Tag: Madhabi Puri Buch

  • ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ನವದೆಹಲಿ: ಷೇರು ಮಾರುಕಟ್ಟೆ ವಂಚನೆ ಪ್ರಕರಣದಲ್ಲಿ ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್‌ ಕ್ಲೀನ್ ಚಿಟ್ ನೀಡಿದೆ.

    ಮಾಧವಿ ಪುರಿ ಬುಚ್ ಅವರ ವಿರುದ್ಧ ಹಿಂಡೆನ್‌ಬರ್ಗ್-ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರುಗಳನ್ನು ಭಾರತೀಯ ಲೋಕಪಾಲ್ ವಜಾಗೊಳಿಸಿದೆ. ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಆರೋಪಗಳಲ್ಲಿ ಯಾವುದೇ ಅರ್ಹತೆ ಇಲ್ಲ. ಊಹೆಯಿಂದ ಕೂಡಿದಂತಿದೆ. ಯಾವುದೇ ಪರಿಶೀಲಿಸಬಹುದಾದ ಪುರಾವೆಗಳ ಕೊರತೆಯಿದೆ ಎಂದು ಲೋಕಪಾಲ್‌ ಹೇಳಿದೆ.

    ಬುಧವಾರ ಹೊರಡಿಸಿದ ಆದೇಶದಲ್ಲಿ, ದೂರುಗಳು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ತನಿಖೆಗೆ ಅಗತ್ಯವಾದ ಕಾನೂನು ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದು ಹೇಳಲಾಗಿದೆ. ಆರೋಪಗಳು ಹೆಚ್ಚಾಗಿ ಊಹೆಗಳಿಂದ ಕೂಡಿವೆ. ಹೀಗಾಗಿ, ದೂರುಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಲೋಕಪಾಲ್‌ ತಿಳಿಸಿದೆ.

    ಹಿಂಡೆನ್‌ಬರ್ಗ್‌ ವರದಿ ಆಧರಿಸಿ ಮಾಧವಿ ವಿರುದ್ಧ ಪ್ರತ್ಯೇಕವಾಗಿ ಎರಡು ದೂರುಗಳು ದಾಖಲಾಗಿದ್ದವು. ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆಂದು ಹಂಡೆನ್‌ಬರ್ಗ್‌ ರಿಸರ್ಚ್‌ ಆರೋಪಿಸಿತ್ತು. ಇದನ್ನು ಮಾಧವಿ ಅವರು ಅಲ್ಲಗಳೆದಿದ್ದರು.

  • SEBIಗೆ ಅಧ್ಯಕರಾಗಿ ಮೊದಲ ಬಾರಿಗೆ ಮಹಿಳೆ ನೇಮಕ

    SEBIಗೆ ಅಧ್ಯಕರಾಗಿ ಮೊದಲ ಬಾರಿಗೆ ಮಹಿಳೆ ನೇಮಕ

    ನವದೆಹಲಿ: ಸೆಕ್ಯೂರಿಟಿ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India)ಗೆ ಮೊದಲ ಬಾರಿಗೆ ಭಾರತದ ಮಹಿಳೆಯೊಬ್ಬರು ಅಧ್ಯಕ್ಷರಾಗಿ chairperson ಆಯ್ಕೆಯಾಗಿದ್ದಾರೆ.

    SEBIಗೆ ಮಾಧಬಿ ಪುರಿ ಬುಚ್ಚ (Madhabi Puri Buch) ಅವರು ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿದೆ. ಅಧ್ಯಕ್ಷೆಯಾದ ಭಾರತದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಲಿ ಅಧ್ಯಕ್ಷ ಅಜಯ್ ತ್ಯಾಗಿ ಅವರ ಅಧಿಕಾರವಧಿ ಪ್ರೆಬ್ರವರಿ 28ರಂದು ಮುಕ್ತಾಯವಾಗಿದ್ದು, ಮಾಧವಿ ನೂತನ ಸಾರಥಿಯಾಗಿದ್ದಾರೆ.

