ಮಂಗಳೂರು: ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸವಾರೆ ಮೇಲೆಯೇ ಕ್ಯಾಂಟರ್ ಲಾರಿ ಹರಿದು, ಮಹಿಳೆ ಮೃತಪಟ್ಟಿರುವ ಘಟನೆ ಮಂಗಳೂರು (Mangaluru) ನಗರದ ಕೂಳೂರು (Kulur) ರಾಯಲ್ ಓಕ್ ಶೋರೂಂ ಮುಂಭಾಗ ನಡೆದಿದೆ.
ಉಡುಪಿಯ ಪರ್ಕಳ ಮೂಲದ ಮಾಧವಿ ಮೃತ ಮಹಿಳೆ. ಮಂಗಳೂರಿನ ಎ.ಜೆ.ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿ, ಕರ್ತವ್ಯಕ್ಕೆ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದರು. ದ್ವಿಚಕ್ರ ವಾಹನವು ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಮಾಧವಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳು ಹೊಂಡಗುಂಡಿಗಳಿಂದ ತುಂಬಿದ್ದು, ಇದನ್ನು ದುರಸ್ಥಿ ಮಾಡದ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವ ಹೂತು ಹಾಕಿದ್ದೇನೆಂದು ಹೇಳಿದ್ದ ಅನಾಮಿಕ ದೂರುದಾರನ ಮಾತು ನಂಬಿದ ಎಸ್‌ಐಟಿ (SIT) ಅಧಿಕಾರಿಗಳೇ ಇದೀಗ ಟೆನ್ಷನ್ ಆಗಿದ್ದಾರೆ. ಆತನ ಮಾತು ನಂಬಿ ಕಳೆದ 20 ದಿನಗಳಿಂದ ಧರ್ಮಸ್ಥಳದ ಅರಣ್ಯದಲ್ಲಿ ಉತ್ಖನನ ನಡೆದಿತ್ತು. ಎಲ್ಲೂ ಏನೂ ಸಿಗದೇ ಇರೋದ್ರಿಂದ ಉತ್ಖನನವನ್ನ ಬಹುತೇಕ ಅಂತ್ಯಗೊಳಿಸಲು ಇದೀಗ ಎಸ್‌ಐಟಿ ನಿರ್ಧರಿಸಿದೆ. ಈ ನಡುವೆ ಬುರುಡೆಯನ್ನು ತಂದು ಬುರುಡೆ ಬಿಟ್ಟಿದ್ದ ಅನಾಮಿಕನಿಗೆ ಅದೇ ಬುರುಡೆ ಕಂಟಕವಾಗೋ ಸಾಧ್ಯತೆ ಇದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ನಿಗೂಢ ಪ್ರಕರಣ (Dharmasthala Mass Burials) ಇನ್ನರೆಡು ದಿನದಲ್ಲಿ ಎಲ್ಲವೂ ಬಹಿರಂಗಗೊಳ್ಳಲಿದೆ. ಅನಾಮಿಕನ ಮಾತು ನಂಬಿ 15 ದಿನದಲ್ಲಿ 25ಕ್ಕೂ ಹೆಚ್ಚು ಗುಂಡಿ ತೋಡಿದರೂ ಯಾವುದೇ ಸಾಕ್ಷಿ ಸಿಗದ ಹಿನ್ನೆಲೆ ಎಸ್‌ಐಟಿ ಅಧಿಕಾರಿಗಳಿಗೆ ಮೋಸ ಹೋದಂತಿದೆ. ಹಾಗಾಗಿ, ಎಸ್‌ಐಟಿ ಅಧಿಕಾರಿಗಳು ಗುಂಡಿ ತೆಗೆದು ಮಣ್ಣು ಮುಚ್ಚುವುದನ್ನು ಕೈಬಿಟ್ಟು, ತನಿಖೆಯ ದಾರಿಯನ್ನೇ ಬದಲಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಧರ್ಮಸ್ಥಳದ ಜೊತೆಗಿರುತ್ತೆ, ದಿಕ್ಕು ತಪ್ಪಿಸಿದವರನ್ನ ನಾವು ಬಿಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ತನಿಖೆಗಾಗಿ ಅಧಿಕಾರಿಗಳು ಆತ ಹೇಳಿದಂತೆಲ್ಲಾ ನೆಲ ಅಗೆದಿದ್ರು. ಜಿಪಿಆರ್ ಕೂಡ ತರಿಸಿದ್ರು. ಆದರೆ ಒಂದೇ ಒಂದು ಕಳೇಬರದ ತುಂಡು ಸಹ ಸಿಕ್ಕಿಲ್ಲ. ಹಾಗಾಗಿ, ಮುಂದಕ್ಕೆ ಮತ್ತೆ ನೆಲ ಅಗೆದರೆ ಉಪಯೋಗವಿಲ್ಲ ಅಂತ ಐಪಿಎಸ್ ಅಧಿಕಾರಿಗಳು ಅನಾಮಿಕನಿಗೆ ಆರಂಭದಲ್ಲೇ ಮಾಡಬೇಕಿದ್ದ ಮಂಪರು ಪರೀಕ್ಷೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಇನ್ನು ಉತ್ಖನನ ನಡೆಸದಿರಲು ತೀರ್ಮಾನಿಸಿದ್ದು, ಇಂದೇ ಬಹುತೇಕ ಉತ್ಖನನ ಕಾರ್ಯ ಕೊನೆಗೊಳ್ಳಲಿದೆ. ಇದನ್ನೂ ಓದಿ: ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್ ಯಾತ್ರೆ
ಎಸ್‌ಐಟಿ ತನಿಖೆಯ ಹಾದಿ ಬದಲಿಸೋಕೆ ನಿರ್ಧರಿಸಿಯೇ ಇಷ್ಟು ದಿನ ಮಣ್ಣು ಮಾತ್ರ ಅಗೆಯುತ್ತಿದ್ದ ಅಧಿಕಾರಿಗಳು ಇದೀಗ ಮಹಜರು ಆರಂಭಿಸಿದ್ದಾರೆ. 20 ವರ್ಷಗಳ ಹಿಂದೆ ಅನಾಮಿಕ ಧರ್ಮಸ್ಥಳದಲ್ಲಿ ವಾಸವಿದ್ದ ಜಾಗದ ಸ್ಥಳ ಮಹಜರು ಕೂಡ ನಡೆಸಿರೋದು ಅಧಿಕಾರಿಗಳು ತನಿಖೆಯ ಗೊಂದಲಕ್ಕೆ ಬಂದಿರೋದು ಸ್ಪಷ್ಟವಾಗಿದೆ. ಈಗಾಗಲೇ ಒಂದೆಡೆ 20 ದಿನದಿಂದ ಒಂದೂ ಸಾಕ್ಷಿಯೂ ಸಿಗದ ಕಾರಣ ಧರ್ಮಸ್ಥಳದ ಭಕ್ತರು-ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದ್ರೆ, ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಖಾಲಿ ಡಬ್ಬ, ಷಡ್ಯಂತ್ರ, ಕುತಂತ್ರ ಎಂದಿರೋದು ತನಿಖೆಯ ಹಾದಿಯ ಬದಲಾವಣೆಗೆ ಕಾರಣವಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಸೋಮವಾರ ಮಾತನಾಡ್ತೀನಿ ಎಂದಿರೋದ್ರಿಂದ ಎಸ್‌ಐಟಿ, ನೆಲ ಅಗೆಯೋ ತನಿಖೆ ಕೈಬಿಟ್ಟು ಸರ್ಕಾರಕ್ಕೆ ವರದಿ ನೀಡೋದು ದಟ್ಟವಾಗಿದೆ. ಈ ನಡುವೆ ಆರಂಭದಲ್ಲಿ ಅನಾಮಿಕ ತಂದ ತಲೆ ಬುರುಡೆಯ ರಹಸ್ಯ ಬೇಧಿಸಲು ಆರಂಭಿಸಿರೋ ಎಸ್‌ಐಟಿ ಈ ಕೇಸ್‌ನಲ್ಲಿ ಆತನನ್ನು ಬಂಧಿಸಿ ತನಿಖೆ ನಡೆಸಲಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನಗಳ ಬಳಿಕವಾದ್ರೂ ಎಸ್‌ಐಟಿ ಅಧಿಕಾರಿಗಳು ಸುಖಾಸುಮ್ಮನೇ ಮಣ್ಣು ಅಗೆಯೋ ಕೆಲಸ ಕೈಬಿಡಲು ನಿರ್ಧರಿಸಿದ್ದಾರೆ. ಆದರೆ, ಅನಾಮಿಕನನ್ನು ಯಾವ ರೀತಿಯ ತನಿಖೆಗೆ ಒಳಪಡಿಸುತ್ತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸದ್ಯದಲ್ಲೇ ಮಂಪರು ಪರೀಕ್ಷೆ ಮಾಡ್ತಾರೋ, ಬಂಧಿಸ್ತಾರೋ ಅನ್ನೋದು ನಿಗೂಢವಾಗಿದೆ. ಏನೇ ಇರಲಿ, ನಿಷ್ಪಕ್ಷಪಾತವಾದ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅನ್ನೋದು ಎಲ್ಲರ ಆಶಯವಾಗಿದೆ.
