– ಗಾಯಕ್ಕೆ ಖಾರದ ಪುಡಿ ಎರಚಿ, ಬಾಯಿಗೆ ಗಮ್ ಹಾಕಿದ ದುಷ್ಕರ್ಮಿ
ಭೋಪಾಲ್: ಪೋಷಕರ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ಯುವತಿಯೊಬ್ಬಳನ್ನು ಒಂದು ತಿಂಗಳ ಕಾಲ ಬಂಧಿಸಿ ಚಿತ್ರಹಿಂಸೆ ನೀಡಿ ಅತ್ಯಚಾರವೆಸಗಿದ ಘಟನೆ ಮಧ್ಯಪ್ರದೇಶದ (Madhya Pradesh) ಗುನಾದಲ್ಲಿ (Guna) ನಡೆದಿದೆ.
ಯುವತಿಗೆ ಮದುವೆಯಾಗುವಂತೆ ಮತ್ತು ಆಕೆಯ ಪೋಷಕರ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಬೆಲ್ಟ್ ಹಾಗೂ ಪೈಪ್‍ನಿಂದ ಥಳಿಸಿ ತೀವ್ರ ಹಿಂಸೆ ನೀಡಿದ್ದಾನೆ. ಅಲ್ಲದೇ ಗಾಯಗಳಿಗೆ ಖಾರದ ಪುಡಿ ಎರಚಿ ಆಕೆ ಕಿರುಚುವುದು ಹೊರಗೆ ಕೇಳದಂತೆ ತುಟಿಗಳಿಗೆ ಗಮ್ ಹಾಕಿ ಅಂಟಿಸಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್- ಕಾರ್ಮಿಕ ಗಂಭೀರ
ಯುವತಿ ಏ.16ರ ರಾತ್ರಿ ಬಂಧನದಿಂದ ತಪ್ಪಿಸಿಕೊಂಡು 5 ಕಿಮೀ ದೂರದಲ್ಲಿರುವ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಈ ವೇಳೆ ಸಂತ್ರಸ್ತೆಯ ಸ್ಥಿತಿ ಕಂಡ ಪೊಲೀಸರು (Police) ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದ್ದಾಗ, ಅಕ್ರಮ ಮದ್ಯದೊಂದಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 294 (ಅಶ್ಲೀಲ ಭಾಷೆ), ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಹಾಗೂ ಅಬಕಾರಿ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಲ್ಮಾನ್ ಮನೆ ಮುಂದೆ ಗುಂಡಿನ ದಾಳಿ: ಸ್ಪೋಟಕ ವಿಚಾರ ಬಾಯ್ಬಿಟ್ಟ ಆರೋಪಿ
ಭೋಪಾಲ್: ಅತ್ಯಾಚಾರಕ್ಕೀಡಾದ ಸಂತ್ರಸ್ತೆಯನ್ನು ಕೊಲ್ಲದೇ ಜೀವಂತವಾಗಿ ಉಳಿಸಿ ದಯೆ ತೋರಿದ್ದಾನೆ ಎಂಬ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟಿನ (Madhya Pradesh High Court) ಇಂದೋರ್ ಪೀಠವು ಇತ್ತೀಚೆಗೆ ಅತ್ಯಾಚಾರ ಅಪರಾಧಿಯೋರ್ವನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು (Jail) ಶಿಕ್ಷೆಗೆ ಇಳಿಸಿದೆ.
ಮೇಲ್ಮನವಿಯನ್ನು ಭಾಗಶಃ ಅನುಮತಿಸಿದ ದ್ವಿಸದಸ್ಯ ಪೀಠವು, ಮಹಿಳೆಯರ ಘನತೆಯ ಬಗ್ಗೆ ಗೌರವವಿಲ್ಲ ಎಂದು ತೋರಿಸುವ 4 ವರ್ಷ ವಯಸ್ಸಿನ ಹೆಣ್ಣುಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿರುವುದು ರಾಕ್ಷಸ ಮನಸ್ಥಿತಿಯನ್ನು ತೋರಿಸುತ್ತದೆ. ಆದರೂ ಜೀವಾವಧಿ ಶಿಕ್ಷೆಗೆ ಈ ಪ್ರಕರಣ ಅರ್ಹವಲ್ಲ. ಸಂತ್ರಸ್ತೆಯನ್ನು ಜೀವಂತ ಬಿಟ್ಟು ದಯೆ ತೋರಿದ್ದಾನೆ. ಆ ಕಾರಣಕ್ಕೆ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಬಹುದು ಎಂದು ಹೇಳಿದೆ.
12 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ತನ್ನನ್ನು ದೋಷಿ ಎಂದು ಇಂದೋರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿದಾರ ರಾಮು ಅಲಿಯಾಸ್ ರಾಮ್‌ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.
ಪ್ರಕರಣದಲ್ಲಿ ಅಪರಾಧಿಯು ಸಂತ್ರಸ್ತೆ ಗುಡಿಸಲಿನ ಬಳಿ ಟೆಂಟ್‌ನಲ್ಲಿ ವಾಸಿಸುತ್ತಿದ್ದನು. ಒಂದು ರೂಪಾಯಿ ಕೊಡುವ ನೆಪದಲ್ಲಿ ಸಂತ್ರಸ್ತೆಯನ್ನು ಆರೋಪಿ ಟೆಂಟ್‌ಗೆ ಕರೆದಿದ್ದಾನೆ. ಅಲ್ಲಿಯೇ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಳಿಕ ಸಂತ್ರಸ್ತೆ ಕೂಗು ಕೇಳಿ ಆಕೆಯ ತಂದೆ ಹಾಗೂ ಅಜ್ಜಿ ಸಹಾಯಕ್ಕೆ ಧಾವಿಸಿದ್ದಾರೆ. ಟೆಂಟ್ ಪ್ರವೇಶಿಸಿದಾಗ ಮಗು ರಕ್ತಸ್ರಾವವಾಗಿ ಬಿದ್ದಿರುವುದು ಹಾಗೂ ಅಪರಾಧಿ ಬೆತ್ತಲೆಯಾಗಿರುವುದನ್ನು ಕಂಡಿದ್ದಾರೆ. ಬಳಿಕ ಆತ ಓಡಿಹೋಗಿದ್ದಾನೆ. ನಂತರ ಬಾಲಕಿ ಇಡೀ ಘಟನೆಯ ಬಗ್ಗೆ ತಂದೆಗೆ ತಿಳಿಸಿದ್ದು, ಆಕೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ (Hospital) ಕರೆದೊಯ್ದಾಗ, ವೈದ್ಯರು ಅತ್ಯಾಚಾರ ಆಗಿರುವುದನ್ನು ಖಚಿತಪಡಿಸಿದ್ದರು.
ಬಳಿಕ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಸೆಕ್ಷನ್ 3(1)12ರ (SCST Act 1989) ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದು ವಿಚಾರಣಾ ನ್ಯಾಯಾಲಯಕ್ಕೆ ಬದ್ಧವಾಗಿತ್ತು. ಸಾಕ್ಷ್ಯವನ್ನು ದಾಖಲಿಸಿದ ನಂತರ ಮೇಲ್ಮನವಿದಾರನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
Live Tv
[brid partner=56869869 player=32851 video=960834 autoplay=true]