Tag: Madikere

  • ಸೋಮವಾರಪೇಟೆ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ

    ಸೋಮವಾರಪೇಟೆ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ

    ಮಡಿಕೇರಿ: ಸೋಮವಾರಪೇಟೆ  (Somwarpet) ತಾಲೂಕಿನ ಕಾಜೂರು (Kajuru) ಮೀಸಲು ಅರಣ್ಯದ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಮತ್ತೆ ಕಾಡಾನೆ (Wild Elephant ) ಪ್ರತ್ಯಕ್ಷವಾಗಿದೆ.

    ಕಾಡಾನೆಗಳು ಹಗಲಲ್ಲೇ ಸಂಚರಿಸುತ್ತಿರುವುದರಿಂದ ಅಲ್ಲಿರುವ ಜನರಿಗೆ ಸಂಚರಿಸಲು ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಕೋವರ್ ಕೊಲ್ಲಿಯ ಟಾಟಾ ಕಾಫಿ ಸಂಸ್ಥೆಯ ತೋಟದಲ್ಲಿದ್ದ ಒಂಟಿ ಸಲಗವನ್ನು ಆರ್.ಆರ್.ಟಿ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ಕಾಡಿಗಟ್ಟಲು ಮುಂದಾದ ಸಂದರ್ಭದಲ್ಲಿ ದಾಳಿ ಮಾಡಿದೆ. ಇದನ್ನೂ ಓದಿ: ಹೆಚ್‌ಡಿಡಿಯನ್ನು ಭೇಟಿ ಮಾಡಿ ಚರ್ಚಿಸಿದ ಯೋಗೇಶ್ವರ್‌

    ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕಾಜೂರು ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡೆದಿತ್ತು. ಸೋಮವಾರ ಬೆಳಗ್ಗೆ ಮತ್ತೆ ಕಾಜೂರಿನ ಆರ್.ಆರ್.ಟಿ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ತಂಗಿರುವ ವಸತಿಗೃಹದ ಬಳಿಗೆ ಬಂದು ಮತ್ತೆ ಕಾಡಿಗೆ ಕಾಡಾನೆ ಹಿಂದಿರುಗಿದೆ. ಇದನ್ನೂ ಓದಿ: ಮೋದಿ 3ನೇ ಬಾರಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಹೆಚ್‌ಡಿಕೆ

    ಕಾಡಾನೆ ಹಗಲಿನಲ್ಲಿಯೇ ಓಡಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಕೂಲಿ ಕಾರ್ಮಿಕರು ಭಯದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮಂಡಲರಾಧನೆಗೆ ಬಾಗಲಕೋಟೆ ಅರ್ಚಕ ಆಯ್ಕೆ

  • ಹೆಸರನ್ನೇ ಹೇಳದೆ ಆಟೋ ಚಾಲಕರಿಗೆ ವೈದ್ಯರ ತಂಡದಿಂದ ಧನಸಹಾಯ

    ಹೆಸರನ್ನೇ ಹೇಳದೆ ಆಟೋ ಚಾಲಕರಿಗೆ ವೈದ್ಯರ ತಂಡದಿಂದ ಧನಸಹಾಯ

    – ವೈದ್ಯಕೀಯ ಸೇವೆಯ ಜೊತೆ ಸಮಾಜ ಸೇವೆ

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವನ್ನು ಲಾಕ್‍ಡೌನ್ ಮಾಡಿ ತಿಂಗಳು ಕಳೆಯುತ್ತಿದೆ. ಈ ನಡುವೆ ದುಡಿಮೆಯೂ ಇಲ್ಲದೆ ಆಟೋ ಚಾಲಕರ ಸ್ಥಿತಿಯೂ ಶೋಚನೀಯವಾಗಿದೆ.

    ಆಟೋಗಳನ್ನು ಬಾಡಿಗೆ ಪಡೆದು ದುಡಿಯುತ್ತಿದ್ದ ಚಾಲಕರ ಸ್ಥಿತಿಯಂತೂ ಇನ್ನೂ ಗಂಭೀರ. ಹೀಗಾಗಿಯೇ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಆಟೋ ಓಡಿಸಿಕೊಂಡು ಬದುಕು ನಡೆಸುತ್ತಿದ್ದ, 40 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಹೆಸರನ್ನು ಹೇಳದ ಮೂವರು ವೈದ್ಯರ ತಂಡವೊಂದು ಆರ್ಥಿಕ ನೆರವು ನೀಡಿದೆ.

    ಪ್ರತೀ ಚಾಲಕರಿಗೆ 1 ಸಾವಿರ ರೂಪಾಯಿ ಧನಸಹಾಯ ನೀಡಿ ನೊಂದವರಿಗೆ ಸಮಾಧಾನ ಮಾಡಿದೆ. ಸೇವಾ ಭಾರತಿ ಸಂಸ್ಥೆಯ ಮೂಲಕ ಈ ಆಟೋ ಚಾಲಕರಿಗೆ ತಲಾ ಒಂದು ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಿ ತಾತ್ಕಾಲಿಕ ವೆಚ್ಚಕ್ಕೆ ಸಹಾಯ ಮಾಡಿದ್ದಾರೆ. ಆ ಮೂಲಕ ವೈದ್ಯರು ಮಾನವೀಯತೆ ಮೆರೆದಿದ್ದಾರೆ. ವೈದ್ಯರ ಈ ಸಹಾಯಕ್ಕೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಧನ್ಯವಾದ ಅರ್ಪಿಸಿದೆ.

  • ಭೂ ಕುಸಿತದಿಂದ ಸೂರು ಕಳೆದುಕೊಂಡ 500ಕ್ಕೂ ಹೆಚ್ಚು ಕುಟುಂಬ

    ಭೂ ಕುಸಿತದಿಂದ ಸೂರು ಕಳೆದುಕೊಂಡ 500ಕ್ಕೂ ಹೆಚ್ಚು ಕುಟುಂಬ

    ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು, ಮೊಣ್ಣಂಗೇರಿ ಗ್ರಾಮಗಳಲ್ಲಿ ನಡೆದಿರೋ ಭೂ ಕುಸಿತದಿಂದ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳು ಸೂರು ಕಳೆದುಕೊಂಡಿದ್ದರೆ, ಒಂದಷ್ಟು ಕುಟುಂಬಗಳು ತಾವು ಉಳಿದಿದ್ದೇ ಹೆಚ್ಚು ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಉದ್ಘಾರಕ್ಕೆ ಕಾರಣವಾಗಿರುವುದು ಅಲ್ಲಿನ ಸದ್ಯದ ಭೀಕರ ಸ್ಥಿತಿ.

    ಕೆಲವು ಭಾಗಗಳಲ್ಲಿ ಭೂಕುಸಿತ ಪ್ರಪಾತವನ್ನೇ ಸೃಷ್ಟಿಸಿದ್ದು, ಆಸುಪಾಸಲ್ಲಿದ್ದ ಮನೆ, ಪರಿಸರ ಗುರುತೇ ಸಿಗದಷ್ಟು ಬದಲಾಗಿದೆ. ಬೆಟ್ಟ ಒಡೆದು ಹೊರಬರುವ ನೀರು ಅಲ್ಲಲ್ಲಿ ಹೊಳೆಯೇ ಇರದಿದ್ದ ಜಾಗದಲ್ಲಿ ಹೊಳೆಗಳನ್ನು ಸೃಷ್ಟಿಸಿದ್ದರೆ, ಮತ್ತೊಂದ್ಕಡೆ ಅಲ್ಲಿನ ಹೆದ್ದಾರಿ ಸಂಪೂರ್ಣ ನಾಮಾವಶೇಷ ಆಗಿದೆ.

    ರಸ್ತೆ ಹತ್ತು ಅಡಿ ಆಳಕ್ಕೆ ಕುಸಿದಿದ್ದು, ಸದ್ಯಕ್ಕೆ ರಸ್ತೆ ರಿಪೇರಿ ಸಾಧ್ಯವೇ ಇಲ್ಲ ಅನ್ನುವಂತಿದೆ. ಆದರೂ ಎಲ್ಲಿವರೆಗೆ ರಸ್ತೆಯ ಮಣ್ಣು ತೆರವು ಮಾಡಲಾಗುತ್ತೋ ಅಲ್ಲಿವರೆಗೆ ಮಾಡ್ತೀವಿ ಅನ್ನುತ್ತಲೇ ಜೆಸಿಬಿ ಕೆಲಸ ಮಾಡುತ್ತಿದೆ. ಇನ್ನು ಜೋಡುಪಾಲ ಜಂಕ್ಷನ್ ಬಳಿಯ ಗುಡ್ಡದಲ್ಲೇ ಸ್ಫೋಟ ಸಂಭವಿಸಿದ್ದು ಹತ್ತಾರು ಮನೆಗಳನ್ನು ಮಣ್ಣಿನಡಿಗೆ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 14 ಅಡಿ ಉದ್ದ, 6 ಕೆ.ಜಿ ತೂಕದ ಕಾಳಿಂಗ ಸರ್ಪ ರಕ್ಷಣೆ!

    14 ಅಡಿ ಉದ್ದ, 6 ಕೆ.ಜಿ ತೂಕದ ಕಾಳಿಂಗ ಸರ್ಪ ರಕ್ಷಣೆ!

    ಮಡಿಕೇರಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊತ್ನಳ್ಳಿ ಗ್ರಾಮದಲ್ಲಿ ಸೆರೆಯಾಗಿದೆ.

    ಗ್ರಾಮದ ಪ್ರಸಾದ್ ಮನೆಯ ಮುಂಭಾಗದಲ್ಲಿರುವ ಮರದ ಕೊಂಬೆ ಮೇಲೆ ಬಂದು ಸೇರಿಕೊಂಡಿದ್ದ 14 ಅಡಿ ಉದ್ದ, 6 ಕೆ.ಜಿ ತೂಕದ ಭಾರೀ ಗಾತ್ರದ ಹಾವನ್ನು ಉರಗ ತಜ್ಞ ರಘು ಹಾಗೂ ಜನಾರ್ಧನ್ ಕಾರ್ಯಾಚರಣೆ ಮಾಡಿ ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಹಾವು ಮನೆಯ ಮುಂಭಾಗದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ರಘು ಹಾಗು ಸ್ನೇಹಿತರ ತಂಡ ಸತತ ಒಂದು ಗಂಟೆ ಪ್ರಾಯಾಸ ಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಹಾವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ರಘು ಹಾವುಗಳ ಅಳಿವಿನ ಬಗ್ಗೆ ಜನರಿಗೆ ಹಾವುಗಳ ಬಗ್ಗೆ ಇರೋ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿ ಹಾವು ಕಂಡರೆ ಕೊಲ್ಲಬೇಡಿ. ನಮಗೆ ಮಾಹಿತಿ ನೀಡಿ, ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಿಸೋ ಕೆಲಸ ಮಾಡುತ್ತಿರೋ ರಘು ಇದೂವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಇವುಗಳ ಪೈಕಿ 17 ಕಾಳಿಂಗ ಸರ್ಪಗಳು ಸೇರಿವೆ. ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ವಾಸ ಮಾಡೋ ಕಾಳಿಂಗ ಸರ್ಪ ಆಕಸ್ಮಿಕವಾಗಿ ಮನೆಗೆ ಬಂದು ಸೇರಿಕೊಂಡಿತ್ತು. ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ರಘು ಸೋಮವಾರಪೇಟೆ ಸಮೀಪದ ಪುಷ್ಪಗಿರಿ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಮಾವುತರನ್ನು ಬಿಟ್ಟು ಹೋಗಲು ನಿರಾಕರಿಸಿ ಕಾವೇರಿ ನದಿಯ ಮಧ್ಯಭಾಗದಲ್ಲಿ ಹೋಗಿ ನಿಂತ ಆನೆ!

    ಮಾವುತರನ್ನು ಬಿಟ್ಟು ಹೋಗಲು ನಿರಾಕರಿಸಿ ಕಾವೇರಿ ನದಿಯ ಮಧ್ಯಭಾಗದಲ್ಲಿ ಹೋಗಿ ನಿಂತ ಆನೆ!

    ಮಡಿಕೇರಿ: ದುಬಾರೆ ಸಾಕಾನೆ ಶಿಬಿರ ಮಾವುತರು ಹಾಗೂ ಕಾಡಾನೆಗಳ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಯಿತು.

    ದುಬಾರೆ ಆನೆ ಶಿಬಿರದಿಂದ ಛತ್ತೀಸ್‍ಗಢಕ್ಕೆ ಮೂರು ಆನೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಜನವರಿ 22ರಂದು ಪರಶುರಾಮ ಹಾಗೂ ತೀರ್ಥರಾಮ ಎನ್ನುವ ಆನೆಗಳನ್ನು ಕಳುಹಿಸಿದ್ದರು. ಆದರೆ ಮಾವುತರ ಅಚ್ಚುಮೆಚ್ಚಿನ ಆನೆ ಅಜ್ಜಯ್ಯ ಮಾತ್ರ ಲಾರಿ ಹತ್ತಲಿಲ್ಲ.

    ಅರಣ್ಯ ಸಿಬ್ಬಂದಿ ಸಾಕಷ್ಟು ಕಸರತ್ತು ನಡೆಸಿದರೂ ಕೂಡ 30 ವರ್ಷ ವಯಸ್ಸಿನ ಆನೆ ಅಜ್ಜಯ್ಯ ಮಾತ್ರ ಒಪ್ಪಲಿಲ್ಲ. ಬಳಿಕ ದಸರಾ ಅಭಿಮನ್ಯು ಆನೆಯನ್ನು ತಂದು ಲಾರಿಗೆ ಹತ್ತಿಸುವ ಯತ್ನ ನಡೆಸಿದರು.

    ಈ ವೇಳೆ ಆನೆಗಳ ನಡುವಿನ ಜಟಾಪಟಿಯಲ್ಲಿ ಅಜ್ಜಯ್ಯ 2 ಬಾರಿ ನೆಲಕ್ಕುರುಳಿದ ಪರಿಣಾಮ ಅಜ್ಜಯ್ಯನ ದೇಹದ ಹಲವೆಡೆ ಗಾಯಗಳಾಗಿದೆ. ಗಾಬರಿಗೊಂಡ ಅಜ್ಜಯ್ಯ ಕಾಲಿಗೆ ಹಾಕಿದ್ದ ಸರಪಳಿಯನ್ನು ತುಂಡರಿಸಿಕೊಂಡು ರಾತ್ರಿ 12 ಗಂಟೆ ವೇಳೆಯಲ್ಲಿ ಕಾಡಿಗೆ ತಪ್ಪಿಸಿಕೊಂಡು ಹೋಗಿದೆ.

    ಬೆಳಗ್ಗೆ ಸಿಬ್ಬಂದಿ ಅಜ್ಜಯ್ಯನ ಹುಡುಕಾಟ ನಡೆಸಿದಾಗ ಕಾವೇರಿ ನದಿಯ ಮಧ್ಯಭಾಗದಲ್ಲಿ ನಿಂತಿತ್ತು. ಆದರೆ ದಡಕ್ಕೆ ಬರಲು ಒಪ್ಪಲೇ ಇಲ್ಲ. ಕೊನೆಗೆ ಹಿರಿಯ ಮಾವುತರೊಬ್ಬರು ಅಜ್ಜಯ್ಯನ ಮನವೊಲಿಸಿ ದಡಕ್ಕೆ ಕರೆತಂದು ಉಪಚಾರ ಮಾಡುತ್ತಿದ್ದಾರೆ.

    ಘಟನೆ ನಡೆದ ಬಳಿಕ ಅಸಮಾಧಾನಗೊಂಡ ಮಾವುತರು, ನಾವು ಸಾಕಿ ಸಲಹಿದ ಆನೆಗಳನ್ನು ಬೇರೆ ರಾಜ್ಯಗಳಿಗೆ ನೀಡಲ್ಲ ಎಂದು ಹೇಳುತ್ತಿದ್ದಾರೆ.