ಮಂಗಳೂರು: ನಗರದಲ್ಲಿ ಕಳೆದ ಕೆಲ ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದು, ಪಂಪ್‌ವೆಲ್ ವೃತ್ತವು ಮತ್ತೆ ಮುಳುಗಡೆಯಾಗಿದೆ. ಭಾರೀ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಇನ್ನು ಅತ್ತಾವರ ಕೆಎಂಸಿ ಬ್ಯಾಕ್ ಗೇಟ್ ಹಾಗೂ ಬಿಜೈ ರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಸೃಷ್ಠಿಯಾಗಿದೆ.
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಜೊತೆಗೆ ಕಡಲಬ್ಬರವು ಜೋರಾಗಿದೆ. ನಾಡದೋಣಿ (Boat) ಮಗುಚಿ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ.
ಯಶವಂತ ಹಾಗೂ ಕಮಲಾಕ್ಷ ಅವರು ಮೀನುಗಾರಿಕೆಗೆ (Fishing) ತೆರಳಿದ್ದಾಗ ಕಡಲ ಅಲೆಗಳ ಅಬ್ಬರಕ್ಕೆ ನಾಡದೋಣಿ ಪಲ್ಟಿಯಾಗಿದೆ. ನಾಡದೋಣಿ ಪಲ್ಟಿಯಾಗಿ ಇಬ್ಬರು ಮೀನುಗಾರರು ನೀರು ಪಾಲಾಗಿದ್ದಾರೆ. ಇದೀಗ ನಾಡದೋಣಿಯ ಅವಶೇಷಗಳು ಕಡಲತೀರಕ್ಕೆ ಬಂದು ಬಿದ್ದಿದೆ. ನೀರಿನಲ್ಲಿ ಕಣ್ಮರೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗರ್ಭಿಣಿಯರೂ ಸೇರಿ 4 ಮಂದಿಗೆ ಕೊರೊನಾ
– ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ನನ್ನದ್ದಲ್ಲ ಎಂದ ಪರಮೇಶ್ವರ್ – ಆರೋಪಿಗಳ ಹೇಳಿಕೆಯನ್ನು ಹೇಳಿದ್ದೆ ಎಂದ ಸಚಿವ
ಮಂಗಳೂರು/ ಬೆಂಗಳೂರು: ಕುಡುಪು (Kudupu) ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏ.27ರ ಭಾನುವಾರ ಸಂಜೆ 5:30ರ ಸುಮಾರಿಗೆ ಮಂಗಳೂರಿನ (Manglauru) ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಮೃತದೇಹದ ಮರಣೋತ್ತರ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮೃತನ ಬೆನ್ನಿಗೆ ಬಲವಾದ ಹೊಡೆತ ಬಿದ್ದಿದೆ. ಗಂಭೀರ ಗಾಯಗೊಂಡ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು
ಅಪರಿಚಿತ ಮೃತದೇಹ ಅನುಮಾನಾಸ್ಪದವಾಗಿ ಸಿಕ್ಕಿದ ಹಿನ್ನಲೆಯಲ್ಲಿ ಬಿಸಿ ಬಿಸಿ ಚರ್ಚೆಗಳು ಅದಾಗಲೇ ಆರಂಭವಾಗಿತ್ತು. ಹಿಂದೂ ಯುವಕರು ಮುಸ್ಲಿಂ ಯುವಕನನ್ನು ಗುಂಪು ಹತ್ಯೆ ನಡೆಸಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಅಂತಾ ಸಿಪಿಐಎಂ, ಎಸ್‌ಡಿಪಿಐ ಪಕ್ಷಗಳು ಆರೋಪ ಮಾಡಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ನೈಜ ವಿಚಾರ ಗೊತ್ತಾಗಿದೆ. ಇದನ್ನೂ ಓದಿ: ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಕೇಂದ್ರ ಸರ್ಕಾರ
ಕೊಲೆಯಾಗಿದ್ದು ಯಾಕೆ?
ಏ.27ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ಸಂದರ್ಭ ವಿಚಾರವೊಂದಕ್ಕೆ ಮೃತ ವ್ಯಕ್ತಿಗೆ ಅಲ್ಲಿದ್ದ ಸಚಿನ್ ಎಂಬಾತನೊಂದಿಗೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಸಚಿನ್ ಆತನಿಗೆ ಥಳಿಸಿದ್ದು, ಬಳಿಕ ಅಲ್ಲಿದ್ದ 25ರಿಂದ 30 ಮಂದಿಯ ಗುಂಪು ಅಪರಿಚಿತ ವ್ಯಕ್ತಿಗೆ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ದೀಪಕ್ ಕುಮಾರ್ ಎಂಬುವವರು 19 ಮಂದಿ ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 37/2025, ಕಲಂ: 103(2), 115(2), 189(2), 190, 191(1), 191(3), 240 ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಇದನ್ನೂ ಓದಿ: 5 ತಿಂಗಳ ಬಳಿಕ ಇಸ್ಕಾನ್‌ನ ಚಿನ್ಮಯ್ ಕೃಷ್ಣದಾಸ್‌ಗೆ ಬಾಂಗ್ಲಾ ಹೈಕೋರ್ಟ್ ಜಾಮೀನು
ಗುಂಪು ಹತ್ಯೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ 2023 (BNS 2023) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಕೃತ್ಯದಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಭಾಗವಹಿಸಿರುವ ಸಂಶಯವಿದೆ. ಮೊದಲಿಗೆ 15 ಮಂದಿ ಹಾಗೂ ಮತ್ತೆ ಐವರು ಸೇರಿ ಒಟ್ಟು 20 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಿ ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿಯ ಹೆಸರು ಥಳಕು ಹಾಕಿಕೊಂಡಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಗದಿಯಾಗಿದ್ದ ಮೋದಿ ರಷ್ಯಾ ಪ್ರವಾಸ ದಿಢೀರ್ ರದ್ದು!
ಯಾವುದೇ ದಾಖಲೆ, ವಿಳಾಸ ಇಲ್ಲದ ಮೃತ ವ್ಯಕ್ತಿಯ ಗುರುತು ಪತ್ತೆ ಬಗ್ಗೆ ಪೊಲೀಸರು ಸಾಕಷ್ಟು ಪರಿಶ್ರಮವಹಿಸಿ 2 ದಿನದ ಬಳಿಕ ಗುರುತು ಪತ್ತೆಯಾಗಿದೆ. ಮಂಗಳೂರಿಗೆ ವಲಸೆ ಕಾರ್ಮಿಕನಾಗಿ ಬಂದಿದ್ದ ಕೇರಳದ ವಯನಾಡಿನ ಮನವಂತವಾಡಿಯ ಪುಲ್ಪಲ್ಲಿ ನಿವಾಸಿ ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಇದೀಗ ಆತನ ಸಂಬಂಧಿಕರು ಮಂಗಳೂರಿಗೆ ಬಂದು ಮೃತದೇಹ ಅಶ್ರಫ್‌ನದ್ದೇ ಎಂದು ಗುರುತಿಸಿದ್ದಾರೆ. ಮೃತದೇಹವನ್ನು ಅಶ್ರಫ್ ಕುಟುಂಬಸ್ಥರಿಗೆ ಇಂದು ಹಸ್ತಾಂತರ ಮಾಡಲಾಗಿದ್ದು, ಸಂಬಂಧಿಕರು ಮೃತದೇಹವನ್ನು ಕೊಂಡು ಹೋಗಿದ್ದಾರೆ. ಕೊಲೆಯಾದ ಅಶ್ರಫ್ ಪಾನಮತ್ತನಾಗಿ ಪಾಕಿಸ್ಥಾನಕ್ಕೆ ಜೈಕಾರ ಕೂಗಿದ್ದಕ್ಕೆ ಗುಂಪು ಆತನ ಮೇಲೆ ಬಿದ್ದಿರುವ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಯುವಕರ ಬಲವಾದ ಏಟಿಗೆ ಅಮಾಯಕ ಪ್ರಾಣ ಚೆಲ್ಲಿರೋದು ನಿಜಕ್ಕೂ ಖಂಡನೀಯವಾಗಿದೆ. ಇದನ್ನೂ ಓದಿ: LKG-UKG ದಾಖಲಾತಿಗೆ ವಯಸ್ಸಿನ ಮಿತಿ ಸಡಿಲ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ
ಹೇಳಿಕೆ ನನ್ನದ್ದಲ್ಲ:
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕಾರಣ ಎಂದು ಮಂಗಳವಾರ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ಸ್ಪಷ್ಟನೆ ನೀಡಿದ ಗೃಹ ಸಚಿವ ಪರಮೇಶ್ವರ್ (G.Parameshwar), ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ನನ್ನದಲ್ಲ, ಕೊಲೆ ಆರೋಪಿಗಳದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದ್ವೇಷರಹಿತ ಸಮಾಜಕ್ಕೆ ಬಸವಣ್ಣ ಸಂದೇಶ ಅಗತ್ಯ: ದಕ್ಷಿಣ ಕನ್ನಡ ಜಿಪಂ ಸಿಇಒ
ಗುಂಪು ಹಲ್ಲೆ ನಡೆಸಿದ್ದವರ ಪೈಕಿ ಈವರೆಗೆ 20 ಮಂದಿಯನ್ನು ಬಂಧಿಸಲಾಗಿದೆ. ಅವರನ್ನು ಪೊಲೀಸರು ವಿಚಾರಣೆ ಮಾಡುವಾಗ ಮೃತಪಟ್ಟ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಎಂದು ಹೇಳಿದರು.
ಮಂಗಳೂರು: ಕಡಲನಗರಿ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕರು ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ನಮ್ಮ ರಾಜ್ಯದ ಮೀನುಗಾರಿಕೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಮೂಲದ ಕಾರ್ಮಿಕರು ಕೆಲಸ ಮಾಡುತ್ತಾರೆ. ಇದೇ ರೀತಿ ಮಂಗಳೂರಿನಲ್ಲಿ ಮೀನುಗಾರಿಕ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೈಲ ಶೀನು ಎಂಬ ಆಂಧ್ರಪ್ರದೇಶ ಮೂಲದ ಕಾರ್ಮಿಕನಿಗೆ ಸಹೋದ್ಯೋಗಿಗಳೇ ಸೇರಿಕೊಂಡು ಅಮಾನುಷ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ
ಮೊಬೈಲ್ ಕದ್ದ ಆರೋಪದಲ್ಲಿ ವೈಲ ಶೀನುನನ್ನು ಮೀನುಗಾರಿಕ ಬೋಟ್‍ನಲ್ಲಿಯೇ ಉಲ್ಟಾ ನೇತು ಹಾಕಿ ಆಂಧ್ರಪ್ರದೇಶ ಮೂಲದ ಆರು ಜನ ಮೀನುಗಾರಿಕಾ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ಆರು ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬಂಧಿತರನ್ನು ಕೊಂಡೂರು ಪೋಲಯ್ಯ, ಅವುಲ ರಾಜ್ ಕುಮಾರ್, ಕಾಟಂಗರಿ ಮನೋಹರ್, ವೂಟುಕೋರಿ ಜಾಲಯ್ಯ, ಕರಪಿಂಗಾರ ರವಿ, ಪ್ರಲಯಕಾವೇರಿ ಗೋವಿಂದಯ್ಯ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು?
ಡಿ.14ರಂದು ಆರೋಪಿಗಳು ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಶೈಲೇಶ್ 2 ಎಂಬ ಬೋಟಿನಲ್ಲಿ ಪಾರ್ಟಿಯೊಂದನ್ನು ಮಾಡಿದ್ದಾರೆ. ಆ ಪಾರ್ಟಿಗೆ ಪರಿಚಯದ ವೈಲ ಶೀನುನನ್ನು ಕರೆದಿದ್ದಾರೆ ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಪಾರ್ಟಿಯಲ್ಲಿದ್ದವರ ಎರಡು ಮೊಬೈಲ್ ಮಿಸ್ಸಿಂಗ್ ಆಗಿರುತ್ತದೆ. ಈ ಮೊಬೈಲ್‍ನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಉಲ್ಟಾ ನೇತು ಹಾಕಿ ಸರಪಳಿಯಿಂದ ಹಲ್ಲೆ ನಡೆಸಿದ್ದಾರೆ. ಆ ಬಳಿಕ ಸಾರ್ವಜನಿಕರ ಸಹಾಯಯಿಂದ ವೈಲ ಶೀನು ಪಾರಾಗಿ ಕಾರವಾರಕ್ಕೆ ತೆರಳಿದ್ದಾನೆ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಹಲ್ಲೆ ನಡೆಸಿದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ. ವೈಲ ಶೀನುವಿನ ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಆರೋಪಿಗಳು ಮಾತುಕತೆ ನಡೆಸಿದ್ದರು. ಹೀಗಾಗಿ ಸದ್ಯ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು: ಅಯೋಧ್ಯೆಯಲ್ಲಿ ಇಂದು ಶ್ರೀರಾಮಚಂದ್ರನ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರೆವೇರಿಸಿದ್ದಾರೆ. ಹಾಗೆಯೇ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಾಸಕರ ಜೊತೆಗೆ ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿಯವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರಾಮಮಂದಿರದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆದು ಆದಷ್ಟು ಬೇಗ ದೇಶದ ರಾಮಭಕ್ತರಿಗೆ ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆಯುವಂತಾಗಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ವೆಂಕಟೇಶ್ ನಾವಡ, ತಾ.ಪಂ ಸದಸ್ಯ ಯಶವಂತ ಪೊಳಲಿ, ಯುವ ಮೋರ್ಚಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್, ಕಾರ್ತಿಕ್ ಬಳ್ಳಾಲ್, ಕಿಶೋರ್ ಪಲ್ಲಿಪ್ಪಾಡಿ, ಲೋಕೇಶ್ ಭರಣಿ, ನಂದರಾಮ್ ರೈ, ಸುಕೇಶ್ ಚೌಟ, ವಾಮನ ಆಚಾರ್ಯ ಉಪಸ್ಥಿತರಿದ್ದರು.