Tag: Magnus Carlsen

  • ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

    ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

    ಓಸ್ಲೋ: ಭಾರತದ ಚೆಸ್ಟ್‌ ಗ್ರ್ಯಾಂಡ್‌ ಮಾಸ್ಟರ್‌ ಖ್ಯಾತಿಯ ಆರ್‌. ಪ್ರಜ್ಞಾನಂದ (Praggnanandhaa), ವಿಶ್ವದ ನಂ.1 ಚೆಸ್‌ ಮಾಸ್ಟರ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ (Magnus Carlsen) ಸೋಲುಣಿಸಿದ್ದಾರೆ.

    ಬುಧವಾರ ತಡರಾತ್ರಿ ನಡೆದ ನಾರ್ವೆ ಚೆಸ್ ಟೂರ್ನಿಯ (Norway Chess Tournament) 3ನೇ ಸುತ್ತಿನಲ್ಲಿ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ. ಇದು 6 ಬಾರಿ ವಿಶ್ವ ಚೆಸ್‌ ಚಾಂಪಿಯನ್‌ ಕಾರ್ಲ್‌ಸನ್‌ ವಿರುದ್ಧ ಪ್ರಜ್ಞಾನಂದಗೆ ಒಲಿದ ಮೊದಲ ಗೆಲುವು ಸಹ ಆಗಿದೆ. ಮೂರು ಸುತ್ತಿನ ಬಳಿಕ ಅಂಕಪಟ್ಟಿಯಲ್ಲಿ ಪ್ರಜ್ಞಾನಂದ ಅವರು 5.5 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಕಾರ್ಲ್‌ಸನ್‌ 3 ಪಾಯಿಂಟ್‌ಗಳೊಂದಿಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜಿಮ್ನಾಸ್ಟಿಕ್‍ನಲ್ಲಿ ಭಾರತಕ್ಕೆ ಮೊದಲ ಚಿನ್ನ – ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್

    ಸೋತು ಗೆದ್ದ ಪ್ರಜ್ಞಾನಂದ:
    ಕಳೆದ ವರ್ಷ ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದಿದ್ದ ಚೆಸ್ ವಿಶ್ವಕಪ್​ನ (Chess World Cup 2023) ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧವೇ ಗೆಲುವು ಸಾಧಿಸಿ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ್ದರು. ಭಾರತೀಯ ಚೆಸ್‌ ಪಟು ಪ್ರಜ್ಞಾನಂದಗೆ ಅಂದು ಸೋಲಾಗಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ 6 ಬಾರಿ ಚಾಂಪಿಯನ್‌ ಕಾರ್ಲ್‌ಸನ್‌ ಅವರಿಗೆ ಪ್ರಜ್ಞಾನಂದ ಸೋಲುಣಿಸಿರುವುದು ವಿಶೇಷ. ಇದನ್ನೂ ಓದಿ: Malaysia Masters: ಫೈನಲ್‌ನಲ್ಲಿ ಸಿಂಧುಗೆ ಸೋಲು – ಪ್ರಶಸ್ತಿ ಗೆಲ್ಲುವ ಕನಸು ಭಗ್ನ

    ಇನ್ನೂ ಮಹಿಳಾ ವಿಭಾಗದಲ್ಲಿ ಭಾರತದ ಯುವ ಆಟಗಾರ್ತಿ, ಪ್ರಜ್ಞಾನಂದ ಅವರ ಸಹೋದರಿ, ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ ಕೂಡ ಮುನ್ನಡೆ ಸಾಧಿಸಿದ್ದಾರೆ. ಸ್ವದೇಶದ ಅನುಭವಿ ಆಟಗಾರ್ತಿ ಕೋನೇರು ಹಂಪಿ ಅವರನ್ನು ಸೋಲಿಸಿ ನಾರ್ವೆ ಚೆಸ್‌ ಟೂರ್ನಿಯ ನಂತರ ಮಹಿಳಾ ವಿಭಾಗದಲ್ಲಿ ಮಂಗಳವಾರ ಅಗ್ರಸ್ಥಾನಕ್ಕೇರಿದ್ದಾರೆ. ಆ ಬಳಿಕ ನಡೆದ ಪಂದ್ಯದಲ್ಲಿ ಮುಜಿಚುಕ್ ಅವರೊಂದಿಗೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ್ದಾರೆ. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    ಚಾಂಪಿಯನ್‌ ಸೋಲಿಸಿದ್ದು ಖುಷಿ ಕೊಟ್ಟಿದೆ:
    ಗೆಲುವಿನ ಕುರಿತು ಮಾತನಾಡಿರುವ ಪ್ರಜ್ಞಾನಂದ, ಅತ್ಯಂತ ಪ್ರಬಲ ಆಟಗಾರನನ್ನು ಸೋಲಿಸಿದರೆ, ಅದು ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಚೆಸ್​ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದುವರಿಸುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ದೀಪ್ತಿ!

     

  • ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ ಮೋದಿ

    ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ ಮೋದಿ

    ನವದೆಹಲಿ: ಅಜರ್​​ಬೈಜಾನ್​​ನ ಬಾಕುವಿನಲ್ಲಿ ನಡೆದ ಚೆಸ್​​ ವಿಶ್ವಕಪ್-2023 ಫೈನಲ್‌ನ (Chess World Cup Final 2023) ಟೈ ಬ್ರೇಕರ್​​ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್‌ ಯುವ ಗ್ರ್ಯಾಂಡ್​ ಮಾಸ್ಟರ್​ ಭಾರತದ ಆರ್​.ಪ್ರಜ್ಞಾನಂದ (Praggnanandhaa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದಿಸಿದ್ದಾರೆ.

    ಇಂದು ಸಂಜೆ 7 ಗಂಟೆಗೆ ಪ್ರಜ್ಞಾನಂದಗೆ ವಿಶೇಷ ಸಂದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಪ್ರಜ್ಞಾನಂದ ಕುಟುಂಬವನ್ನ ಭೇಟಿ ಮಾಡಿದ ಪ್ರಧಾನಿ ಮೋದಿ, ಕುಟುಂಬದೊಂದಿಗೆ ನಿಮ್ಮನ್ನ ಭೇಟಿಯಾಗಿದ್ದು ತುಂಬಾ ಖುಷಿಯಾಯಿತು. ನಿಮ್ಮ ಉತ್ಸಾಹ ಹಾಗೂ ಪರಿಶ್ರಮವನ್ನ ನಿರೂಪಿಸಿದ್ದೀರಿ, ಭಾರತದ ಯುವಕರು ಎಲ್ಲಿ ಬೇಕಾದ್ರೂ ಜಯಿಸುತ್ತಾರೆ ಎಂಬುದಕ್ಕೆ ನೀವು ಮಾದರಿಯಾಗಿದ್ದೀರಿ, ನಿಮ್ಮ ಮೇಲೆ ಸಾಕಷ್ಟು ಹೆಮ್ಮೆಯಿದೆ ಎಂದು ಶ್ಲಾಘಿಸಿದ್ದಾರೆ. ಪ್ರಜ್ಞಾನಂದ ಸಹ ಪ್ರಧಾನಿ ಮೋದಿ ಪ್ರತಿಕ್ರಿಯೆಗೆ ಧನ್ಯವಾದ ಸಲ್ಲಿಸಿದ್ದಾರೆ.

    ಇತ್ತೀಚೆಗೆ ನಡೆದ ಚೆಸ್ ವಿಶ್ವಕಪ್​ನ ಫೈನಲ್ ಟೈ ಬ್ರೇಕರ್‌ನ 2ನೇ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್‌ ಆಗಿದ್ದ ಮ್ಯಾಗ್ನಸ್ ಕಾರ್ಲ್‌ಸನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದರು. ಭಾರತೀಯ ಚೆಸ್‌ ಪಟು ಪ್ರಜ್ಞಾನಂದ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್‌ ಆದ ಮ್ಯಾಗ್ನಸ್‌ ಕಾರ್ಲ್‌ಸನ್‌

    ಚೆಸ್‌ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಕಾರ್ಲ್‌ಸನ್‌ 1.10 ಲಕ್ಷ ಡಾಲರ್‌ (90,84,850 ರೂ.) ಹಾಗೂ ರನ್ನರ್ ಅಪ್ ಸ್ಥಾನ ಪಡೆದ ಪ್ರಜ್ಞಾನಂದ 80 ಸಾವಿರ ಡಾಲರ್‌ (66,07,164 ರೂ.) ನಗದು ಬಹುಮಾನ ಬಾಚಿಕೊಂಡರು. ಇದನ್ನೂ ಓದಿ: ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮ್ಮ ಸಾಮರ್ಥ್ಯ, ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ – ಪ್ರಜ್ಞಾನಂದಗೆ ಮೋದಿ ಅಭಿನಂದನೆ

    ನಿಮ್ಮ ಸಾಮರ್ಥ್ಯ, ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ – ಪ್ರಜ್ಞಾನಂದಗೆ ಮೋದಿ ಅಭಿನಂದನೆ

    ನವದೆಹಲಿ: ಅಜರ್​​ಬೈಜಾನ್​​ನ ಬಾಕುವಿನಲ್ಲಿ ನಡೆದ ಚೆಸ್​​ ವಿಶ್ವಕಪ್-2023 ಫೈನಲ್​​ (Chess World Cup Final 2023)​ನ ಟೈ ಬ್ರೇಕರ್​​ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್‌ ಯುವ ಗ್ರ್ಯಾಂಡ್​ ಮಾಸ್ಟರ್​ ಭಾರತದ ಆರ್​.ಪ್ರಜ್ಞಾನಂದ (Praggnanandhaa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ. ಜೊತೆಗೆ ಪ್ರಜ್ಞಾನಂದನ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದೂ ಶುಭ ಹಾರೈಸಿದ್ದಾರೆ.

    ಚೆಸ್ ವಿಶ್ವಕಪ್​ನ ಫೈನಲ್ ಟೈ ಬ್ರೇಕರ್‌ನ 2ನೇ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್‌ ಆಗಿದ್ದ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ. ಭಾರತೀಯ ಚೆಸ್‌ ಪಟು ಪ್ರಜ್ಞಾನಂದಗೆ ಸೋಲಾಗಿದ್ದು, ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್‌ ಆದ ಮ್ಯಾಗ್ನಸ್‌ ಕಾರ್ಲ್‌ಸನ್‌

    ಪ್ರಜ್ಞಾನಂದ ಅವರ ಸಾಧನೆಯನ್ನ ಕೊಂಡಾಡಿರುವ ಭಾರತದ ಪ್ರಧಾನಿ, ಎಕ್ಸ್​​​ (ಟ್ವೀಟರ್​) ಮೂಲಕ ಹೆಮ್ಮ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ಅಸಾಧಾರಣ ಪ್ರತಿಭಾ ಕೌಶಲ್ಯವನ್ನ ಗುಣಗಾನ ಮಾಡಿದ್ದಾರೆ. ಫೈನಲ್​ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ ಎದುರು ಪ್ರಜ್ಞಾನಂದ ಸೋಲನುಭವಿಸಿದ್ದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮೋದಿ ಯುವ ಚೆಸ್ ಪಟುವನ್ನು ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಗೆಲ್ಲುವ ಉತ್ಸಾಹ – ಟೀಂ ಇಂಡಿಯಾಕ್ಕೆ ಬೆಂಗಳೂರಿನಲ್ಲಿ ಫಿಟ್‍ನೆಸ್ ಟ್ರೈನಿಂಗ್

    ಎಫ್‌ಐಡಿಇ (ಫಿಡೆ) ಚೆಸ್‌ ವಿಶ್ವಕಪ್​ನಲ್ಲಿ ನೀಡಿದ ಗಮನಾರ್ಹ ಪ್ರದರ್ಶನಕ್ಕೆ ಪ್ರಜ್ಞಾನಂದ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಪ್ರಜ್ಞಾನಂದ ಅವರು ತಮ್ಮ ಅಸಾಧಾರಣ ಕೌಶಲ್ಯಗಳನ್ನ ಜಗತ್ತಿಗೆ ತೋರಿಸಿದ್ದಾರೆ. ಅಲ್ಲದೆ ಫೈನಲ್​​ನಲ್ಲಿ ನಿಮ್ಮ ಅಸಾಧಾರಣ ಸಾಮರ್ಥ್ಯದ ಮೂಲಕ ವಿಶ್ವದ ನಂ.1 ಆಟಗಾರನಿಗೆ ಕಠಿಣ ಹೋರಾಟ ನೀಡಿದ್ದೀರಿ. ಇದು ಸಣ್ಣ ಸಾಧನೆಯಲ್ಲ. ನಿಮ್ಮ ಮುಂದಿನ ಎಲ್ಲಾ ಪಂದ್ಯಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್‌ ಮೂಲಕ ಶುಭಕೋರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್‌ ಆದ ಮ್ಯಾಗ್ನಸ್‌ ಕಾರ್ಲ್‌ಸನ್‌

    ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್‌ ಆದ ಮ್ಯಾಗ್ನಸ್‌ ಕಾರ್ಲ್‌ಸನ್‌

    ಬಾಕು: ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್​ನ (Chess World Cup 2023) ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್‌ ಆಗಿದ್ದ ಮ್ಯಾಗ್ನಸ್ ಕಾರ್ಲ್‌ಸೆನ್ (Magnus Carlsen) ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ. ಭಾರತೀಯ ಚೆಸ್‌ ಪಟು ಪ್ರಜ್ಞಾನಂದಗೆ (Praggnanandhaa) ಸೋಲಾಗಿದ್ದು, ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

    ಚಾಣಾಕ್ಷ ನಡೆ, ತಾಳ್ಮೆ, ಚತುರತೆ ಮತ್ತು ನಿಖರತೆಯ ಆಟವಾಡಿದರ ನಡುವೆಯೂ ಭಾರತದ ಕಿರಿಯ ಗ್ಯ್ರಾಂಡ್​ ಮಾಸ್ಟರ್​​ ಪ್ರಜ್ಞಾನಂದ ವಿರೋಚಿತ ಸೋಲು ಕಂಡಿದ್ದಾರೆ. 5 ಬಾರಿ ವಿಶ್ವಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ನಡುವಿನ ಚೆಸ್‌ ವಿಶ್ವಕಪ್‌ ಫೈನಲ್‌ ಪಂದ್ಯದ ಮೊದಲ ಎರಡು ಸುತ್ತು ಡ್ರಾದಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಪಂದ್ಯ ಟೈ ಬ್ರೇಕರ್ ಸುತ್ತು ಪ್ರವೇಶಿಸಿತ್ತು. ಇದನ್ನೂ ಓದಿ: ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ ಬದುಕಿದ್ದಾರೆ – ಆಪ್ತ ಹೆನ್ರಿ ಒಲೊಂಗಾ ಅಚ್ಚರಿಯ ಟ್ವೀಟ್‌

    ಚೆಸ್‌ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿದ ಕಾರ್ಲ್‌ಸೆನ್‌ 1.10 ಲಕ್ಷ ಡಾಲರ್‌ (90,84,850 ರೂ.) ಹಾಗೂ ರನ್ನರ್ ಅಪ್ ಸ್ಥಾನ ಪಡೆದ ಪ್ರಜ್ಞಾನಂದ 80 ಸಾವಿರ ಡಾಲರ್‌ (66,07,164 ರೂ.) ನಗದು ಬಹುಮಾನ ಬಾಚಿಕೊಂಡಿದ್ದಾರೆ. ಇದನ್ನೂ ಓದಿ: ಬ್ಯಾಕಪ್‌ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್‌ – ವಿಶ್ವಕಪ್‌ ಆಡುವ ಸಂಜು ಸ್ಯಾಮ್ಸನ್‌ ಕನಸು ಭಗ್ನ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವದ ನಂ.1 ಚೆಸ್ ಆಟಗಾರನ ವಿರುದ್ಧ ಗೆಲುವು – ಮೋದಿಯಿಂದ ಪ್ರಜ್ಞಾನಂದನಿಗೆ ಅಭಿನಂದನೆ

    ವಿಶ್ವದ ನಂ.1 ಚೆಸ್ ಆಟಗಾರನ ವಿರುದ್ಧ ಗೆಲುವು – ಮೋದಿಯಿಂದ ಪ್ರಜ್ಞಾನಂದನಿಗೆ ಅಭಿನಂದನೆ

    ನವದೆಹಲಿ: ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‍ಸೆನ್ ವಿರುದ್ಧ ಗೆದ್ದ 16 ವರ್ಷದ ಆರ್ ಪ್ರಜ್ಞಾನಂದನನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

    ಯುವ ಪ್ರತಿಭೆ ಆರ್ ಪ್ರಜ್ಞಾನಂದ ಅವರ ಯಶಸ್ಸಿನ ಬಗ್ಗೆ ನಾವೆಲ್ಲರೂ ಸಂತೋಷಪಡುತ್ತಿದ್ದೇವೆ. ಹೆಸರಾಂತ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‍ಸೆನ್ ವಿರುದ್ಧ ಜಯಗಳಿಸಿದ ಅವರ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಪ್ರತಿಭಾವಂತ ಪ್ರಜ್ಞಾನಂದ ಅವರ ಭವಿಷ್ಯದ ಪ್ರಯತ್ನಗಳಿಗೆ ನಾನು ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವದ ನಂ.1 ಚೆಸ್ ಆಟಗಾರನಿಗೆ ಶಾಕ್ ಕೊಟ್ಟ 16ರ ಭಾರತೀಯ ಬಾಲಕ

    16 ವರ್ಷ ವಯಸ್ಸಿನ ಭಾರತೀಯ ಗ್ರ್ಯಾಂಡ್‍ಮಾಸ್ಟರ್ ಆರ್ ಪ್ರಜ್ಞಾನಂದ ಅವರು ಆನ್‍ಲೈನ್ ಮೂಲಕ ನಡೆಯುತ್ತಿರುವ ಚೆಸ್ ರ್ಯಾಪಿಡ್ ಪಂದ್ಯಾವಳಿಯ ಏರ್‍ಥಿಂಗ್ಸ್ ಮಾಸ್ಟರ್ಸ್‍ನಲ್ಲಿ ನಾಕೌಟ್‍ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರು ಅಂಕಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದು, ರೌಂಡ್-ರಾಬಿನ್ ಹಂತದಿಂದ ಕೇವಲ ಎಂಟು ಮಂದಿ ಮಾತ್ರ ನಾಕೌಟ್‍ಗೆ ಅರ್ಹತೆ ಪಡೆದಿದ್ದಾರೆ. ಇದನ್ನೂ ಓದಿ: ಆರ್​ಸಿಬಿಯಲ್ಲಿ K.G.F ಸ್ಟಾರ್ಸ್

    ಕಾರ್ಲಸೆನ್‍ರ ಸತತ ಮೂರು ಗೆಲುವಿನ ಓಟವನ್ನು ನಿಲ್ಲಿಸಲು ಸೋಮವಾರದ ಆರಂಭದಲ್ಲಿ ನಡೆದ ಟಾರ್ರಾಸ್ಚ್ ವಿಭಾಗದ 8ನೇ ಸುತ್ತಿನ ಆಟದಲ್ಲಿ ಪ್ರಜ್ಞಾನಂದ ಅವರು 39 ನಡೆಗಳಲ್ಲಿ ಕಪ್ಪು ಕಾಯಿಗಳೊಂದಿಗೆ ಗೆದ್ದಿದ್ದರು.

    ಪ್ರಜ್ಞಾನಂದ ಅವರು ಪಂದ್ಯಾವಳಿಯ 10 ಮತ್ತು 12ರ ಸುತ್ತುಗಳಲ್ಲಿ ಆಂಡ್ರೆ ಎಸಿಪೆಂಕೊ ಮತ್ತು ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧ ಇನ್ನೂ ಎರಡು ವಿಜಯಗಳನ್ನು ದಾಖಲಿಸಿದರು. ಆದರೆ ಮಂಗಳವಾರ ಅವರು ನೋಡಿರ್ಬೆಕ್ ಅಬ್ದುಸತ್ತೊರೊವ್ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.

  • ವಿಶ್ವದ ನಂ.1 ಚೆಸ್ ಆಟಗಾರನಿಗೆ ಶಾಕ್ ಕೊಟ್ಟ 16ರ ಭಾರತೀಯ ಬಾಲಕ

    ವಿಶ್ವದ ನಂ.1 ಚೆಸ್ ಆಟಗಾರನಿಗೆ ಶಾಕ್ ಕೊಟ್ಟ 16ರ ಭಾರತೀಯ ಬಾಲಕ

    ನವದೆಹಲಿ: ಭಾರತದ ಯುವ ಗ್ರ್ಯಾಂಡ್‍ಮಾಸ್ಟರ್ 16 ವರ್ಷದ ಆರ್ ಪ್ರಗ್ನಾನಂದ ಅವರು ಆನ್‍ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‍ಥಿಂಗ್ಸ್ ಮಾಸ್ಟರ್ಸ್‍ನ ಎಂಟನೇ ಸುತ್ತಿನಲ್ಲಿ ವಿಶ್ವದ ನಂ 1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸೆನ್ ಅವರನ್ನು ದಂಗುಬಡಿಸಿದ್ದಾರೆ.

    ಕಾರ್ಲ್‍ಸೆನ್‍ರ ಸತತ ಮೂರು ಗೆಲುವಿನ ಓಟವನ್ನು ನಿಲ್ಲಿಸಲು ಸೋಮವಾರದ ಆರಂಭದಲ್ಲಿ ನಡೆದ ಟಾರ್ರಾಸ್ಚ್ ವಿಭಾಗದ ೮ನೇ ಸುತ್ತಿನ ಆಟದಲ್ಲಿ ಪ್ರಗ್ನಾನಂದ ಅವರು 39 ನಡೆಗಳಲ್ಲಿ ಕಪ್ಪು ಕಾಯಿಗಳೊಂದಿಗೆ ಗೆದ್ದಿದ್ದಾರೆ.

    ಭಾರತೀಯ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರು, ಎಂಟು ಸುತ್ತುಗಳ ನಂತರ ಎಂಟು ಅಂಕಗಳೊಂದಿಗೆ ಜಂಟಿ 12ನೇ ಸ್ಥಾನದಲ್ಲಿದ್ದಾರೆ.

    ಹಿಂದಿನ ಪಂದ್ಯಗಳಲ್ಲಿ ಲೆವ್ ಅರೋನಿಯನ್ ವಿರುದ್ಧ ಗೆಲುವು, ಎರಡು ಡ್ರಾಗಳು ಮತ್ತು ನಾಲ್ಕು ಆಟವನ್ನು ಸೋತಿದ್ದಾರೆ. ಅವರು ಅನೀಶ್ ಗಿರಿ ಮತ್ತು ಕ್ವಾಂಗ್ ಲೀಮ್ ಲೆ ವಿರುದ್ಧ ಡ್ರಾ ಮಾಡಿಕೊಂಡಿದ್ದು, ಎರಿಕ್ ಹ್ಯಾನ್ಸೆನ್, ಡಿಂಗ್ ಲಿರೆನ್, ಜಾನ್-ಕ್ರಿಜ್‍ಸ್ಟೋಫ್ ದುಡಾ ಮತ್ತು ಶಖ್ರಿಯಾರ್ ಮಮೆಡಿಯಾರೋವ್ ವಿರುದ್ಧ ಸೋತಿದ್ದರು. ಇದನ್ನೂ ಓದಿ: ಮುಸ್ಲಿಂ ಗೂಂಡಾಗಳಿಂದ ಕೊಲೆ – ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ

    ಕೆಲವು ತಿಂಗಳುಗಳ ಹಿಂದೆ ವಿಶ್ವ ಚಾಂಪಿಯನ್‍ಶಿಪ್ ಪಂದ್ಯದಲ್ಲಿ ನಾರ್ವೆಯ ವಿಶ್ವದ ನಂ 1 ಕಾರ್ಲ್‍ಸೆನ್ ವಿರುದ್ಧ ಸೋತ ರಷ್ಯಾದ ಇಯಾನ್ ನೆಪೆÇಮ್ನಿಯಾಚಿ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಡಿಂಗ್ ಲಿರೆನ್ ಮತ್ತು ಹ್ಯಾನ್ಸೆನ್ ಇಬ್ಬರೂ 15 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

    ಪ್ರಗ್ನಾನಂದ ಅವರು, ಆನ್‍ಲೈನ್ ರ್ಯಾಪಿಡ್ ಟೂರ್ನಿಮೆಂಟ್‍ನ ಪ್ರಾಥಮಿಕ ಸುತ್ತುಗಳಲ್ಲಿ ಗೆಲುವಿಗೆ 3 ಮತ್ತು ಡ್ರಾಕ್ಕಾಗಿ 1 ಅಂಕಗಳನ್ನು ಪಡೆದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಇನ್ನೂ ಏಳು ಸುತ್ತುಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!

    ಆರ್ ಪ್ರಗ್ನಾನಂದ ಯಾರು?
    ಪ್ರಗ್ನಾನಂದ ಅವರು ಅಭಿಮನ್ಯು ಮಿಶ್ರಾ, ಸೆರ್ಗೆಯ್ ಕರ್ಜಾಕಿನ್, ಗುಕೇಶ್ ಡಿ ಮತ್ತು ಜಾವೋಖಿರ್ ಸಿಂದರೋವ್ ಅವರ ಹಿಂದೆ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಸಾಧಿಸಿದ ಐದನೇ-ಕಿರಿಯ ವ್ಯಕ್ತಿಯಾಗಿದ್ದಾರೆ.

    ಪ್ರಗ್ನಾನಂದ ಅವರು 2013ರಲ್ಲಿ 8 ವರ್ಷದೊಳಗಿನವರ ವಿಶ್ವ ಯೂತ್ ಚೆಸ್ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ತಮ್ಮ 7ನೇ ವಯಸ್ಸಿನಲ್ಲಿಯೇ ಫೈಡ್ ಮಾಸ್ಟರ್ ಎಂಬ ಬಿರುದನ್ನು ಗಳಿಸಿದ್ದರು. ಅವರು 2015 ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.

    2016ರಲ್ಲಿ, ಪ್ರಗ್ನಾನಂದ ಅವರು ತಮ್ಮ 10ನೇ ವಯಸ್ಸಿನಲ್ಲಿಯೇ ಇತಿಹಾಸದಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಏಪ್ರಿಲ್ 2021 ರಲ್ಲಿ, ಯುವ ಪ್ರತಿಭೆಗಳಿಗಾಗಿ ಜೂಲಿಯಸ್ ಬೇರ್ ಗ್ರೂಪ್ ಮತ್ತು ಚೇಸ್24.ಕಾಮ್ ಆಯೋಜಿಸಿದ ಆನ್‍ಲೈನ್ ಈವೆಂಟ್ ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್‍ನ ಮೊದಲ ಲೆಗ್ (ನಾಲ್ಕರಲ್ಲಿ) ಅವರು, ಫೋಲ್ಗರ್ ಚಾಲೆಂಜ್ ಅನ್ನು ಗೆದ್ದಿದ್ದರು.

    ಪ್ರಗ್ನಾನಂದ ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022ರ ಮಾಸ್ಟರ್ಸ್ ವಿಭಾಗದಲ್ಲಿ ಆಡಿದ್ದರು. ಅಲ್ಲಿ ಆಂಡ್ರೆ ಎಸಿಪೆಂಕೊ, ವಿದಿತ್ ಗುಜರಾತಿ ಮತ್ತು ನಿಲ್ಸ್ ಗ್ರಾಂಡೆಲಿಯಸ್ ವಿರುದ್ಧದ ಪಂದ್ಯಗಳನ್ನು ಗೆದ್ದಿದ್ದರು. ನಂತರ ಅಂತಿಮ ಸ್ಕೋರ್ 5.5 ನೊಂದಿಗೆ 12ನೇ ಸ್ಥಾನ ಪಡೆದಿದ್ದರು.