Tag: Magadi police

  • Ramanagara | ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ – ನಾಲ್ವರ ಬಂಧನ

    Ramanagara | ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ – ನಾಲ್ವರ ಬಂಧನ

    -3 ವಾಹನಗಳು ಸೀಜ್

    ರಾಮನಗರ: ರಸ್ತೆಗಳಲ್ಲಿ ವೀಲ್ಹಿಂಗ್ (Wheeling) ಮಾಡಿ ವಾಹನ ಸವಾರರಿಗೆ ತೊಂದರೆ ಕೊಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಮಾಗಡಿ-ಬೆಂಗಳೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್ ಮಾಡ್ತಿದ್ದ ನಾಲ್ವರು ಆರೋಪಿಗಳನ್ನ ಮಾಗಡಿ ಪೊಲೀಸರು (Magadi Police) ಬಂಧಿಸಿದ್ದಾರೆ.

    ಹೆದ್ದಾರಿಯಲ್ಲಿ ಮೂರು ಬೈಕ್‌ಗಳಲ್ಲಿ ವೀಲ್ಹಿಂಗ್ ಮಾಡುತ್ತಾ ಇತರ ವಾಹನ ಸವಾರರಿಗರ ತೊಂದರೆ ಮಾಡುವುದಲ್ಲದೇ ಅದನ್ನ ವೀಡಿಯೋ ಮಾಡ್ತಿದ್ದ ವಾಹನ ಸವಾರರಿಗೆ ಪುಂಡರು ಬೆದರಿಕೆ ಹಾಕಿದ್ದಾರೆ. ಕೂಡಲೇ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಮಾಗಡಿ ಪೊಲೀಸರು, ಮೂರು ಬೈಕ್ ಗಳನ್ನ ಸೀಜ್ ಮಾಡಿ, ಓರ್ವ ಯುವಕ ಸೇರಿ ಮೂವರು ಅಪ್ರಾಪ್ತ ಬಾಲಕರನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪ್ರೇಯಸಿಯ ಒತ್ತಡಕ್ಕೆ ಮಣಿದು ಪತ್ನಿಯನ್ನೇ ಹತ್ಯೆಗೈದ ಬಿಜೆಪಿ ನಾಯಕ

    ಭಾರತೀಯ ನ್ಯಾಯ ಸಂಹಿತೆ 281, 128, 177 ಐಎಂವಿ ಕಾಯ್ಡೆಯಡಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: 71‌ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ ಬೆನ್ನಲ್ಲೇ ಭಿನ್ನಮತ ಸ್ಫೋಟ – ʻಕೈʼಗೆ ತಟ್ಟಿದ ಸಾಮೂಹಿಕ ರಾಜೀನಾಮೆ ಬಿಸಿ

  • ಗ್ರಾ.ಪಂ ಸದಸ್ಯನ ಮನೆ ದರೋಡೆ ಕೇಸ್; ಇಬ್ಬರು ಅರೆಸ್ಟ್

    ಗ್ರಾ.ಪಂ ಸದಸ್ಯನ ಮನೆ ದರೋಡೆ ಕೇಸ್; ಇಬ್ಬರು ಅರೆಸ್ಟ್

    – 13 ಲಕ್ಷ ಮೌಲ್ಯದ 162 ಗ್ರಾಂ ಚಿನ್ನಾಭರಣ, 5.65 ಲಕ್ಷ ರೂ. ನಗದು ವಶಕ್ಕೆ

    ರಾಮನಗರ: ಮನೆ ಬಾಗಿಲು ಮುರಿದು ಗ್ರಾ.ಪಂ ಸದಸ್ಯನ ಮನೆ ದರೋಡೆ ಮಾಡಿದ್ದ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಮಾಗಡಿ ಪೊಲೀಸರು (Magadi Police) ಯಶಸ್ವಿಯಾಗಿದ್ದಾರೆ.

    ಸಾವನದುರ್ಗದ ನರಸಿಂಹ ನಾಯಕ್ (34), ಕೆಬ್ಬೆದೊಡ್ಡಿಯ ಕುಮಾರ್ ನಾಯಕ್ (42) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

    ಮಾಗಡಿ ತಾಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯನ ಮನೆಯಲ್ಲಿ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ದೋಚಲಾಗಿತ್ತು. ಈ ಬಗ್ಗೆ ಮನೆ ಮಾಲೀಕ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನ ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್‌ ಸಿಂಹ

    ಬಂಧಿತ ಆರೋಪಿಗಳಿಂದ 13 ಲಕ್ಷ ಮೌಲ್ಯದ 162 ಗ್ರಾಂ ಚಿನ್ನಾಭರಣ ಹಾಗೂ 5.65 ಲಕ್ಷ ರೂ. ನಗದನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಬೆಟ್ಟಿಂಗ್ ಚಟ | ಅಪ್ಪನ ಆಸ್ತಿ ಮಾರಿ ಕಳ್ಳತನ ಮಾಡ್ತಿದ್ದ ಟೆಕ್ಕಿ ಅರೆಸ್ಟ್

    ಬೆಟ್ಟಿಂಗ್ ಚಟ | ಅಪ್ಪನ ಆಸ್ತಿ ಮಾರಿ ಕಳ್ಳತನ ಮಾಡ್ತಿದ್ದ ಟೆಕ್ಕಿ ಅರೆಸ್ಟ್

    – ದುಡಿದು ತಿನ್ನೋಣ ಅಂತಾ ಬೆಂಗ್ಳೂರಿಗೆ ಬಂದಿದ್ದ ಕುಟುಂಬದ ಮಾನ ಹರಾಜು ಹಾಕಿದ ಮಗ

    ಬೆಂಗಳೂರು: ಬೆಟ್ಟಿಂಗ್ ಚಟಕ್ಕೆ ಬಿದ್ದು ಕಳ್ಳತನ ಮಾಡ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರನ್ನು ಮಾಗಡಿ ರೋಡ್ ಪೊಲೀಸರು (Magadi Road Police) ಬಂಧಿಸಿದ್ದಾರೆ.

    ಕೆ.ಎ.ಮೂರ್ತಿ (27) ಬಂಧಿತ ಸಾಫ್ಟ್‌ವೇರ್‌ ಎಂಜಿನಿಯರ್. ಶಿವಮೊಗ್ಗ (Shivamogga) ಮೂಲದವನಾಗಿರುವ ಮೂರ್ತಿ, ಬೆಂಗಳೂರಲ್ಲಿ (Bengaluru) ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ. ಮೂರ್ತಿ ವಿಪರೀತ ಬೆಟ್ಟಿಂಗ್ ಚಟ ಮೈಗಂಟಿಸಿಕೊಂಡು ಸಾಲಗಾರನಾಗಿದ್ದ. ಇದನ್ನೂ ಓದಿ: ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

    ತಂದೆ ಅಣ್ಣಪ್ಪ ಅವರು ಮಗನ ಸಾಲ ತೀರಿಸಲು ಶಿವಮೊಗ್ಗದಲ್ಲಿದ್ದ ಆಸ್ತಿಯನ್ನು ಮಾರಿದ್ದರು. ಬಳಿಕ ಕೆಲಸಕ್ಕೆ ಹೋಗಿ ಜೀವನ ಸಾಗಿಸೋಣ ಎಂದು ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬಂದಿದ್ದರು. ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ಬೆಂಗಳೂರಿಗೆ ಬಂದರೂ ಬೆಟ್ಟಿಂಗನ್ನು ಬಿಡದ ಮೂರ್ತಿ, ಬೆಟ್ಟಿಂಗ್ ಹಣಕ್ಕಾಗಿ ಮನೆಗಳ್ಳತನ ಮಾಡ್ತಿದ್ದ. ಅಲ್ಲದೇ ಅಂಗಾಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಸರ ಕಿತ್ತಿದ್ದ. ಈ ಪ್ರಕರಣ ಸಂಬಂಧ ಆರೋಪಿ ಮೂರ್ತಿಯನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಮಂಗಳೂರು| ಹೃದಯಾಘಾತಕ್ಕೆ ಡಿಪ್ಲೋಮಾ ವಿದ್ಯಾರ್ಥಿ ಸಾವು

    ಆರೋಪಿಯ ವಿಚಾರಣೆ ವೇಳೆ ಹಲವು ಮನೆಗಳ್ಳತನ ಪ್ರಕರಣ ಪತ್ತೆಯಾಗಿದ್ದು, ಕೋಣನಕುಂಟೆ, ಸದ್ದುಗುಂಟರಪಾಳ್ಯ, ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಬಂಧಿತನಿಂದ 17 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಬಾಗಿಲು ಮುರಿದು ಕಳ್ಳತನ – ನಾಲ್ವರು ಅರೆಸ್ಟ್, 5 ಕೆಜಿ ಚಿನ್ನ ವಶ

    ಬಾಗಿಲು ಮುರಿದು ಕಳ್ಳತನ – ನಾಲ್ವರು ಅರೆಸ್ಟ್, 5 ಕೆಜಿ ಚಿನ್ನ ವಶ

    ರಾಮನಗರ: ಮಾಗಡಿ ಪಟ್ಟಣದಲ್ಲಿ ಮನೆಯ ಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳ್ಳತನ ಮಾಡಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಮಾಗಡಿ ಪೊಲೀಸರು (Magadi Police) ಬಂಧಿಸಿದ್ದಾರೆ.

    ಸಾಧಿಕ್, ಖಾಲಿದ್, ಹಂಜಾ ಹಾಗೂ ಚೂರಿಕಟ್ಟೆ ಶಿವ ಬಂಧಿತ ಆರೋಪಿಗಳು. ಬಂಧಿತರಿಂದ 4 ಕೋಟಿ ರೂ. ಮೌಲ್ಯದ 5 ಕೆಜಿ 500 ಗ್ರಾಂ ಚಿನ್ನಾಭರಣ, ನಗದು ಹಾಗೂ 1 ಆಲ್ಟೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹೊಸ ವಿವಾದದಲ್ಲಿ ನಿತ್ಯಾನಂದ – ವರ್ಷಕ್ಕೆ 8.96 ಲಕ್ಷ, ಬೊಲಿವಿಯಾದಲ್ಲಿ ಬೆಂಗಳೂರಿನ 5 ಪಟ್ಟು ಭೂಮಿ ಲೀಸ್‌ಗೆ ಪಡೆದು ವಂಚನೆ

    ಆರೋಪಿ ಸಾಧಿಕ್ ತನ್ನ ಸಹಚರರೊಂದಿಗೆ ಸೇರಿ ಕಾರಿನಲ್ಲಿ ಬಂದು, ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಬಳಿಕ ರಾತ್ರಿ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು. ಇದನ್ನೂ ಓದಿ: ರಾಯಚೂರಿನಲ್ಲಿ ಹೆಚ್ಚುತ್ತಿರುವ ಬೆಕ್ಕು ಜ್ವರ – 38 ಬೆಕ್ಕು ಸಾವು

    ಈ ನಾಲ್ವರ ಗ್ಯಾಂಗ್ ತರೀಕೆರೆ, ಬೇಲೂರು, ಸಾಗರ ಟೌನ್, ಮೂಡಿಗೆರೆ, ಕೆ.ಆರ್.ಪೇಟೆ ಟೌನ್, ಮಂಡ್ಯ ಗ್ರಾಮಾಂತರ, ಹಳೇಬೀಡು, ಹೊಳೇನರಸಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮಾಗಡಿ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ರಾಜಣ್ಣಗೆ ಪರಮೇಶ್ವರ್‌ ನ್ಯಾಯ ಕೊಡಿಸೋ ಕೆಲ್ಸ ಮಾಡ್ತಾರೆ: ಡಿಕೆಶಿ

  • Ramanagara | ನೇಣು ಬಿಗಿದುಕೊಂಡು ವಕೀಲೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್‌!

    Ramanagara | ನೇಣು ಬಿಗಿದುಕೊಂಡು ವಕೀಲೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್‌!

    ರಾಮನಗರ: ವಕೀಲೆಯೊಬ್ಬರು (Women lawyer) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ಪಟ್ಟಣದ ತಿರುಮಲೆ ಶ್ರೀರಂಗ ಬಡಾವಣೆಯಲ್ಲಿ ನಡೆದಿದೆ.

    ವಾಸುಕಿ (25) ಆತ್ಮಹತ್ಯೆ ಮಾಡಿಕೊಂಡ ವಕೀಲೆ. ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿದ್ದ ವಕೀಲೆ ವಾಸುಕಿ, ಗುರುವಾರ (ಆ.22) ಸಂಜೆ ಮಾಗಡಿಯ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ (Magadi Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

  • 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಕಾಮುಕ ಅರೆಸ್ಟ್

    4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಕಾಮುಕ ಅರೆಸ್ಟ್

    ರಾಮನಗರ: ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಕೊಲೆಗೈದ ಘಟನೆ ಮಾಗಡಿ ಪೊಲೀಸ್ (Magadi Police) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ಬೆಂಗಳೂರಿನ (Bengaluru) ಗೌರಿಪಾಳ್ಯದ ಇರ್ಫಾನ್ ಖಾನ್ ವಿರುದ್ಧ ಮಾಗಡಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆ ಅಡಿಯಲ್ಲಿ (POCSO Act) ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟ ಮಹಿಳೆಗೆ ಕೋರ್ಟ್ ಆವರಣದಲ್ಲೇ ಚಾಕು ಇರಿದ ದುಷ್ಕರ್ಮಿ

    ಬಾಲಕಿ ಕುಟುಂಬದ ಸಂಬಂಧಿಯಾದ ಇರ್ಫಾನ್ ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಇದೇ ರೀತಿ ಜು.20 ರಂದು ಮನೆಗೆ ಬಂದಿದ್ದ ಆತ, ಬಾಲಕಿಗೆ ಐಸ್ ಕ್ರೀಂ ಕೊಡಿಸುವುದಾಗಿ ತನ್ನ ಸ್ಕೂಟರ್‌ನಲ್ಲಿ ಕರೆದೊಯ್ದಿದ್ದಾನೆ. ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಪೋಷಕರು ವಿಚಾರಿಸಿದಾಗ, ಇರ್ಫಾನ್ ಖಾನ್ ಬಾಲಕಿಯನ್ನ ಕರೆದೊಯ್ಯುತ್ತಿದ್ದ ಬಗ್ಗೆ ಸ್ಥಳೀಯರು ತಿಳಿಸಿದ್ದರು.

    ಬಳಿಕ ಇರ್ಫಾನ್‍ಗೆ ಫೋನ್ ಮಾಡಿದ ಫೋಷಕರು ಮಗು ಬಗ್ಗೆ ವಿಚಾರಿಸಿದಾಗ ನನಗೇನು ಗೊತ್ತಿಲ್ಲ ಎಂದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಪೋಷಕರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಸೇರಿದಂತೆ, ವಿವಿಧ ಮೂಲಗಳನ್ನು ಆಧರಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿ ಬೆಂಗಳೂರು-ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿ ಬಳಿ ಓಡಾಡಿರುವುದನ್ನ ಗಮನಿಸಿ, ಸುತ್ತಮುತ್ತ ಹುಡುಕಾಡಿದಾಗ ರಸ್ತೆ ಬದಿಯ ಪೊದೆಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು.

    ಇದೀಗ ಕಲಾಸಿಪಾಳ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

    ಘಟನೆ ಖಂಡಿಸಿ ಮಾಗಡಿಯ ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿದೆ. ಮಹಿಳೆಯರು ಸೇರಿ ನೂರಾರು ಮಂದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ, ಇಲ್ಲದಿದ್ದರೆ ಎನ್‍ಕೌಂಟ್ ಮಾಡಿ ಎಂದು ಪೋಷಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 6 ವರ್ಷದಿಂದ ಕೊಲೆಗೆ ಸಂಚು – ಧರ್ಮಾಧಿಕಾರಿ ಹತ್ಯೆ ಆರೋಪಿ ಹೇಳಿದ್ದೇನು?

  • ಶೀಲ ಶಂಕಿಸಿ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ ಪತಿ ಅಂದರ್

    ಶೀಲ ಶಂಕಿಸಿ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ ಪತಿ ಅಂದರ್

    ರಾಮನಗರ: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ನಾಗರಾಜ್ ಬಂಧಿತ ಆರೋಪಿ. ಪೂರ್ಣಿಮಾ ಕೊಲೆಯಾದ ಪತ್ನಿ. ಆರೋಪಿ ನಾಗರಾಜ್ ಬುಧವಾರ ಸಂಜೆ ಪತ್ನಿ ಪೂರ್ಣಿಮಾಳನ್ನು ಕೊಲೆಗೈದು ಪರಾರಿಯಾಗಿದ್ದ.

    ಪೂರ್ಣಿಮಾ ಹಾಗೂ ನಾಗರಾಜ್ 2018ರ ನವೆಂಬರ್ ನಲ್ಲಿ ವಿವಾಹವಾಗಿದ್ದರು. ಈ ದಂಪತಿ ಮೊದಮೊದಲು ವೈವಾಹಿಕ ಜೀವನದಲ್ಲಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಪತ್ನಿಯ ಶೀಲ ಶಂಕಿಸಿದ ನಾಗರಾಜ್ ಆಕೆಗೆ ದೈಹಿಕ ಹಾಗೂ ಮಾನಸೀಕವಾಗಿ ಹಿಂಸೆ ನೀಡುತ್ತಿದ್ದ. ಈ ಕುರಿತು ಪೂರ್ಣಿಮಾ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.

    ನಾಗರಾಜ್ ಬುಧವಾರ ಸಂಜೆ ಪತ್ನಿಯ ಜೊತೆ ಜಗಳವಾಡಿ, ಹಲ್ಲೆ ನಡೆಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ನಾಗರಾಜ್ ಕೈಗೆ ಸಿಕ್ಕ ಮಚ್ಚಿನಿಂದ ಪೂರ್ಣಿಮಾ ತಲೆಗೆ ಹೊಡೆದು ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಯ ಬಾಗಿಲು ಹಾಕಿ ಸ್ಥಳದಿಂದ ಪರಾರಿಯಾಗಿದ್ದ.

    ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಮಾಗಡಿ ಪೊಲೀಸರು ಪರಿಶೀಲನೆ ನಡೆಸಿ, ಪೂರ್ಣಿಮಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲಿಸರು ಆರೋಪಿಗಾಗಿ ಬಲೆ ಬೀಸಿದ್ದರು.

    ತುಮಕೂರು ಜಿಲ್ಲೆಯ ಹುಲಿಯೂರುದುರ್ಗದಲ್ಲಿ ಆರೋಪಿ ನಾಗರಾಜ್ ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಗರಾಜ್‍ನನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.