Tag: Madya Pradesh

  • 55 ಅಡಿ ಆಳದ ಬೋರ್‌ವೆಲ್‍ಗೆ ಬಿದ್ದು 8ರ ಬಾಲಕ ಸಾವು

    55 ಅಡಿ ಆಳದ ಬೋರ್‌ವೆಲ್‍ಗೆ ಬಿದ್ದು 8ರ ಬಾಲಕ ಸಾವು

    ಭೋಪಾಲ್: ಬೋರ್‌ವೆಲ್‍ಗೆ (Borewell) ಬಿದ್ದ 8 ವರ್ಷದ ಬಾಲಕ (Boy) 65 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆದರೂ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ (Madya Pradesh) ಬೇತುಲ್‍ನಲ್ಲಿ ನಡೆದಿದೆ.

    ತನ್ಮಯ್ ಸಾಹು (8) ಮೃತ ಬಾಲಕ. ಡಿಸೆಂಬರ್ 6 ರಂದು ಜಮೀನಿನಲ್ಲಿ ಆಟವಾಡುತ್ತಿದ್ದ. ಈ ವೇಳೆ ಜಮೀನಿನಲ್ಲಿ ಇದ್ದ 55 ಅಡಿ ಆಳದ ಬೋರ್‌ವೆಲ್‍ಗೆ ತನ್ಮಯ್ ಬಿದ್ದಿದ್ದ. ಇದನ್ನು ನೋಡಿದ ಪೋಷಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನ್ಮಯ್‌ ಬಿದ್ದು ಒಂದು ಗಂಟೆಯಲ್ಲೇ ಸಿಬ್ಬಂದಿಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಜಂಪಿಂಗ್ ಪಾಲಿಟಿಕ್ಸ್ ಶುರು- ತೆನೆ ಇಳಿಸಿ ಕೈ ಹಿಡಿದ ರೇವು ನಾಯಕ್ ಬೆಳಮಗಿ

    ಎಸ್‍ಡಿಆರ್‌ಎಫ್, ಗೃಹರಕ್ಷಕ ದಳ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನುಸತತ 4 ದಿನಗಳಿಂದ ಕೆಲಸದಲ್ಲಿ ನಿಯೋಜಿಸಲಾಗಿತ್ತು. ತನ್ಮಯ್ ಸಾಹುನನ್ನು ಸತತ 65 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿ ಹೊರತೆಗೆದಿದ್ದರು. ಆದರೆ ಆತನನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ. ಆದರೆ ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕನ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆ- ಮೂವರು ಭ್ರಷ್ಟ ಅಧಿಕಾರಿಗಳು ಜೈಲುಪಾಲು

    Live Tv
    [brid partner=56869869 player=32851 video=960834 autoplay=true]

  • ಎರಡು ಕ್ವಾರ್ಟರ್ ಕುಡಿದ್ರೂ ನಶೆಯೇರುತ್ತಿಲ್ಲ- ಗೃಹ ಸಚಿವರಿಗೆ ಕುಡುಕ ದೂರು

    ಎರಡು ಕ್ವಾರ್ಟರ್ ಕುಡಿದ್ರೂ ನಶೆಯೇರುತ್ತಿಲ್ಲ- ಗೃಹ ಸಚಿವರಿಗೆ ಕುಡುಕ ದೂರು

    ಭೋಪಾಲ್: ಕುಡಕನೊಬ್ಬ ಎರಡು ಕ್ವಾರ್ಟರ್ ಕುಡಿದರೂ ನಶೆಯೇರುತ್ತಿಲ್ಲ ಎಂದು ಗೃಹ ಸಚಿವರಿಗೆ ಹಾಗೂ ಅಬಕಾರಿ ಸಚಿವರಿಗೆ ದೂರು ನೀಡಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಉಜ್ಜಯಿನಿಯ ಬಹದ್ದೂರ್ ಗಂಜ್‍ನಲ್ಲಿರುವ ಆರ್ಯ ಸಮಾಜ ಮಾರ್ಗದಲ್ಲಿ ವಾಸಿಸುವ ಲೋಕೇಂದ್ರ ಸೋಥಿಯಾ ಮದ್ಯಕ್ಕೆ ದಾಸನಾಗಿದ್ದ. ಈತ ಏಪ್ರಿಲ್ 12ರಂದು ಇಂದೋರ್‌ನಲ್ಲಿ ಸ್ಥಳೀಯ ಮದ್ಯದ ಅಂಗಡಿಯಿಂದ 4 ಕ್ವಾರ್ಟರ್ ದೇಸಿ ಮದ್ಯವನ್ನು ಖರೀದಿಸಿದ್ದ. ಎರಡು ಕ್ವಾರ್ಟರ್ ಕುಡಿದರೂ ಆತನಿಗೆ ಅಮಲು ಏರಲಿಲ್ಲವಾಗಿತ್ತು. ಇದರಿಂದಾಗಿ ಆತನಿಗೆ ಗುತ್ತಿಗೆದಾರರು ಮದ್ಯದ ಬದಲು ನೀರು ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ದೂರು ನೀಡಲು ಮದ್ಯದಂಗಡಿಗೆ ತೆರಳಿದ್ದಾನೆ. ಆಗ ಅಲ್ಲಿದ್ದ ನೌಕರರು ಆತನಿಗೆ ಬೈದು ಅಲ್ಲಿಂದ ಓಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಲೋಕೇಂದ್ರ ಮದ್ಯದ ಗುತ್ತಿಗೆದಾರರ ವಿರುದ್ಧ ಗೃಹ ಸಚಿವ ನರೋತ್ತಮ್ ಮಿಶ್ರಾ ಹಾಗೂ ಅಬಕಾರಿ ಇಲಾಖೆಗೆ ದೂರ ನೀಡಿದ್ದಾನೆ.

    ಪತ್ರದಲ್ಲಿ ಏನಿದೆ?: ಎರಡು ಕ್ವಾರ್ಟರ್ ಕುಡಿದರೂ ನಶೆಯೇ ಏರುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಮದ್ಯದಲ್ಲಿ ನೀರು ಬೇರೆಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ತನ್ನ ಬಳಿ ಎರಡು ಸೀಲ್ಡ್ ಕ್ವಾರ್ಟರ್‌ಗಳಿವೆ. ಇವುಗಳನ್ನು ಲ್ಯಾಬ್‍ನಲ್ಲಿ ಪರಿಶೀಲನೆ ನಡೆಸಿದರೆ ಮದ್ಯದಲ್ಲಿ ನೀರು ಬೆರೆಸಲಾಗಿದೆಯೇ ಎಂಬುದು ಗೊತ್ತಾಗಲಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾನೆ.

    ಆದರೆ, ಈ ಪ್ರಕರಣದಲ್ಲಿ ಅಬಕಾರಿ ಅಧಿಕಾರಿ ರಾಮ್ ಹನ್ಸ್ ಪಚೌರಿ ಅವರು ಇನ್ನೂ ದೂರು ಸ್ವೀಕರಿಸಿಲ್ಲ, ನಂತರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ, ಮೇ 6ರವರೆಗೆ ಅವರ ದೂರಿನ ಮೇರೆಗೆ ಏನೂ ಆಗಿಲ್ಲ, ಆದ್ದರಿಂದ ಅಸಮಾಧಾನಗೊಂಡ ಲೋಕೇಂದ್ರ ಗ್ರಾಹಕರ ವೇದಿಕೆಗೆ ಹೋಗುವುದಾಗಿ ತಿಳಿಸಿದರು. ಇದನ್ನೂ ಓದಿ: ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

    ಕುಡುಕರಿಗೆ ನ್ಯಾಯ ಬೇಕು. ನಾನು ಎರಡು ದಶಕಗಳಿಂದ ಕುಡಿಯುತ್ತಿದ್ದೇನೆ ಮತ್ತು ಮದ್ಯದಲ್ಲಿ ಕಲಬೆರಕೆ ಇದೆ ಎಂದು ನನಗೆ ಶೀಘ್ರದಲ್ಲೇ ಅರಿವಾಯಿತು ಎಂದು ಹೇಳಿದ್ದಾನೆ. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

  • ಮಧ್ಯಪ್ರದೇಶ ಕಾರ್ಮಿಕರ ಅಕ್ರಮ ಬಂಧನ – ರಕ್ಷಣೆಗಾಗಿ ಎಂಪಿ ಡಿಸಿಗೆ ಕರೆ

    ಮಧ್ಯಪ್ರದೇಶ ಕಾರ್ಮಿಕರ ಅಕ್ರಮ ಬಂಧನ – ರಕ್ಷಣೆಗಾಗಿ ಎಂಪಿ ಡಿಸಿಗೆ ಕರೆ

    ವಿಜಯಪುರ: ಜಿಲ್ಲೆಯ ಇಂಡಿ ತಾಲೂಕು ಗುಬ್ಬೇವಾಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮಧ್ಯಪ್ರದೇಶದ ಕಾರ್ಮಿಕರನ್ನು ಅಕ್ರಮ ಬಂಧನದಲ್ಲಿಡಲಾಗಿದ್ದು, ರಕ್ಷಣೆಗಾಗಿ ಕಾರ್ಮಿಕರು ಮಧ್ಯಪ್ರದೇಶ ಡಿಸಿಗೆ ಕರೆ ಮಾಡಿದ್ದಾರೆ.

