Tag: Madya Pradesh

  • ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಭೋಪಾಲ್: ಅಧಿಕಾರಿ ಕೇಳಿದಷ್ಟು ಲಂಚ ನೀಡಲು ಹಣವಿಲ್ಲದೇ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಬಳಿ ಇದ್ದ ಎಮ್ಮೆಯನ್ನೇ ಆದಾಯ ಇಲಾಖೆ ಅಧಿಕಾರಿ ವಾಹನಕ್ಕೆ ಕಟ್ಟಿ ಕೆಲಸ ಮಾಡಿಕೊಡುವಂತೆ ವಿಚಿತ್ರವಾಗಿ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾರೆ.

    ಟಿಕಮ್‍ಗಢ ಜಿಲ್ಲೆಯ ಖರ್ಗಾಪುರ ಪ್ರದೇಶದಲ್ಲಿರುವ ಆದಾಯ ಇಲಾಖೆ ಕಚೇರಿ ಬಳಿ ಈ ಘಟನೆ ನಡೆದಿದೆ. ದೇವಪುರ ಗ್ರಾಮದ ನಿವಾಸಿಯಾದ ಲಕ್ಷ್ಮೀ ಯಾದವ್(50) ಲಂಚದ ಬದಲಾಗಿ ಎಮ್ಮೆಯನ್ನೇ ತಹಶೀಲ್ದಾರ್ ಅವರ ವಾಹನಕ್ಕೆ ಕಟ್ಟಿದ್ದಾರೆ.

    ರೈತ ತಾನು ಖರೀದಿಸಿದ್ದ ಸ್ವಲ್ಪ ಜಮೀನನ್ನು ತನ್ನ ಸೊಸೆಯರ ಹೆಸರಿಗೆ ಮಾಡಿಸಲು ಆದಾಯ ಇಲಾಖೆ ಕಚೇರಿಗೆ ಹೋಗಿದ್ದರು. ಆಗ ಜಮೀನು ವರ್ಗಾವಣೆ ಮಾಡಿಕೊಡಲು ತಹಶೀಲ್ದಾರ್ 1ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರಿಂದ ಹೇಗೋ ಕಷ್ಟ ಪಟ್ಟು 50 ಸಾವಿರ ರೂಪಾಯಿಯನ್ನು ರೈತ ನೀಡಿದ್ದರು. ಆದರೆ ಪೂರ್ತಿ ಹಣವನ್ನು ನೀಡುವ ವರೆಗೂ ಕೆಲಸ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಪಟ್ಟುಹಿಡಿದಿದ್ದಾರೆ.

    ಬಾಕಿ ಹಣವನ್ನು ಹೊಂದಿಸಲು ಆಗದೇ ಶನಿವಾರದಂದು ರೈತ ತನ್ನ ಬಳಿ ಇದ್ದ ಒಂದು ಎಮ್ಮೆಯನ್ನು ತಹಶೀಲ್ದಾರ್ ಅವರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ನನ್ನ ಬಳಿ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಈ ಎಮ್ಮೆಯನ್ನು ಇಟ್ಟುಕೊಂಡು ಜಮೀನು ವರ್ಗಾವಣೆ ಮಾಡಿಕೊಡಿ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

    ಈ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸೌರವ್ ಕುಮಾರ ಸುಮನ್ ಅವರು ಈ ವಿಚಾರದ ಬಗ್ಗೆ ಎಲ್ಲಾ ಮಹಿತಿ ಪಡೆದು, ಸಮಸ್ಯೆಯನ್ನು ಬಗೆಹರಿಸುವಂತೆ ಬಾಲದೇವಗಡದ ಉಪವಿಭಾಗ ಅಧಿಕಾರಿಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ, ಆ್ಯಸಿಡ್‍ನಿಂದ ಮೃತದೇಹ ಸುಟ್ಟ ಡಾಕ್ಟರ್!

    ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ, ಆ್ಯಸಿಡ್‍ನಿಂದ ಮೃತದೇಹ ಸುಟ್ಟ ಡಾಕ್ಟರ್!

    ಭೋಪಾಲ್: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಚಾಲಕನನ್ನು ವೈದ್ಯನೊಬ್ಬ ತುಂಡು ತುಂಡಾಗಿ ಕತ್ತರಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಆ್ಯಸಿಡ್ ಹಾಕಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಹೋಶಂಗಾಬಾದಿನಲ್ಲಿ ನಡೆದಿದೆ.

    ಡಾ. ಸುನಿಲ್ ಮಂತ್ರಿ(56) ಕೊಲೆ ಮಾಡಿರುವ ಆರೋಪಿ ವೈದ್ಯ. ವಿರೇಂದ್ರ ಪಾಚೌರಿ(30) ಕೊಲೆಯಾದ ದುದೈರ್ವಿ. ವೈದ್ಯ ಸುನಿಲ್ ಮನೆಯಲ್ಲಿ ವೀರೇಂದ್ರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ವೈದ್ಯನ ಪತ್ನಿ ತೀರಿಹೋದ ನಂತರ ಅವರು ನಡೆಸುತ್ತಿದ್ದ ಬಟ್ಟೆ ಅಂಗಡಿಯನ್ನು ಚಾಲಕನ ಪತ್ನಿ ವಹಿಸಿಕೊಂಡಿದ್ದಳು. ಅಲ್ಲದೆ ಚಾಲಕನ ಪತ್ನಿ ಜೊತೆ ವೈದ್ಯ ಬಹಳ ಆತ್ಮೀಯವಾಗಿದ್ದನು. ಆದ್ದರಿಂದ ಬಹುದಿನಗಳಿಂದ ತನ್ನ ಪತ್ನಿ ಜೊತೆ ವೈದ್ಯ ಸುನಿಲ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನುವ ಅನುಮಾನ ಚಾಲಕ ವೀರೇಂದ್ರನಿಗೆ ಬಂದಿತ್ತು.

    ಅನುಮಾನ ಬಂದ ಹಿನ್ನೆಲೆಯಲ್ಲಿ ವೈದ್ಯನಿಂದ ವೀರೇಂದ್ರ ತನ್ನ ಪತ್ನಿಯನ್ನು ದೂರವಿಟ್ಟಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಸೋಮವಾರದಂದು ವೈದ್ಯ ಮನೆಯಲ್ಲಿಯೇ ಚಾಲಕನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ತನ್ನ ವಿರುದ್ಧ ಯಾವುದೇ ಸಾಕ್ಷಿ ಸಿಗಬಾರದೆಂದು ಮೃತದೇಹವನ್ನು ಆ್ಯಸಿಡ್ ಹಾಕಿ ಸುಟ್ಟುಹಾಕಿದ್ದಾನೆ.

    ಮಂಗಳವಾರದಂದು ವೈದ್ಯನ ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತುಂಡು ತುಂಡಾಗಿ ಕತ್ತರಿಸಿದ ಮೃತದೇಹದ ಭಾಗಗಳನ್ನು ಆ್ಯಸಿಡ್‍ನಲ್ಲಿ ವೈದ್ಯ ಹಾಕುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನಂತರ ವೈದ್ಯನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಹಾಕಿದ್ದಾನೆ.

    ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಚ್ಛೇದನಕ್ಕೆ ಕಾರಣವಾಯ್ತು ಪತ್ನಿಯ ಸೆಲ್ಫಿ ಕ್ರೇಜ್!

    ವಿಚ್ಛೇದನಕ್ಕೆ ಕಾರಣವಾಯ್ತು ಪತ್ನಿಯ ಸೆಲ್ಫಿ ಕ್ರೇಜ್!

    ಭೋಪಾಲ್: ಪತ್ನಿಯ ಸೆಲ್ಫಿ ಕ್ರೇಜ್‍ಗೆ ಬೇಸತ್ತ ಪತಿ ವಿಚ್ಛೇದನ ಕೊಡಿಸಿ ಅಂತ ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಹೌದು, ಈ ಸುದ್ದಿ ಕೇಳಿದರೆ ಆಶ್ಚರ್ಯ ಆಗಬಹುದು ಆದ್ರೆ ಇದು ನಿಜ. ಮದುವೆ ಆದಾಗಿನಿಂದ ನನ್ನನ್ನು ಲೆಕ್ಕಿಸದೇ ಯಾವಾಗಲು ಮೊಬೈಲ್‍ನಲ್ಲಿಯೇ ಪತ್ನಿ ಮುಳುಗಿರುತ್ತಾಳೆ. ಯಾವಾಗಲು ಸೆಲ್ಫಿ ಕ್ಲಿಕ್ಕಿಸಿಕೊಂಡು ಇರುತ್ತಾಳೆ. ಪತ್ನಿ ಮೊಬೈಲ್ ಲೋಕದಲ್ಲಿ ಮುಳುಗಿ ಸಂಸಾರವನ್ನೇ ಮರೆತಿದ್ದಾಳೆ ಅಂತ ಮನನೊಂದ ಪತಿ ವಿಚ್ಛೇದನ ಕೊಡಿಸಿ ಅಂತ ಕೋರ್ಟ್ ಮೆಟ್ಟಿಲೇರಿದ್ದಾನೆ.

