Tag: Madhuswamy

  • ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ

    ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ

    ಚಿಕ್ಕಮಗಳೂರು: ಮಾಜಿ ಸಚಿವ ಮಾಧುಸ್ವಾಮಿ (Madhuswamy) ತೆರಳುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಕಡೂರು (Kaduru) ತಾಲೂಕಿನ ಹೇಮಗಿರಿ ಗೇಟ್ ಬಳಿ ನಡೆದಿದೆ.

    ಬಿ.ಎಸ್ ಯಡಿಯೂರಪ್ಪ (BS Yediyurappa) ಕಾರ್ಯಕ್ರಮಕ್ಕೆ ತೆರಳುವ ವೇಳೆ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಗುಜುರಿ ಆಟೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಇದನ್ನೂ ಓದಿ: ಬಿಯರ್ ಬಾಟ್ಲಿಯಲ್ಲಿ ಇರಿದು ಬಾರ್ ಸಿಬ್ಬಂದಿ ಹತ್ಯೆಗೈದ ಕುಡುಕ

    ಮಾಜಿ ಸಚಿವ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಬೀರೂರಿನಲ್ಲಿ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಟ್ಟಿಗೆ ನುಗ್ಗಿ ಕುರಿಗಳನ್ನು ತಿಂದು ತೇಗಿ ನಿದ್ದೆಗೆ ಜಾರಿದ ಚಿರತೆ!

  • ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!

    ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!

    – ಭೇಟಿ ಬಗ್ಗೆ ಮಾಜಿ ಸಚಿವರು ಹೇಳಿದ್ದೇನು..?

    ತುಮಕೂರು: ಜಿಲ್ಲೆಯ ರಾಜಕೀಯ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಬ್ಬರ ಮುನಿಸು.. ಮೂರನೇ ವ್ಯಕ್ತಿಗೆ ಲಾಭ ಎಂಬಂತೆ ಇಂದು ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ (MuddahanumeGowda) ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಹುಟ್ಟಿಸಿದ್ದಾರೆ.

    ಮಾಧುಸ್ವಾಮಿಯವರು (Madhuswamy) ಲೋಕಸಭಾ ಚುನಾವಣೆಯ (Loksabha Elections 2024) ಟಿಕೆಟ್ ತಪ್ಪಿದ್ದಿಂದ ಅಸಮಾಧಾನಗೊಂಡಿದ್ದರು. ಬಳಿಕ ಯಡಿಯೂರಪ್ಪರ ಮಧ್ಯಸ್ಥಿಕೆಯಿಂದ ಸಮಾಧಾನಗೊಂಡಿದ್ದರು. ಆದರೆ ಇದೀಗ ದಿಢೀರ್ ಆಗಿ ಮುದ್ದಹನುಮೇಗೌಡ-ಮಾಧುಸ್ವಾಮಿ ಭೇಟಿ ಕುತೂಹಲ ಕೆರಳಿಸಿದೆ. ಭೇಟಿಯ ವೇಳೆ ಮುದ್ದಹನುಮೇಗೌಡ ಅವರು ಚುನಾವಣೆಯಲ್ಲಿ ಬೆಂಬಲಿಸುವಂತೆ ಮಾಧುಸ್ವಾಮಿಯ ಸಹಕಾರ ಕೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Tumakuru Look Sabha 2024: ಜಿದ್ದಾಜಿದ್ದಿನ ಕಣದಲ್ಲಿ ಗೆಲ್ಲೋದ್ಯಾರು?

    ಬಳಿಕ ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರು ಬಹಳ ಹಳೆಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದವರು. ಸ್ನೇಹಿತರು ಅಂತ ಒಬ್ಬ ಅಭ್ಯರ್ಥಿ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸೊದು ಬೇಡ. ಸೌಜನ್ಯದ ಭೇಟಿ ಮಾಡಿದ್ದಾರೆ. ಕ್ಯಾಂಡಿಡೇಟ್ ಆದವರು ಸಪೋರ್ಟ್ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರು ಸಪೋರ್ಟ್ ಮಾಡುವುದಕ್ಕೆ ಆಗುತ್ತಾ?. ಅದೆಲ್ಲಾ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

    ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ವಿ. ಸೋಮಣ್ಣ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‍ನಿಂದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.

  • ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ

    ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ

    – ಸೋಮಣ್ಣ ಗೆಲ್ಲೋದು ನನಗೆ ಇಷ್ಟವಿಲ್ಲ

    ತುಮಕೂರು: ಪ್ರತಾಪ್ ಸಿಂಹ, ಸಿ.ಟಿ.ರವಿ ಮೋದಿ (Narendra Modi) ಮುಖ ನೋಡಿ ಕೆಲಸ ಮಾಡಬಹುದು. ಆದರೆ ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ ಎಂದು ಬಿಜೆಪಿ (BJP) ಟಿಕೆಟ್ ವಂಚಿತ ಮಾಜಿ ಸಚಿವ ಮಾಧುಸ್ವಾಮಿ (Madhuswamy) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸೋಮಣ್ಣ (V Somanna) ಗೆಲ್ಲೋದು ಸಂಸದ ಬಸವರಾಜು ಸೇರಿ ನನಗೂ ಇಷ್ಟವಿಲ್ಲ. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ. ಯಡಿಯೂರಪ್ಪನವರೇ (BS Yediyurappa) ಟಿಕೆಟ್ ಕೊಡೋದಾಗಿ ನನಗೆ ಆಸೆ ಹುಟ್ಟಿಸಿದ್ದರು. ಈಗ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ನನಗೆ ಯಡಿಯೂರಪ್ಪ ಅವರ ಮೇಲೆ ಬೇಸರ ಇದೆ. ಅಪ್ಪ-ಮಕ್ಕಳ ಅಸ್ಥಿತ್ವಕ್ಕಾಗಿ ಏನೇನೋ ಮಾಡಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ನನಗೆ ಟಿಕೆಟ್ ಕೊಡಿಸಿದ್ದು ಪತ್ನಿ ಕುಟುಂಬ ಅಲ್ಲ: ಯದುವೀರ್ ಸ್ಪಷ್ಟನೆ

    ವಿ.ಸೋಮಣ್ಣ ಹೊರಗಿನಿಂದ ಬಂದವರು. ಅವರು ಗೆಲ್ಲೋದು ಇಲ್ಲಿಯ ಮತದಾರರಿಗೆ ಬೇಡ. ಹಾಗಂತ ನಾನು ಕಾಂಗ್ರೆಸ್‌ಗೆ (Congress) ಹೋಗುತ್ತೇನೆ ಎಂದು ತಪ್ಪು ತಿಳಿಯಬೇಡಿ. ಸೋಮಣ್ಣ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತಿದ್ದೆ. ಸೋಮಣ್ಣರನ್ನು ಬಲಿ ಕೊಡಲು ಸಂಸದ ಬಸವರಾಜು ಕರೆದುಕೊಂಡು ಬಂದಿದ್ದಾರೆ. ಕಾಂಗ್ರೆಸ್ ಜೊತೆ ಬಸವರಾಜು ಸಂಬಂಧ ಚೆನ್ನಾಗಿದೆ. ಕೆ.ಎನ್ ರಾಜಣ್ಣ ತಮಗೆ ಎರಡೂ ಪಕ್ಷದಲ್ಲಿ ಸ್ನೇಹಿತರಿದ್ದಾರೆ, ನಾವು ಗೆಲ್ಲುತ್ತೇವೆ ಎಂದಿದ್ದರು. ಜಿಎಸ್ ಬಸವರಾಜು ರಾಜಣ್ಣರ ಋಣ ತೀರಿಸಬೇಕಾಗಿದೆ. ಹಾಗಾಗಿ ಇವರೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂದರು. ಇದನ್ನೂ ಓದಿ: ನಾಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ

  • ಮಗ ಮಾಡಿದ ತಪ್ಪಿಗೆ ಶಾಸಕರು ಯಾಕೆ ರಾಜೀನಾಮೆ ಕೊಡಬೇಕು: ಮಾಧುಸ್ವಾಮಿ ಪ್ರಶ್ನೆ

    ಮಗ ಮಾಡಿದ ತಪ್ಪಿಗೆ ಶಾಸಕರು ಯಾಕೆ ರಾಜೀನಾಮೆ ಕೊಡಬೇಕು: ಮಾಧುಸ್ವಾಮಿ ಪ್ರಶ್ನೆ

    ಮಂಡ್ಯ: ಮಗ ಮಾಡಿರುವ ತಪ್ಪಿಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ (Madal Virupakshappa) ಯಾಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಮಾಧುಸ್ವಾಮಿ (Madhuswamy) ಪ್ರಶ್ನಿಸಿದ್ದಾರೆ.

    ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣ ಸಂಬಂಧ ಮಂಡ್ಯದ ಹುಲಿಕೆರೆಯಲ್ಲಿ ಮಾತನಾಡಿದ ಸಚಿವರು, ನಾವು ಅದರ ಬಗ್ಗೆ ಕಮೆಂಟ್ ಮಾಡೊಕೆ ಅಗಲ್ಲ. ಶಾಸಕರು ಯಾಕೆ ರಾಜೀನಾಮೆ ಕೊಡಬೇಕು. ಅವರ ಮಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಅವರ ಮಗ ದುಡ್ಡು ತೆಗೆದುಕೊಂಡಿದ್ದಾನೆ ಮುಂದಿನ ಪರಿಣಾಮ ಎದುರಿಸುತ್ತಾನೆ ಎಂದು ಹೇಳಿದ್ದಾರೆ.

    ವಿರೂಪಾಕ್ಷಪ್ಪನ ಮಗ ಭ್ರಷ್ಟಾಚಾರ ನಿಗ್ರಹ ದಳ (ACB) ಯಲ್ಲಿ ಒಬ್ಬ ಆಫೀಸರ್. ಅವನು ಲಂಚ ತೆಗೆದುಕೊಂಡರೆ ವಿರೂಪಾಕ್ಷಪ್ಪ ಏನು ಮಾಡ್ತಾರೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಯಾಕೆ ಬರೆ ಹಾಕಬೇಕು. ಶಾಸಕರ ಮಗ ಮಾಡಿದ್ದಕ್ಕೆ ಸಿಎಂ ಯಾಕೆ ರಾಜೀನಾಮೆ ಕೊಡಬೇಕು. ಇಂತಹ ಅಯೋಗ್ಯರು ಯಾರ್ ಯಾರು ಇದ್ದಾರೆ ಎಂದು ನಾವು ಹುಡುಕಿಕೊಂಡು ಕೂರೋಕೆ ಆಗುತ್ತಾ ಎಂದು ಸಚಿವರು ಪ್ರಶ್ನಿಸಿದರು. ಇದನ್ನೂ ಓದಿ: ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡ್ಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗ್ಲಿ: ಸಿಎಂ

    40% ದಂಧೆ ಮಾಡುವುದಕ್ಕೆ ಅವರು ಯಾರೂ ಮಂತ್ರಿಯಲ್ಲ. ಆತ ಒಬ್ಬ ಸರ್ಕಾರಿ ಅಧಿಕಾರಿ, ಎಸಿಬಿಯಲ್ಲಿ ಇದ್ದವರು. ಶಾಸಕರಿಗೂ ಮುಖ್ಯಮಂತ್ರಿಗಳಿಗೂ ಇದರಲ್ಲಿ ಸಂಬಂಧವಿಲ್ಲ. ಕಾಂಗ್ರೆಸ್‍ನವರಿಗೆ ಏನೂ ಇಲ್ಲ, ಏನಾದ್ರು ಸಿಕ್ಕಿದರೆ ದೊಡ್ಡದು ಮಾಡಿಕೊಂಡು ಹೋಗ್ತಾರೆ. ಮೊದಲು ಭ್ರಷ್ಟಾಚಾರ (Corruption) ಸಾಬೀತು ಆಗಬೇಕು. ಹಣ ಕೊಟ್ಟವರು ತೆಗೆದುಕೊಂಡವರು ಎಲ್ಲಾ ಹೇಳಿಕೆ ತೆಗೆದುಕೊಳ್ಳಬೇಕು ಎಂದರು.

    ಈಗ ಅಧಿಕಾರಿಯ ಮನೆಯ ಮೇಲೆ ರೈಡ್ ಆಗಿದೆ. ಈ ಬಗ್ಗೆ ಅವರು ಸೂಕ್ತ ದಾಖಲೆ ನೀಡಿದ್ರೆ, ನಾಳೆ ನಾವು ನೀವು ಏನು ಮಾತಾಡೋಕೆ ಆಗಲ್ಲ. ದುಡ್ಡಿನ ದಾಖಲೆ ಸರಿಯಾಗಿ ಇದ್ರೆ ಮಾತುಗಳು ಬಂದ್ ಆಗುತ್ತೆ. ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಎನ್ನೊಕೆ ಆಗಲ್ಲ. ಇದು ಯಾವ ದುಡ್ಡು ಎಂದು ಅವರನ್ನು ಕೇಳಲಾಗುತ್ತೆ. ಅವರು ಇದಕ್ಕೆ ನೀಡುವ ಉತ್ತರದ ಮೇಲೆ ಎಲ್ಲಾ ಇದೆ. ದಾಖಲೆಗಳು ಸರಿಯಾಗಿ ಇಲ್ಲ ಎಂದ್ರೆ ಅದು ಭ್ರಷ್ಟಾಚಾರ ಆಗುತ್ತೆ ಎಂದು ತಿಳಿಸಿದರು.

  • ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ- ಸಾಕು ಬಿಟ್ಬಿಡಿ ಅಂತ ಮಾಧುಸ್ವಾಮಿ ಮನವಿ

    ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ- ಸಾಕು ಬಿಟ್ಬಿಡಿ ಅಂತ ಮಾಧುಸ್ವಾಮಿ ಮನವಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇಂದು ಸದನದಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಸಚಿವ ಮಾಧುಸ್ವಾಮಿ (Madhuswamy) ಅವರು ಸ್ಪಷ್ಟನೆ ನೀಡಿ ಮನವಿ ಮಾಡಿಕೊಂಡರು.

    ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ (Ashwathnarayan) ಅವರು ಭಾವೋದ್ವೇಗದಲ್ಲಿ ಮಾತನಾಡಿದ್ರು. ತಮ್ಮ ಹೇಳಿಕೆ ಬಗ್ಗೆ ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದನ್ನ ಇಲ್ಲಿಗೇ ಬಿಟ್ಬಿಡೋಣ ಎಂದರು. ಸಿದ್ದರಾಮಯ್ಯ (Siddaramaiah) ಕುರಿತ ಅಶ್ವಥ್ ನಾರಾಯಣರ ವಿವಾದಾತ್ಮಕ ಹೇಳಿಕೆ ಬಗ್ಗೆ ಚರ್ಚೆ ಸಾಕು, ಬಿಟ್ಟುಬಿಡಿ ಅಂತ ಸಚಿವರು ಮನವಿ ಮಾಡಿಕೊಂಡರು. ಇದನ್ನೂ ಓದಿ: ನಿಮ್ಮಂಥವರು MLA ಆಗಿರೋದೇ ಸದನಕ್ಕೆ ಅಗೌರವ- ಕಾಂಗ್ರೆಸ್ ಸದಸ್ಯರ ವಿರುದ್ಧ ಸಿಡಿದ ಕಾಗೇರಿ

    ಸದನದಲ್ಲೇನಾಯ್ತು..?: ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು ಎನ್ನುವ ಅಶ್ವಥ್ ನಾರಾಯಣ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದೇ ವೇಳೆ ಶಾಸಕ ಈಶ್ವರ್ ಖಂಡ್ರೆ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸ್ಪೀಕರ್ ವಿರುದ್ಧ ಅಸಮಾಧಾನ ಹೊರಹಾಕಿದರು.

    ಇದಕ್ಕೂ ಮುನ್ನ ಮಾತನಾಡಿ, ಯು.ಟಿ ಖಾದರ್, ಈಶ್ವರ್ ಖಂಡ್ರೆ ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಮಾತನಾಡಿ, ಸದನಕ್ಕೆ ಗೌರವ ಕೊಡಿ. ನಿಮ್ಮ ಹಿರಿತನಕ್ಕೆ ತಕ್ಕಂತೆ ನಡೆದುಕೊಳ್ಳಿ, ನನ್ನ ಅಧಿಕಾರವನ್ನು ಪೂರ್ಣ ಚಲಾಯಿಸಲು ಅವಕಾಶ ಕೊಡಬೇಡಿ. ಸುಮ್ಮನೆ ಕೂರದಿದ್ದರೇ ನಿಮ್ಮನ್ನು ಸದನದಿಂದ ಹೊರಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಅಶ್ವಥ್ ನಾರಾಯಣ್ ವಿರುದ್ಧ ಬೆಂಗಳೂರು, ಹುಬ್ಬಳ್ಳಿಯಲ್ಲಿ ದೂರು ದಾಖಲು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಚಿವ ಮಾಧುಸ್ವಾಮಿ ಮೇಲೆ ಮುನಿದ ಮಂತ್ರಿಗಳು?- ಬಿಜೆಪಿಯಲ್ಲಿ ಅಗ್ರೆಸ್ಸಿವ್ ಫೈಟ್

    ಸಚಿವ ಮಾಧುಸ್ವಾಮಿ ಮೇಲೆ ಮುನಿದ ಮಂತ್ರಿಗಳು?- ಬಿಜೆಪಿಯಲ್ಲಿ ಅಗ್ರೆಸ್ಸಿವ್ ಫೈಟ್

    ಬೆಂಗಳೂರು: ಸಚಿವ ಮಾಧುಸ್ವಾಮಿ (Madhuswamy) ಅಗ್ರೆಸ್ಸಿವ್ ಮಾತಿನ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ನಾವು ಎಲೆಕ್ಷನ್ (Election) ಗೆ ದಾರಿ ಮಾಡೋದು, ಮಾಧುಸ್ವಾಮಿ ಡ್ಯಾಮೇಜ್ ಮಾಡೋದಾ? ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

    ಪದೇ ಪದೇ ಮಾಧುಸ್ವಾಮಿಗೆ ಏಕೆ ಇಷ್ಟು ಧಾರಾಳತನ. ಬಿಗಿ ಮಾಡಿ ಎಂದು ಕೆಲ ಸಚಿವರ ಒತ್ತಡ ಹಾಕಿರುವ ಬಗ್ಗೆ ಬಿಜೆಪಿ ಮೂಲಗಳು ತಿಳಿಸಿವೆ. ರಾಜ್ಯಾಧ್ಯಕ್ಷರು, ಶಿಸ್ತು ಸಮಿತಿಗೆ ಸಚಿವರ ಗುಂಪೊಂದು ಒತ್ತಡ ಹಾಕಿದೆ ಎನ್ನಲಾಗಿದೆ. ಇದನ್ನೂ ಓದಿ: ಮಾಧುಸ್ವಾಮಿ ಮೊದಲು ಮಾತಾಡಲಿ- ಸಚಿವರ ಹೇಳಿಕೆಗೆ ಸಿಎಂ ವ್ಯಂಗ್ಯ

    ಈ ಹಿಂದೆ ಸರ್ಕಾರದ ಬಗ್ಗೆ ಮಾತನಾಡಿ, ಸ್ವಪಕ್ಷೀಯರ ಟೀಕೆಗೆ ಸಚಿವ ಮಾಧುಸ್ವಾಮಿ ಗುರಿಯಾಗಿದ್ದರು. ನಮ್ಮ ಸರ್ಕಾರನ್ನ ತಳ್ಳಿಕೊಂಡು ಹೋಗ್ತಿದ್ದೇವೆ, ಮ್ಯಾನೇಜ್ ಮಾಡ್ತಿದ್ದೇವೆ ಅಷ್ಟೇ ಅಂತ ಮಾಧುಸ್ವಾಮಿ ಹೇಳಿದ್ದರು. ಕಾರ್ಯಕರ್ತರೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಸರ್ಕಾರಕ್ಕೆ ಡ್ಯಾಮೇಜ್ ಆಗುವ ರೀತಿ ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದರು.

    ಈಗ ಪಕ್ಷದ ಅಗ್ರೆಸ್ಸಿವ್ (Aggressive Talk) ಬಗ್ಗೆ ಮಾತನಾಡಿ ಕೆಲ ಸಚಿವರು, ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾಧುಸ್ವಾಮಿ ನಿನ್ನೆ ಬಹಿರಂಗವಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ಮಾಧುಸ್ವಾಮಿ ಮೇಲೆ ಗರಂ ಆಗಿ ತಿರುಗೇಟು ಕೊಟ್ಟಿದ್ರು. ಈಗ ಪಕ್ಷದ ವೇದಿಕೆಯಲ್ಲೂ ಮಾಧುಸ್ವಾಮಿ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ಕೇಳಿಬಂದಿದೆ.

    ಪಕ್ಷದ ಬಗ್ಗೆ ಲೂಸ್ ಟಾಕ್ ಮಾತನಾಡದಂತೆ ಕಟ್ಟಾಜ್ಞೆ ವಿಧಿಸಿ ಎಂದು ಕೆಲ ಸಚಿವರಿಂದ ಒತ್ತಡ ಹಾಕಿದ್ದು, ರಾಜ್ಯಾಧ್ಯಕ್ಷರು ಏನ್ ಸೂಚನೆ ಕೊಡ್ತಾರೆ ಕಾದುನೋಡಬೇಕಿದೆ. ಇದನ್ನೂ ಓದಿ: ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ಪ, ಮಕ್ಕಳ ಜೊತೆ ರಾಜ್ಯ ದೋಚಲು ಈಗ ಮೊಮ್ಮಕ್ಕಳು ಶುರು ಮಾಡಿದ್ದಾರೆ : ಮಾಧುಸ್ವಾಮಿ

    ಅಪ್ಪ, ಮಕ್ಕಳ ಜೊತೆ ರಾಜ್ಯ ದೋಚಲು ಈಗ ಮೊಮ್ಮಕ್ಕಳು ಶುರು ಮಾಡಿದ್ದಾರೆ : ಮಾಧುಸ್ವಾಮಿ

    ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಮೊದಲು 50 ರೂಪಾಯಿಗೆ ಹೊಳೆನರಸೀಪುರದಲ್ಲಿ ಕಂಟ್ರಾಕ್ಟರ್ ಶುರು ಮಾಡಿದ್ದರು. ಇದೀಗ ಅಪ್ಪ- ಮಕ್ಕಳ ಜೊತೆಗೆ ಮೊಮ್ಮಕ್ಕಳೂ ಕೂಡ ರಾಜ್ಯ ದೋಚಲು ನಿಂತಿದ್ದಾರೆ ಎಂದು ಸಚಿವ ಮಾಧುಸ್ವಾಮಿ (Madhuswamy) ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

    ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟದಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ಪಂಚರತ್ನ ಯಾತ್ರೆಯಲ್ಲಿ ತಾಲ್ಲೂಕು ಅಭಿವೃದ್ಧಿಯಾಗಿಲ್ಲ. ನಾನು ಅಭಿವೃದ್ಧಿ ಆಗಿದ್ದೇನೆ ಎಂದು ಕುಮಾರಸ್ವಾಮಿ (Kumaraswamy) ಹೇಳಿದ್ದಾರೆ. ಆದರೆ ನನಗೇನೂ ಆಸ್ತಿ ಕೊರತೆ ಇರಲಿಲ್ಲ. ನಮ್ಮಪ್ಪ ಚೆನ್ನಾಗಿ ಇಟ್ಟಿದ್ದ. ನಮ್ಮಪ್ಪ, ನಮ್ಮಜ್ಜ ಚೆನ್ನಾಗಿಯೇ ಬಾಳಿದವರು. ಇವರಂತೆ ದೋಚಿದ್ದು, ಬಾಚಿದ್ದ ಪ್ರಕರಣಗಳು ಇಲ್ಲ ಎಂದು ದೂರಿದರು. ಇದನ್ನೂ ಓದಿ: ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ


    ಹಿಂದೆ 50 ರೂಪಾಯಿಗೆ ದೇವೇಗೌಡರು ಕಂಟ್ರಾಕ್ಟರ್ ಶುರು ಮಾಡಿದ್ದರು. ಇದೀಗ ಅಪ್ಪ-ಮಕ್ಕಳು ಅಲ್ಲದೇ ಮೊಮ್ಮಕ್ಕಳೂ ಕೂಡ ದೋಚೋದಕ್ಕೆ ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು.

    ದೇವೇಗೌಡರು ತುಮಕೂರಿಗೆ ಹೇಮಾವತಿ ನೀರನ್ನು (Hemavathi Water) ಕೊಡದೇ ಮೋಸ ಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಹೇಳಿಕೆಯ ಹಳೆಯ ಪೇಪರ್ ಕಟಿಂಗ್ಸ್ ತೋರಿಸಿದೆ. ಹಾಗಾಗಿಯೇ ಜಿಲ್ಲೆಯ ಜನರು ದೇವೇಗೌಡರನ್ನು ಸೋಲಿಸಿದರು. ಇಷ್ಟೆಲ್ಲಾ ಮಾಡಿಯೂ ಕುಮಾರಸ್ವಾಮಿ ಅವರು ಚಿಕ್ಕನಾಯಕನಹಳ್ಳಿಗೆ ಪ್ರವಾಸ ಹಾಕ್ತಾರೆ. ಮಾನ-ಮರ್ಯಾದೆ ಇದ್ದವರು ಯಾರಾದರೂ ಚಿಕ್ಕನಾಯಕನಹಳ್ಳಿಗೆ ಬರುತ್ತಾರಾ ಎಂದು ಪ್ರಶ್ನಿಸಿದರು.


    ನನಗೆ ಮಾಜಿ ಶಾಸಕ ಸುರೇಶ್ ಬಾಬು ಸರಿ-ಸಮಾನನಲ್ಲ. ನನಗೆ ಸಮಬಲನಾಗಿ ಇರುವ ವ್ಯಕ್ತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಅವರನ್ನೇ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಬಂದು ಸ್ವರ್ಧೆ ಮಾಡಿ ಅಂತಾ ಕೇಳಿದ್ದೇನೆ. ಆಗ ಸಮಬಲದ ಹೋರಾಟ ನಡೆಯುತ್ತದೆ. ಇಬ್ಬರ ಹೋರಾಟಕ್ಕೆ ಗೌರವ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಧುಸ್ವಾಮಿ ಮೊದಲು ಮಾತಾಡಲಿ- ಸಚಿವರ ಹೇಳಿಕೆಗೆ ಸಿಎಂ ವ್ಯಂಗ್ಯ

    ಮಾಧುಸ್ವಾಮಿ ಮೊದಲು ಮಾತಾಡಲಿ- ಸಚಿವರ ಹೇಳಿಕೆಗೆ ಸಿಎಂ ವ್ಯಂಗ್ಯ

    ಬೆಳಗಾವಿ: ನಮ್ಮವರು ಅಗ್ರೆಸ್ಸಿವ್ ಆಗಿ ಮಾತನಾಡ್ತಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದರು.

    ಬೆಳಗಾವಿ (Belagavi) ಯ ಸಾಂಬ್ರಾ ಏರ್ ಪೋರ್ಟ್‍ನಲ್ಲಿ ಸಿಎಂ ಮಾತನಾಡುತ್ತಿದ್ದಾಗ ನಿಮ್ಮ ಸಚಿವರು ಮಾತನಾಡಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಹೇಳಿದರು. ಈ ವೇಳೆ ಸಿಎಂ ಅದೇ ರೀ ಅವರಿಗೆ ಹೇಳಿದೀನಿ ಎಂದು ಪುನರುಚ್ಚರಿಸಿದರು. ಅವರು ವಿಧಾನಸಭೆಯಲ್ಲಿ ಅಗ್ರೆಸ್ಸಿವ್ ಆಗಿ ಮಾಡ್ತಿದ್ದಾರೆ. ಅದನ್ನ ಬಹಿರಂಗವಾಗಿ ಅವರು ಸ್ಟಾರ್ಟ್ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ

    ಈಗಾಗಲೇ ಬಹಳಷ್ಟು ಜನ ಸಚಿವರು ಸ್ಟಾರ್ಟ್ ಮಾಡಿದ್ದಾರೆ. ಪ್ರಶ್ನೆ ಅದಲ್ಲ ಸುಳ್ಳನ್ನು ಹೇಳುವ ಕಾಂಗ್ರೆಸ್ ಕೀಳುಮಟ್ಟದ ಮಾತುಗಳನ್ನಾಡುತ್ತದೆ. ಆ ಕೀಳುಮಟ್ಟಕ್ಕೆ ಇಳಿಯುವಂತದ್ದು ರಾಜ್ಯದ ಸಂಸ್ಕೃತಿ ಅಲ್ಲ ಎಂದು ಸಿಎಂ ಹೇಳಿದರು.

    ಮಾಧುಸ್ವಾಮಿ (Madhuswamy) ಹೇಳಿದ್ದೇನು..?: ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಮಾಧುಸ್ವಾಮಿ, ನಾವು ರಾಜ್ಯದಲ್ಲಿ ಮತ್ತೇ ಸರ್ಕಾರ ತರಲೇಬೇಕು. ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌಭಾಗ್ಯ. ಸರ್ಕಾರದ ವಿರುದ್ಧ ಮಾತನಾಡಿದಾಗ ನಾವೇ ಜಿಜ್ಞಾಸೆಗೆ ಒಳಗಾಗುತಿದ್ದೇವೆ. ನೀವೇನು ಎಂದು ನಾವು ವಾಪಸ್ ಕೇಳುತ್ತಿಲ್ಲ. ವಿರುದ್ಧ ಮಾತನಾಡಿದವರಿಗೆ ನಾವು ಮರು ಪ್ರಶ್ನೆ ಹಾಕಲ್ಲ. ನಾವು ಕಾಂಗ್ರೆಸ್‍ನವರ ರೀತಿ ಅಗ್ರೇಸಿವ್ ಆಗಿ ಮಾತನಾಡುತ್ತಿಲ್ಲ ತಮ್ಮ ಪಕ್ಷದ ದೌರ್ಬಲ್ಯವನ್ನು ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಧುಸ್ವಾಮಿ ಮಾತಿಗೆ ಸಿಎಂ ಬೊಮ್ಮಾಯಿ ವ್ಯಂಗ್ಯ

    ಮಾಧುಸ್ವಾಮಿ ಮಾತಿಗೆ ಸಿಎಂ ಬೊಮ್ಮಾಯಿ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಳ ಮೀಸಲಾತಿ ಚರ್ಚೆ ಬಳಿಕ ಸರ್ಕಾರದ ನಿರ್ಧಾರ ಪ್ರಕಟ: ಮಾಧುಸ್ವಾಮಿ

    ಒಳ ಮೀಸಲಾತಿ ಚರ್ಚೆ ಬಳಿಕ ಸರ್ಕಾರದ ನಿರ್ಧಾರ ಪ್ರಕಟ: ಮಾಧುಸ್ವಾಮಿ

    ಬೆಂಗಳೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸೇರಿದಂತೆ ಮೀಸಲಾತಿಗಳಿಗಾಗಿ ನಡೆಯುತ್ತಿರೋ ಹೋರಾಟಗಳ ಬಗ್ಗೆ ಚರ್ಚೆ ಮಾಡಿಯೇ ತೀರ್ಮಾನ ಮಾಡೋದಾಗಿ ಕಾನೂನು ಸಚಿವ ಮಾಧುಸ್ವಾಮಿ (Minister Madhuswamy) ತಿಳಿಸಿದ್ದಾರೆ.

    ವಿಧಾನಸೌಧ (Vidhanasoudha) ದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಜೊತೆ ಎರಡು ಬಾರಿ ಸಭೆಯಾಗಿದೆ. ಸಭೆಯಲ್ಲಿ ಚರ್ಚೆಯಾದ ವಿಷಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ. ಮೀಸಲಾತಿ ಕುರಿತು ಹೋರಾಟ ಮಾಡುವ ಅಗತ್ಯ ಇಲ್ಲ. ಆರಂಭದಲ್ಲಿ ಇರುವಾಗಲೇ ಹೋರಾಟಕ್ಕೆ ಇಳಿದರೆ ಹೇಗೆ..? ಸಂಖ್ಯೆ ಆಧಾರದ ಮೇಲೆ ಕೊಡಿ ಅಂತ ಕೇಳುವವರೂ ಇದ್ದಾರೆ. ಈ ಬಗ್ಗೆ ಚರ್ಚೆ ಮಾಡಲಾಗ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಯಾಂಟ್ರೋ ರವಿಯನ್ನ ಶೀಘ್ರವೇ ಬಂಧನ ಮಾಡ್ತೀವಿ – ಆರಗ ಜ್ಞಾನೇಂದ್ರ

    ಕಾಲ ಕಾಲಕ್ಕೆ ಅಗತ್ಯ ಮಾಹಿತಿಗಳನ್ನ ತರಿಸಿಕೊಳ್ತಿದ್ದೇವೆ. ಶಿಫಾರಸು ಮಾಡಲು ಎಷ್ಟು ಸಭೆ ಆಗುತ್ತೆ ಅಂತ ಗೊತ್ತಿಲ್ಲ. ಎಲ್ಲರದ್ದೂ ಬೇಡಿಕೆ ಇದೆ. ಅನೇಕರು ಹಳೆಯ ಮೀಸಲಾತಿನೇ ಇರಲಿ ಅಂತಿದ್ದಾರೆ. ಇನ್ನು ಕೆಲವರು ಹೊಸದು ಬೇಕು ಅಂತಾರೆ. ಹೀಗಾಗಿ ಸುದೀರ್ಘ ಚರ್ಚೆಯ ಅವಶ್ಯಕತೆ. ಹೀಗಾಗಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಸರ್ಕಾರ ಕೈಗೊಳ್ಳಲಿದೆ ಅಂತ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k