    ಕಾರ್ಮಿಕರನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದ ಗುಬ್ಬೇವಾಡ ಗ್ರಾಮದ ಜಮೀನು ಮಾಲಿಕ ಬಿರಾದಾರ್ ಹಾಗೂ ಮಧ್ಯಪ್ರದೇಶದ ರೋಹಿತ್ ಎನ್ನುವ ವ್ಯಕ್ತಿ. ಕಾರ್ಮಿಕರು ರಕ್ಷಣೆಗಾಗಿ ಮಧ್ಯಪ್ರದೇಶ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದರು. ಈ ಹಿನ್ನೆಲೆ ರಾತ್ರೋರಾತ್ರಿ ಇಂಡಿ ಪೊಲೀಸರಿಂದ ಅಕ್ರಮ ಬಂಧನದಲ್ಲಿದ್ದ ಮಧ್ಯಪ್ರದೇಶದ 10 ಮಕ್ಕಳು ಸೇರಿ 35 ಕಾರ್ಮಿಕರಿಗೆ ಬಂಧನದಿಂದ ಮುಕ್ತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಕನ ಕಣ್ಣಿಗೆ ಮೊಳೆ ಹೊಡೆದು ವಿಚಿತ್ರವಾಗಿ ಸಾಯಿಸಿದ ಕ್ರೂರಿಗಳು!

    ತಡರಾತ್ರಿ ಜಮೀನಿಗೆ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ. ಜಮೀನು ಮಾಲಿಕ ಬಿರಾದಾರ್ ಕಾರ್ಮಿಕರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಕಬ್ಬು ಕಟಾವು ಮಾಡಿಸಿಕೊಳ್ಳುತ್ತಿದ್ದನು. ರೋಹಿತ್ ಎಂಬ ವಕ್ತಿಯು ಕಾರ್ಮಿಕರನ್ನು ಮಧ್ಯಪ್ರದೇಶದಿಂದ ಕರೆತಂದಿದ್ದನು. ಈ ವೇಳೆ ಕಾರ್ಮಿಕರು 100 ಟನ್ ಕಬ್ಬು ಕಟಾವು ಮಾಡಿದ್ದರು, ಸಹಿತ ಇನ್ನೂ 400 ಟನ್ ಕಬ್ಬು ಕಟಾವಿಗೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಕಾರ್ಮಿಕರು ಹೀಗಾಗಿ ಮಧ್ಯಪ್ರದೇಶದ ಜಿಲ್ಲಾಧಿಕಾರಿಗೆ ಕರೆ ಮಾಡಿ ಸಂಕಷ್ಟ ಹೇಳಿಕೊಂಡಿದ್ದರು. ಬಳಿಕ ಮಧ್ಯಪ್ರದೇಶ ಡಿಸಿ ಈ ಬಗ್ಗೆ ವಿಜಯಪುರ ಎಸ್ಪಿ ಆನಂದ ಕುಮಾರ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಸ್ಪಿ ಆನಂದ ಕುಮಾರ್ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿಗೆ ಕಾರ್ಮಿಕರ ರಕ್ಷಣೆಗೆ ಆದೇಶಿಸಿದ್ದಾರೆ. ಈ ವೇಳೆ ಡಿವೈಎಸ್ಪಿ ರಾತ್ರೋರಾತ್ರಿ ಕಾರ್ಯಾಚರಣೆ ಮಾಡಿ 35 ಕಾರ್ಮಿಕರು, 10 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಅವರನ್ನು ಅಕ್ರಮ ಬಂಧನದಿಂದ ರಕ್ಷಿಸುವುದಲ್ಲದೆ ರಾತ್ರಿಯೇ ಸೊಲ್ಲಾಪುರ ರೈಲು ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ. ಕಾರ್ಮಿಕರನ್ನು ಅಲ್ಲಿಂದ ರೈಲು ಮೂಲಕ ಮಧ್ಯಪ್ರದೇಶಕ್ಕೆ ರವಾನೆ ಮಾಡಲಾಗಿದೆ.

  • ಗ್ರಾಪಂ ಸದಸ್ಯ 15 ಲಕ್ಷ ಲಂಚ ಪಡೆಯುವುದು ಭ್ರಷ್ಟಾಚಾರವಲ್ಲ: ಬಿಜೆಪಿ ಸಂಸದ

    ಗ್ರಾಪಂ ಸದಸ್ಯ 15 ಲಕ್ಷ ಲಂಚ ಪಡೆಯುವುದು ಭ್ರಷ್ಟಾಚಾರವಲ್ಲ: ಬಿಜೆಪಿ ಸಂಸದ

    ಭೋಪಾಲ್: ಗ್ರಾಮ ಪಂಚಾಯಿತಿ ಸದಸ್ಯ 15 ಲಕ್ಷ ರೂ. ಲಂಚ ಪಡೆಯುವುದು ಸಾಮಾನ್ಯ. ಅದನ್ನು ಭ್ರಷ್ಟಾಚಾರ ಎನ್ನಲಾಗದು ಎಂದು ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿವಾದಾತ್ಮಕ ಹೇಳಿಕೆ ನೀಡಿದರು.

    ಮಧ್ಯಪ್ರದೇಶದ ರೇವಾದಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯ 15 ಲಕ್ಷ ರೂ.ಗಿಂತ ಅಧಿಕ ಹಣ ಪಡೆದಾಗ ಮಾತ್ರ ಅದು ಭ್ರಷ್ಟಾಚಾರವಾಗುತ್ತದೆ. ಆಗ ಮಾತ್ರ ದೂರು ನೀಡಲು ಬನ್ನಿ ಎಂದು ತಿಳಿಸಿದರು.

