Tag: madras court

  • ಮದ್ರಾಸ್ ಹೈಕೋರ್ಟ್‍ನಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಸಾವು

    ಮದ್ರಾಸ್ ಹೈಕೋರ್ಟ್‍ನಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಸಾವು

    ಚೆನ್ನೈ: ತನ್ನ ಮಗನಿಗಾಗಿ ಜಾತಿ ಪ್ರಮಾಣ ಪತ್ರವನ್ನು (Community Certificate) ಪಡೆಯಲು ಹೆಣಗಾಡುತ್ತಿದ್ದ ವ್ಯಕ್ತಿಯೋರ್ವ ಮದ್ರಾಸ್ ಹೈಕೋರ್ಟ್‍ನಲ್ಲಿ (Madras High Court) ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾನೆ.

    ಮೃತ ವ್ಯಕ್ತಿಯನ್ನು ತಮಿಳುನಾಡಿನ (Tamil Nadu) ಕಾಂಚೀಪುರಂನ (Kancheepuram) ವೇಲ್ಮುರುಗನ್ (49) ಎಂದು ಗುರುತಿಸಲಾಗಿದೆ. ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರುವ ‘ಮಲೈಕುರವರ್’ ಎಂಬ ಜಾತಿ ಪ್ರಮಾಣಪತ್ರವನ್ನು ಪಡೆಯಲು ವೇಲ್ಮುರುಗನ್ ಓಡಾಡುತ್ತಿದ್ದರು. ಆದರೆ ಜಾತಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗದ ಹಿನ್ನೆಲೆ ವೇಲ್ಮುರುಗನ್ ಮಂಗಳವಾರ ಆತ್ಮಹತ್ಯೆಗೆ ಶರಣಾದರು. ಶೇ.95ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೋರಿಸ್‍ಗಾಗಿ ಭಾರತದ ಮೊದಲ ಅಭಯಾರಣ್ಯ – ತಮಿಳುನಾಡು ಸರ್ಕಾರದಿಂದ ಆದೇಶ

    ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಸ್ವೀಕರಿಸಿದ ನ್ಯಾಯಮೂರ್ತಿ ಸುಬ್ರಮಣಿಯನ್ ಅವರು, ಜಾತಿ ಪ್ರಮಾಣಪತ್ರಗಳನ್ನು ನೀಡುವಲ್ಲಿ ಹಲವಾರು ಅಕ್ರಮಗಳು ನಡೆದಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಮೃತ ವ್ಯಕ್ತಿ ಮತ್ತು ಅವರ ಪುತ್ರನಿಗೆ ಜಾತಿ ಪ್ರಮಾಣಪತ್ರ ನೀಡುವಲ್ಲಿ ಹಕ್ಕು ಉಲ್ಲಂಘನೆಯಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ. ಈ ಘಟನೆಯನ್ನು ಸುಮ್ಮನೆ ಬಿಡಲಾಗುವುದಿಲ್ಲ. ಏಕೆಂದರೆ ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರೋಪಿ ಚೇಸಿಂಗ್, ಗುಂಡೇಟಿಗೆ ಮಹಿಳೆ ಸಾವು – ಐವರು ಪೊಲೀಸರಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ರಾಜೀವ್ ಗಾಂಧಿ ಹತ್ಯೆಗೈದ ನಳಿನಿಗೆ 30 ದಿನ ಪೆರೋಲ್ – ಜೈಲಿನಿಂದ ಬಿಡುಗಡೆ

    ರಾಜೀವ್ ಗಾಂಧಿ ಹತ್ಯೆಗೈದ ನಳಿನಿಗೆ 30 ದಿನ ಪೆರೋಲ್ – ಜೈಲಿನಿಂದ ಬಿಡುಗಡೆ

    ಚೆನ್ನೈ: ಮಗಳ ಮದುವೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತೈಗೈದ ಪ್ರಕರಣದಲ್ಲಿ ಜೀವಾವಾಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‍ಗೆ 30 ದಿನಗಳ ಪೆರೋಲ್ ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾಳೆ.

    ಕಳೆದ 28 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ನಳಿನಿ ಶ್ರೀಹರನ್‍ಗೆ ಇದೇ ಮೊದಲ ಬಾರಿಗೆ ಮದ್ರಾಸ್ ಹೈಕೋರ್ಟ್ ದೀರ್ಘ ಕಾಲದ ಪೆರೋಲ್ ನೀಡಿದೆ. ಮಗಳ ಮದುವೆಯ ಸಿದ್ಧತೆಗಾಗಿ 6 ತಿಂಗಳು ಪೆರೋಲ್ ನೀಡುವಂತೆ ನಳಿನಿ ಮನವಿ ಮಾಡಿದ್ದಳು. ಆದರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ ಜುಲೈ 5 ರಂದು ಕೋರ್ಟ್ ಒಂದು ತಿಂಗಳು ಮಾತ್ರ ಪೆರೋಲ್ ಮಂಜೂರು ಮಾಡಿದೆ.

    ಪೆರೋಲ್ ಮಂಜೂರು ಮಾಡುವಾಗ, ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಮತ್ತು ಯಾವುದೇ ಮಾಧ್ಯಮಗಳನ್ನು ಭೇಟಿ ಮಾಡಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ.

    28 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿಯನ್ನು ಇದೇ ಮೊದಲ ಬಾರಿಗೆ ದೀರ್ಘಾವದಿ ಪೆರೋಲ್ ಮೇಲೆ ಹೊರಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು 2016ರಲ್ಲಿ ಆಕೆಯ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿತ್ತು.

    ವೆಲ್ಲೂರು ಜೈಲಿನಿಂದ ಹೊರಬಂದ ನಳಿನಿಯನ್ನು ಆಕೆಯ ಸಂಬಂಧಿಕರು ಬಂದು ಕರೆದುಕೊಂಡು ಹೋಗಿದ್ದಾರೆ. ನಳಿನಿಯ ಮಗಳು ವೆಲ್ಲೂರಿನ ಜೈಲಿನಲ್ಲೇ ಹುಟ್ಟಿದ್ದು, ಆಕೆ ಇಂಗ್ಲೆಂಡಿನಲ್ಲಿ ಬೆಳೆದು ವೈದ್ಯಶಾಸ್ತ್ರ ಓದಿದ್ದಾಳೆ.

    ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಯನ್ನು 1991 ರಲ್ಲಿ ಬಂಧಿಸಲಾಯಿತು. ಕೋರ್ಟ್ ಈಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದಾದ ನಂತರ ಮರಣದಂಡನೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. 1991 ಮೇ 21 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರು ಬಳಿ ಆತ್ಮಹುತಿ ಬಾಂಬ್ ದಾಳಿ ಮೂಲಕ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 7 ಮಂದಿ ದೋಷಿಗಳು ಜೀವಾವಾದಿ ಶಿಕ್ಷೆ ಅನುಭವಿಸುತ್ತಿದ್ದಾರೆ.

  • ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಸೂರ್ಯ ಸೇರಿ ತಮಿಳಿನ 8 ಮಂದಿ ನಟರ ವಿರುದ್ಧ ಅರೆಸ್ಟ್ ವಾರೆಂಟ್

    ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಸೂರ್ಯ ಸೇರಿ ತಮಿಳಿನ 8 ಮಂದಿ ನಟರ ವಿರುದ್ಧ ಅರೆಸ್ಟ್ ವಾರೆಂಟ್

    ಚೆನ್ನೈ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳಿನ ಖ್ಯಾತ ನಟರ ವಿರುದ್ಧ ಊಟಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

    ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ಸೂರ್ಯ, ಶರತ್ ಕುಮಾರ್, ಚೆರಣ್, ವಿಜಯಕುಮಾರ್, ವಿವೇಕ್, ಅರುಣ್, ವಿಜಯ್ ಹಾಗೂ ಶ್ರೀಪ್ರಿಯಾ ಮೊದಲಾದವರ ವಿರುದ್ಧ ಕೋರ್ಟ್ ಇಂದು ಅರೆಸ್ಟ್ ವಾರಂಟ್ ಜಾರಿ ಮಾಡಿದೆ.

    ಏನಿದು ಪ್ರಕರಣ?: 2009ರ ಅಕ್ಟೋಬರ್ 7ರಂದು ಚೆನ್ನೈನಲ್ಲಿ ನಡೆದಿದ್ದ ದಕ್ಷಿಣ ಭಾರತ ಸಿನಿಮಾ ನಟರ ಸಂಘದ ಸಭೆಯ ವೇಳೆ ತಮಿಳು ಪತ್ರಿಕೆ ದೈನಿಕದ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಪತ್ರಿಕೆ ತಮಿಳು ಚಿತ್ರರಂಗದ ನಟ-ನಟಿಯರ ಮಾನಹಾನಿ ಮಾಡುವಂತಹ ಲೇಖನಗಳನ್ನು ಪ್ರಕಟಿಸಿತ್ತದೆ ಅಂತಾ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕುರಿತು ಪತ್ರಕರ್ತ ಎಮ್ ರೊಜಾರಿಯೋ ಮರಿಯಾ ಸುಸೈ ಅವರು, ಚಿತ್ರ ನಟರ ಬಗ್ಗೆ ಬರೆದಿದ್ದಕ್ಕೆ ನನ್ನ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಅಂತಾ ಆರೋಪಿಸಿ ಊಟಿ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣದ ಸಂಬಂಧ ನಟ ಸೂರ್ಯ, ಸತ್ಯರಾಜ್, ಶರತ್‍ಕುಮಾರ್, ಸುಪ್ರಿಯಾ, ವಿಜಯ್ ಕುಮಾರ್, ಅರುಣ್ ವಿಜಯ್, ವಿವೇಕ್ ಹಾಗೂ ಚೇರನ್‍ಗೆ ವಿಚಾರಣೆಗೆ ಹಾಜರಾಗುವಂತೆ 2011ರ ಡಿಸೆಂಬರ್ 19ರಂದು ಕೋರ್ಟ್ ಸೂಚಿಸಿತ್ತು. ಆದ್ರೆ ನಟರು ಕೋರ್ಟ್ ಗೆ ಹಾಜರಾಗಲು ನಿರಾಕರಿಸಿದ್ದರು. ಅಲ್ಲದೇ ಕೋರ್ಟ್‍ಗೆ ಹಾಜರಾಗದೇ ನೇರವಾಗಿ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ಕೇಳಿ ಮದ್ರಾಸ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು.

    ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಮತ್ತೆ 2017ರ ಮೇ 15ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಆ ಬಾರಿಯೂ ವಿಚಾರಣೆಗೆ ಹಾಜರಾಗದ ತಮಿಳು ನಟರ ವಿರುದ್ಧ ಇದೀಗ ಊಟಿಯ ಮ್ಯಾಜಿಸ್ಟ್ರೇಟ್ ನ್ಯಾ. ಸೆಂತಿಲ್ ಕುಮಾರ್ ರಾಜವೇಲ್ ಅವರು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ.