Tag: Madrassa

  • ಮದರಸಾಗೆ ತೆರಳುತ್ತಿದ್ದ ಬಾಲಕಿಯನ್ನು ಎತ್ತಿ ನೆಲಕ್ಕೆಸೆದ ಕಿರಾತಕ

    ಮದರಸಾಗೆ ತೆರಳುತ್ತಿದ್ದ ಬಾಲಕಿಯನ್ನು ಎತ್ತಿ ನೆಲಕ್ಕೆಸೆದ ಕಿರಾತಕ

    ಕಾಸರಗೋಡು: ಮದರಸಾಕ್ಕೆಂದು (Madrassa) ತೆರಳುತ್ತಿದ್ದ 8ರ ಹರೆಯದ ಬಾಲಕಿಯನ್ನು (Girl) ಯುವಕನೋರ್ವ ಎತ್ತಿ ನೆಲಕ್ಕೆಸೆದು (Lifts And Throws) ಕ್ರೌರ್ಯ ಮೆರೆದ ಅಮಾನವೀಯ ಘಟನೆ ಮಂಜೇಶ್ವರದಲ್ಲಿ (Manjeshwara)  ನಡೆದಿದೆ.

    ಬಾಲಕಿಯನ್ನು ಎತ್ತಿ ನೆಲಕ್ಕೆ ಎಸೆದ ಆರೋಪಿಯನ್ನು ಮಂಜೇಶ್ವರ ಕುಂಜತ್ತೂರಿನ ಅಬೂಬಕ್ಕರ್ ಸಿದ್ದೀಕ್ (30) ಎಂದು ಗುರುತಿಸಲಾಗಿದೆ. ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮದರಸಾಕ್ಕಾಗಿ ತೆರಳಿ ನಿಂತಿದ್ದ ಬಾಲಕಿ ಬಳಿ ಬಂದ ಸಿದ್ದೀಕ್ ಬಾಲಕಿಯನ್ನು ಮೇಲಕ್ಕೆತ್ತಿ ಎಸೆದಿದ್ದು, ಕೃತ್ಯದ ಬಳಿಕ ಅಲ್ಲಿಂದ ತೆರಳಿದ್ದನು. ಘಟನೆ ಬಳಿಕ ಗಾಯಗೊಂಡ ಬಾಲಕಿಯನ್ನು ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೇಸ್ ವಾಪಸ್ ತೆಗೆದುಕೋ, ಮುಂದುವರಿಸುವುದು ಬೇಡ – ಸಂತ್ರಸ್ತೆಗೆ ಆಮಿಷ ಒಡ್ಡಿದ್ರಾ ಮುರುಘಾ ಶ್ರೀ?

    ಬಾಲಕಿಯ ಸಹಪಾಠಿಗಳ ಕಣ್ಮುಂದೆಯೇ ಈ ಘಟನೆ ನಡೆದಿದೆ. ಅಲ್ಲದೇ ಬಾಲಕಿಯನ್ನು ಸಿದ್ದೀಕ್ ಎಸೆದಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಆರೋಪಿ ಸಿದ್ದೀಕ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಖಾಸಗಿ ಜಾಗದಲ್ಲಿ ಶ್ರೀಗಂಧ ಬೆಳೆದು ರೈತರೇ ಮಾರಾಟ ಮಾಡಬಹುದು

    Live Tv
    [brid partner=56869869 player=32851 video=960834 autoplay=true]

  • ಹಮೀದ್ ಅನ್ಸಾರಿ ಪತ್ನಿ ನಡೆಸೋ ಮದ್ರಸಾದ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ್ರು!

    ಹಮೀದ್ ಅನ್ಸಾರಿ ಪತ್ನಿ ನಡೆಸೋ ಮದ್ರಸಾದ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ್ರು!

    ಆಗ್ರಾ: ಮಾಜಿ ಉಪ-ರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ನಿ ಸಲ್ಮಾ ಅನ್ಸಾರಿ ನಡೆಸುವ ಮದ್ರಸಾದ ಕುಡಿಯುವ ನೀರಿಗೆ ಇಬ್ಬರು ದುಷ್ಕರ್ಮಿಗಳು ಬಂದು ಇಲಿ ಪಾಷಾಣ ಹಾಕಿರುವ ಘಟನೆ ಆಗ್ರಾದ ಅಲಿಘಡ್ ನಲ್ಲಿ ನಡೆದಿದೆ.

    ಮದ್ರಸಾದಲ್ಲಿ ಸುಮಾರು 4000 ಕ್ಕೂ ಹೆಚ್ಚು ಮಕ್ಕಳಿದ್ದು, ಅಪರಿಚಿತರು ವಿಷ ಬೆರೆಸುವುದನ್ನು ವಿದ್ಯಾರ್ಥಿಯು ನೋಡಿ ವಾರ್ಡನ್ ಗೆ ತಿಳಿಸಿದ್ದನು. ಈ ಘಟನೆಯಿಂದ ಆಘಾತಕ್ಕೆ ಒಳಗಾದ ಸಲ್ಮಾ ಅನ್ಸಾರಿ ಮದ್ರಸಾದ ವಾರ್ಡನ್ ಮೂಲಕ ದೂರು ನೀಡಿದ್ದಾರೆ.

    ಸಲ್ಮಾ ಅನ್ಸಾರಿ ಮುಖ್ಯಸ್ಥೆಯಾಗಿರುವ ಅಲ್ ನೂರ್ ಚಾರಿಟೆಬಲ್ ಸೊಸೈಟಿ ನಗರದ ಮಧ್ಯೆ ಇದೆ. ಪೊಲೀಸರು ಐಪಿಸಿ ಸೆಕ್ಷನ್ 328 ಮತ್ತು ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಿದ್ದು, ಹಾಗೂ ನೀರಿನ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯ ನಂತರ ಸಂಸ್ಥೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದೇವೆ ಎಂದು ಅಲಿಘಡ್ ಎಸ್‍ಪಿ ರಾಜೇಶ್ ಪಾಂಡೆ ತಿಳಿಸಿದ್ದಾರೆ.

    ಹಾಸ್ಟೆಲ್‍ನಲ್ಲಿರುವ ನಮ್ಮ ವಿದ್ಯಾರ್ಥಿ ಮಹಮ್ಮದ್ ಅಫ್ಝಲ್ ನೀರು ಕುಡಿಯಲು ತೆರಳಿದ್ದ. ಆ ಸಂದರ್ಭದಲ್ಲಿ ಇಬ್ಬರು ಟ್ಯಾಂಕ್ ಗೆ ಮಾತ್ರೆ ಹಾಕುತ್ತಿರುವುದನ್ನು ನೋಡಿದ್ದಾನೆ. ಯಾಕೆ ಮಾತ್ರೆ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾಗ ಅವರು ಬಂದೂಕು ತೋರಿಸಿ ವಿದ್ಯಾರ್ಥಿಯನ್ನು ಹೆದರಿಸಿದ್ದರು ಎಂದು ವಾರ್ಡನ್ ಜುನೈದ್ ಸಿದ್ದೀಕ್ ಹೇಳಿದ್ದಾರೆ.