Tag: madhugiri

  • ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಪತ್ರ

    ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಪತ್ರ

    ಬೆಂಗಳೂರು: ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ (Siddaramaiah) ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದು ಮಾಜಿ ಸಚಿವ ರಾಜಣ್ಣ (KN Rajanna) ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಸಿದ್ದರಾಮಯ್ಯ ಸಂಪುಟದಿಂದ (Siddaramaiah Cabinet) ವಜಾಗೊಂಡ ಬಳಿಕ ರಾಜಣ್ಣ ಅಭಿಮಾನಿಗಳು ಇಂದು ತುಮಕೂರು ಜಿಲ್ಲೆಯ ಮಧುಗಿರಿ (Madhugiri) ಪಟ್ಟಣವನ್ನು ಬಂದ್‌ ಮಾಡಿ ಪ್ರತಿಭಟಿಸಿದರು. ಈ ಬೆನ್ನಲ್ಲೇ ರಾಜಣ್ಣ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

     

    ರಾಜಣ್ಣ ಪತ್ರದಲ್ಲಿ ಏನಿದೆ?
    ಆತ್ಮೀಯ ಹಾಗೂ ಅಭಿಮಾನಿ ಬಂಧುಗಳಲ್ಲಿ ನನ್ನದೊಂದು ಕೋರಿಕೆ. ರಾಜಕೀಯ ಏರುಪೇರುಗಳು ನನಗೆ ಹೊಸತಲ್ಲ. ಯಾವುದೇ ರಾಜಕೀಯ ಬದಲಾವಣೆಗೂ ಎಂದೂ ಧೃತಿಗೆಟ್ಟಿಲ್ಲ. ಇದು ಸಹ ಹಾಗೆಯೇ ಎಂದು ಹೇಳಲು ಇಚ್ಛಿಸುತ್ತೇನೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ ಯಾವುದೇ ಕಾರಣಕ್ಕೂ ಅಭಿಮಾನದ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

    ಕೆಲವು ಯುವಜನರು ಅಹಿತಕರವಾಗಿ ತಮಗೆ ತಾವು ನೋವು ಮಾಡಿಕೊಂಡಿದ್ದು ನನ್ನ ಮನಸ್ಸಿಗೆ ದುಃಖ ತಂದಿದೆ. ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯುತ್ತಿರುತ್ತಾರೆ. ನಾನು ಸಹ ನಿಮ್ಮನ್ನು ನನ್ನ ಕುಟುಂಬವೆಂದೇ ಭಾವಿಸಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನ ಎಂತಹದ್ದು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಯಾವುದೇ ತಪ್ಪು ನಿರ್ಧಾರ ಮಾಡಬೇಡಿ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಪ್ರಯತ್ನವನ್ನು ಮಾಡಬೇಡಿ.

    ನಾವೆಲ್ಲರೂ ಬುದ್ಧ, ಬಸವ, ವಾಲ್ಮೀಕಿ, ಅಂಬೇಡ್ಕರ್ ರವರ ಹಾದಿಯಲ್ಲೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತರಬೇಕಿದೆ. ಹಾಗೂ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ.

  • ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ವಜಾ ಖಂಡಿಸಿ ಬೆಂಬಲಿಗರ ಆಕ್ರೋಶ – ಮಧುಗಿರಿ ಬಂದ್

    ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ವಜಾ ಖಂಡಿಸಿ ಬೆಂಬಲಿಗರ ಆಕ್ರೋಶ – ಮಧುಗಿರಿ ಬಂದ್

    ತುಮಕೂರು: ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಪಟ್ಟಣ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ರಾಜಣ್ಣ ಬೆಂಬಲಿಗರು ಮತ್ತು ಅಭಿಮಾನಿಗಳು ಮಧುಗಿರಿ ಪಟ್ಟಣದಲ್ಲಿ ಜಮಾವಣೆಗೊಂಡರು. ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಅವರನ್ನು ಪೊಲೀಸರು ತಡೆದರು. ರಾಜಣ್ಣರ ರಾಜೀನಾಮೆ ವಾಪಸ್ ಪಡೆಯುವಂತೆ ಬೆಂಬಲಿಗರು ಒತ್ತಾಯಿಸಿದರು. ಬಳಿಕ ಪಾದಯಾತ್ರೆ ಮೂಲಕ ಎಸಿ ಕಚೇರಿ ವರೆಗೆ ಅಭಿಮಾನಿಗಳು ಸಾಗಿದರು.

    ಬೇಕೆ ಬೇಕು ನ್ಯಾಯ ಬೇಕು ಎಂದು ಎಸಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಅವರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಎಸಿ ಕಚೇರಿಯಿಂದ ತುಮಕೂರು ಗೇಟ್ ವರೆಗೂ ರಾಜಣ್ಣ ಬೆಂಬಲಿಗರ ಪಾದಯಾತ್ರೆ ನಡೆಯಿತು.

    ತುಮಕೂರು ಗೇಟ್‌ನ ರಸ್ತೆಯಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತರು. ಇದೇ ವೇಳೆ, ಬೇಕರಿಯೊಂದಕ್ಕೆ ನುಗ್ಗಲು ಪ್ರಯತ್ನಿಸಿದರು. ಎಂಜಿ ಕ್ರೀಡಾಂಗಣದ ಬಳಿ ಬೆಂಬಲಿಗರು ಹೈಡ್ರಾಮಾ ನಡೆಸಿದರು. ಅಭಿಮಾನಿಯೊಬ್ಬ ವಿಷ ಕುಡಿಯಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು. ಆತನನ್ನು ತಕ್ಷಣವೇ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

    ತಮ್ಮ ಸಡಿಲ ಹೇಳಿಕೆಗಳ ಮೂಲಕವೇ ಪಕ್ಷದೊಳಗಡೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಸೋವಾರ ಸಂಪುಟದಿಂದ ವಜಾಗೊಳಿಸಿದರು. ಈ ಸಂಬಂಧ ರಾಜಣ್ಣ ಬೇಸರಗೊಂಡಿದ್ದಾರೆ. ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

  • ತುಮಕೂರಲ್ಲಿ 19 ನವಿಲುಗಳ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ

    ತುಮಕೂರಲ್ಲಿ 19 ನವಿಲುಗಳ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ

    – 5 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚನೆ

    ಬೆಂಗಳೂರು: ತುಮಕೂರು (Tumakuru) ಜಿಲ್ಲೆ ಮಧುಗಿರಿ (Madhugiri) ತಾಲೂಕು ಮಿಡಿಗೇಶಿಯ (Midigeshi) ಬಳಿ ರೈತರೊಬ್ಬರ ಜಮೀನಿನಲ್ಲಿ 19 ನವಿಲುಗಳು ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre), ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿಸಿಎಫ್ ನೇತೃತ್ವದ ತನಿಖೆಗೆ ಆದೇಶ ನೀಡಿದ್ದಾರೆ.

    ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನೀಡಿರುವ ಸೂಚನೆಯಲ್ಲಿ, ಒಂದೂವರೆ ತಿಂಗಳ ಹಿಂದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಮ್ಮ ರಾಷ್ಟ್ರಪ್ರಾಣಿಯಾದ ಹುಲಿ ಮತ್ತು ಅದರ ನಾಲ್ಕು ಮರಿಗಳು ವಿಶಪ್ರಾಶನದಿಂದ ಮೃತಪಟ್ಟಿದ್ದವು. ನಂತರ ಕೋತಿಗಳನ್ನು ಕೊಂದು ಬಂಡೀಪುರದ ಬಳಿ ಎಸೆದಿದ್ದ ಘಟನೆ ನಡೆದಿತ್ತು. ಈಗ ನಮ್ಮ ರಾಷ್ಟ್ರಪಕ್ಷಿ ನವಿಲಿನ ಮಾರಣ ಹೋಮ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ

    ನವಿಲುಗಳ ಸಾವಿಗೆ ಕೀಟನಾಶಕ ಸೇವನೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಕೀಟನಾಶಕವನ್ನು ನವಿಲುಗಳನ್ನು ಸಾಯಿಸಲೆಂದೇ ಹಾಕಲಾಗಿತ್ತೆ ಅಥವಾ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕಯುಕ್ತ ಫಸಲು ತಿಂದು ನವಿಲುಗಳು ಮೃತಪಟ್ಟಿವೆಯೇ ಎಂಬ ಬಗ್ಗೆ ಡಿಸಿಎಫ್ ನೇತೃತ್ವದ ತಂಡದಿಂದ ತನಿಖೆ ನಡೆಸಿ 5 ದಿನಗಳ ಒಳಗಾಗಿ ವರದಿ ಸಲ್ಲಿಸಲು ಮತ್ತು ನಿಯಮಾನುಸಾರ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: 1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    ಜೊತೆಗೆ ಪರಿಶಿಷ್ಟ 1 ಮತ್ತು 2ರ ಯಾವುದೇ ವನ್ಯಜೀವಿ ಮೃತಪಟ್ಟರೂ ಆಡಿಟ್ ಮಾಡಿಸಿ ತಕ್ಷಣವೇ ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡಲು ಕ್ರಮ ವಹಿಸಲು ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಅರಣ್ಯದಲ್ಲಿ ಮತ್ತೊಂದು ಅಸ್ಥಿಪಂಜರ ಪತ್ತೆ

  • ತುಮಕೂರು | ಕೆಮಿಕಲ್ ಸಂಪ್‍ ಕ್ಲೀನ್‌ ಮಾಡುವಾಗ ಇಬ್ಬರು ಕಾರ್ಮಿಕರು ಸಾವು, ಮತ್ತಿಬ್ಬರು ಅಸ್ವಸ್ಥ

    ತುಮಕೂರು | ಕೆಮಿಕಲ್ ಸಂಪ್‍ ಕ್ಲೀನ್‌ ಮಾಡುವಾಗ ಇಬ್ಬರು ಕಾರ್ಮಿಕರು ಸಾವು, ಮತ್ತಿಬ್ಬರು ಅಸ್ವಸ್ಥ

    ತುಮಕೂರು: ಕೈಗಾರಿಕೆಯಲ್ಲಿನ ರಾಸಾಯನಿಕ ಸಂಗ್ರಹಿಸುವ ಸಂಪ್ (Chemical Sump) ಕ್ಲೀನ್‍ಗೆ ಇಳಿದ ಇಬ್ಬರ ಕಾರ್ಮಿಕರು ಸಾವಿಗೀಡಾದ ಘಟನೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಮಧುಗಿರಿ (Madhugiri) ತಾಲೂಕಿನ ಮಾಗೋಡು ಗ್ರಾಮದ ಪ್ರತಾಪ್ (23) ಶಿರಾ ತಾಲೂಕಿನ ತರೂರು ಗ್ರಾಮದ ವೆಂಕಟೇಶ್ (32) ಮೃತ ಕಾರ್ಮಿಕರು. ಸಂಪ್ ಸ್ವಚ್ಛಗೊಳಿಸಲು ನಾಲ್ವರು ಒಳಗೆ ಇಳಿದಿದ್ದರು. ಈ ವೇಳೆ ಉಸಿರಾಟದ ಸಮಸ್ಯೆಯಾಗಿ, ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಅಸ್ವಸ್ಥರಾಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಹೇಳಿಕೆ ವಿವಾದ – ಅಶೋಕ ವಿವಿ ಪ್ರೊಫೆಸರ್‌ಗೆ ಮಧ್ಯಂತರ ಜಾಮೀನು

    ಲೊರಸ್ ಬಯೋ ಎಂಬ ರಾಸಾಯನಿಕ ಪದಾರ್ಥ ತಯಾರಿಸುವ ಕೈಗಾರಿಕೆಯಲ್ಲಿ ಈ ಅವಘಡ ಸಂಭವಿಸಿದೆ. ಶಿರಾ ತಾಲೂಕಿನ ತರೂರು ಗ್ರಾಮದ ಮಂಜಣ್ಣ ಹಾಗೂ ಯುವರಾಜ್‍ಗೆ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಿಡಲಾಗುತ್ತಿದೆ.

    ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೇಟೆಗೆ ಹೋಗಿದ್ದಾಗ ಮಿಸ್ ಫೈರ್ – ಹಾರಿಹೋಯ್ತು ಯುವಕನ ಪ್ರಾಣಪಕ್ಷಿ

  • ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ 50 ಕೋಟಿ ರೂ.ನಿಗದಿ: ಸಚಿವ ರಾಜಣ್ಣ

    ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ 50 ಕೋಟಿ ರೂ.ನಿಗದಿ: ಸಚಿವ ರಾಜಣ್ಣ

    ತುಮಕೂರು: ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ (Madhugiri Betta) ರೋಪ್ ವೇ (Ropeway) ಕಾಮಗಾರಿಗೆ ರಾಜ್ಯ ಸರ್ಕಾರ 50 ಕೋಟಿ ರೂ. ನಿಗದಿ ಮಾಡಿದೆ. ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ (K.N Rajanna) ತಿಳಿಸಿದ್ದಾರೆ.

    ಪಟ್ಟಣದ ಸಿದ್ಧರಕಟ್ಟೆ ಸಮೀಪ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು. ಈ ವೇಳೆ, ರೋಪ್ ವೇ ಯೋಜನೆಗೆ ಹಂತ – ಹಂತವಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಾಗುವುದು. 10 ವರ್ಷಗಳ ಹಿಂದೆಯೇ ಏಕಾಶಿಲಾ ಬೆಟ್ಟಕ್ಕೆ ರೋಪ್ ವೇ ಯೋಜನೆಗೆ 9 ಎಕರೆ ಜಾಗ ಮೀಸಲಿಡಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ರೋಪ್ ವೇ ಕಾಮಗಾರಿಗಳಿಗಾಗಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಲಾಗಿದೆ. ಆ ಇಲಾಖೆಯ ಮಾನದಂಡಗಳಂತೆ ಕಾಮಗಾರಿಗಳನ್ನು ರಾಜ್ಯದಲ್ಲಿ ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಾಲಿನ ದರ ಏರಿಕೆ ಸರ್ಕಾರದ ಆರನೇ ಭಾಗ್ಯ: ಮಹೇಶ್ ಟೆಂಗಿನಕಾಯಿ

  • ತುಮಕೂರು | ಮಧುಗಿರಿ ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ‌ ಅನುದಾನ

    ತುಮಕೂರು | ಮಧುಗಿರಿ ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ‌ ಅನುದಾನ

    ತುಮಕೂರು: ಮಧುಗಿರಿ ಪಟ್ಟಣದ ರಸ್ತೆ (Madhugiri Town Road) ಮತ್ತು ಚರಂಡಿ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 25 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.

    ಪಟ್ಟಣದ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಗೇಟ್‌ನಿಂದ ಶಿರಾ ರಸ್ತೆವರೆಗೆ, ಗೌರಿಬಿದನೂರು ಬೈಪಾಸ್‌ನಿಂದ ಸಿದ್ದಾಪುರ ಗೇಟ್‌ವರೆಗೆ ಡಬಲ್ ರಸ್ತೆ ಹಾಗೂ ಪಟ್ಟಣದ ಎಲ್ಲಾ ವಾರ್ಡ್‌ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಿಸಲಾಗುವುದು ಎಂದರು.

    ಪಟ್ಟಣದ ಪ್ರಮುಖ ವೃತ್ತಗಳನ್ನು ವಿನೂತನವಾಗಿ ಅಭಿವೃದ್ಧಿ ಪಡಿಸಲಾಗುವುದು. ಹೈಟೆಕ್ ತಂಗುದಾಣ ನಿರ್ಮಾಣ, ವೈಜ್ಞಾನಿಕ ಹಂಪ್‌ ಹಾಗೂ ಪ್ರಮುಖ ರಸ್ತೆಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ – ಗೋವಿಂದ ಕಾರಜೋಳ

    ರಾಜೀವ್ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದೆ. ಈ ಅನುದಾನ‌ದಲ್ಲಿ ಕ್ರೀಡಾಪಟುಗಳು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು ಹೇಳಿದರು. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ನೆರವೇರಿದ ರೇಣುಕಾಸ್ವಾಮಿ ಪುತ್ರನ ನಾಮಕರಣ – ಹೆಸರೇನು ಗೊತ್ತಾ?

  • 50 ವರ್ಷಗಳ ಬಳಿಕ ದಂಡಿ ಮಾರಮ್ಮನ ಅದ್ಧೂರಿ ತೆಪ್ಪೋತ್ಸವ – ವೈಭವ ಕಣ್ತುಂಬಿಕೊಂಡ ಭಕ್ತಗಣ

    50 ವರ್ಷಗಳ ಬಳಿಕ ದಂಡಿ ಮಾರಮ್ಮನ ಅದ್ಧೂರಿ ತೆಪ್ಪೋತ್ಸವ – ವೈಭವ ಕಣ್ತುಂಬಿಕೊಂಡ ಭಕ್ತಗಣ

    ತುಮಕೂರು: ಬರೊಬ್ಬರಿ 50 ವರ್ಷಗಳಿಂದ ಕೈಬಿಟ್ಟಿದ್ದ ತುಮಕೂರು (Tumakuru) ಜಿಲ್ಲೆ ಮಧುಗಿರಿಯ (Madhugiri) ಆದಿದೇವತೆ ಶ್ರೀ ದಂಡಿನ ಮಾರಮ್ಮ (Dandina Maramma)  ದೇವಿಯ ತೆಪ್ಪೋತ್ಸವ ವೈಭವೋಪೇತವಾಗಿ ನೆರವೇರಿದೆ. ಸಹಸ್ರಾರು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ.

    ಮಾರಮ್ಮನ ತೆಪ್ಪೋತ್ಸವ ಮಾಡದೇ ಇದ್ದುದರಿಂದ ಕೆರೆಗಳಪಾಳ್ಯದ ರಾಜ್ಯದ ಹೆದ್ದಾರಿಯಲ್ಲಿ ಅಪಘಾತಗಳು ಮಿತಿಮೀರಿತ್ತು. ನೂರಾರು ಜನರು ಅಸುನೀಗಿದ್ದಾರೆ. ಮಾರಮ್ಮಳ ಮುನಿಸೇ ಇದಕ್ಕೆ ಕಾರಣ ಎನ್ನಲಾಗಿತ್ತು. ಈ ಹಿನ್ನೆಲೆ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಲಾಗಿದೆ. ಇದನ್ನೂ ಓದಿ: Republic Day | ನಾಳೆ ಬೆಳಗ್ಗೆ 6 ರಿಂದಲೇ ಮೆಟ್ರೋ ಸಂಚಾರ

    ಚೋಳನಹಳ್ಳಿ ಕೆರೆಯಲ್ಲಿ ತೆಪ್ಪದಲ್ಲಿ ಶೃಂಗಾರಗೊಂಡ ಮಾರಮ್ಮ ಸಂಚರಿಸಿದ್ದಾಳೆ. ಸುತ್ತಲೂ ನೆರೆದಿದ್ದ ಭಕ್ತರಿಗೆ ದರ್ಶನ ನೀಡಿದ್ದಾಳೆ. 50 ವರ್ಷದಿಂದ ಈ ಕ್ಷಣಕ್ಕಾಗಿ ಕಾಯುತಿದ್ದ ಮಧುಗಿರಿ ತಾಲೂಕಿನ ಜನ ನಮಿಸಿ ಕೃತಾರ್ಥರಾದರು. ಗೋಧೂಳಿ ಮುಹೂರ್ತದಲ್ಲಿ ಆರಂಭವಾದ ತೆಪ್ಪೋತ್ಸವ ಮಂತ್ರ ಘೋಷಗಳ ಮೂಲಕ ಸಾಗಿತ್ತು. ಬಳಿಕ ಇಡೀ ಕೆರೆಯ ಸುತ್ತ ತೆಪ್ಪದಲ್ಲಿ ಮಾರಮ್ಮಳ ಮೆರವಣಿಗೆ ಮಾಡಲಾಯಿತು. ಕಾಶಿಯಿಂದ ಬಂದ ಪಂಡಿತರು ಕಾರ್ಯಕ್ರಮಕ್ಕೆ ಮೆರಗು ತುಂಬಿದರು. ಈ ಅಪರೂಪದ ಕ್ಷಣಕ್ಕೆ ಸಚಿವ ಕೆ.ಎನ್ ರಾಜಣ್ಣ, ಗೃಹ ಸಚಿವ ಪರಮೇಶ್ವರ್, ಡಿಸಿ ಶುಭಾ ಕಲ್ಯಾಣ್, ಹಾಸನ ಡಿಸಿ ಸತ್ಯಭಾಮಾ, ಹಾಸನ ಎಸ್ಪಿ ಸುಜಿತಾ, ಶ್ರೀ ಸಿದ್ದಲಿಂಗಸ್ವಾಮಿಜಿಗಳು, ಸಿದ್ದರಬೆಟ್ಟ ಶ್ರೀಗಳು ಸಾಕ್ಷಿಯಾದರು. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ

    ಕೆರೆ ಮಧ್ಯದಲ್ಲಿ ತೇಲುವ ತೆಪ್ಪದಲ್ಲಿ ಭಕ್ತಿಯ ಗಾನಸುಧೆ ಮೊಳಗಿತ್ತು. ವಿವಿಧ ಧಾರ್ಮಿಕ ನೃತ್ಯ ದೇವಲೋಕವನ್ನೇ ಸೃಷ್ಟಿಸಿತ್ತು. ಬಾನಂಗಳದಲ್ಲಿ ಬಾಣ ಬಿರುಸುಗಳ ಚಿತ್ತಾರ ಕಣ್ಮನ ಸೆಳೆದಿತ್ತು. ಕೆರೆಯ ತುಂಬೆಲ್ಲಾ ಮಾಡಿದ ದೀಪಾಲಂಕಾರ ಕಣ್ಣಿಗೆ ಹಬ್ಬವಾಗಿತ್ತು. ಇದನ್ನೂ ಓದಿ: ಇನ್ಸ್ಟಾದಲ್ಲಿ ಯುವತಿಗೆ ಲೈಕ್, ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯಿಂದ ತರಾಟೆ – ಯುವಕ ಆತ್ಮಹತ್ಯೆ

  • Drone Prathap Case | 25 ಎಕ್ರೆ ಫಾರಂ ಹೌಸ್‌ನಲ್ಲಿ ಸೈಟ್ ಮಾಡಿ ಮಾರಾಟ ಮಾಡೋಕೆ ಪ್ಲ್ಯಾನ್‌ – ಆರೋಪ

    Drone Prathap Case | 25 ಎಕ್ರೆ ಫಾರಂ ಹೌಸ್‌ನಲ್ಲಿ ಸೈಟ್ ಮಾಡಿ ಮಾರಾಟ ಮಾಡೋಕೆ ಪ್ಲ್ಯಾನ್‌ – ಆರೋಪ

    ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ (Sodium) ಹಾಕಿ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‌ನನ್ನ (Drone Prathap) ಘಟನಾ ಸ್ಥಳಕ್ಕೆ ಕರೆತಂದು ತುಮಕೂರು ಪೊಲೀಸರು (Tumkur Police) ಸ್ಥಳ ಮಹಜರು ನಡೆಸಿದ್ದಾರೆ. ಈ ಬೆನ್ನಲ್ಲೇ ಹಲವು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

    ಸ್ಥಳ ಮಹಜರು ವೇಳೆ ಹಲವು ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದು, ಇದಕ್ಕೆ ಡ್ರೋನ್‌ ಪ್ರತಾಪ್‌ ಉತ್ತರ ಕೊಟ್ಟಿದ್ದಾರೆ. ಯಾರ‍್ಯಾರು ಬಂದಿದ್ರಿ? ನಿಮ್ಮ ಸ್ನೇಹಿತನ ಹೆಸರೇನು? ಯಾವ ಕಾರಲ್ಲಿ ಬಂದಿದ್ರಿ ಅಂತ ಪೊಲೀಸರು ಕೇಳಿದ್ದಾರೆ, ಇದಕ್ಕೆ ಪ್ರತಾಪ್‌ ಐ20 ಕಾರಲ್ಲಿ ಬಂದಿದ್ವಿ ಅಂತ ಉತ್ತರಿಸಿದ್ದಾರೆ. ಬಳಿಕ ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡೋದು ತಪ್ಪಲ್ವಾ? ಅಂತ ಪ್ರಶ್ನೆ ಮಾಡಿದ್ದಕ್ಕೆ ಹೌದು ಎಂದು ತಲೆಯಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಥಳೀಯರ ಆರೋಪ ಏನು?
    ಡ್ರೋನ್ ಪ್ರತಾಪ್ ಬ್ಲಾಸ್ಟ್‌ ಮಾಡಿದ ಕೃಷಿಹೊಂಡ ಇರೋದು ಸಾರ್ವಜನಿಕರು ಓಡಾಡುವ ರಸ್ತೆ ಮಗ್ಗುಲಲ್ಲೇ, ಸ್ಫೋಟ ಕಂಡು ಸಮೀಪದಲ್ಲೇ ದನ, ಕುರಿ ಮೇಯಿಸುತ್ತಿದ್ದವರು ಆತಂಕಕ್ಕೊಳಗಾಗಿದ್ದರು. ಒಂದು ವೇಳೆ ಗಾಳಿ ಜೋರಾಗಿ ಬೀಸಿದ್ದರೆ ಬೆಂಕಿಯ ಜ್ವಾಲೆ ರಸ್ತೆಗೂ ಪಸರಿಸುತಿತ್ತು, ಪ್ರತಾಪ್ ನ ಕೈ ಸುಟ್ಟ ಹಾಗೆ, ಸಾರ್ವಜನಿಕರಿಗೂ ಬೆಂಕಿ ತಗುಲಿ ಅಪಾಯವಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸೈಟ್‌ ಮಾಡಿ ಮಾರಾಟ ಮಾಡೋಕೆ‌ ಪ್ಲ್ಯಾನ್‌:
    ಬ್ಲಾಸ್ಟ್‌ ನಡೆದ ಸ್ಥಳ ಇದರೋದು ಜಿತೇಂದ್ರ ಜೈನ್‌ ಅವರಿಗೆ ಸೇರಿದ್ದ ಫಾರಂ ಹೌಸ್‌ನಲ್ಲಿ. ಸ್ಥಳೀಯರಿಗೆ ಉದ್ಯೋಗ ಕೊಡುವ ಕಂಪನಿ ನಿರ್ಮಾಣ ಮಾಡ್ತಿವಿ ಎಂದು ಸುಳ್ಳು ಹೇಳಿ ಫಾರಂ ಹೌಸ್‌ ಮಾಡಿದ್ದರಂತೆ, ಜೈನ್‌ಗೆ ಡ್ರೋನ್‌ ಪ್ರತಾಪ್ ಸಹ ಪಾರ್ಟರ್‌ ಅಂತೆ. 25 ಎಕರೆ ಫಾರಂ ಹೌಸ್‌ನಲ್ಲಿ ಸೈಟ್ ಮಾಡಿ ಮಾರಾಟ ಮಾಡೋ ಪ್ಲ್ಯಾನ್‌ ಮಾಡಿದ್ದರಂತೆ ಎಂದು ಸ್ಥಳೀಯರು ʻಪಬ್ಲಿಕ್‌ ಟಿವಿʼಯೊಂದಿಗೆ ಮಾತನಾಡಿದ್ದಾರೆ.

    ಮೂವರ ವಿರುದ್ಧ ಕೇಸ್‌:
    ಡ್ರೋನ್‌ ಪ್ರತಾಪ್‌, ರಾಯರ ಬೃಂದಾವನ ಫಾರಂನ ಮಾಲೀಕ ಜಿತೇಂದ್ರ ಜೈನ್ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರತಾಪ್‌ನನ್ನ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

    ಪ್ರಕರಣ ಏನು?
    ನೀರಿಗೆ ಕೆಮಿಕಲ್ ಹಾಕಿ ಡ್ರೋನ್ ಪ್ರತಾಪ್ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದಾರೆ. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ. ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್ ಬಿಲ್ಡಪ್ ಬೇರೆ ಕೊಟ್ಟಿದ್ದಾರೆ. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್ ಕೂಗಿದ್ದಾರೆ.

    ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಯಾವೆಲ್ಲ ಕೆಮಿಕಲ್ ಹಾಕಿದ್ರೇ ಬ್ಲಾಸ್ಟ್ ಆಗುತ್ತೆ ಅಂತಾನೂ ಲೈವ್‌ನಲ್ಲಿ ಹೇಳಿದ್ದು, ಇದನ್ನು ಕಿಡಿಗೇಡಿಗಳು ಕುಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಅಂತಾ ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದಾರೆ.

    ಈ ರೀತಿಯ ಪ್ರಯೋಗ ಅಪಾಯಕಾರಿ ಮತ್ತು ಕಾನೂನು ಬಾಹಿರವಾದದ್ದು. ಈ ಬ್ಲಾಸ್ಟ್ ವಿಡಿಯೋ ಮಾಡುವ ಮುನ್ನ ಕನಿಷ್ಟ ಪಕ್ಷ ಡ್ರೋನ್ ಪ್ರತಾಪ್ ಯೋಚನೆ ಮಾಡಬೇಕಾಗಿತ್ತು ಇದ್ಯಾವ ಸೀಮೆ ವಿಜ್ಞಾನದ ಬಗ್ಗೆ ಮಾಹಿತಿ ಕೊಡ್ತಾ ಇರೋದು ಅವರಿಗೆ ಗೊತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಕೃಷಿ ಹೊಂಡದಲ್ಲಿ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋನ್ ಪ್ರತಾಪ್ ಅರೆಸ್ಟ್

    ಕೃಷಿ ಹೊಂಡದಲ್ಲಿ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋನ್ ಪ್ರತಾಪ್ ಅರೆಸ್ಟ್

    ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ (Sodium) ಹಾಕಿ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‌ನನ್ನು (Drone Prathap) ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ.

    ಸೋಡಿಯಂ ನೀರಿನಲ್ಲಿ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ಟೀಕೆಗೆ ಒಳಗಾಗಿದ್ದರು. ಈ ಸಂಬಂಧ ಇಂದು (ಗುರುವಾರ) ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಡ್ರೋನ್ ಪ್ರತಾಪ್‌ನನ್ನು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇದನ್ನೂ ಓದಿ: Haveri | ವರದಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

    ಪ್ರಕರಣ ಏನು?
    ನೀರಿಗೆ ಕೆಮಿಕಲ್ ಹಾಕಿ ಡ್ರೋನ್ ಪ್ರತಾಪ್ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದಾರೆ. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ. ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್ ಬಿಲ್ಡಪ್ ಬೇರೆ ಕೊಟ್ಟಿದ್ದಾರೆ. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್ ಕೂಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ಅತ್ತೆ, ಬಾಮೈದ ಪೊಲೀಸರ ವಶಕ್ಕೆ

    ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಯಾವೆಲ್ಲ ಕೆಮಿಕಲ್ ಹಾಕಿದ್ರೇ ಬ್ಲಾಸ್ಟ್ ಆಗುತ್ತೆ ಅಂತಾನೂ ಲೈವ್‌ನಲ್ಲಿ ಹೇಳಿದ್ದು, ಇದನ್ನು ಕಿಡಿಗೇಡಿಗಳು ಕುಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಅಂತಾ ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ಹೈಕೋರ್ಟ್

    ಈ ರೀತಿಯ ಪ್ರಯೋಗ ಅಪಾಯಕಾರಿ ಮತ್ತು ಕಾನೂನು ಬಾಹಿರವಾದದ್ದು. ಈ ಬ್ಲಾಸ್ಟ್ ವಿಡಿಯೋ ಮಾಡುವ ಮುನ್ನ ಕನಿಷ್ಟ ಪಕ್ಷ ಡ್ರೋನ್ ಪ್ರತಾಪ್ ಯೋಚನೆ ಮಾಡಬೇಕಾಗಿತ್ತು ಇದ್ಯಾವ ಸೀಮೆ ವಿಜ್ಞಾನದ ಬಗ್ಗೆ ಮಾಹಿತಿ ಕೊಡ್ತಾ ಇರೋದು ಅವರಿಗೆ ಗೊತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.  ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ

  • ತುಮಕೂರು| ನೀರಿನ ರಭಸ ಹೆಚ್ಚಾಗಿ ಕೊಚ್ಚಿಹೋದ ಸೇತುವೆ – ಈಜಲು ಹೋದ ಯುವಕ ಸಾವು

    ತುಮಕೂರು| ನೀರಿನ ರಭಸ ಹೆಚ್ಚಾಗಿ ಕೊಚ್ಚಿಹೋದ ಸೇತುವೆ – ಈಜಲು ಹೋದ ಯುವಕ ಸಾವು

    ತುಮಕೂರು: ಸೇತುವೆ (Bridge) ಬಳಿ ಈಜಲು(Swim) ಹೋಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆ ಮಧುಗಿರಿ (Madhugiri) ತಾಲೂಕಿನ ಪುರವರ ಬಳಿಯ ತಗ್ಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೇಮಂತ್ ಕುಮಾರ್ (21) ಮೃತ ಯುವಕ. ಈತ ಶನಿವಾರ ಮಧ್ಯಾಹ್ನದ ವೇಳೆ ಜಯಮಂಗಲಿ ನದಿ ನೀರು ಹರಿಯುವ ಸೇತುವೆ ಬಳಿ ಈಜಲೆಂದು ತೆರಳಿದ್ದ. ಈ ವೇಳೆ ನೀರಿನ ರಭಸ ಹೆಚ್ಚಾಗಿ ಸೇತುವೆ ಕೊಚ್ಚಿ ಹೋಗಿದೆ. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿ ಯುವಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಲಿಷ್ಠವಾಗಿದೆ, ಬಿಜೆಪಿಯ ತಿರುಕನ ಕನಸು ನನಸಾಗಲ್ಲ: ಕೆವೈ ನಂಜೇಗೌಡ

    ಕಳೆದ ಕೆಲ ತಿಂಗಳ ಹಿಂದಷ್ಟೇ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಚೆಕ್ ಡ್ಯಾಂ ಕಳಪೆ ಎಂದು ಗುತ್ತಿಗೆದಾರನ ವಿರುದ್ಧ ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಶನಿವಾರ ಸಂಜೆಯಿಂದ ಹುಡುಕಾಟ ನಡೆಸಿದರೂ ಯುವಕನ ಮೃತದೇಹ ಪತ್ತೆಯಾಗಿಲ್ಲ. ಇದನ್ನೂ ಓದಿ: ಸಿಗಂದೂರು ದೇವಾಲಯಕ್ಕೆ ತೆರಳುತ್ತಿದ್ದ ಕಾರು ಅಪಘಾತ – ಯುವಕ ಸಾವು