Tag: madikeri

  • ಗಣೇಶ ವಿಸರ್ಜನೆ ವೇಳೆ ನಿಯಮ ಉಲ್ಲಂಘನೆ – 64 ಮಂದಿ ವಿರುದ್ಧ ಪ್ರಕರಣ ದಾಖಲು

    ಗಣೇಶ ವಿಸರ್ಜನೆ ವೇಳೆ ನಿಯಮ ಉಲ್ಲಂಘನೆ – 64 ಮಂದಿ ವಿರುದ್ಧ ಪ್ರಕರಣ ದಾಖಲು

    ಮಡಿಕೇರಿ: ವಿರಾಜಪೇಟೆ (Virajpete) ಗಣೇಶ ವಿಸರ್ಜನೋತ್ಸವ (Ganesh Immersion) ಸಂದರ್ಭದಲ್ಲಿ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆರೋಪದಡಿ ಒಟ್ಟು 64 ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.

    ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ರವೀಂದ್ರ ಒಂದು ಮಂಟಪ ಸಮಿತಿ ವಿರುದ್ಧ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಇದನ್ನು ಒಟ್ಟು 16 ಸಮಿತಿಗಳ ಮಂಟಪಗಳಲ್ಲಿದ್ದ ಧ್ವನಿವರ್ಧಕಕ್ಕೆ ಸಂಬಂಧಿಸಿದ 64 ಮಂದಿಯ ವಿರುದ್ಧವೂ ಅನ್ವಯಿಸಿ ಕಲಂ 125, 285, 292, 36, 109 ಸೇರಿದಂತೆ ಕೆಪಿ ಕಾಯಿದೆ, 188 ಐಎಂವಿ ಕಾಯಿದೆಯಡಿಯೂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

    ಶಿವಕೇರಿಯ ಮಂಟಪದ ಮೆರವಣಿಗೆ ವೇಳೆ ದೊಡ್ಡ ಪ್ರಮಾಣದ ಧ್ವನಿವರ್ಧಕಗಳನ್ನು ವಾಹನದಲ್ಲಿಟ್ಟುಕೊಂಡು ತೆರಳುತ್ತಿದ್ದರು. ರಾತ್ರಿ 10ಗಂಟೆ ನಂತರ ಧ್ವನಿರ್ವಕ ಬಳಸದಂತೆ ಆಪರೇಟರ್‌ಗಳಿಗೆ ಸೂಚಿಸಿದರೂ ಇದನ್ನು ಪಾಲಿಸದೆ ಧ್ವನಿವರ್ದಕ ಬಳಕೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆ ಡಿಜೆ ಆಪರೇಟರ್, ಮಾಲೀಕ ಮದನ್ ಕೃಷ್ಣ, ಟೆಕ್ನೀಷಿಯನ್‌ಗಳಾದ ಪುನೀತ್, ಮೋಕ್ಷಿತ್ ವಿರುದ್ಧ ಕ್ರಮಕೈಗೊಳ್ಳುವಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಪ್ರಕರಣ ದಾಖಲಾಗಿ, ಒಟ್ಟು 16 ಸಮಿತಿಗಳ ಮಂಟಪದಲ್ಲಿದ್ದ ಧ್ವನಿವರ್ಧಕ ಸಂಬಂಧಿತ ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ.

    ಶಿವಕೇರಿಯ ವಿನಾಯಕ ಯುವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಉತ್ಸವ ಸಮಿತಿ, ದಖನ್ನಿ ಮೊಹಲ್ಲದ ವಿಜಯ ವಿನಾಯಕ ಉತ್ಸವ ಸಮಿತಿ, ಪಟ್ಟಣ ಪಂಚಾಯಿತಿ ವಿಘ್ನೇಶ್ವರ ಉತ್ಸವ ಸಮಿತಿ, ಕೆ. ಬೋಯಿಕೇರಿಯ ಕೆಂಕೇರಮ್ಮ ವಿಘ್ನೇಶ್ವರ ಸಮಿತಿ, ಪಂಜರಪೇಟೆಯ ಮಹಾಗಣಪತಿ ಸೇವಾ ಸಮಿತಿ, ಸುಂಕದಕಟ್ಟೆಯ ವರಸಿದ್ಧಿ ವಿನಾಯಕ ಉತ್ಸವ ಸಮಿತಿ, ನೆಹರುನಗರದ ನೇತಾಜಿ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ತೆಲುಗರ ಬೀದಿಯ ವಿನಾಯಕ ಭಕ್ತ ಮಂಡಳಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಸುಣ್ಣದ ಬೀದಿಯ ದೊಡ್ಡಮ್ಮ, ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಗೌರಿಕೆರೆ ಗಣೇಶೋತ್ಸವ ಸಮಿತಿಯ ಮಂಟಪಗಳಲ್ಲಿದ್ದ ಡಿಜೆ ಮಾಲೀಕ, ಆಪರೇಟರ್, ಟೆಕ್ನೀಷಿಯನ್ ಹಾಗೂ ವಾಹನ ಚಾಲಕರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

    ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಬಂದ ನಂತರ ಪರಿಸರ ಕಾಯಿದೆಯ ಸೆಕ್ಷನ್ 15, ಕಾಯಿದೆ 1986 ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ

  • ಕೊಡಗು | ʻಪ್ರವಾಸಿಗರಿಗೆ ಹುಡ್ಗೀರು, ಆಂಟಿಯರು ಲಭ್ಯವಿದ್ದಾರೆʼ ಅಂತ ಪೋಸ್ಟ್‌ – ಬಾಗಲಕೋಟೆ ಯುವಕ ಅರೆಸ್ಟ್‌

    ಕೊಡಗು | ʻಪ್ರವಾಸಿಗರಿಗೆ ಹುಡ್ಗೀರು, ಆಂಟಿಯರು ಲಭ್ಯವಿದ್ದಾರೆʼ ಅಂತ ಪೋಸ್ಟ್‌ – ಬಾಗಲಕೋಟೆ ಯುವಕ ಅರೆಸ್ಟ್‌

    – ಹಣ ಕಳೆದುಕೊಂಡು ಮೋಸ ಹೋದವನಿಂದಲೇ ಕೃತ್ಯ

    ಮಡಿಕೇರಿ: ಕೊಡಗಿನಲ್ಲಿ (Kodagu) ಪ್ರವಾಸಿಗರಿಗೆ (Tourists) ಹುಡುಗಿಯರು ಮತ್ತು ಆಂಟಿಯರು ಡೇಟಿಂಗ್‌ ಮಾಡಲು ಲಭ್ಯವಿದ್ದಾರೆ ಅಂತ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ ಹಾಕಿದ್ದ ಯುವಕನನ್ನ ಕೊಡಗು ಪೊಲೀಸರು ಬಂಧಿಸಿದ್ದಾರೆ.

    ಬಾಗಲಕೋಟೆ ನಿವಾಸ ನಾಗಪ್ಪ (26) ಬಂಧಿತ ಯುವಕ. ಕಿಡಿಗೇಡಿ, ಮಡಿಕೇರಿ ನಗರದ (Madikeri City) ವ್ಯಾಪ್ತಿಯಲ್ಲಿ ಆಂಟಿಯರು, ಹುಡುಗಿಯರು ಡೇಟಿಂಗ್‌ಗೆ ಸಿಕ್ತಾರೆ, ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಅಂತ ಮೊಬೈಲ್‌ ನಂಬರ್‌ ಕೂಡ ಹಾಕಿದ್ದ. ಇದರ ವಿರುದ್ಧ ಪ್ರವಾಸಿಗರು ಮಾತ್ರವಲ್ಲದೇ ಕೊಡಗಿನ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ ದಸರಾ ವೇಳೆ ಯುವತಿಯರನ್ನ ಕೆಣಕ್ಕಿದ್ರೆ ಹುಷಾರ್‌; ಮದುವೆ ಮಂಟಪಕ್ಕೆ ಕರೆತಂದು ಕೇಸ್‌ ದಾಖಲು

    Kodagu Social Media Post

    ಈ ಹಿಂದೆ ಪುಣೆಯಲ್ಲಿ ಹುಡುಗಿಯರು ಸಿಕ್ತಾರೆ ಅನ್ನೋ ಪೋಸ್ಟ್‌ ನಂಬಿ ನಾಗಪ್ಪ 4,000 ರೂ. ಹಣ ಕಳೆದುಕೊಂಡಿದ್ದ. ಹೀಗಾಗಿ ತಾನೂ ಕೂಡ ಏಕೆ ಮಹಿಳೆಯರ ಫೋಟೋಗಳನ್ನ ಹಾಕಿ ಹಣ ಮಾಡಬಾರದು ಅಂತ ಆಲೋಚನೆ ಮಾಡಿದ್ದ. ಹಲವಾರು ಕಡೆ ಇದೇ ರೀತಿ ಪೋಸ್ಟ್‌ಗಳನ್ನ ಹಾಕಿ 30 ರಿಂದ 40 ಸಾವಿರ ರೂ. ಸಂಪಾದನೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

    ಅದೇ ರೀತಿ ಮಡಿಕೇರಿಯಲ್ಲೂ ಹುಡ್ಗೀರು, ಆಂಟಿಯರು ಸಿಕ್ತಾರೆ ಅಂತ ಪೋಸ್ಟ್‌ ಹಾಕಿದ್ದ. ಇದನ್ನ ನಂಬಿ ಮಡಿಕೇರಿ ಹಾಗೂ ಕುಶಾಲನಗರದ ಕೆಲ ಯುವಕರು ಹಣ ಕಳೆದುಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ. ಬಳಿಕ ಈ ಪೇಜ್‌ ವಿರುದ್ಧ‌ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಕೊಡಗು | ವಯನಾಡ್‌ ಸಮೀಪದ ತಮರಶೆರಿ ಘಾಟ್ ಬಳಿ ಭೂಕುಸಿತ; ಬದಲಿ ಮಾರ್ಗಕ್ಕೆ ಸೂಚನೆ

  • ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

    ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

    ಮಡಿಕೇರಿ: ಕರ್ನಾಟಕದ ಕಾಶ್ಮೀರ ಮತ್ತು ಭಾರತದ ಸ್ಕಾಟ್ಲೆಂಡ್ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ (Kodagu) ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ ಎಂದು ದುಷ್ಟರು ಸಾಮಾಜಿಕ ಜಾಲತಾಣಗಳಲ್ಲಿ (SocialMedia) ಪೋಸ್ಟ್ ಹಾಕಿದ್ದಾರೆ.

    ಕೊಡಗಿನ ವಾತಾವರಣ, ಮಳೆ, ಟೂರಿಸಂಗೆ ಪ್ರಸಿದ್ಧಿ ಹೊಂದಿರುವ, ರಮಣೀಯ ಗುಡ್ಡಗಾಡು ಪ್ರದೇಶಗಳು, ಹಸಿರನ್ನು ಹೊದ್ದಂತಿರುವ ನೆಲ, ಮತ್ತು ಭೋರ್ಗರೆಯುವ ಹಲವಾರು ಜಲಪಾತಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಕೈಮಾಡಿ ಕರೆಯುವ ಸುಂದರವಾದ ಸ್ಥಳ. ಹೀಗಾಗಿ ದೇಶ ವಿದೇಶಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಆಗಮಿಸುತ್ತಾರೆ. ಇಲ್ಲಿನ ಹೋಂಸ್ಟೇಗಳಲ್ಲಿ ತಂಗುವ ಪ್ರವಾಸಿಗರು ಚುಮು ಚುಮು ಚಳಿ, ಆಹ್ಲಾದಕರವಾದ ವಾತಾವರಣಗಳನ್ನು ನೋಡಿ ಎಂಜಾಯ್ ಮಾಡಿ ಹೋಗುತ್ತಾರೆ. ಇನ್ನೂ ಕೆಲವರು ಕೊಡಗಿನ ಆಹಾರ ಪದ್ಧತಿಗೆ ಮನಸೋತು ಇಲ್ಲಿನ ವಿಶೇಷ ಖಾದ್ಯಗಳನ್ನು ಸವಿದು ತೆರಳುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಈ ನಡುವೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೊಡಗಿನ ಹುಡುಗಿಯರು ಬೇಕಾ, ಮಹಿಳೆಯರು ಬೇಕಾ, ಇಲ್ಲಿ ಬಂದರೆ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಎಂದೆಲ್ಲ ಜಿಲ್ಲೆಯ ಮೇಲೆ ಅಪಪ್ರಚಾರ ಮಾಡಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ – ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

    ಕಳೆದ ಹಲವಾರು ವರ್ಷಗಳ ಹಿಂದೆ ನಿಮ್ಮ ಪಬ್ಲಿಕ್ ಟಿವಿ ಕಾಲ್ ಗರ್ಲ್ ಸಿಗುತ್ತಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ನಂಬರ್ ಹಾಕಿದ ದುಷ್ಟರ ಮುಖವಾಡ ಬಯಲು ಮಾಡಿತ್ತು. ಇದೀಗ ಕೆಲ ತಿಂಗಳುಗಳಿಂದ ಈ ರೀತಿಯ ಅಪಪ್ರಚಾರ ಮಾಡುತ್ತಿರುವುದು ವರದಿಯಾಗುತ್ತಲೇ ಇರುವುದರಿಂದ ಇದೀಗ ಜಿಲ್ಲೆಯ ಜನರು  ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

  • ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

    ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

    ಮೈಸೂರು: ಭಾನು ಮುಷ್ತಾಕ್ (Banu Mushtaq) ಅವರು ದಸರಾ ಉತ್ಸವ ಉದ್ಘಾಟಿಸುವ ಮುನ್ನ ತಾಯಿ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು ಎಂದು ಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar) ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಕೊಡಗಿನಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ್ದ ಯದುವೀರ್‌, ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದರು. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಯದುವೀರ್‌ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಭಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಬರಹಗಾರ್ತಿ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿಯಾಗಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ ನಿಜ ಆದರೆ ಈ ಹಿಂದೆ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಅವರು ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ.

    ದಸರಾ (Mysuru Dasara) ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಶಾಸ್ತ್ರ ಮತ್ತು ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಂಸ್ಥಾನದ ಕಾಲದಿಂದಲೂ ವೈಭವದಿಂದ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಉತ್ಸವವಾಗಿದೆ. ಇದನ್ನೂ ಓದಿ: ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

    ಈ ಪವಿತ್ರ ಪರಂಪರೆಯನ್ನ ಗಮನಿಸಿದರೆ, ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ

  • ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಮಡಿಕೇರಿ: ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.

    ಕೊಡಗಿನ ವಿರಾಜಪೇಟೆಯಲ್ಲಿ ಮಾತಾನಾಡಿದ ಅವರು, ಬಾನು ಮುಷ್ತಾಕ್ ಅವರು ಖ್ಯಾತ ಬರಹಗಾರ್ತಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೊತೆಗೆ ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಮಾನವಾದ ಹಕ್ಕು ಕೋಡಬೇಕು. ಮಸೀದಿಗಳಿಗೆ ಅವಕಾಶ ಕೋಡಬೇಕು ಎಂದು ಬಾನು ಮುಷ್ತಾಕ್ ಅವರು ಈ ಹಿಂದೆ ಸಾಮಾಜಿಕ ಬಹಿಷ್ಕಾರವನ್ನು ಕೂಡ ಎದುರಿಸಿದ್ದರು ಎಂದಿದ್ದಾರೆ. ಇದನ್ನೂ ಓದಿ: ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

    ಕನ್ನಡ ಭಾಷೆ, ಕನ್ನಡ ಸಾಹಿತ್ಯಕ್ಕಾಗಿ ಅವರು ಕೊಟ್ಟಿರುವ ಕೊಡುಗೆಗಳು ಅಪಾರವಾಗಿದೆ. ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಗವಿಕಲರ ಬಗ್ಗೆ ತಮಾಷೆ – ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಿಗೆ ಸುಪ್ರೀಂ ತರಾಟೆ

    ಇನ್ನೂ ಈ ಬಗ್ಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಪೂಜೆ ಮಾಡುವುದು ಇಲ್ಲವೇ ಇಲ್ಲ. ಇದು ಜಾತ್ಯತೀತ ವ್ಯವಸ್ಥೆಯಾಗಿದೆ. ಧಾರ್ಮಿಕ ಪೂಜೆಗಳನ್ನು ನಾವು ವೈಯಕ್ತಿಕವಾಗಿ ಮನೆಯಲ್ಲಿ ಮಾಡಿಕೊಳ್ಳುತ್ತೇವೆ. ಸರ್ಕಾರಕ್ಕೆ ಇದೊಂದು ಉತ್ಸವ. ಅವರ ಆಯ್ಕೆ ಬಗ್ಗೆ ನನ್ನ ವಿರೋಧವಿಲ್ಲ ಎಂದಿದ್ದಾರೆ.

  • PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    ಮಡಿಕೇರಿ: ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ (Raja Seat Glass Bridge) ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತ್ತೀಚೆಗೆ ರಾಜಾಸೀಟ್‌ನಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಸೇತುವೆ ಮತ್ತು ಫುಡ್ ಕೋರ್ಟ್ ನಿರ್ಮಾಣ ಯೋಜನೆಗೆ ತೋಟಗಾರಿಕೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಇದಕ್ಕೆ ಜಿಲ್ಲೆಯ ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಸರ್ಕಾರ ಆ ಯೋಜನೆಯನ್ನು ಹಿಂಪಡೆದಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಡಿಕೇರಿ ಶಾಸಕ ಮಂಥರ್ ಗೌಡ, ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ರಾಜ್ಯ ಸರ್ಕಾರ ಹಿಂಪಡೆದಿದೆ. ಗ್ಲಾಸ್ ಬ್ರಿಡ್ಜ್‌ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಅಪಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಯೋಜನೆ ರದ್ದು ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮುಸುಕುದಾರಿಯ ಮಂಪರು ಪರೀಕ್ಷೆ ಮಾಡಿ : ಕೈ ಶಾಸಕ ಸವದಿ ಒತ್ತಾಯ

    ಕೋಟ್ಯಂತರ ರೂ. ವೆಚ್ಚದಲ್ಲಿ ಯೋಜನೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಯೋಜನೆಯ ಅಪಾಯಗಳ ಬಗ್ಗೆ ಪಬ್ಲಿಕ್ ಟಿವಿ ಕೆಲ ದಿನಗಳ ಹಿಂದೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಕೊಡಗು (Kodagu) ಜಿಲ್ಲಾಡಳಿತದಿಂದ ಯೋಜನೆ ರದ್ದು ಮಾಡಲಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಕರೆಯುವ ಮೊದಲು ಅಲ್ಲಿಗೆ ಭೂ ವಿಜ್ಞಾನಿಗಳನ್ನ, ಪರಿಸರ ಇಲಾಖೆ ತಜ್ಞರನ್ನ ಕರೆಸಿ ವಿವಿಧ ಪರೀಕ್ಷೆಗಳನ್ನು ಮಾಡಬೇಕಿತ್ತು. ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲು ಈ ಜಾಗ ಸುರಕ್ಷಿತವಾಗಿದೆಯಾ ಎಂದು ಚೆಕ್ ಮಾಡಬೇಕಿತ್ತು. ಆದರೆ ಯಾವುದನ್ನೂ ಮಾಡದೆ ತೋಟಗಾರಿಕಾ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಮಾಜಿ ಸಚಿವ ಎಂಸಿ ನಾಣಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಯೋಜನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

  • ರೈತರಿಗೆ ಹಕ್ಕುಪತ್ರಕ್ಕೆ ಆಗ್ರಹ – ಸೋಮವಾರಪೇಟೆ ತಾಲ್ಲೂಕು ಬಂದ್ ಯಶಸ್ವಿ

    ರೈತರಿಗೆ ಹಕ್ಕುಪತ್ರಕ್ಕೆ ಆಗ್ರಹ – ಸೋಮವಾರಪೇಟೆ ತಾಲ್ಲೂಕು ಬಂದ್ ಯಶಸ್ವಿ

    ಮಡಿಕೇರಿ: ʻಸಿʼ ಮತ್ತು ʻಡಿʼ ದರ್ಜೆ ಭೂಮಿಯಲ್ಲಿ (ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬಾರದು ಮತ್ತು ರೈತರಿಗೆ ಹಕ್ಕುಪತ್ರ (Farmer Land Rights) ನೀಡಬೇಕು ಎಂದು ಆಗ್ರಹಿಸಿ ರೈತ ಹೋರಾಟ ತಾಲೂಕು ಸಮಿತಿ ಕರೆ ನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್ (Somwarpet Bandh) ಯಶಸ್ವಿಯಾಗಿದೆ.

    ಸೋಮವಾರಪೇಟೆ ತಾಲೂಕು ಮಾತ್ರವಲ್ಲದೇ ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ, ಆಲೂರು ಸಿದ್ದಾಪುರ ಭಾಗದಲ್ಲೂ ಬಂದ್‌ ಯಶಸ್ವಿಯಾಗಿ ನಡೆಯಿತು. ಇನ್ನೂ ಖಾಸಗಿ ಶಾಲೆಗಳಿಗೆ ಮೊದಲೇ ರಜೆ ನೀಡಿದ್ದರಿಂದ ಬಂದ್‌ ಎಫೆಕ್ಟ್‌ ತಟ್ಟಲಿಲ್ಲ, ಕೆಲ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಾರದ ಹಿನ್ನೆಲೆ ತರಗತಿಗಳೂ ನಡೆಯದ ಪ್ರಸಂಗ ಕಂಡುಬಂದಿತು. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್‌

    ಕೂಲಿ ಕಾರ್ಮಿಕರ ಪರದಾಟ:
    ಬಂದ್‌ ಹಿನ್ನೆಲೆ ಕೆಲ ಸರ್ಕಾರಿ ಶಾಲಾ, ಕಾಲೇಜು ಮಕ್ಕಳು ಕೂಲಿ ಕಾರ್ಮಿಕರು ಬಸ್ ಇಲ್ಲದೇ ಪರದಾಡಿದರು. ಇದೇ ಸಂದರ್ಭ ಸೋಮವಾರಪೇಟೆಯ ವಿವೇಕಾನಂದ ವೃತ್ತದಲ್ಲಿ ವಾಹನಗಳನ್ನ ತಡೆದ ರೈತರು ಅಕ್ರೋಶ ಹೋರ ಹಾಕಿದ್ರು. ಈ ವೇಳೆ ಟ್ರಾಫಿಕ್‌ ಸಮಸ್ಯೆಯಿಂದ ರೋಗಿಯೊಬ್ಬರು ಸರ್ಕಾರಿ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲೇ ಸಿಲುಕಿ ಒದ್ದಾಡಿದರು. ಇದನ್ನೂ ಓದಿ: ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ

    ಬಂದ್‌ ಕುರಿತು ಮಾತನಾಡಿದ ಪ್ರತಿಭಟನಾಕಾರರು, ಕಳೆದ ಹಲವು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ವನ್ಯಪ್ರಾಣಿಗಳ ಉಪಟಳದ ನಡುವೆಯೂ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ, ಇತ್ತೀಚೆಗೆ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ನುಂಗಲಾರದ ತುತ್ತಾಗುತ್ತಿವೆ. ಸಿ ಮತ್ತು ಡಿ ಜಾಗದ ಸಮಸ್ಯೆ ರೈತರನ್ನು ಕಾಡುತ್ತಿದ್ದು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳಿಂದ ಆಗಾಗ್ಗೆ ಬರುತ್ತಿರುವ ನೋಟೀಸ್‌ಗಳು ರೈತರ ನಿದ್ದೆಗೆಡಿಸಿವೆ. ಇದನ್ನೂ ಓದಿ: ಸಚಿವ ಸಂಪುಟದಿಂದ ರಾಜಣ್ಣ ವಜಾ – ಪರಿಷತ್‌ನಲ್ಲಿ ಗದ್ದಲ ಗಲಾಟೆ

    ಕೂರ್ಗ್ ಲ್ಯಾಂಡ್ ರೆಗ್ಯೂಲೇಶನ್ 1889ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ರೈತರಿಗೆ ಹಿಡುವಳಿ ಜಮೀನನ್ನ ನೀಡಲಾಗಿತ್ತು. ಉಳಿದಂತೆ ದಟ್ಟವಾದ ಅರಣ್ಯ, ಕಾಡು, ಬೆಟ್ಟಗುಡ್ಡ ಪ್ರದೇಶಗಳನ್ನ ಅರಣ್ಯ ಜಮೀನು ಎಂದು, ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಸರ್ಕಾರದ ಪೈಸಾರಿ ಜಮೀನೆಂದು ಗುರುತಿಸಲಾಗಿತ್ತು. ಜನಸಂಖ್ಯೆ ಬೆಳೆದಂತೆ ಪೈಸಾರಿ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯ ಕೈಗೊಂಡ ರೈತರು ಭೂ ಮಂಜೂರಾತಿ ಕಾಯ್ದೆ ಯಡಿ ಇದೇ ಜಾಗಕ್ಕೆ ಹಕ್ಕುಪತ್ರ ಮಾಡಿಕೊಂಡಿದ್ದಾರೆ. ಉಳಿದವರ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಈಗಲೂ ಬಾಕಿ ಉಳಿದಿವೆ. 1978ರಲ್ಲಿ ಸರ್ಕಾರದ ಆದೇಶದಂತೆ ಸರ್ಕಾರದ ಹೆಸರಿನಲ್ಲಿ ದಾಖಲಾಗಿರುವ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಸಿ ಮತ್ತು ಡಿ ಭೂಮಿ ಎಂದು ವರ್ಗೀಕರಿಸಿ ಅಂತಹ ಜಮೀನುಗಳನ್ನು ಮಾತ್ರ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ಅಧೀನ ಕಚೇರಿಯ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ಹೆಸರಲ್ಲಿರುವ ಎಲ್ಲಾ ಜಮೀನುಗಳನ್ನು ಸ್ಥಳ ಪರಿಶೀಲನೆ ಮಾಡದೇ ಕಚೇರಿ ಯಲ್ಲಿಯೇ ಕುಳಿತುಕೊಂಡು ಪಟ್ಟಿಮಾಡಿ ʻಸಿ ಮತ್ತು ಡಿʼ ಜಮೀನುಗಳೆಂದು ರಾಜ್ಯ ಸರ್ಕಾರಕ್ಕೆ ವರದಿ ಮಾಡಿದ್ದಾರೆ. ವೈಜ್ಞಾನಿಕ ಸರ್ವೇ ಮಾಡದೆ, ಸಂಪೂರ್ಣವಾಗಿ ಪೈಸಾರಿ ಭೂಮಿಯನ್ನು ಸಿ ಮತ್ತು ಡಿ ಎಂದು ವರದಿ ನೀಡಿರುವುದರಿಂದ ಸಮಸ್ಯೆ ಎದುರಾಗಿದೆ ಎಂಬುದು ರೈತರ ಆರೋಪವಾಗಿದೆ. ಇದನ್ನೂ ಓದಿ: `SIR’ ಅಭಿಯಾನ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳ ಪ್ರತಿಭಟನೆ – ಲೋಕಸಭೆ, ರಾಜ್ಯಸಭೆಯ ಕಲಾಪ ಮುಂದೂಡಿಕೆ

  • ಪ್ಲಾಸ್ಟಿಕ್ ಶೇಡ್‌ನಲ್ಲಿ ಬದುಕು ನಡೆಸುತ್ತಿದ್ದ ವೃದ್ಧೆಗೆ ʻಸೂರಿನ ಭಾಗ್ಯʼ ಕಲ್ಪಿಸಿದ ದಾನಿ

    ಪ್ಲಾಸ್ಟಿಕ್ ಶೇಡ್‌ನಲ್ಲಿ ಬದುಕು ನಡೆಸುತ್ತಿದ್ದ ವೃದ್ಧೆಗೆ ʻಸೂರಿನ ಭಾಗ್ಯʼ ಕಲ್ಪಿಸಿದ ದಾನಿ

    ಮಡಿಕೇರಿ: ಸೂರಿಲ್ಲದವ್ರಿಗೆ ಸೂರು, ನಿವೇಶನ ಇಲ್ಲದೋರಿಗೆ ಸೈಟು, ಯಾರೂ ಮನೆಯಿಲ್ಲದೆ ಬದುಕಬಾರದು ಇದು ಸರ್ಕಾರದ ಘೋಷಣೆ, ಹಾಗೆ ಹೀಗೆ ಅಂತಾ ಭಾಷಣಮಾಡೋ ನಾಯಕರು, ಮಂತ್ರಿಗಳು ಒಂದು ಸಲ ಇತ್ತ ಈ ಊರಿನ ವೃದ್ದೆಯ ಸಂಕಷ್ಟದ ಪರಿಸ್ಥಿತಿ ನೋಡಿದ್ರೆ ಅವರ ಯೋಜನೆಗಳು ನಿಜವಾಗಿಯೂ ಬಡವರಿಗೆ ತಲುಪಿದೆಯಾ ಎಂಬುದರ ಸತ್ಯ ಅರಿವಾಗುತ್ತೆ. ಅದ್ರಲ್ಲೂ ಕೊಡಗಿನ ಈ ಗ್ರಾಮದಲ್ಲಿರುವ ತಾಯಿ-ಮಗನ ರೋಧನ ಎಂತಹವರ ಹೃದಯ ಕರಗಿಸುವಂತಿದೆ.

    ಧೋ..ಎಂದು ಸುರಿಯುತ್ತಿರುವ ಮಳೆ. ಮಳೆ ಗಾಳಿ‌ ಎನ್ನದೇ ಕೆಸರು ಮಿಶ್ರಿತ ಮಣ್ಣಿನಲ್ಲೇ ಮಲಗಿರೋ ವೃದ್ದೆ. ಇವರ ಪರಿಸ್ಥಿತಿ ಕಂಡು ಗ್ರಾಮಸ್ಥರೇ‌ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಆಡಳಿತ ವರ್ಗದವರಿಗೆ ಇಡೀ ಶಾಪ ಹಾಕುತ್ತಿರುವ ಗ್ರಾಮಸ್ಥರು. ಯೆಸ್‌ ಇಂತಹದೊಂದು ಹೃದಯ ಕರಗಿಸುವಂತಹ ದೃಶ್ಯ ಕಂಡುಬಂದಿದ್ದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ‌. ಇದನ್ನೂ ಓದಿ: ಸಿಂಧೂರ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯನ್ನ ಆಕ್ರಮಣಕಾರಿ ಅಸ್ತ್ರವಾಗಿ ಬಳಸಲಾಗಿತ್ತು: ಸಮೀರ್ ಕಾಮತ್

    ಹೀಗೆ ಮನೆ ಇಲ್ಲದೆ ಜೀವನ ಸಾಗಿಸುತ್ತಿರೋದು ಬೈರಿ ಎಂಬುವವರ ಕುಟುಂಬ. ಕಳೆದ 30-40 ವರ್ಷಗಳಿಂದ ಈ ಕುಟುಂಬ ಇದೇ ಗ್ರಾಮದಲ್ಲಿ ವಾಸವಾಗಿತ್ತು. ಮಣ್ಣಿನ ಮನೆಯಲ್ಲಿ ವಾಸವಿದ್ದ ಕುಟುಂಬ 2018 ರಲ್ಲಿ ಮನೆ ಕಳೆದುಕೊಂಡಿತು. ಆಗಿನಿಂದಲೂ ಟಾರ್ಪಲ್ ಹೊದಿಕೆಯಲ್ಲೇ ಬದುಕು ದೂಡುತ್ತಿದೆ. ಬುದ್ಧಿಮಾಂದ್ಯ ಮಗನೊಂದಿಗೆ ತಾಯಿ ಒಂದು ಟಾರ್ಪಲ್ ಅಡಿಯಲ್ಲಿ ವಾಸವಾಗಿದ್ದಾರೆ. ಕೆಲ ದಿನಗಳ ಹಿಂದೆ ಗುತ್ತಿಗೆದಾರರಾದ ಅಬ್ಬಾಸ್ ಎಂಬುವವರು ಈ ಕುಟುಂಬದ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ರು. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಇಂತಹ ಕುಟುಂಬಗಳಿಗೆ ಮನೆಗಳಿಲ್ಲದೆ ಶೋಚನೀಯ ಬದುಕು ಕಾಣುತ್ತಿವೆ. ಆಡಳಿತ ವರ್ಗ ಇದೆಯೇ ಎಂದು ಅಕ್ರೋಶ ಹೋರ ಹಾಕಿದ್ರು.

