Tag: Magistrate Court

  • ದರ್ಶನ್‌ಗೆ ಜೈಲೂಟವೇ ಗತಿ

    ದರ್ಶನ್‌ಗೆ ಜೈಲೂಟವೇ ಗತಿ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿರುವ ನಟ ದರ್ಶನ್‌ (Darshan) ಜೈಲೂಟವನ್ನೇ ಸೇವಿಸಬೇಕಿದೆ.

    ಮನೆಯಿಂದ ಊಟ (Home Cooked Food) ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜುಲೈ 25ಕ್ಕೆ ಆದೇಶ  ಕಾಯ್ದಿರಿಸಿದೆ. ದರ್ಶನ್‌ ಪರ ಮತ್ತು ಪೊಲೀಸರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಜುಲೈ 25 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

    ದರ್ಶನ್‌ ಪರ ವಕೀಲರ ವಾದ ಏನಿತ್ತು?
    ಆರೋಪಿಗೆ ಜೈಲಿನಲ್ಲಿ ಇರುವಾಗ ಮನೆಯ ಊಟ ಪಡೆಯಬಹುದು. ಇದು ವಿಚಾರಣಾಧೀನ ಕೈದಿಯ ಹಕ್ಕು. ಜೈಲಿನ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಆರೋಪಿಗೆ ಕೆಲವೊಂದು ನಿಬಂಧನೆಗಳನ್ನು ಹೇಳಿ ಅವಕಾಶ ಕೊಡಿಸಬಹುದು. ತಮ್ಮದೇ ವೆಚ್ಚದಲ್ಲಿ ಇದನ್ನು ಪಡೆಯಲು ಅವಕಾಶವನ್ನು ಹೊಂದಿಸಲಾಗಿದೆ. ಕೊಲೆಯ ಆರೋಪಿಗಳಿಗೆ ವಿನಾಯಿತಿ ನೀಡಲಾಗಿದೆ

    ಸೆಕ್ಷನ್ 30 ರ ಪ್ರಕಾರ ಜೈಲಿನಲ್ಲಿ ಇರುವ ಆರೋಪಿ ಮನೆಯ ಊಟ ಪಡೆಯಬಹುದು. ಅಲ್ಲದೇ ಮನೆಯಿಂದ ಹಾಸಿಗೆ ವ್ಯವಸ್ಥೆ ಮತ್ತು ಪುಸ್ತಕಗಳನ್ನು ಹೊಂದುವ ಅವಕಾಶ ಇದೆ . ಈ ಎಲ್ಲಾ ಅವಕಾಶಗಳನ್ನು ಆರೋಪಿಗಳಿಗೆ ಒದಗಿಸಿಕೊಡಬಹುದು.

    ಮರಣ ದಂಡನೆ ಹೊಂದಿದ ಅಪರಾಧಿಗೂ ಕೆಲ ಅವಕಾಶ ಇದೆ. ಅಲ್ಲದೇ ದರ್ಶನ್ ಅವರು ಸಿನಿಮಾದ ನಟರಾಗಿರುವ ಕಾರಣ ಅತಿ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಹೀಗಾಗಿ ಜೈಲಿನ ಅಧಿಕಾರಿಗಳು ಮನೆಯ ಊಟವನ್ನು ನೀಡುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇದರಿಂದ ಹಿಂದೆ ಸರಿಯುತ್ತಿದ್ದಾರೆ.

    ಈ ಹಿಂದೆ ಕುಖ್ಯಾತ ಆರೋಪಿ ಚಾರ್ಲ್ಸ್ ಶೋಭರಾಜ್‌ಗೆ ಕೂಡ ಮನೆಯ ಊಟ ಕಲ್ಪಿಸಲಾಗಿತ್ತು. ಯಾವಾಗ ಆರೋಪಿ, ಅಪರಾಧಿ ಎಂದು ಕೋರ್ಟ್‌ ಶಿಕ್ಷೆ ನೀಡುತ್ತದೋ ಅಲ್ಲಿಯವರೆಗೆ ಈ ಎಲ್ಲಾ ಅವಕಾಶವನ್ನು ಬಳಸಿಕೊಳ್ಳಬಹುದು.

    ಪೊಲೀಸರ ಪರ ವಾದ ಏನಿತ್ತು?
    ಆಹಾರ ಅಜೀರ್ಣವಾಗುತ್ತಿದೆ. ಪುಡ್ ಪಾಯಿಸನ್ ಆಗಿದೆ, ಭೇದಿ ಆಗುತ್ತಿದೆ ಎಂದು ಮೆಡಿಕಲ್ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಆದರೆ ಒಂದು ಒಂದು ಬಾರಿಯೂ ಭೇದಿ ಆಗಿದೆ ಎಂದು ಆಸ್ಪತ್ರೆಯಲ್ಲಿ ದರ್ಶನ್‌ ಚಿಕಿತ್ಸೆ ಪಡೆದಿಲ್ಲ

    ದರ್ಶನ್ ಅವರು ಮುರಿದಿರುವ ಕೈ ಬಗ್ಗೆ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್‌ ಅವರಿಗೆ ಈಗ ವೈರಲ್‌ ಫೀವರ್‌ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ದರ್ಶನ್ ಅವರಿಗೆ ಮೂರು ತಿಂಗಳ ಹಿಂದೆ ಆರ್ಥೋ ಅಪರೇಷನ್ ಆಗಿತ್ತು. ಜೈಲಿನಲ್ಲಿ ಬಂದಾಗ ಅದರ ನೋವು ಪ್ರಾರಂಭವಾಗಿದ್ದು ಇದಕ್ಕೆ ಎಕ್ಸ್ ರೇ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ಜೈಲಿನ ನಿಯಮಗಳ ಪ್ರಕಾರ ಮನೆಯ ಊಟ ಎನ್ನುವುದರ ಬಗ್ಗೆ ಉಲ್ಲೇಖ ಇಲ್ಲ. ಅನಾರೋಗ್ಯದ ಸಮಯದಲ್ಲಿ ಮಾತ್ರ ವಿಶೇಷ ಊಟ ನೀಡಬಹುದು ಹೊರತು ಮನೆಯ ಊಟವನ್ನೇ ನೀಡಬೇಕು ಎಲ್ಲೂ ಉಲ್ಲೇಖ ಮಾಡಿಲ್ಲ. ಅನಾರೋಗ್ಯದ ವೇಳೆ ವಿಶೇಷ ಕಾಳಜಿ ಆಹಾರ ನೀಡಬೇಕು. ವಾರದಲ್ಲಿ ಒಮ್ಮೆ ಮಾತ್ರ ಮಾಂಸಾಹಾರದ ಊಟ ಕೊಡಬಹುದು. ಅದನ್ನು ಬಿಟ್ಟು ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಊಟವನ್ನು ನೀಡುವಂತೆ ಇಲ್ಲ.

    ಆರೋಪಿಗೆ ಭೇದಿ ಆಗುತ್ತಿದ್ದರೆ ಉಪ್ಪು ಖಾರ ಇಲ್ಲದ ಸಾತ್ವಿಕ ಆಹಾರ ನೀಡಬೇಕು. ಕುಡಿಯಲು ಬಿಸಿ ನೀರು ಬೇಕು ಅಂದರೆ ಜ್ವರ ಇದ್ದಾಗ ಮಾತ್ರ ನೀಡ್ತಾರೆ. ಅದನ್ನ ಬಿಟ್ಟು ಪ್ರತಿ ದಿನ ಸ್ನಾನ ಮಾಡಲು ಬಿಸಿ ನೀರು ಕೊಡಲು ಸಾಧ್ಯವಿಲ್ಲ. ಅನಾರೋಗ್ಯ ಇದ್ದರೆ 15 ದಿನ ಮಾತ್ರ ವಿಶೇಷವಾಗಿ ಅವಕಾಶ ನೀಡಬಹುದು.

  • ಹತ್ರಾಸ್ ಕಾಲ್ತುಳಿತ ಪ್ರಕರಣ – ಪ್ರಮುಖ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

    ಹತ್ರಾಸ್ ಕಾಲ್ತುಳಿತ ಪ್ರಕರಣ – ಪ್ರಮುಖ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

    ಲಕ್ನೋ: ಹತ್ರಾಸ್ ಕಾಲ್ತುಳಿತ (Hathras Stampede) ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್‌ನನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು (Magistrate Court) 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ನೀಡಿ ಶನಿವಾರ ಆದೇಶ ಹೊರಡಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಆರೋಪಿ ಸಂಜು ಯಾದವ್‌ನನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ಮಧುಕರ್ ಮತ್ತು ಇತರ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಸೂರತ್‌ನಲ್ಲಿ ಕುಸಿದು ಬಿದ್ದ 6 ಅಂತಸ್ತಿನ ಕಟ್ಟಡ – ಮಹಿಳೆ ರಕ್ಷಣೆ, 15 ಮಂದಿಗೆ ಗಾಯ

     

    ದೇವಪ್ರಕಾಶ್ ಮಧುಕರ್ ಮತ್ತು ಸಂಜು ಯಾದವ್ ಅವರನ್ನು ಇಂದು ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿ ಉಮಾ ಶಂಕರ್ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿ ಸೋಲಿಸುತ್ತೇವೆ: ರಾಹುಲ್‌ ಗಾಂಧಿ ಶಪಥ

     

    ಕಾಲ್ತುಳಿತ ಪ್ರಕರಣದಲ್ಲಿ ಬಂಧಿತನಾಗಿರುವ ರಾಮಪ್ರಕಾಶ್ ಶಾಕ್ಯಾ ಅವರನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಪಿಒ ಹೇಳಿದ್ದಾರೆ. ಮಧುಕರ್ ಮತ್ತು ಯಾದವ್‌ನನ್ನು ನಂತರ ಬಂಧಿಸಲಾಗಿದ್ದು, ಕೆಲವು ಪೊಲೀಸ್ ವಿಚಾರಣೆಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೊಂದು ಝಿಕಾ ವೈರಸ್‌ ಕೇಸ್‌ ಪತ್ತೆ – ಡೆಂಗ್ಯೂ ನಡುವೆ ಹೆಚ್ಚಾಯ್ತು ಆತಂಕ!

    ಹತ್ರಾಸ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡವು ಶುಕ್ರವಾರ ತಡರಾತ್ರಿ ದೆಹಲಿಯ ನಜಾಫ್‌ಗಢ ಪ್ರದೇಶದಿಂದ ಮಧುಕರ್‌ನನ್ನು ಬಂಧಿಸಿದೆ. ಶಾಕ್ಯಾ ಮತ್ತು ಯಾದವ್ ಅವರನ್ನು ಶನಿವಾರ ಹತ್ರಾಸ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಚಾಲಕ ಗಂಭೀರ

    ಎಫ್‌ಐಆರ್‌ನಲ್ಲಿ ಮಧುಕರ್ ಒಬ್ಬನೇ ಪ್ರಮುಖ ಆರೋಪಿಯಾಗಿದ್ದು, ಸತ್ಸಂಗದ ಹಲವಾರು ಅಪರಿಚಿತ ಸಂಘಟಕರನ್ನು ಶಂಕಿತ ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದ ಗಿರಿತಾಣ, ಶಿಖರಗಳಿಗೆ ಚಾರಣ ನಿಷೇಧ

    ಸ್ವಯಂಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ ಭೋಲೆಬಾಬಾನ ಸತ್ಸಂಗ ಕಾರ್ಯಕ್ರಮದ ನಂತರ ನಡೆದ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಇದನ್ನೂ ಓದಿ: ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ – 42 ಮಂದಿಗೆ ಗಾಯ, 19 ಜನ ಆಸ್ಪತ್ರೆಗೆ