Tag: Magazine

  • ಮಾದಕ ಫೋಟೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕದ್ದ ಪೂನಂ; ನಮ್ಮ ಎದೆಗೆ ಇನ್ನೆಷ್ಟು ಬೆಂಕಿ ಹಚ್ತೀರಿ ಅಂದ್ರು ಫ್ಯಾನ್ಸ್‌

    ಮಾದಕ ಫೋಟೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕದ್ದ ಪೂನಂ; ನಮ್ಮ ಎದೆಗೆ ಇನ್ನೆಷ್ಟು ಬೆಂಕಿ ಹಚ್ತೀರಿ ಅಂದ್ರು ಫ್ಯಾನ್ಸ್‌

    ಮಾದಕ ನಟಿ ಪೂನಂ ಪಾಂಡೆಯ (Poonam Pandey) ಟಾಪ್‌ಲೆಸ್‌ ಅವತಾರಗಳು ಹೊಸದೇನಲ್ಲ. ಆಗಾಗ್ಗೆ ತನ್ನ ಮೈಮಾಟವನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

    ಕೆಲವು ತಿಂಗಳ ಹಿಂದೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿರುವುದಾಗಿ ಇಡೀ ದೇಶವನ್ನೇ ನಂಬಿಸಿದ ಚಾಲಕಿ ಈಕೆ. ಇದೀಗ ಅಭಿಮಾನಿಗಳಿಗೆ ಕಚಗುಳಿ ಇಡುವ ಮೂಲಕ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಸುದ್ದಿಯಾಗುತ್ತಿದ್ದಾರೆ. ಇದನ್ನೂ ಓದಿ: ಬೆತ್ತಲೆ ಫೋಟೋ ಹರಿಬಿಟ್ಟು, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ಪೂನಂ ಪಾಂಡೆ

    ಅದೇ ರೀತಿ ಮಾದಕ ಫೋಟೋವೊಂದನ್ನ ಪೂನಂ ಪಾಂಡೆ ಹಂಚಿಕೊಂಡು ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಜೀನ್ಸ್‌ ಪ್ಯಾಟ್‌ ಜೊತೆಗೆ ಎದೆ ಭಾಗ ಕಾಣಿಸುವಂತೆ ಬ್ಲೌಸ್‌ವೊಂದನ್ನ ಧರಿಸಿದ್ದಾರೆ. ಥಾಂಬ್ಡಿ ಚಾಂಬ್ಡಿ ಕಾ ಮತ್ಲಬ್‌ ಕ್ಯಾ ಹೇ? ಅಂತಲೂ ಬರೆದುಕೊಂಡಿದ್ದಾರೆ. ಪೂನಂ ಪಾಂಡೆ ಅವರ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದರೆ, ನಮ್ಮ ಎದೆಗೆ ಇನ್ನೆಷ್ಟು ಬಾರಿ ಬೆಂಕಿ ಹಚ್ತೀರಿ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಫೈಯರ್‌ ಎಮೋಜಿ ಹಾಕಿದ್ರೆ, ಕೆಲವರು ಐ ಲವ್‌ ಯೂ ಪೂನಂ, ತುಂಬಾ ಸೆಕ್ಸಿ ಆಗಿದ್ದೀರಾ ಎಂದು ಸಹ ಕಾಮೆಂಟ್‌ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಪೂನಂ ಪಾಂಡೆ ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ; ಟ್ರೈನಿ ವೈದ್ಯೆ ಕೇಸ್‌ ಬಗ್ಗೆ ಪೂನಂ ಪಾಂಡೆ ಪ್ರತಿಕ್ರಿಯೆ

    ನಾಚಿಕೆಯಾಗಬೇಕು ನಮಗೆ?…
    ಅತ್ಯಾಚಾರಿಗಳು ಮುಕ್ತವಾಗಿ ನಡೆಯುವ, ಹಿಂಬಾಲಕರು ಕತ್ತಲಲ್ಲಿ ಅಡಗಿರುವ ಹಾಗೂ ಮಹಿಳೆಯರು ನಿರಂತರವಾಗಿ ಅಸುರಕ್ಷಿತರಾಗಿರುವ ಈ ಜಗತ್ತಿನಲ್ಲಿ ನಾವು ಏಕೆ ವಾಸಿಸುತ್ತಿದ್ದೇವೆ? ನಾವು ಇದನ್ನ ಪ್ರತಿದಿನ ಸಹಿಸಿಕೊಳ್ಳಲು ಏಕೆ ಒತ್ತಾಯಿಸಲ್ಪಡುತ್ತೇವೆ? ಅಸುರಕ್ಷತೆ ನಮಗೆ ಸಂಭವಿಸುತ್ತಿದೆ ಅದಕ್ಕೆ ನಾವು ದೂಷಿಸುತ್ತೇವೆ? ನಾವು ಹೇಗೆ ಬಟ್ಟೆ ಧರಿಸುತ್ತೇವೆ? ಹೇಗೆ ನಡೆಯುತ್ತೇವೆ? ಹೇಗೆ ಮಾತನಾಡುತ್ತೇವೆ ಎಂಬುದನ್ನು ಕೇಳುತ್ತಾರೆ? ಏನು ಮಾಡಬೇಕು ಎಂಬುದನ್ನು ಹೇಳುತ್ತಾರೆ? ಆದ್ರೆ ನಾವು ಭಯವಿಲ್ಲದೇ ಬದುಕುವುದಕ್ಕೆ ಏಕೆ ಸಾಧ್ಯವಿಲ್ಲ? ಕಿರುಕುಳ ಅನುಭವಿಸದೇ ಏಕೆ ಅಸ್ತಿತ್ವದಲ್ಲಿರಲು ಧ್ಯವಿಲ್ಲ? ನಾವು ಸುರಕ್ಷತೆ, ಘನತೆ ಮತ್ತು ಗೌರವ ಬಯಸಿದಾಗ ನಮ್ಮ ಧ್ವನಿಯನ್ನು ಏಕೆ ಮೌನಗೊಳಿಸುತ್ತಾರೆ? ಅಂತಲೂ ಪ್ರಶ್ನೆ ಮಾಡಿದ್ದರು.

  • ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲಿ ರಾರಾಜಿಸಿದ ಕಾಂತಾರ ಪೋಸ್ಟರ್

    ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲಿ ರಾರಾಜಿಸಿದ ಕಾಂತಾರ ಪೋಸ್ಟರ್

    ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ಕನ್ನಡದ ಸೂಪರ್‍ಹಿಟ್ ಚಲನಚಿತ್ರ ಕಾಂತಾರಾದ ಸ್ಟಿಲ್ ಅನ್ನು ಕವರ್ ಪೇಜ್‍ನಲ್ಲಿ ಬಳಸಲಾಗಿದೆ. ಕವರ್ ಪೇಜ್ ಗೆ ಫೋಟೋ ಬಳಸುವುದರ ಜೊತೆಗೆ ‘ಅದ್ಭುತ ಕಾಂತಾರ’ ಎಂಬ ಶೀರ್ಷಿಕೆಯಡಿ ಮುಖಪುಟದಲ್ಲಿ ಕಾಂತಾರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. 1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೋಗಳು ಫ್ರಂಟ್‍ಲೈನ್ ಮ್ಯಾಗಜಿನ್‍ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷ.

    ಕಾಂತಾರ ಸಿನಿಮಾ ಈವರೆಗೂ  ಅಂದಾಜು 350 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕವೊಂದರಲ್ಲಿ ಅದು 150 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ. ಇನ್ನೇನು ಸದ್ಯದಲ್ಲೇ ಬಾಲಿವುಡ್ ನಲ್ಲೂ 100 ಕೋಟಿ ಕ್ಲಬ್ ಸೇರಲಿದೆ ಎನ್ನುತ್ತಿವೆ ಮಾಹಿತಿಗಳು. ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗಿನ ನಂತರ ಮಲಯಾಳಂನಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಗಳಿಕೆ ಮಾಡಿದೆ. ಈವರೆಗೂ ಕೆಜಿಎಫ್ 1 ಸಿನಿಮಾ ಮಾಡಿದ ಗಳಿಕೆಗಿಂತಲೂ ಕಾಂತರ ಕಲೆಕ್ಷನ್ ಹೆಚ್ಚು ಎನ್ನುವುದು ಅಲ್ಲಿನ ಮಾಹಿತಿ. ಇದನ್ನೂ ಓದಿ:ಶಾರುಖ್ ಮನೆಮುಂದೆ ಜಮಾಯಿಸಿದ ಜನಸಾಗರ ನೋಡಿ ಅಚ್ಚರಿಪಟ್ಟ `ಕಾಂತಾರ’ ಹೀರೋ

    ಮಲಯಾಳಂನಲ್ಲಿ ಈ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ವಿತರಣೆ ಮಾಡಿದ್ದು, ಅಂದಾಜು 20 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕಾಂತಾರ ಸಿನಿಮಾದ ಒಟ್ಟು ಬಜೆಟ್ ಕೇರಳವೊಂದರಲ್ಲೇ ವಾಪಸ್ಸಾಗಿ, ಮೂರ್ನಾಲ್ಕು ಕೋಟಿ ರೂಪಾಯಿ ಲಾಭ ತಂದಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇನ್ನೂ ಈ ಸಿನಿಮಾ ತುಂಬಿದ ಗೃಹದಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಮತ್ತಷ್ಟು ದುಡ್ಡು ಹರಿದು ಬರಲಿದೆ.

    ತೆಲುಗಿನಲ್ಲೂ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಅಲ್ಲಿಯೂ 40 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆಯಂತೆ. ಅಲ್ಲು ಅರ್ಜುನ್ ತಂದೆ ಈ ಸಿನಿಮಾವನ್ನು ತೆಲುಗಿನಲ್ಲಿ ವಿತರಿಸಿದ್ದು, ಭಾರೀ ಲಾಭವನ್ನೇ ಮಾಡಿಕೊಂಡಿದ್ದಾರಂತೆ. ಹಾಗಾಗಿಯೇ ರಿಷಬ್ ಶೆಟ್ಟಿಗೆ ಅವರು ಓಪನ್ನಾಗಿಯೇ ಆಹ್ವಾನ ನೀಡಿದ್ದು, ಮುಂದಿನ ತಮ್ಮ ಬ್ಯಾನರ್ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದಾರಂತೆ.

    ಕನ್ನಡ ಸಿನಿಮಾವೊಂದರು ದೇಶದ ಬಹುತೇಕ ಭಾಷೆಗಳಲ್ಲಿ ಯಶಸ್ಸು ಕಂಡಿದ್ದು ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಚೆನ್ನಾಗಿಯೇ ದುಡ್ಡು ಮಾಡಿತ್ತು. ನಂತರದ ಸ್ಥಾನ ಕಾಂತಾರ ಚಿತ್ರಕ್ಕೆ ಸಿಕ್ಕಿದೆ. ಅಲ್ಲದೇ, ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲ

    ಭಾರತದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲ

    – ಅಮೆರಿಕದ ನ್ಯೂಸ್‌ವೀಕ್‌ನಲ್ಲಿ ವರದಿ
    – ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಭಾರತದ ಆಕ್ರಮಣಕಾರಿ ನೀತಿ

    ವಾಷಿಂಗ್ಟನ್: ಗಡಿಯಲ್ಲಿ ಭಾರತ ತೋರಿದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲವಾಗಿದೆ ಎಂದು ಅಮೆರಿಕದ ಪ್ರಮುಖ ನಿಯತಕಾಲಿಕೆ ನ್ಯೂಸ್‌ವೀಕ್‌ ಹೇಳಿದೆ.

    67 ವರ್ಷದ ಕ್ಸಿ ಜಿನ್‌ಪಿಂಗ್‌ ವಿಫಲವಾಗಿದ್ದಾರೆ. ಚೀನಾ ವಿಫಲವಾಗಿದ್ದಕ್ಕೆ ಕ್ಸಿ ಜಿನ್‌ಪಿಂಗ್‌ ವಿರುದ್ಧವೇ ಕಮ್ಯೂನಿಸ್ಟ್‌ ಪಕ್ಷದಲ್ಲಿ ಅಸಮಾಧಾನ ಎದ್ದಿದೆ ಎಂದು ವರದಿಯಾಗಿದೆ.

    ತನ್ನ ವಿರುದ್ಧ ಎದ್ದಿರುವ ಅಸಮಾಧಾನವನ್ನು ತಣಿಸಲು ಕ್ಸಿ ಜಿನ್‌ಪಿಂಗ್‌ ಮತ್ತೊಮ್ಮೆ ಭಾರತದ ಮೇಲೆ ಆಕ್ರಮಣ ಮಾಡಲು ಪಿಎಲ್‌ಎ ಸೈನಿಕರಿಗೆ ಸೂಚಿಸಬಹುದು ಎಂದು ಅದಾಜಿಸಿದೆ.

    ವಿಶೇಷವಾಗಿ ಗಲ್ವಾನ್‌ ಘರ್ಷಣೆಯನ್ನು ಪ್ರಸ್ತಾಪಿಸಿರುವ ನ್ಯೂಸ್‌ವೀಕ್‌, ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರೆ ಚೀನಾ ಕಡೆಯಲ್ಲೂ ಸಾವು ಸಂಭವಿಸಿದೆ. ಆದರೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಚೀನಾದ 43 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.  ಇದನ್ನೂ ಓದಿ: ಭಾರತಕ್ಕೆ ಮೊದಲ ಪ್ರಾಶಸ್ತ್ಯ – ಚೀನಾಗೆ ಶಾಕ್‌ ನೀಡಿದ ಲಂಕಾ

    ಭಾರತ ಈ ರೀತಿಯ ಪ್ರತಿರೋಧ ತೋರುತ್ತದೆ ಎಂದು ಚೀನಾ ನಿರೀಕ್ಷೆ ಮಾಡಿರಲಿಲ್ಲ. ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಭಾರತ ಚೀನಾ ವಿರುದ್ಧ ಆಕ್ರಮಣಕಾರಿ ನಡೆಯನ್ನು ಅನುಸರಿಸುತ್ತದೆ. ಕಳೆದ ತಿಂಗಳು ಗಡಿಯಲ್ಲಿನ ಆಯಕಟ್ಟಿನ ಸ್ಥಳಕ್ಕೆ ತೆರಳಲು ಚೀನಾ ಮುಂದಾಗಿತ್ತು. ಆದರೆ ಈ ಸ್ಥಳವನ್ನು ನಾವು ತಲುಪುವ ಮೊದಲು ಭಾರತದ ಸೈನಿಕರು ತಲುಪಿದ್ದನ್ನು ನೋಡಿ ಚೀನಿ ಸೈನಿಕರು ಆಶ್ಚರ್ಯಗೊಂಡಿದ್ದರು ಎಂದು ವರದಿಯಲ್ಲಿ ಹೇಳಿದೆ.

    ಯುದ್ಧದ ಇತಿಹಾಸ ನೋಡಿದರೆ ಚೀನಾ ಕೊನೆಯ ಬಾರಿ ಯುದ್ಧ ಮಾಡಿರುವುದು 1979ರಲ್ಲಿ. ವಿಯೆಟ್ನಾ ಯುದ್ಧದಲ್ಲಿ ಚೀನಾ ಸೋತಿದೆ. ಆದರೆ ಭಾರತ ಈಗ ಬದಲಾಗಿ ಆಕ್ರಮಣಕಾರಿ ನೀತಿ ಅನುಸರಿಸುತ್ತಿದ್ದು ದಿಟ್ಟ ಉತ್ತರ ನೀಡುತ್ತಿದೆ ಎಂದು ತಿಳಿಸಿದೆ.

  • ಬಿಕಿನಿ ತೊಟ್ಟು ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ ಅಲಿಯಾ

    ಬಿಕಿನಿ ತೊಟ್ಟು ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ ಅಲಿಯಾ

    ಮುಂಬೈ: ಬಾಲಿವುಡ್ ಬೆಡಗಿ ಅಲಿಯಾ ಭಟ್ ಬಿಕಿನಿ ತೊಟ್ಟು ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದು, ಇದೀಗ ಆ ಫೋಟೋಗಳು ವೈರಲ್ ಆಗುತ್ತಿದೆ.

    ಇತ್ತೀಚೆಗೆ ಅಲಿಯಾ ವೋಗ್ ಮ್ಯಾಗಜೀನ್‌ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅಲಿಯಾ ಹಾಗೂ ವೋಗ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಅಲಿಯಾ ಚಿಕ್ ಮೊನೊಕಿನಿ ಧರಿಸಿದ್ದಾರೆ.

    ಅಲಿಯಾ ಫೋಟೋಶೂಟ್‌ನಲ್ಲಿ ನಿಯಾನ್ ಗ್ರೀನ್, ಶಿಮರಿ ಬ್ಲೂ ಹಾಗೂ ಗುಲಾಬಿ ಬಣ್ಣದ ಮೊನೊಕಿನಿಯನ್ನು ಧರಿಸಿದ್ದಾರೆ. ಅಂಡರ್‌ವಾಟರ್‌ನಲ್ಲಿ ಫೋಟೋಗಳಿಗೆ ಬೇರೆ ಬೇರೆ ರೀತಿ ಪೋಸ್‌ಗಳನ್ನು ನೀಡುವ ಮೂಲಕ ಹಾಟ್ ಆಗಿ ಮಿಂಚಿದ್ದಾರೆ.

    ಇತ್ತೀಚೆಗೆ ರಣ್‍ಬೀರ್ ಹಾಗೂ ಅಲಿಯಾ ನವೆಂಬರ್‌ನಲ್ಲಿ  ಫ್ರಾನ್ಸ್‌ನಲ್ಲಿ ಮದುವೆ ಆಗಲಿದ್ದಾರೆ ಎಂದು ವೆಬ್‍ಸೈಟ್‍ವೊಂದು ಸುದ್ದಿ ಪ್ರಕಟಿಸಿತ್ತು. ಮದುವೆ ಬಗ್ಗೆ ಇಬ್ಬರ ಕುಟುಂಬದವರು ಅಧಿಕೃತ ಮಾಹಿತಿ ನೀಡಲಿಲ್ಲ. ಆದರೆ ಈ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು.

    ಕೆಲವು ದಿನಗಳ ಹಿಂದೆ ರಣ್‍ಬೀರ್ ಹಾಗೂ ಅಲಿಯಾ ಭಟ್ ಅವರ ನಕಲಿ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಈ ಆಮಂತ್ರಣ ಪತ್ರಿಕೆಯಲ್ಲಿ 2020, ಜನವರಿ 22ರಂದು ಜೋಧಪುರ್‌ನ  ಉಮೇದ್ ಭವನದಲ್ಲಿ ರಣ್‍ಬೀರ್ ಹಾಗೂ ಅಲಿಯಾ ಮದುವೆಯಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

    ಸದ್ಯ ಅಲಿಯಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲಿಯಾ ತಮ್ಮ ತಂದೆ ಮಹೇಶ್ ಭಟ್ ನಿರ್ದೇಶನದ ‘ಸಡಕ್-2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಅಲಿಯಾ, ನಟ ರಣ್‌ಬೀರ್ ಕಪೂರ್ ಜೊತೆ ‘ಬ್ರಹ್ಮಾಸ್ತ್ರ’, ಕರಣ್ ಜೋಹರ್ ನಿರ್ದೇಶನದ ‘ತಖ್ತ್’, ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’, ಹಾಗೂ ಸಂಜಯ್ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾತಿಯಾವಾಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಲಿಪ್ ಕಿಸ್ ಸೀನ್ ಮಾಡೋದು ನಿಲ್ಲಿಸ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದ ದೀಪಿಕಾ!

    ಲಿಪ್ ಕಿಸ್ ಸೀನ್ ಮಾಡೋದು ನಿಲ್ಲಿಸ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದ ದೀಪಿಕಾ!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನು ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲುಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದು ಉತ್ತರಿಸಿದ್ದಾರೆ.

    ಫಿಲ್ಮ್ ಫೇರ್ ಮ್ಯಾಗಜೀನ್ ಸಂದರ್ಶನದಲ್ಲಿ ನಿಮಗೆ ಈಗ ಮದುವೆ ಆಗಿದೆ. ಈಗ ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಪ್ರಶ್ನೆ ಕೇಳಿದ ತಕ್ಷಣ ದೀಪಿಕಾ ತಲೆ ತಗ್ಗಿಸಿ ಛೀ.. ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.

    ದೀಪಿಕಾ ಸಂದರ್ಶನ ನೀಡುತ್ತಿರುವ ಪ್ರೋಮೋವೊಂದನ್ನು ಫಿಲ್ಮ್ ಫೇರ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದೆ. ಈ ಪ್ರೋಮೋದಲ್ಲಿ ಸಂದರ್ಶಕ ದೀಪಿಕಾ ಅವರಿಗೆ ನಿಮ್ಮ ಹಣವೆಲ್ಲಾ ಮದುವೆಗೆ ಖರ್ಚು ಮಾಡುತ್ತೀರಾ? ಎಂದು ಅಭಿಮಾನಿಯೊಬ್ಬರು ಪ್ರಶ್ನೆಯನ್ನು ಕೇಳಿದ್ದರು. ಆಗ ದೀಪಿಕಾ ನನ್ನ ಬಳಿ ಸಾಕಷ್ಟು ಹಣವಿದೆ. ಯೋಚನೆ ಮಾಡಬೇಡಿ ಎಂದು ಹೇಳಿದ್ದಾರೆ.

    ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಎರಡು ಬಾರಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

    ಕೆಲಸದ ಒತ್ತಡದಿಂದ ದೀಪಿಕಾ ಹಾಗೂ ರಣ್‍ವೀರ್ ಸಿಂಗ್ ಇನ್ನೂ ತಮ್ಮ ಹನಿಮೂನ್ ಪ್ಲಾನ್ ಮಾಡಿಲ್ಲ. ಈ ಬಗ್ಗೆ ದೀಪಿಕಾ ಅವರನ್ನು ಪ್ರಶ್ನಿಸಿದ್ದಾಗ ಅವರು, ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ. ರಣ್‍ವೀರ್ ಅಭಿನಯದ ‘ಸಿಂಭಾ’ ಚಿತ್ರ ಈಗ ಬಿಡುಗಡೆಯಾಗಲಿದ್ದು, ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv