Tag: Madrid

  • ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ

    ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ

    ಮ್ಯಾಡ್ರಿಡ್: ದಶಕಗಳಲ್ಲೇ ಕಂಡೂಕೇಳರಿಯದ ಪ್ರವಾಹಕ್ಕೆ ಸ್ಪೇನ್ (Spain) ಅಕ್ಷರಶಃ ತತ್ತರಿಸಿದೆ. ಅದರಲ್ಲೂ ಪೂರ್ವ ಸ್ಪೇನ್‌ನ ವಾಲೆನ್ಸಿಯಾದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ಈವರೆಗೆ ಮೃತರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ. ಇನ್ನೂ ಪ್ರವಾಹದಿಂದ (Worst Floods) ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

    1973ರ ಪ್ರವಾಹದಲ್ಲಿ 150ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದರು. ಆ ನಂತರ ಇದು ಅತಿದೊಡ್ಡ ಪ್ರವಾಹ ಎಂದು ಹೇಳಲಾಗುತ್ತಿದೆ. ಅತಿ ಹೆಚ್ಚು ಹಾನಿಗೊಳಗಾದ ಪೂರ್ವ ವೇಲೆನ್ಸಿಯಾ ಪ್ರದೇಶದಲ್ಲಿ 202 ಜನ ಸಾವನ್ನಪ್ಪಿದ್ದಾರೆ. ಜೊತೆಗೆ ನೆರೆಯ ಕ್ಯಾಸ್ಟಿಲ್ಲಾ-ಲಾ ಮಂಚಾ ಮತ್ತು ದಕ್ಷಿಣದ ಆಂಡಲೂಸಿಯಾದಲ್ಲಿ ಮೂರು ಸಾವುಗಳು ಸಂಭವಿಸಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಈವರೆಗೆ 4,500 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಸ್ಪೇನ್‌ನ ಒಳಾಡಳಿತ ಸಚಿವ ಫರ್ನಾಂಡೋ ಗ್ರಾಂಡೆ-ಮರ್ಲಾಸ್ಕಾ ಹೇಳಿದ್ದಾರೆ.

    ರಸ್ತೆಗಳ ಮೇಲೆ ಕಾರುಗಳು ಎಲ್ಲೆಂದರಲ್ಲಿ ಬಿದ್ದಿವೆ. ರಕ್ಷಣಾ ಕಾರ್ಯಕ್ಕೆ ಹವಾಮಾನವೂ ಅನುಕೂಲ ಮಾಡಿಕೊಡ್ತಿಲ್ಲ. ಇನ್ನು ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಹೆಲಿಕಾಪ್ಟರ್‌, ಡ್ರೋನ್‌ಗಳು ಮತ್ತು ಸ್ನಿಫರ್ ಡಾಗ್‌ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿವೆ. ಅವಶೇಷಗಳ ಅಡಿ ಬದುಕುಳಿದವರಿಗೆ ಶೋಧ ನಡೆಸಲಾಗುತ್ತಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

    ರಕ್ಷಣಾ ಕಾರ್ಯಾಚರಣೆಗಳಿಗೆ ಈಗಾಗಲೇ ವಿವಿಧ ಭದ್ರತಾ ಪಡೆಗಳ 1,200 ಸಿಬ್ಬಂದಿಯನ್ನು ನೇಮಿಸಿದೆ. ಇನ್ನೂ 500 ಹೆಚ್ಚುವರಿ ಸಿಬ್ಬಂದಿಯನ್ನ ಪ್ರವಾಹಪೀಡಿತ ಪ್ರದೇಶಗಳಿಗೆ ನಿಯೋಜಿಸಲು ಸ್ಥಳೀಯ ಸರ್ಕಾರ ಮುಂದಾಗಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ:  ಬಲಿಪಾಡ್ಯಮಿ; ಬಲಿ ಮೇಲೆ ವಾಮನ ಅವತಾರದಲ್ಲಿ ವಿಷ್ಣುವಿನ ವಿಜಯ

  • ಲೈವ್‍ನಲ್ಲಿ ಅರೆನಗ್ನವಾಗಿ ಬಂದ ಯುವತಿ – ವರದಿಗಾರನ ಅನೈತಿಕ ಸಂಬಂಧ ಬಯಲು

    ಲೈವ್‍ನಲ್ಲಿ ಅರೆನಗ್ನವಾಗಿ ಬಂದ ಯುವತಿ – ವರದಿಗಾರನ ಅನೈತಿಕ ಸಂಬಂಧ ಬಯಲು

    ಮ್ಯಾಡ್ರಿಡ್: ಇತ್ತೀಚೆಗೆ ಮಹಿಳಾ ವರದಿಗಾರ್ತಿ ಮನೆಯಿಂದಲೇ ವರದಿ ನೀಡುತ್ತಿದ್ದಾಗ ಆಕೆಯ ತಂದೆ ಟಿ-ಶರ್ಟ್ ಹಾಕಿಕೊಂಡು ಎಂಟ್ರಿಕೊಟ್ಟಿದ್ದರು. ಇದೀಗ ವರದಿಗಾರನೊಬ್ಬ ಲೈವ್ ವರದಿ ನೀಡುತ್ತಿದ್ದಾಗ ಅರೆನಗ್ನವಾಗಿ ಯುವತಿಯೊಬ್ಬಳು ಹೋಗಿದ್ದಾಳೆ. ಈ ಮೂಲಕ ಆತನೇ ತನ್ನ ಅನೈತಿಕ ಸಂಬಂಧವನ್ನು ಸಾರ್ವಜನಿಕವಾಗಿ ಬಯಲು ಮಾಡಿಕೊಂಡಿದ್ದಾನೆ.

    ಕೊರೊನಾದಿಂದ ಇಡೀ ಸ್ಪೇನ್ ಲಾಕ್‍ಡೌನ್ ಆಗಿದೆ. ಹೀಗಾಗಿ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಸ್ಪ್ಯಾನಿಶ್ ಪತ್ರಕರ್ತನೊಬ್ಬ ಲೈವ್ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ಅರೆನಗ್ನವಾಗಿ ಯುವತಿಯೊಬ್ಬಳು ಕೊಠಡಿಯಿಂದ ಹೊರ ಬಂದಿದ್ದಾಳೆ. ಇದನ್ನೂ ಓದಿ: ವರ್ಕ್ ಫ್ರಂ ಹೋಂ ಎಫೆಕ್ಟ್- ಮಗಳು ಲೈವ್ ಮಾಡ್ತಿದ್ದಾಗ ಬಟ್ಟೆ ಹಾಕ್ತಾ ಅಪ್ಪನ ಎಂಟ್ರಿ

    ಅಲ್ಫೊನ್ಸೊ ಮೆರ್ಲೋಸ್ ಸ್ಥಳೀಯ ಸ್ಪೇನ್‍ನಲ್ಲಿ ಪತ್ರಕರ್ತನಾಗಿದ್ದು, ಮಾಡೆಲ್ ಮತ್ತು ಪ್ರಸಿದ್ಧ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾನೆ. ಮೆರ್ಲೋಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಅತಿಥಿಯಾಗಿ ಲೈವ್ ಸಂದರ್ಶನದಲ್ಲಿ ಮಾತನಾಡುತ್ತಿದ್ದ. ಆಗ ಅರೆಬೆತ್ತಲೆ ಯುವತಿ ಆಕಸ್ಮಿಕವಾಗಿ ಹೋಗಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿರುವ ಯುವತಿ ಮೆರ್ಲೋಸ್‍ನ ಗೆಳತಿ ಮಾರ್ಟ್ ಲೋಪೆಜ್ ಅಲ್ಲ. ಆದರೆ ಆಕೆಯನ್ನು ಅಲೆಕ್ಸಿಯಾ ರಿವಾಸ್ ಎಂದು ಗುರುತಿಸಲಾಗಿದೆ. ಆಕೆಯೂ ಕೂಡ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವರದಿಗಾರ ಬಹಿರಂಗವಾಗಿ ಕ್ಷಮೆ ಕೇಳಿದ್ದಾನೆ.

    https://www.instagram.com/p/B_NT6uFIB8d/

    ಲೋಪೆಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಅಲೆಕ್ಸಿಯಾ ರಿವಾಸ್ ತನ್ನ ಗೆಳೆಯನೊಂದಿಗೆ ಬ್ರೇಕ್ ಮಾಡಿಕೊಂಡ ನೋವಿನಲ್ಲಿದ್ದಳು. ಆದರೆ ಮೆರ್ಲೋಸ್ ನೊಂದಿಗಿನ ನಾಚಿಕೆಗೇಡು ಕೆಲಸ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಮೆರ್ಲೋಸ್, ಲೋಪೆಜ್‍ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ.

    ಇತ್ತೀಚೆಗೆ ಫ್ಲೋರಿಡಾದ ಜೆಸ್ಸಿಕಾ ಲ್ಯಾಂಗ್ ಎಂಬಾಕೆ ಅಡುಗೆ ಮನೆಯಿಂದ ಲೈವ್ ಬಂದಿದ್ದಳು. ಹೀಗೆ ಕೊರೊನಾ ವೈರಸ್ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ತಂದೆ ಟಿ-ಶರ್ಟ್ ಹಾಕಿಕೊಂಡು ಒಳಗಡೆಯಿಂದ ಎಂಟ್ರಿ ಕೊಟ್ಟಿದ್ದರು. ಕೂಡಲೇ ಎಚ್ಚೆತ್ತು ಒಳಗಡೆ ತೆರಳಿದ್ದರು. ಈ ವಿಚಾರ ಮಗಳಿಗೂ ಗೊತ್ತಾಗಿ ಅಯ್ಯೋ ಡ್ಯಾಡಿ ಎಂದು ಒಂದು ಕ್ಷಣ ದಂಗಾಗಿದ್ದಳು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    https://twitter.com/kr3at0r/status/1253644846751002624

     

  • ನಟಿ ಶ್ರೇಯಾ ಪತಿಗೆ ಕೊರೊನಾ ಲಕ್ಷಣ- ಆಸ್ಪತ್ರೆಗೆ ಬರಬೇಡಿ ಎಂದ ವೈದ್ಯರು

    ನಟಿ ಶ್ರೇಯಾ ಪತಿಗೆ ಕೊರೊನಾ ಲಕ್ಷಣ- ಆಸ್ಪತ್ರೆಗೆ ಬರಬೇಡಿ ಎಂದ ವೈದ್ಯರು

    ಮ್ಯಾಡ್ರಿಡ್: ನಟಿ ಶ್ರೇಯಾ ಶರಣ್ ಪತಿ ಆಂಡ್ರೆ ಅವರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

    ಶ್ರೇಯಾ ಶರಣ್ 2018ರ ಮಾರ್ಚ್ ತಿಂಗಳಲ್ಲಿ ವಿದೇಶಿಗರಾದ ಆಂಡ್ರೆ ಕೋಶಿವ್‍ನನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಸ್ಪೇನ್‍ನಲ್ಲಿಯೇ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಶ್ರೇಯಾ ಪತಿ ಆಂಡ್ರೆಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿ ಮನೆಗೆ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಶ್ರೇಯಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

    ಆಂಡ್ರೆಗೆ ಒಣ ಕೆಮ್ಮು, ತಲೆ ನೋವು, ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಿಮಗೆ ಕೊರೊನಾ ಬಂದಿಲ್ಲವಾದರೂ ಆಸ್ಪತ್ರೆಗೆ ಬಂದರೆ ಕೊರೊನಾ ಬರುವ ಸಾಧ್ಯತೆ ಇದೆ. ಆದ್ದರಿಂದ ನೀವು ಆಸ್ಪತ್ರೆಗೆ ಬರುವುದು ಬೇಡ, ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿ ಇರಿ ಎಂದು ಹೇಳಿ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.

    ಕೊನೆಗೆ ನಾವು ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿದ್ದೆವು. ನಾವಿಬ್ಬರು ಬೇರೆ ಬೇರೆ ರೂಂಗಳಲ್ಲಿ ಮಲಗುತ್ತಿದ್ದೆವು. ಅಷ್ಟೇ ಅಲ್ಲದೇ ಪರಸ್ಪರ ಅಂತರವನ್ನು ಕಾಯ್ದುಕೊಂಡಿದ್ದೆವು. ಸದ್ಯ ಆಂಡ್ರೆ ಈಗ ಚೇತರಿಸಿಕೊಳ್ಳತ್ತಿದ್ದಾರೆ ಎಂದು ಶ್ರೇಯಾ ತಿಳಿಸಿದ್ದಾರೆ.

    ಶ್ರೇಯಾ ಮತ್ತು ಆಂಡ್ರೆ ಅವರು ಮದುವೆಯಾಗಿ ಎರಡು ವರ್ಷಗಳಾಗಿದ್ದು, ಮಾರ್ಚ್ 13 ರಂದು ಎರಡನೇ ವಿವಾಹ ವಾರ್ಷಿಕೋತ್ಸವ ಇತ್ತು. ನಾವಿಬ್ಬರು ಈ ಖುಷಿಯನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದು, ಅದರಂತೆಯೇ ಸ್ಪೇನ್ ಹೋಟೆಲ್ ಸಹ ಬುಕ್ ಮಾಡಿದೆವು. ಆದರೆ ಅಷ್ಟರಲ್ಲೇ ಕೊರೊನಾ ವ್ಯಾಪಿಸಿದ ಕಾರಣ ಇಡೀ ಸ್ಪೇನ್ ದೇಶವೇ ಲಾಕ್‍ಡೌನ್ ಆಗಿತ್ತು. ಆಗಲೇ ನಮಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದು. ಪೊಲೀಸರು ಕೂಡ ಮನೆಯಿಂದ ಹೊರಬಾರದೆಂದು ಸೂಚಿಸಿದ್ದರು ಎಂದು ಹೇಳಿದ್ದಾರೆ.

  • ಬಂಧಿಸಿದ ಕೋಪಕ್ಕೆ ಬೆತ್ತಲಾಗಿ ಪೊಲೀಸರ ಕಾರು ಮೇಲೆ ಹತ್ತಿನಿಂತ ಮಹಿಳೆ

    ಬಂಧಿಸಿದ ಕೋಪಕ್ಕೆ ಬೆತ್ತಲಾಗಿ ಪೊಲೀಸರ ಕಾರು ಮೇಲೆ ಹತ್ತಿನಿಂತ ಮಹಿಳೆ

    – ರಸ್ತೆ ಮೇಲೆ ಪೊಲೀಸರ ಎದುರೇ ಬಟ್ಟೆ ಬಿಚ್ಚಿದಳು
    – ಮಹಿಳೆ ಬೆತ್ತಲಾದ ವಿಡಿಯೋ ವೈರಲ್

    ಮ್ಯಾಡ್ರಿಡ್: ಕೊರೊನಾ ವೈರಸ್ ಹಾವಳಿಗೆ ಹಲವು ರಾಷ್ಟ್ರಗಳು ಲಾಕ್‍ಡೌನ್ ಆಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಮಹಿಳೆಯೊಬ್ಬಳು ಹುಚ್ಚಾಟ ಮೆರೆದಿದ್ದಾಳೆ. ರಸ್ತೆ ಮಧ್ಯೆ ಪೊಲೀಸರ ಎದುರೇ ಬಟ್ಟೆ ಬಿಚ್ಚಿ ಬೆತ್ತಲಾಗಿ ರಂಪಾಟ ಮಾಡಿದ್ದಾಳೆ.

    ಸ್ಪೇನ್‍ನ ಟೊರೆಮೊಲಿನೋಸ್ ನಗರದಲ್ಲಿ ಈ ಘಟನೆ ನಡೆದಿದೆ. ಟೊರೆಮೊಲಿನೋಸ್ ನಗರದ ಕೋಸ್ಟಾ ಡೆಲ್ ಸಾಲ್ ರೆಸಾರ್ಟ್‍ನಲ್ಲಿ ತಂಗಿದ್ದ 41 ವರ್ಷದ ಮಹಿಳೆ ಈ ರೀತಿ ಹುಟ್ಟಾಟ ಮೆರೆದಿದ್ದಾಳೆ. ಟೊರೆಮೊಲಿನೋಸ್‍ನಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಮಹಿಳೆ ಹೊರಬಂದಿದ್ದಳು. ಹೀಗಾಗಿ ಆಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ತನ್ನನ್ನೇ ಬಂಧಿಸಿ ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿದರಲ್ಲ ಎಂಬ ಕೋಪಕ್ಕೆ ಮಹಿಳೆ ಬೆತ್ತಲಾಗಿ ವಿಚಿತ್ರ ಪ್ರತಿಭಟನೆ ನಡೆಸಿದ್ದಾಳೆ. ರಸ್ತೆಯಲ್ಲಿಯೇ ಮೈಮೇಲಿದ್ದ ಬಟ್ಟೆಗಳನ್ನೆಲ್ಲಾ ಬಿಚ್ಚಿ ಪೊಲೀಸರ ಕಾರಿನ ಮೇಲೆ ಹತ್ತಿ ಮಹಿಳೆ ಘೋಷಣೆ ಕೂಗಿದ್ದಾಳೆ. ಹೀಗೆ ಹುಚ್ಚಾಟ ಮೆರೆಯುತ್ತಿದ್ದ ಮಹಿಳೆಯನ್ನು ಪೊಲೀಸರು ಹರಸಾಹಸಪಟ್ಟು ಸೆರೆಹಿಡಿದು, ಅಂಬುಲೆನ್ಸ್ ಮೂಲಕ ಕರೆದೊಯ್ದರು.

    ಮಹಿಳೆ ರಸ್ತೆ ಮಧ್ಯೆ ರಂಪಾಟ ಮಾಡುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದ್ದು, ಮಹಿಳೆಯ ಹುಚ್ಚಾಟ ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.

  • ಸ್ನಾನದ ವಿಡಿಯೋ ಕೇಳಿದ ಪತಿ- ಮೆಸೆಂಜರ್ ಬದ್ಲು ಪತ್ನಿ ಎಫ್‍ಬಿಯಲ್ಲೇ ಪೋಸ್ಟ್

    ಸ್ನಾನದ ವಿಡಿಯೋ ಕೇಳಿದ ಪತಿ- ಮೆಸೆಂಜರ್ ಬದ್ಲು ಪತ್ನಿ ಎಫ್‍ಬಿಯಲ್ಲೇ ಪೋಸ್ಟ್

    – ಪತ್ನಿಯ ಎಫ್‍ಬಿಯಲ್ಲಿ ಸ್ನಾನದ ವಿಡಿಯೋ ನೋಡಿ ಪತಿ ಶಾಕ್
    – 5 ನಿಮಿಷದಲ್ಲಿ 2 ಸಾವಿರ ವೀವ್ಸ್

    ಮ್ಯಾಡ್ರಿಡ್: ಮಹಿಳೆ ತನ್ನ ಪತಿಗೆ ಸ್ನಾನದ ವಿಡಿಯೋವನ್ನು ಕಳುಹಿಸುವ ಭರದಲ್ಲಿ ಮಿಸ್ ಆಗಿ ಅದನ್ನು ಫೇಸ್‍ಬುಕ್ ಲೈವ್‍ನಲ್ಲಿ ಪೋಸ್ಟ್ ಮಾಡಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

    ಸೋನಾ (ಹೆಸರು ಬದಲಾಯಿಸಲಾಗಿದೆ) ಆಕಸ್ಮಿಕವಾಗಿ ಪತಿಗೆ ಸ್ನಾನದ ವಿಡಿಯೋ ಕಳುಹಿಸುವಾಗ ಅದನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾಳೆ. ಸೋನಾ ಮತ್ತು ಸುಹೇಲ್ (ಹೆಸರು ಬದಲಾಯಿಸಲಾಗಿದೆ.) ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು.

    ಪತಿ ಸುಹೇಲ್ ವಿವಾಹವಾದಗಿನಿಂದ ಉದ್ಯೋಗಕ್ಕಾಗಿ ಬೇರೆ ದೇಶದಲ್ಲಿ ವಾಸಿಸುತ್ತಿದ್ದನು. ಈಕೆ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಹೀಗಾಗಿ ಸೋನಾ ಮತ್ತು ಸುಹೇಲ್ ಸದಾ ಸೆಕ್ಸ್ ಚಾಟ್ ಮಾಡುತ್ತಿದ್ದರು. ಆಗಾಗ ಇಬ್ಬರು ಬೆತ್ತಲೆ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

    ಒಂದು ದಿನ ಪತಿ ಸುಹೇಲ್, ಸ್ನಾನ ಮಾಡುವ ವಿಡಿಯೋ ಕಳುಹಿಸುವಂತೆ ಸೋನಾ ಬಳಿ ಕೇಳಿಕೊಂಡಿದ್ದಾನೆ. ಹೀಗಾಗಿ ಸೋನಾ ಕೂಡ ಸ್ನಾನ ಮಾಡಿ ಅದನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಪತಿಗೆ ಕಳುಹಿಸಿದ್ದಾಳೆ. ಆದರೆ ಪತಿ ತನಗೆ ಸ್ನಾನದ ವಿಡಿಯೋ ಸಿಗಲಿಲ್ಲ ಎಂದು ಹೇಳಿದ್ದಾನೆ. ಜೊತೆಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಕಳುಹಿಸುವಂತೆ ಹೇಳಿದ್ದಾನೆ.

    ಸೋನಾ ಪತಿಗೆ ಫೇಸ್‍ಬುಕ್ ಮೆಸೆಂಜರ್‍ ಗೆ ವಿಡಿಯೋ ಕಳಿಸುವಾಗ ಆಕಸ್ಮಿಕಾಗಿ ಫೇಸ್‍ಬುಕ್ ಲೈವ್‍ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಸ್ವಲ್ಪ ಸಯಮದ ನಂತರ ಸುಹೇಲ್, ಪತ್ನಿಯ ಫೇಸ್‍ಬುಕ್ ಖಾತೆಯನ್ನು ನೋಡಿ ಶಾಕ್ ಆಗಿದ್ದಾನೆ. ಯಾಕೆಂದರೆ ಅಲ್ಲಿ ಪತ್ನಿ ಸ್ನಾನ ಮಾಡುವ ವಿಡಿಯೋ ಲೈವ್ ಹೋಗುತ್ತಿತ್ತು. ತಕ್ಷಣ ಸೋನಾಗೆ ಫೋನ್ ಮಾಡಿ ಈ ಬಗ್ಗೆ ತಿಳಿಸಿ ಡಿಲೀಟ್ ಮಾಡುವಂತೆ ಹೇಳಿದ್ದಾನೆ.

    ಸೋನಾ ಕೂಡ ತಕ್ಷಣ ವಿಡಿಯೋವನ್ನು ಡಿಲೀಟ್ ಮಾಡಿದ್ದಾಳೆ. ಆದರೆ ವಿಡಿಯೋ ಅಪ್ಲೋಡ್ ಅದ 5 ನಿಮಿಷಗಳಲ್ಲಿ ಸುಮಾರು 2 ಸಾವಿರ ಜನರು ಅದನ್ನು ನೋಡಿದ್ದರು. ಅಲ್ಲದೇ ಆ ವಿಡಿಯೋವನ್ನು ಡೌನ್‍ಲೋಡ್ ಮಾಡಿ ಪೋರ್ನ್ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಕೂಡ ಮಾಡಿದ್ದರು. ಹೀಗಾಗಿ ಸೋನಾ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ ಶೀಘ್ರದಲ್ಲೇ ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ.

     

  • ಸೆಕ್ಸ್‌ನಿಂದ ಕೂಡ ಡೆಂಗ್ಯೂ ಹರಡುತ್ತೆ ಎಚ್ಚರ!

    ಸೆಕ್ಸ್‌ನಿಂದ ಕೂಡ ಡೆಂಗ್ಯೂ ಹರಡುತ್ತೆ ಎಚ್ಚರ!

    ಮ್ಯಾಡ್ರಿಡ್: ಸಾಮಾನ್ಯವಾಗಿ ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟಿ ಸೊಳ್ಳೆ ಕಚ್ಚಿದರೆ ಬರುತ್ತದೆ ಎಂದು ಬಹುತೇಕ ಮಂದಿಗೆ ತಿಳಿದಿದೆ. ಆದರೆ ಲೈಂಗಿಕ ಕ್ರಿಯೆಯಿಂದಲೂ ಡೆಂಗ್ಯೂ ಹರಡುತ್ತದೆ ಎನ್ನುವ ಅಚ್ಚರಿಯ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಸ್ಪೇನ್‍ನ ಆರೋಗ್ಯ ಇಲಾಖೆ ಲೈಂಗಿಕ ಕ್ರಿಯೆಯಿಂದ ಕೂಡ ಡೆಂಗ್ಯೂ ವೈರಾಣು ಹರಡಿ ಜ್ವರ ಬರುತ್ತದೆ ಎನ್ನುವುದನ್ನ ಪತ್ತೆಹಚ್ಚಿದೆ. ಸ್ಪೇನ್ ವೈದ್ಯರ ತಂಡ, ಕೇವಲ ಸೊಳ್ಳೆ ಕಚ್ಚಿದರೆ ಮಾತ್ರವಲ್ಲದೆ ಡೆಂಗ್ಯೂ ಪೀಡಿತ ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ ಮಾಡಿದರೂ ಡೆಂಗ್ಯೂ ಜ್ವರ ಹರಡುತ್ತೆ ಎನ್ನುವುದನ್ನ ಪತ್ತೆ ಮಾಡಿದ್ದಾರೆ. ಇದನ್ನೂ ಓದಿ:ಡೆಂಗ್ಯೂ ಜ್ವರಕ್ಕೆ ಮನೆ ಮದ್ದು

    ಈ ವಿಚಾರ ಬಯಲಾಗಿದ್ದು ಮ್ಯಾಡ್ರಿಡ್‍ನ 41 ವರ್ಷದ ವ್ಯಕ್ತಿಯಿಂದ. ಕಳೆದ ಸೆಪ್ಟೆಂಬರ್ ನಲ್ಲಿ ಈ ವ್ಯಕ್ತಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿತ್ತು. ಆದರೆ ಈ ವ್ಯಕ್ತಿ ಡೆಂಗ್ಯೂ ಸೊಂಕು ಹರಡಿದ ಪ್ರದೇಶದಲ್ಲಿ ತಂಗಿಲ್ಲ. ಅಲ್ಲದೆ ಕೆಲವೊಂದು ಡೆಂಗ್ಯೂ ಪೀಡಿತ ಪ್ರದೇಶಕ್ಕೆ ಭೇಟಿಕೊಟ್ಟಿದ್ದರೂ ಡೆಂಗ್ಯೂ ವೈರಾಣು ಆತನ ದೇಹ ಸೇರಿರಲಿಲ್ಲ. ಆದರೂ ಈತನಿಗೆ ಡೆಂಗ್ಯೂ ಬಂದಿದ್ದು ಹೇಗೆ ಎಂಬುದೇ ವೈದ್ಯರಿಗೆ ಯಕ್ಷ ಪ್ರಶ್ನೆಯಾಗಿ ತಲೆಕೊರಿಯುತ್ತಿತ್ತು. ಆಗ ವೈದ್ಯರ ತಂಡ ಆ ವ್ಯಕ್ತಿಯನ್ನು ಸಂಪೂರ್ಣ ಪರೀಕ್ಷೆ ನಡೆಸಿದಾಗ, ಲೈಂಗಿಕ ಕ್ರಿಯೆ ಮೂಲಕ ಡೆಂಗ್ಯೂ ವೈರಾಣು ಆತನ ದೇಹ ಸೇರಿತು ಎನ್ನುವುದು ಪತ್ತೆಯಾಗಿದೆ. ಇದನ್ನೂ ಓದಿ:ಒಂದೇ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ

    ಈ ವ್ಯಕ್ತಿಯ ಸಂಗಾತಿ ಕ್ಯೂಬಾ ದೇಶಕ್ಕೆ ಹೋಗಿದ್ದಾಗ ಡೆಂಗ್ಯೂ ವೈರಾಣು ಆಕೆಯ ದೇಹ ಸೇರಿತ್ತು. ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಆ ವೈರಾಣು ಪುರುಷನ ದೇಹ ಸೇರಿತ್ತು. ಇದರಿಂದಲೇ ಆತನಿಗೆ ಡೆಂಗ್ಯೂ ವೈರಾಣು ಹರಡಿತ್ತು. ಈ ವ್ಯಕ್ತಿಯಲ್ಲಿ ಡೆಂಗ್ಯೂ ಪತ್ತೆಯಾಗುವ 10 ದಿನಗಳ ಮೊದಲೇ ಆತನ ಸಂಗಾತಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಕ್ಯೂಬಾ ಹಾಗೂ ಡೊಮಿನಿಕನ್ ರಿಪಬ್ಲಿಕ್ ದೇಶಗಳ ಪ್ರವಾಸ ಹೋಗಿದ್ದಾಗ ಆಕೆಯ ದೇಹಕ್ಕೆ ಡೆಂಗ್ಯೂ ವೈರಾಣು ಸೇರಿತ್ತು. ಇದನ್ನೂ ಓದಿ:ಬಾಣಂತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿ

    ಈ ವ್ಯಕ್ತಿಯ ವೈದ್ಯಕೀಯ ವರದಿಯನ್ನು ಸ್ಪೇನ್ ಆರೋಗ್ಯ ಇಲಾಖೆ ಎಎಫ್‍ಪಿಗೆ ಇ-ಮೇಲ್ ಕಳುಹಿಸಿತ್ತು. ಎಎಫ್‍ಪಿ ಒಂದು ಯೂರೇಪ್‍ನ ಸ್ಟಾಕ್ಹೋಮ್ ಮೂಲದ ರೋಗ ತಡಗಟ್ಟುವಿಕೆ ಹಾಗೂ ನಿಯಂತ್ರಣ ಕೇಂದ್ರವಾಗಿದೆ. ಯೂರೋಪ್‍ನ ಆರೋಗ್ಯ ಮತ್ತು ರೋಗಗಳ ಮೇಲ್ವಿಚಾರಣೆ ಮಾಡುವುದು ಇದರ ಕಾರ್ಯವಾಗಿದೆ. ವರದಿ ನೋಡಿದ ಬಳಿಕ, ಸೆಕ್ಸ್‌ನಿಂದ ಕೂಡ ಡೆಂಗ್ಯೂ ವೈರಾಣು ಹರಡಿರುವುದು ಇದೇ ಮೊದಲ ಪ್ರಕರಣ. ಹಿಂದೆ ಈ ಬಗ್ಗೆ ತಿಳಿದಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದೆ.

  • ಹೊಟ್ಟೆಗೆ ಬಡಿದ ರಾಕೆಟ್- ಪಾಪ್ ಗಾಯಕಿ ವೇದಿಕೆಯಲ್ಲೇ ಸಾವು

    ಹೊಟ್ಟೆಗೆ ಬಡಿದ ರಾಕೆಟ್- ಪಾಪ್ ಗಾಯಕಿ ವೇದಿಕೆಯಲ್ಲೇ ಸಾವು

    ಮ್ಯಾಡ್ರಿಡ್: ಹೊಟ್ಟೆಗೆ ರಾಕೆಟ್ ಬಡಿದು ಪಾಪ್ ಗಾಯಕಿ ವೇದಿಕೆಯಲ್ಲೇ ಮೃತಪಟ್ಟ ಘಟನೆ ಸ್ಪೇನ್‍ನ ಲಾಸ್ ಬರ್ಲನ್ಸ್‍ನಲ್ಲಿ ನಡೆದಿದೆ.

    ಜೊವಾನ್ನಾ ಸೆನ್ಜ್(30) ಮೃತಪಟ್ಟ ಗಾಯಕಿ. ಜೊವಾನ್ನಾ ಭಾನುವಾರ ಲಾಸ್ ಬರ್ಲನ್ಸ್ ನಲ್ಲಿ ನಡೆಯುತ್ತಿದ್ದ ಮ್ಯೂಸಿಕಲ್ ಫೆಸ್ಟಿವಲ್‍ನಲ್ಲಿ ತನ್ನ ಸೂಪರ್ ಹಾಲಿವುಡ್ ಆರ್ಕೆಸ್ಟ್ರಾ ತಂಡದ ಜೊತೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಆಕಸ್ಮಿಕವಾಗಿ ಪಟಾಕಿ ಸಿಡಿದ ಕಾರಣ ಜೊವಾನ್ನಾ ಮೃತಪಟ್ಟಿದ್ದಾರೆ.

    ಸ್ಥಳೀಯರ ಪ್ರಕಾರ ಎರಡು ರಾಕೆಟ್ ಅನ್ನು ಇಡಲಾಗಿತ್ತು. ಒಂದು ರಾಕೆಟ್ ಸರಿಯಾದ ಮಾರ್ಗದಲ್ಲಿ ಹೋದರೆ, ಮತ್ತೊಂದು ರಾಕೆಟ್ ಜೊವಾನ್ನಾರ ಹೊಟ್ಟೆಗೆ ಬಡಿದಿದೆ. ಪರಿಣಾಮ ಜೊವಾನ್ನಾ ಪ್ರಜ್ಞೆ ತಪ್ಪಿದ್ದರು. ವೇದಿಕೆ ಮೇಲಿದ್ದ ತಂಡದ ಸದಸ್ಯರು ಜೊವಾನ್ನಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಹೋದ ಕೆಲವೇ ನಿಮಿಷದಲ್ಲಿ ಜೊವಾನ್ನಾ ನಿಧನರಾಗಿದ್ದಾರೆ.

    ಈ ಕಾರ್ಯಕ್ರಮಕ್ಕೆ ಸುಮಾರು 1000 ಮಂದಿ ಆಗಮಿಸಿದ್ದರು. ಈ ಘಟನೆ ನಡೆದ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೇದಿಕೆ ತಯಾರಿಸುವ ಕಂಪನಿ ಮತ್ತು ಕಾನ್ಸರ್ಟ್ ನಡೆಸುವ ಗುಂಪು, ಅವರು ಕಳೆದ ಹಲವಾರು ವರ್ಷಗಳಿಂದ ಇಂತಹ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ಆದರೆ ಈ ಘಟನೆ ಹಿಂದೆ ಎಂದು ಸಂಭವಿಸಿಲ್ಲ ಎಂದು ಹೇಳಿದ್ದಾರೆ.

  • ಮಾಜಿ ಫುಟ್ಬಾಲ್ ಸ್ಟಾರ್ ಜೋಸ್ ಆಂಟೋನಿಯೋ ರೆಯೆನ್ ಅಪಘಾತದಲ್ಲಿ ಸಾವು

    ಮಾಜಿ ಫುಟ್ಬಾಲ್ ಸ್ಟಾರ್ ಜೋಸ್ ಆಂಟೋನಿಯೋ ರೆಯೆನ್ ಅಪಘಾತದಲ್ಲಿ ಸಾವು

    ಮ್ಯಾಡ್ರಿಡ್: ಮಾಜಿ ಫುಟ್ಬಾಲ್ ಸ್ಟಾರ್ ಆಟಗಾರ ಜೋಸ್ ಆಂಟೋನಿಯೋ ರೆಯೆನ್ ಅವರು ಇಂದು ಸ್ಪೇನ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಇಂದು ಬೆಳಗ್ಗೆ ರೇವಿಸ್ ಸೆವೆಲ್ಲೇ ಹೊರವಲಯದಲ್ಲಿರುವ ಉಟ್ರೆರಾ ಎಂಬಲ್ಲಿ ಕಾರು ಅಪಘಾತವಾಗಿ ಸಾವನ್ನಪ್ಪಿದ್ದಾರೆ.

    35 ವರ್ಷದ ಈ ಸ್ಟಾರ್ ಆಟಗಾರ ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ಮತ್ತು ಸೆವಿಲ್ಲಾ ಕ್ಲಬ್ ಪರವಾಗಿ ಆಡುತ್ತಿದ್ದರು. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪೇನ್ ದೇಶವನ್ನು ಪ್ರತಿನಿಧಿಸುತ್ತಿದ್ದರು. ತನ್ನ 8 ವರ್ಷದ ಸೆವಿಲ್ಲಾ ಪರವಾಗಿ ಆಡಿದ ಆಟೋನಿಯೋ 2003-2004ರಲ್ಲಿ ಪ್ರಶಸ್ತಿ ಗೆದ್ದ ತಂಡದಲ್ಲಿ ಇವರು ಇದ್ದರು.

    ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸೆವಿಲ್ಲಾ ಕ್ಲಬ್ “ಈ ವಿಚಾರವನ್ನು ಹೇಳಲು ತುಂಬಾ ನೋವಾಗುತ್ತದೆ. ನಮ್ಮೆಲ್ಲಾರ ಪ್ರೀತಿ ಪಾತ್ರರಾದ ಸೆವಿಲ್ಲಾ ಸ್ಟಾರ್ ಜೋಸ್ ಆಟೋನಿಯೋ ರೆಯೆನ್ ಅವರು ಇಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದೇವರು ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ” ಎಂದು ಟ್ವೀಟ್ ಮಾಡಿದೆ.

  • ಪಿಂಚಣಿ ಹಣಕ್ಕಾಗಿ 92ರ ತಾಯಿಯ ಮೃತದೇಹ ಬಚ್ಚಿಟ್ಟಿದ್ದ ಮಗ!

    ಪಿಂಚಣಿ ಹಣಕ್ಕಾಗಿ 92ರ ತಾಯಿಯ ಮೃತದೇಹ ಬಚ್ಚಿಟ್ಟಿದ್ದ ಮಗ!

    ಮ್ಯಾಡ್ರಿಡ್: ಪಿಂಚಣಿ ಹಣದ ಆಸೆಗೆ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ವರ್ಷಗಟ್ಟಲೇ ಬಚ್ಚಿಟ್ಟ ಘಟನೆ ಸ್ಪೇನ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸ್ಯ್ಪಾನಿಷ್ ಪ್ರಜೆಯೊಬ್ಬ ತನ್ನ (92) ವಯಸ್ಸಿನ ತಾಯಿಯ ಮೃತದೇಹವನ್ನು ಸರಿ ಸುಮಾರು ಒಂದು ವರ್ಷಗಳ ಕಾಲ ತನ್ನ ಮನೆಯಲ್ಲಿಯೇ ಬಚ್ಚಿಟ್ಟು ಆಕೆಯ ಪಿಂಚಣಿ ಹಣವನ್ನು ಪಡೆಯುತ್ತಿದ್ದನು. ಮ್ಯಾಡ್ರಿಡ್‍ನ ಫ್ಲಾಟ್‍ವೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯು ತನ್ನ ತಾಯಿಯ ಮೃತದೇಹವನ್ನು ಶವಪೆಟ್ಟಿಗೆಯಲ್ಲಿ ಇರಿಸಿ ಬಚ್ಚಿಟ್ಟಿದ್ದನು. ಅಷ್ಟೆ ಅಲ್ಲದೇ ತಾಯಿಗೆ ಬರುತ್ತಿದ್ದ ಪಿಂಚಣಿ ಹಣಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾನೆ.

    ಬುಧವಾರದಂದು ಸ್ಥಳೀಯರು ಆರೋಪಿ ಮನೆಹತ್ತಿರ ಓಡಾಡುತ್ತಿದ್ದ ವೇಳೆ ಮನೆ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಆಗ ಸ್ಥಳೀಯರೆಲ್ಲಾ ಸೇರಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮನೆಯನ್ನು ಪರಿಶೀಲಿಸಿದಾಗ ತಾಯಿಯ ಮೃತದೇಹ ಕೊಳೆತು ವಾಸನೆ ಬರುತ್ತಿದ್ದರೂ ಅದನ್ನು ಆರೋಪಿ ಬಚ್ಚಿಟ್ಟಿದ್ದನು ಎನ್ನುವ ಸತ್ಯಾಂಶ ಹೊರಬಿದ್ದಿದೆ.

    ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾಯಿಯ ದೇಹವನ್ನು ಆಕೆಯ ಪಿಂಚಣಿ ಹಣಕ್ಕಾಗಿ ಬಚ್ಚಿಟ್ಟು, ಮೃತಪಟ್ಟ ವಿಷಯವನ್ನು ಗುಟ್ಟಾಗಿ ಇರಿಸಿದ್ದ ಎಂಬುದು ತಿಳಿದು ಬಂದಿದೆ. ಸತ್ಯಾಂಶ ತಿಳಿಯುತ್ತಿದಂತೆ ಪಾಪಿ ಮಗನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ ಡ್ರೈವ್ ಮಾಡ್ತಿದ್ದ ಹುಡ್ಗನ ತೊಡೆಮೇಲೆ ಬೆತ್ತಲಾಗಿ ಕುಳಿತ ಯುವತಿಯಿಂದ ಸೆಕ್ಸ್

    ಕಾರ್ ಡ್ರೈವ್ ಮಾಡ್ತಿದ್ದ ಹುಡ್ಗನ ತೊಡೆಮೇಲೆ ಬೆತ್ತಲಾಗಿ ಕುಳಿತ ಯುವತಿಯಿಂದ ಸೆಕ್ಸ್

    ಮ್ಯಾಡ್ರಿಡ್: ಜೋಡಿಯೊಂದು ಹೆದ್ದಾರಿಯಲ್ಲಿ ಕಾರ್ ಓಡಿಸುತ್ತಿರುವಾಗಲೇ ಬೆತ್ತಲಾಗಿ ಕಾರಿನೊಳಗೆ ಸೆಕ್ಸ್ ಮಾಡಿರುವಂತಹ ವಿಲಕ್ಷಣ ಘಟನೆ ಸ್ಪೇನ್ ನಲ್ಲಿ ನಡೆದಿದೆ.

    ಸ್ಪ್ಯಾನಿಷ್ ವಾಹನಗಳು ಓಡಾಡುವ ಮಧ್ಯದ ರಸ್ತೆಯಲ್ಲಿಯೇ ಈ ಜೋಡಿ ಕಾರಿನಲ್ಲಿಯೇ ಸೆಕ್ಸ್ ಮಾಡಿದ್ದಾರೆ. ಕಾರಿನಲ್ಲಿ ಸೆಕ್ಸ್ ಮಾಡುತ್ತಿದ್ದಾಗ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನವರು ತಮ್ಮ ಮೊಬೈಲ್ ನಲ್ಲಿ ಅದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?
    ಸೆಗೋವಿಯಾದ ವಿಲ್ಕಾಸ್ಟಿನ್ ಬಳಿ ಎಪಿ6 ದಾರಿಯ ಮಧ್ಯದಲ್ಲಿ ನೀಲಿ ಕಾರು ಹೋಗುತ್ತಿದ್ದು, ಆ ಕಾರಿನ ಒಳಗೆ ಯುವತಿ ಬೆತ್ತಲೆಯಾಗಿದ್ದಾಳೆ. ಆಕೆ ಕಾರನ್ನು ಚಲಾಯಿಸುತ್ತಿದ್ದ ಚಾಲಕನ ತೊಡೆಯ ಮೇಲೆ ಕುಳಿತು ಸೆಕ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ರಸ್ತೆ ಮಧ್ಯೆ ಈ ರೀತಿ ಮಾಡಿದ್ದಕ್ಕೆ ಆ ಜೋಡಿಯನ್ನು ಪೊಲೀಸರು ವಶಕ್ಕೆ ಪಡೆದು 41,000 ರೂ. ದಂಡವನ್ನು ವಿಧಿಸಿದ್ದಾರೆ. ಪೊಲೀಸರು ಹುಡುಗನ ಗುರುತನ್ನ ಮಾತ್ರ ಬಹಿರಂಗಪಡಿಸಿದ್ದು, ಆಕೆಯ ಪ್ರಿಯತಮೆಯ ಗುರುತನ್ನ ತಿಳಿಸಿಲ್ಲ. ಯುವಕ ಮ್ಯಾಡ್ರಿಡ್ ಪ್ರದೇಶದಿಂದ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಗಮನಕ್ಕೆ ಈ ಪ್ರಕರಣ ಬಂದಿದೆ. ಅದರಲ್ಲಿ ಕಾರಿನ ಚಾಲಕ ತನ್ನ ಪ್ರಯಾಣಿಕರ ಜೊತೆ ಲೈಂಗಿಕತೆಯನ್ನು ಹೊಂದಿದ್ದನು. ಈ ವಿಡಿಯೋ 32 ಸೆಕೆಂಡ್ ಗಳಿದ್ದು, ಕಾರ್ ಮಧ್ಯದ ಲೇನಿನಲ್ಲಿ ಹೋಗುತ್ತಿತ್ತು. ಕಾರನ್ನು ಎಪಿ -6 ಎಂದು ಗುರುತಿಸಲಾಗಿದೆ. ಅನೇಕ ಟ್ರಾಫಿಕ್ ಕ್ಯಾಮೆರಾಗಳನ್ನು ವೀಕ್ಷಿಸಿದ ನಂತರ ಕಾರನ್ನು ಜೊತೆಗೆ ಚಾಲಕನ ಗುರುತನ್ನು ಪತ್ತೆ ಮಾಡಲಾಗಿದೆ ಎಂದು ಸಿವಿಲ್ ಗಾರ್ಡ್ಸ್ ವಕ್ತಾರರು ಹೇಳಿದ್ದಾರೆ.

    ತನಿಖೆಗೆ ಒಳಗಾಗಿದ್ದಾಗ ಚಾಲಕ ತನ್ನ ಜೊತೆ ಇದ್ದ ಹುಡುಗಿಯ ಬಗ್ಗೆ ಹೇಳಿ, ತಾನು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಈ ರೀತಿಯ ನಡವಳಿಕೆಗೆ ಕೋರ್ಟ್ ಎರಡು ವರ್ಷ ಜೈಲುವಾಸ ಮತ್ತು 500 ಯೂರೋ ದಂಡವನ್ನು ವಿಧಿಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv