Tag: Madivala

  • ಮಡಿವಾಳ ಕೊಲೆ ಪ್ರಕರಣ: ಸಲಿಂಗ ಕಾಮಕ್ಕೆ ಒಪ್ಪದ್ದಕ್ಕೆ ಕೊಂದೇ ಬಿಟ್ಟ

    ಮಡಿವಾಳ ಕೊಲೆ ಪ್ರಕರಣ: ಸಲಿಂಗ ಕಾಮಕ್ಕೆ ಒಪ್ಪದ್ದಕ್ಕೆ ಕೊಂದೇ ಬಿಟ್ಟ

    ಬೆಂಗಳೂರು: ನಗರದಲ್ಲಿ ಇದೇ 21ನೇ ತಾರೀಖಿನಂದು ಮಡಿವಾಳದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಸಲಿಂಗ ಕಾಮಕ್ಕೆ ಸಹಕಾರ ನೀಡದ್ದಕ್ಕೆ ಸಹದ್ಯೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

    ಬೆನ್ನೆಗೌಡ ಎಂಬಾತನೇ ಕೊಲೆಯಾದ ದುರ್ದೈವಿ. ಬೆನ್ನೆಗೌಡ ಮತ್ತು ದೇವರಾಜ್ ಇಬ್ಬರೂ ಮಡಿವಾಳದ ಆರೋಗ್ಯ ರೆಸ್ಟೊರೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲದೇ 4 ತಿಂಗಳಿನಿಂದ ಸಲಿಂಗ ಕಾಮಿಗಳಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಸೆಕ್ಸ್ ನಲ್ಲಿ ತೊಡಗಿಕೊಳ್ಳುತ್ತಿದ್ದರು. ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    ದಿನಾಂಕ 21ರಂದು ಸಲಿಂಗ ಕಾಮಕ್ಕಾಗಿ ದೇವರಾಜ್ ತನ್ನ ಸಹದ್ಯೋಗಿ ಬೆನ್ನೆಗೌಡನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದನು. ಆದರೆ ಸ್ಮಶಾನಕ್ಕೆ ತೆರಳಿದ ಮೇಲೆ ಬೆನ್ನೆಗೌಡ ಸೆಕ್ಸ್ ಗೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ದೇವರಾಜ್ ಬಿಯರ್ ಬಾಟಲ್ ನಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಗುರುತು ಸಿಗದಂತೆ ಹತ್ಯೆ ಮಾಡಿದ್ದನು. ಇದನ್ನೂ ಓದಿ: ಗಂಡನಿಗೆ ಅದು ಬೇಕು, ಇದು ಬೇಕು-ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜ ಆಯ್ತು

    ಘಟನಾ ಸ್ಥಳದಲ್ಲಿ ದೊರೆತ ಬ್ಯಾಂಕ್ ಸ್ಲಿಪ್ ಮತ್ತು ಬಿಯರ್ ಬಾಟಲ್ ಸುಳಿವಿನಿಂದ ಮಡಿವಾಳ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!

    ಇದನ್ನೂ ಓದಿ: ಗೋವಾದಲ್ಲಿ ಸೆಕ್ಸ್ ಗೂ ಮುನ್ನ ತೋರಿಸಬೇಕು ಆಧಾರ್ ಕಾರ್ಡ್!

    ಇದನ್ನೂ ಓದಿ: ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

     

  • ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದು ಬೆಂಗ್ಳೂರಿನಲ್ಲಿ ಟೆಕ್ಕಿಯ ಬರ್ಬರ ಕೊಲೆ

    ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದು ಬೆಂಗ್ಳೂರಿನಲ್ಲಿ ಟೆಕ್ಕಿಯ ಬರ್ಬರ ಕೊಲೆ

    ಬೆಂಗಳೂರು: ಉತ್ತರ ಭಾರತ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರದಲ್ಲಿ ನಡೆದಿದೆ.

    ಅಸ್ಸಾಂ ಮೂಲದ ಪ್ರಣಯ್(24) ಕೊಲೆಯಾದ ವ್ಯಕ್ತಿ. ಈ ಘಟನೆ ಬೆಂಗಳೂರಿನ ತಾವರೆಕೆರೆ ಮುಖ್ಯರಸ್ತೆಯ ಚಾಕ್ಲೆಟ್ ಫ್ಯಾಕ್ಟರಿ ಬಳಿ ಭಾನುವಾರ ತಡರಾತ್ರಿ ನಡೆದಿದೆ.

    ಖಾಸಗಿ ಕಂಪನಿಯಲ್ಲಿ ಸಾಪ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರಣಯ್ ಅವರನ್ನು ಭಾನುವಾರ ರಾತ್ರಿ ಸ್ನೇಹಿತನೊಬ್ಬ ಫೋನ್ ಮಾಡಿ ಕರೆದಿದ್ದ. ಗೆಳೆಯನ ಕರೆಗೆ ಓಗೊಟ್ಟು ಹೋದ ಪ್ರಣಯ್ ನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಚಾಕುನಿಂದ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

    ಘಟನಾ ಸ್ಥಳಕ್ಕೆ ಮಡಿವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತಂಡ ರಚನೆ ಮಾಡಿರುವ ಪೊಲಿಸರು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    https://www.youtube.com/watch?v=EI1fpzcn3wM

     

  • ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

    ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

    – ಶರತ್ ಸ್ವಗ್ರಾಮಕ್ಕೆ ಭೇಟಿ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್

    ಮಂಗಳೂರು: 4 ದಿನಗಳ ಹಿಂದೆ ಹಲ್ಲೆಗೊಳಗಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವನ್ನಪ್ಪಿದ್ದು, ಮಗನ ಸಾವಿನ ದುಃಖವನ್ನ ಶರತ್ ಕುಟುಂಬ ಹೊರಹಾಕಿದೆ.

    ನನ್ನ ಮಗನನ್ನ ಯಾವ ರಾಜಕಾರಣಿಗಳು ಉಳಿಸಲಿಲ್ಲ. ಸಂಘಟನೆಯವ್ರು ಉಳಿಸಲಿಲ್ಲ. ದಿನವಡೀ ಸುದ್ದಿ ಹಾಕಿದ ನಿಮ್ಮ ಕೈಯಲ್ಲೂ ನನ್ನ ಮಗನನ್ನ ಉಳಿಸೋಕೆ ಆಗಲಿಲ್ಲ. ಶರತ್ ಸಾವು ನಮ್ಮ ಇಡೀ ಕುಟುಂಬವನ್ನ ನೋವಿಗೆ ತಳ್ಳಿದೆ. ನಾವು ಯಾರ ಬಗ್ಗೆನೂ ಮಾತನಾಡಲು ಇಷ್ಟವಿಲ್ಲ ಎಂದು ಶರತ್ ತಂದೆ ಕಣ್ಣೀರಿಟ್ಟದ್ದಾರೆ.

    ಈ ಮಧ್ಯೆ ಮೃತ ಶರತ್ ಮಡಿವಾಳ ಮನೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ನೀಡಿದ್ರು. ಶರತ್ ಪೋಷಕರಿಗೆ ಸಾಂತ್ವನ ಹೇಳಿ ಅಂತ್ಯ ಸಂಸ್ಕಾರದ ಜಾಗ ವೀಕ್ಷಣೆ ಮಾಡಿದ್ರು. ಇದೇ ವೇಳೆ ಮಾತನಾಡಿದ ಅವರು, ನಿಮ್ಮ ಕಣ್ಮುಂದೆಯೇ ಎಲ್ಲಾ ಇದೆ. ನೀವೇ ನೋಡಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ರು.

    ಶರತ್ ಕುಟುಂಬದ ಎಸ್ಟೇಟ್‍ನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಶರತ್ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.  ಸುರಿಯೋ ಮಳೆಯಲ್ಲೂ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗುತ್ತಿದೆ.

    ಸಜಿಪ ಬಳಿಯ ಕೆಂದೂರು ಗ್ರಾಮಕ್ಕೆ ಶರತ್ ಪಾರ್ಥಿವ ಶರೀರ ತಲುಪಿದ್ದು, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಜನರು ಅಂತಿಮ ದರ್ಶನ ಪಡೆದಿದ್ದಾರೆ. ಸಾವಿರಕ್ಕೂ ಅಧಿಕ ಬೈಕ್ ಗಳಲ್ಲಿ ಬಂದು ಹಿಂದೂ ಸಂಘಟನಾ ಕಾರ್ಯಕರ್ತರು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದಾರೆ. ಮೃತದೇಹದ ಸುತ್ತಲು ಪೊಲೀಸರ ಸರ್ಪಗಾವಲು ಹಾಕಲಾಗಿದೆ.

    ಈ ನಡುವೆ ಬಂಟ್ವಾಳದ ಸಜೀಪಕ್ಕೆ ಶರತ್ ಶವಯಾತ್ರೆ ಸಾಗುತ್ತಿರುವ ವೇಳೆ ಬಿಸಿ ರೋಡ್‍ನಲ್ಲಿ ಶವಯಾತ್ರೆಗೆ ತಡೆಯೊಡ್ಡಿದ ಹಿಂದೂ ಮುಖಂಡರು, ಅಂತಿಮ ದರ್ಶನಕ್ಕೆ ಒತ್ತಾಯಿಸಿದ್ರು. ದರ್ಶನಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಹಿಂದೂ ಮುಖಂಡರು ವಾಗ್ವಾದ ನಡೆಸಿದ್ರು. ಕೈಕಂಬದಲ್ಲಿ ಕಲ್ಲು ತೂರಾಟ ನಡೆಯಿತು. ಗಲಭೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಲಘು ಲಾಠಿಚಾರ್ಜ್ ಮಾಡಿದ್ರು. ಖಾಸಗಿ ಬಸ್ ಮೇಲೆ ಕಲ್ಲು ತೂರಾಟವಾಗಿ ಬಸ್‍ನ ಗಾಜು ಪುಡಿಪುಡಿಯಾಯ್ತು. ಓರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

    ಮಾಜಿ ಸಚಿವ ಕೃಷ್ಣ ಪಾಲೀಮರ್, ಮಾಜಿ ಶಾಸಕ ಯೋಗೀಶ್ ಭಟ್, ರಾಜೇಶ್ ನಾಯಕ್ ಉಲ್ಲೇಪಾಡಿ, ಬಿಜೆಪಿ ನಾಯಕ ಸಂತೋಷ್, ಉಲ್ಲಾಳದ ಬಿಜೆಪಿ ಮುಖಂಡರು, ಬಜರಂಗದಳ, ಆರ್‍ಎಸ್‍ಎಸ್, ವಿಎಚ್‍ಪಿಯ ನೂರಾರು ಮುಖಂಡರುಗಳು ಶವಯಾತ್ರೆಯಲ್ಲಿ ಭಾಗಿಯಾದ್ರು.

    https://www.youtube.com/watch?v=bHr6olvlgmU

    https://www.youtube.com/watch?v=o40hIeKFh8E

  • ಬಸ್ ರಿಪೇರಿ ಮಾಡಿ ಬೆಂಗಳೂರಿಗರ ಪ್ರಶಂಸೆಗೆ ಪಾತ್ರರಾದ್ರು ಈ ಸಂಚಾರಿ ಪೇದೆ

    ಬೆಂಗಳೂರು: ಸಂಚಾರಿ ಪೊಲೀಸ್ ಪೇದೆಯೊಬ್ಬರು ಕೆಟ್ಟು ನಿಂತಿದ್ದ ವೋಲ್ವೊ ಬಸ್ ರಿಪೇರಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಮಡಿವಾಳ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಮಡಿವಾಳ ಟು ಹೊಸೂರು ಮಾರ್ಗವಾಗಿ ಚಲಿಸುತ್ತಿದ್ದ ವೋಲ್ವೊ ಬಸ್ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಂತಿತ್ತು. ಬಸ್ ಕೆಟ್ಟು ನಿಂತ ಪರಿಣಾಮ ಹೊಸೂರ್ ರೋಡ್‍ನಲ್ಲಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿತ್ತು.

    ಈ ವೇಳೆ ಕರ್ತವ್ಯದಲ್ಲಿದ್ದ ಮಡಿವಾಳ ಸಂಚಾರಿ ಠಾಣೆಯ ಪೊಲೀಸ್ ಪೇದೆ ರಾಜಿಸಾಬ್ ಘಂಟಿ ಅರ್ಧ ಗಂಟೆಯಲ್ಲೇ ಬಸ್ ರಿಪೇರಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಘಟನೆ ಕಂಡವರಿಂದ ರಾಜಿಸಾಬ್ ಘಂಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

    ವಿಜೇಂದ್ರ ಡಿಟಿ ಅವರು ಫೇಸ್‍ಬುಕ್‍ನಲ್ಲಿ ರಾಜಿಸಾಬ್ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ.
    “ಈ ಫೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ಮಡಿವಾಳ ಟ್ರಾಫಿಕ್ ಪೊಲೀಸ್ ರಾಜಿಸಾಬ್. ಹೊಸೂರು ರೋಡ್ ಸಮೀಪದ ಮಡಿವಾಳ ಬ್ರಿಡ್ಜ್ ಬಳಿ ಕೆಟ್ಟು ನಿಂತಿದ್ದ ನಗರ ಸಾರಿಗೆ ವೋಲ್ವೋವನ್ನು ತಕ್ಷಣವೇ ಸರಿಪಡಿಸಿ, ಟ್ರಾಫಿಕ್ ಸರಿ ದಾರಿಗೆ ತಂದು ಸಾರ್ವಜನಿಕರು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ನಿಲ್ಲುವುದನ್ನು ತಪ್ಪಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾದರು. ನಾ ಕಂಡಂತೆ ಇಂತಹ ಸಮಾಜಮುಖಿ ಕೆಲಸಗಳನ್ನು ಇವರು ತುಂಬ ಮಾಡಿದ್ದಾರೆ, ಇಂತಹವರಿಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಗುರುತಿಸಿ ಅವರಿಗೆ ಅಭಿನಂದಿಸಬೇಕು.”