Tag: Madikeri Rural Police

  • ಆಸ್ತಿ ಕಲಹ – ತಮ್ಮನಿಗೆ ಅಣ್ಣನೇ ಗುಂಡು ಹಾರಿಸಿ ಕೊಲೆ

    ಆಸ್ತಿ ಕಲಹ – ತಮ್ಮನಿಗೆ ಅಣ್ಣನೇ ಗುಂಡು ಹಾರಿಸಿ ಕೊಲೆ

    ಮಡಿಕೇರಿ: ಆಸ್ತಿ ವಿಚಾರವಾಗಿ ಸಹೋದರರ ನಡುವೆ ಕಲಹ ಏರ್ಪಟ್ಟು ಅಣ್ಣನೇ ತಮ್ಮನಿಗೆ ಗುಂಡಿನ ಹಾರಿಸಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲ(AbyathMangala) ಗ್ರಾಮದಲ್ಲಿ ನಡೆದಿದೆ.

    ಕೊಳಂಬೆ(Kolambe) ವಿನು ಬೆಳ್ಯಪ್ಪ(53) ಮೃತ ದುರ್ದೈವಿ. ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು, ಅಭ್ಯತ್ ಮಂಗಲದಲ್ಲಿ ಹೊಂದಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಸಹೋದರ ಮಣಿ ಹಿಂದಿನಿಂದ ಬಂದು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್- ಜನಾರ್ದನ ರೆಡ್ಡಿ ದೋಷಿ

    ಆರೋಪಿ ಮಣಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಅಣ್ಣ-ತಮ್ಮನ ನಡುವೆ ಹಲವು ದಿನಗಳಿಂದ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಮಗಳ ಸಾವಿಗೆ ಪ್ರತೀಕಾರ – ‘ತಮ್ಮ’ನ ಅಪ್ಪನನ್ನು ಬರ್ಬರವಾಗಿ ಕೊಂದ ತಂದೆ

    ಘಟನೆ ಸಂಬಂಧಿಸಿದಂತೆ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು(Madikeri Rural Police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಡಗು ಎಸ್‌ಪಿ ರಾಮರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  • ಚಾಕೊಲೇಟ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ – ಕಾಮುಕ ಅರೆಸ್ಟ್‌

    ಚಾಕೊಲೇಟ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ – ಕಾಮುಕ ಅರೆಸ್ಟ್‌

    ಮಡಿಕೇರಿ: ಚಾಕೊಲೇಟ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೋರ್ವ ತನ್ನ ಮನೆಯಲ್ಲೇ ಅತ್ಯಚಾರ ಎಸಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗ್ರಾಮಾಂತರ ಠಾಣಾ (Madikeri Rural Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಮಧು (45) ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ. ನಿನ್ನೆ (ಸೋಮವಾರ) ಸಂಜೆ ತನ್ನ ಮಗಳಿಂದ ಬಾಲಕಿಗೆ ಪೋನ್ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ. ಬೇಸಿಗೆ ರಜೆ ಇರುವ ಕಾರಣ ಬಾಲಕಿ ಪೋಷಕರ ಬಳಿ ಸ್ನೇಹಿತೆ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಾಳೆ. ಮನೆಗೆ ಹೋದ ಸಂದರ್ಭದಲ್ಲಿ ಮಧು ತನ್ನ ಮಗಳಿಗೆ ಹಾಗೂ ಅಕೆಯ ಸ್ನೇಹಿತೆಗೆ ಚಾಕೊಲೇಟ್ ಕೊಟ್ಟಿದ್ದಾನೆ. ನಂತರ ತನ್ನ ಮಗಳಿಗೆ ಮಗಳಿಗೆ ಅಂಗಡಿಗೆ ಹೋಗಿ ಮತ್ತಷ್ಟು ಚಾಕೊಲೇಟ್ ತರುವಂತೆ ಹೇಳಿ ಕಳಿಸಿದ್ದಾನೆ‌.

    ಮಗಳು ಚಾಕೊಲೇಟ್‌ ತರಲು ಅಂಗಡಿಗೆ ಹೋದ ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯ ಪೋಷಕರು ತನ್ನ ಮಗಳು ಮನೆಗೆ ಕಳುಹಿಸುವಂತೆ ಹೇಳಿದ್ದಾರೆ. ಆಗ ಮಧು ನಿಮ್ಮ ಮಗಳು ಬೆಳಿಗ್ಗೆ ಬರುತ್ತಾಳೆ ನನ್ನ ಮಗಳೊಂದಿಗೆ ಆಟವಾಡುತ್ತಿದ್ದಾಳೆ ಎಂದು ಹೇಳಿ ಫೋನ್‌ ಕರೆಯನ್ನ ಕಟ್‌ ಮಾಡಿದ್ದಾನೆ. ಅನುಮಾನಗೊಂಡ ಬಾಲಕಿಯ ಪೋಷಕರು ಮಗಳ ಸ್ನೇಹಿತೆಯ ಮನೆಗೆ ಹೋಗಿ ವಿಚಾರ ಮಾಡುವಾಗ ತನ್ನ ಮೇಲೆ ನಡೆದಿರುವ ಘಟನೆ ಬಗ್ಗೆ ಪೋಷಕರ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ‌.

    ಕೂಲಿ ಕಾರ್ಮಿಕರಾಗಿದ್ದ ಬಾಲಕಿಯ ಪೋಷಕರು ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.