    ಮಾಧಬಿ ಪುರಿ ಬುಚ್ಚ ಯಾರು?: ಮಾಧಬಿ ಪುರಿ ಬುಚ್ಚ ದೆಹಲಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರು. ನಂತರ ಇವರು  ಅಹಮದಾಬಾದ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ, ಮ್ಯಾನೇಜ್‍ಮೆಂಟ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಇವರು ಹಲವು ಸಂಘ, ಸಂಸ್ಥೆ ಹಾಗೂ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸಮಿತಿಯಂತಹ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ

    ಐಸಿಐಸಿ ಬ್ಯಾಂಕ್ ICICI Bankನಿಂದ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ 2009ರಿಂದ 2011ರವರೆಗೆ ಸೇವೆಸಲ್ಲಿಸಿದ್ದಾರೆ. ನಂತರ 2011ರಲ್ಲಿ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಐಐಗೆ ಸೇರಲು ಸಿಂಗಾಪುರಕ್ಕೆ ತೆರಳಿದರು. ಈ ವೇಳೆ ಅಗೋರಾ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ-ನಿರ್ದೇಶಕರಾಗಿದ್ದರು. ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನಲ್ಲಿ ಮೂರು ವರ್ಷಗಳ ಕಾಲ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ

    ಮಾಧಬಿ ಪುರಿ ಬುಚ್ ಅವರು ಐಡಿಯಾ ಸೆಲ್ಯುಲರ್ ಲಿಮಿಟೆಡ್, ಝೆನ್ಸಾರ್ ಟೆಕ್ನಾಲಜೀಸ್ ಮತ್ತು ಮ್ಯಾಕ್ಸ್ ಹೆಲ್ತ್‌ಕೇರ್‌ನಂತಹ  ಕಂಪನಿಗಳಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‍ನ ಸ್ಥಾಪಕ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಆಡಳಿತ ಸಮಿತಿ ಸದಸ್ಯರಾಗಿದ್ದಾರೆ.

  • ಫಸ್ಟ್‌ ಟೈಂ ಸೆಬಿಗೆ ಮಹಿಳೆ ಬಾಸ್‌

    ನವದೆಹಲಿ: ಭಾರತದ ಭದ್ರತೆ ಹಾಗೂ ವಿನಿಮಯ ಮಂಡಳಿ(SEBI) ಹೊಸ ಮಹಿಳಾ ಅಧ್ಯಕ್ಷೆಯನ್ನು ನೇಮಿಸಿದೆ. ಸೊಮವಾರ ಸೆಬಿಯ ಹೊಸ ಅಧ್ಯಕ್ಷೆಯಾಗಿ ಮಾಧಬಿ ಪುರಿ ಬುಚ್ ನೇಮಕಗೊಂಡಿದ್ದಾರೆ.

    ಮಾಧಬಿ ಸೆಬಿಯ ಅಧ್ಯಕ್ಷೆಯಾಗುವುದರೊಂದಿಗೆ ಸೆಬಿಯ ಮೊದಲ ಮಹಿಳಾ ಅಧ್ಯಕ್ಷರೆನಿಸಿಕೊಂಡಿದ್ದಾರೆ.

    ಫೆಬ್ರವರಿ 28ರಂದು ಅಜಯ್ ತ್ಯಾಗಿಯವರ ಸೆಬಿ ಅಧ್ಯಕ್ಷತೆಯ ಅವಧಿ ಪೂರ್ಣವಾಗಿದ್ದು, ಮಾಧಬಿ ಪುರಿ ಬುಚ್ ಅವರನ್ನು 3 ವರ್ಷಗಳ ಅವಧಿಗೆ ಸೆಬಿಯ ಅಧ್ಯಕ್ಷೆಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!

    ಮಾಧಬಿ ಪುರಿ ಬುಚ್ ಯಾರು?
    ಮಾಧಬಿ ಪುರಿ ಬುಚ್ ಸೆಬಿಯ ಮಾಜಿ ಪೂರ್ಣ ಅವಧಿಯ ಸದಸ್ಯ(ಡಬ್ಲ್ಯೂಟಿಎಮ್)ರಾಗಿದ್ದಾರೆ. ಮಾಧಬಿ 2017 ಏಪ್ರಿಲ್ 5ರಿಂದ 2021 ಅಕ್ಟೋಬರ್ 4ರ ವರೆಗೆ ಸೆಬಿಯ ಪೂರ್ಣ ಅವಧಿಯ ಸದಸ್ಯರಾಗಿದ್ದರು. ಇದನ್ನೂ ಓದಿ: ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ಮಾಧಬಿ ಅವರಿಗೆ ಹಣಕಾಸು ಮಾರುಕಟ್ಟೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವವಿದ್ದು, ಸೆಬಿಯಲ್ಲಿ ಹೂಡಿಕೆ, ಸಾಮೂಹಿಕ ಹೂಡಿಕೆ ಯೋಜನೆ ಹಾಗೂ ಕಣ್ಗಾವಲು ಸೇರಿದಂತೆ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.