    ಇನ್ನೂ ಇವರ ಪರಿಸ್ಥಿತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಓಡೋಡಿ ಅಜ್ಜಿ ನೆರವಿಗೆ ದಾವಿಸಿದ್ದಾರೆ. ಅಲ್ಲದೇ ಅಜ್ಜಿಯ ಜೀವನ ನೋಡಿ ಮರುಕ ಪಟ್ಟ ಸುಂಟಿಕೊಪ್ಪ ನಿವಾಸಿ ಸಮಾಜ ಸೇವಕ ಲತೀಫ್, ಸ್ವಂತ ಹಣದಲ್ಲಿ ಒಂದು ಸುಂದರ ಗೂಡು ಕಟ್ಟಿಸಿಕೊಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಭಾನುವಾರ ಬೆಂಗಳೂರಿಗೆ ಬರಲಿದ್ದಾರೆ ಮೋದಿ – ಹಲವೆಡೆ ವಾಹನ ಸಂಚಾರ ಬಂದ್‌, ಪರ್ಯಾಯ ಮಾರ್ಗ ಯಾವುದು?

    ಪ್ಲ್ಯಾಸ್ಟಿಕ್ ಹೊದಿಗೆ ಇದ್ದ ಹಳೇ ಮನೆ ಇದ್ದ ಸ್ಥಳದಲ್ಲಿಯೇ ಹೊಸ ಸೂರು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಆಗಸ್ಟ್‌ 10ರಿಂದಲೇ ಕೆಲಸ ಆರಂಭವಾಗಲಿದೆ. ಒಂದು ತಿಂಗಳಲ್ಲೇ ಕುಟುಂಬಕ್ಕೆ ಸುಂದರ ಸೂರು ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಜೊತೆಗೆ ತಮ್ಮ ಸ್ವಂತ ಜಾಗವನ್ನೂ ಬಡವರಿಗೆ ದಾನವಗಿ ನೀಡುವ ಮೂಲಕ‌ ಹೃದಯ ಶ್ರೀಮಂತ್ತಿಕೆ ಮೆರೆದಿದ್ದಾರೆ. ಇದನ್ನೂ ಓದಿ: ತುಮಕೂರು | ಮಹಿಳೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ

  • ಶ್ರೀ ಕ್ಷೇತ್ರದ ಬಗ್ಗೆ ಯೂಟ್ಯೂಬರ್‌ಗಳಿಂದ ಅಪಪ್ರಚಾರ – ಕೊಡಗಿನಲ್ಲೂ ಸಿಡಿದ ಧರ್ಮಸ್ಥಳ ಭಕ್ತರು

    ಶ್ರೀ ಕ್ಷೇತ್ರದ ಬಗ್ಗೆ ಯೂಟ್ಯೂಬರ್‌ಗಳಿಂದ ಅಪಪ್ರಚಾರ – ಕೊಡಗಿನಲ್ಲೂ ಸಿಡಿದ ಧರ್ಮಸ್ಥಳ ಭಕ್ತರು

    ಮಡಿಕೇರಿ: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthal) ಬಗ್ಗೆ ಕೆಲ ಯೂಟ್ಯೂಬರ್‌ಗಳು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಕೊಡಗಿನಲ್ಲಿ ಪ್ರತಿಭಟನೆ (Protest In Kodagu) ನಡೆಸಿದೆ.

    ಮಡಿಕೇರಿ ನಗರದ (Madikeri City) ಗಾಂಧಿ ಮೈದಾನದಲ್ಲಿ ಸೇರಿದ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಸಂಘಟನೆಯ ಸದಸ್ಯರು, ಅಪಪ್ರಚಾರ ನಡೆಸುತ್ತಿರುವವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

    ಧರ್ಮಸ್ಥಳದಲ್ಲಿ ಈಗಾಗಲೇ ಎಸ್‌ಐಟಿ (SIT) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆ ತನಿಖೆ ಪೂರ್ಣಗೊಳ್ಳುವವರೆಗೆ ಎಲ್ಲರೂ ತಾಳ್ಮೆಯಿಂದ ಇರಬೇಕಾಗುತ್ತದೆ. ಆದ್ರೆ ಕೆಲವರು ಶ್ರೀಕ್ಷೇತ್ರದ ಬಗ್ಗೆ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ಹಿಂದೂ ದೇವಾಲಯದ ಮೇಲೆ ಬೌದ್ಧಿಕ ದಾಳಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

    ಗಿರೀಶ ಮಟ್ಟಣ್ಣನವರ್ ಕೇವಲವಾಗಿ ಮಾತನಾಡುತ್ತಾ ಕೆಸರೆರಚುವ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಭಕ್ತರ ಮೌನಕ್ಕೆ ಅವಕಾಶ ಇಲ್ಲ. ಭಕ್ತವೃಂದ (Dharmasthala Devotees) ಎದ್ದು ನಿಂತಿದೆ. ಸುಳ್ಳು ಆರೋಪ ಮಾಡುವ ಯೂಟೂಬರ್‌ಗಳನ್ನ ಕೂಡಲೇ ಬಂಧಿಸಬೇಕು ಎಂದು ಅಕ್ರೋಶ ಹೋರಹಾಕಿದ್ದಾರೆ. ಇನ್ನೂ ಇದೇ ಸಂದರ್ಭ ಜಿಲ್ಲಾಧಿಕಾರಿ ವೆಂಕಟರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ನನಗೆ ಗನ್‌ಮ್ಯಾನ್‌ ಭದ್ರತೆ ನೀಡಿ: ಎಸ್‌ಐಟಿ ಮುಂದೆ ದೂರುದಾರನಿಂದ ಬೇಡಿಕೆ

    youtubers beaten up Chaos erupted in Dharmasthala devotees outraged 1

    ಯೂಟ್ಯೂಬರ್‌ಗಳ ಮೇಲೆ ಮಾರಣಾಂತಿಕ ಹಲ್ಲೆ
    ಬುಧವಾರ (ಆ.6) ಸಂಜೆ ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರು. ಬಳಿಕ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ವರದಿ ಮಾಡಲು ಹೋಗಿದ್ದ ಖಾಸಗಿ ವಾಹಿನಿ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಧರ್ಮಸ್ಥಳ ಕ್ಷೇತ್ರ ಅಪಪ್ರಚಾರ ಸಹಿಸಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಬಗ್ಗದ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮುಂದೆ ಧರಣಿ ಕೂತಿದ್ದರು. ಕ್ಷೇತ್ರದ ತೇಜೋವಧೆ ಮಾಡುವವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌ ದಾಖಲು

  • ರಸ್ತೆ ಇಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನ ಕಂಬಳಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಜನ

    ರಸ್ತೆ ಇಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನ ಕಂಬಳಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಜನ

    – ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ʻಪಬ್ಲಿಕ್‌ ಟಿವಿʼ ತಂಡ

    ಮಡಿಕೇರಿ: ರಸ್ತೆ ಸಂಪರ್ಕವೇ ಇಲ್ಲದೇ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 76 ವರ್ಷದ ವೃದ್ಧೆಯನ್ನ ಕಂಬಳಿಯಿಂದ ಆಸ್ಪತ್ರೆಗೆ (Hospital) ಹೊತ್ತೊಯ್ದ ಮನಕಲುಕುವ ದೃಶ್ಯ ಕೊಡಗು (Kodagu) ಜಿಲ್ಲೆಯಲ್ಲಿ ಕಂಡುಬಂದಿದೆ.

    ಹೌದು. ಕೊಡಗಿನಲ್ಲಿ ವರುಣನ ಆರ್ಭಟ (Heavy Rain) ಹೆಚ್ಚಾಗಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಬೀಸುವ ಬಿರುಗಾಳಿಗೆ ಗ್ರಾಮೀಣ ಭಾಗದಲ್ಲಿ ಹತ್ತಾರು ಬೃಹತ್‌ ಮರಗಳು ದರಾಶಾಹಿಯಾಗಿವೆ. ಈ ನಡುವೆ ಮನಕಲುಕುವ ಪ್ರಸಂಗವೊಂದು ಕಂಡುಬಂದಿದೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

    ಸೋಮವಾರಪೇಟೆ ತಾಲ್ಲೂಕಿನ ಕಿರುದಾಲೆ ಗ್ರಾಮದಲ್ಲಿ ಇರುವಂತಹ ವಯೋವೃದ್ಧೆಯೋಬ್ಬರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ತೆರಳಲು ಆಗದೇ ತಮ್ಮ ಮನೆಯಲ್ಲೇ ನರಳಾಡುತ್ತಿದ್ದರು. ಈ ವೇಳೆ ಕಿರುದಾಲೆ ಗ್ರಾಮದಲ್ಲಿ ಗ್ರೌಂಡ್ ರಿಪೋರ್ಟ್ ಮಾಡುತ್ತಿದ್ದ ʻಪಬ್ಲಿಕ್ ಟಿವಿʼ ತಂಡ ವೃದ್ಧೆಯ ನರಳಾಟವನ್ನು ಗಮನಿಸಿದೆ. ರಸ್ತೆ ಸಂಪರ್ಕವಿಲ್ಲದ ಕಾರಣ ಗ್ರಾಮಸ್ಥರ ಜೊತೆಗೂಡಿ ಕಂಬಳಿ ಸಹಾಯದಿಂದ ಕಾಫಿತೋಟದ ಮೂಲಕ ವೃದ್ಧೆಯನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಕಾಫಿ ತೋಟದ ದುರ್ಘಮ ಹಾದಿಯಲ್ಲಿ ಸುಮಾರು ಅರ್ಧ ಕಿಮೀ ಸಾಗಿ ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಯಿತು. ಇದನ್ನೂ ಓದಿ: ಚಳ್ಳಕೆರೆ | ಕಾರು, ಬೈಕ್ ನಡುವೆ ಭೀಕರ ಅಪಘಾತ – ಹಬ್ಬದ ದಿನವೇ ಅಣ್ಣ, ತಂಗಿ ದಾರುಣ ಸಾವು

    ಈ‌ ಸಂದರ್ಭ ʻಪಬ್ಲಿಕ್ ಟಿವಿʼಯೊಂದಿಗೆ ಮಾತಾನಾಡಿದ ಗ್ರಾಮಸ್ಥರು, 2018ರಂತೆಯೇ ಈ ಭಾಗದಳೆ ಮಳೆ ಗಾಳಿ ಹೆಚ್ಚಾಗಿದೆ. ಶಾಲಾ‌ ಮಕ್ಕಳು, ವಯೋವೃದ್ಧರನ್ನ ಹೊರಗೆ ಕರೆದುಕೊಂಡು ಹೋಗಲು ಆಗುತ್ತಿಲ್ಲ. ಭಾರಿ ಗಾಳಿ ಬಿಸುತ್ತಿರುವುದರಿಂದ ಯಾವ ಸಮಯದಲ್ಲಿ ಮರಗಳು ಬೀಳುತ್ತವೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಅನಾರೋಗ್ಯದಿಂದ ನರಳಾಡುತ್ತಿದ್ದ ವೃದ್ಧೆಯನ್ನ ತೋಟದ ಬದಿಯಿಂದ ಆಸ್ಪತ್ರೆಗೆ ಸಾಗಿಸುತ್ತಿದ್ದೇವೆ. ಇದಕ್ಕೆ ಪಬ್ಲಿಕ್‌ ಟಿವಿ ತಂಡ ಕೈಜೋಡಿಸಿದೆ, ಧನ್ಯವಾದಗಳು ಅಂತ ಭಾವುಕರಾದ್ರು.