Tag: Madhu Chopra

  • ಸಹೋದರಿ ಮೀರಾ ದಾಂಪತ್ಯಕ್ಕೆ ಶುಭಕೋರಿದ ಪ್ರಿಯಾಂಕಾ ಚೋಪ್ರಾ

    ಸಹೋದರಿ ಮೀರಾ ದಾಂಪತ್ಯಕ್ಕೆ ಶುಭಕೋರಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಬ್ಯೂಟಿ ಮೀರಾ ಚೋಪ್ರಾ (Meera Chopra) ಅವರು ಉದ್ಯಮಿ ರಕ್ಷಿತ್ ಜೊತೆ ಮಾರ್ಚ್ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಸಹೋದರಿ ಮೀರಾಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ವೈವಾಹಿಕ ಜೀವನದ ಆರಂಭಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಅಣ್ಣಾಮಲೈ ನಟನೆಯ ‘ಅರಬ್ಬೀ’ ಚಿತ್ರದ ಟ್ರೈಲರ್ ರಿಲೀಸ್

    ಜೈಪುರ್‌ನಲ್ಲಿ ಅದ್ಧೂರಿಯಾಗಿ ರಕ್ಷಿತ್ ಜೊತೆ ಮೀರಾ ಚೋಪ್ರಾ ಮದುವೆ ನಡೆಯಿತು. ಈ ಮದುವೆಗೆ ನಟಿ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದರು. ಆದರೆ ಮನೆ ಮಗಳು ಮೀರಾ ಮದುವೆಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಹಾಜರಿ ಹಾಕಿ ಶುಭಹಾರೈಸಿದ್ದರು. ಕೆಲಸ ಕಮೀಟ್‌ಮೆಂಟ್‌ನಿಂದ ಪ್ರಿಯಾಂಕಾ ಗೈರಾಗಿದ್ದರು.

    ಇದೀಗ ಸಹೋದರಿ ಮೀರಾಗೆ ಹೊಸ ಜರ್ನಿಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಅಭಿನಂದನೆಗಳು ಮೀರಾ ಚೋಪ್ರಾ ಮತ್ತು ರಕ್ಷಿತ್ ಎಂದು ಮನಸಾರೆ ನಟಿ ಹಾರೈಸಿದ್ದಾರೆ. ಪ್ರಿಯಾಂಕಾ ಹಾರೈಕೆಗೆ ಮೀರಾ ಪ್ರೀತಿಯಿಂದ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್

    ನಿಮ್ಮ ಹಾರೈಕೆಗೆ ಧನ್ಯವಾದಗಳು. ಹೊಸ ಜೀವನ ಶುರು ಮಾಡಲು ಕಾತರದಿಂದ ಕಾಯುತ್ತೇನೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ತುಂಬು ಹೃದಯದಿಂದ ಪ್ರೀತಿ ಹಿಂದಿರುಗಿಸುತ್ತಿದ್ದೇನೆ ಎಂದು ಮೀರಾ ರಿಯಾಕ್ಟ್ ಮಾಡಿದ್ದಾರೆ. ಸದ್ಯ ಇಬ್ಬರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದೇನೆ.

    ಎಂದೆಂದಿಗೂ ಸಂತೋಷ, ಜಗಳ, ನಗು, ಕಣ್ಣೀರು, ಮತ್ತು ನೆನಪುಗಳು ಈ ಜೀವಮಾನದಲ್ಲಿ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೊಂದಿಗೆ ಪ್ರತಿ ಜನ್ಮ ಬದುಕುತ್ತೇನೆ ಎಂದು ಮೀರಾ ಮದುವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

    ಕನ್ನಡದ ‘ಅರ್ಜುನ್’ (Arjun) ಸಿನಿಮಾದಲ್ಲಿ ನಟಿಸಿದ್ದ, ಬಾಲಿವುಡ್ ನಟಿ ಮೀರಾ ಚೋಪ್ರಾ ಅವರು ಮಾರ್ಚ್ 11ರಂದು ಮೆಹೆಂದಿ, ಸಂಗೀತ ಕಾರ್ಯಕ್ರಮದ ಜೊತೆ ಸೆಲೆಬ್ರೆಟಿ ಸ್ನೇಹಿತರಿಗೆ ಕಾಕ್‌ಟೈಲ್ ಪಾರ್ಟಿ ಆಯೋಜಿಸಿದ್ದರು. ಇಂದು (ಮಾ.12) ಅದ್ಧೂರಿಯಾಗಿ ಜೈಪುರನಲ್ಲಿ ಮದುವೆಯಾಗಿದ್ದಾರೆ.

    ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆದಿತ್ತು.ಮೀರಾ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದರು. ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ (Darshan) ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ (Arjun) ಚಿತ್ರದ ನಟಿ ಅಂದರೆ ಅವರು ಎಂಬುದು ನೆನಪಾಗುತ್ತಾರೆ.

    ಸಹೋದರಿ ಸಂಬಂಧಿ ಪ್ರಿಯಾಂಕಾರಂತೆ ಅವರಿಗೆ ಮೀರಾ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇದ್ದರೂ ಕೂಡ ಸಿನಿಮಾರಂಗ ಅವರ ಕೈಹಿಡಿಯಲಿಲ್ಲ.

    ‘1920 ಲಂಡನ್’, ‘ಸೆಕ್ಷನ್ 375’, ‘ಕಾಮಾತಿಪುರ’ ಎಂಬ ಹಿಂದಿ ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ‘ಸಫೇದ್’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

  • ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್‍ನಿಂದ ಗುಣಪಡಿಸಿಕೊಳ್ಳುತ್ತಿದ್ದಾರೆ- ಪ್ರಿಯಾಂಕ ಟ್ರೋಲ್

    ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್‍ನಿಂದ ಗುಣಪಡಿಸಿಕೊಳ್ಳುತ್ತಿದ್ದಾರೆ- ಪ್ರಿಯಾಂಕ ಟ್ರೋಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜುಲೈ 18ರಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ ಪತಿ ನಿಕ್ ಜೋನಸ್ ಹಾಗೂ ಕುಟುಂಬದವರ ಜೊತೆಗೆ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿಯೇ ಆಚರಿಸಿಕೊಂಡಿದ್ದರು. ಈ ವೇಳೆ ಸಿಗರೇಟ್ ಸೇದುವ ಮೂಲಕ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

    ಬಾಲಿವುಡ್ ದೇಸಿ ಗರ್ಲ್ ಸಿನಿಮಾ ಹೊರತಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ತಮ್ಮ ವಿಭಿನ್ನ ಡ್ರೆಸ್, ಪತಿಯೊಂದಿಗೆ ಖಾಸಗಿ ಫೋಟೋ ಹೀಗೆ ಪ್ರಿಯಾಂಕ ಚೋಪ್ರಾ ಬಾಲಿವುಡ್ ನಿಂದ ದೂರ ಉಳಿದುಕೊಂಡಿದ್ದರೂ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಸಿಗರೇಟ್ ಸೇದುತ್ತಿರುವ ಪ್ರಿಯಾಂಕ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ನಟಿಯ ಅಸ್ತಮಾ ಜಾಗೃತಿಯ ಹಳೆಯ ವಿಡಿಯೋ ಜೊತೆ ಹೋಲಿಸಿ ಟ್ರೋಲ್ ಮಾಡಲಾರಂಭಿಸಿದ್ದಾರೆ.

    https://twitter.com/abHayKhiladii/status/1152813343192883201

    ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್, ತಾಯಿ ಮಧು ಚೋಪ್ರಾ ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋವನ್ನು ಶೇರ್ ಮಾಡುತ್ತಿರುವ ಟ್ವಿಟ್ಟಿಗರು ಪಿಗ್ಗಿ ಕಾಲೆಳೆದಿದ್ದಾರೆ.

    ಪ್ರಿಯಾಂಕ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಟ್ವಿಟ್ಟಿಗರು, ದೀಪಾವಳಿಯ ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್ ಸೇದುವ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಪಿಗ್ಗಿ ಕಳೆದ ವರ್ಷ ದೀಪಾವಳಿಗೂ ಮುನ್ನ ವಿಡಿಯೋ ಬಿಡುಗಡೆ ಮಾಡಿ, ನನಗೆ ಬಾಲ್ಯದಿಂದಲೂ ಅಸ್ತಮಾ ಇದೆ. ನನ್ನಂತಹ ಸಾವಿರಾರು ಅಸ್ತಮಾ ರೋಗಿಗಳಿಗೆ ಪಟಾಕಿಯ ಹೊಗೆಯಿಂದ ತೊಂದರೆಯಾಗುತ್ತದೆ. ಹೀಗಾಗಿ ಪಟಾಕಿ ಸಿಡಿಸದೆ ದೀಪ ಹಚ್ಚಿ, ಲಡ್ಡುಗಳನ್ನು ವಿತರಿಸುವ ಮೂಲಕ ದೀಪಾವಳಿಯನ್ನು ಆಚರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು.

    ನಟಿ ಪ್ರಿಯಾಂಕ ತಮ್ಮ ಮದುವೆಯ ನಂತರ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದರು. ಇದಕ್ಕೆ ಅವರ ಅಭಿಮಾನಿಗಳು ಕಿಡಿಕಾರಿದ್ದರು. ಈ ಬೆನ್ನಲ್ಲೇ ಸಿಗರೇಟ್ ಸೇದಿ ನೆಟ್ಟಿಗರ ಟ್ರೋಲ್‍ಗೆ ಗುರಿಯಾಗಿದ್ದಾರೆ.

    ಪ್ರಿಯಾಂಕ ದೀಪಾವಳಿಯಂದು ಪಟಾಕಿ ಮಾಲಿನ್ಯದಿಂದ ಅಸ್ತಮ ಆಗುತ್ತೆ ಅಂತ ಜ್ಞಾನ ಕೊಟ್ಟಿದ್ದರು. ಆದರೆ ಇಂದು ಸ್ವತಃ ಅಸ್ತಮಾದ ಡೆಮೋ ಕೊಡುತ್ತಿದ್ದಾರೆ ಎಂದು ಶಕುಂತಲಾ ನಟರಾಜ್ ಟ್ವೀಟ್ ಮಾಡಿದ್ದಾರೆ.

    ದಯವಿಟ್ಟು ಯಾರೂ ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲ್ ಮಾಡಬೇಡಿ. ಅವರು ಸೇದುತ್ತಿರುವುದು ಹೊಸದಾಗಿ ಬಿಡುಗಡೆಯಾಗಿರುವ ಪತಂಜಲಿ ಹರ್ಬಲ್ ಸಿಗರೇಟ್. ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

    ನಿಮ್ಮ ಮದುವೆ ವೇಳೆ ಪಟಾಕಿ ಹೊಡೆದರೆ ಸಮಸ್ಯೆಯಿಲ್ಲ, ಹುಟ್ಟುಹಬ್ಬದ ವೇಳೆ ಪಟಾಕಿ ಸಿಡಿಸಿದರೂ ಸಮಸ್ಯೆಯಿಲ್ಲ. ದೀಪಾವಳಿ ಸಮಯದಲ್ಲಿ ಪಟಾಕಿ ಹೊಡೆದರೆ ಮಾತ್ರ ತೊಂದರೆಯಾಗುತ್ತದೆ. ಹಿಂದೂ ದ್ರೋಹಿ ಪ್ರಿಯಾಂಕ ಎಂದು ಟ್ವಿಟ್ಟಿಗರು ಕಾಲೆಳೆದಿದ್ದಾರೆ.

    ಮಧು ಚೋಪ್ರಾ ಅವರು ಪುತ್ರಿ ಪ್ರಿಯಾಂಕಾಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಚೆನ್ನಾಗಿಯೇ ತಿಳಿಸಿದ್ದಾರೆ. ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮ ಆರೋಗ್ಯದ ಬಗ್ಗೆ ಜೋಪಾನ ಎಂದು ನಟ್ಟಿಗರು ವ್ಯಂಗ್ಯವಾಡಿದ್ದಾರೆ.