹಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಹಾಟ್ ಲುಕ್‍ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಸೋನಾಕ್ಷಿ ಹೊಸ ಲುಕ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಈ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸಿದ್ದಾರೆ.

    ಈ ಮ್ಯಾಗಜೀನ್‍ನ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಹಲವು ಔಟ್‍ಫಿಟ್ ಧರಿಸಿದ್ದಾರೆ. ಅದರಲ್ಲಿ ಗೋಲ್ಡನ್ ಬಣ್ಣದ ಉಡುಪು ಧರಿಸಿ ವಿಂಗ್ ಐಲೈನರ್ ಹಚ್ಚಿದ್ದಾರೆ. ಮತ್ತೊಂದು ಫೋಟೋದಲ್ಲಿ ಸೋನಾಕ್ಷಿ ಕ್ರಾಪ್ ಟಾಪ್ ಧರಿಸಿ, ಮಲ್ಟಿಕಲರ್ ಹೈಸಿಲ್ಟ್ ಸ್ಕರ್ಟ್ ಧರಿಸಿ ಹಾಟ್ ಅವತಾರದಲ್ಲಿ ಮಿಂಚಿದ್ದಾರೆ.

    ಸೋನಾಕ್ಷಿ ಸಲ್ಮಾನ್ ಖಾನ್ ನಟನೆಯ ದಬಾಂಗ್ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ತಮ್ಮ ಮೊದಲ ಚಿತ್ರದಿಂದಲೂ ಸೋನಾಕ್ಷಿ ದಪ್ಪಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೂಕ ಹಾಗೂ ಡ್ರೆಸಿಂಗ್ ಸೆನ್ಸ್ ಬಗ್ಗೆ ಟ್ರೋಲ್ ಆಗುತ್ತಿದ್ದರು. ಆದರೆ ಈಗ ಸೋನಾಕ್ಷಿ ಈ ಫೋಟೋಶೂಟ್ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

    ಸೋನಾಕ್ಷಿ ಅವರ ಈ ಬದಲಾವಣೆ ಬಗ್ಗೆ ಎಲ್ಲರೂ ಪ್ರಶ್ನಿಸುತ್ತಿದ್ದರು. ಸೋನಾಕ್ಷಿ ಮ್ಯಾಗಜಿನ್‍ವೊಂದರ ಸಂದರ್ಶನದಲ್ಲಿ ಇದಕ್ಕೆ ಉತ್ತರಿಸಿದ್ದಾರೆ. ನಾನು ನನ್ನ ದೇಹದ ಮೇಲೆ ಹೆಚ್ಚು ಶ್ರಮವಹಿಸಿದ ಕಾರಣ ನನ್ನಲ್ಲಿ ಈ ಬದಲಾವಣೆ ಕಂಡಿದೆ ಎಂದು ಸೋನಾಕ್ಷಿ ಸಿನ್ಹಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv