Tag: magadheera film

  • ಅಭಿಮಾನಿಯ ಅಸಭ್ಯ ವರ್ತನೆಗೆ ‘ಮಗಧೀರ’ ನಟಿ ಶಾಕ್

    ಅಭಿಮಾನಿಯ ಅಸಭ್ಯ ವರ್ತನೆಗೆ ‘ಮಗಧೀರ’ ನಟಿ ಶಾಕ್

    ತೆಲುಗಿನ ‘ಮಗಧೀರ’ (Magadheera) ಬ್ಯೂಟಿ ಕಾಜಲ್ ಅಗರ್‌ವಾಲ್ (Kajal Aggarwal) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ (Kamal Haasan) ನಟನೆಯ ‘ಇಂಡಿಯನ್ 2’, ‘ಸತ್ಯಭಾಮ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಬಿಟ್ಟು ಹೊಸ ವಿಚಾರಕ್ಕೆ ನಟಿ ಸುದ್ದಿಯಾಗಿದ್ದಾರೆ. ಕಾರ್ಯವೊಂದರಲ್ಲಿ ಅಭಿಮಾನಿಯೊಬ್ಬ ಅಸಭ್ಯ ವರ್ತನೆಗೆ ಕಾಜಲ್ ಶಾಕ್ ಆಗಿದ್ದಾರೆ.

    ಶೂಟಿಂಗ್‌ಗೆ ಬ್ರೇಕ್ ಹಾಕಿ ಕಾರ್ಯಕ್ರಮವೊಂದಕ್ಕೆ ನಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಪಿಂಗ್ ಮಾಲ್ ಚಾಲನೆ ನೀಡಲು ನಟಿ ಆಗಮಿಸಿದ್ದರು. ಈ ವೇಳೆ, ಒಳಗೆ ಎಲ್ಲಾ ಕೌಂಟರ್‌ಗಳಲ್ಲಿ ಜನ ತುಂಬಿದ್ದರು. ಕಾಜಲ್ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ಕೊಟ್ಟು, ಕೆಲ ಅಭಿಮಾನಿಗಳು ಸೆಲ್ಫಿ ಕೇಳಿದರೆ ಅವರ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಡಿಸಿದ್ದರು.

    ಈ ವೇಳೆ ಅಭಿಮಾನಿಯೊಬ್ಬ ಅತಿರೇಕ ವರ್ತನೆ ತೋರಿದ್ದಾರೆ. ಸೆಲ್ಫಿ ಕೇಳಲು ಬಂದಾಗ ಕಾಜಲ್ ಸೊಂಟಕ್ಕೆ ಕೈ ಹಾಕಿ ಪೋಸ್ ನೀಡಲು ಹೋಗಿದ್ದಾನೆ. ಈ ವೇಳೆ, ಏನಿದು ಎಂದು ಕಾಜಲ್ ಶಾಕ್ ಆಗಿದ್ದಾರೆ. ಕೂಡಲೇ ಬೌನ್ಸರ್ಸ್ ಆತನನ್ನು ದೂರ ಸರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ನನ್ನಮ್ಮ ಸೂಪರ್ ಸ್ಟಾರ್-3’ನಲ್ಲಿ ತನಿಷಾ ಕುಪ್ಪಂಡ

    ಕಾಜಲ್ ಜೊತೆ ಅಸಭ್ಯವಾಗಿ ವರ್ತಿಸಿದ ಆತನ ನಡೆಗೆ ನೆಟ್ಟಿಗೆರು ಬೇಸರ ವಕ್ತಪಡಿಸುತ್ತಿದ್ದಾರೆ. ಅತಿಯಾಗಿ ವರ್ತಿಸಿದ ಅಭಿಮಾನಿಗೆ ನೆಟ್ಟಿಗರು ಹಿಡಿ ಶಾಪ ಹಾಕಿದ್ದಾರೆ.

  • ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ‌’ಮಗಧೀರ’ ನಟಿ ಕಾಜಲ್?‌

    ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ‌’ಮಗಧೀರ’ ನಟಿ ಕಾಜಲ್?‌

    ಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಅವರು ಮದುವೆಯ ಬಳಿಕ ಪುತ್ರ ನೀಲ್ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಈಗ ಮತ್ತೆ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳನ್ನ ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆದರು. ಈ ನಡುವೆ ಮಗಧೀರ ಬೆಡಗಿ ಕಾಜಲ್ ಅವರ ಬಗ್ಗೆ ಹೊಸ ವಿಚಾರವೊಂದರು ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ. ನಟನೆಗೆ (Films) ಬೈ ಬೈ ಹೇಳ್ತಿದ್ದಾರಂತೆ ನಟಿ ಕಾಜಲ್ ಅಗರ್‌ವಾಲ್.

    ತೇಜ ನಿರ್ದೇಶನದ ‘ಲಕ್ಷ್ಮಿ ಕಲ್ಯಾಣಂ’ ಸಿನಿಮಾ ಮೂಲಕ ಕಾಜಲ್ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ನಂತರ ಕೃಷ್ಣವಂಶಿ ನಿರ್ದೇಶನದ ‘ಚಂದಮಾಮ’ ಸಿನಿಮಾ ಮೂಲಕ ಕಾಜಲ್ ಫೇಮಸ್ ಆಗಿದ್ದಾರೆ. ಬಳಿಕ ತೆಲುಗು- ತಮಿಳಿನ ಟಾಪ್ ಸ್ಟಾರ್ ನಟರಿಗೆ ಕಾಜಲ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮದುವೆಯಾಗಿ ಮಗುಯಾದ ಮೇಲೂ ಕಾಜಲ್ ತನ್ನ ಚಾರ್ಮ್ ಹಾಗೇ ಉಳಿಸಿಕೊಂಡಿದ್ದಾರೆ. ಬಳಕುವ ಬಳ್ಳಿಯಂತೆ ಫಿಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    ಮದುವೆಯ (Wedding) ನಂತರ ಕಾಜಲ್ ತೆಲುಗಿನಲ್ಲಿ ಬಾಲಯ್ಯ (Balayya) ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ಕರುಂಗಪಿಯಂ, ಪ್ಯಾರಿಸ್ ಪ್ಯಾರಿಸ್, ಕ್ವೀನ್ ರಿಮೇಕ್, ಇಂಡಿಯನ್ 2 ಮುಂತಾದ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ‘ಉಮಾ’ (Uma) ಎಂಬ ಹಿಂದಿ ಸಿನಿಮಾದಲೂ ನಟಿಸುತ್ತಿದ್ದಾರೆ. ಕಾಜಲ್ ಈ ಎಲ್ಲಾ ಸಿನಿಮಾಗಳನ್ನು ಕಂಪ್ಲೀಟ್ ಮಾಡುವ ಆತುರದಲ್ಲಿದ್ದಾರೆ.

    ಇದೇ ವೇಳೆ ಕಾಜಲ್ ತನ್ನ ಪತಿ ಮತ್ತು ಮಕ್ಕಳ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಕುಟುಂಬದ ದೃಷ್ಟಿಯಿಂದ ಕಾಜಲ್ ತಮ್ಮ ನೆಚ್ಚಿನ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಲಿದ್ದಾರಂತೆ. ಸಿನಿಮಾ ಶೂಟಿಂಗ್ ಎಂದು ಹೆಚ್ಚಾಗಿ ಹೊರಗೆ ಇರಬೇಕಾಗುತ್ತದೆ. ಪತಿ ಮತ್ತು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಸಾಧ್ಯವಾಗ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಸಿನಿಮಾಗಳಿಂದ ದೂರ ಉಳಿಯಲು ಕಾಜಲ್ ನಿರ್ಧರಿಸಿದ್ದಾರಂತೆ.

    ಮಗ ನೀಲ್ ಗಾಗಿ (Neel) ಕಾಜಲ್ ಈ ತ್ಯಾಗ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಮಗನ ಜೊತೆ ಹೆಚ್ಚಿನ ಸಮಯ ಕಳೆಯಲು ಆಗ್ತಿಲ್ಲ. ಈ ವಯಸ್ಸಿನಲ್ಲಿ ಮಗುವಿಗೆ ತಾಯಿಯ ಪ್ರೀತಿ ಹೆಚ್ಚು ಅಗತ್ಯವಿದ್ದು ಆಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಕಾಜಲ್ ಯಾವುದೇ ಸ್ಪಷ್ಟನೆ ನೀಡಿಲ್ಲ.

  • ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ಸೌತ್ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಮದುವೆಯಾಗಿ ಮಗುಯಾದ್ಮೇಲೂ ಅವರ ಚಾರ್ಮ್ ಕಳೆದುಕೊಂಡಿಲ್ಲ. ಇದೀಗ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಕಾಜಲ್ ಮಿಂಚಿದ್ದಾರೆ.

    2020ರಲ್ಲಿ ಉದ್ಯಮಿ ಗೌತಮ್ ಅವರನ್ನು ಕಾಜಲ್ ಮದುವೆಯಾದರು. ಇದೀಗ ಈ ದಂಪತಿಗೆ `ನೀಲ್’ (Neel) ಎಂಬ ಮುದ್ದಾದ ಗಂಡು ಮಗುವಿದೆ. ಆಗಾಗ ನಯಾ ಫೋಟೋಶೂಟ್‌ನಿಂದ ಸದ್ದು ಮಾಡುವ ಕಾಜಲ್ ಇದೀಗ ಹೊಸ ಫೋಟೋಶೂಟ್‌ನಲ್ಲಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಡಾಲಿ ಸಿನಿಮಾಗೆ ವಿಶ್ ಮಾಡಿ, ತೆಲುಗು ಚಿತ್ರ ನೋಡುತ್ತೇನೆ ಎಂದ ರಶ್ಮಿಕಾ ಮಂದಣ್ಣ

    ಹಸಿರು ಮತ್ತು ಕಪ್ಪು ಮಿಶ್ರಿತ ಬಣ್ಣದ ಡ್ರೆಸ್‌ನಲ್ಲಿ ಕಾಜಲ್ ಅಗರ್‌ವಾಲ್ ಕಂಗೊಳಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಚೆಂದದ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಮದುವೆ (Wedding) ನಂತರ ಕಾಜಲ್ ಮತ್ತೆ ಬಾಲಯ್ಯ (Balayya) ಅವರ 108ನೇ ಸಿನಿಮಾಗೆ ನಾಯಕಿಯಾಗುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬಾಲಯ್ಯಗೆ ಜೋಡಿಯಾಗಲು 4 ಕೋಟಿ ರೂ. ಜಾರ್ಜ್ ಮಾಡಿದ್ದಾರೆ.