    BRIBE

    ಜನರು ಗ್ರಾಪಂ ಸದಸ್ಯ ಲಂಚ ಪಡೆಯುತ್ತಾನೆ ಎಂದು ದೂರು ನೀಡಲು ಬರುತ್ತಾರೆ. ಆದರೆ ಆತ ಚುನಾವಣೆಯಲ್ಲಿ ಗೆಲ್ಲಲು 7 ಲಕ್ಷ ರೂ. ಖರ್ಚು ಮಾಡುತ್ತಾನೆ. ಗೆದ್ದ ನಂತರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಹಣದುಬ್ಬರ ಕಾರಣದಿಂದ ಇನ್ನೊಂದು ಲಕ್ಷ ರೂ. ಹೆಚ್ಚಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹಾರ್ನ್ ಹಾಕುವುದನ್ನು ಕಮ್ಮಿ ಮಾಡಿ – 32 ವರ್ಷಗಳಿಂದ ಸಂದೇಶ ಸಾರ್ತಿದ್ದಾರೆ ಸೈಲೆಂಟ್ ಕ್ರುಸೇಡರ್

    ಉತ್ತರ ಪ್ರದೇಶದ ಕಾನ್ಪುರದ ಜಿಲ್ಲಾ ನ್ಯಾಯಾಲಯವು ತೆರಿಗೆ ವಂಚನೆ ಪ್ರಕರಣದಲ್ಲಿ ವ್ಯಾಪಾರಿ ಪಿಯೂಷ್ ಜೈನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಇದಾದ ಒಂದು ದಿನದ ನಂತರ ಸಂಸದರು ಈ ಹೇಳಿಕೆ ನೀಡಿದ್ದಾರೆ. ಜೈನ್ ಬಂಧನದ ಬಗ್ಗೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಮಾತಿನ ಸಮರ ನಡೆಯುತ್ತಿದೆ. ಎರಡೂ ಪಕ್ಷಗಳು ಜೈನ್ ಅವರೊಂದಿಗೆ ಸಂಪರ್ಕ ಹೊಂದಿವೆ ಎಂಬ ಆರೋಪವಿದೆ. ಇದನ್ನೂ ಓದಿ: ಪ್ರಧಾನಿ ಭದ್ರತೆಗಾಗಿ 12 ಕೋಟಿಯ ದುಬಾರಿ ಕಾರು- ವಿಶೇಷತೆ ಏನು..?

  • ನೆರೆಹೊರೆಯವರ ಕಿರುಕುಳ ತಾಳಲಾರದೆ ಬಾಲಕಿ ಆತ್ಮಹತ್ಯೆ

    ನೆರೆಹೊರೆಯವರ ಕಿರುಕುಳ ತಾಳಲಾರದೆ ಬಾಲಕಿ ಆತ್ಮಹತ್ಯೆ

    ಭೋಪಾಲ್: ಕೆಲ ನೆರೆಹೊರೆಯವರ ಕಿರುಕುಳ ತಾಳಲಾರದೆ 16 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಬಾಲಕಿಯು ಮಧ್ಯಪ್ರದೇಶದ ಜಬಲ್‍ಪುರ ಜಿಲ್ಲೆಯ ರಾಂಝಿ ಪ್ರದೇಶದ ನಿವಾಸಿಯಾಗಿದ್ದು, ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನೆರೆಹೊರೆಯ ಮನೆಯವರು ಬಾಲಕಿಯು ಶಾಲೆಗೆ ಹೋಗುವ ವೇಳೆ ಅವಳ ಚಿತ್ರಗಳನ್ನು ಕ್ಲಿಕ್ಕಿಸಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಈ ಬಗ್ಗೆ ಬಾಲಕಿಯೂ ಪೊಲೀಸರಿಗೆ ದೂರು ನೀಡಲು ಹೋದರೆ ಪೊಲೀಸರು ಮೂರು ಗಂಟೆಯಾದರೂ ದೂರು ದಾಖಲಿಸಿಕೊಂಡಿರಲಿಲ್ಲ. ಇದರಿಂದ ಮನನೊಂದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಬಾಲಕಿಯ ಮನೆಯಲ್ಲಿದ್ದ ಡೆತ್ ನೋಟ್‍ನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆಶಾ ಖನ್ನಾ, ತನ್ವಿ ಕೇವತ್ ಮತ್ತು ಮಮತಾ ಕೇವತ್ ಮತ್ತು ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿತ ವ್ಯಕ್ತಿಗಳು.

    ಇದೇ ವೇಳೆ ಮೃತ ಬಾಲಕಿಯ ತಂದೆ ಸುದ್ದಿಗಾರರೊಂದಿಗೆ ಮಾತನಾಡಿ, ಬಾಲಕಿಗೆ ಆರೋಪಿಗಳು ಕಿರುಕುಳ ನೀಡುತ್ತಿದ್ದು, ನನಗೂ ಹೊಡೆದಿದ್ದಾರೆ ಎಂದು ಈ ಹಿಂದೆ ದೂರು ನೀಡಿದ್ದೇನೆ ಎಂದರು. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಬಾಲಕಿಯೂ ಪೊಲೀಸ್ ಠಾಣೆಗೆ ಹೋಗಿ ದೂರುದಾರರ ವಿರುದ್ಧ ರಾಜಿಯನ್ನು ಮಾಡಿಕೊಳ್ಳಲು ಬಯಸಿದ್ದಳು ಎಂದು ಎಎಸ್ಪಿ ಸಂಜಯ್ ಅಗರವಾಲ್ ತಿಳಿಸಿದ್ದಾರೆ. ಸಂತ್ರಸ್ತೆ ಅಪ್ರಾಪ್ತ ಬಾಲಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಮತ್ತು ಇದು ಆಕೆಯ ತಂದೆ ಮತ್ತು ಹುಡುಗನ ಕುಟುಂಬದ ವಿವಾದಕ್ಕೆ ಕಾರಣವಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು

  • ಮನೆಯಲ್ಲಿರುವ 8 ಮಂದಿ ಪುರುಷರಿಗೆ ಒಬ್ಬಳೇ ಪತ್ನಿ

    ಮನೆಯಲ್ಲಿರುವ 8 ಮಂದಿ ಪುರುಷರಿಗೆ ಒಬ್ಬಳೇ ಪತ್ನಿ

    ನವದೆಹಲಿ: ಮಹಾಭಾರತದ ದ್ರೌಪದಿಗೆ 5 ಮಂದಿ ಗಂಡಂದಿರು ಇದ್ದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ ರಾಜಸ್ಥಾನ ಹಾಗೂ ಮಧ್ಯೆ ಪ್ರದೇಶದ ಗಡಿ ಭಾಗದಲ್ಲಿ ಮಹಿಳೆಯರು ಹಲವು ಪುರುಷರನ್ನು ಮದುವೆಯಾಗುವ ವಿಚಿತ್ರ ಪದ್ಧತಿ ಇದೆ.

    ಹೌದು. ಕಲಿಯುಗದಲ್ಲೂ ಹೀಗೆ ಹಲವು ಪತಿಯರಿಗೆ ಒಬ್ಬಳೇ ಪತ್ನಿ ಇರಲು ಸಾಧ್ಯವಾ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತೆ. ಆದರೆ ಇದಕ್ಕೆ ಉತ್ತರ ಎನ್ನುವಂತೆ ರಾಜಸ್ಥಾನ ಹಾಗೂ ಮಧ್ಯೆ ಪ್ರದೇಶದ ಗಡಿ ಭಾಗದಲ್ಲಿ ಬಹುಪತಿ ಹೊಂದುವ ಪದ್ಧತಿ ಜಾರಿಯಲ್ಲಿದೆ. ವಿಚಿತ್ರ ಎನಿಸಿದರೂ ಇದು ಸತ್ಯ. ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದಿರುವ ಮಹಿಳೆಯರು ಭಾರತದಲ್ಲಿ ಇದ್ದಾರೆ.

    ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗಡಿ ಭಾಗ ಮುರೆನಾದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರಿದ್ದಾರೆ. ಇದು ಹಳೇ ಪದ್ಧತಿಯೇನಲ್ಲ. ಕೆಲ ವರ್ಷಗಳ ಹಿಂದೆ ಅಲ್ಲಿನ ಮುಖಂಡರು ಗ್ರಾಮದ ಒಳಿತಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಊರಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದೆ. ಆದರೆ ಯುವಕರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕೆ ಗ್ರಾಮದ ಮುಖಂಡರು ಈ ಪದ್ಧತಿಯನ್ನು ಶುರು ಮಾಡಿದ್ದಾರೆ.

    ಒಂದು ಮನೆಯಲ್ಲಿ ಒಬ್ಬನೇ ಹುಡುಗನಿದ್ದರೆ ಹುಡುಗಿ ಆತನೊಬ್ಬನನ್ನೇ ಮದುವೆಯಾಗಬೇಕು. ಆದರೆ ಮನೆಯಲ್ಲಿ 8 ಮಂದಿ ಹುಡುಗರಿದ್ದರೆ ಅವರೆಲ್ಲರನ್ನು ಆ ಮಹಿಳೆ ಮದುವೆಯಾಗಬೇಕು. ಹೀಗಾಗಿ ಈ ಗ್ರಾಮದಲ್ಲಿ ಒಬ್ಬ ಪತಿ ಇರುವ ಮಹಿಳೆಯರೂ ಇದ್ದಾರೆ. ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದಿರುವ ಮಹಿಳೆಯರು ಜೀವನ ನಡೆಸುತ್ತಿದ್ದಾರೆ.

  • ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ನೋಡಲು ಬಂದವ ಜೈಲು ಸೇರಿದ!

    ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ನೋಡಲು ಬಂದವ ಜೈಲು ಸೇರಿದ!

    ಭೋಪಾಲ್: ಹಾಸ್ಟೆಲ್‍ನಲ್ಲಿ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಯುವಕನೊಬ್ಬ ಪೈಪ್ ಲೈನ್ ಹತ್ತಿ ಬಂದು ಸಿಕ್ಕಿಬಿದ್ದಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.

    ಮಧ್ಯಪ್ರದೇಶದ ಭೋಪಾಲ್ ಎಂ.ಪಿ.ನಗರದ ಬಾಲಕಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಅಮನ್ ಕುಮಾರ್ ಬಂಧಿತ ಆರೋಪಿ. ಹಾಸ್ಟೆಲ್ ಎರಡನೇ ಮಹಡಿಯಲ್ಲಿದ್ದು, ಕೆಳಗಿನ ಮಹಡಿಯಲ್ಲಿ ಒಂದು ಅಂಗಡಿಯಿದೆ. ಈ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಾಲಕಿಯರ ಹಾಸ್ಟೆಲ್ ಇದ್ದುದರಿಂದ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಹೋಗಿದ್ದಾನೆ. ಈ ವೇಳೆ ಹುಡುಗಿಯೊಬ್ಬಳ ಕೈಗೆ ಯುವಕ ಸಿಕ್ಕಿಬಿದ್ದಿದ್ದು, ಹಾಸ್ಟೆಲ್ ಸಿಬ್ಬಂದಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮಧ್ಯ ರಾತ್ರಿಯೇ ಈ ಯುವಕ ಒಳ ಚರಂಡಿ ಪೈಪ್ ಲೈನ್ ಮೂಲಕ ಹಾಸ್ಟೆಲ್ ಪ್ರವೇಶಿಸಿದ್ದಾನೆ. ಅಲ್ಲಿ ಹುಡುಗಿಯರ ಬಾತ್ ರೂಂ ಬಳಿ ಕತ್ತಲಿನಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾನೆ. ಆದರೆ ರಾತ್ರಿ ಹುಡುಗಿಯೊಬ್ಬಳು ಬಾತ್ ರೂಂಗೆ ತೆರೆಳಿದಾಗ, ಕತ್ತಲ್ಲಲ್ಲಿ ಯಾರೋ ಕೂತಿರುವುದು ಕಾಣಿಸಿ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣ ಹುಡುಗಿಯರು ಹಾಗೂ ವಾರ್ಡನ್ ಅಲ್ಲಿಗೆ ಬಂದಾಗ ಯುವಕ ಸಿಕ್ಕಿಬಿದ್ದಿದ್ದಾನೆ.

    ಎಲ್ಲರೂ ಸ್ಥಳಕ್ಕೆ ಬಂದಾಗ ಭಯದಲ್ಲಿ ಯುವಕ ಪೈಪ್ ಲೈನ್ ಮೂಲಕ ಕೆಳಗಿಳಿಯುವ ಪ್ರಯತ್ನ ನಡೆಸಿದ್ದಾನೆ. ಆದರೆ ಅಷ್ಟರಲ್ಲಿ ಹುಡುಗಿಯರು ಆತನನ್ನು ಹಿಡಿದು ಸಖತ್ ಗೂಸ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿ ಆತನನ್ನು ಜೈಲಿಗಟ್ಟಿದ್ದಾರೆ.

  • 75 ಲಕ್ಷ ಕೊಡಿ ಇಲ್ಲ ಕಿಡ್ನಿ ಮಾರಲು ಬಿಡಿ- ಚುನಾವಣಾ ಆಯೋಗಕ್ಕೆ ಪತ್ರ ಬರೆದ ಅಭ್ಯರ್ಥಿ

    75 ಲಕ್ಷ ಕೊಡಿ ಇಲ್ಲ ಕಿಡ್ನಿ ಮಾರಲು ಬಿಡಿ- ಚುನಾವಣಾ ಆಯೋಗಕ್ಕೆ ಪತ್ರ ಬರೆದ ಅಭ್ಯರ್ಥಿ

    ಭೋಪಾಲ್: ಚುನಾವಣೆಗಾಗಿ 75 ಲಕ್ಷ ರೂಪಾಯಿ ಕೊಡಿ, ಇಲ್ಲವಾದರೆ ತನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಿ ಎಂದು ಮಧ್ಯಪ್ರದೇಶದ ಸಮಾಜವಾದಿ ಪಕ್ಷದ(ಎಸ್‍ಪಿ) ಮಾಜಿ ನಾಯಕ ಹಾಗೂ ಬಾಲಘಾಟ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇಂದ್ರ ಚುನಾವಣಾ ಆಯೋಗದ ಮುಂದೆ ವಿಚಿತ್ರ ಮನವಿಯೊಂದನ್ನು ಇಟ್ಟಿದ್ದಾರೆ.

    ಪಕ್ಷೇತರ ಅಭ್ಯರ್ಥಿ ಕಿಶೋರ್ ಸಮ್ರಿತ್ ಅವರು ಜಿಲ್ಲಾ ಚುನಾವಣಾ ಅಧಿಕಾರಿ ದೀಪಕ್ ಆರ್ಯ ಅವರಿಗೆ ಈ ರೀತಿ ವಿಚಿತ್ರ ಕೋರಿಕೆ ಮುಂದಿಟ್ಟು ಪತ್ರ ಬರೆದಿದ್ದಾರೆ. ಚುನಾವಣಾ ವೆಚ್ಚಕ್ಕೆ 75 ಲಕ್ಷವನ್ನು ತಮಗೆ ಚುನಾವಣಾ ಆಯೋಗವೇ ನೀಡಲಿ ಅಥವಾ ಬ್ಯಾಂಕ್‍ನಿಂದ ಲೋನ್ ಕೊಡಿಸಲಿ. ಈ ಎರಡು ಕೆಲಸ ಅವರಿಂದ ಆಗದಿದ್ದರೆ ನನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಲಿ ಎಂದು ಚುನಾವಣಾ ಆಯೋಗಕ್ಕೆ ಕೇಳಿಕೊಂಡಿದ್ದಾರೆ.

    ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 75 ಲಕ್ಷ ರೂ.ಗಳಿಗೆ ನಿಗದಿಗೊಳಿಸಿದೆ. ಆದ್ರೆ ಅಷ್ಟು ಹಣ ತಮ್ಮ ಬಳಿ ಇಲ್ಲದ ಕಾರಣ ಕಿಶೋರ್ ಸಮ್ರಿತ್ ಈ ರೀತಿ ಮನವಿ ಮಾಡಿದ್ದಾರೆ.

    ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕಿಶೋರ್ ಸಮ್ರಿತ್ ಅವರು, ಚುನಾವಣಾ ಆಯೋಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕೇವಲ 15 ದಿನಗಳ ಅವಕಾಶವನ್ನು ನೀಡದೆ. ಇಷ್ಟು ಹಣವನ್ನು ಈ ಅವಧಿಯಲ್ಲಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಸಮಾಜದಲ್ಲಿರುವ ಬಡವರನ್ನು ಉದ್ಧಾರ ಮಾಡಬೇಕು ಆದ್ದರಿಂದ ಗೆಲವು ಸಾಧಿಸಬೇಕು. ನನ್ನ ವಿರುದ್ಧ ಸ್ಪರ್ಧಿಸಿದವರು ಭ್ರಷ್ಟಾಚಾರಿಗಳು. ಅವರು ಆ ಅನ್ಯಾಯದ ಹಣವನ್ನು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡುತ್ತಿದ್ದಾರೆ. ಆದ್ರೆ ನನಗೆ ಆ ರೀತಿ ಅನ್ಯಾಯವಾಗಿ ಹಣ ಸಂಗ್ರಹಿಸಲು ಆಗಲ್ಲ. ಆದ್ದರಿಂದ ಚುನಾವಣಾ ಆಯೋಗ ನನ್ನ ಮನವಿಯನ್ನು ಪರಿಗಣಿಸಬೇಕೆಂದು ಕೋರಿದ್ದಾರೆ.

  • ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಭೋಪಾಲ್: ಯುವತಿಯೊಬ್ಬಳು ಬೇರೆ ಜಾತಿ ಯುವಕನನ್ನು ಮದುವೆಯಾದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ಗ್ರಾಮಸ್ಥರು, ಒತ್ತಾಯವಾಗಿ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿಕ್ಷೆಯನ್ನು ಆಕೆಗೆ ನೀಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಿಘರ್ ನಲ್ಲಿ ನಡೆದಿದೆ.

    ಜಾಬುವ ಜಿಲ್ಲೆಯ ದೇವಿಘರ್ ನಿವಾಸಿಯಾದ 20 ವರ್ಷದ ಯುವತಿಯೊಬ್ಬಳು ಅಂತರ್ಜಾತಿ ವಿವಾಹವಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಗ್ರಾಮಸ್ಥರು ಮದುವೆಯಾದ ಯುವಕ, ಯುವತಿಗೆ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಮದುವೆಯಾದ ತಪ್ಪಿಗೆ ಯುವತಿ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಿ ಶಿಕ್ಷೆ ವಿಧಿಸಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ರೀತಿ ಯುವತಿಗೆ ಗ್ರಾಮಸ್ಥರು ಶಿಕ್ಷೆ ನೀಡಿದ್ದು ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ ಜಾಬುವ ಪೊಲೀಸರು ಈಗಾಗಲೇ ಘಟನೆಯಲ್ಲಿ ಶಾಮೀಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಆರೋಪಿಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹುಲಿಯಿಂದ ಮಾಲೀಕರ ಜೀವ ಉಳಿಸಿದ ನಾಯಿ!

    ಹುಲಿಯಿಂದ ಮಾಲೀಕರ ಜೀವ ಉಳಿಸಿದ ನಾಯಿ!

