Tag: Mafti-2

  • ದರ್ಶನ್ ಜೊತೆ ನಟಿಸ್ತೀನಿ ಅಂದ್ರು ಹ್ಯಾಟ್ರಿಕ್ ಹೀರೋ!

    ದರ್ಶನ್ ಜೊತೆ ನಟಿಸ್ತೀನಿ ಅಂದ್ರು ಹ್ಯಾಟ್ರಿಕ್ ಹೀರೋ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಚಾಲೆಂಜಿಂಗ್ ಸ್ಟಾರ್ ಜೊತೆ ನಾನು ನಟಿಸಲು ಸಿದ್ಧನಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶಿವರಾಜ್‍ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ‘ಮಫ್ತಿ’ ಚಿತ್ರದ ನಿರ್ದೇಶಕ ನರ್ತನ್ ಹಾಗೂ ರೋರಿಂಗ್ ಸ್ಟಾರ್ ಮುರಳಿ ಭಾಗವಹಿಸಿದ್ದರು. ಕಾರ್ಯಕ್ರಮದ ಸೆಗ್ಮೆಂಟ್‍ಗಳೆಲ್ಲ ಮುಗಿದ ಮೇಲೆ ನರ್ತನ್ ಅವರ ಮುಂದಿನ ಚಿತ್ರದ ಬಗ್ಗೆ ಶಿವಣ್ಣ ಮಾತನಾಡುತ್ತಿದ್ದರು.

    ಮಫ್ತಿ ಚಿತ್ರದಲ್ಲಿ ನನ್ನ ಹಾಗೂ ಶ್ರೀಮುರಳಿ ಕಾಂಬಿನೇಷನ್‍ನಲ್ಲಿ ಸಿನಿಮಾ ಮಾಡಿದ್ದೀರಿ. ಈಗ ಮಫ್ತಿ-2 ಚಿತ್ರ ಮಾಡುತ್ತೀರಾ? ಎಂದು ಶಿವರಾಜ್‍ಕುಮಾರ್ ನಿರ್ದೇಶಕ ನರ್ತನ್‍ರನ್ನು ಪ್ರಶ್ನಿಸಿದ್ದರು. ಆಗ ನರ್ತನ್ ಮಫ್ತಿ-2ಗೆ ಭೈರತಿ ರಣಗಲ್ ಎಂದು ಟೈಟಲ್ ಇಡುಲು ಯೋಚಿಸುತ್ತಿದ್ದೇನೆ ಎಂದು ನರ್ತನ್ ಉತ್ತರಿಸಿದ್ದರು.

    ಮಫ್ತಿ-2 ಸಿನಿಮಾ ಮಾಡಿದರೆ ನಾನು ರೆಡಿ. ಈ ಚಿತ್ರದಲ್ಲಿ ಶಿವಣ್ಣ ಹಾಗೂ ದರ್ಶನ್ ಎಂದು ಇದೆ. ಅದನ್ನು ಮಾಡಿ ಯಾರೂ ಬೇಡ ಎನ್ನುತ್ತಾರೆ? ಎಲ್ಲರ ಜೊತೆ ಸಿನಿಮಾ ಮಾಡಬೇಕೆಂಬುದೇ ನನ್ನ ಆಸೆ ಎಂದು ಶಿವರಾಜ್‍ಕುಮಾರ್ ತಿಳಿಸಿದ್ದರು.

    ಶಿವರಾಜ್‍ಕುಮಾರ್ ಜೊತೆಗೆ ದರ್ಶನ್ ಕಾಣಿಸಿಕೊಳ್ಳುತ್ತಾರೆಂಬ ಗಾಸಿಪ್ ಹರಿದಾಡುತ್ತಿರುವಾಗಲೇ ಶಿವಣ್ಣ ದರ್ಶನ್ ಜೊತೆ ಮಫ್ತಿ-2 ಸಿನಿಮಾವನ್ನು ಮಾಡಿ ಎಂದು ನಿರ್ದೇಶಕ ನರ್ತನ್‍ಗೆ ಹೇಳಿದ್ದರು.

    ಈ ಹಿಂದೆ ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ಜಗ್ಗೇಶ್, ವಿಜಯ್ ರಾಘವೇಂದ್ರ ಹಾಗೂ ಕಿಚ್ಚ ಸುದೀಪ್ ಜೊತೆ ಶಿವಣ್ಣ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಈಗ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಬೇಕೆಂಬ ಆಸೆ ಇದೆ.