Tag: Madras

  • ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್

    ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್

    ಲಕ್ನೋ: ಮುಜಾಫರ್‌ನಗರದಲ್ಲಿ (Muzaffarnagar) ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳು (Madras) ದಿನಕ್ಕೆ 10,000 ರೂ ದಂಡ (Penalty) ತೆರಬೇಕಾಗುತ್ತದೆ ಎಂದು ಉತ್ತರ ಪ್ರದೇಶದ (Uttar Pradesh) ಮೂಲ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

    ಸರಿಯಾದ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ 10ಕ್ಕೂ ಹೆಚ್ಚು ಮದರಸಾಗಳಿಗೆ ಮೂಲ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ನೋಟಿಸ್ ಜಾರಿ ಮಾಡಿದ್ದು, ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಸುಮಾರು 24,000 ಮದರಸಾಗಳಿವೆ. ಅವುಗಳಲ್ಲಿ 16,000 ಮದರಸಾಗಳು ಮಾನ್ಯತೆ ಪಡೆದಿದ್ದು, 8,000 ಮದರಸಾಗಳು ಮಾನ್ಯತೆ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮದರಸಾದಲ್ಲಿ 10 ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ – ಶಿಕ್ಷಕ ಅರೆಸ್ಟ್

    ನೋಟಿಸ್ (Notice) ನೀಡಿರುವ ಮದರಸಾಗಳಿಗೆ ಆದೇಶ ಬಂದ ಮೂರು ದಿನಗಳೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮದರಸಾಗಳು ಮಾನ್ಯತೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ದಿನಕ್ಕೆ 10,000 ರೂ. ದಂಡ ವಿಧಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ಕೆಲವರ ಆಟ ನಡೆಯಲ್ಲ: ಮೋಹನ್ ಭಾಗವತ್

    ಇಲ್ಲಿ ನಡೆಯುತ್ತಿರುವ ನೂರಕ್ಕೂ ಹೆಚ್ಚು ಮದರಸಾಗಳು ಜಿಲ್ಲೆಯಲ್ಲಿ ನೋಂದಣಿ ಅಥವಾ ಮಾನ್ಯತೆ ಹೊಂದಿಲ್ಲ ಮತ್ತು ನಿಯಮಾವಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ತಮ್ಮ ಕಚೇರಿಗೆ ಮಾಹಿತಿ ನೀಡಿದೆ ಎಂದು ಮುಜಾಫರ್‌ನಗರ ಮೂಲ ಶಿಕ್ಷಾ ಅಧಿಕಾರಿ (BSA) ಶುಭಂ ಶುಕ್ಲಾ ಹೇಳಿದರು. ಇದನ್ನೂ ಓದಿ: ಮಣಿಪುರದಲ್ಲಿ ಓರ್ವ ಉಗ್ರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಮದರಸಾಗಳಿಗೆ ನೀಡಿದ ನೋಟಿಸ್‌ಗೆ ಸಂಬಂಧಿಸಿದಂತೆ ಭಾರತೀಯ ಮುಸ್ಲಿಮ್ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್, ಶಿಕ್ಷಣ ಇಲಾಖೆಯ ಆದೇಶವನ್ನು ‘ಕಾನೂನುಬಾಹಿರ’ ಎಂದು ಕರೆದಿದೆ. ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ದಿನಕ್ಕೆ 10,000 ರೂ. ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದೆ. ಇದನ್ನೂ ಓದಿ: 25 ವರ್ಷಗಳ ಒಡನಾಟಕ್ಕೆ ಬ್ರೇಕ್‌ – BJPಗೆ ನಟಿ ಗೌತಮಿ ತಡಿಮಲ್ಲ ಗುಡ್‍ಬೈ

    ಲಕ್ನೋದ ಹಿರಿಯ ಅಧಿಕಾರಿಯ ಪ್ರಕಾರ, ರಾಜ್ಯದ ಸುಮಾರು 4,000 ಮದರಸಾಗಳು ವಿದೇಶಿ ಹಣವನ್ನು ಸ್ವೀಕರಿಸುವ ಸ್ಕ್ಯಾನರ್ ಅಡಿಯಲ್ಲಿವೆ. ಈ 4,000 ಮದರಸಾಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಅವುಗಳಲ್ಲಿ ಹೆಚ್ಚಿನವು ಇಂಡೋ-ನೇಪಾಳ ಗಡಿಯಲ್ಲಿ ನಡೆಯುತ್ತಿವೆ. ಅವುಗಳು ವಿದೇಶದಿಂದ ಹಣವನ್ನು ಪಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ನಮಾಜ್‌ ಮಾಡಿದ ವಿದ್ಯಾರ್ಥಿಗಳು – ಪ್ರಾಂಶುಪಾಲೆ ಅಮಾನತು

    ಮದರಸಾಗಳು ಪಡೆದ ಹಣವನ್ನು ಭಯೋತ್ಪಾದನೆ ಅಥವಾ ಬಲವಂತದ ಧಾರ್ಮಿಕ ಮತಾಂತರದಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ಎಸ್‌ಐಟಿ ಪರಿಶೀಲಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಸ್, ಕಾರಿನ ನಡುವೆ ಮುಖಾಮುಖಿ ಡಿಕ್ಕಿ – 6 ಜನ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈಲರ್ ಸಿನಿಮಾ ವಿರುದ್ಧ ಕೋರ್ಟಿಗೆ ಹೋದ ಎನ್.ಪಿ.ಪಿ ಮುಖಂಡ ರವಿ

    ಜೈಲರ್ ಸಿನಿಮಾ ವಿರುದ್ಧ ಕೋರ್ಟಿಗೆ ಹೋದ ಎನ್.ಪಿ.ಪಿ ಮುಖಂಡ ರವಿ

    ಜನಿಕಾಂತ್ ನಟನೆಯ ಜೈಲರ್ (Jailer) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ದಿನದಿಂದಲೂ ಈವರೆಗೂ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಒಂದು ಕಡೆ ಚಿತ್ರತಂಡ ಗೆಲುವನ್ನು ಸಂಭ‍್ರಮಿಸುತ್ತಿದ್ದರೆ ಮತ್ತೊಂದು ಕಡೆ ಕೋರ್ಟ್ ಕಾರಣದಿಂದಾಗಿ ಆತಂಕವನ್ನೂ ಪಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯಗಳು ಇವೆ ಎಂದು ಎನ್.ಪಿ.ಪಿ ಮುಖಂಡ ರವಿ (Ravi) ಮದ್ರಾಸ್ (Madras) ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.

    ಜೈಲರ್ ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯಗಳಿವೆ. ಅವುಗಳು ಸಮಾಜದ ಮೇಲೆ ಭಾರೀ ಪರಿಣಾಮ ಬೀರುವಂತವುಗಳು. ಆದರೂ, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಅದು ಹೇಗೆ ಯು/ಎ ಪ್ರಮಾಣ ಪತ್ರ ನೀಡಿತು ಎಂದು ಅರ್ಥವಾಗುತ್ತಿಲ್ಲ. ಈ ಸಿನಿಮಾದ ಪ್ರದರ್ಶನವನ್ನು ಕೂಡಲೇ ನಿಲ್ಲಿಸಿ, ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ರವಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    ಜೈಲರ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ವೇಳೆ ಅವರು ಹಿಮಾಲಯಕ್ಕೆ ಹಾರಿದ್ದರು. ಅಲ್ಲಿ ಧ್ಯಾನಕ್ಕೆ ಶರಣಾಗಿದ್ದರು. ಅಲ್ಲಿಂದ ಹೊರಟು ಇದೀಗ ಉತ್ತರ ಪ್ರದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಅಯೋಧ್ಯಗೆ ತೆರಳಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ. ನಿರ್ಮಾಣ ಹಂತದಲ್ಲಿರುವ ದೇವಸ್ಥಾನವನ್ನೂ ಅವರು ವೀಕ್ಷಣೆ ಮಾಡಿದರು. ಡಲಿದ್ದಾರೆ.

    ಮೊನ್ನೆಯಷ್ಟೇ ರಜನಿಕಾಂತ್ (Rajanikanth) ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಭೇಟಿಯಾಗಿದ್ದರು. ನಿನ್ನೆ  (ಆಗಸ್ಟ್ 19) ಜೈಲರ್ (Jailer) ಚಿತ್ರವನ್ನ ಅವರೊಂದಿಗೆ ವೀಕ್ಷಿಸಿದ್ದರು. ಲಕ್ನೋದಲ್ಲಿ ಸಿಎಂ ಮತ್ತು ಅಭಿಮಾನಿಗಳ ಜೊತೆಗೆ ‘ಜೈಲರ್’ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

     

    ತಲೈವಾ-ಶಿವಣ್ಣ ಕಾಂಬೋ ‘ಜೈಲರ್’ (Jailer) ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಲೈವಾ ಸಿನಿಮಾವನ್ನ ಒಪ್ಪಿ ಜನ ಮೆಚ್ಚಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರಕ್ಕಾಗಿ ಲಕ್ನೋದಲ್ಲಿ ತಲೈವಾ ಬೀಡು ಬಿಟ್ಟಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆ ನಿನ್ನೆ ಸಂಜೆ 7ಕ್ಕೆ ‘ಜೈಲರ್’ ಸಿನಿಮಾ ನೋಡೋದು ಫಿಕ್ಸ್ ಆಗಿತ್ತು. ಅಷ್ಟೇ ಅಲ್ಲದೇ, ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ಕೂಡ ತಲೈವಾ ಭೇಟಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ- PhD ವಿದ್ಯಾರ್ಥಿ ಆತ್ಮಹತ್ಯೆ

    ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ- PhD ವಿದ್ಯಾರ್ಥಿ ಆತ್ಮಹತ್ಯೆ

    ನವದೆಹಲಿ: ಮದ್ರಾಸ್‍ (Madras) ನಲ್ಲಿರುವ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಹೆಚ್‍ಡಿ (PhD) ಓದುತ್ತಿರುವ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದು, ಇದು ಈ ವರ್ಷದಲ್ಲಿ ನಡೆದ ಮೂರನೇ ಘಟನೆಯಾಗಿದೆ.

    ಮೃತನನ್ನು ಸಚಿನ್ (32) ಎಂದು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳ ಮೂಲದವನಾಗಿದ್ದಾನೆ. ಈತ ಮದ್ರಾಸ್ ಐಐಟಿನಲ್ಲಿ ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಆತ್ಮಹತ್ಯೆಗೂ ಕೆಲ ಗಂಟೆಗಳ ಹಿಂದೆ ವಿದ್ಯಾರ್ಥಿ ವಾಟ್ಸಪ್ ಸ್ಟೇಟಸ್ (Whatsapp Status) ಹಾಕಿದ್ದಾನೆ. ಅದರಲ್ಲಿ ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನು ಅಲ್ಲ ಎಂದು ಬರೆದುಕೊಂಡಿದ್ದಾನೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ

    ವಿದ್ಯಾರ್ಥಿ ಈ ರೀತಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನ್ನು ನೋಡಿದ ಓರ್ವ ಗೆಳೆಯ, ಕೂಡಲೇ ಆತನ ಮನೆಗೆ ಓಡಿದ್ದಾನೆ. ಆದರೆ ಅದಾಗಲೇ ವಿದ್ಯಾರ್ಥಿ ಕುಣಿಕೆಗೆ ಕೊರಳೊಡ್ಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತ ಅಂಬುಲೆನ್ಸ್ ಗೆ ಕರೆ ಮಾಡಿದ್ದು, ಆದರೆ ಅದಾಗಲೇ ಸಚಿನ್ ಮೃತಪಟ್ಟಿದ್ದನು.

    ಸಚಿನ್ ಮೃತದೇಹವನ್ನು ರೊಯಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರ್ಷದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, 2018ರಿಂದ ಇದುವರೆಗೆ ಒಟ್ಟು 11 ಮಂದಿ ಆತ್ಮಹತ್ಯೆಗೆ ಶರಣಾಗಿರುವುದು ವರದಿಯಾಗಿದೆ.

  • ದೊರೈ-ಭಗವಾನ್ ಜೋಡಿ ಬೆಸೆದದ್ದು ಹೇಗೆ?: ಎಂಟಾಣೆ ಕಥೆ ಹೇಳಿದ ಭಗವಾನ್

    ದೊರೈ-ಭಗವಾನ್ ಜೋಡಿ ಬೆಸೆದದ್ದು ಹೇಗೆ?: ಎಂಟಾಣೆ ಕಥೆ ಹೇಳಿದ ಭಗವಾನ್

    ನ್ನಡ ಸಿನಿಮಾ ರಂಗದ ಹೆಸರಾಂತ ಜೋಡಿಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ದೊರೈ ಭಗವಾನ್ (Bhagavan) ಅವರದ್ದು. ಕನ್ನಡ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆ ಈ ಜೋಡಿಯದ್ದು. ಕನ್ನಡದಲ್ಲಿ ಬಂದ ಮೊದಲ ಬಾಂಡ್ (Bond) ಸಿನಿಮಾಗೆ ಇವರೇ ನಿರ್ದೇಶಕರು. ಈ ಜೋಡಿಯು ಒಂದಾಗಿದ್ದು ಕೇವಲ ಎಂಟಾಣೆ ಮೂಲಕ ಎನ್ನುವುದು ಅಚ್ಚರಿಯ ಸಂಗತಿ. ಆ ಮಾಹಿತಿಯನ್ನು ಸ್ವತಃ ಭಗವಾನ್ ಅವರೇ ಹಂಚಿಕೊಂಡಿದ್ದರು.

    ಅದು ಮದ್ರಾಸಿನ ದಿನಗಳು. ಆಗ ಕನ್ನಡ ಚಿತ್ರರಂಗವೂ ಮುದ್ರಾಸಿನಲ್ಲೇ ನೆಲೆಯೂರಿತ್ತು. ಬಹುತೇಕ ಕನ್ನಡ ಚಿತ್ರಗಳು ಅಲ್ಲಿಯೇ ತಯಾರಾಗುತ್ತಿದ್ದವು. ಹಾಗಾಗಿ  ದೊರೈ ಮತ್ತು ಭಗವಾನ್ ಮೈಸೂರಿನವರಾದರೂ ಮದ್ರಾಸಿನಲ್ಲೇ ಬೀಡು ಬಿಟ್ಟಿದ್ದರು. ಮೊದ ಮೊದಲು ಭಗವಾನ್ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರೆ, ಭಗವಾನ್ ಕ್ಯಾಮೆರಾಮನ್ ಆಗಿದ್ದರು. ಇಬ್ಬರ ಆಸಕ್ತಿಗಳೇ ಅವರನ್ನು ಒಂದಾಗುವಂತೆ ಮಾಡಿದ್ದವು. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ಆಗ ಉದಯಕುಮಾರ್ ನಟನೆಯ ‘ವೀರಪುತ್ರ’ ಸಿನಿಮಾದ ಶೂಟಿಂಗ್ ಸ್ಥಗಿಗೊಂಡಿತ್ತು. ಈ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಭಗವಾನ್ ಬಳಿ ಊಟಕ್ಕೂ ಹಣವಿರಲಿಲ್ಲ. ಕನ್ನಡದ ಬಹುತೇಕರು ಬರುತ್ತಿದ್ದ ಮದ್ರಾಸಿನ ಹೋಟೆಲ್ ಮುಂದೆ ನಿಂತು, ಅಲ್ಲಿಗೆ ಬರುವ ಕನ್ನಡಿಗರ ಬಳಿ ಸಾಲ ಕೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಭಗವಾನ್. ಇಂತಹ ಸಂದರ್ಭದಲ್ಲೇ ಭಗವಾನ್ ಅವರಿಗೆ ದೊರೈ ಸಿಕ್ಕಿದ್ದು.

    ಎಂದಿನಂತೆ ಹೋಟೆಲ್ ಮುಂದೆ ನಿಂತಿದ್ದ ಭಗವಾನ್, ಯಾರಾದರೂ ಬಂದು ತಮ್ಮ ಹಸಿವು ನೀಗಿಸಬಹುದು ಎಂದುಕೊಂಡು ಕಾಯುತ್ತಿದ್ದರು. ಆಗ ಬಂದವರೇ ದೊರೈ. ಅವರ ಬಳಿ ಒಂದು ರೂಪಾಯಿಯನ್ನು ಕೇಳಿದ್ದರು ಭಗವಾನ್. ತುಂಬಾ ಹಸಿದಿದ್ದ ಭಗವಾನ್ ಕಂಡು ‘ನನ್ನ ಬಳಿ ಒಂದು ರೂಪಾಯಿ ಇಲ್ಲ, ಎಂಟಾಣೆಯಿದೆ ತಗೆದುಕೊ’ ಎಂದು ಎಂಟಾಣೆ ಕೊಟ್ಟು ಹೊರಟು ಬಿಟ್ಟರು ದೊರೈ.

    ಮರುದಿನ ಭಗವಾನ್ ತಂಗಿದ್ದ ರೂಮ್ ಗೆ ಬಂದ ನಿರ್ದೇಶಕ ಜಿ.ವಿ. ಅಯ್ಯರ್ ‘ಊಟಕ್ಕೂ ಗತಿ ಇಲ್ಲದೇ ಇದ್ದೀಯಂತೆ? ಬಾ ನನ್ನ ಜೊತೆ’ ಎಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಅಯ್ಯರ್. ಮುದ್ರಾಸಿನಲ್ಲಿ ಮೊದಲು ಬಾರಿಗೆ ನೆಲೆ ಕಲ್ಪಿಸಿದ್ದು ಅಯ್ಯರ್. ಆದರೆ, ಅಯ್ಯರ್ ಗೆ ಈ ವಿಷಯ ತಿಳಿಸಿದ್ದು ದೊರೈ. ಅಲ್ಲದೇ ಅಯ್ಯರ್ ಕಡೆ ಐವತ್ತು ಪೈಸೆ ಸಾಲ ಪಡೆದುಕೊಂಡು ಊಟಕ್ಕೆ ಬಂದಿದ್ದ ದೊರೈ, ತಾನು ಊಟ ಮಾಡದೇ ಆ ಹಣವನ್ನು ಭಗವಾನ್ ಗೆ ನೀಡಿದ್ದರು. ಅಲ್ಲಿಂದ ಅವರಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು.

    ಜಗಜ್ಯೋತಿ ಬಸವೇಶ್ವರ ಸಿನಿಮಾದಲ್ಲಿ ದೊರೈ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದರೆ, ಭಗವಾನ್ ಅಸೋಸಿಯೇಟ್ ನಿರ್ದೇಶಕ. ಅಲ್ಲಿಂದ ಶುರುವಾದ ಅವರ ಪಯಣ ಮುಂದೆ ದೊಡ್ಡ ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ನಿರ್ದೇಶನ ಮಾಡುವಂತೆ ಆಯಿತು. ಮುಂದೆ ಮಂತ್ರಾಲಯ ಮಹಾತ್ಮೆ ಸಿನಿಮಾಗೆ ದೊರೈ ಕ್ಯಾಮೆರಾಮನ್, ಭಗವಾನ್ ನಿರ್ದೇಶಕರಾದರು. ಈ ಸಿನಿಮಾಗೆ ಹಣ ಹೂಡಿದ್ದು ಭಗವಾನ್. ಅದಕ್ಕೆ ಧೈರ್ಯ ತುಂಬಿದ್ದು ಇದೇ ದೊರೈ. ಡಾ.ರಾಜ ಕುಮಾರ್ ನಟನೆಯ ಜೇಡರಬಲೆ ಸಿನಿಮಾಗೆ ಇಬ್ಬರೂ ನಿರ್ಮಾಪಕರು. ಹೀಗೆ ಸಾಗಿತ್ತು ಇವರ ಸ್ನೇಹದ ಪಯಣ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ಚೆನ್ನೈ: ಭಾರತದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಗುರುವಾರ ಚೆನ್ನೈನಲ್ಲಿ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಯಶಸ್ವೀ ಪರೀಕ್ಷೆ ನಡೆಸಿದರು.

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್‌ನಲ್ಲಿ ಮೊದಲ ಬಾರಿಗೆ 5ಜಿ ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಅಶ್ವಿನಿ ವೈಷ್ಣವ್, ಇಡೀ ನೆಟ್‌ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ ಎಂದರು.

    5G

    ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಸಾಕ್ಷಾತ್ಕಾರವಾಗಿದೆ. ಭಾರತದಲ್ಲೇ ತಯಾರಾಗುವ 4ಜಿ ಹಾಗೂ 5ಜಿ ತಂತ್ರಜ್ಞಾನದ ಸ್ಟಾಕ್ ಅನ್ನು ಇತರ ದೇಶಗಳಿಗೂ ವಿತರಿಸುವುದು ಅವರ ಗುರಿಯಾಗಿದೆ. ಈ ಸಂಪೂರ್ಣ ತಂತ್ರಜ್ಞಾನದ ಯಶಸ್ಸಿನೊಂದಿಗೆ ನಾವು ಜಗತ್ತನ್ನೇ ಗೆಲ್ಲಬೇಕು ಎಂದು ವೈಷ್ಣವ್ ಹೇಳಿದರು. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ

    ದೂರಸಂಪರ್ಕ ಇಲಾಖೆ 5ಜಿ ನೆಟ್‌ವರ್ಕ್ ಹರಾಜಿನ ಬಗ್ಗೆ ಮುಂದಿನ ವಾರದಲ್ಲಿ ಅಂತಿಮ ಅನುಮೋದನೆಗೆ ಕೇಂದ್ರ ಸಚಿವ ಸಂಪುಟಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ. ಇದೇ ವರ್ಷದ ಕೊನೆಯಲ್ಲಿ ಗ್ರಾಹಕರ ಕೈಗೆ 5ಜಿ ನೆಟ್‌ವರ್ಕ್ ಲಭಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ?

    ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಐಐಟಿ ಮದ್ರಾಸ್‌ನಲ್ಲಿ ದೇಶದ ಮೊದಲ 5ಜಿ ಟೆಸ್ಟ್‌ಬೆಡ್ ಅನ್ನು ಉದ್ಘಾಟಿಸಿದ್ದರು. ಇದೀಗ ಅದೇ ಕೇಂದ್ರದಲ್ಲಿ ಸಂಪರ್ಕ ಸಚಿವ ದೇಶದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಪರೀಕ್ಷಿಸಿದ್ದಾರೆ.

  • ಮದುವೆಯ ನೆಪದಲ್ಲಿ ಶಿಕ್ಷಕನಿಂದ ಪದೇ, ಪದೇ ಅತ್ಯಾಚಾರ

    ಮದುವೆಯ ನೆಪದಲ್ಲಿ ಶಿಕ್ಷಕನಿಂದ ಪದೇ, ಪದೇ ಅತ್ಯಾಚಾರ

    ಲಕ್ನೋ: ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ ಎಸಗಿದ ಉತ್ತರ ಪ್ರದೇಶದ ಶಿರ್ ಘರ್ ಶಿಕ್ಷಕನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ನಾಲ್ಕು ವರ್ಷದ ಹಿಂದೆ ಮಹಿಳೆ ಮದ್ರಾಸಕ್ಕೆ ಬಂದಿದ್ದರು. ಈ ವೇಳೆ ಆರೋಪಿ ಕೂಡ ಆಕೆಯ ಜೊತೆಯಲ್ಲಿಯೇ ಅಧ್ಯಯನ ಮಾಡುತ್ತಿದ್ದ. ಆದರೆ ನಂತರ ಆತ ಮದ್ರಾಸದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ವೇಳೆ ಇಬ್ಬರು ಪರಸ್ಪರ ಪ್ರೀತಿಸಲು ಶುರುಮಾಡಿರುವುದಾಗಿ ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್- ಸಿಸಿಬಿ ಬಲೆಗೆ ಬಿದ್ದ ಆರೋಪಿ

    ಸಂತ್ರಸ್ತೆಗೆ ಮದುವೆಯಾಗುವುದಾಗಿ ನಂಬಿಸಿ ಆರೋಪಿ ಪದೇ, ಪದೇ ಅತ್ಯಾಚಾರ ನಡೆಸಿದ್ದಾನೆ ಮತ್ತು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಒಮ್ಮೆ ಸಂತ್ರಸ್ತೆ ಆರೋಪಿ ಮನೆಗೆ ಹೋದಾಗ, ಆಕೆಗೆ ಜೀವ ಬೆದರಿಕೆ ಹಾಕಲಾಗಿದ್ದು, ಊರು ಬಿಟ್ಟು ಹೋಗುವಂತೆ ಬೆದರಿಸಿರುವುದಾಗಿ ಮಹಿಳೆ ಹೇಳಿದ್ದು, ಇದೀಗ ಈ ಸಂಬಂಧ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?

  • ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ನವದೆಹಲಿ: ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

    ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಈ ಹಿಂದೆ ಈ ಅಧಿಸೂಚನೆಗೆ 4 ವಾರಗಳ ತಡೆ ನೀಡಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾ. ಖೇಹರ್ ಅವರಿದ್ದ ಪೀಠ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದುದಿದು ದೇಶಾದ್ಯಂತ ಅನ್ವಯಿಸಲಿದೆ ಎಂದು ಹೇಳಿದೆ.

    ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಮೇ 26ರಂದು ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಹೈದರಾಬಾದ್ ಮೂಲದ ಫಾಹಿಮ್ ಖುರೇಷಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದ್ದು, ಈ ನಿರ್ಧಾರದಿಂದ ಮಾಂಸ ವ್ಯಾಪಾರೋದ್ಯಮಿಗಳಿಗೆ ಸಮಸ್ಯೆ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದು, ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.