    ಸಾಂದರ್ಭಿಕ ಚಿತ್ರ

    ಭೋಪಾಲ್: ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದ ಹಸುವನ್ನು ದಂಪತಿ ತಮ್ಮ ಸಾಕು ನಾಯಿ ಜೊತೆ ಹೋಗಿದ್ದರು. ಈ ವೇಳೆ ದಂಪತಿಯ ಮೇಲೆ ದಾಳಿಗೆ ಮುಂದಾದ ಹುಲಿಗಳಿಂದ ನಾಯಿ ತನ್ನ ಮಾಲೀಕರ ಜೀವವನ್ನು ರಕ್ಷಿಸಿದೆ. ಮಧ್ಯ ಪ್ರದೇಶದ ಮಾಲ್ಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

    ಮಾಲ್ಡಾ ಜಿಲ್ಲೆಯಲ್ಲಿ ನಿವಾಸಿಗಳಾದ ಕುಂಜಿರಾಮ್ ಯಾದವ್ ಮತ್ತು ಆತನ ಪತ್ನಿ ಪೂಲ್ವತಿ ಯಾದವ್ ಅವರನ್ನು ನಾಯಿ ರಕ್ಷಿಸಿದೆ. ಗುರುವಾರ ಸಂಜೆ ತಮ್ಮ ಊರಿನ ಉಪ ಸರಪಂಚ್ ಅವರ ಹಸುವನ್ನು ಹುಡುಕಿಕೊಂಡು ಬರಲು ಕನ್ಹಾ ಅಭಯಾರಣ್ಯಕ್ಕೆ ದಂಪತಿ ತೆರೆಳಿದ್ದರು. ಆಗ ಅವರೊಂದಿಗೆ ಅವರು ಸಾಕಿದ್ದ ನಾಯಿ ಕೂಡ ಹೋಗಿತ್ತು. ಸೂರ್ಯ ಮುಳುಗಿದ ಬಳಿಕ ಕತ್ತಲಾಗುತ್ತಿದ್ದಂತೆ ಕಾಡಿನಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಅವರಿಗೆ ಹಸು ಕಂಡಿತ್ತು. ಬಳಿಕ ಅದನ್ನು ವಾಪಾಸ್ ಊರಿಗೆ ಕರೆತರುತ್ತಿರುವಾಗ ಎರಡು ಹುಲಿಗಳು ಅವರ ಮೇಲೆ ದಾಳಿ ನಡೆಸಲು ಕೂತಿದ್ದನ್ನು ದಂಪತಿ ಗಮನಿಸಿದರು. ಆಗ ಇನ್ನೇನು ಹುಲಿಗಳಿಗೆ ದಂಪತಿ ಬಲಿಯಾಗುತ್ತಾರೆ ಎನ್ನುವಷ್ಟರಲ್ಲಿ, ಸಾಕು ನಾಯಿ ಮುಂದೆ ಬಂದು ದಂಪತಿಯ ಜೀವ ಉಳಿಸಿದೆ.

    ದಂಪತಿ ಮತ್ತು ಹುಲಿಗಳ ಮಧ್ಯದಲ್ಲಿ ನಿಂತು ನಾಯಿ ಒಂದೇ ಸಮನೆ ಬೊಗಳಲು ಆರಂಭಿಸಿದೆ. ಈ ವೇಳೆ ದಂಪತಿ ಮೇಲೆ ದಾಳಿ ಮಾಡಲು ನೋಡುತ್ತಿದ್ದ ಹುಲಿಗಳು ನಾಯಿ ಬೊಗಳುತ್ತಿದ್ದದನ್ನು ಕೇಳಿ ಗೊಂದಲಗೊಂಡಿವೆ. ಆಗ ನಿಧಾನಕ್ಕೆ ತನ್ನ ಮಾಲೀಕರು ಅಲ್ಲಿಂದ ತಪ್ಪಿಸಿಕೊಳ್ಳುವವರೆಗೂ ಬೊಗಳುತ್ತ ನಿಂತು ಬಳಿಕ ತಾನು ಕೂಡ ವ್ಯಾಘ್ರಗಳಿಂದ ತಪ್ಪಿಸಿಕೊಂಡು ಮನೆಗೆ ಮರಳಿದೆ.

    ಹುಲಿಗಳಿಂದ ತಪ್ಪಿಸಿಕೊಂಡು ಬಂದಿದ್ದ ದಂಪತಿ ನಾಯಿ ಕಥೆ ಏನಾಯ್ತೋ ಎಂದು ಆತಂಕದಲ್ಲಿದ್ದರು. ಆದ್ರೆ ಮನೆಗೆ ಮರಳಿದ ನಾಯಿಯನ್ನು ನೋಡಿ ಮುದ್ದಾಡಿದ್ದಾರೆ. ಅಲ್ಲದೆ ಹುಲಿಗಳಿಂದ ತಪ್ಪಿಸಿಕೊಂಡು ಬರುತ್ತಿದ್ದ ವೇಳೆ ದಂಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ, ಬಹುಶಃ ನಾಯಿ ಬೊಗಳುವುದನ್ನು ಹುಲಿಗಳು ಕೇಳಿದ್ದು ಅದೇ ಮೊದಲ ಇರಬಹುದು. ಆದರಿಂದ ಗೊಂದಲಪಟ್ಟು ದಾಳಿ ಮಾಡದೇ ಹಿಂಜರಿದಿದೆ ಎಂದು ತಿಳಿಸಿದ್ದಾರೆ.