Tag: Magistrate

  • ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ

    ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ

    ಲಕ್ನೋ: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

    2021ರ ಡಿಸೆಂಬರ್ 3ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ (SDM) ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಮುಸ್ಲಿಂ ಮುಖಂಡ ಇರ್ಫಾನ್ ಆಜಾನ್‌ಗಾಗಿ ಧೋರನ್‌ಪುರ ಗ್ರಾಮದ ನೂರಿ ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ಕೋರಿದ್ದರು. ಇದನ್ನೂ ಓದಿ: ಮೋದಿ ಏನೇ ಮಾಡಿದರೂ, ವಿಜ್ಞಾನ ಸುಳ್ಳು ಹೇಳುವುದಿಲ್ಲ: ರಾಹುಲ್ ಗಾಂಧಿ 

    LOUDSPEAKER (1)

    ನ್ಯಾಯಮೂರ್ತಿ ವಿವೇಕ್‌ಕುಮಾರ್ ಬಿರ್ಲಾ ಹಾಗೂ ನ್ಯಾಯಮೂರ್ತಿ ವಿಕಾಸ್ ಅವರಿದ್ದ ನ್ಯಾಯಪೀಠವು, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಸಾಂವಿಧಾನಿಕ ಹಕ್ಕಲ್ಲ ಎಂದು ಕಾನೂನು ಹೇಳುತ್ತದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

    ಅರ್ಜಿದಾರರು ತಮ್ಮ ಮನವಿಯಲ್ಲಿ, ಎಸ್‌ಡಿಎಂನ ಆದೇಶವು ಕಾನೂನುಬಾಹಿರ. ಇದು ಮೂಲಭೂತ ಮತ್ತು ಕಾನೂನು ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ

    mosque-loudspeakers
    ಸಾಂದರ್ಭಿಕ ಚಿತ್ರ

    ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯ ವಿಚಾರವಾಗಿ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಕೊಂಡಿದೆ. ಈಚೆಗಷ್ಟೇ ಉತ್ತರ ಪ್ರದೇಶದಲ್ಲೂ ಸಹ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದ 17,000 ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಪ್ರಮಾಣವನ್ನು ಮಿತಗೊಳಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ಭಾರತದಲ್ಲಿ ಕೋವಿಡ್‌ನಿಂದ 47 ಲಕ್ಷ ಮಂದಿ ಸಾವು – WHO ವರದಿ

    ಅನುಮತಿ ಪಡೆದ ಧ್ವನಿವರ್ಧಕಗಳನ್ನು ಮಾತ್ರವೇ ನಿಯಮಿತ ಶಬ್ಧದೊಂದಿಗೆ ಬಳಸುವಂತೆ ಸೂಚನೆ ನೀಡಿತ್ತು. ಇದರಿಂದ ಹಿಂದೂ-ಮುಸ್ಲಿಂ ದೇವಾಯಗಳಲ್ಲೂ ಪ್ರಸಾರವಾಗುತ್ತಿದ್ದ ಧಾರ್ಮಿಕ ಕೈಂಕರ್ಯಗಳು ಆವರಣಕ್ಕೆ ಮಾತ್ರ ಸೀಮಿತವಾಗಿತ್ತು.

  • ಮಹಿಳೆಗೆ ಕೊಟ್ಟ ಮುತ್ತು ತಂದ ಆಪತ್ತು- 7 ವರ್ಷಗಳ ನಂತರ ಬಂತು ಕುತ್ತು

    ಮಹಿಳೆಗೆ ಕೊಟ್ಟ ಮುತ್ತು ತಂದ ಆಪತ್ತು- 7 ವರ್ಷಗಳ ನಂತರ ಬಂತು ಕುತ್ತು

    ಪಣಜಿ: ಬಸ್ಸು, ರೈಲಿನಲ್ಲಿ ಪ್ರಯಾಣಿಸುವಾಗ ಒಮ್ಮೊಮ್ಮೆ ವಿಪರೀತ ಜನರ ಮಧ್ಯೆ ಬರುವ ಕಿಡಿಗೇಡಿಗಳು ಮಹಿಳೆಯರು, ಹುಡುಗಿಯರನ್ನು ಸುಮ್ಮನೆ ಟಚ್ ಮಾಡಿಕೊಂಡು ಹೋಗುವುದು, ಎದುರು ಕುಳಿತರೆ ದಿಟ್ಟಿಸಿ ನೋಡುವುದು ಹೀಗೆ.. ಅನೇಕ ರೀತಿಯಲ್ಲಿ ಅಸಭ್ಯವಾಗಿ ವರ್ತಿಸುವುದನ್ನೇ ಚಾಳಿ ಮಾಡಿಕೊಂಡಿರುತ್ತಾರೆ. ತನ್ನ ಸ್ಟಾಪ್ ಬರುವಷ್ಟರಲ್ಲಿ ಈ ವ್ಯಕ್ತಿ ಕೆಳಗೆ ಬೇಗನೆ ಇಳಿದು ಹೋದರೆ ಸಾಕಪ್ಪಾ ದೇವರೇ ಎಂದು ಮಹಿಳೆಯರು ತಮ್ಮ ಮನಸ್ಸಿನಲ್ಲಿ ಅಂದು ಕೊಳ್ಳುತ್ತಾರೆ. ಹಾಗೇ ಕೆಲ ಧೈರ್ಯಶಾಲಿ ಮಹಿಳೆಯರು ಕಿಡಿಗೇಡಿಗಳಿಗೆ ತಕ್ಕಪಾಠವನ್ನು ಕಲಿಸುವ ಘಟನೆಯೂ ಆಗಾಗ್ಗೆ ನಡೆಯುತ್ತಿದೆ.

    ಇದೀಗ ಇಂತಹದ್ದೇ ಒಂದು ಪ್ರಕರಣದಲ್ಲಿ ರೋಡ್ ರೋಮಿಯೋ ಒಬ್ಬನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2015ರಲ್ಲಿ ನಡೆದ ಘಟನೆಗೆ ಈಚೆಗೆ ಶಿಕ್ಷೆ ವಿಧಿಸಿದ್ದು, ಮಹಿಳೆಗೆ ನ್ಯಾಯ ಕಲ್ಪಿಸಿದೆ. ಇದನ್ನೂ ಓದಿ: ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ

    ಏನಿದು ಘಟನೆ?: 2015ರಲ್ಲಿ ಮುಂಬೈನ ಸ್ಥಳೀಯ ರೈಲಿನಲ್ಲಿ 37 ವರ್ಷದ ಗೋವಾ ಮೂಲದ ವ್ಯಕ್ತಿಯೊಬ್ಬ ಮಹಿಳೆಯನ್ನು ಕೆಲ ಕಾಲ ಗುರಾಯಿಸಿ ನೋಡಿ ಎದ್ದು ಹೋಗಬೇಕಾದರೆ ಥಟ್ಟನೆ ಆಕೆಯ ಕೆನ್ನೆಗೆ ಚುಂಬಿಸಿದ್ದಾನೆ. ಬಳಿಕ ಮಹಿಳೆ ನೀಡಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಹಿಳೆಯ ಮೇಲಿನ ದೌರ್ಜನ್ಯವೆಂದು ಪರಿಗಣಿಸಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

    law

    10 ಸಾವಿರ ದಂಡ: ಆರೋಪಿಗೆ ನ್ಯಾಯಾಲಯವು ಶಿಕ್ಷೆಯೊಂದಿಗೆ 10 ಸಾವಿರ ರೂ .ಗಳ ದಂಡವನ್ನು ವಿಧಿಸಿತ್ತು. ಅದರಲ್ಲಿ 5 ಸಾವಿರ ರೂ. ಮಹಿಳೆಗೆ ಪರಿಹಾರವಾಗಿ ನೀಡುವಂತೆ ನಿರ್ದೇಶಿಸಿತು. ಆರೋಪಿ ತನ್ನ ಹಿಂದಿನ ಪ್ರಯಾಣಿಕನು ತನ್ನನ್ನು ತಳ್ಳಿದ್ದಾನೆ ಮತ್ತು ಅವನು ಅವಳ ಮೇಲೆ ಬಿದ್ದಿದ್ದಾನೆ. ಅವನ ತುಟಿಗಳು ಅವಳ ಕೆನ್ನೆಯನ್ನು ಸ್ಪರ್ಶಿಸಿವೆ ಎಂದು ಆ ವ್ಯಕ್ತಿ ತನ್ನ ಸಮರ್ಥನೆಯಲ್ಲಿ ಹೇಳಿ ಕೊಂಡಿದ್ದನು. ಅವಳು ತಪ್ಪು ತಿಳುವಳಿಕೆಯಿಂದ ದೂರು ದಾಖಲಿಸಿದ್ದಾಳೆ ಎಂದು ಕೋರಿದ್ದರು. ಆರೋಪಿಯ ವಾದವನ್ನು ತಳ್ಳಿಹಾಕಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ – ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

    ಸಂತ್ರಸ್ತೆ ಹೇಳಿದ್ದೇನು?
    ವಿಚಾರಣೆಯ ಸಮಯದಲ್ಲಿ ಸಂತ್ರಸ್ತೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಳು ಮತ್ತು 2015 ಆಗಸ್ಟ್ 28 ರಂದು, ತನ್ನ ಸ್ನೇಹಿತನನ್ನು ಭೇಟಿಯಾಗಲು ಗೋವಂಡಿಗೆ ಹೋಗಿದ್ದೆ ಎಂದು ವಿವರಿಸಿದ್ದಳು. ಅಲ್ಲಿಂದ ಮಧ್ಯಾಹ್ನ 1.20ರ ಸುಮಾರಿಗೆ ಇಬ್ಬರೂ ಗೋವಂಡಿಯಿಂದ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿದರು. ಈ ವೇಳೆ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

  • ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆಯನ್ನೇ ಮದ್ವೆಯಾದ ಮ್ಯಾಜಿಸ್ಟ್ರೇಟ್

    ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆಯನ್ನೇ ಮದ್ವೆಯಾದ ಮ್ಯಾಜಿಸ್ಟ್ರೇಟ್

    ಚಂಡೀಗಢ: ತನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆಯನ್ನೇ ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮದುವೆಯಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಹಾಪುರ್ ಉಪವಿಭಾಗದ ಮ್ಯಾಜಿಸ್ಟ್ರೇಟ್(ಎಸ್‍ಡಿಎಂ) ದಿನೇಶ್ ಕುಮಾರ್ ವಿರುದ್ಧ 35 ವರ್ಷದ ಮಹಿಳೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ ನಾಲ್ಕು ವರ್ಷಗಳಿಂದ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

    ನನಗೆ ಎರಡು ಬಾರಿ ಗರ್ಭಪಾತವಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕುಮಾರ್ ಇತ್ತೀಚೆಗೆ ಖಡ್ಡಾದಿಂದ ಹಾಪುರಕ್ಕೆ ವರ್ಗಾವಣೆಯಾಗಿದ್ದು, ಶುಕ್ರವಾರ ಕುಶಿನಗರಕ್ಕೆ ತಮ್ಮ ಮನೆಯಿಂದ ಕೆಲವು ವಸ್ತುಗಳನ್ನು ಶಿಫ್ಟ್ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ವಿದ್ಯಾವಾಸಿನಿ ರೈ ತಿಳಿಸಿದ್ದಾರೆ.

    ದೂರಿನ ಆಧಾರದ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ಸಿಂಗ್ ಕೂಡಲೇ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದರು. ಆದರೆ ಕುಮಾರ್ ಸಹೋದ್ಯೋಗಿಗಳು ಮಹಿಳೆಯ ಮನವೊಲಿಕೆ ಮಾಡಿ ಮಧ್ಯರಾತ್ರಿ ಕುಶಿನಗರ ಜಿಲ್ಲೆಯ ಪಾದ್ರೌನಾದ ಗಾಯತ್ರಿ ದೇವಸ್ಥಾನದಲ್ಲಿ ತಮ್ಮ ಸಮ್ಮುಖದಲ್ಲಿ ವಿವಾಹ ಮಾಡಿಸಿದ್ದಾರೆ. ಇದೀಗ ವಿವಾಹ ನೋಂದಣಿ ಕೂಡಾ ಆಗಿದೆ.