    ಈ ವಿಚಾರವಾಗಿ ಯಾವಾಗಲು ದಂಪತಿ ನಡುವೆ ಜಗಳ ನಡೆಯುತ್ತಲೇ ಇತ್ತು. ಇದು ಸದ್ಯ ವಿಚ್ಛೇದನದ ತನಕ ಬಂದು ನಿಂತಿದೆ. ವಿಚಾರಣೆ ವೇಳೆ ಪತ್ನಿಗೆ ಮೊಬೈಲ್ ಹುಚ್ಚು, ನನಗೆ ಊಟ ಕೂಡ ಬಡಿಸಲು ಅವಳಿಗೆ ಸಮಯ ಇರಲ್ಲ, ಯಾವಾಗಲೂ ಸೆಲ್ಫಿ ತೆಗೆದುಕೊಳ್ಳುವುದೇ ಕೆಲಸ. ಅವಳೊಟ್ಟಿಗೆ ಸಂಸಾರ ಮಾಡಲು ಆಗಲ್ಲ ಎಂದು ಒಂದೆಡೆ ಪತಿ ಹೇಳಿದರೆ, ಇನ್ನೊಂದೆಡೆ ಮಹಿಳೆ ಪತಿ ನನ್ನ ಬಳಿ ಇದ್ದ ಮೊಬೈಲ್ ಕಸಿದುಕೊಂಡು ಕಿಪ್ಯಾಡ್ ಫೋನ್ ಕೊಟ್ಟಿದ್ದಾನೆ ಅಂತ ಆರೋಪಿಸಿದ್ದಾರೆ.

    ಈ ಹಿಂದೆ ಗುರುಗ್ರಾಮದಲ್ಲಿ ಪತ್ನಿ ಮೊಬೈಲ್ ಕ್ರೇಜ್‍ಗೆ ಬೆಸತ್ತ ಪತಿ ಕೊಲೆ ಮಾಡಿದ ಪ್ರಕರಣ ದಾಖಲಾಗಿತ್ತು. ತನ್ನ ಪತ್ನಿ ಮೊಬೈಲ್‍ನಲ್ಲಿ ಮುಳುಗಿರುತ್ತಾಳೆ ಅಂತ ಕೊಲೆ ಮಾಡಿ ಕೊನೆಗೆ ಆತನೇ ಪೊಲೀಸರಿಗೆ ಶರಣಾಗಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಸಿವು ನೀಗಿಸಿಕೊಳ್ಳಲು ಕ್ರಿಮಿನಾಶಕ ಸೇವಿಸಿದ 10ರ ಬಾಲಕ!

    ಹಸಿವು ನೀಗಿಸಿಕೊಳ್ಳಲು ಕ್ರಿಮಿನಾಶಕ ಸೇವಿಸಿದ 10ರ ಬಾಲಕ!

    ಭೋಪಾಲ್: ಹಸಿವನ್ನು ನೀಗಿಸಿಕೊಳ್ಳಲು 10 ವರ್ಷದ ಬಾಲಕನೊಬ್ಬ ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಕುಡಿದ ಘಟನೆ ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕಳೆದ ವರ್ಷ ಡಿ. 29ರಂದು ಪೊನ್ಬಟ್ಟ ಗ್ರಾಮದ ಬುಡಕಟ್ಟು ಜನಾಂಗದ ಬಾಲಕನೊಬ್ಬ ಮನೆಯಲ್ಲಿ ಊಟ ಮಾಡಲು ಏನೂ ಇಲ್ಲದಿದ್ದ ಕಾರಣ ತನ್ನ ಹಸಿವನ್ನು ನೀಗಿಸಿಕೊಳ್ಳಲು ಕ್ರಿಮಿನಾಶಕವನ್ನೇ ಆಹಾರವೆಂದು ಕುಡಿದಿದ್ದನು. ಆದರೆ ಕಳೆದ ಸೋಮವಾರದಂದು ಈ ಸುದ್ದಿ ಬೆಳಕಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‍ಸಿಪಿಸಿಆರ್) ರತ್ಲಂ ಜಿಲ್ಲೆಯ ಬುಡಕಟ್ಟು ಜನಾಂಗದವರ ಕುರಿತು ಮಾಹಿತಿ ಸಂಗ್ರಹಿಸಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕ ಹಸಿವನ್ನು ತಾಳಲಾರದೆ ಮನೆಯಲ್ಲಿದ್ದ ಕ್ರಿಮಿನಾಶಕವನ್ನೇ ಆಹಾರವೆಂದು ಭಾವಿಸಿ ಸೇವಿಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಬಾಲಕನ ಮನೆಯಲ್ಲಿ ಕಡು ಬಡತನ ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಪೋಷಕರು ಕೂಲಿ ಕೆಲಸದ ಮೇಲೆ ರಾಜಸ್ತಾನದ ಕೋಟಕ್ಕೆ ಹೋಗಿದ್ದರು. ಆದರಿಂದ ಮನೆಯಲ್ಲಿ ರೇಷನ್ ಖಾಲಿಯಾಗಿದ್ದನ್ನು ಗಮನಿಸಿರಲಿಲ್ಲ. ಈ ವೇಳೆ ಬಾಲಕ ತನಗೆ ಅರಿವಿಲ್ಲದೆ ಕ್ರಿಮಿನಾಶಕ ಸೇವಿಸಿದ್ದನು. ಈಗ ಕೊಂಚ ಚೇತರಿಸಿಕೊಂಡಿದ್ದಾನೆ ಎಂದು ಎನ್‍ಸಿಪಿಸಿಆರ್ ತಂಡದವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಹುಲ್ ಕಂಗೆಡಿಸಿದೆ ರಾಜಸ್ಥಾನ ಸಿಎಂ ಆಯ್ಕೆ

    ರಾಹುಲ್ ಕಂಗೆಡಿಸಿದೆ ರಾಜಸ್ಥಾನ ಸಿಎಂ ಆಯ್ಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಕಾಂಗ್ರೆಸ್ ಪಂಚರಾಜ್ಯಗಳ ಚುನಾವಣೆ ಬಳಿಕ ಚೇತರಿಕೆ ಕಂಡಿದೆ. ಬಿಜೆಪಿ ಭದ್ರಕೋಟೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಡದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷದಲ್ಲೀಗ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ.

    ಸಿಎಂ ಆಯ್ಕೆ ಕುರಿತು ನವದೆಹಲಿ ತುಘಲಕ್ ರಸ್ತೆಯ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿತ್ತು. ಈ ಸಂಬಂಧ ಮಧ್ಯಪ್ರದೇಶದ ನೂತನ ಸಿಎಂ ಆಗಿ ಕಮಲ್‍ನಾಥ್‍ರನ್ನು ಅಧಿಕೃತವಾಗಿ ಆಯ್ಕೆ ಮಾಡಿ ಹೈಕಮಾಂಡ್ ಘೋಷಣೆ ಹೊರಡಿಸಿ ಹೊಸ ಯುಗ ಆರಂಭವಾಗಲಿ ಅಂತ ಶುಭಕೋರಿದೆ.

    ಆದ್ರೆ ರಾಜಸ್ಥಾನ ಸಿಎಂ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ತೀವ್ರ ಪೈಪೋಟಿ ಇದ್ದು, ಮಧ್ಯರಾತ್ರಿ 12 ಗಂಟೆವರೆಗೆ ಸಭೆ ನಡೆಸಿದ್ರೂ ಅಂತಿಮವಾಗಿಲ್ಲ. ಉನ್ನತ ಮೂಲಗಳ ಪ್ರಕಾರ ಅಶೋಕ್ ಗೆಹ್ಲೋಟ್ ಅವರಿಗೆ ಸಿಎಂ ಪಟ್ಟ ನೀಡಲು ಸೋನಿಯಾ, ರಾಹುಲ್ ನಿರ್ಧರಿಸಿದ್ದಾರೆ. ಆದ್ರೆ ಸಚಿನ್ ಪೈಲಟ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜೈಪುರದಲ್ಲಿ ಸಚಿನ್ ಪೈಲಟ್ ಪರವಾಗಿ ಪ್ರತಿಭಟನೆಗಳು ಜೋರಾಗಿದ್ದು, ರಾಹುಲ್ ಗಾಂಧಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಛತ್ತೀಸ್‍ಗಡ ಸಿಎಂ ಆಯ್ಕೆ ಸಂಬಂಧ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಟಿ.ಎಸ್. ಸಿಂಗ್ದೇವ್, ಚರಣ್ ದಾಸ್ ಮಹಾಂತ್‍ಗೆ ರಾಹುಲ್ ಗಾಂಧಿ ಬುಲಾವ್ ನೀಡಿದ್ದಾರೆ. ಮೂವರು ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದು ಇಂದು ಬಹುತೇಕ ಎರಡು ರಾಜ್ಯಗಳಿಗೆ ಸಿಎಂ ಆಯ್ಕೆ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಡ್ ಶೋ ವೇಳೆ ಜಾರಿಬಿದ್ದ ಅಮಿತ್ ಶಾ

    ರೋಡ್ ಶೋ ವೇಳೆ ಜಾರಿಬಿದ್ದ ಅಮಿತ್ ಶಾ

    ಭೋಪಾಲ್: ಶನಿವಾರ ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರಕ್ಕಾಗಿ ವಾಹನವೊಂದರ ಮೇಲೆ ನಿಂತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರೋಡ್ ಶೋ ನಡೆಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ.

    ಮಧ್ಯ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಅಮೀತ್ ಶಾ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರೋಡ್ ಶೋ ನಡೆಸುತ್ತಿದ್ದ ವಾಹನದ ಮೇಲೆ ನಿಂತಿದ್ದ ಅಮಿತ್ ಶಾ ಅವರು ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಜಾಗ್ರತಗೊಂಡ ಭದ್ರತಾ ಸಿಬ್ಬಂದಿ ಅಮಿತ್ ಶಾ ಅವರನ್ನು ಮೇಲೆತ್ತಿ ಅವರನ್ನು ಹೆಚ್ಚಿನ ಅಪಾಯದಿಂದ ಪಾರು ಮಾಡಿದ್ದಾರೆ.

    ಸದ್ಯ ಘಟನೆಯಲ್ಲಿ ಅಮಿತ್ ಶಾ ಅವರಿಗೆ ಯಾವುದೇ ಪೆಟ್ಟಾಗಿಲ್ಲ. ಹೀಗಾಗಿ ರೋಡ್ ಶೋ ಮುಗಿಸಿದ ಬಳಿಕ ಶಿವಪುರಿ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಕ್ಸಮರ ಮುಂದುವರಿಸುವ ಮೂಲಕ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಭೋಪಾಲ್: ಬಯಲಿನಲ್ಲಿ ಶೌಚಾಲಯ ಮಾಡಿದ್ದಕ್ಕೆ ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆಯು ಅಮಾನತು ಮಾಡಿದೆ.

    ಅಶೋಕ್ ನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿ ಆದಿತ್ಯಾ ನಾರಾಯಣ ಮಿಶ್ರಾ ಅವರು ಈ ಅದೇಶವನ್ನು ಹೊರಡಿಸಿ ಬುಡೇರಾ ಶಾಲೆಯ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ. ಬಯಲಿನಲ್ಲಿ ಶೌಚಾಲಯ ನಡೆಸಿ ಸರ್ಕಾರಿ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸ್ವಚ್ಛ ಭಾರತದ ಅಭಿಯಾನದ ಅಡಿಯಲ್ಲಿ ಎಲ್ಲಾ ಶಾಲಾ ಶಿಕ್ಷಕರಿಗೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಶಿಕ್ಷಕ ಬಯಲು ಶೌಚಕ್ಕೆ ತೆರಳುವುದನ್ನು ನೋಡಿದವರು ಜಿಲ್ಲೆಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಈ ವರದಿಯನ್ನು ಅಧರಿಸಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಅಧಿಕಾರಿ ಮಿಶ್ರಾ ತಿಳಿಸಿದ್ದಾರೆ.

    ಇದೇ ವರ್ಷ ಜೂನ್ ತಿಂಗಳಿನಲ್ಲಿ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ವೀರ್ ಪುರ್ ಪಂಚಾಯತ್ ಅಧಿಕಾರಿಗಳು ಬಯಲು ಶೌಚ ಮಾಡಿದ 13 ಕುಟುಂಬಗಳಿಗೆ 4 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಅಭಿಯಾನವನ್ನು 2014ರ ಅಕ್ಟೋಬರ್ 02 ರಂದು ಆರಂಭಿಸಿದ್ದು, 2019 ರ ವೇಳೆಗೆ ಬಯಲು ಶೌಚಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.