Tag: Madras Masala Milk

  • ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    ಮಿಳು ಜನರಿಗೆ ಅದ್ರಲ್ಲೂ ಮುಖ್ಯವಾಗಿ ಚೆನ್ನೈಯವರಿಗೆ ಮಸಾಲಾ ಪಾಲ್ ಬಗ್ಗೆ ಹೇಳಬೇಕೆಂದೇ ಇಲ್ಲ. ಹಾಲಿಗೆ ಒಣ ಬೀಜ ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ಪರಿಮಳಯುಕ್ತವಾಗಿ ಮಾಡೋ ಈ ರೆಸಿಪಿ ಅದ್ಭುತ ಸ್ವಾದ ಹೊಂದಿದೆ. ಚೆನ್ನೈನಲ್ಲಿ ಅತ್ಯಂತ ಪ್ರಸಿದ್ಧವಾಗಿರೋ ಈ ಮಸಾಲಾ ಮಿಲ್ಕ್ ಅನ್ನು ಮದ್ರಾಸ್ ಮಸಾಲಾ ಪಾಲ್ ಎಂದೂ ಕರೆಯಲಾಗುತ್ತೆ. ಸಖತ್ ರುಚಿಯಾದ ಮದ್ರಾಸ್ ಮಸಾಲಾ ಮಿಲ್ಕ್ ಮಾಡೋದು ಹೇಗೆಂದು ನಾವಿಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಹಾಲು – ಅರ್ಧ ಲೀಟರ್
    ಸಕ್ಕರೆ – ಎರಡೂವರೆ ಟೀಸ್ಪೂನ್
    ಬಾದಾಮಿ – 10
    ಲವಂಗ – 2
    ದಾಲ್ಚಿನ್ನಿ – 1 ಇಂಚು
    ಪುಡಿ ಮಾಡಿದ ಏಲಕ್ಕಿ – 2
    ಜಾತಿಕಾಯಿ ಪುಡಿ – ಚಿಟಿಕೆ (ಐಚ್ಛಿಕ)
    ಮೆಣಸಿನ ಪುಡಿ – ಚಿಟಿಕೆ
    ಕೇಸರಿ ಎಳೆ – ಕೆಲವು
    ಒಣ ಕಲ್ಲಂಗಡಿ ಬೀಜ – 2 ಟೀಸ್ಪೂನ್ ಇದನ್ನೂ ಓದಿ: ರಕ್ತಹೀನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಬಿಸಿ ಮಾಡಿ, ಅದರಲ್ಲಿ ಬಾದಾಮಿಯನ್ನು ಹಾಕಿ 1 ನಿಮಿಷ ಕುದಿಸಿಕೊಳ್ಳಿ.
    * ಬಿಸಿ ನೀರನ್ನು ಬಸಿದು, ತಕ್ಷಣವೇ ಬಾದಾಮಿಯನ್ನು ತಣ್ಣಗಿನ ನೀರಿನಲ್ಲಿ ಹಾಕಿ. ಈಗ ಬಾದಾಮಿಯ ಸಿಪ್ಪೆಯನ್ನು ಬೇರ್ಪಡಿಸಿ.
    * ಮಿಕ್ಸರ್ ಜಾರ್‌ಗೆ ಬಾದಾಮಿಗಳನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ಆಗುವವರೆಗೆ ರುಬ್ಬಿಕೊಳ್ಳಿ.
    * ಈಗ ಹಾಲನ್ನು ಬಿಸಿಗೆ ಇಟ್ಟು, ಅದಕ್ಕೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕೇಸರಿ ಎಳೆಗಳು ಮತ್ತು ಜಾಯಿಕಾಯಿ ಪುಡಿಹಾಕಿ.
    * ಹಾಲು ಕುದಿಯಲಾರಂಭಿಸಿದಾಗ ಸಕ್ಕರೆ ಹಾಗೂ ಬಾದಾಮಿ ಪೇಸ್ಟ್ ಅನ್ನು ಸೇರಿಸಿ ಮಧ್ಯಮ ಉರಿಯಲ್ಲಿ 15-20 ನಿಮಿಷಗಳ ವರೆಗೆ ಹಾಗೂ ಹಾಲಿನ ಪ್ರಮಾಣ ಅರ್ಧದಷ್ಟು ಆಗುವವರೆಗೆ ಚೆನ್ನಾಗಿ ಕುದಿಸಿ. ತಳ ಹಿಡಿಯದಂತೆ ತಪ್ಪಿಸಲು ಆಗಾಗ ಬೆರೆಸುತ್ತಿರಿ.
    * ಕೊನೆಯಲ್ಲಿ ಉರಿಯನ್ನು ಆಫ್ ಮಾಡುವುದಕ್ಕೂ ಮೊದಲು ಚಿಟಿಕೆ ಕಾಳು ಮೆಣಸಿನಪುಡಿ ಹಾಗೂ ಒಣ ಕಲ್ಲಂಗಡಿ ಬೀಜವನ್ನು ಸೇರಿಸಿ. ನಂತರ ಅದನ್ನು ಚೆನ್ನಾಗಿ ಬೆರೆಸಿ.
    * ಮಸಾಲಾ ಮಿಲ್ಕ್ ಅನ್ನು ಬಡಿಸುವುದಕ್ಕೂ ಮೊದಲು ಮಸಾಲೆ ಪದಾರ್ಥಗಳನ್ನು ಅದರಿಂದ ತೆಗೆದು ಹಾಕಿ. ನಂತರ ಬಿಸಿಬಿಸಿಯಾಗಿ ಆನಂದಿಸಿ. ಇದನ್ನೂ ಓದಿ: ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]