Tag: madras high court

  • ತಮಿಳುನಾಡು ಸರ್ಕಾರದ ಸ್ವಾಧೀನಕ್ಕಿಲ್ಲ ಅಯೋಧ್ಯಾ ಮಂಟಪ: ಹೈಕೋರ್ಟ್ ಆದೇಶ

    ತಮಿಳುನಾಡು ಸರ್ಕಾರದ ಸ್ವಾಧೀನಕ್ಕಿಲ್ಲ ಅಯೋಧ್ಯಾ ಮಂಟಪ: ಹೈಕೋರ್ಟ್ ಆದೇಶ

    ಚೆನ್ನೈ: ಅಯೋಧ್ಯಾ ಮಂಟಪವನ್ನು ಸ್ವಾಧೀನಪಡಿಸಲು ಹೊರಡಿಸಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

    ಇಲ್ಲಿನ ಅಯೋಧ್ಯಾ ಮಂಟಪದ ವ್ಯವಹಾರಗಳನ್ನು ನಿರ್ವಹಿಸುವ ಶ್ರೀರಾಮ ಸಮಾಜದ ವಿರುದ್ಧ ಹಣಕಾಸಿನ ದುರುಪಯೋಗ, ತೆರಿಗೆ ವಂಚನೆ ಮತ್ತು ಇತರ ಅಕ್ರಮಗಳು ನಡೆದಿದೆ ಎನ್ನುವ ಬಗ್ಗೆ ಅನೇಕ ದೂರುಗಳನ್ನು ನ್ಯಾಯಾಲಯ ಸ್ವೀಕರಿಸಿತ್ತು ನಂತರ, ಮಂಟಪದ ಆಡಳಿತವನ್ನು ನಿರ್ವಹಿಸಲು ತಮಿಳುನಾಡು ಸರ್ಕಾರವು ಸೂಕ್ತ ವ್ಯಕ್ತಿ ನೇಮಕ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ಸೇರಲು ನಿರಾಕರಿಸಿದ ಪ್ರಶಾಂತ್ ಕಿಶೋರ್

    AYODYA MANATAPA

    ಸದ್ಯ ನ್ಯಾಯಾಲಯವು ಈ ಆರೋಪಗಳ ಬಗ್ಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ತನಿಖೆ ನಡೆಸಲು ಪೂರ್ಣ ಸ್ವಾತಂತ್ರ್ಯ ನೀಡಿದೆ. ವಿಚಾರಣೆ ಮುಗಿಯುವವರೆಗೆ ನ್ಯಾಯಾಲಯವು ಮಂಟಪದ ಸಂಪೂರ್ಣ ನಿಯಂತ್ರಣ ಶ್ರೀರಾಮ ಸಮಾಜಕ್ಕೆ ನೀಡಿದೆ. ಈ ಬಗ್ಗೆ ಬುಧವಾರ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ

    ಏಪ್ರಿಲ್ 12 ರಂದು, ಪಶ್ಚಿಮ ಮಾಂಬಲಮ್‌ನಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಾಗ ಅಯೋಧ್ಯಾ ಮಂಟಪದ ಹೊರಗೆ ಗದ್ದಲ ಉಂಟಾಯಿತು. ಇಲಾಖೆಯ ಕ್ರಮದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಅಲ್ಲಿ ಯಾವುದೇ ಭಜನೆ ಅಥವಾ ಸತ್ಸಂಗ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಚೀನಾದಿಂದ ಟೆಸ್ಲಾ ಕಾರುಗಳನ್ನ ಆಮದು ಮಾಡಿಕೊಂಡು ಭಾರತದಲ್ಲಿ ಮಾರುವ ಹಾಗಿಲ್ಲ: ಗಡ್ಕರಿ

    AYODYA RAM TEMPL
    ಸಾಂದರ್ಭಿಕ ಚಿತ್ರ

    ಶ್ರೀರಾಮ ಸಮಾಜದ ವಿರುದ್ಧ ಹಣ ದುರುಪಯೋಗದ ಬಗ್ಗೆ ದೂರುಗಳು ಬಂದಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಸ್ಪಷ್ಟಪಡಿಸಿದ್ದರು. ಅಯೋಧ್ಯಾ ಮಂಟಪವು ಸಾರ್ವಜನಿಕ ದೇವಾಲಯವಾಗಿದೆ. ಏಕೆಂದರೆ ಇಲ್ಲಿನ ಹುಂಡಿಗೆ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಪೂಜೆ ನಡೆದರೂ ಮೂರ್ತಿ ಪ್ರತಿಷ್ಠಾಪಿಸದ ಕಾರಣ ಇದು ದೇವಸ್ಥಾನವಲ್ಲ ಎಂದು ಶ್ರೀರಾಮ ಸಮಾಜ ಪ್ರತಿಪಾದಿಸಿತ್ತು.

  • ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

    ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

    ಚೆನ್ನೈ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಬ್-ಕೇಸರಿ ಶಾಲು ವಿವಾದವು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಧಾರ್ಮಿಕ ಪ್ರಕರರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ರಾಷ್ಟ್ರವೋ ಅಥವಾ ಧರ್ಮವೋ, ಯಾವುದು ಮುಖ್ಯ ಎಂದು ಪ್ರಶ್ನಿಸಿದೆ.

    ದೇವಾಲಯಗಳಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ಭಂಡಾರಿ ಮತ್ತು ನ್ಯಾಯಮೂರ್ತಿ ಡಿ.ಭರತ ಚಕ್ರವರ್ತಿ ಅವರಿದ್ದ ಪೀಠವು, ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕೆಲವರು ಹಿಜಬ್‌ಗಾಗಿ ಹೋಗುತ್ತಾರೆ. ಮತ್ತೆ ಕೆಲವರು ಟೋಪಿಗಾಗಿ ಹೋರಾಡುತ್ತಾರೆ. ಇನ್ನೂ ಕೆಲವರು ತಮಗೆ ಅಗತ್ಯವಿರುವುದಕ್ಕಾಗಿ ಪ್ರತಿಭಟಿಸುತ್ತಾರೆ. ಇದು ಒಂದು ರಾಷ್ಟ್ರವೋ ಅಥವಾ ಧರ್ಮದಿಂದ ವಿಭಜನೆಯಾಗಿದೆಯೋ ಅಥವಾ ಬೇರೆ ಇನ್ಯಾವುದೋ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌ ಮಧ್ಯಂತರ ಆದೇಶ

    ಭಾರತ ಜಾತ್ಯತೀತ ರಾಷ್ಟ್ರ. ಪ್ರಚಲಿತ ವಿದ್ಯಾಮಾನಗಳಿಂದ ಕಂಡು ಬರುತ್ತಿರುವುದು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಭಂಡಾರಿ ಕಟು ಪದಗಳಿಂದ ಧರ್ಮದ ಹೆಸರಿನಲ್ಲಿ ದೇಶ ಒಡೆಯುವವರ ವಿರುದ್ಧ ಚಾಟಿ ಬೀಸಿದ್ದಾರೆ.

    ತಿರುಚಿರಪಳ್ಳಿ ಜಿಲ್ಲೆಯ ರಂಗರಾಜನ್ ನರಸಿಂಹನ್ ಎಂಬವರು ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಭಕ್ತರಿಗೆ ವಸ್ತ್ರ ಸಂಹಿತೆ ರೂಪಿಸಬೇಕು. ರಾಜ್ಯಾದ್ಯಂತ ಇರುವ ದೇವಾಲಯಗಳಿಗೆ ಹಿಂದೂಯೇತರರು ಕಾಲಿಡದಂತೆ ಮತ್ತು ದೇವಸ್ಥಾನಗಳ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

    ಈ ಅರ್ಜಿ ವಿಚಾರಣೆ ನಡೆಸಿದ ಪೀಠವು, ಮನವಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನೀಡುವಂತೆ ಅರ್ಜಿದಾರನನ್ನು ಪ್ರಶ್ನಿಸಿದೆ. ಆಗಮಗಳ ಯಾವ ಭಾಗವು ಪ್ಯಾಂಟ್, ಧೋತಿ ಮತ್ತು ಶರ್ಟ್‌ಗಳ ಕುರಿತು ಉಲ್ಲೇಖ ಮಾಡಿದೆ ಎಂದು ಪೀಠ ಕೇಳಿದೆ. ಅಂತಿಮವಾಗಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ವಿವರಣೆಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ಪೀಠ ಸೂಚಿಸಿದೆ.

  • ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆಯೇ ಮಹಿಳೆಯೊಂದಿಗೆ ಅನುಚಿತ ವರ್ತನೆ – ವಕೀಲ ಸಸ್ಪೆಂಡ್

    ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆಯೇ ಮಹಿಳೆಯೊಂದಿಗೆ ಅನುಚಿತ ವರ್ತನೆ – ವಕೀಲ ಸಸ್ಪೆಂಡ್

    ಚೆನ್ನೈ: ಕೋರ್ಟ್‍ನಲ್ಲಿ ನ್ಯಾಯಾಧೀಶರ ಮುಂದೆಯೇ ವಿಚಾರಣೆ ವೇಳೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವಕೀಲನನ್ನು ಮದ್ರಾಸ್ ಹೈಕೋರ್ಟ್ ಅಮಾನತುಗೊಳಿಸಿದೆ.

    ಆರ್.ಡಿ.ಸಂಥಾನ ಕೃಷ್ಣನ್ ಅಮಾನತುಗೊಂಡ ವಕೀಲ. ಅವರ ವಿರುದ್ಧ ಬಾಕಿ ಉಳಿದಿರುವ ಶಿಸ್ತು ಕ್ರಮಗಳನ್ನು ವಿಲೇವಾರಿ ಮಾಡುವವರೆಗೆ ಭಾರತದ ಎಲ್ಲಾ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಮತ್ತು ಇತರ ಪ್ರಾಧಿಕಾರಗಳಲ್ಲಿ ಅವರು ವಕೀಲರಾಗಿ ಕಾರ್ಯನಿರ್ವಹಿಸುವುದನ್ನು ತಡೆಯಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್‍ನ ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ ಬಾಗಿಲು ಮುಚ್ಚಿ ನವವಧುವಿನ ಕೊಲೆ?

    ನ್ಯಾಯಾಧೀಶರಾದ ಪಿ.ಎನ್.ಪ್ರಕಾಶ್ ಮತ್ತು ಆರ್.ಹೇಮಲತಾ ಅವರು, ಸಂಥಾನ ಕೃಷ್ಣನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬಿ-ಸಿಐಡಿ ವಿಂಗ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಡಿ.23ರಂದು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ವಕೀಲನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ತಮಿಳುನಾಡು ಬಾರ್ ಕೌನ್ಸಿಲ್‍ಗೆ ಸಲಹೆ ನೀಡಿದ್ದಾರೆ.

    ನ್ಯಾಯಾಧೀಶರು ವೀಡಿಯೋ ಕಾನ್ಫರೆನ್ಸ್‍ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದಾಗ, ಮಹಿಳೆಯೊಂದಿಗೆ ವಕೀಲ ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯ ಕಂಡುಬಂದಿದ್ದು, ಎಲ್ಲೆಡೆ ವೈರಲ್ ಆಗಿತ್ತು. ಇದನ್ನೂ ಓದಿ: ಮದುವೆ ಹಿಂದಿನ ದಿನ ಚಿನ್ನಾಭರಣ ದೋಚಿ ಪ್ರಿಯಕರನೊಂದಿಗೆ ಯುವತಿ ಜೂಟ್

  • ಪೊಲೀಸರ ಟಾರ್ಚರ್‌ನಿಂದ ಮಗನ ಸಾವು – ಮರು ಮರಣೋತ್ತರ ಪರೀಕ್ಷೆಗೆ ಆದೇಶ

    ಪೊಲೀಸರ ಟಾರ್ಚರ್‌ನಿಂದ ಮಗನ ಸಾವು – ಮರು ಮರಣೋತ್ತರ ಪರೀಕ್ಷೆಗೆ ಆದೇಶ

    – ಪೊಲೀಸರ ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದ ತಾಯಿ
    – ಬಿಡುಗಡೆಯಾದ ಮರು ದಿನವೇ ಸಾವನ್ನಪ್ಪಿದ್ದ ವಿದ್ಯಾರ್ಥಿ

    ಚೆನ್ನೈ: ಪೊಲೀಸ್ ಟಾರ್ಚರ್‍ನಿಂದ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಮಿಳುನಾಡು ವಿದ್ಯಾರ್ಥಿಯ ಮೃತದೇಹವನ್ನು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

    ರಾಮನಾಥಪುರ ಜಿಲ್ಲೆ ಮುದುಕಲತ್ತೂರು ಸಮೀಪದ ನೀರ್ ಕೊಜಿಯೆಂತಲ್ ಗ್ರಾಮದ ಕಾಲೇಜು ವಿದ್ಯಾರ್ಥಿ ಎಲ್.ಮಣಿಕಂದನ್(21)ನನ್ನು ವಾಹನ ತಪಾಸಣೆ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದರು.

    POLICE JEEP

    ಶನಿವಾರ ಸಂಜೆ ಪೊಲೀಸರು ಕಸ್ಟಡಿಯಿಂದ ಬಿಡುಗಡೆ ಮಾಡಿದ್ದರು. ಆದರೆ ಬಿಡುಗಡೆ ಮಾಡಿದ ಮರುದಿನವೇ ಅಂದರೆ ಭಾನುವಾರ ಆತ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಆತನ ಸಾವು ಸಹಜವಲ್ಲ ಎಂದು ತಾಯಿ ರಾಮಲಕ್ಷ್ಮಿ ಆರೋಪಿಸಿ ನ್ಯಾಯಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ: ಸಿದ್ದರಾಮಯ್ಯ

    ನನ್ನ ಮಗ ತನ್ನ ಬೈಕ್‍ನಲ್ಲಿ ವಾಹನ ಚೆಕ್‍ಪೋಸ್ಟ್‍ನಿಂದ ಪರಾರಿಯಾಗಲು ಯತ್ನಿಸಿದ್ದ. ಈ ಕಾರಣಕ್ಕೆ ಪೊಲೀಸರು ವಿಚಾರಣೆ ಮಾಡುವುದಾಗಿ ಠಾಣೆಗೆ ಕರೆದೊಯ್ದಿದ್ದರು. ನಂತರ ನಮಗೆ ಮಣಿಕಂದನ್ ಅನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ನಾವು ಮಣಿಕಂದನ್ ನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ನಿಗೂಢವಾಗಿ ಅವನು ಸಾವನ್ನಪ್ಪಿದ್ದಾನೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

    ನನ್ನ ಮಗನಿಗೆ ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಮಗನ ಮರು ಮರಣೋತ್ತರ ಪರೀಕ್ಷೆ ನಡೆಸಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿಕೊಂಡಿದ್ದರು.

    ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್, ರಾಮನಾಥಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಣಿಕಂದನ್ ಪಾರ್ಥಿವ ಶರೀರದ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಆದೇಶಿಸಿದರು. ಅಷ್ಟೇ ಅಲ್ಲದೇ ಮರಣೋತ್ತರ ಪರೀಕ್ಷೆಯ ಎಲ್ಲ ಪ್ರಕ್ರಿಯೆಯ ವಿಡಿಯೋವನ್ನು ಸೆರೆ ಹಿಡಿಯುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

    ಏನಿದು ಘಟನೆ?
    ಶನಿವಾರ ಪರಮಕುಡಿ-ಕೀಳತೂವಲ್ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಮಣಿಕಂದನ್ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ. ಅವರು ನಿಲ್ಲಿಸದ ಕಾರಣ, ಅಧಿಕಾರಿಯೊಬ್ಬರು ಆತನ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಸಂಜೆ ಆತನನ್ನು ಬಿಡುಗಡೆ ಮಾಡಿದ್ದರು. ಪೊಲೀಸ್ ಕಸ್ಟಡಿಯಿಂದ ಬಂದ ಮರುದಿನವೇ ಮಣಿಕಂದನ್ ಮೃತಪಟ್ಟಿದ್ದು ಅನುಮಾನಕ್ಕೆ ಕಾರಣವಾಗಿದೆ.

  • ಜಯಲಲಿತಾ ನಿವಾಸ ಸ್ವಾಧೀನ- ತಮಿಳುನಾಡು ಸರ್ಕಾರದ ನಿಲುವಿಗೆ ಹೈಕೋರ್ಟ್ ತಡೆ

    ಜಯಲಲಿತಾ ನಿವಾಸ ಸ್ವಾಧೀನ- ತಮಿಳುನಾಡು ಸರ್ಕಾರದ ನಿಲುವಿಗೆ ಹೈಕೋರ್ಟ್ ತಡೆ

    ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ “ಪೋಯಸ್ ಗಾರ್ಡನ್” ನಿವಾಸವನ್ನು ತಮಿಳುನಾಡು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

    ಜಯಲಲಿತಾ ಅವರ ನಿವಾಸವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಸೊಸೆ ದೀಪಾ ಮತ್ತು ಸೋದರಳಿಯ ಜೆ.ದೀಪಕ್ ಅವರು ಪ್ರಶ್ನಿಸಿದ್ದರು. ಇದನ್ನೂ ಓದಿ: ಸಿಂಹಕ್ಕೆ ಆಹಾರವಾಗುತ್ತಿದ್ದ ಯುವಕ: ತಪ್ಪಿತು ಭಾರೀ ದುರಂತ

    ಜಯಲಲಿತಾ ಅವರ ವೇದ ನಿಲಯಂ ಅನ್ನು ಸ್ಮಾರಕವಾಗಿ ರೂಪಿಸುವ ಪ್ರಸ್ತಾವನೆಯನ್ನು ಎಐಎಡಿಎಂಕೆ ಸರ್ಕಾರವು ಈ ಹಿಂದೆ ಮಂಡಿಸಿತ್ತು. ಇದು ತಮಿಳುನಾಡಿನ ಜನತೆ ಹಾಗೂ ಎಐಎಡಿಎಂ ಪಕ್ಷದ ಕಾರ್ಯಕರ್ತರೂ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಬಿಂಬಿಸಲಾಗಿದೆ. ಇದನ್ನೂ ಓದಿ: ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ ಪೊಲೀಸ್ ಭದ್ರತೆ ವ್ಯವಸ್ಥೆ

    ಕಳೆದ ವರ್ಷ ತಮಿಳುನಾಡು ಸರ್ಕಾರವು 0.55 ವಿಸ್ತಾರದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು 67.09 ಕೋಟಿ ರೂ. ಅನ್ನು ಠೇವಣಿ ಇಟ್ಟಿತ್ತು. ಇದರ ವಿರುದ್ಧ ಜಯಲಲಿತಾ ಕುಟುಂಬಸ್ಥರು ಕಾನೂನು ಹೋರಾಟ ಆರಂಭಿಸಿದ್ದರು.

  • 48 ಗಂಟೆಯೊಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸಿ – ಧನುಷ್‍ಗೆ ಹೈಕೋರ್ಟ್ ಆದೇಶ

    48 ಗಂಟೆಯೊಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸಿ – ಧನುಷ್‍ಗೆ ಹೈಕೋರ್ಟ್ ಆದೇಶ

    ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅಳಿಯ ನಟ ಧನುಷ್‍ಗೆ 48 ಗಂಟೆಗಳ ಒಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶಿಸಿದೆ.

    ನಟ ದಳಪತಿ ವಿಜಯ್ ನಂತರ ಇದೀಗ ಧನುಷ್‍ಗೆ ಐಷಾರಾಮಿ ಕಾರುಗಳ ತೆರಿಗೆ ಪಾವತಿಸುವಂತೆ ಕೋರ್ಟ್ ಸೂಚಿಸಿದೆ. ಧನುಷ್‍ರವರು ಇಂಗ್ಲೆಂಡಿನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಆಮದು ಮಾಡಿಕೊಂಡಿದ್ದರು. ಇದೀಗ ಈ ಕಾರಿಗೆ ಸಂಬಂಧಿಸಿದಂತೆ ಬಾಕಿ ಇರುವ 30,30,757(30.3 ಲಕ್ಷ) ರೂ. ತೆರಿಗೆ ಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ತಿಳಿಸಿದೆ. ಈ ಮುನ್ನ 2018ರಲ್ಲಿ ಧನುಷ್ ರಿಟ್ ಅರ್ಜಿ ಸಲ್ಲಿಸಿದ್ದರು.

    ಇದೀಗ ಸೋಮವಾರ ತೆರಿಗೆ ಪಾವತಿಸಲು ತಯಾರಾಗಿದ್ದು, 2015ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹಿಂಪಡೆಯುವುದಾಗಿ ಧನುಷ್ ಪರ ವಕೀಲರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 2.15 ಕೋಟಿ ಹಣ ನೀಡಿ ಧನುಷ್ ಕಾರು ಖರೀದಿಸಿದ್ದು, ಅಬಕಾರಿ ಸುಂಕ 2.69 ಕೋಟಿ ರೂ. ಪಾವತಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಪ್ರವೇಶ ತೆರಿಗೆ ಪಾವತಿಸುವಂತಿಲ್ಲ ಎಂದು ಧನುಷ್ ಪರ ವಕೀಲರು ವಾದಿಸಿದ್ದಾರೆ. ಈ ವೇಳೆ ನ್ಯಾಯಾಧೀಶ ಸುಬ್ರಮಣಿಯನ್, ಅಫಿಡವಿಟ್‍ನಲ್ಲಿ ಧನುಷ್ ಒಬ್ಬ ನಟ ಎಂದು ನಮೂದಿಸಿಲ್ಲ. ಧನುಷ್‍ಗೆ ಬೇಕಾದ ರೀತಿಯಲ್ಲಿ ಅಫಿಡೆಟ್ ತಿದ್ದಲು ಸಹಕರಿಸಿದ ಕೋರ್ಟ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದನ್ನೂ ಓದಿ:ಬಿಕಿನಿ ತೊಟ್ಟು ಫೋಟೋಗೆ ಹಾಟ್ ಫೋಸ್ – ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ

  • ಕೊರೊನಾ ಭೀತಿ ನಡುವೆಯೂ ಸಿಎಎ, ಎನ್​ಆರ್​ಸಿ ವಿರುದ್ಧ ಪ್ರತಿಭಟನೆ

    ಕೊರೊನಾ ಭೀತಿ ನಡುವೆಯೂ ಸಿಎಎ, ಎನ್​ಆರ್​ಸಿ ವಿರುದ್ಧ ಪ್ರತಿಭಟನೆ

    – ಮದ್ರಾಸ್ ಕೋರ್ಟ್ ಮುಂದೆ ಜನ ಜಂಗುಳಿ

    ಚೆನ್ನೈ: ಕೊರೊನಾ ಭೀತಿಗೆ ಈಡಿ ಜಗತ್ತೆ ಬೆಚ್ಚಿಬಿದ್ದಿದೆ. ಹೀಗಾಗಿ ಒಂದು ಜಾಗದಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿನ ಚೆನ್ನೈನಲ್ಲಿ ಸಾವಿರಾರು ಜನರು ಸಿಎಎ, ಎನ್​ಆರ್​ಸಿ ಮತ್ತು ಎನ್‍ಪಿಆರ್ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

    ಮದ್ರಾಸ್ ಹೈಕೋರ್ಟ್ ಬಳಿ ತಮಿಳುನಾಡು ಥೌಹೀದ್ ಜಮಾತ್ ಸದಸ್ಯರು ಸೇರಿದಂತೆ ಅನೇಕ ಜನರು ಸಿಎಎ, ಎನ್​ಆರ್​ಸಿ ಮತ್ತು ಎನ್‍ಪಿಆರ್ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆ ಹಾಗೂ ವಿರೋಧ ವ್ಯಕ್ತವಾಗಿದೆ.

    ಮಹಾಮಾರಿ ಕೊರೊನಾ ವೈರಸ್‍ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಅದಕ್ಕೆ ಪರಿಹಾರ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಅಗತ್ಯವಿತ್ತೇ? ಇದೊಂದು ಉದ್ದೇಶಪೂರ್ವಕ ಹಾಗೂ ಪ್ರೇರಣೆಯಿಂದ ನಡೆಯುತ್ತಿರುವ ಪ್ರತಿಭಟನೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    ಬುಧವಾರ ಮಧ್ಯಾಹ್ನ 2 ಗಂಟೆವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 147 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 14 ಜನರು ಚೇತರಿಸಿಕೊಂಡರೆ ಮೂರು ಮೃತಪಟ್ಟಿದ್ದಾರೆ. ಉಳಿದಂತೆ 130 ಜನರಿಗೆ ಚಿಕಿತ್ಸೆ ಕೊಡಲಾಗುತ್ತದೆ. ತಮಿಳುನಾಡಿನಲ್ಲಿ ಓರ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

  • ಐಪಿಎಲ್ ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟಿಗೆ ಅರ್ಜಿ

    ಐಪಿಎಲ್ ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟಿಗೆ ಅರ್ಜಿ

    ಚೆನ್ನೈ: ಕೊರೊನಾ ವೈರನ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಕ್ಕಟ್ಟಿಗೆ ಸಿಲುಕಿದೆ. ಐಪಿಎಲ್ ರದ್ದುಗೊಳಿಸುವಂತೆ ಕೋರಿ ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಬಿಸಿಸಿಐ ಐಪಿಎಲ್ ನಡೆಸದಂತೆ ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಬೇಕು ಎಂದು ಜಿ.ಅಲೆಕ್ಸ್ ಬೆಂಜಿಗರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಪಂದ್ಯಾವಳಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಇತ್ತ ಮಿಜೋರಾಂನ ರಾಜಧಾನಿ ಐಜ್ವಾಲ್‍ನಲ್ಲಿ ನಡೆಯಲಿರುವ ಹೀರೋ ಸಂತೋಷ್ ಟ್ರೋಫಿಯ 2019-20ರ ಅಂತಿಮ ಸುತ್ತನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಐಎಫ್‍ಎಫ್) ಮುಂದೂಡಿದೆ. ಏಪ್ರಿಲ್ 14ರಿಂದ27 ರವರೆಗೆ ಪಂದ್ಯ ನಡೆಯಬೇಕಿತ್ತು. ಫುಟ್ಬಾಲ್ ಟೂರ್ನಿ ಬೆನ್ನಲ್ಲೇ ಐಪಿಎಲ್‍ಗೂ ಈ ಬಿಸಿ ತಟ್ಟಿದೆ.

    ಅರ್ಜಿಯಲ್ಲಿ ಏನಿದೆ?:
    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ವೆಬ್‍ಸೈಟ್‍ನ ಪ್ರಕಾರ ಕೊರೊನಾ ವೈರಸ್‍ಗೆ ಇನ್ನೂ ಯಾವುದೇ ಔಷಧಿಯನ್ನು ಸಂಶೋಧಿಸಿಲ್ಲ. ಜೊತೆಗೆ ಅದನ್ನು ತಡೆಯಲು ಯಾವುದೇ ಮಾರ್ಗಗಳಿಲ್ಲ. ಇದು ವಿಶ್ವಾದ್ಯಂತ ವೇಗವಾಗಿ ಹರಡುತ್ತಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಇಟಲಿ ಫುಟ್ಬಾಲ್ ಫೆಡರೇಶನ್ ಲೀಗ್‍ಗೂ ಸಹ ಕೊರೊನಾ ವೈರಸ್ ಬಿಸಿ ತಟ್ಟಿದೆ. ಹೀಗಾಗಿ ಫುಟ್ಬಾಲ್ ಟೂರ್ನಿಯನ್ನು ಏಪ್ರಿಲ್‍ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಐಪಿಎಲ್‍ಗೆ ಸಂಬಂಧಿಸಿದಂತೆ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮನವಿ ಮಾಡಿಕೊಂಡಿದ್ದಾರೆ.

    ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಎಂ.ಎಂ.ಸುಂದ್ರೇಶ್ ಹಾಗೂ ಕೃಷ್ಣನ್ ರಾಮಸ್ವಾಮಿ ಅವರ ನೇತೃತ್ವದ ನ್ಯಾಯಪೀಠವು ಮಾರ್ಚ್ 12ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಭಾರತದಲ್ಲಿ ಬುಧವಾರದವರೆಗೆ ಒಟ್ಟು 61 ಕೊರೊನ ವೈರಸ್ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಮಂಗಳವಾರ ದೇಶಾದ್ಯಂತ 14 ಹೊಸ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಕೇರಳ 8 ಪ್ರಕರಣ, ಪುಣೆ ಹಾಗೂ ಕರ್ನಾಟಕದಲ್ಲಿ ತಲಾ ಮೂರು ಪ್ರಕರಣಗಳು ವರದಿಯಾಗಿವೆ.

    ಜಿ.ಅಲೆಕ್ಸ್ ಬೆಂಜಿಗರ್ ಅವರು ಈ ಹಿಂದೆ ಐಪಿಎಲ್ ನಡೆಸದಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅಧಿಕಾರಿಗಳಿಂದ ಅವರಿಗೆ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಹೀಗಾಗಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗಷ್ಟೇ ಮಾತನಾಡಿ, ಐಪಿಎಲ್ ರದ್ದು ಅಥವಾ ಮುಂದೂಡುವುದನ್ನು ತಳ್ಳಿಹಾಕಿದ್ದಾರೆ. ಕೊರೊನಾ ವೈರಸ್ ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

  • ಆಡಳಿತದಲ್ಲಿ ಹಸ್ತಕ್ಷೇಪ ಸಲ್ಲ: ಕಿರಣ್ ಬೇಡಿಗೆ ಮದ್ರಾಸ್ ಹೈಕೋರ್ಟ್ ಆದೇಶ

    ಆಡಳಿತದಲ್ಲಿ ಹಸ್ತಕ್ಷೇಪ ಸಲ್ಲ: ಕಿರಣ್ ಬೇಡಿಗೆ ಮದ್ರಾಸ್ ಹೈಕೋರ್ಟ್ ಆದೇಶ

    ಪುದುಚೇರಿ: ಪುದುಚೇರಿ ಸರ್ಕಾರದ ದೈನಂದಿನ ಚಟುವಟಿಕಗಳಲ್ಲಿ ಮಧ್ಯ ಪ್ರವೇಶ ಮಾಡುವ ಅಧಿಕಾರ ರಾಜ್ಯಪಾಲರಾದ ಕಿರಣ್ ಬೇಡಿ ಅವರಿಗೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಇಂದು ಮಹತ್ವದ ಆದೇಶ ಪ್ರಕಟಿಸಿದೆ.

    ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹಾಗೂ ಅಲ್ಲಿನ ರಾಜ್ಯಪಾಲರಾದ ಕಿರಣ್ ಬೇಡಿ ಮಧ್ಯೆ ಉಂಟಾಗಿದ್ದ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ತೆರೆ ಎಳೆದಿದೆ. ಇದನ್ನೂ ಓದಿ: ಕಿರಣ್ ಬೇಡಿ ನಿವಾಸದ ಎದುರೇ ಮಲಗಿದ ಪುದುಚೇರಿ ಸಿಎಂ

    ಸಿಎಂ ವಿ.ನಾರಾಯಣ ಸ್ವಾಮಿ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬೇಡಿ. ಸರ್ಕಾರದ ಯಾವುದೇ ರೀತಿಯ ದಾಖಲೆಗಳನ್ನು ರಾಜ್ಯಪಾಲರು ಕೇಳುವ ಅಧಿಕಾರ ಹೊಂದಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿ.ನಾರಾಯಣ ಸ್ವಾಮಿ ಅವರು, ಮದ್ರಾಸ್ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಸಂವಿಧಾನ ಉಳಿಸಲು ಸರ್ಕಾರ ನಡೆಸಿದ ಹೋರಾಟಕ್ಕೆ ಸಿಕ್ಕ ಜಯ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಪುದುಚೇರಿ ರಾಜ್ಯಪಾಲರಾದ ಕಿರಣ್ ಬೇಡಿ ಅವರು ಸರ್ಕಾರದ ಕಾರ್ಯವೈಕರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಿಎಂ ವಿ.ನಾರಾಯಣ ಸ್ವಾಮಿ ಆರೋಪಿಸಿದ್ದರು. ಬಳಿಕ ನಾರಾಯಣಸ್ವಾಮಿ ಅವರು ಪುದುಚೇರಿ ರಾಜಭವನದ ಮುಂದೆ ತಮ್ಮ ಸಚಿವರು, ಶಾಸಕರೊಂದಿಗೆ ಪ್ರತಿಭಟನೆ ಕೂಡ ನಡೆಸಿದ್ದರು.

    ಕಿರಣ್ ಬೇಡಿ ಅವರು ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಲಕ್ಷ್ಮೀ ನಾರಾಯಣನ್ 2017ರಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

  • ಟೋಲ್‍ನಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರಿಗೆ ಪ್ರತ್ಯೇಕವಾದ ಲೇನ್ ನಿರ್ಮಿಸಿ: ಮದ್ರಾಸ್ ಹೈಕೋರ್ಟ್

    ಟೋಲ್‍ನಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರಿಗೆ ಪ್ರತ್ಯೇಕವಾದ ಲೇನ್ ನಿರ್ಮಿಸಿ: ಮದ್ರಾಸ್ ಹೈಕೋರ್ಟ್

    ಚೆನ್ನೈ: ನ್ಯಾಯಾಧೀಶರು ಸೇರಿದಂತೆ ಗಣ್ಯರು ಹಾಗೂ ಅತೀ ಗಣ್ಯರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತ್ಯೇಕ ಟೋಲ್ ಬೂತ್‍ಗಳನ್ನು ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಟೋಲ್ ಬಳಿ ನ್ಯಾಯಾಧೀಶರು ಹಾಗೂ ಗಣ್ಯ ವ್ಯಕ್ತಿಗಳು ಗಂಟೆಗಟ್ಟಲೇ ಕಾಯುವುದಲ್ಲದೇ, ತಮ್ಮ ದಾಖಲೆಗಳನ್ನು ತೋರಿಸುವುದರಿಂದ ಮುಜುಗರಕ್ಕಿಡಾಗುತ್ತದೆ. ಆದ್ದರಿಂದ ಎಲ್ಲಾ ನ್ಯಾಯಾಧೀಶರು ಹಾಗೂ ಗಣ್ಯ ವ್ಯಕ್ತಿಗಳಿಗಾಗಿಯೇ ಪ್ರತ್ಯೇಕವಾದ ಟೋಲ್ ಪ್ಲಾಜಾಗಳನ್ನು ನಿರ್ಮಿಸುವಂತೆ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಹುಲುವಾಡಿ ಜಿ ರಮೇಶ್ ಮತ್ತು ಎಂ.ವಿ.ಮುರಳೀಧರ ಅವರ ದ್ವಿಸದಸ್ಯ ಪೀಠ ಆದೇಶಿಸಿದೆ.

    ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರಕ್ಕೆ ನೋಟಿಸ್ ನೀಡುವುದಾಗಿಯೂ ಪೀಠ ತಿಳಿಸಿದೆ.

    ಈ ಆದೇಶವನ್ನು ದೇಶಾದ್ಯಂತ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.

    ಮದ್ರಾಸ್ ಹೈಕೋರ್ಟ್ ಆದೇಶವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವ ರೀತಿ ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv