Tag: Maggie

  • ಮಂಗಳ ಗ್ರಹಕ್ಕೆ ಸೋಲಾರ್‌ ಚಾಲಿತ ವಿಮಾನ ಕಳಿಸಲು ನಾಸಾ ಚಿಂತನೆ – ಏನಿದರ ವಿಶೇಷ?

    ಮಂಗಳ ಗ್ರಹಕ್ಕೆ ಸೋಲಾರ್‌ ಚಾಲಿತ ವಿಮಾನ ಕಳಿಸಲು ನಾಸಾ ಚಿಂತನೆ – ಏನಿದರ ವಿಶೇಷ?

    ಸೌರಮಂಡಲದ ಅನೇಕ ಗ್ರಹ ಉಪಗ್ರಹಗಳ ಬಗ್ಗೆ ಮನುಷ್ಯನ ಕುತೂಹಲ ಮುಗಿಯುವುದೇ ಇಲ್ಲ. ಈ ವಿಚಾರದಲ್ಲಿ ಇಂದು ತಿಳಿದ ವಿಷಯ ನಾಳೆಗೆ ಇನ್ನೊಂದು ತಿರುವು ಪಡೆದು ಬಿಡುತ್ತದೆ. ಇದೇ ಕಾರಣಕ್ಕೆ ನಿರಂತರ ಸಂಶೋಧನೆ, ಉಪಗ್ರಹಗಳ ಉಡಾವಣೆಯನ್ನು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಮಾಡುತ್ತಿವೆ. ಇನ್ನೂ ಹೊಸ ಹೊಸ ಯೋಜನೆಯನ್ನು ಈ ಬಗ್ಗೆ ರೂಪಿಸುತ್ತಿವೆ. 

    ಅಮೆರಿಕದ ನಾಸಾ (NASA) ಈ ಹಿಂದೆ ಮಂಗಳನಲ್ಲಿಗೆ (Mars) ಕಳಿಸಿದ್ದ ಹೆಲಿಕಾಪ್ಟರ್‌ ಮಾದರಿಯ ನೌಕೆ ಹಲವು ವರ್ಷಗಳ ಕಾಲ ತನ್ನ ಕೆಲಸ ಮಾಡಿ ವಾರದ ಹಿಂದೆ ಹಾನಿಗೊಳಗಾಗಿದೆ. ಇದೀಗ ನಾಸಾ ಮತ್ತೆ ಮಂಗಳನಲ್ಲಿಗೆ ವಿಮಾನದ ಮಾದರಿಯ ಉಪಗ್ರಹವೊಂದನ್ನು ಕಳುಹಿಸುವ ಚಿಂತನೆಯಲ್ಲಿದೆ. ಮಂಗಳನಲ್ಲಿ ನೀರಿನ ಅಂಶ ಇರುವ ಬಗ್ಗೆ ಅಧ್ಯಯನ ಮಾಡುವುದು ಇದರ ಮೂಲ ಉದ್ದೇಶವಾಗಿದೆ. 

    ಇದಕ್ಕಾಗಿ ದೈತ್ಯ ಸ್ಥಿರ ರೆಕ್ಕೆಯ ವಿಮಾನವನ್ನು ಕಳುಹಿಸುವ ಆಲೋಚನೆಯಲ್ಲಿ ಅಮೆರಿಕದ ವಿಜ್ಞಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಮ್ಯಾಗಿ ಎಂಬ ಹೆಸರಿನ ಈ ವಿಮಾನ, ಮಾರ್ಸ್ ಏರಿಯಲ್ ಮತ್ತು ಗ್ರೌಂಡ್ ಇಂಟೆಲಿಜೆಂಟ್ ಎಕ್ಸ್‌ಪ್ಲೋರರ್ ಸೌರಶಕ್ತಿ ಚಾಲಿತ ವಿಮಾನವಾಗಿದೆ. ಟೇಕ್ ಆಫ್ ಮತ್ತು ಲಂಬವಾಗಿ ಇಳಿಯಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. 

    ಈ ವಿಮಾನ ಒಂದೇ ಚಾರ್ಜ್‍ನಲ್ಲಿ 179 ಕಿ.ಮೀ ದೂರದವರೆಗೆ ಹಾರಬಲ್ಲದು. ಅಲ್ಲದೇ ಒಂದೇ ಮಂಗಳನ ವರ್ಷದಲ್ಲಿ 16,000 ಕಿ.ಮೀ ಗಿಂತಲೂ ಹೆಚ್ಚು ಪ್ರಯಾಣಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಅವಧಿ ಭೂಮಿಯ ಮೇಲೆ ಸರಿಸುಮಾರು 24 ತಿಂಗಳುಗಳಿಗೆ ಸಮಾನವಾಗಿರುತ್ತದೆ. ಮ್ಯಾಗಿಯು ಮಂಗಳನ ಅಂಗಳದಿಂದ 1,000 ಮೀಟರ್ ಎತ್ತರದಲ್ಲಿ ಹಾರುತ್ತದೆ. ಇದು ಮೂರು ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಮೊದಲನೆಯದಾಗಿ ಅಲ್ಲಿ ನೀರಿನ ಅಂಶ ಇರುವುದರ ಬಗ್ಗೆ, ಎರಡನೇಯದಾಗಿ ದುರ್ಬಲ ಕಾಂತೀಯ ಕ್ಷೇತ್ರದ ಮೂಲದ ಬಗ್ಗೆ ಹಾಗೂ ಕೊನೆಯದಾಗಿ ಮೀಥೇನ್‍ನ ಇರುವ ಬಗ್ಗೆ ಹುಡುಕಾಟ ನಡೆಸಲಿದೆ. ವಿಜ್ಞಾನಿಗಳ ಈ ಕಲ್ಪನೆ ಇನ್ನೂ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ. 

    ಮಂಗಳನ ಅಂಗಳಕ್ಕೆ ತೆರಳಿದ್ದ ನಾಸಾ ಹೆಲಿಕಾಪ್ಟರ್‌!

    ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ನಾಸಾದ ಬಾಹ್ಯಾಕಾಶ ನೌಕೆ ಇಂಜೆನ್ಯುಯಿಟಿ ತನ್ನ ಹಾರಾಟವನ್ನು ಇತ್ತೀಚೆಗೆ ನಿಲ್ಲಿಸಿತ್ತು. ಹೆಲಿಕಾಪ್ಟರ್‌ನಂತಿರುವ ಪುಟ್ಟ ನೌಕೆ 1.8 ಕೆ.ಜಿ ತೂಕವಿತ್ತು. ಇದೀಗ ನೌಕೆಯ ರೆಕ್ಕೆಗಳು ಜಖಂಗೊಂಡಿದ್ದು, ಇದರ ಕಾರ್ಯಸ್ಥಗಿತವಾಗಿದೆ. ಪ್ರಸ್ತುತ ಬಿದ್ದಿರುವ ನೌಕೆ ಮಂಗಳ ಗ್ರಹದಲ್ಲಿಯೇ ಇರಲಿದ್ದು, ನಿಯಂತ್ರಣ ಕೊಠಡಿ ಜೊತೆ ಸಂಪರ್ಕದಲ್ಲಿರಲಿದೆ.

    ಅಲ್ಪಾವಧಿಯ ತಾಂತ್ರಿಕ ಪ್ರಾತ್ಯಕ್ಷಿಕೆ ಉದ್ದೇಶದ ಇಂಜೆನ್ಯುಯಿಟಿ ಹೆಲಿಕಾಪ್ಟರ್ 2021ರಲ್ಲಿ ಮಂಗಳ ಗ್ರಹಕ್ಕೆ ಹೆಜ್ಜೆ ಇಟ್ಟಿತ್ತು. ಮೂರು ವರ್ಷಗಳಲ್ಲಿ 72 ಬಾರಿ ಹಾರಾಟ ನಡೆಸಿದ್ದು, 19 ಕಿ.ಮೀ. ಕ್ರಮಿಸಿತ್ತು. ಇದು, ಉದ್ದೇಶಿತ ಯೋಜನೆಗಿಂತಲೂ 14 ಪಟ್ಟು ಅಧಿಕ. 24 ಮೀಟರ್ ಎತ್ತರದಲ್ಲಿ ಗಂಟೆಗೆ 36 ಕಿ.ಮೀ ವೇಗದಲ್ಲಿ ಈ ಹೆಲಿಕಾಪ್ಟರ್ ಕ್ರಮಿಸಿತ್ತು.

  • ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ

    ನ್ನಡದ ‘ಸೂರ್ಯಕಾಂತಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರೆಜಿನಾ ಕಸೆಂದ್ರ (Regina Cassandra), ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಎರಡೇ ಎರಡು ನಿಮಿಷದಲ್ಲಿ ಮುಗಿದು ಹೋಗುವ ಮ್ಯಾಗಿಗೆ ಹೋಲಿಸಿದ್ದಾರೆ. ಹುಡುಗರು ಮತ್ತು ಮ್ಯಾಗಿ ಎರಡೂ ಒಂದೇ, ಎರಡೇ ನಿಮಿಷದಲ್ಲಿ ಮುಗಿದು ಬಿಡುತ್ತೆ ಎಂದು ಜೋಕ್ ಮಾಡುವ ಮೂಲಕ ಟ್ರೋಲ್ ಆಗಿದ್ದಾರೆ. ಈ ಮಾತು ಪಡ್ಡೆಗಳನ್ನು ರೊಚ್ಚಿಗೇಳುವಂತೆ ಮಾಡಿದ್ದು, ರೆಜಿನಾ ಬಗ್ಗೆ ಸಲ್ಲದ ಕಾಮೆಂಟ್‍ಗಳನ್ನು ಬರೆಯುತ್ತಿದ್ದಾರೆ.

    ಸದ್ಯ ರೆಜಿನಾ ಶಾಕಿನಿ ಡಾಕಿನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಕೋ ಸ್ಟಾರ್ ನಿವೇತಾ ಥಾಮಸ್ ಜೊತೆ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ರೆಜಿನಾ ಹುಡುಗರ ಸೆಕ್ಸ್ (Sex) ಸಾಮರ್ಥ್ಯವನ್ನು ಅಳೆದಿದ್ದಾರೆ. ಅದು ಎರಡೇ ನಿಮಿಷದಲ್ಲಿ ಮುಗಿಯುವಂಥದ್ದು ಎಂದು ಹೇಳುವ ಮೂಲಕ ಇಡೀ ಸಂದರ್ಶನದ ಮೂಡ್ ಅನ್ನು ಮತ್ತೊಂದು ದಿಕ್ಕಿಗೆ ತಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಸಂದರ್ಶನದಲ್ಲಿ ನಿರೂಪಕರು ಒಂದು ಜೋಕ್ ಹೇಳ್ತಾ, ಮ್ಯಾಗಿ ಎರಡೇ ನಿಮಷದಲ್ಲಿ ರೆಡಿಯಾದರೂ, ಹುಡುಗಿಯರ ಮೇಕಪ್ ಮಾತ್ರ ಬೇಗ ಆಗುವುದೇ ಇಲ್ಲ ಎಂದು ಹೇಳುತ್ತಾರೆ. ಮ್ಯಾಗಿ (Maggie) ಬಗ್ಗೆ ನನಗೂ ಒಂದು ಜೋಕ್ ಗೊತ್ತು ಎನ್ನುವ ರೆಜಿನಾ, ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿದು ಹೋಗತ್ತೆ, ಹಾಗೆ ಹುಡುಗರದ್ದು (Boys) ಕೂಡ ಎರಡೇ ನಿಮಿಷ ಎಂದು ಜೋಕ್ ಕಟ್ ಮಾಡುತ್ತಾರೆ. ಇದು ನಿರೂಪಕನಿಗೆ ಮೊದ ಮೊದಲು ಗೊತ್ತೇ ಆಗುವುದಿಲ್ಲ. ಅಷ್ಟಕ್ಕೆ ಸುಮ್ಮನಿರದ ರೆಜಿನಾ, ನಿಮಗೆ ಜೋಕ್ ಅರ್ಥ ಆಗಲಿಲ್ಲವಾ? ಅಂತಾರೆ. ತಡವಾಗಿ ಅರ್ಥ ಮಾಡಿಕೊಂಡ ನಿರೂಪಕ, ಅಯ್ಯ.. ಈ ವಿಷಯವೇ ಬೇಡ ಎಂದು ಬೇರೆ ಪ್ರಶ್ನೆ ಮಾಡುತ್ತಾನೆ.

    ರೆಜಿನಾ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ಚೇತನ್ ನಟನೆಯ ‘ಸೂರ್ಯಕಾಂತಿ’ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಚೇತನ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು.

    Live Tv
    [brid partner=56869869 player=32851 video=960834 autoplay=true]

  • ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿ – ವೀಡಿಯೋ ವೈರಲ್

    ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿ – ವೀಡಿಯೋ ವೈರಲ್

    ಲಕ್ನೋ: ಗಾಜಿಯಾಬಾದ್ ಬೀದಿ ಬದಿ ವ್ಯಾಪಾರಿಯೊಬ್ಬ ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿಸಿಸುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    A post shared by Hanshul Anand (@bhukkad_dilli_ke)

    ಕೆಲವು ಜನರು ಮ್ಯಾಗಿಯನ್ನು ಸಾಕಷ್ಟು ತರಕಾರಿಗಳೊಂದಿಗೆ ಇಷ್ಟಪಟ್ಟರೆ, ಇತರರು ಇದರ ಸೂಪ್ ಅನ್ನು ಇಷ್ಟಪಡುತ್ತಾರೆ. ಆದಾಗ್ಯೂ ಕಳೆದ ಕೆಲವು ತಿಂಗಳುಗಳಲ್ಲಿ ನಾವು ಸಾಮಾಜಿಕ ಜಾಲತಾಣದಲ್ಲಿ ತಿಂಡಿಯ ಬಗ್ಗೆ ಸಾಕಷ್ಟು ವಿವಿಧ ಪ್ರಯೋಗಗಳನ್ನು ನೋಡಿದ್ದೇವೆ. ಫ್ಯಾಂಟಾ ಮ್ಯಾಗಿಯಿಂದ ಮ್ಯಾಗಿ ಮಿಲ್ಕ್‌ ಶೇಕ್‌ನವರೆಗೂ ಕೆಲವು ಸೂಪರ್ ಪ್ರಯೋಗಗಳು ನಡೆದಿವೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಬೀದಿ ಬದಿ ವ್ಯಾಪಾರಿ ಪ್ಯಾನ್‍ಗೆ ಸ್ವಲ್ಪ ಎಣ್ಣೆ ಮತ್ತು ತರಕಾರಿಗಳನ್ನು ಸೇರಿಸಿದ್ದಾನೆ. ಮುಂದೆ, ಅವನು ಸ್ವಲ್ಪ ಉಪ್ಪು ಮತ್ತು ಅದಕ್ಕೆ ಬೇಕಾದ ಕೆಲವು ಮಸಾಲೆಗಳನ್ನು ಸೇರಿಸಿದ್ದು, ಈ ಮಿಶ್ರಣಕ್ಕೆ ಕೋಕಾ-ಕೋಲಾದ ಸಣ್ಣ ಬಾಟಲಿಯನ್ನು ಹಾಕಿದ್ದಾನೆ. ನಂತರ ಅವನು ನೂಡಲ್ಸ್ ಮತ್ತು ಮ್ಯಾಗಿ ಮಸಾಲವನ್ನು ಸೇರಿಸಿದ್ದು, ಈ ಮಿಶ್ರಣವನ್ನು ಮತ್ತಷ್ಟು ಬೇಯಿಸಲು ಪ್ಯಾನ್ ಅನ್ನು ಮುಚ್ಚಿದ್ದಾನೆ. ಇದನ್ನೂ ಓದಿ:  ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವು 2 ಲಕ್ಷಕ್ಕೂ ಅಧಿಕ ವಿಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೋಗೆ ಕೋಕಾ-ಕೋಲಾದೊಂದಿಗೆ ಮ್ಯಾಗಿ ಗಾಜಿಯಾಬಾದ್‍ನ ಸಾಗರ್ ಪಿಜ್ಜಾ ಅಂಗಡಿಯಲ್ಲಿ ಲಭ್ಯವಿದೆ ಎಂದು ಬರೆದುಕೊಂಡಿದ್ದು, ಸಾಕಷ್ಟು ನೆಟ್ಟಿಗರು ಕಾಮೆಂಟ್ ಬಾಕ್ಸ್ ಮೂಲಕ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

  • ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ನವದೆಹಲಿ: ಮ್ಯಾಗಿ ಅಂದರೆ ಯಾರಿಗಿಷ್ಟ ಇಲ್ಲಾ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮ್ಯಾಗಿ ಎಲ್ಲರಿಗೂ ಅಚ್ಚು-ಮೆಚ್ಚು. 2 ನಿಮಿಷದಲ್ಲಿ ತಯಾರಾಗುವ ಬಿಸಿ ಬಿಸಿಯಾದ ಮ್ಯಾಗಿಯನ್ನು ನೋಡಿದವರು ಯಾರು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಸದ್ಯ ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.

    ನಿಮ್ಮ ನೆಚ್ಚಿನ ಮ್ಯಾಗಿ ಇದೀಗ ಮದುವೆ ಮನೆಯ ಊಟದ ಮೆನು ಲಿಸ್ಟ್‍ಗಳಲ್ಲಿ ಕೂಡ ಒಂದಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ದೇಶದಲ್ಲಿ ಹರಡಿದ್ದಾಗ ಎಷ್ಟೋ ಮಂದಿ ಲಾಕ್ ಡೌನ್ ಸಮಯದಲ್ಲಿ ಮ್ಯಾಗಿಯನ್ನೇ ಆಹಾರವಾಗಿ ಅವಲಂಬಿಸಿದ್ದರು.

    ಇತ್ತೀಚೆಗೆ ಪತ್ರಕರ್ತೆ ಸೌಮ್ಯ ಲೇಖನಿ ಎಂಬವರು ತಮ್ಮ ಸೋದರ ಸಂಬಂಧಿ ವಿವಾಹ ಮಹೋತ್ಸವಕ್ಕೆ ಹೋಗಿದ್ದಾಗ, ಅಲ್ಲಿನ ಫುಡ್ ಕೌಂಟರ್‍ನಲ್ಲಿ ಮ್ಯಾಗಿ ಕೂಡ ಇರುವುದನ್ನು ಕಂಡು ಮೊಬೈಲ್ ನಲ್ಲಿ ಫೋಟೋವನ್ನು ಸೆರೆಹಿಡಿದಿದ್ದಾರೆ. ಅಲ್ಲದೆ ಕ್ಯಾಪ್ಷನ್‍ನಲ್ಲಿ ನನ್ನ ಸೋದರ ಸಂಬಂಧಿ ಯೋಚಿಸಿರುವ ರೀತಿ ಮತ್ತು ಅವರ ಮದುವೆಯಲ್ಲಿ ಮ್ಯಾಗಿ ಕೌಂಟರ್ ಏರ್ಪಡಿಸಿರುವುದಕ್ಕಾಗಿ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇನ್ನೂ ಫೋಟೋದಲ್ಲಿ ಮರದ ರ್ಯಾಕ್‍ಗಳಲ್ಲಿ ಮ್ಯಾಗಿ ಪ್ಯಾಕೆಟ್‍ಗಳನ್ನು ಇಟ್ಟುಕೊಂಡು, ಸ್ವಲ್ಪ ಮ್ಯಾಗಿಯನ್ನು ಒಲೆ ಮೇಲೆ ಬಾಣಸಿಗ ಬೇಯಿಸುತ್ತಿರುವುದನ್ನು ಕಂಡು ಬಂದಿದೆ. ಈ ಫೋಟೋ ಟ್ವೀಟರ್ ನಲ್ಲಿ ವೈರಲ್ ಆಗುತ್ತಿದ್ದಂತೆಯೇ 1 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಗಳು ಬಂದಿದೆ.